Month: April 2025

ರಾಜ್ಯಸರ್ಕಾರ ಕಾಂತರಾಜು ರವರು ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿದ ಅವಧಿಯಲ್ಲಿ ಗಣತಿ ಮಾಡಿರುವ ಜಾತಿಗಣತಿ ವರದಿಯನ್ನ ಸರ್ಕಾರಕ್ಕೆ ಸಲ್ಲಿಸಿದ್ದು,ಸರ್ಕಾರ ವರದಿ ಸ್ವೀಕಾರ ಮಾಡಿದೆ, ನಮ್ಮ ಸರ್ಕಾರದ ಎಲ್ಲಾ ಸಚಿವರುವ ಒಂದೊಂದು ಪ್ರತಿ ನೀಡಿದ್ದೇವೆ,

ವರದಿಯಲ್ಲಿ ಇರುವಂತಹ ಅಂಶಗಳನ್ನ ಓದಿ,ಪರಿಶೀಲನೆ ಮಾಡಿ ನಂತರ ಸಚಿವ ಸಂಪುಟ ಸಭೆಯಲ್ಲಿ ಮಂಡನೆ ಮಾಡಲಾಗುವುದು,ಎಂದು ಗೃಹ ಸಚಿವ ಡಾ//ಜಿ ಪರಮೇಶ್ವರ್ ತಿಳಿಸಿದರು
ತಿಪಟೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಜಾತಿಗಣತಿ ವರದಿಯನ್ನ ಆಯೋಗದಿಂದ ಪಡೆಯಲಾಗಿದೆ ವರದಿಯನ್ನ ಸಂಪೂರ್ಣವಾಗಿ ಓದಿಸಂಪುಟ ಸಭೆಯಲ್ಲಿ ಕೂಲಂಕುಷವಾಗಿ ಚರ್ಚೆ ಮಾಡಿ,ನಂತರ ವರದಿ ಅನುಷ್ಠಾನದ ಬಗ್ಗೆ ಚರ್ಚೆ ಮಾಡಲಾಗುವುದು, ಸವಲತ್ತುಗಳಿಂದನಿ ವಂಚಿತರಾದ ಜಾತಿಗಳಿಗೆ ಮೀಸಲಾತಿ ಸೌಲಭ್ಯ ನೀಡಲು ಜಾತಿಗಣತಿ ಅಗತ್ಯವಿದೆ, ನಮ್ಮ ಹಿಂದೆನ ಸರ್ಕಾರ ಜಾತಿಗಣತಿ ಮಾಡಿಸಿ 10ವರ್ಷ ಕಳೆಯುತ್ತಿದ್ದು,ಅನಾಗತ್ಯ ಕಾರಣ ನೀಡಿ,ವರದಿ ಸ್ವೀಕಾರ ಮಾಡದಿದ್ದರೇ ಹೇಗೆ, ವರದಿಯನ್ನ ಪಡೆದು, ಗಣತಿವೇಳೆ ಸಂಗ್ರಹ ಮಾಡಿರುವ ಅಂಶಗಳ ಬಗ್ಗೆ ಚರ್ಚೆ ಮಾಡೋಣ,ವರದಿ ನೋಡದೆ ಮಾತಾಡುವುದು ಸರಿಯಲ್ಲಿ, ಕಳೆದ ಸರ್ಕಾರದ ಅವದಿಯಲ್ಲಿ ಜಾತಿಗಣತಿ ಮಾಡುವಾಗ ಪ್ರತಿಮನೆಗೆ ಭೇಟಿ ನೀಡಿ ಅಂಕಿಅಂಶ ಕಲೆಹಾಕಲಾಗಿದೆ,ಒಂದು ವೇಳೆ ಯಾರಾದರೂ ಗಣತಿಯಲ್ಲಿ ಕೈಬಿಟ್ಟಿದರೇ ನಂತರ ನೋಡೋಣ,ಮೆಲ್ನೋಟಕ್ಕೆ ವರದಿಯಲ್ಲಿನ ಸುಮಾರು 80ರಷ್ಟು ಮಾಹಿತಿ ಸರಿಯಾಗಿದೆ ಎನಿಸುತ್ತಿದೆ,ವರದಿ ಪರಾಮರ್ಷೆ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು ಜನಪ್ರಿಯ ಶಾಸಕರು ಅಭಿವೃದ್ದಿಯ ಹರಿಕಾರ ಕೆ.ಷಡಕ್ಷರಿಯವರು 77ನೇ ಹುಟ್ಟು ಹಬ್ಬವನ್ನ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು ,ಹುಟ್ಟುಹಬ್ಬದ ಅಂಗವಾಗಿ ಕೆ.ಷಡಕ್ಷರಿ ಯವರ ಮನೆದೇವರು ತಿಪಟೂರು ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಸಲ್ಲಿಸಲಾಯಿತು,

ನಂತರ ತುಮಕೂರು ಶ್ರೀ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಗಳು ಕೆರೆಗೋಡಿ ರಂಗಾಪುರ ಭೂ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿಗಳುಸೇರಿದಂತೆ ಅನೇಕ ಹರಗುರು ಚರಮೂರ್ತಿಗಳು,ಬಿಲ್ವಪತ್ರೆಸಸಿ ಬನ್ನಿಪತ್ರೆ ಸಸಿ, ನೆಡುವ ಮೂಲಕ ,ಹುಟ್ಟುಹಬ್ಬದ ಶುಭಕೋರಿದರು,ಗಣ್ಯರು ಹಾಗೂ ಕುಟುಂಬ ಸದಸ್ಯರೊಂದಿಗೆ, ಶ್ರೀಗಳಿಗೆ ಪೂಜೆಸಲ್ಲಿಸಿದರು

ತಿಪಟೂರು:ತಾಲ್ಲೋಕಿನ ಹೊನ್ನವಳ್ಳಿ ಹೋಬಳಿ ತಿಪಟೂರು -ಹಾಲ್ಕುರಿಕೆ ರಸ್ತೆಯ ಮಣಕಿಕೆರೆ ಗೇಟ್ ಬಳಿ ಕೆಲದಿನಗಳ ಹಿಂದೆ ರಸ್ತೆ ಬದಿ ಮರವೊಂದರ ಕೊಂಬೆ ಮುರಿದು ಬಿದ್ದಿದ್ದು, ಇದನ್ನ ನೆಪವಾಗಿಸಿಕೊಂಡ ,ಮರಕುಯ್ಯುವವರು , ಜೀವಂತ ಮರ ಕೊಂಬೆಗಳನ್ನೆಲ್ಲ ಕಡಿದು ಹಾಕಿದ ಪರಿಣಾಮ ಇಡೀ ಮರವೇ ಬೋಳಾಗಿದೆ, ಇದನ್ನೆ ಬಂಡವಾಳ ಮಾಡಿಕೊಂಡ ಕಿಡಿಗೇಡಿಗಳು ಸುಮಾರು 20ಅಡಿ ಎತ್ತರದ ಮರದ ಬುಡಕ್ಕೆ ಬೆಕ್ಕಿಹಚ್ಚಿದ್ದಾರೆ

