ತಿಪಟೂರು ನಗರದ ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಯಲ್ಲಿ ರಾತ್ರಿ ಸುಮಾರು 8ಗಂಟೆ ಸಮಯದಲ್ಲಿ ಹೂವಿನ ತೊಡಗಿದ, ತಿಪಟೂರು ನಗರದ ಕೋಟೆ ವಾಸಿ ಸಂತೋಷ್ ಉರುಫ್ ಸಂತು ಎನುವವನಿಗೆ ಚಾಕುವಿನಿಂದ ಇರಿಯಾಲಾಗಿದ್ದು, ಗಾಯಾಳು ಸಂತೋಷ್ ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾನೆ ತಿಪಟೂರು ನಗರದ ಹಳೇಪಾಳ್ಯದ ತನ್ನ ಮಾವನ ಮನೆಯಲ್ಲಿ ವಾಸವಾಗಿದ್ದ ಆನಂದ ಹೂವು ತರಕಾರಿ ಮಾರುಕಟ್ಟೆಯಲ್ಲಿ ಹೂವಿನ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದ ಎನ್ನಲಾಗಿದ್ದು ಸಂಜೆ ಬಾರ್ ನಲ್ಲಿ ಸಂತು ಮತ್ತು ಆನಂದ ಜೊತೆಯಾಗಿ ಎಣ್ಣೆ ಕುಡಿದಿದ್ದಾರೆ,ಎಣ್ಣೆ ಜಾಸ್ತಿಯಾಗಿ ಇಬ್ಬರ ನಡುವೆ ಜಗಳವಾಗಿದ್ದು, ಬಾರ್ ನಲ್ಲಿ ಜಗಳವಾಡಿಕೊಂಡ ಇಬ್ಬರನ್ನು ಬಾರ್ ನಿಂದ ಆಚೆಕಳಿಸಲಾಗಿದ್ದು,ಬಾರ್ ನಿಂದ ಬಂದ ಸಂತೋಷ್ ಹೂವು ಮತ್ತು ಹಣ್ಣು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದಾಗ ಅಂಗಡಿ ಬಳಿ ಬಂದ ಆನಂದ್ ಜಗಳ ತೆಗೆದು, ಸಂತೋಷ್ ಗೆ ಚಾಕುವಿನಿಂದ ಚುಚ್ಚಿದ್ದಾನೆ,ತಕ್ಷಣ ಸ್ಥಳೀಯರು ಸಂತೋಷ್ ನನ್ನು ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಸ್ಥಳಕ್ಕೆ ತಿಪಟೂರು ನಗರಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ತನಿಖೆ ಕೈಗೊಳ್ಳಲಾಗಿದೆ.
ತಿಪಟೂರು: ಕಾಂಗ್ರೇಸ್ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಜನವಿರೋಧಿ ಆಡಳಿತ ಭ್ರಷ್ಟಚಾರ ,ಸ್ವಜನ ಪಕ್ಷಪಾತ ಹಾಗೂ ಕೋಮುಮನಸ್ಥಿತಿಯಿಂದ ದೇಶ ಹಾಗೂ ರಾಜ್ಯದಲ್ಲಿ ಜನ ಬೇಸತ್ತಿದ್ದಾರೆ,ದೇಶಕ್ಕೆ ತೃತೀಯ ಶಕ್ತಿಯ ಅವಶ್ಯವಿದ್ದು, ಪರ್ಯಾಯ ರಾಜಕೀಯ ಪಕ್ಷ ಸ್ಥಾಪನೆಗೆ ,ಬಹುಜನ ಚಳುವಳಿ ,ದಲಿತಚಳುವಳಿರೈತ ಚಳುವಳಿ ಹಾಗೂ ಸಮಾನಮನಸ್ಕ ರಾಜಕೀಯ ಮುಖಂಡರು ಪರ್ಯಾಯ ಪಕ್ಷ ಸಂಘಟನೆಗೆ ಮುಂದಾಗಿದ್ದು ಸದ್ಯದಲ್ಲಿಯೇ ಹೊಸ ಪಕ್ಷ ಉದಯವಾಗಲಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಹಾಗೂ ರಿಪಬ್ಲಕ್ ಪಾರ್ಟಿ ಅಫ್ ಇಂಡಿಯಾ(ಬಿ)ಅಧ್ಯಕ್ಷ ಡಾ//ಎನ್ ಮೂರ್ತಿ ತಿಳಿಸಿದರು.
