Year: 2025

ಕಲ್ಪತರು ವಿದ್ಯಾಸಂಸ್ಥೆ ಹಾಗೂ ತಿಪಟೂರು ನಗರಸಭೆ ಸಹಯೋಗದಲ್ಲಿ ತ್ಯಾಜ್ಯ ವಸ್ತುಗಳ ನಿರ್ವಹಣೆ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಜಾಥ ನಡೆಸಲಾಯಿತು, ನಗರಸಭೆ ಅಧ್ಯಕ್ಷೆ ಶ್ರೀಮತಿ ಯಮುನಾ ಧರಣೇಶ್ ಜಾಗೃತಿ ಜಾಥಕ್ಕೆ ಚಾಲನೆ ನೀಡಿದರು

ಜಾಗೃತಿ ಜಾಥಕ್ಕೆ ಚಾಲನೆ ನೀಡಿದ ನಗರಸಭೆ ಅಧ್ಯಕ್ಷೆ ಶ್ರೀಮತಿ ಯಮುನಾ ಧರಣೇಶ್ ಮಾತನಾಡಿ ನಗರದ ಪ್ರತಿಯೊಬ್ಬ ನಾಗರೀಕರಿಗೆ ಸ್ವಚ್ಚತೆ ಹಾಗೂ ಸ್ವಚ್ಚ ಪರಿಸರದ ಅರಿವು ಇರಬೇಕಾಗುತ್ತದೆ, ನಮ್ಮ ಪರಿಸರ ಶುಚಿಯಾಗಿ ಇಟ್ಟುಕೊಂಡರೆ ರೋಗಗಳಿಂದ ದೂರವಿರಲು ಸಾಧ್ಯ,ನಗರದಲ್ಲಿ ಸ್ವಚ್ಚತೆ ಕಾಪಾಡಲು ನಗರಸಭೆ ಪ್ರತಿವರ್ಷ ಕೋಟ್ಯಾಂತರ ರೂಪಾಯಿ ವ್ಯಯಮಾಡುತ್ತಿದೆ, ಸ್ವಚ್ಚಭಾರತ್ ಯೋಜನೆ ಅಡಿ, ನಗರದಲ್ಲಿ ಸ್ವಚ್ಚತಾ ಕೆಲಸಗಾರರು ಹಾಗೂ ವಾಹನಗಳು ಒಡಾಡುತ್ತಿವೆ, ನಾಗರೀಕರು ಎಲ್ಲಂದರಲ್ಲಿ ತ್ಯಾಜ್ಯ ಎಸೆಯದೆ .ಕಸ ಸಂಗ್ರಹ ಮಾಡಿ, ನಮ್ಮ ವಾಹನಗಳಿಗೆ ನೀಡಿದರೆ ನಿಮ್ಮ ಸುತ್ತಮುತ್ತಲ ವಾತಾವರಣವೂ ಶುಚಿಯಾಗುತ್ತದೆ, ನಗರದ ನಾಗರೀಕರು ಜಾಗೃತರಾಗಿ ನಮ್ಮ ಸುತ್ತಮುತ್ತಲ ಜನರಿಗೆ ಅರಿವು ಮೂಡಿಸಿ. ಸ್ವಚ್ಚ ಪರಿಸರಕ್ಕಾಗಿ ನಗರಸಭೆಯೊಂದಿಗೆ ಕೈ ಜೋಡಿಸಿ ಎಂದು ತಿಳಿಸಿದರು

ಕಲ್ಪತರು ವಿದ್ಯಾ ಕಲ್ಪತರು ವಿದ್ಯಾಸಂಸ್ಥೆ ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜ್ ಮಾತನಾಡಿ ಸ್ವಚ್ಚ ಹಾಗೂ ಸುಂದರ ಪರಿಸರದಿಂದ ಮನುಷ್ಯ ಉತ್ತಮ ಆರೋಗ್ಯ ಕಾಪಾಡಿಕೊಳ್ಳ ಬಹುದು, ಉತ್ತಮ ಹಾಗೂ ಸ್ವಚ್ಚ ಪರಿಸರ ಕಾಪಾಡಲು ಸರ್ಕಾರ ಹಾಗೂ ಸರ್ಕಾರಿ ಅಧಿಕಾರಿಗಳು ಕೆಲಸ ಮಾಡಿದರೆ ಸಾಲದು, ವಯುಕ್ತಿಕ ಸ್ವಚ್ಚತೆ ಹಾಗೂ ನಮ್ಮ ಸುತ್ತ ಮುತ್ತಲ ಪರಿಸರ ಸ್ವಚ್ಚವಾಗಿರಲಿ ಅನುವ ಜಾಗೃತಿ ಸಾರ್ವಜನಿಕರಲ್ಲಿ ಮೂಡಬೇಕು.ಸ್ವಚ್ಚ ಪರಿಸರವಿದರೆ ಆರೋಗ್ಯವಂತ ವಾತವರಣವಿರುತ್ತದೆ, ದೇಶದಲ್ಲಿ ಸ್ವಚ್ಚ ಭಾರತ್ ಕಾರ್ಯಕ್ರಮ ಅತ್ಯುತ್ತಮ ಕಾರ್ಯಕ್ರಮವಾಗಿದ್ದು ನಗರದ ಪರಿಸರ ಸ್ವಚ್ಚವಾಗಿಡಲು ನಗರಸಭೆಯೊಂದಿಗೆ ನಾಗರೀಕರು ಕೈಜೋಡಿಸ ಬೇಕು, ಒಣಕಸ ಹಾಗೂ ಹಸಿ ಕಸ ಬೇರ್ಪಡಿಸಿದರೆ, ತ್ಯಾಜ್ಯ ವಿಲೇವಾರಿ ಘಟಕದಲ್ಲಿ ತ್ಯಾಜ್ಯ ಸಂಸ್ಕರಣೆ ಮಾಡಲು ಸಾಧ್ಯವಾಗುತ್ತದೆ, ಎಂದು ತಿಳಿಸಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

ಕಲ್ಪತರು ನಾಡು ತುಮಕೂರು ಜಿಲ್ಲೆ ತಿಪಟೂರು ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಫೆಬ್ರವರಿ 13ಮತ್ತು 14.15.16 ರಂದು ಸ್ಪಂದನಾ ಕ್ರೀಡಾ ಮತ್ತು ಸಂಸ್ಕೃತಿಕ ಸಂಘದಿಂದ ರಾಷ್ಟ್ರೀಯ ಅಹ್ವಾನಿತ ಪುರುಷ ಹಾಗೂ ಮಹಿಳೆಯರ ಹೊನಲು ಬೆಳಕಿನ ವಾಲಿಬಾಲ್ ಚಾಂಪಿಯನ್ ಷಿಪ್ ಟೂರ್ನಿಮೆಂಟ್ ಆಯೋಜನೆ ಮಾಡಲಾಗಿದೆ

ನಗರದ ಕಾಸ್ಮೋಪಾಲಿಟನ್ ಕ್ಲಬ್ ಆವರಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಸ್ಪಂದನಾ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಸದಸ್ಯ ನವೀನ್ ಕೆ.ಎಸ್ ಮಾತನಾಡಿ ತಿಪಟೂರು ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಫೆಬ್ರವರಿ 13ಮತ್ತು 14.15.16 ರಂದು ರಾಷ್ಟ್ರೀಯ ಅಹ್ವಾನಿತ ವಾಲಿಬಾಲ್ ಚಾಂಪಿಯನ್ ಷಿಪ್ ಟೂರ್ನಿಮೆಂಟ್ ಆಯೋಜನೆ ಮಾಡಲಾಗಿದ್ದು, ತಿಪಟೂರು ಇತಿಹಾಸದಲ್ಲಿ ವಿಶೇಷ ಕಾರ್ಯಕ್ರಮವಾಗಿ ರೂಪುಗೊಳ್ಳಲಿದೆ, ಟೂರ್ನಿಮೆಂಟ್ ಗೆ ಭಾರತೀಯ ಆರ್ಮಿ ವಾಲಿಬಾಲ್ ತಂಡ. ಭಾರತೀಯ ವಾಯುಸೇನೆ ವಾಲಿಬಾಲ್ ತಂಡ, ನೌಕಾದಳದ ವಾಲಿಬಾಲ್ ತಂಡ, ಬಿಪಿಸಿಎಲ್ ವಾಲಿಬಾಲ್ ತಂಡ, ಕೆರಳ ಪೊಲೀಸ್ ವಾಲಿಬಾಲ್ ತಂಡ, ಸೇರಿದಂತೆ ಅನೇಕ ಪ್ರತಿಷ್ಟಿತ ವಾಲಿಬಾಲ್ ಮಹಿಳಾ ಮತ್ತು ಪುರುಷರ ತಂಡಗಳು ಭಾಗವಹಿಸಲಿದ್ದು, ರಾಷ್ಟ್ರೀಯ ಮಟ್ಟದ ಕ್ರೀಡಾಪುಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಕ್ರೀಡಾಪ್ರೇಮಿಗಳಿಗೆ ಕ್ರೀಡಾರಸದೌತ ನೀಡಲಿದ್ದಾರೆ. ನಗರದ ನಾಗರೀಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಕೂಟ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು

ಮಾಜಿ ನಗರಸಭಾ ಸದಸ್ಯ ಎಂ. ನಿಜಗುಣ ಮಾತನಾಡಿ ತಿಪಟೂರಿನ ಹಲವಾರು ಸಂಘಸಂಸ್ಥೆಗಳ ಸಹಯೋಗದಲ್ಲಿ ಸ್ಪಂದನಾ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ರಾಷ್ಟ್ರೀಯ ಮಹಿಳಾ ಮತ್ತು ಪುರುಷರ ಹೊನಲು ಬೆಳಕಿನ ವಾಲಿಬಾಲ್ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ.ಕಾರ್ಯಕ್ರಮದ ಮೆರಗು ಹೆಚ್ಚಿಸುವ ದೃಷ್ಟಿಯಿಂದ ತಿಪಟೂರು ತಾಲ್ಲೋಕಿನ ಹಲವಾರು ಶಾಲಾ ಕಾಲೇಜು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಿದ್ದು,ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ,ಕ್ರೀಡಾ ಮತ್ತು ಸಾಂಸ್ಕೃತಿಕ ಇಲಾಖೆ ಆಯುಕ್ತ ಚೇತನ್ ತಿಪಟೂರು ಶಾಸಕ ಕೆ.ಷಡಕ್ಷರಿ. ಮಾಜಿ ಸಚಿವ ಬಿ.ಸಿ ನಾಗೇಶ್. ಮಾಜಿ ಶಾಸಕ ಬಿ.ನಂಜಾಮರಿ.ರಾಷ್ಟ್ರೀಯ ಖೋ ಖೋ ಸಂಸ್ಥೆ ಉಪಾಧ್ಯಕ್ಷ ಲೋಕೇಶ್ವರ್, ಸೇರಿದಂತೆ ಅನೇಕ ಮುಖಂಡರು ಕ್ರೀಡಾಪಟುಗಳು ,ರಾಜಕೀಯನಾಯಕರು,ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು

ಪತ್ರಿಕಾ ಘೋಷ್ಠಿಯಲ್ಲಿ ಸ್ಪಂದನಾ ಸಂಸ್ಥೆ ಸದಸ್ಯ ಕೆ.ಎಸ್ ನವೀನ್ ಕುಮಾರ್,ತೋಂಟಾರಾಧ್ಯಕಾಸ್ಮೋ ಪಾಲಿಟನ್ ಕ್ಲಬ್ ,ಕಾರ್ಯದರ್ಶಿಎಂ.ಬಿ ಸಿದ್ದರಾಮಯ್ಯ ,ಕಿರಣ್.ನಗರಸಭಾ ಸದಸ್ಯ ಸಂಗಮೇಶ್,ಮುಖಂಡರಾದ ರೇಣು ಮಾದೀಹಳ್ಳಿ,ವಿಜಯ್ ಕುಮಾರ್,ಚಂದ್ರಶೇಖರ್ ಮುಂತ್ತಾದವರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು ನಗರದ ಬಿ.ಹೆಚ್ ರಸ್ತೆ ಹಾಸನ ಸರ್ಕಲ್ (ಡಾ//ಶಿವಕುಮಾರ ಸ್ವಾಮೀಜಿ) ಸರ್ಕಲ್ ನಲ್ಲಿ ತ್ರಿವಿಧ ದಾಸೋಹಿ ಪದ್ಮಭೂಷಣ ,ಕರ್ನಾಟಕ ರತ್ನ ಡಾ//ಶಿವಕುಮಾರಸ್ವಾಮೀಜಿಯವರ 6ನೇ ವರ್ಷದ ಪುಣ್ಯಸ್ಮರಣೆ ಆಚರಿಸಲಾಯಿತು

ಕೆರಗೋಡಿ ರಂಗಾಪುರ ಭೂ ಸುಕ್ಷೇತ್ರಾಧ್ಯಕ್ಷರಾದ ಶ್ರೀಶ್ರೀಗುರುಪರದೇಶಿಕೇಂದ್ರ ಮಹಾಸ್ವಾಮೀಜಿಗಳು,ತಿಪಟೂರು ಗುರುಕುಲಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀಶ್ರೀ ಕರಿಬಸವದೇಶೀಕೇಂದ್ರ ಮಹಾಸ್ವಾಮೀಜಿಗಳು,ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಕರಿವೃಷಭದೇಶಿಕೇಂದ್ರ ಶಿವಯೋಗೇಶ್ವರ ಮಹಾಸ್ವಾಮೀಜಿಗಳು ಭೇಟಿ ನೀಡಿ ಡಾ// ಶ್ರೀಶ್ರೀ ಶಿವಕುಮಾರಸ್ವಾಮೀಜಿಯವರ ಭಾವಚಿತ್ರಕ್ಕೆ ಪೂಜೆಸಲ್ಲಿಸಿದರು

ತಿಪಟೂರು ಶಾಸಕ ಕೆ.ಷಡಕ್ಷರಿ,ಮುಖಂಡರಾದ ನಿಜಗುಣ,ರೇಣುಕಾರಾಧ್ಯ,ಬ್ಯಾಂಕ್ ಕುಮಾರಸ್ವಾಮಿ,ಮಾದಿಹಳ್ಳಿ,ಅಶೋಕ್ ಕುಮಾರ್,ದಿಬ್ಬದಹಳ್ಳಿ ಶ್ಯಾಮ್ ಸುಂದರ್,ಮಾದಿಹಳ್ಳಿ,ಗಂಗರಾಜು.ಮುಂತ್ತಾವರು ಉಪಸ್ಥಿತರಿದರು
ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.

ವರದಿ :ಮಂಜುನಾಥ್ ಹಾಲ್ಕುರಿಕೆ

ತುಮಕೂರು ಜಿಲ್ಲೆ ತಿಪಟೂರು ನಗರದ ಪ್ರತಿಷ್ಠಿತ ಸಹಕಾರ ಸಂಘಗಳಲ್ಲಿ ಒಂದಾದ ತಿಪಟೂರು ಟೌನ್ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ಸತತವಾಗಿ 2ನೇ ಬಾರಿ
ಬಿ ಕೆ ರಾಮಯ್ಯ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಎನ್ ವಾಣಿ ಆಯ್ಕೆ ಯಾಗಿದ್ದಾರೆ

ಚುನಾವಣೆ ವೇಳೆ ಸಂಘದ ನಿರ್ದೇಶಕರಾದ ಸಿ, ದಯಾನಂದ್, ಶಂಕರ್ ಮೂರ್ತಿ, ಶರಣಯ್ಯ, ಶಿವಸ್ವಾಮಿ,ಪ್ರಕಾಶ್, ಮಲ್ಲೇಶ್, ಸುಮಿತ್ರ, ಶಾರದಮ್ಮ,ಚಂದ್ರಣ್ಣ ಮುಂತ್ತಾದವರು ಉಪಸ್ಥಿತರಿದ್ದರು.
ಚುನಾವಣಾಧಿಕಾರಿಗಳಾಗಿ ವಸಂತ್ ಕಾರ್ಯನಿರ್ವಹಿಸಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು ನಗರದ ಅರಳೀಕಟ್ಟೆ ಬಳಿ ಜೆಮ್ಸ್ ಫೌಂಡೇಷನ್ ,ತರಕಾರಿ ಗಂಗಾಧರ್ ಸ್ನೇಹ ವೃಂದ ಹಾಗೂ ತರಕಾರಿ ಹಣ್ಣು,ಹೂವು ವ್ಯಾಪಾರಿಗಳಿಂದ ಪದ್ಮಭೂಷಣ,ಕರ್ನಾಟಕ ರತ್ನ ತ್ರಿವಿಧ ದಾಸೋಹಿಗಳಾದ ಲಿಂಗೈಕ್ಯ
ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಆರನೇ ವರ್ಷದ ಪುಣ್ಯ ಸ್ಮರಣೆಯನ್ನ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಡಾ. ಓಹಿಲಾ ತರಕಾರಿ ಗಂಗಾಧರ್, ಫೋಟೋ ಪ್ರಸನ್ನ ಕುಮಾರ್ ,ಮಾಜಿ ನಗರಸಭಾ ಸದಸ್ಯ ತರಕಾರಿ ಗಂಗಾಧರ್, ಕ್ಯಾಪ್ಟನ್ ಲೋಕೇಶ್ , ನಗರಾಧ್ಯಕ್ಷರು ಬಾ ಜ ಪಾ ಗುಲಾಬಿ ಸುರೇಶ್, ರಂಗಾಪುರ ಕ್ಷೇತ್ರದ ಅಧ್ಯಕ್ಷರಾದ ವಿಶ್ವನಾಥ್ ಹೊಸಳ್ಳಿ, ಹಾವೇನಹಳ್ಳಿ ಆನಂದ್ ನಿರ್ದೇಶಕರು ಪ್ರಾಥಮಿಕ ಸಹಕಾರ ಸಂಘ ಗೋರಗೊಂಡನಹಳ್ಳಿ, ಉಷಾ ಲೋಕೇಶ್ ಉಪಾಧ್ಯಕ್ಷರು ರೈತ ಸಹಕಾರ ಸಂಘ ಹೊನ್ನವಳ್ಳಿ, ಪ್ರತಿಭಾ ಜೈರಾಮ್, ರಮ್ಯಾ ಬದ್ರಿ, ಶ್ರೀಮತಿ ಛಾಯಾಮಣಿ ಸಿರಿಗಂಧ ಗುರು, ಉಮೇಶ್, ಪಚ್ಚೆ ಮುತ್ತು, ವರುಣ, ರವಿ,ಉಪಸ್ಥಿತರಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