ಬೆಂಕಿಯ ಕೆನ್ನಾಲಿಗೆ ಇಡೀ ಮರದ ಬುಡವನ್ನೇ ದಹಿಸುತ್ತಿದ್ದು, ರಸ್ತೆಯಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೆ ಸಂಚಾಕಾರ ತಂದೊಂಡಿದೆ,ಬೆಂಕಿಯಿಂದ ಬೆಂದು ಹುರಿದು ಬಿದ್ದರೆ, ರಸ್ತೆಗೆ ಬೀಳುತ್ತದೆ ಇದರಿಂದ ವಾಹನ ಸವಾರರು, ದಾರಿಹೋಕರು ಪ್ರಾಣಾಪಾಯ ಎದುರಿಸುವ ಅಪಾಯವಿದೆ ಅರಣ್ಯ ಇಲಾಖೆ, ಅಥವಾ ಪಿಡಬ್ಲ್ಯಡಿ ಇಲಾಖೆ ತುರ್ತಾಗಿ ಸಂಭವನೀಯ ಅವಘತ ತಪ್ಪಿಸಬೇಕಿದೆ ಅಲ್ಲದೆ ಜೀವಂತ ಮರಕ್ಕೆ ಬೆಂಕಿಹಚ್ಚಿರುವ ಕಿಡಿಗೇಡಿಗಳನ್ನ ಪತ್ತೆಹಚ್ಚಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು:ಶಾಸಕ ಕೆ.ಷಡಕ್ಷರಿಯವರ ಹುಟ್ಟು ಹಬ್ಬವನ್ನ ತಿಪಟೂರು ನಗರದ ವೈಭವ ಮಾಲ್ ಹಿಂಬಾಗದ ಆವರಣದಲ್ಲಿ ಏಪ್ರಿಲ್ 13 ರಂದು ಸಮರ್ಥ ಸಂಭ್ರಮವಾಗಿ ಆಚರಿಸಲಾಗುತ್ತಿದೆ.


ತಿಪಟೂರು ನಗರದ ಕೌಸ್ತುಭ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಟಿಯಲ್ಲಿ ಮಾಜಿ ತಾಲ್ಲೋಕು ಪಂಚಾಯ್ತಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್ ಮಾತನಾಡಿ ಶಾಸಕ ಕೆ.ಷಡಕ್ಷರಿಯವರು ಮೂರು ಭಾರಿ ಶಾಸಕರಾಗಿ ತಾಲ್ಲೋಕಿನ ಸಮಗ್ರ ಅಭಿವೃದ್ದಿಗೆ ಶ್ರಮಿಸಿದ್ದು ತಮ್ಮದೇ ಅದ ಕೊಡುಗೆ ನೀಡಿದ್ದಾರೆ, ಅವರ ಸೇವೆ ಹಾಗೂ ಜನಪರ ಕಾಳಜಿಯನ್ನ ಗುರ್ತಿಸಿ ಕೆ.ಷಡಕ್ಷರಿ ಅಭಿಮಾನಿ ಬಳಗದಿಂದ ಏಪ್ರಿಲ್ 13 ರಂದು ಹುಟ್ಟುಹಬ್ಬವನ್ನ ಸಮರ್ಥ ಸಂಭ್ರಮವಾಗಿ ಆಚರಿಸಲಾಗುತ್ತಿದೆ, ಶಾಸಕರ 77ನೇ ಹುಟ್ಟು ಹಬ್ಬಕ್ಕೆ ತಾಲ್ಲೋಕಿನ ತಾಲ್ಲೋಕಿನ ಅಭಿಮಾನಿಗಳು ಹಾಗೂ ಸಾರ್ವಜನಿಕರು ಪಕ್ಷಾತೀತವಾಗಿ ಜಾತ್ಯಾತೀತವಾಗಿ ಭಾಗವಹಿಸಿವ ಮೂಲಕ ಆಚರಿಸಲಿದ್ದಾರೆ,ಕಾರ್ಯಕ್ರಮದಲ್ಲಿ ಶ್ರೀಸಿದ್ದಗಂಗ ಮಠದ ಶ್ರೀಸಿದ್ದಲಿಂಗಮಹಾಸ್ವಾಮೀಜಿಗಳು,ಸುತ್ತುರು ಮಠದ ಶ್ರೀ ಶ್ರೀ ಶಿವರಾತ್ರಿಶ್ವರ ದೇಶಿಕೇಂದ್ರ ಮಹಾಸ್ವಾಮೀಜಿಗಳು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಾಲನಂದನಾಥ ಮಹಾಸ್ವಾಮೀಜಿಗಳು,ಸಿರಿಗೆರೆ ತರಳಬಾಳು ಬೃಹನ್ಮಠದ ಶ್ರೀ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳು ಸೇರಿದಂತೆ ನಾಡಿನ ಎಲ್ಲಾ ಸಮುದಾಯಗಳ ಹರಗುರು ಚರಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದ್ದು ,ಶಾಸಕರ ಪಕ್ಷನಿಷ್ಟೆ ಹಾಗೂ ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನ ನೀಡಬೇಕು ಎಂದುಒತ್ತಾಯಿಸಲಾಗುವುದು. ಎಂದು ತಿಳಿಸಿದರು .