ತುಮಕೂರು ಜಿಲ್ಲೆ ತಿಪಟೂರು ನಗರದ ಕಲ್ಪತರುಗ್ರಾಂಡ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾ ಸಾಹೇಬ್ ಎನ್.ಮೂರ್ತಿ ಸ್ಥಾಪಿತ ) ಹಾಗೂ ರಿಪಬ್ಲಿಕನ್ ಪಾರ್ಟಿ ಅಫ್ ಇಂಡಿಯಾ ವತಿಯಿಂದ ಆಯೋಜಿಸಿದ ಬಹುಜನರ ಸಮಸ್ಯೆಗಳ ನಿಷ್ಕರ್ಷೆ ಹಾಗೂ ಪುನಶ್ಚೇತನ ಹಾಗೂ ಜಿಲ್ಲಾಕಾರ್ಯಕಾರಿಣಿ ಸಭೆ ನಡೆಸಿ ನಂತರ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಡಾ//ಎನ್ .ಮೂರ್ತಿ ದೇಶದಲ್ಲಿ ನೈತಿಕ ರಾಜಕಾರಣ ನಾಶವಾಗಿದೆ, ಭ್ರಷ್ಟ ಹಾಗೂ ಕೋಮುವಾದಿ ರಾಜಕಾರಣ ಮೇಳೈದುತ್ತಿದ್ದು, ದೇಶದ ಜನ ಭ್ರಮನಿರಸಗೊಂಡಿದ್ದಾರೆ, ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಚಾರ,ಕೋಮುವಾದಿ,ಮನಸ್ಥಿತಿ ಹಾಗೂ ಜಾತಿರಾಜಕಾರಣಕಂಡು ಮುಂದಿನ ದಿನಗಳಲ್ಲಿ ದೇಶಕ್ಕೆ ಉತ್ತಮ ಭವಿಷ್ಯ ಸಿಗಬೇಕೆಂದರೆ, ಪರ್ಯಾರ ರಾಜಕೀಯ ಚಿಂತನೆ ಅಗತ್ಯವಿದೆ.ಬಹುಜನ ಚಳುವಳಿ ಮುಖಂಡರು, ದಲಿತಪರ ಚಳುವಳಿ ಮುಖಂಡರು, ರೈತ ಚಳುವಳಿ ಮುಖಂಡರು,ಹಾಗೂ ಕನ್ನಡಪರ ಸಂಘಟನೆಗಳು ಹಾಗೂ ಪ್ರಗತಿಪರ ಚಿಂತನೆಯುಳ್ಳ ರಾಜಕೀಯ ಮುಖಂಡರು ಸೇರಿ ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ಮುಂದಾಗಿದ್ದೇವೆ, ರಾಜ್ಯದ ಎಲ್ಲಾ ವಿಧಾನಸಭಾಕ್ಷೇತ್ರಗಳಲ್ಲೂ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇವೆ,ಮುಂದಿನ 2028ರ ವಿಧಾನ ಸಭೆ ಚುನಾವಣೆ ಒಳಗೆ ಸರ್ವಜನರ ಹಿತಬಯಸುವ ಹೊಸ ಪಕ್ಷ ಸ್ಥಾಪನೆಯಾಗಲಿದೆ.ಈಗಾಗಲೇ ಹೊಸ ಪಕ್ಷದ ಪ್ರನಾಳಿಕೆಗಳು ಸಿದ್ದಗೊಂಡಿದ್ದು, ಸರ್ವಜನರ ಹಿತಬಯಸುವ ಹೊಸ ಪಕ್ಷ ಸ್ಥಾಪನೆಯಾಗುತ್ತದೆ, ಎಂದ ಅವರು
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ,ಜನರಲ್ಲಿ ಭಿತ್ತಿದ ಬರವಣೆಗಳು ಹುಸಿಯಾಗಿವೆ, ಕೇಂದ್ರ ಸರ್ಕಾರ ಭ್ರಷ್ಟಚಾರ ಕೋಮುವಾದಲ್ಲಿ ಮುಳುಗಿದೆ,ಚುನಾವಣಾ ಬಾಂಡ್ ಗಳ ಮೂಲಕ ನೂರಾರು ಕೋಟಿ ಹಣವನ್ನ ಭ್ರಷ್ಟಚಾರದ ಮೂಲಕ ಸಂಗ್ರಹಿಸಿದ್ದು, ಮೋದಿ ಸರ್ಕಾರದ ಪಾಪದ ಫಲವನ್ನ, ಸಾಮಾನ್ಯ,ಅನುಭವಿಸುವಂತ್ತಾಗಿದೆ,ಚುನಾವಣಾ ಬಂಡ್ ಮೂಲಕ ಹಣಪಡೆದ ಕೇಂದ್ರ ಸರ್ಕಾರ ಕಳಪೆ ಔಷಧಿ ಕಂಪನಿಗಳಿಗೆ ತಮ್ಮ ಬಳಿ ಇರುವ ಕಳಪೆ ಔಷದಿ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟ, ಪರಿಣಾಮ ಬಳ್ಳಾರಿ ಬಾಣಂತಿಯರ ಹಾಗೂ ಸೇರಿದಂತೆ ಅನೇಕ ಔಷಧಿಗಳು ಆಸ್ಪತ್ರೆಗಳ ಮೂಲಕ ಜನರ ಜೀವ ಹಿಂಡುತ್ತಿದೆ, ಅದೇ ರೀತಿ ಪಿಎಂ ಕೇರ್ ಫಂಡ್ ಸೇರಿದಂತೆ ಹಲವಾರು ಭ್ರಷ್ಟಚಾರಮಾಡುತ್ತಿದ್ದಾರೆ,ದೇಶದಲ್ಲಿ ಇಟ್ಟಿರುವ ಕಪ್ಪುಹಣ ವಾಪಾಸ್ ತರುವುದಾಗಿ ಹೇಳಿದ ಸರ್ಕಾರ, ನಯಾಫೈಸೆ ಕಪ್ಪುಹಣ ತಂದಿಲ್ಲ,ನಮ್ಮ ದೇಶದ ರಾಜಕಾರಣಿಗಳು,ಉದ್ಯಮಿಗಳ ಕಪ್ಪುಗಳ ಹೊರತಂದರೆ.