ವಿದ್ಯರ‍್ಥಿಗಳಲ್ಲಿ ಶಿಸ್ತು, ಶ್ರದ್ಧೆ, ಆತ್ಮವಿಶ್ವಾಸ, ಪ್ರಾಮಾಣಿಕತೆ, ಕ್ರಿಯಾಶೀಲತೆಯ ಜೊತೆಗೆ ನೈತಿಕ ತಳಹದಿಯ ಮೇಲೆ ಮುಕ್ತ ವಾತಾವರಣ ಕಲ್ಪಿಸಿ ಕೊಡುವುದು, ಶಾಲಾ ವಿದ್ಯರ‍್ಥಿಗಳಲ್ಲಿ ದೇಶಾಭಿಮಾನ, ಸಮಯಪ್ರಜ್ಞೆ ಸ್ವಯಂ ಪ್ರೇರಿತ ಗುಣಗಳನ್ನು ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ಪ್ರತಿ ರ‍್ಷವೂ ವಿದ್ಯರ‍್ಥಿಗಳಿಗಾಗಿ ವಿವಿಧ ಶಾಲಾ ಹಂತದಿಂದ ರಾಷ್ಟ್ರಮಟ್ಟದ ವರೆಗಿನ ಹಂತಗಳಲ್ಲಿ ತರಬೇತಿಗಳನ್ನು ಆಯೋಜಿಸಲಾಗುತ್ತದೆ. ನಮ್ಮ ಶಾಲೆಯ ತಂಡಗಳು ವಿವಿಧ ಹಂತಗಳಲ್ಲಿ ತರಬೇತಿಗಳನ್ನು ಯಶಸ್ವಿಯಾಗಿ ಮುಗಿಸಿ ರಾಷ್ಟ್ರಮಟ್ಟದ ೭೫ನೇ ಡೈಮಂಡ್ ಜುಬಿಲಿ ಜಾಂಬೂರಿಗೆ ದಿನಾಂಕ ೨೭.೦೧.೨೦೨೫ ರಿಂದ ೦೩.೦೨.೨೫ ರವರೆಗೆ ನಡೆಯುವ ತಮಿಳುನಾಡಿನ ತಿರಿಚಿರಪಲ್ಲಿ ಜಿಲ್ಲೆ, ಸಿಪ್ ಕಾಟ್ ಇಂಡಸ್ಟ್ರಿಯಲ್ ಪರ‍್ಕ್, ಮನಪ್ಪ ರೈ ಇಲ್ಲಿಗೆ ತೆರಳುತ್ತಿರುವುದು ಶಾಲೆಗೆ, ತಾಲೂಕು, ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ. ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆಯು ವಿದ್ಯರ‍್ಥಿಗಳಿಗೆ ಶಿಸ್ತು, ಸಂಯಮ, ಸಮಯ ಪ್ರಜ್ಞೆ, ಸ್ವಯಂ ಪ್ರೇರಿತ ಸೇವಾ ಮನೋಭಾವನೆಯನ್ನು ರೂಪಿಸುವಲ್ಲಿ ಪ್ರಮುಖ ಸಂಸ್ಥೆಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ಶಾಲೆಯ ವಿದ್ಯರ‍್ಥಿ ಗಳಲ್ಲಿ ಈ ಎಲ್ಲಾ ವ್ಯಕ್ತಿತ್ವ ವಿಕಸನಗೊಳಿಸುವ ಮಾನವೀಯ ಮೌಲ್ಯಗಳನ್ನು,, ಸಹ ಬಾಳ್ವೆಯಿಂದ ಬದುಕುವ ಗುಣಗಳನ್ನು ರೂಢಿಸುವಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿವಿಧ ಹಂತದ ತರಬೇತಿ ಚಟುವಟಿಕೆಗಳಲ್ಲಿ ಆಸಕ್ತಿಯುಕ್ತವಾಗಿ ಭಾಗವಹಿಸಿ ಅದರ ಪ್ರಯೋಜನವನ್ನು ಪಡೆಯಲಿ ಎಂಬ ಸದುದ್ದೇಶದಿಂದ ಶಾಲೆಯಿಂದ ರಾಷ್ಟ್ರಮಟ್ಟದವರೆಗಿನ ಎಲ್ಲಾ ಚಟುವಟಿಕೆ ತರಬೇತಿಗಳಲ್ಲಿ ಭಾಗವಹಿಸುವ ಮುಕ್ತ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಿ.ಹನುಮರಂಗಯ್ಯನವರು ತಿಳಿಸಿದರು. ಮಕ್ಕಳು ನಾಲ್ಕು ಗೋಡೆಗಳ ನಡುವೆ ಕಲಿಯುವ ಓದು ಬರಹದ ಜೊತೆಗೆ ಪ್ರಕೃತಿಯ ಮಡಿಲಲ್ಲಿ ಸಹ ಬಾಳ್ವೆ, ಸಮಾನತೆ, ಸಮಯಪ್ರಜ್ಞೆ, ಪರಿಸರ ಪ್ರಜ್ಞೆ,ನಮ್ಮ ಸಂಸ್ಕೃತಿಯ ಅರಿವನ್ನು ಮೂಡಿಸುವ ಹಾಗೂ ವಿದ್ಯರ‍್ಥಿಗಳು ವ್ಯಕ್ತಿತ್ವ ವಿಕಸನದ ಜೊತೆಗೆ ಕಲಿಕೆಗೆ ಪೂರಕವಾದ ತರಬೇತಿ ನೀಡುವುದು ಅತ್ಯಮೂಲ್ಯವಾದದು, ಇಂತಹ ತರಬೇತಿ ಚಟುವಟಿಕೆಗಳಲ್ಲಿ ನಮ್ಮ ಶಾಲೆಯ ವಿದ್ಯರ‍್ಥಿಗಳು ಶಾಲಾ ಹಂತದಿಂದ ರಾಷ್ಟ್ರಮಟ್ಟದ ಜಾಂಬೂರಿಯವರೆಗೆ ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ನವೀನ್ ಬಿ. ಹೆಚ್ ತಿಳಿಸಿದರು. ರಾಷ್ಟ್ರಮಟ್ಟದ ಡೈಮಂಡ್ ಜುಬಿಲಿ ಜಾಂಬೂರಿಗೆ ಭಾಗವಹಿಸುತ್ತಿರುವ ಸ್ಕೌಟ್ಸ್ ವಿದ್ಯರ‍್ಥಿಗಳಾದ ಅಕ್ಷಯ್ ಎಂ ವೈ, ಅಮೃತ್ ಸಿ ಎಂ, ಗೌರವ್, ಗೌರವ್ ಭೂಷಣ್, ಹರಿಪ್ರೀತ್ ಯು, ಹಿತೇಶ್ ವಿ, ಲೋಹಿತ್ ಜಿ, ಮನ್ವಿತ್ ಡಿ ಎಂ, ಉಲ್ಲಾಸ್ ಆರ್ ಡಿ, ಸ್ಕೌಟ್ ಮಾಸ್ಟರ್ ಪ್ರವೀಣ್ ಎಚ್.ಎಸ್, ಮತ್ತು ಗೈಡ್ಸ್ ವಿದ್ಯರ‍್ಥಿಗಳಾದ ಲಿಖಿತ ಎನ್ ಎಸ್, ಸಿಂಚನ ಎಸ್ ಜೆ ಭೂಷಣ್, ಲಾಲಿತ್ಯ ಎ ಎಂ, ದೀಪ್ತಿ ಎಲ್, ಮಾನ್ಯ ಡಿ, ಪ್ರಣತಿ ಕೆ ಎಚ್, ಪ್ರಿಯಾಂಕ ಎಂ, ಪುಣ್ಯಶ್ರೀ ಜಿ ಎನ್, ಗೈಡ್ ಕ್ಯಾಪ್ಟನ್ ಸಂಧ್ಯಾ ಎಂ ಜಿ. ರವರಿಗೆ ಶಾಲೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ಪ್ರಾಂಶುಪಾಲರಾದ ಶ್ರೀಮತಿ ಗೀತಾ ಆರ್.ಎಸ್, ಶಿಕ್ಷಕರು ಹಾಗೂ ಎಲ್ಲಾ ಸಿಬ್ಬಂದಿವರ್ಗದವರು ಶುಭ ಹಾರೈಸಿದ್ದಾರೆ.ನಮ್ಮ ದೇಹ ಅಥವಾ ಮನಸ್ಸಿಗೆ ದೊರಕುವ ಉತ್ತಮ ತರಬೇತಿ ನಿಜವಾದ ಯಶಸ್ಸಿನ ಕಡೆಗೆ ಏಕೈಕ ಮರ‍್ಗವಾಗುತ್ತದೆ. ಶಿಕ್ಷಣ ಜ್ಞಾನ ಎನಿಸಿದರೆ ತರಬೇತಿ ವಿಶೇಷ ಜ್ಞಾನವಾಗುತ್ತದೆ, ಈ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲಿ ಸ್ಕೌಟ್ಸ್, ಗೈಡ್ಸ್, ಕಬ್ಸ್, ಮತ್ತು ಬುಲ್ ಬುಲ್ ಘಟಕಗಳನ್ನು ಸ್ಥಾಪಿಸಲಾಗಿದೆ.

