Year: 2025

ತಿಪಟೂರು: ನಗರದ ಕೆ ಎಲ್ ಎ ಸ್ಕೂಲ್ ಆಫ್ ಲಾ ಕಾಲೇಜು ಪ್ರಥಮ ಬಾರಿಗೆ ಅಂತರ ಕಾಲೇಜು ಕೆ ಎಲ್ ಎ ಲಾ ಕಪ್ 2025 ಕ್ರಿಕೆಟ್ ಪಂದ್ಯಾವಳಿಯನ್ನು ಕಲ್ಪತರು ಸ್ಟೇಡಿಯಂನಲ್ಲಿ ಆಯೋಜಿಸಲಾಗಿತ್ತು, ಸದರಿ ಕ್ರೀಡಾಕೂಟವನ್ನು ವಿದ್ಯುಕ್ತವಾಗಿ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದ ತಿಪಟೂರು ವಿಭಾಗದ ಡಿವೈಎಸ್ಪಿ ಶ್ರೀ ವಿನಾಯಕ್ ಎನ್ ಶೆಟಗೇರಿ ನಗರದಲ್ಲಿ ಕೆಎಲ್ಎ ಸ್ಕೂಲ್ ಆಫ್ ಲಾ ಕಾಲೇಜಿನವರು ಕ್ರೀಡಾಕೂಟ ಆಯೋಜಿಸಿ ವಿದ್ಯಾರ್ಥಿಗಳಿಗೆ ಕ್ರೀಡಾ ಮನೋಭಾವ ಬೆಳೆಸಲು ಕಾರಣರಾಗಿದ್ದರೆ ಎಂದು ಅಭಿನಂದಿಸಿ ಇಂತಹ ಕ್ರೀಡಾಕೂಟಗಳು ಕ್ರೀಡಾ ಮನೋಭಾವವನ್ನು ಬೆಳೆಸುವುದಕ್ಕೆ ಸಹಕಾರಿಯಾಗುತ್ತವೆ ಕ್ರೀಡೆಯಲ್ಲಿ ಗೆಲವು ಸೋಲು ಅಲ್ಲದೆ ಭಾಗವಹಿಸುವಿಕೆ ಮುಖ್ಯವಾಗಿರುತ್ತದೆ ನೀವು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಯಶಸ್ಸು ಕಾಣಬೇಕಾಗಿದೆ ಎಂದರು.

ಎನ್ಎಸ್ಎಸ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ನಾಗೇಂದ್ರ ಜಿ. ಎನ್ ಮಾತನಾಡಿ ನಮ್ಮ ಈ ಕ್ರೀಡಾಕೂಟವನ್ನು ಉತ್ಸಾಹಿ ಮತ್ತು ದಕ್ಷ ಅಧಿಕಾರಿಯವರು ಉದ್ಘಾಟಿಸಿರುವುದು ನಮಗೆ ಸಂತೋಷವಾಗಿದೆ ಕಾಲೇಜಿನ ಪಠ್ಯೇತರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಒಂದು ಅಂತರ ಕಾಲೇಜು ಕ್ರೀಡಾಕೂಟವನ್ನು ಆಯೋಜಿಸಲು ನಮ್ಮ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಎ ಆರ್ ಪುನೀತ್ ಕುಮಾರ್ ಸಲಹೆ ನೀಡಿದರು ಇದರ ಪರಿಣಾಮವಾಗಿ ಇಂದು ಕ್ರೀಡಾಕೂಟ ಆಯೋಜನೆಗೊಂಡಿದೆ ಇಂದು ಐ.ಪಿ.ಎಲ್ ಅಲೆ ಶುರುವಾಗಿದೆ ಇದೇ ಮಾದರಿಯಲ್ಲಿ ಮಾಡೋಣವೆಂದು ನಮ್ಮ ಕಾಲೇಜಿನ ಆಡಳಿತ ಮಂಡಳಿ, ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿ ಅವಿರತವಾಗಿ ಪೂರ್ವಸಿದ್ಧತೆ ನಡೆಸಿದವು ಅಂತಿಮವಾಗಿ ನಮ್ಮ ಈ ಕ್ರೀಡಾಕೂಟವು ಎರಡು ಧ್ಯೇಯೋದ್ದೇಶಗಳನ್ನು ಹೊಂದಿದೆ ಅದರಲ್ಲಿ ಒಂದು ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವವನ್ನು ಬೆಳೆಸುವುದು ಮತ್ತು ಮನರಂಜನೆಗೆ ಉತ್ತೇಜನ ನೀಡುವುದೇ ಆಗಿದೆ ಎಂದರು.

ಕೆ ಎಲ್ ಎ ಸ್ಕೂಲ್ ಆಫ್ ಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಎ ಆರ್ ಪುನೀತ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅಂತರಕಲಾಜು ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸುವ ಸಲಹೆಯನ್ನ ನಮ್ಮ ಕಾಲೇಜಿನ ಎನ್ಎಸ್ಎಸ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರಾದ ನಾಗೇಂದ್ರ ಜಿ ಎನ್ ರವರ ಮುಂದೆ ಇಟ್ಟಾಗ ಅವರು ಸ್ವೀಕರಿಸಿ ಎಲ್ಲ ಸಹಕಾರ ನೀಡಿದ ಫಲಿತಾಂಶ ಇಂದು ಸದರಿ ಕ್ರೀಡಾಕೂಟ ಯಶಸ್ವಿಯಾಗಿ ಮೂಡಿದೆ ಮತ್ತು ಸದರಿ ಕ್ರೀಡಾಕೂಟದ ಆಯೋಜನೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕಾರ ನೀಡಿದಂತಹ ಎಲ್ಲರಿಗೂ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.

ಸ್ಕೋರ್ ವಿವರ*: ತಂಡದ ನಾಯಕ ರೋಹಿತ್ -20, ನವೀನ್ -04, ಸೋಮಶೇಖರ್ -08, ಚೇತನ್ -03, ಭರತ್ ಬಿ.ಟಿ -04, ರಾಘು-00, ಚಂದನ್-00, ಸಿದ್ದಲಿಂಗ -00, ರೇವಾ-00, ಭರತ-00, ರುತ್ವಿಕ್-00, ಜೀತು-00, ದೀಪ ದರ್ಶನ್ -00, ಕಿರಣ್ -00