ನಮ್ಮ ದೇಶ ಅಮೇರಿಕಾದ ನಾಲ್ಕುಪಟ್ಟು ಶ್ರೀಮಂತ ದೇಶವಾಗುತ್ತದೆ.ಬಿಜೆಪಿ ಕೋಮುವಾದಿ ಭ್ರಷ್ಟಚಾರ ಕಂಡು ಸಮಾಜವಾದಿ ಹಿನ್ನೆಲೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ,ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು, ಎಲ್ಲಾ ಸಮಾನಮನಸ್ಕರು ಹೋರಾಟ ಮಾಡಿದೆವು, ಆದರೆ ರಾಜ್ಯದಲ್ಲಿಯೋ ಸಹ ನೈತಿಕ ರಾಜಕಾರಣ ನಾಶವಾಗಿದ್ದು,ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ಗೋವಿಂದ ಮಾಡಿದ್ದಾರೆ,ಗ್ಯಾರಂಟಿ ಹೆಸರಿನಲ್ಲಿ ದಲಿತ ಹಿಂದುಳಿದವರ ಅಭಿವೃದ್ದಿಗೆ ಮೀಸಲಿಟ್ಟಿದ ಸಾವಿರಾರು ಕೋಟಿ ಹಣ ಬೇರೆ ಬೇರೆ ಅಭಿವೃದ್ದಿಗಳಿಗೆ ಬಳಸಿಕೊಂಡು,ದಲಿತರು ಹಿಂದುಳಿದವರನ್ನ ಬೀದಿಗೆ ತಳಿದ್ದಾರೆ.ಎಸ್ಸಿಪಿ,ಟಿಎಸ್ಪಿ ಹಣ ರಾಜ್ಯಸರ್ಕಾರ ಗುಳಂ ಮಾಡಿದೆ,ರಾಜ್ಯದಲ್ಲಿ ಬಿಜೆಪಿ ಕೋಮುವಾದಿ, ಕಾಂಗ್ರೇಸ್ ಮೃದುಕೋಮುವಾದಿ ,ಜೆಡಿಎಸ್ ಜಾತಿವಾದಿ ಇವುಗಳಿಗೆ ಪರ್ಯಾಯ ರಾಜಕೀಯಪಕ್ಷ ಅನಿವಾರ್ಯವಾಗಿದ್ದು ಹೊಸ ಪಕ್ಷ ಸ್ಥಾಪನೆ ಮಾಡುತ್ತೇವೆ ಎಂದ ಅವರು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಆದೇಶದಂತೆ ಒಳಮೀಸಲಾತಿ ಜಾರಿಗೊಳಿಸುವ ನಾಟಕವಾದಿ ನ್ಯಾಯಮೂರ್ತಿ ನಾಗಮೋಹನ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ,2 ತಿಂಗಳಲ್ಲಿ ವರದಿಪಡೆದು ಒಳಮೀಸಲಾತಿ ಜಾರಿಮಾಡುವುದ್ದಾಗಿ ಹೇಳಿತ್ತು, ಆದರೆ,ಈಗ ಜಾತಿಗಣತಿ ದತ್ತಾಂಶ ಲಭ್ಯವಿಲ್ಲ ಎನ್ನುವ ಸಭೂಬುಹೇಳುತ್ತಿದೆ, ಸರ್ಕಾರ ಕೂಡಲೇ ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗದ ವರದಿ ಪಡೆದು, ಆಯೋಗದ ವರದಿಯಲ್ಲಿರುವ ದತ್ತಾಂಶವನ್ನ ನಾಗಮೋಹನ್ ದಾಸ್ ಆಯೋಗಕ್ಕೆ ನೀಡಿ, ನಾಗಮೋಹನ್ ದಾಸ್ ಆಯೋಗ ಪರಿಶೀಲನೆ ಮಾಡಿದ ನಂತರ ಶೀಘ್ರವಾಗಿ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು ಪತ್ರಿಕಾಘೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಪಿ.ಎನ್ ರಾಮಯ್ಯ,ಜಿಲ್ಲಾ ಸಂಘಟನಾ ಸಂಚಾಲಕ ನಾಗ್ತಿಹಳ್ಳಿ ಕೃಷ್ಣಮೂರ್ತಿ,ಲಾಯರ್ ವೆಂಕಟೇಶ್,ಡಿಎಸ್ಎಸ್ ತಾಲ್ಲೋಕು ಅಧ್ಯಕ್ಷ ರಾಜು ಬೆಣ್ಣೆನಹಳ್ಳಿ, ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಕೊಪ್ಪ ಶಾಂತಪ್ಪ, ಡಿಎಸ್ಎಸ್ ಮುಖಂಡರಾದ ಕುಪ್ಪಾಳು ರಂಗಸ್ವಾಮಿ.ಚಿಗ್ಗಾವಿ ಪುಟ್ಟಸ್ವಾಮಿ,ಅಟ್ಟಯ್ಯ,ಮುಂತ್ತಾದವರು ಉಪಸ್ಥಿತರಿದರು.