ಪತ್ರಿಕಾ ಘೋಷ್ಠಿಯಲ್ಲಿ ಉಪಸ್ಥಿತರಿದ ನಗರಸಭೆ ಸದಸ್ಯ ಲೋಕನಾಥ್ ಸಿಂಗ್ ಮಾತನಾಡಿ ಶಾಸಕ ಕೆ.ಷಡಕ್ಷರಿಯವರ ಹುಟ್ಟು ಹಬ್ಬದ ಅಂಗವಾಗಿ ಶಾಸಕರ ಮನೆದೇವರು ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಸಲ್ಲಿಸಿ ಬನ್ನಿಪತ್ರೆಗಿಡ ಹಾಗೂ ಬಿಲ್ವಪತ್ರೆ ಸಸಿ ನೆಡಲಾಗುವುದು, ನಂತರ ಎನ್ ಆರ್ ಸೆಲ್ಟರ್ ಉದ್ಘಾಟನೆ ನೆರವೇರಿಸಿ , ಹರಗುರು ಚರಮೂರ್ತಿಗಳು ರಾಜಕೀಯ ನಾಯಕರು, ಚಿಂತರರು ಸಮ್ಮುಖದಲ್ಲಿ ಹುಟ್ಟುಹಬ್ಬವನ್ನ ಸಮರ್ಥ ಸಂಭ್ರಮವಾಗಿ ಆಚರಿಸಲಾಗುವುದು ಎಂದು ತಿಳಿಸಿದರು
ಪತ್ರಿಕಾ ಘೋಷ್ಠಿಯಲ್ಲಿ ಮುಖಂಡರಾದ ಮಾದಿಹಳ್ಳಿ ರೇಣು,ಒಡಪೋನ್ ಚಂದ್ರು,ಮಾಜಿ ನಗರಸಭಾ ಸದಸ್ಯ ಅಣ್ಣಯ್ಯ. ತುಮುಲ್ ನಿರ್ದೇಶಕ ಮಾದಿಹಳ್ಳಿ ಪ್ರಕಾಶ್,ಮುನಿರಾಜ್,ಸಮೀ ಉಲ್ಲಾ,ಸೈಫುಲ್ಲ,ಮಂಜುನಾಥ್ ಗಿರೀಶ್ ಮುಂತ್ತಾದವರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು :ನಗರದ ಹಾಸನ ಸರ್ಕಲ್ ಶಾರದ ನಗರ ರೈಲ್ವೆ ಮೇಲ್ಸೆತುವೆ ನಿರ್ಮಾಣ ಕಾಮಗಾರಿಗೆ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ಗುದ್ದಲಿಪೂಜೆ ನೆರವೇರಿಸಿದರು


ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಸಮಗ್ರ ತುಮಕೂರು ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸುತ್ತೇನೆ,ಜಿಲ್ಲೆ ಅಭಿವೃದ್ದಿಹಾಗೂ ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳ ಪೂರ್ಣಗೊಳಿಸಲು ಕೇಂದ್ರ ಸರ್ಕಾರ 2ಸಾವಿರ ಕೋಟಿ ಅನುದಾನ ನೀಡಿದೆ, 2ವರ್ಷದಲ್ಲಿ 90ಕೋಟಿ ವೆಚ್ಚದಲ್ಲಿ ತುಮಕೂರು ರೈಲ್ವೆ ನಿಲ್ದಾಣ ಅಭಿವೃದ್ದಿ ಪಡಿಸಿ ನನ್ನ ಆರಾಧ್ಯ ದೈವ ಶಿವಕುಮಾರ ಮಹಾಸ್ವಾಮೀಜಿಗಳ ಹೆಸರು ನಾಮಕರಣ ಮಾಡಲಾಗುವುದು,ಜಿಲ್ಲೆಯಲ್ಲಿ ತುಮಕೂರು ಹೊರತುಪಡಿಸಿದರೆ ತಿಪಟೂರು ವೇಗವಾಗಿ ಬೆಳೆಯುತ್ತಿರುವ ತಾಲ್ಲೋಕು ತಿಪಟೂರಿನ ಜನ ನನ್ನ ಮೇಲೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಅಭಿಮಾನವಿಟ್ಟು ಹೆಚ್ಚುಮತ ನೀಡುವ ಮೂಲಕ ಗೆಲುವು ನೀಡಿದ್ದೀರ ನಿಮ್ಮ ಋಣ ಎಷ್ಟು ಜನ್ಮ ಎತ್ತಿದರು ತೀರಿಸಲು ಸಾಧ್ಯವಿಲ್ಲ, ಶೀಘ್ರವಾಗಿ ಹೊನ್ನವಳ್ಳಿ ರೋಡ್ ಮೆಲ್ಸೆತುವೆ ,ಹಿಂಡಿಸ್ಕೆರೆ ರೈಲ್ವೆ ಕ್ರಾಸಿಂಗ್ ಮೇಲ್ಸೆತುವೆಕಾಮಗಾರಿ ಕೈಗೆತ್ತಿಕೊಂಡು ಕೇವಲ ಒಂದುವರೆ ವರ್ಷದಲ್ಲಿ ಜನರ ಉಪಯೋಗಕ್ಕೆ ನೀಡಲಾಗುವುದು,ತಿಪಟೂರಿಗೆ ಅಗತ್ಯವಿರುವ ಕೈಗಾರಿಕೆಗಳ ಸ್ಥಾಪನೆಗೆ ಕೇಂದ್ರ ಕೈಗಾರಿಕ ಸಚಿವ ಹೆಚ್.ಡಿ ಕುಮಾರಸ್ವಾಮಿಯವರಿಗೆ ಪ್ರಸ್ಥಾವನೆ ಸಲ್ಲಿಸಿ ಕೈಗಾರಿಕೆಗೆಗಳ ಸ್ಥಾಪನೆಗೆ ಕ್ರಮಕೈಗೊಳ್ಳುತ್ತೇವೆ