ವರದಿ: ಸಂತೋಷ್ ಓಬಳ. ಗುಬ್ಬಿ

ಕೇಂದ್ರಸರ್ಕಾರ ಉಂಡೆ ಕೊಬ್ಬರಿಗೆ ವೈಜ್ಞಾನಿಕ ಬೆಲೆ ನಿಗಧಿಗೊಳ್ಳಿಸಬೇಕು, ಹಾಗೂ ರೈತರ ಬೆಲೆಗಳಿಗೆ ಸ್ವಾಮಿನಾಥನ್ ವರದಿ ಆಧಾರದಲ್ಲಿ ಎಲ್ಲಾ ಬೆಳೆಗಳಿಗೂವೈಜ್ಞಾನಿಕ ಬೆಲೆ ನಿಗದಿಗೊಳಿಸಬೇಕು,ಎಂದು ಒತ್ತಾಯಿಸಿ ಹಾಗೂ ಎಂಎಸ್ಪಿ ಜಾರಿಗೊಳಿಸಲು ಒತ್ತಾಯಿಸಿ ಅಖಿಲ ಭಾರತೀಯ ರೈತ ಸಂಯುಕ್ತ ಹೋರಾಟ ನಾಯಕ ಜಗಜೀತ್ ಸಿಂಗ್ ದಾಲೈವಾಲ ಹಾಗೂ ರೈತರ ಮುಖಂಡರುಗಳು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಜನವರಿ 23 ರಂದು ತಿಪಟೂರು ನಗರದ ಆಡಳಿತ ಸೌಧದ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತಪರ ಸಂಘಟನೆಗಳಿಂದ ಉಪವಾಸ ಸತ್ಯಾಗ್ರಹ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳಾಗಿದೆ.

ನಗರದ ಕೌಸ್ತುಭ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ಜಯಾನಂದಯ್ಯ
ರಾಜ್ಯ ಸರ್ಕಾರ ಉಂಡೆ ಕೊಬ್ಬರಿಯ ಉತ್ಪಾದನಾ ವೆಚ್ಚವನ್ನು ಕ್ವಿಂಟಾಲಿಗೆ 18,638 ರೂಪಾಯಿಗಳೆಂದು ಲೆಕ್ಕಹಾಕಿ
ಇದನ್ನು ಆದರಿಸಿ ಕನಿಷ್ಟ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದರೂ, ಅದ್ಯಾವುದನ್ನೂ
ಪರಿಗಣಿಸದೆ ಕೇಂದ್ರ ಸರ್ಕಾರ 2024-25 ನೇ ಸಾಲಿಗೆ ಉಂಡೆ ಕೊಬ್ಬರಿಯ ಬೆಂಬಲ ಬೆಲೆಯನ್ನು 1 ಕೆಜಿಗೆ ಕೇವಲ 1 ರೂ
ಹೆಚ್ಚಿಸಿ (ಕ್ವಿಂಟಾಅಗೆ 12,000 ರಿಂದ 12.100) ಇಡೀ ರೈತ ಸಮುದಾಯವನ್ನೇ ಅವಮಾನಿಸಿದೆ. ಚುನಾವಣಾ ಸಮಯದಲ್ಲಿ
ರೈತರನ್ನು, ದುಡಿಯುವವರನ್ನು ಬಾಯ್ತುಂಬ ಹೊಗಳುವ ಶಾಸಕರು, ಸಂಸದರು, ಸಚಿವರು ರೂ 1 ಹೆಚ್ಚಿಸಿರುವ ಬಗ್ಗೆ
ಯಾವುದೇ ಪ್ರತಿಕ್ರಿಯೆಯನ್ನು ನೀಡದಷ್ಟು ನಿಷ್ಕ್ರಿಯರಾಗಿದ್ದಾರೆ. ಹಾಗೂ ಬೆಂಬಲ ಬೆಲೆಯನ್ನು ನಿರ್ಧರಿಸುವಲ್ಲಿ ಸಮಾನ
ಜವಾಬ್ದಾರಿಯನ್ನು ಹೊತ್ತಿರುವ ಕೇಂದ್ರದ ವಿರೋಧ ಪಕ್ಷವು ಈ ವಿಚಾರದಲ್ಲಿ ಪ್ರತಿಕ್ರಿಯಿಸದೆ ಮೌನ ವಹಿಸಿರುವುದು
ವಿಷಾದನೀಯ. ಸ್ವಾಭಿಮಾನಿಗಳಾದ ನಾವೆಲ್ಲಾ ನಮ್ಮ ಬೆವರಿನ ದುಡಿಮೆಯಲ್ಲಿ ಪ್ರತಿಯೊಬ್ಬ ರೈತರೂ ರೂ 1 (ನಾಣ್ಯ) ರಂತೆ
ಕೇಂದ್ರ ಸರ್ಕಾರಕ್ಕೆ ಹಾಗೂ ವಿರೋಧ ಪಕ್ಷಕ್ಕೆ ಹಿಂದಿರುಗಿಸಿ ನಮ್ಮ ಸ್ವಾಭಿಮಾನವನ್ನು ಎತ್ತಿಹಿಡಿಯೋಣ,ರೈತರನ್ನು ಮುಗಿಸುವ ಹುನ್ನಾರದಿಂದ ಕೃಷಿಗೆ ಮಾರಕವಾದ 3 ಕರಾಳ
ಕಾನೂನುಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ದೇಶದ ಎಲ್ಲಾ ರೈತರು ಒಂದಾಗಿ ಸತತ 1 ವರ್ಷ ಹೋರಾಟ ಮಾಡಿ
ಆ ಕರಾಳ ಕಾನೂನುಗಳನ್ನು ಹಿಂಪಡೆಯುವಂತೆ ಮಾಡಿದ್ದರು. ಆಗ ಆದ ಒಪ್ಪಂದದಂತೆ ಕನಿಷ್ಠ ಬೆಂಬಲ ಬೆಲೆಯನ್ನು
ಶಾಸನಬದ್ಧಗೊಳಸಬೇಕಾಗಿತ್ತು. ಆದರೆ ಕೇಂದ್ರ ಸರ್ಕಾರ ಮಾತು ತಪ್ಪಿದಾಗ ಹಲವು ತಿಂಗಳುಗಳಿಂದ ಮತ್ತೆ ದೆಹಲಿಯ
ಗಡಿಗಳಲ್ಲಿ ರೈತರು ಚಳಿ ಹಾಗೂ ಬಿಸಿಲನ್ನು ಲೆಕ್ಕಿಸದೆ ಹೋರಾಡುತ್ತಿದ್ದಾರೆ. ನಮ್ಮ ಒಡನಾಡಿಗಳಿಗೆ ಬೆಂಬಲ ಸೂಚಿಸಲು
ನಿಮ್ಮೊಂದಿಗೆ ನಾವಿದ್ದೇವೆ ಎಂದು ತೋರಿಸಲು 1 ದಿನದ ಉಪವಾಸ ಸತ್ಯಾಗ್ರಹವನ್ನು 23.01.2025 ನೇ ಗುರುವಾರದಂದು
ತಿಪಟೂರಿನ ಆಡಳಿತ ಕಚೇರಿಯ ಎದುರು ಹಮ್ಮಿಕೊಳ್ಳಲಾಗಿದೆ. ಈ ಉಪವಾಸದ ಪ್ರತಿಭಟನೆಯಲ್ಲಿ ಸ್ವಾಭಿಮಾನಿಗಳಾದ
ನಾವೆಲ್ಲ ಭಾಗವಹಿಸಿ ನಮ್ಮ ಶಕ್ತಿಯನ್ನು ಸರ್ಕಾರಕ್ಕೆ ತೋರಿಸೋಣ. ರೈತರ ಬಗ್ಗೆ ಯಾವುದೇ ನಿರ್ಧಾರಗಳನ್ನು
ತೆಗೆದುಕೊಳ್ಳುವ ಮುಂಚೆ ಸೂಕ್ತವಾಗಿ ಆಲೋಚಿಸಬೇಕೆಂದು ಎಚ್ಚರಿಸುವ ಜವಾಬ್ದಾರಿ ಪ್ರತಿ ರೈತರದ್ದಾಗಿದೆ, ಎಂದು ತಿಳಿಸಿದರು
ರೈತಮುಖಂಡ ತಿಮ್ಲಾಪುರ ದೇವರಾಜು ಮಾತನಾಡಿ ಇತ್ತಿಚಿನ ದಿನಗಳಲ್ಲಿ ರೈತರ ಬೆಳೆಗಳ ಉತ್ಪಾದನ ವೆಚ್ಚ ಜಾಸ್ತಿಯಾಗುತ್ತಿದೆ, ಸರ್ಕಾರ ಬಹುಸಂಖ್ಯಾತ ರೈತರ ಹಿತಮರೆತು, ಕಾರ್ಪೋರೇ ಪರವಾಗಿ ಕೆಲಸ ಮಾಡುತ್ತಿದೆ, ಉಂಡೆ ಕೊಬ್ಬರಿ ಉತ್ಪಾದನಾ ವೆಚ್ಚ ಜಾಸ್ತಿಯಾಗಿದ್ದು ಕನಿಷ್ಠ ಬೆಂಬಲ ಬೆಲೆ ನೀಡದೆ ಕೇವಲ 1ರೂಪಾಯಿ ಹೆಚ್ಚಳ ಮಾಡಿ ರೈತರನ್ನ ಅಣಕಿಸುವ ಕೆಲಸ ಮಾಡಿರುವುದು ಖಂಡನೀಯ, ಕೇಂದ್ರ ಸರ್ಕಾರದ ಕೊಬ್ಬರಿ ಬೆಳಗಾರರ ವಿರೋಧಿ ಧೋರಣೆ ಖಂಡಿಸಿ ಹಾಗೂ ವಿರೋದ ಪಕ್ಷಗಳ ವೈಪಲ್ಯ ಖಂಡಿಸಿ ತಾಲ್ಲೋಕಿನ ಪ್ರತಿ ರೈತರು ಪ್ರತಿಭಟನಾರ್ಥವಾಗಿ ತಾವು ದುಡಿಮೆ ಮಾಡಿದ ಒಂದು ರೂಪಾಯಿ ದುಡ್ಡನ್ನು ಕೇಂದ್ರ ಸರ್ಕಾರ ಹಾಗೂ ಕೇಂದ್ರ ವಿರೋಧ ಪಕ್ಷಗಳಿಗೆ ಕಳಿಸುವ ಮೂಲಕ ನಮ್ಮ ನೈತಿಕ ಆಕ್ರೋಶ ವ್ಯಕ್ತಪಡಿಸಿ ನಮ್ಮಗೆ ಆಗುತ್ತಿರುವ ಅನ್ಯಾಯವನ್ನ ಸರ್ಕಾರಕ್ಕೆ ಮನವರಿಕೆ ಮಾಡಬೇಕಾಗಿದ್ದು ಎಲ್ಲಾ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು

ಬೆಳೆಕಾವಲು ಸಮಿತಿ ಮುಖಂಡ ಬಿಳಿಗೆರೆ ಪಾಳ್ಯ ನಾಗೇಶ್ ಮಾತನಾಡಿ ದೇಶದಲ್ಲಿ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಬೇಕು ಹಾಗೂ ಸ್ವಾಮಿನಾಥನ್ ವರದಿ ಜಾರಿಗೆ ಒತ್ತಾಯಿಸಿ ಅಖಿಲಭಾರತ ರೈತ ಸಂಯುಕ್ತ ಹೋರಾಟ ನಾಯಕ ಜಗಜೀತ್ ಸಿಂಗ್ ದಲೈವಾಲ ಹಾಗೈ ರೈತ ಮುಖಂಡರು ನಡೆಸುತ್ತಿರುವ ಹೋರಾಟಕ್ಕೆ ನಾವೆಲ್ಲ ಬೆಂಬಲಿಸುವ ದೃಷ್ಠಿಯಿಂದ ತಿಪಟೂರು ಆಡಳಿತ ಸೌಧದ ಮುಂಭಾಗ ಜನವರಿ 23 ರಂದು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹಾಗೂ ತಾಲ್ಲೋಕಿನ ರೈತಪರಸಂಘಟನೆಗಳು ಭಾಗವಹಿಸಬೇಕು ನಮ್ಮ ಹೋರಾಟಕ್ಕೆ,ಬೆಲೆ ಕಾವಲು ಸಮಿತಿ, ವಕೀಲರ ಸಂಘ, ರವಾನೆದಾರರ ಸಂಘ, ವರ್ತಕರ ಸಂಘ
ಬಗರ್ ಹುಕುಂ ಹೋರಾಟ ಸಮಿತಿ, ಭಾರತೀಯ ವೈದ್ಯಕೀಯ ಸಂಘ,
ಕಲ್ಪತರು ವಿದ್ಯಾ ಸಂಸ್ಥೆ ಆಡಳಿತ ಮಂಡಳಿ, ನಾಗರೀಕ ಜಾಗೃತಿ ಹಾಗೂ ಹಿತರಕ್ಷಣಾ ಸಮಿತಿ,
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ)
ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘ,
ಜೀವವಿಮಾ ಪ್ರತಿನಿಧಿಗಳ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಭಾಗವಹಿಸುತ್ತಿವೆ ಎಲ್ಲಾರೈತರು ಭಾಗವಹಿಸಿ ಹೋರಾಟ ಬೆಂಬಲಿಸಿದೆ ಎಂದು ತಿಳಿಸಿದರು

ಪತ್ರಿಕಾ ಘೋಷ್ಠಿಯಲ್ಲಿ ಸೌಹಾರ್ದ ತಿಪಟೂರು ಮುಖಂಡ,ಅಲ್ಲಾ ಭಕ್ಷು,ರೈತಮುಖಂಡ ಸಿದ್ದಪ್ಪ ಬಳುವನೇರಲು,ರೈತ ಮುಖಂಡ ಯೋಗನಂದಸ್ವಾಮಿ. ,ಜಯನಂದಯ್ಯ,ತಿಮ್ಲಪುರದೇವರಾಜು,ರಂಗಾಪುರ ಚನ್ನಬಸವಣ್ಣ,ನಾಗೇಶ್ ಬಿಳಿಗೆರೆಪಾಳ್ಯ, ತಡಸೂರು ನಾಗರಾಜು‌ ಬೆಳೂರನಹಳ್ಳಿ ಚನ್ನಬಸವಯ್ಯ,ರವೀಂದ್ರ ಕುಮಾರ್,ದೇವಾನಂದ್ ,ರಾಜಮ್ಮ ,ಸತೀಶ್ ಎಸ್.ಎಫ್ ಐ ,ಶ್ರೀಕಾಂತ್ ಬೆಳೆಕಾವಲು ಸಮಿತಿ. ಮುಂತ್ತಾದವರು ಉಪಸ್ಥಿತರಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