ಆಟ : ಸದರಿ ಕ್ರಿಕೆಟ್ ಪಂದ್ಯಾವಳಿಯಲ್ಲಿ 9 ತಂಡಗಳಾದ ಜಿ.ಪಿ.ಟಿ. ತುರುವೇಕೆರೆ ತಂಡ, ಕೆ.ಎಲ್.ಎ. ಸ್ಕೂಲ್ ಆಫ್ ಲಾ ಎ ತಂಡ, ಕೆ ಎಲ್ ಎ ಸ್ಕೂಲ್ ಆಫ್ ಲಾ ಬಿ ತಂಡ, ಗ್ಲೋಬಲ್ ಎಂಬಾಜಿ ತಂಡ, ಜಿ ಎಫ್ ಜಿ ಸಿ ತುರುವೇಕೆರೆ ತಂಡ, ಪಲ್ಲಘಟ್ಟ ಹಡವಪ್ಪ ಕಲೆ ಮತ್ತು ವಾಣಿಜ್ಯ ತಂಡ, ಚಿಕ್ಕನಾಯಕನಹಳ್ಳಿ ಪ್ರಥಮ ದರ್ಜೆ ಕಾಲೇಜು ತಂಡ, ಕಲ್ಪತರು ಕ್ರಿಕೆಟರ್ಸ್ ತಂಡ, ರಾಯಲ್ ಬ್ಲಾಸ್ಟರ್ ಪ್ಯಾರಾಮೆಡಿಕಲ್ ತಂಡ ಭಾಗವಹಿಸಿದ್ದವು. ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಜಿಪಿಟಿ ತುರುವೇಕೆರೆ ತಂಡದ ವಿರುದ್ಧ ಗ್ಲೋಬಲ್ ಎಂಬಾಜಿ ಮೊದಲ ಆಘಾತಕ್ಕೆ ಒಳಗಾಗಿ ಸೋಲು ಅನುಭವಿಸಿತು, ನಂತರ ಜಿ.ಎಫ್.ಜಿ.ಸಿ. ತುರುವೇಕೆರೆ ತಂಡ ವಿರುದ್ಧ ಪಲ್ಲಘಟ್ಟ ಅಡವಪ್ಪ ಕಲಾ ಮತ್ತು ವಾಣಿಜ್ಯ ತಂಡ ಸೋಲು ಅನುಭವಿಸಿತು, ನಂತರದಲ್ಲಿ ಚಿಕ್ಕನಾಯಕನಹಳ್ಳಿ ತಂಡದ ವಿರುದ್ಧ ಕಲ್ಪತರು ಕ್ರಿಕೆಟರ್ಸ್ ತಂಡ ಜಯಗಳಿಸಿತು ನಂತರದಲ್ಲಿ ರಾಯಲ್ ಬ್ಲಾಸ್ಟರ್ ವಿರುದ್ಧ ಕೆ ಎಲ್ ಎ ಸ್ಕೂಲ್ ಆಫ್ ಲಾ ಎ ತಂಡ ಜಯಗಳಿಸಿತು ನಂತರದಲ್ಲಿ ಕೆ ಎಲ್ ಎ ಸ್ಕೂಲ್ ಆಫ್ ಲಾ ಎ ತಂಡ ವಿರುದ್ಧ ಕೆ ಎಲ್ ಎ ಸ್ಕೂಲ್ ಆಫ್ ಲಾ ಬಿ ತಂಡ ಸೋಲು ಅನುಭವಿಸಿತು ನಂತರದಲ್ಲಿ ಚಿಕ್ಕನಾಯಕನಹಳ್ಳಿ ತಂಡ ವಿರುದ್ಧ ಜಿಪಿಟಿ ತುರುವೇಕೆರೆ ಆಘಾತ ನೀಡಿ ಗೆಲುವು ಸಾಧಿಸಿತು ನಂತರದಲ್ಲಿ ಪಲ್ಲಘಟ್ಟ ಹಡವಪ್ಪ ಕಲೆ ಮತ್ತು ವಾಣಿಜ್ಯ ತಂಡದ ವಿರುದ್ಧ ಕೆ ಎಲ್ ಎ ಸ್ಕೂಲ್ ಆಫ್ ಲಾ ಎ ತಂಡ ಗೆಲುವನ್ನು ಸಾಧಿಸಿ ಅಂತಿಮ ಹಂತಕ್ಕೆ ಜಿಗಿಯಿತು ನಂತರದಲ್ಲಿ ಅಂತಿಮ ಆಟದ ಟಾಸ್ ಗೆದ್ದ ಜಿಪಿಟಿ ತುರುವೇಕೆರೆ ವಿರುದ್ಧ ಕೆ ಎಲ್ ಎ ಸ್ಕೂಲ್ ಆಫ್ ಲಾ ಎ ತಂಡಕ್ಕೆ ಬ್ಯಾಟಿಂಗ್ ಬಿಟ್ಟು ಬೋಲಿಂಗ್ ಆಯ್ಕೆ ಮಾಡಿಕೊಂಡಿತು ಮೊದಲ ಸುತ್ತಿನಲ್ಲಿ ಎರಡು ತಂಡಗಳು ಡ್ರಾ ಆಗಿತು ನಂತರದಲ್ಲಿ ಸೂಪರ್ ಓವರ್ ಪಡೆದು ಜಿಪಿಟಿ ತುರುವೇಕೆರೆ ತಂಡ 7 ರನ್ ಗೆಲುವಿನ ಅಂತರ ಒಡ್ಡಿತು ನಂತರದಲ್ಲಿ ಕೆ ಎಲ್ ಎ ಸ್ಕೂಲ್ ಆಫ್ ಲಾ ಎ ತಂಡ ರೋಚಕ ಆಟದೊಂದಿಗೆ ಜಯಗಳಿಸಿ ಕೆ ಎಲ್ ಎ ಲಾ ಕಪ್ 2025 ಅನ್ನು ತನ್ನ ಮುಡಿಲೇಗಿರಿಸಿಕೊಳ್ಳುವಲ್ಲಿ ಯಶಸ್ವಿಯಾಗಿತು.

ವರದಿ: ಸಂತೋಷ್ ಓಬಳ. ಗುಬ್ಬಿ

ತಿಪಟೂರು : ಶ್ರೀರಾಮ ನವಮಿ ಪ್ರಯುಕ್ತ ತಿಪಟೂರಿನ ವಿವಿದೆಡೆ ರಾಮಸ್ಮರಣೆಯ ಸಂಭ್ರಮ ಜೋರಾಗಿತ್ತು ವ್ಯಾಸರಾಜ ಪ್ರತಿಷ್ಠಾಪಿತ ಕೋಟೆ ಶ್ರೀ ಆಂಜನೇಯಸ್ವಾಮಿ, ದೊಡ್ಡಪೇಟೆ ಗಾಣಿಗರ ಶ್ರೀರಾಮದೇವಾಲಯ ಇಂದಿರಾ ನಗರ ಶ್ರೀ ಆಂಜನೇಯಸ್ವಾಮಿ ದೇವಾಲಯ.ಅಣ್ಣಾಪುರ ಶ್ರೀ ಆಂಜನೇಯ ದೇವಾಲಯ ಗಾಯಿತ್ರಿ ನಗರ ಶ್ರೀ ರಾಮಮಂದಿರ ಸೇರಿದಂತೆ ಹೊನ್ನವಳ್ಳಿ ಶ್ರೀ ಆಂಜನೇಯಸ್ವಾಮಿ ಕರೀಕೆರೆ ಬೈರಾಪುರ ಕಂಬದಹಳ್ಳಿ ಹಾಲ್ಕುರಿಕೆ ನೊಣವಿನಕೆರೆ ಕೆ.ಬಿಕ್ರಾಸ್ ಸೇರಿದಂತೆ ತಾಲ್ಲೋಕಿನಾಧ್ಯಂತ ರಾಮಭಕ್ತ ಆಂಜನೇಯನ ದೇವಾಲಯ ಹಾಗೂ ಶ್ರೀರಾಮಮಂದಿರಗಳಲ್ಲಿ ರಾಮಭಕ್ತರು ಅಭಿಷೇಕ,ವಿಶೇಷ ಪೂಜಾ ಕೈಂಕರ್ಯಗಳನ್ನ ನೆರವೇರಿಸಿ,ಪಾನಕ ಫಲಹಾರ,ಮಜ್ಜಿಗೆ ಕೋಸಂಬರಿ ವಿತರಣೆ ಮಾಡಲಾಯಿತು,