,ತಿಪಟೂರು -ದುದ್ದ ರೈಲ್ವೆ ಮಾರ್ಗಕ್ಕೆ ಸರ್ವೆಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ,ಬೆಂಗಳೂರು ತುಮಕೂರು ನೆಲಮಂಗಳ ರಸ್ತೆಯಲ್ಲಿ ವರ್ಷೊಂದರಲ್ಲೇ ಸುಮಾರು 290ಜನ ಅಪಘಾತದಲ್ಲಿ ಸಾವನ್ನಪ್ಪಿದರು,ನಾನು ಇದೇ ಹೈವೆಯಲ್ಲಿ ಸಂಚಾರಮಾಡುವಾಗ ಅಪಘಾತದಲ್ಲಿ ದಂಪತಿಗಳು ಸಾವನ್ನಪ್ಪಿದನ್ನ ಕಣ್ಣಾರೆ ಕಂಡು,ತಕ್ಷಣ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರೊಂದಿಗೆ ಮಾತನಾಡಿ 6ಪಥದ ರಸ್ತೆ ಮಂಜೂರು ನಾಡಿಸಿದ್ದೇನೆ, ಹಾಸನ ತಿಪಟೂರು ಹಿರಿಯೂರು ಮಾರ್ಗದ ಗ್ರೀನ್ ಕಾರಿಡಾರ್ ಹೈವೆ ಯೋಜನೆ ಮಂಜೂರಾಗಿದ್ದು,ಶೀಘ್ರದಲ್ಲಿ ಟೆಂಡರ್ ಕರೆಯಲಾಗುವುದು,ಹಾಸನ ಅರಸೀಕೆರೆ ತಿಪಟೂರು ಮೆಮೋ ರೈಲು, ಹಾಗೂ ತುಮಕೂರು ತಿಪಟೂರು ಮೆಮೋ ರೈಲು ಓಡಿಸುವ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು ಶೀಘ್ರದಲ್ಲಿ ಈ ರೈಲುಗಳು ನಿಮ್ಮ ಸೇವೆಗೆ ಲಭ್ಯವಾಗಲಿವೆ,ತಿಪಟೂರು ಶಾರದ ನಗರ ರೈಲ್ವೆ ಮೇಲ್ಸೆತುವೆ ಕಾಮಗಾರಿ 15ತಿಂಗಳಲ್ಲಿ ಪೂರ್ಣಗೊಳ್ಳಲಿದೆ,ನಮ್ಮ ಸರ್ಕಾರದಲ್ಲಿ ವೆಂಕಟ,ಸೀನನ ಲೆಕ್ಕಗಳಿಗೆ ಅವಕಾಶವಿಲ್ಲ, ಪಾರದರ್ಶಕವಾಗಿ ಯಾರುಗಣಮಟ್ಟದ ಕಾಮಗಾರಿ ನಿರ್ವಹಿಸುತ್ತಾರೊ ಅವರಿಗೆ ಬಿಲ್ ನೀಡುತ್ತೇವೆ ನಾನು ಯಾವಾಗಲೂ ಪಕ್ಷಾತೀತವಾಗಿ ಕೆಲಸ ಮಾಡುತ್ತೇವೆ ಚುನಾವಣೆ ವೇಳೆಯಲ್ಲಿ ಮಾತ್ರ ರಾಜಕೀಯ ನಂತರ ಏನಿದರೂ ಅಭಿವೃದ್ದಿಗೆ ಮಾತ್ರ ಆಧ್ಯತೆ ನೀಡುತ್ತೇವೆ ತಿಪಟೂರು ಶಾಸಕ ಕೆ.ಷಡಕ್ಷರಿಯವರಿ ತಡವಾಗಿ ಆಹ್ವಾನ ತಲುಪಿರುವ ಬಗ್ಗೆ ಮಾಹಿತಿ ಇದ್ದು ಅವರ ಕ್ಷಮೆ ಕೋರುತ್ತೇನೆ ನಾನು ಷಡಕ್ಷರಿ ಸ್ನೆಹಿತರು ರಾಜಕೀಯವೇ ಬೇರೆ ಅಭಿವೃದ್ದಿಯ ವಿಚಾರದಲ್ಲಿ ನಾವೆಲ್ಲ ಒಂದೆಎಂದು ತಿಳಿಸಿದರು


ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಸಿ ನಾಗೇಶ್, ರೈಲ್ವೆ ಸಿಇಒ ಅಜಯ್ ಶರ್ಮ,ಡಿಆರ್ ಎಂ ಮಿಥಲ್,ದಿಶಾ ಸಮಿತಿ ಅಧ್ಯಕ್ಷ ವೈ.ಹೆಚ್ ಹುಚ್ಚಯ್ಯ.ಸದಸ್ಯರಾದ ಆಯರಹಳ್ಳಿ ಶಂಕರಪ್ಪ ಬಿಜೆಪಿ ಮುಖಂಡ ಲೋಕೇಶ್ವರ್,ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್ ಜಕ್ಕನಹಳ್ಳಿ ಲಿಂಗರಾಜು,ಗಂಗರಾಜು,ಮುಂತ್ತಾದವರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು :ಜಸ್ಟೀಸ್ ನಾಗಮೋಹನ್ ದಾಸ್ ಆಯೋಗವು ಪರಿಶಿಷ್ಟ ಜಾತಿಗಳ ಒಳಮೀಸಲು ವರದಿ ನೀಡುವ ಕುರಿತು ಪರಿಶಿಷ್ಟ ಜಾತಿದತ್ತಾಂಶ ಸಂಗ್ರಹಕ್ಕಾಗಿ ಜಾತಿ ಸಮೀಕ್ಷ ನಡೆಸುತ್ತಿದ್ದು,ರಾಜ್ಯದಾದ್ಯಂತ ನಡೆಯುವ ಜಾತಿಗಣತಿ ವೇಳೆ ಗಣತಿದಾರರು ನಿಮ್ಮ ಬಳಿ ಬಂದಾಗ ಉಪಜಾತಿ ಕಲಂ ನಲ್ಲಿ ಪ್ರತಿಯೊಬ್ಬ ಮಾದಿಗ ಬಂಧುಗಳು ಸಹ ಮಾದಿಗ ಎಂಬುದಾಗಿ ನಮೂದಿಸಬೇಕು.ಇದರಿಂದ ಸರ್ಕಾರಕ್ಕೆ ನಿಖರವಾದ ಜಾತಿ ಅಂಕಿ ಸಂಖ್ಯೆಯ ದತ್ತಾಂಶದೊರೆಯಲಿದೆ ಎಂದು ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಕೆ.ಎಂ ಶಾಂತಪ್ಪ ತಿಳಿಸಿದರು
ನಗರದ ಪ್ರವಾಸಿ ಮಂದಿರದಲ್ಲಿ ಪರಿಶಿಷ್ಟಜಾತಿ ಮಾದಿಗ ಸಂಘಟನೆಗಳ ಸಭೆ ನಡೆಸಿ ಮಾತನಾಡಿದ ಅವರು ಪರಿಶಿಷ್ಟ ಜಾತಿ ಶೋಷಿತ ಸಮುದಾಯಗಳಿಗೆ ಸಂವಿಧಾನದ ಆಶಯದಂತೆ ಜನಸಂಖ್ಯೆಗೆ ತಕ್ಕಂತೆ ಮೀಸಲಾತಿ ಹಾಗೂ ಸರ್ಕಾರದ ಸೌಲಭ್ಯಗಳು ದೊರೆಯುತ್ತಿಲ್ಲ, ಮೀಸಲಾತಿ ಸೌಲಭ್ಯ ಕೆಲವೇ ಕೆಲಸ ಸ್ಪೃಷ್ಯ ಪರಿಶಿಷ್ಟ ಜಾತಿಗಳ ಪಾಲಾಗುತ್ತಿದ್ದೆ,ಎಂದು ಕಳೆದ ಮೂರು ದಶಕಗಳಿಂದ ದಲಿತಪರ ಸಂಘಟನೆಗಳು ಹೋರಾಟ ಮಾಡುತ್ತಾ ಬಂದಿವೆ, ನಮ್ಮ ನ್ಯಾಯಯುತ ಹೋರಾಟಕ್ಕೆ ಬೆಂಬಲವಾಗಿ ಘನ ಸುಪ್ರೀಂ ಕೋರ್ಟ್ ಒಳಮೀಸಲಾತಿ ಅಗತ್ಯಕುರಿತು ನಿರ್ದೇಶನ ನೀಡಿದ್ದು,ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯಸರ್ಕಾರ ಒಳಮೀಸಲಾತಿ ಜಾರಿ ಮಾಡಲು. ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಆಯೋಗ ರಚನೆ ಮಾಡಿದ್ದು, ಆಯೋಗವೂ ಸಹ ಪರಿಶಿಷ್ಟ ಜಾತಿಗಳ ನಿಖರ ಅಂಕಿಅಂಶ ಸಂಗ್ರಹಿಸುವ ಉದೇಶದಿಂದ ಜಾತಿಗಣತಿಗೆ ಮುಂದಾಗಿದೆ, ತಿಪಟೂರು ತಾಲ್ಲೋಕಿನ ಮಾದಿಗ ಬಂಧುಗಳು ಗಣತಿದಾರರು ನಿಮ್ಮ ಮನೆಬಳಿ ಬಂದಾಗ ಉಪಜಾತಿ ಕಲಂ ನಲ್ಲಿ ಮಾದಿಗ ಎಂದು ನಮೂದಿಸುವ ಮೂಲಕ,ಜನಸಂಖ್ಯೆಯ ಸರಿಯಾದ ಮಾಹಿತಿ ಸಂಗ್ರಹಿಸಲು ಸಹಕರಿಸಿ, ಅಲ್ಲದೇ ಉಪಜಾತಿ ಕಲಂ ನಲ್ಲಿ ಮಾದಿಗ ಎಂದು ನಮೂದು ಮಾಡುವುದರಿಂದ ಸರ್ಕಾರದ ಸೌಲಭ್ಯಗಳನ್ನ ಪಡೆಯಲು ಸಾಧ್ಯವಾಗುತ್ತದೆ,ನಗರ ಪ್ರದೇಶದಲ್ಲಿ ವಾಸಮಾಡುವ ಮಾದಿಗ ಬಂಧುಗಳು ಕೀಳಿರಿಮೆ ಬಿಟ್ಟು ಉಪಜಾತಿ ಕಲಂ ನಲ್ಲಿ ಮಾದಿಗ ಎಂದು ನಮೂದಿಸಿ, ನೀವು ಜಾತಿಗಣತಿ ವೇಳೆ ಸರಿಯಾದ ಮಾಹಿತಿ ನೀಡದೆ,ಗಣತಿಮುಗಿದ ನಂತರ ಸರಿಪಡಿಸಲು ಸಾಧ್ಯವಿಲ್ಲ ಇದರಿಂದ ಮುಂದಿನ ನಿಮ್ಮ ಪೀಳಿಗೆಗೆ ನೀವೆ ಅನ್ಯಾಯ ಮಾಡಿದಂತೆ ಆಗುತ್ತದೆ ಎಂದು ತಿಳಿಸಿದರು
ಸಭೆಯಲ್ಲಿ ಉಪಸ್ಥಿತರಿದ ಡಿಎಸ್ ಎಸ್ ಮುಖಂಡ ಟಿ.ಕೆ ಕುಮಾರ್ ಮಾತನಾಡಿ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಸೌಲಭ್ಯ ಕಲ್ಪಿಸಲು.ಜಾತಿಪದ ಬಳಕೆಯಲ್ಲಿ ಹಲವಾರುಗೊಂದಲಗಳಿವೆ ಮಾದಿಗ ಸಂಬಂದಿತ ಜಾತಿಗಳುಮಾದಿಗರೆ ಆದಿಕರ್ನಾಕ ಆದಿದ್ರಾವಿಡ ಆದಿ ಆಂದ್ರ .ಹರಿಜನ. ಆದಿಜಾಂಬವ ,ಸೇರಿದಂತೆ ಹಲವಾರು ಹೆಸರುಗಳನ್ನ ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ಹೆಸರುಗಳು ಇರುವ ಕಾರಣ ಪರಿಶಿಷ್ಟ ಜಾತಿಯಲ್ಲಿಯೇ ಮಾದಿಗರು ಅತಿಹೆಚ್ಚು ಸಂಖ್ಯೆಯಲ್ಲಿ ಇದ್ದರೂ ಸಹ,ಕೆಲವ್ಯಕ್ತಿಗಳು ಗೊಂದಲ ಸೃಷ್ಠಿಮಾಡಿ,ಸರ್ಕಾರದ ದಿಕ್ಕುತಪ್ಪಿಸುವ ಕೆಲಸಗಳಾಗಿವೆ ಆದರಿಂದ ಮಾದಿಗ ಸಮುದಾಯ ಎಚ್ಚರಿಕೆಯಿಂದ ಉಪಜಾತಿ ಕಲಂ ನಲ್ಲಿ ಮಾದಿಗ ಎಂದು ನಮೂದು ಮಾಡಬೇಕು,ಗಣತಿದಾರರಿಗೆ ಸರಿಯಾದ ಮಾಹಿತಿ ನೀಡಿ ಜಾತಿಕೀಳಿರಿಮೆಯಿಂದ ಉಪಜಾತಿ ಕಲಂ ನಲ್ಲಿ ತಪ್ಪು ಮಾಹಿತಿ ನೀಡಿ,ನಿಮ್ಮ ಭವಿಷ್ಯದ ಪೀಳಿಗೆಗೆ ಅನ್ಯಾಯ ಮಾಡಬೇಕು ನಿಮಗಾಗಿ ಒದಗಿಬಂದಿರುವ ಸದಾವಕಾಶ ಬಳಸಿಕೊಳ್ಳಿ ಎಂದು ತಿಳಿಸಿದರು.
ಸಭೆಯಲ್ಲಿ ಮುಖಂಡರಾದ ಕುಪ್ಪಾಳು ರಂಗಸ್ವಾಮಿ.ಹರೀಶ್ ಗೌಡ,ಪೆದ್ದಿಹಳ್ಳಿ ನರಸಿಂಹಯ್ಯ,ಶಿವಕುಮಾರ್ ಮತ್ತಿಘಟ್ಟ ರಾಘವೇಂದ್ರ ಯಗಚೀಕಟ್ಟೆ,ಕಲ್ಲೇಶ್ ಶೆಟ್ಟಿಹಳ್ಳಿ ಗಾಂಧಿನಗರ ಬಸವರಾಜು,ರಮೇಶ್ ಮಾರನಗೆರೆ,ಮಂಜುನಾಥ್ ಗುರುಗದಹಳ್ಳಿ,ಲಕ್ಕಿಹಳ್ಳಿ ತಿಮ್ಮಯ್ಯ,ಲೋಕೇಶ್ ಉಮೇಶ್ ,ಗೌಡನಕಟ್ಟೆ ಬಸವರಾಜು,ಸೇರಿದಂತೆ ಅನೇಕರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು: ತಾಲ್ಲೋಕಿನ ಕಸಬಾ ಹೋಬಳಿ ಕೋಟೆನಾಯ್ಕನಹಳ್ಳಿ ಎಸ್ ಆರ್ ಎಸ್ ಕ್ರೋಮ್ ಪಿಯು ಕಾಲೇಜ್ ವಿದ್ಯಾರ್ಥಿನಿ ಸಿ.ಕೆ ಲಕ್ಷ್ಮಿ ರಾಜ್ಯಕ್ಕೆ ಹತ್ತನೇ ರ್ಯಾಂಕ್ ಪಡೆಯುವ ಮೂಲಕ ತಿಪಟೂರು ತಾಲ್ಲೋಕಿಗೆ ಕೀರ್ತಿ ತಂದಿದ್ದಾರೆ,ಎಸ್ಆರ್ ಎಸ್ ಕ್ರೋಮ್ ಪಿಯು ಕಾಲೇಜು ಶೇಕಡ 100ರಷ್ಟು ಸಾಧನೆ ಮಾಡಿದೆ.