ತುಮಕೂರು ಜಿಲ್ಲೆ ತುರುವೇಕೆರೆ ನಗರದಲ್ಲಿ ಆದಿಜಾಂಬವ ಮಹಾಸಭಾ ,ನೂತನ ಶಾಖೆಯನ್ನ ಉದ್ಘಾಟಿಸಲಾಯಿತು.ನಂತರ ಪ್ರಾಥಮಿಕ ಸಹಕಾರ ಸಂಘ ಮುನಿಯೂರು, ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾದ ರಂಗಸ್ವಾಮಿ ಮುನಿಯೂರು ಹಾಗೂ ಪ್ರಾಥಮಿಕ ಸಹಕಾರ ಸಂಘ ಮಾವಿನಹಳ್ಳಿ ಕ್ಷೇತ್ರದಿಂದ ಸದಸ್ಯರಾಗಿ ಆಯ್ಕೆಯಾದ ವಿಜಯ್ ಕುಮಾರ್ ರವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಆದಿ ಜಾಂಬವ ಮಹಾಸಭಾ ಅಧ್ಯಕ್ಷರಾದ ವಿ ಟಿ ವೆಂಕಟರಾಮಯ್ಯ ಉಪಾಧ್ಯಕ್ಷರಾದ ನಿವೃತ್ತ ಸಬ್ ಇನ್ಸ್ಪೆಕ್ಟರ್ ನಾಗರಾಜ, ಗೌರವಾಧ್ಯಕ್ಷರಾದ ರಾಮಕೃಷ್ಣಯ್ಯ ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಲಿ ಸದಸ್ಯ ಚಿದಾನಂದ್ ,ಬೋರಪ್ಪ ನಿವೃತ್ತ ಶಿಕ್ಷಕರು, ಡಾಕ್ಟರ್ ಚಂದ್ರು ಉಪನ್ಯಾಸಕರು ತೊರಮಾವಿನಹಳ್ಳಿ, ದ ಸಂ ಸ ಸಂಚಾಲಕರಾದ ಕುಮಾರ್ ಎಮ್, ಗುರುದತ್ತ, ಖಜಾಂಚಿ ಶಿವನಂಜಪ್ಪ ಮೇಲನಹಳ್ಳಿ ಮಂಜಣ್ಣ , ದ ಸಂ ಸ ರಾಮಚಂದ್ರ ಹೆಗ್ಗೆರೆ , ದ ಸಂಸ ಲಕ್ಷ್ಮಿಶ ದಂಡನ ಶಿವರ, ಪುಟ್ಟ ಯಲ್ಲಯ್ಯ, ರಂಗಸ್ವಾಮಿ, ಹರೀಶ್ ಮೇಲನಹಳ್ಳಿ, ತಮ್ಮಯ್ಯ ಬಿ ಪುರ, ಮುತ್ತುಗದಹಳ್ಳಿ ಶಿವಣ್ಣ, ಶಿವಣ್ಣ ನಿವೃತ್ತ ಉಪನ್ಯಾಸಕರು ಕೊಲ್ ಘಟ್ಟ, ರವಿಕುಮಾರ್ ತೋರಮಾವಿನಹಳ್ಳಿ, ಮತ್ತಿತರು ಉಪಸ್ಥಿತಿಯಲ್ಲಿದ್ದರು,
ಸೊಗಡು ಜನಪದ ಹೆಜ್ಜೆ ಸಂಘ ಹಾಗೂ ಶಾಲಾ ಶಿಕ್ಷಣ ಇಲಾಖೆ ತಿಪಟೂರಿನ ಸಹಯೋಗದಲ್ಲಿ ಪ್ರೌಢಶಾಲಾ ಮಕ್ಕಳ ನಡೆಸುವ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕಲ್ಪತರು ಕ್ರೀಡಾಂಗಣದಲ್ಲಿ ನಡೆದ76 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ರತ್ನ ಪ್ರಶಸ್ತಿ ವಿತರಿಸಲಾಯಿತು.
ಶ್ರೀ ವಿವೇಕಾನಂದ ಇಂಟರ್ ನ್ಯಾಷನಲ್ ಸ್ಕೂಲ್ ನ ಭುವನ್.ಎಸ್, ಪೂರ್ವಿ.ಎಂ ಮತ್ತು ನಳಂದ ಶಾಲೆಯ ವಿದ್ಯಾರ್ಥಿನಿ ಯುಗಶ್ರೀ, ಇವರಿಗೆ ಬೆಳ್ಳಿ ಪದಕಗಳು ಹಾಗೂ ಪ್ರಮಾಣಪತ್ರಗಳೊಂದಿಗೆ ” ಕಲ್ಪತರು ವಿದ್ಯಾರ್ಥಿ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ತಿಪಟೂರು ಶಾಸಕ ಕೆ.ಷಡಕ್ಷರಿ ಹಾಗೂ ತಿಪಟೂರು ಉಪವಿಭಾಗಾಧಿಕಾರಿ ಶ್ರೀ ಮತಿ ಸಪ್ತಶ್ರೀ ಕಲ್ಪತರು ವಿದ್ಯಾರ್ಥಿ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು ನಗರಸಭೆ ಅಧ್ಯಕ್ಷರಾದ ಶ್ರೀಮತಿ ಯಮುನಾಧರಣೇಶ್.ಉಪಾಧ್ಯಕ್ಷರಾದ ಶ್ರೀಮತಿ ಮೇಘನಾ ಭೂಷಣ್,ತಹಸೀಲ್ದಾರ್ ಪವನ್ ಕುಮಾರ್,ಇಒ ಸುದರ್ಶನ್, ಡಿವೈಎಸ್ಪಿ ವಿನಾಯಕ ಶಟ್ಟಿಗೇರಿ ಸಂಘದ ಅಧ್ಯಕ್ಷರಾದ ಸಿರಿಗಂಧ ಗುರು, ಉಪಾಧ್ಯಕ್ಷರಾದ ಮಾರನಗೆರೆ ನಿಜಗುಣ , ನಗರಸಭಾ ಸದಸ್ಯರಾದ ಡಾ. ಓಹಿಲಾ ತರಕಾರಿ ಗಂಗಾಧರ್, ಜೆಮ್ಸ್ ಫೌಂಡೇಶನ್ ಕಾರ್ಯದರ್ಶಿ, ಹಾಗೂ ಜನ ಜಾಗೃತಿ ವೇದಿಕೆ ಸದಸ್ಯ ತರಕಾರಿ ಗಂಗಾಧರ್, ಸೆಂಟ್ರಲ್ ಸ್ಕೂಲ್ ನ ದೈಹಿಕ ಶಿಕ್ಷಕರಾದ ಅಪ್ಪೆ ಗೌಡ್ರು ಮುಂತ್ತಾದವರು ಉಪಸ್ಥಿತರಿದರು