ಕೆಲವೆಡೆ ರಾಮಭಜನೆ ನೆರವೇರಿಸಿ ಪೂಜೆಸಲ್ಲಿಸಲಾಯಿತು, ನಗರ ಹೆಬ್ಬಾಗಿಲನ ಮುಂದೆಯಿರುವ ಅರಳೀಕಟ್ಟೆಯ ಬಳಿ ತೆಂಗಿನಗರಿಗಳಿಂದ ಹಸಿರು ಚಪ್ಪರವನ್ನು ಹಾಕಿ ವಿವಿಧ ಬಗೆ ಹೂವುಗಳಿಂದ ಅಲಂಕಾರ ಮಾಡಿ ಸಗಣಿ ಹಾಗೂ ಗೋಮೂತ್ರದಿಂದ ನೆಲವನ್ನು ಶೃಂಗರಿಸಿ ಅರಳೀಕಟ್ಟೆಯ ಮೇಲೆ ಗ್ರಾಮದ ಉತ್ಸವ ಮೂರ್ತಿ ದೇವರುಗಳನ್ನು ಹಾಗೂ ಶ್ರೀಸೀತಾರಾಮ ಅಂಜನೇಯ ಪೋಟೋವಿಟ್ಟು ಪೂಜಿಸಿ ನೆರೆದಿರುವ ಎಲ್ಲಾ ಭಕ್ತರಿಗೆ ಪಾನಕ, ಫಲಾಹಾರ, ಕೋಸಂಬರಿ, ಮಜ್ಜಿಕೆ, ಕಡಲೆಕಾಳು ಉಸಲಿ, ವಿತರಿಸುವ ದೃಶ್ಯಗಳು ಪ್ರತಿ ಹಳ್ಳಿ ಹಳ್ಳಿಯಲ್ಲೂ ಕಂಡು ಬಂದಿತು.
ರಾಮನವಮಿ ವಿಶೇಷವಾದ ರಾಮರಸವನ್ನ ನಗರದ ಕೆಲ ರಾಮದೇವಾಲಯದಲ್ಲಿ ನೈವೇದ್ಯ ಅರ್ಪಿಸಿ ಉತ್ಸವ ಭಜನೆ ಪಾರಾಯಣ ಕಾರ್ಯಕ್ರಮ ಹಮ್ಮಿಕೊಂಡಿದ್ದು ವಿಶೇಷವಾಗಿತ್ತು.

ನಗರದ ಕೋಟೆಯಲ್ಲಿ ವ್ಯಾಸರಾಜ ಪ್ರತಿಷ್ಟಾಪಿತ ಅಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ.
ನಗರದ ಶ್ರೀರಾಮ ಭಜನಾ,ಅಯೋದ್ಯ ರಾಮಪಾದುಕೆ ಪೂಜೆ ನೆರವೇರಿಸಲಾಯಿತು.ನಗರದಾದ್ಯಂತ ರಾಮಭಕ್ತರು ರಾಮನಾಮದಲ್ಲಿ ಸಂಭ್ರಮಿಸಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಖಾಸಗೀ ಕಾರ್ಯಕ್ರಮಗಳಿಗೆ ಮಾಡುವಂತ್ತಿಲ್ಲ, ಎನ್ನುವ ಸ್ಪಷ್ಟವಾದ ನಿಯಮವಿದ್ದರೂ ತಿಪಟೂರು ತಾಲ್ಲೋಕಿನ ಹುಚ್ಚಗೊಂಡನಹಳ್ಳಿ ಗ್ರಾಮಪಂಚಾಯ್ತಿಯಲ್ಲಿ ಮಾತ್ರ ಕಾನೂನಿಗೆ ಬೆಲೆಇಲ್ಲ ಎನ್ನುವಂತ್ತಾಗಿದೆ.


ಸರ್ಕಾರದ ನಿಯಮಗಳನ್ನ ಗಾಳಿಗೆ ತೂರಿದ ಹುಚ್ಚಗೊಂಡನಹಳ್ಳಿ ಗ್ರಾಮಪಂಚಾಯ್ತಿ ಅಧ್ಯಕ್ಷ ಬಿ.ಬಿ ಬಸವರಾಜು ರಾಷ್ಟ್ರೀಯ ನಾಯಕ ಡಾ//ಬಾಬೂ ಜಗಜೀವನ್ ರಾಮ್ ಹುಟ್ಟುಹಬ್ಬದ ದಿನದಂದೆ ಅದ್ದೂರಿಯಾಗಿ ತಮ್ಮ ಹುಟ್ಟು ಹಬ್ಬವನ್ನ ಆಚರಿಸುವ ಮೂಲಕ ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದ್ದಾರೆ.
ಸರ್ಕಾರಿ ಕಚೇರಿ ಕಾನೂನು ಬಾಹಿರವಾಗಿ ದುರುಪಯೋಗವಾಗುತ್ತೊದ್ದರು,ಪಿಡಿಒ ಮಾತ್ರ ಜಾಣಮೌನ ಕಂಡ ಸಾರ್ವಜನಿಕರು, ಸಾರ್ವಜನಿಕ ಕೆಲಸ ಮಾಡಬೇಕಾದ ಕಚೇರಿಯಲ್ಲಿ ಅಧ್ಯಕ್ಷರು ತಮ್ಮ ಅಭಿಮಾನಿಗಳು ಕಾಂಗ್ರೇಸ್ ಕಾರ್ಯಕರ್ತರನ್ನ ಗುಡ್ಡೆಹಾಕಿಕೊಂಡು ಕೇಕ್ ಕತ್ತರಿಸಿ, ಶಾಂಪೇನ್ ,ಹಾರಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು ಅಧ್ಯಕ್ಷರ ಅಧಿಕಾರ ದುರುಪಯೋಗ ಹಾಗೂ ಪಿಡಿಒ ಕರ್ತವ್ಯ ನಿರ್ಲಕ್ಷ್ಯದ ಬಗ್ಗೆ ಸರ್ಕಾರ ಕೂಡಲೆ ಕ್ರಮಕೈಗೊಳ್ಳ ಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ


ಮಾಧ್ಯಮದೊಂದಿಗೆ ಮಾಹಿತಿ ನೀಡಿದ ತಾಲ್ಲೋಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಹುಚ್ಚಗೊಂಡನಹಳ್ಳಿ ಗ್ರಾಮಪಂಚಾಯ್ತಿ ಕಚೇರಿಯಲ್ಲಿ ಅಧ್ಯಕ್ಷರು ಹುಟ್ಟು ಹಬ್ಬ ಆಚರಿಸಿಕೊಂಡ ಬಗ್ಗೆ ದೂರುಗಳಿದ್ದು ಈ ಬಗ್ಗೆ ಪಿಡಿಒ ರವರಿಂದ ಮಾಹಿತಿ ಕೇಳಲಾಗಿದೆ, ಮಾಹಿತಿ ಬಂದ ನಂತರ ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದರು

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು :ತಾಲ್ಲೋಕಿನ ಪ್ರಸಿದ್ದ ಯಾತ್ರೆ ಕ್ಷೇತ್ರ ಹಾಲ್ಕುರಿಕೆ ಗ್ರಾಮದೇವತೆ ಶ್ರೀಕೆಂಪಮ್ಮ ದೇವಿ ಹಾಗೂ ಶ್ರೀ ಪ್ಲೇಗಿನಮ್ಮ ದೇವಿಯವರ ಜಾತ್ರಾಮಹೋತ್ಸವದ ಅಂಗವಾಗಿ ರಥೋತ್ಸವ ಅದ್ದೂರಿಯಾಗಿ ನಡೆಯಿತು.
ಮಹಾರಥದಲ್ಲಿ ಶ್ರೀ ಕೆಂಪಮ್ಮ ದೇವಿ ಹಾಗೂ ಶ್ರೀ ಪ್ಲೇಗಿನಮ್ಮ ದೇವಿಯವರನ್ನ ಕೂರಿಸಿ ರಥೋತ್ಸವ ನಡೆಸಲಾಯಿತು,ಹರಕೆ ಹೊತ್ತ ಭಕ್ತರು ರಥಕ್ಕೆ ಬಾಳೆಹಣ್ಣು ಎಸೆದು ಪೂಜೆಸಲ್ಲಿಸಿದರು.