ತುಮಕೂರು ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು, ಜಿಲ್ಲಾಘಟಕ ತುಮಕೂರು ಸಹಯೋಗದಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ 39ನೇ ರಾಜ್ಯ ಸಮ್ಮೇಳನವನ್ನ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಸಮ್ಮೇಳನ ಉದ್ಘಾಟಿಸಿದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮಾತನಾಡಿ ಪತ್ರಿಕೆ ವೃತ್ತಿಯಾಗಿದ್ದಾಗ ಪತ್ರಿಕೆ ಸಮಾಜದ ಹಿತ,ದೇಶದ ಹಿತವಾಗಿತ್ತು, ಸಮಾಜದ ಮೌಲ್ಯಗಳಿಗೆ ಆದ್ಯತೆ ನೀಡುತ್ತಿತ್ತು, ಆದರೇ ಯಾವಾಗ ಪತ್ರಿಕೆ ಉದ್ಯಮವಾಗಿದೆ ಆಗಿನಿಂದ ಜವಾಬ್ದಾರಿ ಸ್ವಲ್ಪ ಕಡಿಮೆಯಾಗುತ್ತಿದೆ, ಪತ್ರಿಕೆಗಳು ವೃತ್ತಿ ಪವಿತ್ರತೆ ಕಳೆದುಕೊಳ್ಳಬಾರದು. ಸಂವಿಧಾನದ ಮೌಲ್ಯ ಎತ್ತಿಹಿಡಿಯುವುದು, ಸಮಾಜದ ಅಸಮಾನತೆ ವಿರುದ್ದ ಧ್ವನಿ ಎತ್ತುವುದು ಕೆಲಸ ವಾಗಬೇಕು,ಪತ್ರಿಕೆಗಳು ವಸ್ತು ಸ್ಥಿತಿಯನ್ನ ಸಮಾಜದ ಮುಂದೆಇಡುವ ಕೆಲಸ ವಾಗಬೇಕು,ಸಮಾಜದಲ್ಲಿ ನಡೆಯುವ ಘಟನೆಗಳನ್ನ ವಸ್ತು ನಿಷ್ಠವಾಗಿ ಬರೆಯಬೇಕು,

ಊಹಾ ಪತ್ರಿಕೋದ್ಯಮ ಸಮಾಜಕ್ಕೆ ಅಪಾಯಕಾರಿ,ಟೀಕೆ ಟಿಪ್ಪಣಿಗಳು ಸಮಾಜಕ್ಕೆ ಪೂರಕವಾಗಿರಬೇಕು ,ಸಮಾಜಕ್ಕೆ ಮಾರಾಕವಾಗಿರ ಬಾರದು, ಸುದ್ದಿ ಮಾಡುವ ಮುಂಚೆ ನಾಲ್ಕರು ಭಾರೀ ಯೋಚಿಸಿ ಬರೆಯಬೇಕು,ಸುದ್ದಿ ಸಮಾಜತಿದ್ದುವಂತಿರಬೇಕು.
ಸಮಾಜದಲ್ಲಿ ಕೆಳಜಾತಿ ಮೇಲ್ಜಾತಿ ಅನೋದು ವಾಸ್ತವ, ಚತುರ್ವರ್ಣ ವ್ಯವಸ್ಥೆಯಲ್ಲಿ ಎಲ್ಲರಿಗೂ ಅರ್ಥಿಕವಾಗಿ ಸಮಾಜಿಕವಾಗಿ ಶಕ್ತಿ ಬಂದಾಗ ಮಾತ್ರ ಬದಲಾವಣೆ ಸಾಧ್ಯ,

ರಾಜಕಾರಣಿಗಳು,ಸಮಾಜ ಸುಧಾರಕರು, ಅರ್ಥಮಾಡಿಕೊಳ್ಳ ಬೇಕು ಯಾರು ದುರ್ಬಲ ವರ್ಗದ ಶೋಷಿತರು, ಯಾರಿಗೆ ಧ್ವನಿಇಲ್ಲ, ಅಂತವರ ಧ್ವನಿಯಾಗಿ ಕೆಲಸ ಮಾಡಬೇಕು ಈ ನಿಟ್ಟಿನಲ್ಲಿ ಪತ್ರಕರ್ತರ ಮೇಲೆ ವಿಶ್ವಾಸ ಜಾಸ್ತಿ, ಜನ ಇಟ್ಟಿರುವ ವಿಶ್ವಾಸಾರ್ಹತೆಗೆ ದಕ್ಕೆಯಾಗದಂತೆ ಕೆಲಸ ಮಾಡಬೇಕು.
ಎಲ್ಲಾ ಜನರು ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸಬೆರಕು,
ಮಾಧ್ಯಮಗಳು ಮೂಢನಂಬಿಕೆ ವಿಚಾರದಲ್ಲಿ ದೂರವಿರಬೇಕು.

ವಸ್ತು ಸ್ಥಿತಿಯ ಅರಿವಿರ ಬೇಕು ಅಧ್ಯಯನ ಶೀಲರಾಗಬೇಕು, ಅಧ್ಯಯನ ಶೀಲತೆ ಪತ್ರಿಕೋಧ್ಯಮದಲ್ಲಿ ಅಧ್ಯಯನ ಶೀಲತೆ ಕಡಿಮೆಯಾಗುತ್ತಿದೆ. ನನ್ನ ಮೇಲೆ ಹಾಗೂ ನಮ್ಮ ಸರ್ಕಾರದ ಮೇಲೆ ಬರೆಯಲಿ .ಬರೆಯದೆ ಬಿಡಲಿ,ನಾನು ಪತ್ರಿಕಾ ಸ್ವತಂತ್ರವನ್ನ ಗೌರವಿಸುತ್ತೇನೆ.
ಎಲ್ಲರೂ ಸಮಾಜದಲ್ಲಿ ಜವಾಬ್ದಾರಿಯನ್ನ ಸೂಕ್ತವಾಗಿ ನಿರ್ವಹಿಸಿ, ಸಂವಿಧಾನ ಪ್ರತಿಯೊಬ್ಬರು ತಿಳಿದುಕೊಳ್ಳಿ,ಎಂದ ಅವರು

ಗ್ರಾಮೀಣ ಪತ್ರಕರ್ತರ ಬಸ್ ಪಾಸ್, ಶೀಘ್ರವಾಗಿ ಕೆಲವೇ ದಿನಗಳಲ್ಲಿ ವಿತರಣೆ ಮಾಡುತ್ತೇವೆ ಹಾಗೂ ಪತ್ರಕರ್ತರ ಆರೋಗ್ಯ ವಿಮೆ ವಿತರಣೆಗೆ ಕ್ರಮಕೈಗೊಳ್ಳಲಾಗುವುದು.
ಚರ್ಚೆಗಳು ಸಮಾಜ ಮುಖಿಯಾಗಿ ಇರಲಿ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಗೃಹಸಚಿವ ಡಾ// ಜಿ ಪರಮೇಶ್ವರ್ ರಾಜ್ಯಾಧ್ಯಕ್ಷ ಶಿವಾನಂದಾತಗಡೂರು,ಸಹಕಾರಿ ಸಚಿವ ಕೆ.ಎನ್ ರಾಜಣ್ಣ,ಶಾಸಕರಾದ ಕೆ.ಷಡಕ್ಷರಿ.ಬಿಜಿ ಜ್ಯೋತಿಗಣೇಶ್,ಗುಬ್ಬಿ ಶಾಸಕ ಎಸ್ ಆರ್ ಶೀನಿವಾಸ್. ಟಿ.ಬಿ ಜಯಚಂದ್ರ, ಜಿಲ್ಲಾಧ್ಯಕ್ಷ ಚಿ.ನಿ ಪುರುಷೋತ್ತಮ್. ಆರ್ ರಾಜೇಂದ್ರ,ಸೊಗಡು ಶಿವಣ್ಣ, ಪ್ರಜಾಪ್ರಗತಿ ನಾಗಣ್ಣ,ಸೇರಿದಂತೆ ಅನೇಕರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು ನಗರದ ಡಾ//ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ನಗರಪೊಲೀಸ್ ಠಾಣೆ ತಿಪಟೂರು ಹಾಗೂ ಎನ್ ಹೆಚ್ ಎಐ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಲಾಯಿತು.ನಗರಸಭಾ ವೃತ್ತದಲ್ಲಿ ಶಾಲಾಮಕ್ಕಳು ಹಾಗೂ ಪೊಲೀಸ್ ಸಿಬ್ಬಂದಿ ಮಾನವಸರಪಣಿ ನಿರ್ಮಿಸಿ ಜಾಥ ನಡೆಸುವ ಮೂಲಕ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮನುಷ್ಯನ ಜೀವ ಅಮೂಲ್ಯವಾದದು,ವಾಹನ ಚಾಲಕರು ತಮ್ಮ ನಿರ್ಲಕ್ಷ್ಯದಿಂದ ಜೀವ ಕಳೆದುಕೊಳ್ಳದೆ. ಸರ್ಕಾರ ರೂಪಿಸಿರುವ ರಸ್ತೆ ಸುರಕ್ಷ ನಿಯಮ ಪಾಲಿಸಿದರೆ, ನೀವು, ಹಾಗೂ ನಿಮ್ಮನ್ನ ನಂಬಿರುವ ಕುಟುಂಬ ಸಂತೋಷದಿಂದ ಜೀವನ ನಡೆಸಬಹುದು.
ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಅಪಘಾತಗಳು ಹೇಳಿಕೇಳಿ ಆಗುವುದಿಲ್ಲ, ದ್ವಿಚಕ್ರ ವಾಹನ ಅಪಘಾತದಲ್ಲಿ ವಾಹನ ಸವಾರರ ತಲೆಗೆ ಪೆಟ್ಟು ಬಿದ್ದು ಸಾವು ಸಂಭವಿಸುವ ಸಾಧ್ಯತೆಗಳು ಜಾಸ್ತಿ, ದೇಶದಲ್ಲಿ ದ್ವಿಚಕ್ರ ಅಪಘಾತದಲ್ಲಿ ಸಾವನ್ನಪ್ಪಿತವರಲ್ಲಿ ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿರುವವರ ಸಂಖ್ಯೆಯೇ ಜಾಸ್ತಿ.ಪ್ರತಿಯೊಬ್ಬರು ವಾಹನಗಳ ಇನ್ಸುರೆನ್ಸ್ ಮಾಡಿಸಿಕೊಳ್ಳಿ, ಇನ್ಸುರೆನ್ಸ್ ಇದ್ದರೆ.ಸಂಕಷ್ಟ ಕಾಲದಲ್ಲಿ ಆರ್ಥಿಕವಾಗಿ,ನೆರವಾಗುತ್ತದೆ, ಅಲ್ಲದೆ, ಆರೋಗ್ಯ ರಕ್ಷಣೆ, ಅಪಘಾತದಲ್ಲಿ ತೊಂದರೆಗೊಳಗಾದ ಎಲ್ಲರಿಗೂ ರಕ್ಷಣೆ ಸಿಗುತ್ತದೆ, ಮಧ್ಯಪಾನ ವಾಹನ ಚಾಲನೆ ಮಾಡಬಾರದು, ಮಧ್ಯಪಾನದ ನಶೆಯಿಂದ, ವಾಹನ ಚಾಲಕ ಹಾಗೂ ಎದುರಿಗೆ ಇರುವ ಅಮಾಯಕರು ಜೀವಕಳೆದುಕೊಳ್ಳುತ್ತಾರೆ,ವಾಹನ ಸಾರ್ಮರ್ಧ್ಯಕಿಂತ ತೂಕ ಹಾಕಬಾರದು,ಸರಕು ಸೇವೆ ವಾಹನದಲ್ಲಿ ಪ್ರಯಾಣಿಕರನ್ನ ಸಾಗಿಸುವುದು ಅಪರಾಧವಾಗುತ್ತದೆ. ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನಗಳನ್ನ ಚಾಲಯಿಸಲು ಕೊಡಬೇಡಿ,ಮಕ್ಕಳು ಮಾಡುವ ಅಪರಾಧಕ್ಕೆ ಪೋಷಕರು ಹೊಣೆಯಾಗಬೇಕಾಗುತ್ತದೆ,ಸರ್ಕಾರ ಕಾನೂನುಗಳನ್ನ ಮಾಡುವುದು ಸಾರ್ವಜನಿಕರ ಉಪಯೋಗಕ್ಕೆ ಹೊರತು ಯಾರಿಗೂ ತೊಂದರೆ ಕೊಡುವುದಕ್ಕಲ್ಲ, ಕಾನೂನನ್ನ ಗೌರವಿಸಿ, ನಿಯಮಗಳನ್ನ ಪಾಲಿಸಿ ಎಂದು ತಿಳಿಸಿದರು


ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಮೂಡಿಸಲು, ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುತ್ತಿದ್ದವರಿಗೆ ಹಾಗೂ ಸೀಟ್ ಬೆಲ್ಟ್ ಹಾಕಿ ವಾಹನ ಚಲಾಯಿಸುತ್ತಿದ್ದ ಚಾಲಕರಿಗೆ ಗುಲಾಖೆ ಹೂ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಠಾಣೆ ಸಬ್ ಇನ್ಪೆಕ್ಟರ್ ಕೃಷ್ಣಪ್ಪ.ಎನ್ ಹೆಚ್ ಎಐ ಅಧಿಕಾರಿಗಳಾದ ವಿಶಾಲ್. ರಾಮಲಿಂಗಮ್ ಸೇರಿದಂತೆ ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು: ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ವಾರ್ಷಿಕ ಸಮಾರಂಭವಾದ ತರಳಬಾಳು ಹುಣ್ಣಿಮೆ ಮಹೋತ್ಸವು ಫೆ.೪ರಿಂದ ೧೨ರವರೆಗೆ ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿ ಜರುಗಲಿದ್ದು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ವಿಶಿಷ್ಟ ಸಾಂಪ್ರದಾಯಿಕ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಶ್ರೀಮಠವು ಅನೇಕ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿದ್ದು ಆಸಕ್ತರು ಭಾಗವಹಿಸಬಹುದು ಎಂದು ಶ್ರೀಮಠವು ಪತ್ರಿಕಾ ಪ್ರಕಟಣೆಯನ್ನು ತಿಳಿಸಿದೆ.ಫೆ.೫ರ ಬುಧವಾರ ವಚನನೃತ್ಯ ಮತ್ತು ಜನಪದ ನೃತ್ಯ ಸ್ಪರ್ಧೆಗಳು, ಗುರುವಾರ ಕೃಷಿ ಮತ್ತು ಜಲ ಸಂರಕ್ಷಣೆ ಭಾಷಣ ಸ್ಪರ್ಧೆ, ಶುಕ್ರವಾರ ಭಜನಾ ಮೇಳ, ಶನಿವಾರ ವಿಜ್ಞಾನ ಮೇಳ ಮತ್ತು ವಿಜ್ಞಾನಿಗಳೊಂದಿಗೆ ಸಂವಾದ, ಭಾನುವಾರ ಪ್ರತಿಭಾನ್ವೇಷಣೆ, ಸೋಮವಾರ ಕೋಲಾಟ ಮತ್ತು ಸೋಬಾನೆ ಸ್ಪರ್ಧೆ, ಮಂಗಳವಾರ ಕೃಷಿ ಮೇಳ ಮತ್ತು ರೈತರ ಸಂವಾದ, ಬುಧವಾರ ಕರ್ನಾಟಕ ವಿವಿಧ ಜಾನಪದ ಕಲಾತಂಡÀಗಳಿAದ ಕಲಾಪ್ರದರ್ಶನ ಜರುಗಲಿದೆ. ಫೆ.೫ರ ಬೆಳಗ್ಗೆ ೧೦ ಗಂಟೆಗೆ ಜರುಗುವ ವಚನನೃತ್ಯ ಮತ್ತು ಜನಪದ ನೃತ್ಯ ಸ್ಪರ್ಧೆಗಳಲ್ಲಿ ಜಗಳೂರು, ಹರಪನಹಳ್ಳಿ, ದಾವಣಗೆರೆ ಹಾಗೂ ಚಿತ್ರದುರ್ಗ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಲು ಅವಕಾಶ ನೀಡಿದ್ದು, ವಿಜೇತರಾದ ತಂಡಗಳಿಗೆ ಪ್ರಥಮ ೧೦,೦೦೦, ದ್ವಿತೀಯ ೭,೦೦೦, ತೃತೀಯ ೫,೦೦೦ಗಳನ್ನ ನಗದು ಬಹುಮಾನ ಜೊತೆಗೆ ಆಕರ್ಷಕ ಪ್ರಶಸ್ತಿ ಫಲಕಗಳನ್ನು ನೀಡಲಾಗುವುದು. ವಚನನೃತ್ಯದಲ್ಲಿ ೧೨ನೇ ಶತಮಾನದ ಶಿವಶರಣರ ವಚನಗಳಿಗೆ ಮಾತ್ರ ನೃತ್ಯ ಮಾಡಲು ಅವಕಾಶ ಕಲ್ಪಿಸಿದ್ದು, ಜನಪದ ನೃತ್ಯಗಳಲ್ಲಿ ರಿಮಿಕ್ಸ್ ಹಾಡಿಗೆ ಅವಕಾಶ ಇರುವುದಿಲ್ಲ. ಆಸಕ್ತರು ಜ.೩೧ರ ಒಳಗೆ ೯೯೧೬೮೧೯೫೩೮, ೯೯೧೬೮೧೯೫೩೬ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.ಫೆ.೬ರ ಬೆಳಗ್ಗೆ ೯.೩೦ಕ್ಕೆ ಕೃಷಿ ಮತ್ತು ಜಲ ಸಂರಕ್ಷಣೆ ವಿಷಯಕ್ಕೆ ಸಂಬAಧಿಸಿದAತೆ ಭಾಷಣ ಸ್ಪರ್ಧೆ ಏರ್ಪಡಿಸಿದ್ದು, ತರಳಬಾಳು ವಿದ್ಯಾಸಂಸ್ಥೆಯ ಸಿರಿಗೆರೆ, ಚಿತ್ರದುರ್ಗ, ಹೊಳಲ್ಕೆರೆ, ದಾವಣಗೆರೆ, ಹರಪ್ಪನಹಳ್ಳಿ ಹಾಗೂ ಭರಮಸಾಗರ ಹೋಬಳಿ ಎಲ್ಲಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಿದ್ದು, ಪ್ರಥಮ ೩೦೦೦, ದ್ವಿತೀಯ ೨೦೦೦, ತೃತೀಯ ೧೦೦೦ ನಗದು ಬಹುಮಾನಗಳನ್ನ ನೀಡಲಾಗುವುದು. ಆಸಕ್ತರು ಜ.೩೧ರ ಒಳಗೆ ೯೮೪೫೩೪೪೭೮೮, ೯೪೮೧೧೧೮೯೧೪ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.