ತುಮಕೂರು ಜಿಲ್ಲೆ ತಿಪಟೂರು ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಸಂಭ್ರಮ ಸಡಗರದಿಂದ 76ನೇ ಗಣರಾಜ್ಯೋತ್ಸವವನ್ನ ಆಚರಿಸಲಾಯಿತು.ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಪೊಲೀಸ್,ಗೃಹರಕ್ಷಕದಳ,ಎನ್ ಸಿ.ಸಿ ಸ್ಕೌಡ್ಸ್ ,ಗೈಡ್ಸ್ .ಸೇರಿದಂತೆ ಸುಮಾರು 40 ಕ್ಕೂ ಹೆಚ್ಚು ವಿವಿಧ ತುಕ್ಕಡಿಗಳಿಂದ ಗೌರವವಂದನೆ ಸ್ವೀಕರಿಸಿದರು
ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ ರವರು ಮಾತನಾಡಿ ನಮ್ಮ ದೇಶಕ್ಕೆ ಸ್ವಾಂತತ್ರ್ಯ ತಂದು ಕೊಟ್ಟವರು ಮಹಾತ್ಮಗಾಂಧಿ ಜೀ ಹಾಗೂಸ್ವಾತಂತ್ರ್ಯ ಹೋರಾಟಗಾರರು, ಪ್ರಜಾಪ್ರಭುತ್ವ ಮಾದರಿಯಆಡಳಿತಾತ್ಮಕವಾದ ನೀತಿ ನಿಯಮಗಳನ್ನು ರೂಪಿಸಿ ಒಂದು ಶ್ರೇಷ್ಟವಾದ ಗ್ರಂಥದ ರೂಪದಲ್ಲಿಸಂವಿಧಾನವನ್ನುರಚಿಸಿಕೊಟ್ಟವರು,ಡಾ//.ಬಿ.ಆರ್.ಅಂಬೇಡ್ಕರ್ ರವರು.ರಚಿಸಿದ ಮಹಾನ್ ಸಂವಿಧಾನವು 1949 ನವೆಂಬರ್ 26 ರಂದುಅಂಗೀಕಾರವಾಯಿತು. ಎಲ್ಲರೂ ಒಪ್ಪಿ 1950ನೇ ಜನವರಿ 26 ರಂದು ಜಾರಿಗೆತರಲಾಯಿತು. ಈ ದಿನದ ಗೌರವಾರ್ಥವಾಗಿ ಪ್ರತಿ ವರ್ಷ ಜನವರಿ 26 ರಂದು ಭಾರತದಲ್ಲಿ ಗಣರಾಜ್ಯೋತ್ಸವ ದಿನವಾಗಿಆಚರಣೆಮಾಡಲಾಗುತ್ತಿದೆ.ಸಂವಿಧಾನವೆಂದರೆ ಭಾರತದ ಎಲ್ಲಾನಾಗರೀಕರುಅನುಸರಿಸ ಬೇಕಾದ ಮೂಲಭೂತ ನಿಯಮ ಮತ್ತು ಹಕ್ಕುಗಳ ರಚನೆಗೆ ರಚಿಸಲಾಗಿರುವ ಕಾಯ್ದೆ. ಭಾರತವು ಸಾರ್ವಭೌನ ಪ್ರಜಾಸತ್ಮಕ ರಾಷ್ಟ್ರವಾಗಿದೆ,ದೇಶದ ನಾಗರೀಕರಿಗೆ ಸುವ್ಯವಸ್ಥಿತ ಕಾನೂನಿನ ರಕ್ಷಣೆ,ಜವಾಬ್ದಾರಿ ಹೊತ್ತಿದ್ದು,,ಸರ್ವರಿಗೂ ಸಮಪಾಲು,ಸರ್ವರಿಗೂ ಸಮಬಾಳುಎನ್ನುವುದು,ನಮ್ಮ ಸಂವಿಧಾನದ ಆಶಯವಾಗಿದ್ದು,.ಸರ್ವರ ಹಿತಕಾಪಾಡುವ ಮಹದಾಸೆಯೊಂದಿಗೆ ರಚಿತವಾದ ನಮ್ಮ ಸಂವಿಧಾನ ನಮ್ಮ ಹೆಮ್ಮೆಯೂ ಹೌದು
ನಮ್ಮ ದೇಶದಲ್ಲಿ ಕಾನೂನುಎಲ್ಲರಿಗೂ ಸಮಾನವಾಗಿದೆ.ಇಂದು ನಮ್ಮ ದೇಶ ಶಿಕ್ಷಣ, ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಆಧ್ಯಾತ್ಮಯೋಗ, ಸಂಸ್ಕೃತಿ, ಆರೋಗ್ಯ, ಧರ್ಮ, ರಕ್ಷಣೆ, ರಾಜಕೀಯ ಕ್ಷೇತ್ರಗಳಲ್ಲಿ ಅತ್ಯದ್ಭುತ ಸಾಧನೆ ಮಾಡಿದೆ, ಜಗತ್ತೇ ನಮ್ಮ ದೇಶದ ಕಡೆಗೆ ನೋಡುತ್ತಿದೆ. ಭಾರತವುಪ್ರಜಾಪ್ರಭುತ್ವರಾಷ್ಟ್ರವಾಗಿದ್ದು, ಪ್ರಜೆ ಸಾರ್ವಭೌಮರಾಗಿದ್ದು, ಪ್ರಜಾಪ್ರಭುತ್ವದಲ್ಲಿಉತ್ತಮ ನಾಯಕನನ್ನು ಆಯ್ಕೆಮಾಡುವ ಜವಾಬ್ದಾರಿಯು ನಮ್ಮಗಳ ಮೇಲೆ ಇರುತ್ತದೆ. 