ಕೋಟೆನಾಯ್ಕನಹಳ್ಳಿ ಎಸ್ ಆರ್ ಎಸ್ ಕ್ರೋಮ್ ಪಿಯು ಕಾಲೇಜು ಆವರಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಶ್ರಿಷಡಕ್ಷರ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ರುದ್ರಮುನಿಮಹಾಸ್ವಾಮೀಜಿ ನಮ್ಮ ಎಸ್ ಆರ್ ಎಸ್ ಕ್ರೋಮ್ ಪಿಯು ಕಾಲೇಜು ಫಲಿತಾಂಶ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಪೂರ್ತಿ ದಾಯಕವಾಗಿದೆ,ನಮ್ಮ ಕೋಟೆನಾಯ್ಕನಹಳ್ಳಿ ನಮ್ಮ ಮಠದ ಆವರಣದಲ್ಲಿ ಗುರುಕುಲ ಮಾದರಿ ಸಂಸ್ಕಾರಯುತ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದು,ಗ್ರಾಮೀಣ ಮಕ್ಕಳಿಗೆ ಅನುಕೂಲವಾಗ ಬೇಕು, ನಗರಭಾಗದಲ್ಲಿ ದೊರೆಯುವ ಹೈಟೆಕ್ ಶಿಕ್ಷಣ ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ದೊರೆಯಬೇಕು ಎನ್ನುವ ದೃಷ್ಠಿಯಿಂದ ನುರಿತ ಬೋದಕ ವರ್ಗ ಸತತವಾಗಿ ಉತ್ತಮ ಗುಣಮಟ್ಟದ ತರಬೇತಿ ನೀಡುತ್ತಿದ್ದು, ಹಾಸ್ಟೆಲ್ ಹಾಗೂ ಕಾಲೇಜು ಒಂದೇ ಕಡೆ ಇರುವಂತಹ ಕೆಲವೇ ಶಾಲೆಗಳಲ್ಲಿ ನಮ್ಮ ಎಸ್ಆರ್ ಎಸ್ ಕ್ರೋಮ್ ಕಾಲೇಜು ಸಹ ಒಂದು,ನಮ್ಮ ಕಾಲೇಜಿನಲ್ಲಿ ಪಿಸಿಎಂಬಿ,ಪಿಸಿಎಂಸಿ ನೀಟ್ ,ಜೆಇಇ,ಕೆಸಿಇಟಿ ,ಗೆ ಅನುಕೂಲವಾಗುವಂತೆ ತರಬೇತಿ ನೀಡಲಾಗುತ್ತಿದೆ,

ನುರಿತ ಶಿಕ್ಷಕರು ಬೆಂಗಳೂರು ಸೇರಿದಂತೆ ರಾಜ್ಯದ ಪ್ರತಿಷ್ಟಿತ ಕಾಲೇಜುಗಳಲ್ಲಿ ಸೇವೆ ಮಾಡಿರುವಂತಹ ಶಿಕ್ಷಕರೇ ಸೇರಿ ಕಾಲೇಜು ನಡೆಸುತ್ತಿದ್ದಾರೆ, 61ಮಕ್ಕಳಿರುವ ಶಾಲೆ ಶೇಕಡ 100ರಷ್ಟು ಫಲಿತಾಂಶ ಪಡೆದು, ಸಿ‌ಕೆ ಲಕ್ಷ್ಮಿ ಎನ್ನುವ ವಿದ್ಯಾರ್ಥಿನಿ ರಾಜ್ಯಕ್ಕೆ 10ನೇ ರ್ಯಾಂಕ್ ಪಡೆದಿರುವುದು, ಹೆಮ್ಮೆಯ ವಿಚಾರವಾಗಿದ್ದು ಶ್ರೀಮಠ ಶಿಕ್ಷಣಕ್ಕೆ ಅಗತ್ಯವಾದ ಎಲ್ಲಾ ನೆರವು ನೀಡುವ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಿ,ವಿದ್ಯಾರ್ಥಿಗಳ ಪೂರೋಭಿವೃದ್ದಿಗೆ ಪ್ರೋತ್ಸಾಹಿಸಲಾಗುತ್ತಿದೆ,ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದು,ಹೆಚ್ಚು ಹೆಚ್ಚು ಮಕ್ಕಳು ದಾಖಲಾತಿ ಪಡೆಯುವ ಮೂಲಕ ಸದಾವಕಾಶ ಪಡೆದುಕೊಳ್ಳಬೇಕಾಗಿ ತಿಳಿಸಿದರು.