ನಂತರ ಭಕ್ತರ ಮೈ ಜುಮ್ಮೆನಿಸುವಂತ್ತ ಬನ್ನಿಮರಹತ್ತಿಸುವ ಕಾರ್ಯಕ್ರಮದಲ್ಲಿ ದೇವರು ಆವಾಹನೆಗೊಂಡ ಅರ್ಚಕ,ಕಾರ್ಕೋಟಕ ಈಚಲು ಮುಳ್ಳುಗಳಿಂದ ತುಂಬಿದ ಬನ್ನಿಮರ (ಈಚಲಮರ) ಹತ್ತುವ ಮೂಲಕ ಭಕ್ತರನ್ನ ಭಕ್ತಿಯ ಪಾರಕಾಷ್ಟೆಯಲ್ಲಿ ಮಿಂದೇಳುವಂತ್ತೆ ಮಾಡಿತು, ಸುಮಾರು ಅರ್ಧ ಗಂಟೆಗಳ ಕಾಲ ಬನ್ನಿಮರದ ಮುಳ್ಳುಗಳ ನಡುವೆ ಮಲಗಿದ್ದ, ಅರ್ಚಕ ಮರದಿಂದ ಕೆಳಗೆ ಇಳಿಯುತ್ತಿದ್ದಂತೆ ಜಾತ್ರೆಯಲ್ಲಿ ಸೇರಿದ ಭಕ್ತರ ಭಾವಪರವಷೆಯಜಯಘೋಷ ಮುಗಿಲು ಮುಟ್ಟಿತು,

ನಂತರ ಶ್ರೀಕೆಂಪಮ್ಮ ದೇವಿ ಶ್ರೀ ಪ್ಲೇಗಿನಮ್ಮ ದೇವಿ ಶ್ರೀ ಧೂತರಾಯಸ್ವಾಮಿ ಉತ್ಸವ ಧೂಳುಮೆರವಣಿಗೆ ನೆರವೇರಿಸಿ,ಉಯ್ಯಾಲೆ ಉತ್ಸವ ನೆರವೇರಿಸಲಾಯಿತು ರಥೋತ್ಸವದ ಅಂಗವಾಗಿ ಅನ್ನಸಂತರ್ಪಣೆ ನೆರವೇರಿಸಲಾಯಿತು, ಸಾವಿರಾರು ಜನ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ ಪೂಜೆಸಲ್ಲಿಸಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ವಲಯ ವ್ಯಾಪ್ತಿಯಲ್ಲಿ ವಿವಿದ ಪ್ರಕರಣದಲ್ಲಿ ದಾಳಿ ನಡೆಸಿ ವಶಪಡಿಸಿಕೊಂಡಿದ್ದ ಸುಮಾರು 2ಲಕ್ಷ ಮೌಲ್ಯದಬಿಯರ್‌ ಸೇರಿ ವಿವಿಧ ಬ್ರಾಂಡ್ ನ 206.130 ಲೀಟರ್ ಮದ್ಯ ಮತ್ತು 33.260 ಲೀಟರ್
ಬಿಯರ್‌ನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿದ್ದು.

ಮದ್ಯ ಮತ್ತು ಬಿಯರ್‌ನ್ನು ಮಾನ್ಯ
ಅಬಕಾರಿ ಉಪ ಆಯುಕ್ತರು ತುಮಕೂರು ರವರಆದೇಶಸಂಖ್ಯೆ:ಇಎಕ್ಸ್ಇ/ಸಿಆರ್ ಎಂ/03/ಭಾಗ-2/2019-20 ದಿನಾಂಕ:02/04/2025 ಈ ಕಛೇರಿಯಸ್ವೀಕೃತ ದಿನಾಂಕ: 04/04/2025 ರ ಆದೇಶದಂತೆ ತಿಪಟೂರು ತಹಶೀಲ್ದಾರ್ ಪವನ್ ಕುಮಾರ್ ಸಮ್ಮುಖದಲ್ಲಿ ಅಬ್ಕಾರಿ ಉಪ ಅಧೀಕ್ಷಕರಾದ ಜಿ.ವಿ ವಿಜಯ್ ಕುಮಾರ್ ,ವೃತ್ತ ನಿರೀಕ್ಷಕರಾದ ಆರ್ ,ಎನ್ ವನಜಾಕ್ಷಿ, ಸರ್ಕಲ್ ಇನ್ಪೆಕ್ಟರ್ ಹೆಚ್.ಎಸ್ ಮಂಜುನಾಥ್,ಟಿ.ಪಿ ನಂಜುಂಡಸ್ವಾಮಿ, ಮತ್ತು ಕೆ.ಎಸ್.ಬಿ.ಸಿ.ಎಲ್ ಡಿಪೋ ವ್ಯವಸ್ಥಾಪಕರ ಸಮ್ಮುಖದಲ್ಲಿ ಮದ್ಯನಾಶಪಡಿಸಲಾಯಿತು, ಸಿಬ್ಬಂದಿಗಳಾದ ಕೆ.ಮಂಜುನಾಥ್,ಅಬ್ಕಾರಿ ಮುಖ್ಯ ಪೇದೆಗಳಾದ ಪ್ರಸನ್ನ,ಶಿವಶಂಕರಯ್ಯ,ವೀಣಾ ,ರಾಜೇಶ್ವರಿ,ರೇವಣ್ಣ,ಯತೀಶ್,ಮುಸ್ತಾಕ್ ಮುಂತ್ತಾದವರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

ಡಾ//ಬಾಬೂ ಜಗಜೀವನ್ ರಾಮ್ ರವರೂ ದಲಿತರ ಹೇಳಿಗೆಗೆ ಶ್ರಮಿಸಿದ ಅಧಮ್ಯ ಚೇತನ,ರಾಜಕೀಯ ಸಾಮಾಜಿಕ ಬದಲಾವಣೆ ಕೀಳಿಕೈ ಎಂದು ರಾಜಕೀಯದ ಮೂಲಕ ಭಾರತದ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಿದ್ದಾರೆ ಅವರದಾರಿಯಲ್ಲಿ ನಡೆದು ಜೀವನ ನಡೆಸಿದಾಗ, ಅದೇ ದಿವ್ಯ ಚೇತನಕ್ಕೆ ಕೊಡುವ ಗೌರವ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು


ತಿಪಟೂರು ನಗರದ ತಾಲ್ಲೋಕು ಆಡಳಿತ ಕಚೇರಿಯಲ್ಲಿ ತಾಲ್ಲೋಕು ಆಡಳಿತದಿಂದ ಆಯೋಜಿಸಿದ ಡಾ//ಬಾಬೂ ಜಗಜೀವನ್ ರಾಮ್ ಜನ್ಮದಿನಾಚರಣೆ ಅಧ್ಯಕ್ಷತೆ ವಹಿಸಿದ ಅವರು ಮಾತನಾಡಿ ಭಾರತ ರಾಜಕೀಯದಲ್ಲಿ ಬಾಬೂಜಿ ಎಂದೇ ಖ್ಯಾತರಾಗಿದ ಡಾ//ಬಾಬು ಜಗಜೀವನ್ ರಾಮ್ ಹಸಿರು ಕ್ರಾಂತಿ ಮೂಲಕ ಭಾರತದ ಆಹಾರ ಸ್ವಾವಲಂಭನೆಗೆ ಅಡಿಪಾಯಹಾಕಿದರು,ಹಲವಾರು ಕ್ರಾಂತಿಕಾರಿ ನಿರ್ಧಾರಗಳ ಮೂಲಕ ಭಾರತದ ಇತಿಹಾಸದಲ್ಲಿ ಅಜರಾಮರಾಗಿದ್ದಾರೆ, ಸಮಾಜದಲ್ಲಿ ಮೇಲು ಕೀಳು ಎನ್ನುವ ಭಾವನೆ ತೊಡೆದುಹಾಕುವ ಕೆಲಸ ಮಾಡಬೇಕು,ನಾನೂ ಸೇರಿ ಎಲ್ಲಾ ಅಧಿಕಾರಿ ವರ್ಗ ಜನರ ತೆರಿಗೆ ಹಣದಲ್ಲಿ ಸಂಬಳ ಪಡೆಯುತ್ತಿದ್ದೇವೆ, ಪ್ರಮಾಣಿಕವಾಗಿ ಕೆಲಸ ಮಾಡುವ ಜೊತೆಗೆ ಸಮಾಜದಲ್ಲಿನ ತಾರತಮ್ಯ ತೊಡದುಹಾಕುವ ನಿಟ್ಟಿನಲ್ಲಿ ಕೆಲಸ ಮಾಡಿದರೆ, ನಾವು ಪಡೆದ ಶಿಕ್ಷಣ ಸಾರ್ಥಕವಾಗುತ್ತದೆ,ಎಂದು ತಿಳಿಸಿದರು


ಕಾರ್ಯಕ್ರಮದಲ್ಲಿ ಉಪಸ್ಥಿತರಿದ ನಗರಸಭೆ ಅಧ್ಯಕ್ಷೆ ಯಮುನಾಧರಣೇಶ್ ಮಾತನಾಡಿ ಡಾ//ಬಾಬೂ ಜಗಜೀವನ್ ರಾಮ್ ಭಾರತದ ಸ್ವತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಭಾರತಮಾತೆಯ ಬಂದಮುಕ್ತಿಗೆ ಶ್ರಮಿಸುವ ಜೊತೆಗೆ ಸ್ವತಂತ್ರ್ಯ ಭಾರತದಲ್ಲಿ ಹಲವಾರು ಪ್ರಮುಖ ಖಾತೆಗಳನ್ನ ನಿರ್ವಹಿಸಿ,ಹಸಿರು ಕ್ರಾಂತಿ ಸೇರಿದಂತೆ ಹಲವಾರು ಯೋಜನೆ ಜಾರಿಗೊಳಿಸಿದ ಕೀರ್ತಿಪ್ರಾಯರು,ಇವರ ಆದರ್ಶಗಳನ್ನ ಎಲ್ಲರೂ ಪಾಲಿಸೋಣ ಎಂದು ತಿಳಿಸಿದರು
ತಾಲ್ಲೋಕು ಪಂಚಾಯ್ತು ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಮಾತನಾಡಿ ಸಮಾಜ ಸುಧಾರಕರ ಚಿಂತನೆಗಳು ಸರ್ವಕಾಲಕ್ಕೂ ಅನುಕರಣೀಯ, ಡಾ//ಬಾಬೂ ಜಗಜೀವನ್ ರಾಮ್ ಹಾಗೂ ಡಾ//ಬಿ.ಆರ್ ಅಂಬೇಡ್ಕರ್ ಶೋಷಿತ ಸಮುದಾಯಗಳನ್ನ ಮೇಲೆತ್ತಲೂ ಅವಿರತವಾಗಿ ಶ್ರಮಿಸಿದ್ದಾರೆ, ಮಹಾನೀಯರ ಹೋರಾಟ ಕಷ್ಟ ನೋವು ನಲಿವಿನ ಫಲವನ್ನ ಭಾತರ ಕೋಟ್ಯಾನು ಕೋಟಿ ಜನ ಅನುಭವಿಸುತ್ತಿದ್ದಾರೆ,ನಾನೂ ಯಾರುಸಹ ರಾಜಕುಟುಂಬದಲ್ಲಿ ಹುಟ್ಟಿದವರಲ್ಲ, ಆದರೆ ಸಮಾನ್ಯ ಕುಟುಂಬದಲ್ಲಿ ಹುಟ್ಟಿದವರು, ಸಮಾಜಕ್ಕೆ ತಮ್ಮಿದ್ದಾದ ಸೇವೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು, ಮಹನೀಯರ ಆದರ್ಶಮಯವಾದ ದಾರಿಯಲ್ಲಿ ನಡೆಯೋಣ ಎಂದು ತಿಳಿಸಿದರು
ಸಭೆಯಲ್ಲಿ ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ ತಹಸೀಲ್ದಾರ್ ಪವನ್ ಕುಮಾರ್, ಗ್ರೇಡ್ ತಹಸೀಲ್ದಾರ್ ಜಗನ್ನಾಥ್ ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ತ್ರಿವೇಣಿ,ಡಿಎಸ್ಎಸ್ ಮುಖಂಡರಾದ ನಾಗ್ತಿಹಳ್ಳಿ ಕೃಷ್ಣಮೂರ್ತಿ,ನರಸಿಂಹಯ್ಯ,ಬಜಗೂರು ಮಂಜುನಾಥ್ ,ಕರಡಾಳು ಚಂದ್ರಶೇಖರ್ ಕುಪ್ಪಾಳು ರಂಗಸ್ವಾಮಿ .ರಾಘವೇಂದ್ರ ಯಗಚೀಕಟ್ಟೆ, ಶಿವಕುಮಾರ್,ಟಿ.ಕೆ ಕುಮಾರ್, ಟಿ.ಕೆ ಶಿವಕುಮಾರ್,ಮೈಲಾರಪ್ಪ.ಮುಂತ್ತಾದವರು ಉಪಸ್ಥಿತರಿದರು.ಉಪಸ್ಥಿತರಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು : ತಾಲ್ಲೂಕಿನ ಕಸಬಾ ಹೋಬಳಿಯ ಕೆರೆಗೋಡಿ ರಂಗಾಪುರ ಸುಕ್ಷೇತ್ರಾಧ್ಯಕ್ಷರು,ತ್ರಿವಿಧ ದಾಸೋಹ ಮೂರ್ತಿ,ಶ್ರೀ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮಿಜಿಯವರ 73 ನೇ ಜನ್ಮವರ್ದಂತಿ ಮಹೋತ್ಸವವನ್ನು ಶ್ರೀಮಠದಿಂದ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.