ಫೆ.೭ರ ಬೆಳಗ್ಗೆ ೯:೩೦ಕ್ಕೆ ಭಜನಾ ಮೇಳ ಏರ್ಪಡಿಸಿದ್ದು, ಜಗಳೂರು, ಹರಪನಹಳ್ಳಿ, ದಾವಣಗೆರೆ ಹಾಗೂ ಚಿತ್ರದುರ್ಗ ತಾಲೂಕಿನ ಆಸಕ್ತರೂ ಭಾಗವಹಿಸಬಹುದಾಗಿದೆ. ಪ್ರಥಮ ೮೦೦೦, ದ್ವಿತೀಯ, ೬,೦೦೦, ತೃತೀಯ ೪೦೦೦ ರೂಗಳ ಬಹುಮಾನದ ಜೊತೆಗೆ ಪ್ರಯಾಣ ಭತ್ಯೆ ನೀಡಲಾಗುವುದು. ಆಸಕ್ತರು ಜ.೩೧ರ ಒಳಗೆ ೯೯೭೨೫೩೧೫೦೪, ೯೭೪೧೬೬೪೮೧೨ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.ಫೆ.೧೦ರ ಬೆಳಗ್ಗೆ ೯:೩೦ಕ್ಕೆ ಕೋಲಾಟ ಸ್ಪರ್ಧೆ ಏರ್ಪಡಿಸಿದ್ದು, ಜಾನಪದ ಸೊಗಡಿನ ಕಲೆಯ ಜೊತೆಗೆ ಪ್ರತಿ ತಂಡದಲ್ಲಿ ೮ ರಿಂದ ೧೦ ಕಲಾವಿದರಿಗೆ ಮಾತ್ರ ಅವಕಾಶ ಇರಲಿದೆ. ಸ್ಪರ್ಧೆಯಲ್ಲಿ ವಿಜೇತರಾÀದ ತಂಡದವರಿಗೆ ಪ್ರಥಮ ೮೦೦೦, ದ್ವಿತೀಯ ೬,೦೦೦, ತೃತೀಯ ೪೦೦೦ ರಂತೆ ಬಹುಮಾನದ ಜೊತೆಗೆ ಪ್ರಯಾಣ ಭತ್ಯೆ ನೀಡಲಾಗುವುದು. ಆಸಕ್ತರು ಜ.೩೧ರ ಒಳಗೆ ೯೪೪೮೪೧೫೨೮೭, ೯೯೪೫೨೭೨೭೩೮ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.ಫೆ.೧೧ರ ಬೆಳಗ್ಗೆ ೯.೩೦ಕ್ಕೆ ಕೃಷಿ ಮೇಳ ಮತ್ತು ರೈತರ ಸಂವಾದ ಕಾರ್ಯಕ್ರಮ ಇರಲಿದ್ದು, ರಾಜ್ಯದ ಸಮಸ್ತ ರೈತ ಬಂಧುಗಳು ಕಾರ್ಯಕ್ರಮಕ್ಕೆ ಆಗಮಿಸಿ ಆಧುನಿಕ ರೀತಿಯ ಕೃಷಿಗೆ ಸಂಬAಧಿಸಿದAತಹ ಯಂತ್ರೋಪಕರಣಗಳನ್ನು ಅದರ ಉಪಯೋಗ ಬಗ್ಗೆ ವಿಶೇಷ ಕೃಷಿ ತಜ್ಞರಿಂದ ಮಾಹಿತಿ ಪಡೆಯಬಹುದಾಗಿದೆ.ಬಾಕ್ಸ್ – ಪ್ರತಿಭಾನ್ವಿತರಿಗೆ ಸುವರ್ಣ ಆಹ್ವಾನ. ತರಳಬಾಳು ಹುಣ್ಣಿಮೆಯಲ್ಲಿ ಫೆ. ೯ರ ಭಾನುವಾರ ಬೆಳಿಗ್ಗೆ ೧೦ ಗಂಟೆಯ ಪ್ರತಿಭಾನ್ವೇಷಣಾ ಸ್ಪರ್ಧೆಗಳು ಸಂಗೀತ, ನೃತ್ಯ, ಅಭಿನಯ ಎಂಬ ಮೂರು ವಿಭಾಗಗಳಲ್ಲಿ ನಡೆಯಲಿವೆ. ಪ್ರತಿ ಭಾಗದಲ್ಲಿ ಕಿರಿಯರ ಹಂತ, ವಯಸ್ಕರಹಂತ, ಹಿರಿಯರ ಹಂತ ಎಂದು ನಿಗದಿಪಡಿಸಿದ್ದು, ಒಬ್ಬ ಸ್ಪರ್ಧಿಯು ಒಂದು ವಿಭಾಗದಲ್ಲಿ ಮಾತ್ರ ಸ್ಪರ್ಧಿಸಲು ಅವಕಾಶ ಕಲ್ಪಿಸಿ ಪ್ರತಿಸ್ಪರ್ಧಿಗೆ ೫ ನಿಮಿಷಗಳ ಸಮಯ ನಿಗದಿ ಮಾಡಲಾಗಿದೆ. ವಿಜೇತರಿಗೆ ಪ್ರಥಮ ೩೦೦೦, ದ್ವಿತೀಯ ೨೦೦೦, ತೃತೀಯ ೧೦೦೦ ರೂಗಳ ನಗದು ಬಹುಮಾನಗಳ ಜೊತೆಗೆ ಆಕರ್ಷಕ ಪ್ರಶಸ್ತಿ ಫಲಕವನ್ನ ನೀಡಲಾಗುವುದು. ಜೊತೆಗೆ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಅಭಿನಂದನಾ ಪತ್ರವನ್ನು ನೀಡಲಾಗುತ್ತದೆ. ಸಂಗೀತ ಸ್ಪರ್ಧೆಯಲ್ಲಿ ರೆಕಾರ್ಡೆಡ್ ಮ್ಯೂಸಿಕ್ ಅಥವಾ ಕರೋಕೆಗೆ ಅವಕಾಶ ಇರುವುದಿಲ್ಲ. ಇತರ ಎಲ್ಲಾ ವಾದ್ಯಗಳನ್ನು ಸ್ಪರ್ಧೆಯೇ ನುಡಿಸಿ ಗಾಯನವನ್ನ ಹಾಡಬಹುದು. ೧೨ನೇ ಶತಮಾನದ ವಚನಗಳು ಜನಪದ ಗೀತೆಗಳು, ಭಾವಗೀತೆಗಳು, ದೇಶಭಕ್ತಿ ಗೀತೆಗಳು, ತತ್ವಪದಗಳು, ಕೀರ್ತನೆಗಳನ್ನು ಹಾಡಬಹುದು. ನೃತ್ಯ ಸ್ಪರ್ಧೆಯಲ್ಲಿ ರೆಕಾರ್ಡೆಡ್ ಮ್ಯೂಸಿಕ್‌ಅನ್ನು ಮಾತ್ರ ಬಳಸಬೇಕು. ಅಭಿನಯ ಸ್ಪರ್ಧೆಯಲ್ಲಿ ಐತಿಹಾಸಿಕ, ಸಾಮಾಜಿಕ, ಪೌರಾಣಿಕ, ಧಾರ್ಮಿಕ, ವಿಚಾರಗಳಿಗೆ ಸಂಬAಧಿಸಿದ ವಿಷಯಗಳಿಗೆ ಅಭಿನಯಿಸಲು ಮಾತ್ರ ಅವಕಾಶ ನೀಡಲಾಗಿದ್ದು, ಆಸಕ್ತರು ಜ.೩೧ರ ಒಳಗೆ ೯೬೬೩೯೫೬೨೭೫, ೯೮೮೦೦೨೪೩೭೩, ೮೮೬೧೨೭೪೯೭೩, ೮೭೪೭೯೫೩೫೬೬ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.

ವರದಿ: ಸಂತೋಷ್ ಓಬಳ . ಗುಬ್ಬಿ

error: Content is protected !!