ಎಸ್ಆರ್ ಎಸ್ ಕ್ರೋಮ್ ಪಿಯು ಕಾಲೇಜು ಪ್ರಾಚಾರ್ಯ ಪ್ರಕಾಶ್ ವೈ,ಸಿ ಮಾತನಾಡಿ ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆಸಲ್ಲಿಸಿದ ಶಿಕ್ಷಕರು ಸೇರಿ ಶ್ರೀ ರುದ್ರಮುನಿಮಹಾಸ್ವಾಮೀಜಿಗಳ ಸಹಕಾರ ಕೃಪಾಶೀರ್ವಾದದೊಂದಿಗೆ ಕಾಲೇಜು ಆರಂಭಿಸಿದ್ದು ನಾವೂ ಸಹ ನಗರಪ್ರದೇಶದ ಕಾಲೇಜುಗಳಿಗೆ ಪೈಪೋಟಿ ನೀಡುವಂತ್ತೆ ಗ್ರಾಮೀಣ ಮಕ್ಕಳನ್ನ ತಯಾರುಮಾಡಬೇಕು ಎನ್ನುವ ಉದೇಶದಿಂದ,ಗುಣಮಟ್ಟದ ತರಬೇತಿ ನೀಡುತ್ತಿದ್ದೇವೆ,ನಮ್ಮ ಶ್ರಮಕ್ಕೆ ಫಲವಾಗಿನಮ್ಮ ಕಾಲೇಜು 100ರಷ್ಟು ಫಲಿತಾಂಶ ಪಡೆದಿದ್ದು,ರಾಜ್ಯದಲ್ಲಿಯೇ ಉತ್ತಮ ಫಲಿತಾಂಶಗಳಿಸಿದ ಹೆಮ್ಮೆ ಇದೆ,ನಮ್ಮ ಗ್ರಾಮೀಣ ಭಾಗದ ಮಕ್ಕಳು ಸಹ ಸಿಇಟಿ ನೀಟ್,ಜೆಇಇ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆದು ಇಂಜಿನಿಯರಿಂಗ್ ಮೆಡಿಕಲ್ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಬೇಕು ಐಎಸ್ ಎಸ್ ಕೆಎಎಸ್ ಸೇರಿದಂತೆ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿ ದೇಶಕ್ಕೆ ರಾಜ್ಯಕ್ಕೇ ಕೀರ್ತಿ ಸಂಪಾದಿಸಲಿ ಎನ್ನುವ ನಿಟ್ಟಿನಲ್ಲಿ ತರಬೇತಿ ನೀಡಲಾಗಿತ್ತಿದೆ, ಎಲ್ಲಾ ವರ್ಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಉತ್ತಮ ಶೈಕ್ಷಣಿಕ ವಾತಾವರಣದಲ್ಲಿ ಗುಣಮಟ್ಟದ ತರಬೇತಿ ನೀಡುತ್ತಿದ್ದು, ಶಾಲೆಯಲ್ಲಿ ದೊರೆಯುವ ಸೌಲಭ್ಯಗಳನ್ನ ಹೆಚ್ಚಿನ ಸಂಖ್ಯೆಯಲ್ಲಿ ಬೆಳಸಿಕೊಳ್ಳ ಬೇಕು ಎಂದರು


ರಾಜ್ಯಕ್ಕೆ 10ನೇ ರ್ಯಾಂಕ್ ಪಡೆದಿರುವ ವಿದ್ಯಾರ್ಥಿನಿ ಸಿ.ಕೆ ಲಕ್ಷ್ಮಿ ಮತನಾಡಿ ನಮ್ಮ ಕಾಲೇಜಿನ ಶಿಕ್ಷಕರ ಹಾಗೂ ಶ್ರೀಮಠದ ಪರಮಪೂಜ್ಯ ಸ್ವಾಮೀಜಿಯವರ ಪ್ರೋತ್ಸಹ ಹಾಗೂ ಬೆಂಬಲ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಯಿತು, ಗ್ರಾಮೀಣ ಭಾಗದಿಂದ ಬಂದರೂ ನಾನೂ ಐಎಎಸ್ ಮಾಡಬೇಕು ಎನ್ನು ಆಕಾಂಕ್ಷೆ ಹೊಂದಿದ್ದೆ .ನಮ್ಮ ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳಿಗೂ ಉತ್ತಮ ತರಬೇತಿ ಗುಣಮಟ್ಟದ ಶಿಕ್ಷಣ ನೀಡಿದರ ಪರಿಣಾಮವೇ ಈ ಫಲಿತಾಂಶ ನನ್ನ ಯಶಸ್ಸಿಗೆ ಕಾರಣರಾದ ಬೋಧಕ ಹಾಗೂ ಬೋದಕೇತರ ವೃದ್ದ ಪೋಷಕರು ಹಾಗೂ ಸ್ವಾಮೀಜಿಯವರಿಗೂ ಅಭಿನಂದನೆ ತಿಳಿಸುವುದ್ದಾಗಿ ತಿಳಿಸಿದರು
ಪತ್ರಿಕಾಘೋಷ್ಟಿಯಲ್ಲಿ ಉಪನ್ಯಾಸಕರಾದ ಸ್ವಾಮಿ ಕೆ.ಟಿ ,ದಿಲೀಪ್,ಬಿ.ಸಿ,ಪಾಂಡುರಂಗ ವಿ.ಎಲ್. ಮುಂತ್ತಾದವರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು: ಕ್ರೀಡೆ ಸ್ನೇಹ ಸೌಹಾರ್ದತೆ ಬೆಳಸುವ ಸಾಧನವಾಗಿಗೆ,ಜಾತಿ ಮತ ಹಾಗೂ ಭಾಷೆ ಗಡಿಗಳ ನಿರ್ಭಂದವಿರುವುದಿಲ್ಲ,ಸತತ ಅಭ್ಯಾಸಹಾಗೂ ಪರಿಶ್ರಮದಿಂದ ಉತ್ತಮ ಸಾಧನೆ ಮಾಡಬೇಕು ಎಂದು ತಿಪಟೂರು ಡಿವೈಎಸ್ಪಿ ವಿನಾಯಕ ಎನ್ ಶೆಟಿಗೇರಿ ತಿಳಿಸಿದರು


ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಕೆಎಲ್ಎ ಸ್ಕೂಲ್ ಅಫ್ ಲಾ ಕಾಲೇಜು ವತಿಯಿಂದ ಆಯೋಜಿಸಿದ ಅಂತರ ಕಾಲೇಜು ಕೆಎಲ್ಎ ಕಪ್ 2025 ಕ್ರಿಕೇಟ್ ಕ್ರೀಡಾಕೂಟ ಉದ್ಗಾಟಿಸಿದ ಅವರು ಮಾತನಾಡಿ ಕ್ರೀಡೆಯಲ್ಲಿ ಸೋಲು ಗೆಲುವುಗಳು ಸಹಜ ಆದರೆ ಕ್ರೀಡಾ ಸ್ಪೂರ್ತಿಯೊಂದಿಗೆ ಭಾಗವಹಿಸುವುದು ಮುಖ್ಯ,ವಿದ್ಯಾರ್ಥಿಗಳು ಆನ್ ಗೇಮ್ ದಾಸರಾರುತ್ತಿರುವ ಹೊತ್ತಿನಲ್ಲಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಆಸಕ್ತಿ ಬೆಳೆಸುವಂತ್ತೆ ಲಾ ಕಾಲೇಜಿ ಕ್ರೀಡಾ ಕೂಟ ಆಯೋಜನೆ ಮಾಡಿರುವುದು ಶ್ಲಾಘನೀಯ ಕ್ರೀಡಾಕೂಟದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಸೋಲು ಗೆಲುವುಗಳನ್ನ ಸಮಾನವಾಗಿ ಸ್ವೀಕರಿಸಿ ಎಂದು ತಿಳಿಸಿದರು