18 ವರ್ಷ ತುಂಬಿದ ಅರ್ಹ ಪ್ರತಿಯೊಬ್ಬ ಭಾರತೀಯನು ಸಹಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡು, ನಮ್ಮ ಸಂವಿಧಾನ ನಮಗೆ ನೀಡಿರುವ ಮತದಾನದ ಹಕ್ಕನ್ನು ನಿರ್ಲಕ್ಷಿಸದೇ, ಎಲ್ಲರೂ ತಪ್ಪದೇ ಮತದಾನವನ್ನು ಮಾಡುವ ಮೂಲಕ ಉತ್ತಮ ನಾಯಕರನ್ನು ಆಯ್ಕೆ ಮಾಡಬೇಕು. ಜನವರಿ 25 ರಂದು ಮತದಾರರ ದಿನವನ್ನು ಆಚರಣೆ ಮಾಡುವ ಮೂಲಕ ಮತದಾನದ ಹೊಸದಾಗಿ ನೋಂದಣಿಯಾಗಿರುವ ಯುವ ಮತದಾರರಿಗೆ ಗುರುತಿನ ಚೀಟಿಯನ್ನು ನೀಡಿ, ಅವರಿಗೆ ಮತದಾನದ ಬಗ್ಗೆ ಅರಿವನ್ನು ನೀಡಲಾಗಿರುತ್ತದೆ. ಆದುದರಿಂದ ನಾಗರಿಕ ಬಂಧುಗಳೆ ನಾವೆಲ್ಲ ದೇಶಕ್ಕಾಗಿ ದುಡಿದು ಹುತಾತ್ಮರಾಗಿರುವವರಿಗೆ ಗೌರವ, ದುಡಿಯುತ್ತಿರುವವರಿಗೆ ಬೆಂಬಲ, ಸಹಕಾರ,ದುಡಿಯುವ ಮನಸ್ಸಿರುವವರಿಗೆ ಪ್ರೋತ್ಸಾಹ ನೀಡುತ್ತಾ ನಮ್ಮಲ್ಲಿನ ಎಲ್ಲಗೊಂದಲ,ತಾರತಮ್ಯ, ಭೇದಭಾವಗಳನ್ನು ಬದಿಗಿಟ್ಟು ಸರ್ಕಾರದ ಜೊತೆಗೆ ಕೈಜೋಡಿಸಿ ನಮ್ಮಮಾಡಬೇಕೆಂದು ತಿಳಿಸಿ ಕವಿ ದೇಶವನ್ನು ಸುಭದ್ರವನ್ನಾಗಿಸಲು ಸಂಕಲ್ಪಸಾ.ಶಿ.ಮರುಳಯ್ಯ ರವರ ವೇಷ ಬೇರೆ ಭಾಷೆ ಬೇರೆ ದೇಶ ಒಂದೇ ಭಾರತ, ಒಂದೇ ತಾಯ ಮಕ್ಕಳೆಂದು ಘೋಷಿಸೋಣ ಸಂತತ ಎಂಬ ವಾಣಿ ಯಂತೆ ಸಹಭಾಳ್ವೆಯಿಂದಸಾಗೋಣಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಕೆ.ಷಡಕ್ಷರಿ ಮಾತನಾಡಿ 1951 ಜನೆವರಿ 26 ರಂದು ಭಾರತ ಅಧಿಕೃತವಾಗಿ ಪ್ರಜಾಪ್ರಭುತ್ವ ಗಣರಾಜ್ಯವಾಯಿತು. ಅಂದಿನಿಂದ ಇಲ್ಲಿಯವರೆಗೆ ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯೋತ್ಸವವನ್ನು ಆಚರಿಸುತ್ತಾ ಬಂದಿದ್ದು, ಈಸಂಭ್ರಮದ ರಾಷ್ಟ್ರೀಯ ಉತ್ಸವಕ್ಕೆಇಲ್ಲಿಗೆ 75 ವರ್ಷ ಕಳೆದು 76 ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. 1930 ರಲ್ಲಿಭಾರತೀಯ,ರಾಷ್ಟ್ರೀಯ ಕಾಂಗ್ರೆಸ್ ಸಂಪೂರ್ಣ ಸ್ವರಾಜ್ ಘೋಷಣೆಯ ನೆನಪಿಗಾಗಿ ಜನವರಿ26 ಅನ್ನು ಆಯ್ಕೆ ಮಾಡಲಾಗಿದೆ. ಈ ಐತಿಹಾಸಿಕಹಿನ್ನೆಲೆಯು ಭಾರತದ ಸ್ವಾತಂತ್ರ ಹೋರಾಟದಲ್ಲಿ ಈದಿನಾಂಕವನ್ನುಪ್ರಮುಖವಾಗಿಸುತ್ತದೆ.ಜನವರಿ 1950, ಭಾರತದ ಸಂವಿಧಾನವು ಅಂತಿಮವಾಗಿ ಆಚರಣೆಗೆ ಬಂದ ವರ್ಷ. ಈ ದೇಶವನ್ನು ಬ್ರಿಟಿಷ್ಆಳ್ವಿಕೆಯ ಸ್ಥಾನಮಾನದಿಂದಮುಕ್ತಗಣರಾಜ್ಯವನ್ನಾಗಿ ಮಾಡಿದ ವರ್ಷ ಇದಾಗಿದೆ. ಡಾ. ಬಿ.ಆರ್. ಅಂಬೇಡ್ಕರ್(Dr. B.R. Ambedkar) ಅವರಮಾರ್ಗದರ್ಶನದಲ್ಲಿ ಮೂರು ವರ್ಷಗಳ ಕಾಲ ರಚಿತವಾದ ಸಂವಿಧಾನವುಭಾರತ ಸರ್ಕಾರದಕಾಯಿದೆ (1935) ಅನ್ನು ಸರ್ವೋಚ್ಚಕಾನೂನಾಗಿಬದಲಾಯಿಸಿತು. ಈ ಡಾಕ್ಯುಮೆಂಟ್ಆಡಳಿತದ ಚೌಕಟ್ಟನ್ನು ಹಾಕಿತು ಮತ್ತು ಎಲ್ಲಾ ನಾಗರಿಕರಿಗೆಮೂಲಭೂತಹಕ್ಕುಗಳನ್ನುಖಾತರಿಪಡಿಸಿತು.ನ್ಯಾಯ, ಸ್ವಾತಂತ್ರ್ಯ,ಸಮಾನತೆಮತ್ತುಭಾತೃತ್ವದ ಆಧಾರದ ಮೇಲೆ ಪುಜಾವುಭುತ್ವ ವ್ಯವಸ್ಥೆಯನ್ನುಸ್ಥಾಪಿಸಿತು.ಗಣರಾಜ್ಯೋತ್ಸವವುಭಾರತಕ್ಕೆತನ್ನಪುಜಾಸತ್ತಾತ್ಮಕ,ಮೌಲ್ಯಗಳು ಮತ್ತು ಸ್ವ-ಆಡಳಿತವನ್ನು ನೆನಪಿಸುತ್ತದೆ