ಶ್ರೀಗುರು ಪರದೇಶಿಕೇಂದ್ರ ಮಹಾಸ್ವಾಮಿಗಳ 73 ಜನ್ಮವರ್ಧಂತಿ ಮಹೋತ್ಸವದ ಅಂಗವಾಗಿ ಶ್ರೀಮಠದ ಆರಾಧ್ಯದೈವ ಶ್ರೀಶಂಕರೇಶ್ವರಸ್ವಾಮಿ ಹಾಗೂ ಶ್ರೀ ರಂಗನಾಥ ಸ್ವಾಮಿ ರವರಿಗೆ ವಿಶೇಷ ಪೂಜೆ ಹಾಗೂ ಅಭಿಷೇಕ ನೆರವೇರಿಸಲಾಯಿತು,ಶ್ರೀಮಠದ ಆರುಜನ ಪವಾಡಪುರುಷ ಪೂಜ್ಯಶ್ರೀಗಳ ಗದ್ದುಗೆಗೆ ವಿಶೇಷ ಅಲಂಕಾರ ನೆರವೇರಿಸಲಾಯಿತು
ಶ್ರೀಗುರುಪರದೇಶಿಕೇಂದ್ರ ಅಜ್ಜಯ್ಯನವರ ಪಾದಪೂಜೆ ನೆರವೇರಿಸಿ ಮಠದ ಭಕ್ತರು,ಶ್ರೀಗಳ ಆಶೀರ್ವಾದ ಪಡೆದರು.
ಶ್ರೀಮಠದ ಆವರಣದಲ್ಲಿ ಆಯೋಜಿಸಿದ ಸರಳ ಹಾಗೂ ಸಂಪ್ರದಾಯಿಕ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಗುರುಪರದೇಶಿಕೇಂದ್ರ ಮಹಾಸ್ವಾಮಿಜಿ ಶ್ರೀಮಠವು ಭಕ್ತರ ಸಹಕಾರದಿಂದ ಹಿರಿಯ ಪರಮಪೂಜ್ಯರ ಆರ್ಶೀವಾದದಿಂದ ಕ್ಷೇತ್ರಾಧೀಪತಿ ಶಂಕರೇಶ್ವರ, ರಂಗನಾಥಸ್ವಾಮಿಯ ಹಾಗೂ ಮಠದ ಮಹಾಮಹಿಮರ ಅನುಗ್ರಹ ಹಾಗೂ ಪ್ರೇರಣಾ ಶಕ್ತಿಯಿಂದ ಕ್ಷೇತ್ರ ಬೆಳವಣಿಗೆ ಕಾಣುತ್ತಿದೆ.ಶ್ರೀ ಕ್ಷೇತ್ರದೈವಗಳ ಅರಸಿಬರುವ ಭಕ್ತರ ಇಷ್ಟಾರ್ಥಗಳನ್ನ ಈಡೇರಿಸುತ್ತಿದೆ.

ಕ್ಷೇತ್ರದಲ್ಲಿ ಯಾವುದೇ ಜಾತಿ, ಧರ್ಮ, ಲಿಂಗ ಮತ ಬೇಧವಿಲ್ಲದೆೆ ಎಲ್ಲರಿಗೂ ಒಂದೇ ರೀತಿಯಲ್ಲಿ ಕಾಣಲಾಗುತ್ತಿದ್ದು, ಪ್ರಕೃತಿಯಲ್ಲಿ ಗಾಳಿ, ಬೆಳಕನ್ನು ಎಲ್ಲರೂ ಉಪಯೋಗಿಸುವಂತೆ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಇರಬೇಕಾಗಿದೆ. ಇಂದಿನ ದಿನದಲ್ಲಿ ವೈಜ್ಞಾನಿಕ ಯುಗದಲ್ಲಿ ವಿಶೇಷವಾಗಿ ವೇಗವಾಗಿ ಯೋಚನೆಗಳನ್ನು ಮಾಡುವಂತಹ ಕಾಲವಾಗಿದೆ. ಹಿಂದಿನ 50 ವರ್ಷಗಳ ಕಾಲದಲ್ಲಿ ಗ್ರಾಮಗಳಲ್ಲಿ ದೇವಸ್ಥಾನಗಳು ಹಾಳು ಬಿದ್ದದ್ದವು ಆದರೆ ಇಂದು ನವೀಕರಣಗೊಳ್ಳುತ್ತಿರುವ ದೇವಾಸ್ಥಾನಗಳಿಂದ ನಮಗೆ ಖುಷಿ ತಂದಿದೆ.

ಶ್ರೀಮಠವು ಆಲದ ಮರವಿದ್ದಂತೆ ಬೆಳೆಯುತ್ತಿದ್ದು ಎಲ್ಲರಿಗೂ ಸಹಕಾರ ನೀಡಲಾಗುತ್ತಿದೆ, ಎಲ್ಲರೂ ದಾಸೋಹದ ಚಿಂತನೆ ಮೂಲಕ ದಾನ ಧರ್ಮ, ಪರೋಪಕಾರ ಮಾಡುವಂತಹ ಗುಣಗಳನ್ನು ಬೆಳಸಿಕೊಂಡು ಹೋಗಬೇಕು, ಕಾಯಕ ಹಾಗೂ ದಾಸೋಹವು ಒಂದು ನಾಣ್ಯದ ಎರಡು ಮುಖವಿದ್ದಂತೆ, ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕಾರ್ಯಗಳನ್ನು ಮಾಡಬೇಕು ಎಂದರು.