ಎನ್,ಎಸ್ಎಸ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರಾದ ನಾಗೇಂದ್ರ ಜಿ.ಎನ್ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜೊತೆಗೆ ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳವುದು ಮುಖ್ಯ, ಕ್ರೀಡೆ ಮನುಷ್ಯನ ಆರೋಗ್ಯ ವೃದ್ದಿಗೆ ಸಹಕಾರಯಾಗುತ್ತದೆ,ನಮ್ಮ ಕಾಲೇಜಿನಲ್ಲಿ ಕ್ರೀಡಾಕೂಟ ಅಯೋಜನೆಗೆ ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರ ವರ್ಗದ ಆಸಕ್ತಿ ಪರಿಶ್ರಮದ ಕಾರಣ ಕ್ರೀಡಾಕೂಟ ಉತ್ತಮವಾಗಿ ಜರುಗುತ್ತಿದೆ,ವಿದ್ಯಾರ್ಥಿಗಳಿಗೆ ಕ್ರೀಡೆಗಳ ಬಗ್ಗೆ ಆಸಕ್ತಿ ಬೆಳೆಯುವಂತೆ ಮಾಡುವುದು, ಹಾಗೂ ಕ್ರೀಡಾ ಉತ್ಸಹದೊಂದಿಗೆ ಮನೊರಂಜನೆ ಪಡೆಯಬೇಕು ಎನ್ನುವುದು ನಮ್ಮ ಉದೇಶ,ವಿದ್ಯಾರ್ಥಿಗಳು ಪಠ್ಯಚಟುವಟಿಕೆಗಳ ಜೊತೆ, ಕ್ರೀಡೆಯಲ್ಲೂ ಆಸಕ್ತಿ ಬೆಳೆಸಿಕೊಳ್ಳ ಕ್ರೀಡಾ ಸ್ಪೂರ್ಥಿ ನಿಮ್ಮ ಜೀವನದ ಏಳುಬೀಳುಗಳನ್ನ ಸಮಾನವಾಗಿ ಸ್ವೀಕರಿಸುವ ಮನೋಭಾವನೆ ಬೆಳೆಸುತ್ತದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಕೆಎಲ್ಎ ಸ್ಕೂಲ್ ಅಫ್ ಲಾ ಕಾಲೇಜು ಪ್ರಾಚಾರ್ಯರಾದ ಶ್ರೀಮತಿ ವಿನೀತಾ,ಸಹಾಯಕ ಪ್ರಾಧ್ಯಾಪಕರುಗಳಾದ ಪ್ರಸನ್ನ ಕುಮಾರ್,ಎ.ಆರ್ ಪುನಿತ್ ಕುಮಾರ್ ಉಪಸ್ಥಿತರಿದರು
ಕ್ರೀಡಾಕೂಟದಲ್ಲಿ ನಾಣ್ಯ ಚುಮ್ಮುವ ಮೂಲಕ ತಿಪಟೂರು ಡಿವೈಎಸ್ಪಿ ವಿನಾಯಕ ಎನ್ ಶೆಟಿಗೇರಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು
ತಿಪಟೂರು ಕೆ.ಎಲ್ ಎ ಸ್ಕೂಲ್ ಅಫ್ ಲಾ ಕಾಲೇಜು ಹಾಗೂ ಹಾಗೂ ಜಿಪಿಟಿ ಕಾಲೇಜು ತುರುವೇಕೆರೆ ವಿರುದ್ದ ನಡೆದ ನೇರಹಣಾಹಣಿಯಲ್ಲಿ ತಿಪಟೂರು ಕೆಎಲ್ಎ ಸ್ಕೂಲ್ ಅಫ್ ಲಾ ಕಾಲೇಜು ಪ್ರಥಮಸ್ಥಾನ ಪಡೆದುಕೊಂಡಿತು, ತುರುವೇಕೆರೆ ಜಿಪಿಟಿ ದ್ವೀತೀಯ ಸ್ಥಾನ ಪಡೆದುಕೊಂಡಿತು,

ವರದಿ :ಸಂತೋಷ್ ಹೋಬಳ

ತಿಪಟೂರು: ನಗರದ ಕೆ.ಎಲ್.ಎ ಸ್ಕೂಲ್ ಆಫ್ ಲಾ ಕಾಲೇಜು ಮತ್ತು ಸುನಂದ ಕಣ್ಣಿನ ಆಸ್ಪತ್ರೆ ಹಾಗೂ ಅಧ್ವಿನ್ ಪ್ಯಾರಾ ಮೆಡಿಕಲ್ ಕಾಲೇಜಿನ ಸಹಯೋಗದಲ್ಲಿ ವಿಶ್ವ ಆರೋಗ್ಯ ದಿನದ ಅಂಗವಾಗಿ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು ಸದರಿ ಕಾಲೇಜಿನ ವಿದ್ಯಾರ್ಥಿಗಳು ಉಚಿತ ಕಣ್ಣಿನ ತಪಾಸಣೆಗೆ ಮಾಡಲಾಗಿತ್ತು ಈ ಶಿಬಿರದ ಮೂಲಕ ವಿದ್ಯಾರ್ಥಿಗಳು ತಮ್ಮ ಕಣ್ಣುಗಳ ಆರೋಗ್ಯವನ್ನು ಪರೀಕ್ಷಿಸಿಕೊಂಡರು.ಸದರಿ ಶಿಬಿರದಲ್ಲಿ ಕೆ ಎಲ್ ಎ ಸ್ಕೂಲ್ ಆಫ್ ಲಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪ್ರೊ. ವಿನೀತ ಪಿ ಕೆ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಪ್ರಸನ್ನ ಕುಮಾರ್ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಎ ಆರ್ ಪುನೀತ್ ಕುಮಾರ್ ಉಪಸಿತರಿದ್ದರು ಹಾಗೂ ವಿದ್ಯಾರ್ಥಿಗಳು ಎಂದಿನಂತೆ ಸದರಿ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ವರದಿ: ಸಂತೋಷ್ ಓಬಳ. ಗುಬ್ಬಿ

error: Content is protected !!