ಮಾಡಾಳು ವಿರಕ್ತಮಠದ ಶ್ರೀರುದ್ರಮುನಿ ಸ್ವಾಮಿಜಿ ಮಾತನಾಡಿ ಹರ ಮುನಿದರೂ ಗುರು ಕಾಯುವವನು ಎಂಬ ವಾಕ್ಯದಂತೆ ಶ್ರೀಮಠದಲ್ಲಿ ಗುರುವಿನ ಆರ್ಶೀವಾದದಿಂದ ಕೆರಗೋಡಿ ರಂಗಾಪುರ ಮಠವು ಸಮಾಜ ಮುಖಿಯಾಗಿ ಬೆಳೆಯುತ್ತಿದೆ. ಹಿರಿಯ ಶ್ರೀಗಳು ಹಾಕಿಕೊಟ್ಟ ತಮ್ಮ ಪವಾಡ ಶಕ್ತಿ ಹಾಗೂ ಮಠ ಪರಂಪರೆ ಮುಂದುವರೆಸುವ ಜೊತೆ
ತ್ರಿವಿಧ ದಾಸೋಹ ಕ್ಷೇತ್ರವಾಗಿಸುವತ್ತ ಮುಂದಡಿ ಇಟ್ಟಿದ್ದಾರೆ,ಇಂದು ಸರ್ಕಾರವು ಮಕ್ಕಳ ವಿದ್ಯಾಭ್ಯಾಸಕ್ಕೆ ಜಾತಿ ಆಧಾರಿತವಾಗಿ ಹಾಸ್ಟೆಲ್‌ಗಳನ್ನು ನಿರ್ಮಾಣ ಮಾಡುತ್ತಿವೆ ಆದರೆ ಸಿರಿಗೆರೆ, ಸುತ್ತೂರು, ಸಿದ್ದಗಂಗಾ ಮಠಗಳಂತೆ ಶ್ರೀಮಠವು ಸೇರಿದಂತೆ ಮೊದಲೇ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಸತಿ ನಿಲಯಗಳನ್ನು ತೆರೆದು, ಶಾಲೆಗಳನ್ನು ಪ್ರಾರಂಭಿಸಿ ವಿದ್ಯಾಭ್ಯಾಸಕ್ಕೆ ಹೆಚ್ಚು ಮಹತ್ವವನ್ನು ಸಮಾನವಾಗಿ ಕಾಣುತ್ತಿವೆ.
ಮಠ ಮಾನ್ಯಗಳು ಕಾಯಕ ದಾಸೋಹಕ್ಕೆ ಹೆಚ್ಚು ಒತ್ತು ನೀಡಿದ್ದು ಅನ್ನ ದಾಸೋಹ ಜೊತೆ ಜ್ಞಾನ ದಾಸೋಹವನ್ನು ನಡೆಸುತ್ತ ಬಂದಿವೆ. ಮಕ್ಕಳ ಆಶ್ರಯಕ್ಕಾಗಿ 25 ವರ್ಷಗಳ ಹಿಂದೆ ಬೆಳ್ಳಿಭವನವನ್ನು ನಿರ್ಮಾಣ ಮಾಡಲಾಗಿದೆ ಅದರಂತೆ ಮುಂದಿನ ದಿನದಲ್ಲಿ ಮಹಾಮನೆಯನ್ನು ನಿರ್ಮಾಣ ಮಾಡಬೇಕಾಗಿದೆ. ಕಾಣಿಕೆಯನ್ನು ಎಷ್ಟೂ ಬೇಕಾದರೂ ಅರ್ಪಣೆ ಮಾಡಬಹುದಾಗಿದೆ ಅದರಂತೆ ಆಯುಷ್ ಆರೋಗ್ಯವನ್ನು ಭಗವಂತನೇ ನೀಡಬೇಕಾಗಿದೆ ಎಂದರು.

ಜನ್ಮವರ್ದತಿ ಸಂದರ್ಭದಲ್ಲಿ ರೋಟರಿ ಸಂಸ್ಥೆವತಿಯಿAದ ಬೃಹತ್ ಆರೋಗ್ಯ ಶಿಬಿರವನ್ನು ಆಯೋಜನೆ ಮಾಡಲಾಗಿದ್ದು ನೆರೆದಿದ್ದ ಸಾವಿರಾರು ಭಕ್ತರಿಗೆ ಕಡಲೆಕಾಳು ಉಸಲಿ, ಪಾಯಸ, ಬಾದೋಷ, ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಗೋಡೆಕೆರೆ ಮೃತ್ಯುಂಜಯದೇಶಿಕೇAದ್ರ ಸ್ವಾಮೀಜಿ, ಶಾಸಕ ಕೆ.ಷಡಕ್ಷರಿ, ಮಾಜಿ ಸಚಿವ ಬಿ.ಸಿ.ನಾಗೇಶ್, ಮಾಜಿ ಶಾಸಕ ನಂಜಾಮರಿ, ನಿವೃತ್ತ ಎಸಿಪಿ ಲೋಕೇಶ್ವರ್, ಮುಖ್ಯಮಂತ್ರಿಗಳ ಮಾಜಿ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ, ಜೆಡಿಎಸ್ ಮುಖಂಡ ಶಾಂತಕುಮಾರ್, ಉದ್ಯಮಿ ಶಿವಪ್ರಸಾದ್, ಡಾ.ಶ್ರೀಧರ್, ಡಾ.ಮಧುಸೂಧನ್, ಹಿರಿಯ ಕ್ಷೇತ್ರಾಭಿಮಾನಿಗಳ ಸಂಘದ ಅದ್ಯಕ್ಷ ಶಿವಪ್ಪ, ರೋಟರಿ ಸಂಸ್ಥೆ ಅಧ್ಯಕ್ಷ ಗವಿಯಣ್ಣ, ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು

ವರದಿ :ಮಂಜುನಾಥ್ ಹಾಲ್ಕುರಿಕೆ

ಕರ್ನಾಟಕ ರಾಜ್ಯಸರ್ಕಾರದ ಜನವಿರೋಧಿ ಆಡಳಿತ, ಬೆಲೆಏರಿಕೆ, ದಲಿತವಿರೋದಿ ಆಡಳಿತ ಅಲ್ಪಸಂಖ್ಯಾತರ ತುಷ್ಠಿಕರಣ ಖಂಡಿಸಿ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ನೇತೃತ್ವದಲ್ಲಿ ತಿಪಟೂರು ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಿಪಟೂರು ಉಪವಿಭಾಗಾಧಿಕಾರಿಗಳ ಮೂಲಕ ಮಾನ್ಯ ರಾಜ್ಯಪಾಲರಿಗೆ ಮನವಿ ಪತ್ರಸಲ್ಲಿಸಲಾಯಿತು.


ಪ್ರತಿಭಟನಾ ನಿರತರನ್ನ ಉದೇಶಿಸಿ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾತನಾಡಿ ರಾಜ್ಯಸರ್ಕಾರದ ಜನವಿರೋಧಿ ಆಡಳಿತದಿಂದ ಜನಬೇಸತ್ತಿದ್ದಾರೆ,ಸರ್ಕಾರ ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಜನರ ಜೇಬಿಗೆ ಕತ್ತರಿಹಾಕುತ್ತಿದ್ದಾರೆ,ಅಗತ್ಯವಸ್ತಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು,ಸರ್ಕಾರ ಅರ್ಥಿಕವಾಗಿ ದಿವಾಳಿಯಾಗುತ್ತಿದೆ,ಸರ್ಕಾರಿ ನೌಕರರಿಗೆ ಸಂಬಳ ಕೊಡುವುದು ಕಷ್ಟವಾಗಿದೆ, ತಿಪಟೂರಿನಲ್ಲಿ ಕುಡಿಯುವ ನೀರಿಗೂ ಸಹ ಜನ ಪರದಾಡುವಂತಾಗಿದೆ ಅಭಿವೃದ್ಧಿ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ತಡೆಮಾಡುತ್ತಿದ್ದಾರೆ ತಮ್ಮ ಬೆಂಬಲಿಗರಿಗೆ ಮಾತ್ರ ಕಾಮಗಾರಿ ಮಾಡಲು ಅವಕಾಶ ನೀಡಿದ್ದು, ಕೆಲ ಗುತ್ತಿಗೆದಾರರಿಗೆ ಅನಾಗತ್ಯ ತೊಂದರೆ ನೀಡುತ್ತಿದ್ದಾರೆ, ಈಗ ನಾವು ನಡೆಸುತ್ತಿರುವ ಪ್ರತಿಭಟನೆ ಸಾಂಕೇತಿಕವಾಗಿದ್ದು ಸರ್ಕಾರ ಎಚ್ಚೆತ್ತುಕೊಂಡು ಜನಪರವಾಗಿ ಆಡಳಿತ ನಡೆಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು,

ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದ ಬಿಜೆಪಿ ಮುಖಂಡ ಗಂಗರಾಜು ಮಾತನಾಡಿ ರಾಜ್ಯ ಸರ್ಕಾರ ಹಿಂದೂ ವಿರೋಧಿಯಾಗಿ ವರ್ತಿಸುತ್ತಿದೆ ದಲಿತರ ಮೀಸಲು ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ದಲಿತರಿಗೆ ಅನ್ಯಾಯ ಮಾಡಿದೆ. ದಲಿತಪರ ಹಿಂದುಳಿದ ವರ್ಗಗಳ ಪರ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಲಿತ ವಿರೋಧಿಯಾಗಿ ವರ್ತಿಸುತ್ತಿದ್ದಾರೆ ಅವರ ನಿಜವಾದ ಮುಖವಾಡ ಕಳಸಿ ಬಿದ್ದಿದೆ ,ಸಂವಿಧಾನ ವಿರೋಧಿಯಾದ ಮೀಸಲಾತಿ ಮೂಲಕ ಮುಸಲ್ಮಾನರಿಗೆ ನಾಲ್ಕು ಪರ್ಸೆಂಟ್ ಗುತ್ತಿಗೆ ಮೀಸಲಾತಿಯನ್ನ ನೀಡುವ ಮೂಲಕ ಅಲ್ಪಸಂಖ್ಯಾತರ ತುಷ್ಟಿಕರಣಕ್ಕೆ ಮುಂದಾಗಿದೆ,ತಾಲ್ಲೋಕಿನಲ್ಲಿ ಅಭಿವೃದ್ದಿ ಶೂನ್ಯವಾಗಿದೆ ಎಂದು ತಿಳಿಸಿದರು.
ಬಿಜೆಪಿ ಮುಖಂಡರಾದ ಪ್ರಸನ್ನ ಕುಮಾರ್,ಹಾಲ್ಕುರಿಕೆ ನಾಗರಾಜು,ಸುರೇಶ್ ಬಳ್ಳೆಕಟ್ಟೆ ,ಬಿಸ್ಲೇಹಳ್ಳಿ ಜಗದೀಶ್,ಗುಲಾಬಿ ಸುರೇಶ್,ಶಶಿಕಿರಣ್,ಪದ್ಮತಿಮ್ಮೆಗೌಡ,ಹರಿಸಮುದ್ರ ಗಂಗಾಧರ್,ಆಯರಹಳ್ಳಿ ಶಂಕರಪ್ಪ ,ನಗರಸಭಾ ಸದಸ್ಯ ಮೋಹನ್ ಕುಮಾರ್, ಮುಂತ್ತಾದವರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ನಗರದ ವಿಶ್ವವಿಖ್ಯಾತ ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯಲ್ಲಿ ಹೆಜ್ಜೆನು ದಾಳಿಯಾಗಿದ್ದು ,ಜೇನುದಾಳಿಗೆ ಇಬ್ಬರು ರೈತರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ತಿಪಟೂರು ಎಪಿಎಂಸಿ ಯಲ್ಲಿ ಕೊಬ್ಬರಿ ಮಾರುಕಟ್ಟೆಯಲ್ಲಿ ಹಮಾಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ, ತಾಲ್ಲೋಕಿನ ಕಸಬಾ ಹೋಬಳಿ ಬಸವನಹಳ್ಳಿ ವಾಸಿ ಶಂಕರಯ್ಯ 70 ವರ್ಷ ತೀವ್ರವಾಗಿ ಹೆಜ್ಜೆನು ದಾಳಿಗೊಳಗಾಗಿದ್ದು, ಎಪಿಎಂಸಿ ಮಾರುಕಟ್ಟೆ ಜಿ.ರುದ್ರಯ್ಯ ಟ್ರೇಡರ್ಸ್ ಮುಂಭಾಗ ಹೆಜ್ಜೇನುಗಳು ದಾಳಿ ನಡೆಸಿವೆ.
ಹೆಜ್ಜೆನುದಾಳಿಗೆ ಇಬ್ಬರಲ್ಲಿ ಒಬ್ಬರು ಕಡಿಮೆ ಪ್ರಮಾಣದ ಗಾಯವಾದ ಕಾರಣ ಚಿಕಿತ್ಸೆ ಪಡೆದು ಆಸ್ಪತ್ರೆಗೆಯಿಂದ ಮರಳಿರುತ್ತಾರೆ. ತಿಪಟೂರು ತಾಲ್ಲೋಕಿನ ಬಸವನಹಳ್ಳಿ ಗ್ರಾಮದ ವಾಸಿ ಶಂಕರಪ್ಪ ಎಂಬುವವರು ತೀವ್ರ ಅಸ್ಪಸ್ಥಗೊಂಡಿದ್ದು ಗಾಯಳುಗಳನ್ನ ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು – ತಾಲೂಕಿನ ಕರಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ಪ್ರಾರಂಭವಾಗಿ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆ ಸಹಕಾರ ಸಂಘದಲ್ಲಿ ಕೇಕ್ ಕತ್ತರಿಸಿ ವಾರ್ಷಿಕೋತ್ಸವದ ಆಚರಿಸಲಾಯಿತು.
ಸಂಘದ ಅಧ್ಯಕ್ಷರಾದ ಕೆ ಆರ್ ದೇವರಾಜು ಹಾಗೂ ಸದಸ್ಯರುಕೇಕ್ ಕತ್ತರಿಸುವ ಮೂಲಕ ಸಂಭ್ರಮ ಆಚರಿಸಿದರು,


ಸಂಘದ ಅಧ್ಯಕ್ಷ ಕೆ.ಆರ್ ದೇವರಾಜು ಮಾತನಾಡಿ ನಮ್ಮ ಸಹಕಾರ ಸಂಘ ಹಲವಾರು ಏಳುಬೀಳುಗಳ ನಡುವೆಯೂ ಉತ್ತಮ ಸ್ಥಿತಿಯಲ್ಲಿ ನಡೆಯುತ್ತಿದೆ,ಎಲ್ಲಾ ಸದಸ್ಯರು ,ಹಾಲು ಪೂರೈಕೆದಾರರ ನೆರವಿನಿಂದ ಒಂದು ವರ್ಷ ಪೂರೈಸಿರುವುದು ಶ್ಲಾಘನೀಯ, ಹಾಲು ಉತ್ಪಾದಕರಿಗೆ ಹಾಲಿನ ದರ 4 ರೂ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಸ್ವಾಗತಿಸಿ ಸಹಕಾರ ಸಚಿವರಾದ ಕೆಎನ್ ರಾಜಣ್ಣನವರಿಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನೆ ಸಲ್ಲಿಸಿದರು.


ಸಂಘದ ಉಪಾಧ್ಯಕ್ಷರಾದ ಕೆ.ಜಿ ರಂಗಸ್ವಾಮಿ, ಕರಡಿ ಪ್ರಾಥಮಿಕ ಕೃಷಿ ಸಹಕಾರ ಸಂಘದ ಉಪಾಧ್ಯಕ್ಷರಾದ ನ್ಯಾಕೆನಹಳ್ಳಿ ವೀರಣ್ಣ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾದ ರಾಜಮ್ಮ ಪುಟ್ಟಮಲ್ಲ ಚಾರ್, ಹುಚ್ಚಮ್ಮ ದಿನೇಶರಾಧ್ಯ, ದಯಾನಂದ್, ಉಮೇಶ್ ಸೇರಿದಂತೆ ಹಾಲು ಉತ್ಪಾದಕರು, ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.

error: Content is protected !!