ಇದು ರಾಜಪ್ರಭುತ್ವಅಥವಾ ವಿದೇಶಿ ಅಧಿಕಾರದಿಂದಆಳಲ್ಪಡುವುದಕ್ಕಿಂತ ಹೆಚ್ಚಾಗಿ ತಮ್ಮನ್ನು ಆಳುವ ಜನರಶಕ್ತಿಯನ್ನುಪ್ರತಿನಿಧಿಸುತ್ತದೆ. ಗಣರಾಜ್ಯೋತ್ಸವದಮಹತ್ವಬಹುಮುಖಿಯಾಗಿದೆ.ಮೊದಲನೆಯ ದಾಗಿ,ಇದುಸಾಂವಿಧಾನಿಕಮೌಲ್ಯಗಳಿಗೆಭಾರತದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಇದು ನ್ಯಾಯ, ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವದಪ್ರಜಾಸತ್ತಾತ್ಮಕ ಆದರ್ಶಗಳಿಗೆ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಮಾತ್ರವಲ್ಲಗಣರಾಜ್ಯೋತ್ಸವ ಭಾರತದ ಸಾಂಸ್ಕೃತಿಕಪರಂಪರೆಯ ಆಚರಣೆಯೂ ಆಗಿದೆ.ಆಚರಣೆಯ ಸಮಯದಲ್ಲಿಪ್ರಸ್ತುತಪಡಿಸಲಾಗುವ,ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸ್ತಬ್ಧಚಿತ್ರಗಳು ಭಾರತದ ಶ್ರೀಮಂತ ಸಾಂಸ್ಕೃತಿಕ,ವೈವಿಧ್ಯತೆಯನ್ನು ಪದರ್ಶಿಸುತ್ತವೆ.ಈದಿನದ ಮತ್ತೊಂದುಪ್ರಮುಖಮುಖ್ಯಾಂಶವೆಂದರೆ ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸುವುದು. ಏಕೆಂದರೆ ಆಚರಣೆಗಳು,ವೈವಿಧ್ಯತೆಯಲ್ಲಿಏಕತೆಯನ್ನು ಉತ್ತೇಜಿಸುತ್ತವೆ.ಭಾರತದ ವೈವಿಧ್ಯತೆಯಲ್ಲಿ ಅದರ ಶಕ್ತಿಯನ್ನು ಎತ್ತಿತೋರಿಸುತ್ತವೆ. ಭಾರತ ಸ್ವತಂತ್ರವಾಗಲುಮತ್ತುಗಣರಾಜ್ಯವನ್ನು ನಿರ್ಮಿಸಲು ಸಹಾಯ ಮಾಡಿದ ನಾಯಕರುಮತ್ತು ಸ್ವಾತಂತ್ರ್ಯ ಹೋರಾಟಗಾರರ ಶೌರ್ಯ ಮತ್ತು ತ್ಯಾಗವನ್ನು ಗಣರಾಜ್ಯೋತ್ಸವವು ಗೌರವಿಸುತ್ತದೆ.ಪ್ರತಿ ವರ್ಷ ಭಾರತ ಸರ್ಕಾರವು ಗಣರಾಜ್ಯೋತ್ಸವಕ್ಕಾಗಿ ಒಂದು ವಿಶೇಷನಿರ್ದಿಷ್ಟವಿಷಯನ್ನು ಆಯ್ಕೆ ಮಾಡುತ್ತದೆ.ಕಳೆದ ವರ್ಷ ಭಾರತ ಪ್ರಜಾಪ್ರಭುತ್ವದ ತಾಯಿ ಮತ್ತು ಅಭಿವೃದ್ಧಿ ಹೊಂದಿದ ಭಾರತ ಎಂಬುದಾಗಿತ್ತು.ಅದರಂತೆ ಈವರ್ಷ ರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಅದರ ಬೆಳವಣಿಗೆ ಮತ್ತು ಅದರ ಪ್ರಯಾಣವನ್ನು ಎತ್ತಿ ತೋರಿಸುವವಿಷಯವನ್ನುಆಯ್ಕೆಮಾಡಿದೆ. ಈ ವರ್ಷದ ಗಣರಾಜ್ಯೋತ್ಸವದ ಕರ್ತವ್ಯ ಪಥ ಮೆರವಣಿಗೆಯಲ್ಲಿ ಕರ್ನಾಟಕರಾಜ್ಯಸೇರಿದಂತೆ ಸುಮಾರು15ರಾಜ್ಯಗಳಸಾಂಸ್ಕೃತಿಕ ಬಿತ್ತಿ ಚಿತ್ರಗಳು (ಟ್ಯಾಬ್ಲೊಗಳು) ಕಾಣಿಸಿಕೊಳ್ಳಲಿದ್ದುಇದುನಮ್ಮ ರಾಜ್ಯಕ್ಕೆ ಹೆಮ್ಮೆತರುವಂತಹ ಸಂಗತಿ.ಇಂತಹ ಭವ್ಯ ಶುಭ ಸಮಾರಂಭಕ್ಕೆ ಪ್ರತಿ ವರ್ಷ ವಿದೇಶಗಳಿಂದ ರಾಷ್ಟ್ರ ಮಟ್ಟದ ನಾಯಕರುಗಳುಪಾಲ್ಗೊಳ್ಳುವುದು ಭಾರತದ ಪರಂಪರೆಯ ವೈಭವಕ್ಕೆ ಸಾಕ್ಷಿಯಾಗಿದೆ.ನಾವೆಲ್ಲರು ನಮ್ಮ ನಮ್ಮ ಕೆಲಸಇಂತಹ ಪಾರಂಪರಿಕ ದೇಶ, ನಾಡಿನಲ್ಲಿ ವಿವಿಧಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ, ಕಾರ್ಯ ಮಾಡೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲಾಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸೇವೆಸಲ್ಲಿಸಿದ ಸಾಧಕರಿಗೆ ಸನ್ಮಾನಿಸಲಾಯಿತು. ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ ,ತಹಸೀಲ್ದಾರ್ ಪವನ್ ಕುಮಾರ್.ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ,ನಗರಸಭೆ ಅಧ್ಯಕ್ಷರಾದ ಶ್ರೀಮತಿ ಯಮುನಾಧರಣೆಶ್,ಉಪಾಧ್ಯಕ್ಷೆ ಮೇಘನಾ ಭೂಷಣ್,ಇಒ ಸುದರ್ಶನ್,ಗ್ರೇಡ್ 2 ತಹಸಿಲ್ದಾರ್ ಜಗನ್ನಾಥ್,ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ,ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಗಣ್ಯರು ಉಪಸ್ಥಿತರಿದರು
ತಿಪಟೂರು ತಾಲ್ಲೋಕಿನ ಹಾಲ್ಕುರಿಕೆ ತರಳಬಾಳು ಶಾಖಾಮಠದ ಆವರಣದಲ್ಲಿ ತರಳಬಾಳು ಇಂಟರ್ ನ್ಯಾಷನಲ್ ಸ್ಕೂಲ್.ತರಳಬಾಳು ಕಲಾಸೌರಭ 2025 ಜಾನಪದ ಸಿರಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು ತಿಪಟೂರು ಕ್ಷೇತ್ರಶಿಕ್ಷಣಾಧಿಕಾರಿ ಚಂದ್ರಯ್ಯ, ಉದ್ಘಾಟಿಸಿದರು
ತಿಪಟೂರು ತಾಲ್ಲೋಕಿನ ಹಾಲ್ಕುರಿಕೆ ತರಳಬಾಳು ಇಂಟರ್ ನ್ಯಾಷನಲ್ ಸ್ಕೂಲ್ ಆವರಣಲ್ಲಿ ಆಯೋಜಿಸಿದ ತರಳಬಾಳು ಇಂಟರ್ ನ್ಯಾಷನಲ್ ಸ್ಕೂಲ್, ತರಳಬಾಳು ಕಲಾಸೌರಭ 2025 ಜಾನಪದ ಸಿರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಿಗೆ ಬಾಲ್ಯದಲ್ಲಿ ಸಂಸ್ಕಾರಯುತ ಶಿಕ್ಷಣ ಅಗತ್ಯ ನಾವು ಉತ್ತಮ ಶಿಕ್ಷಣ ನೀಡಿ ಸಮಾಜದ ಆಸ್ತಿಯಾಗಿ ರೂಪಿಸಬೇಕು, ಮಕ್ಕಳು ಇತ್ತಿಚಿನ ದಿನಗಳಲ್ಲಿ ಮೊಬೈಲ್ ವ್ಯಾಮೋಹಕ ಒಳಗಾಗಿ ದೈಹಿಕ ಚಟುವಟಿಕೆಗಳಿಂದ ಹಿಂದುಳಿಯುತ್ತಿದ್ದಾರೆ, ಪೋಷಕರು ಮಕ್ಕಳ ಚಟುವಟಿಕೆಗಳ ಮೇಲೆ ನಿಗವಿಡಬೇಕು, ಪಠ್ಯ ಹಾಗೂ ಪಠ್ಯೇತರ ಚಟುವಟಿಗೆಗಳಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹ ನೀಡಬೇಕು, ಶಾಲೆಯ ಒಳಗಡೆ ಕಲಿಯುವ ಶಿಕ್ಷಣದಷ್ಟೆ ಮಹತ್ವವನ್ನ ದೈಹಿಕ ಚಟುವಟಿಕೆಗಳಿಗೂ ನೀಡಿ, ಮಕ್ಕಳ ಆಸಕ್ತಿ ಹಾಗೂ ಪ್ರತಿಭೆಗೆ ತಕ್ಕಂತೆ ವೇದಿಕೆ ನೀಡಿದರೆ, ಸಮಾಜದ ಆಸಕ್ತಿಯಾಗಿ ಬೆಳೆಯುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಮಹಾಸ್ವಾಮಿಗಳ ಸ್ಮಾರ ಸ್ಮಾರಣಾರ್ಥ ನೀಡುವ ವೀರಯೋಧ ಸೈನಿಕ ಲೇಪಾಕ್ಷ ರವರಿಗೆ ನೀಡಲಾಯಿತು ವೀರಯೋಧ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಲೇಪಾಕ್ಷ ರವರು,ಮಕ್ಕಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರ ದೇಶಾಭಿಮಾನ ಬೆಳಸಬೇಕು, ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಅವರು ಸಮಾಜದ ಸ್ವತ್ತಾಗಿ ರೂಪುಗೊಳ್ಳುತ್ತಾರೆ, ಮಕ್ಕಳ ಶಿಕ್ಷಣ ಕೇವಲ ಶಿಕ್ಷಕರ ಜವಾಬ್ದಾರಿ ಎಂದು ಪೋಷಕರು ಸುಮ್ಮನಿರದೆ ಅವರ ವಿದ್ಯಾಭ್ಯಾಸ ಹಾಗೂ ಚಟುವಟಿಕೆಗಳ ಬಗ್ಗೆ ಹೆಚ್ಚುಗಮನ ಹರಿಸಬೇಕು. ನಮ್ಮ ದೇಶ ಹಲವಾರು ವಿದೇಶಿ ದಾಳಿಗಳಿಗೆ ಒಳಗಾದರು, ಸ್ವತಂತ್ರ್ಯ ಭಾರತದಲ್ಲಿ ಸ್ವಾಯುಕ್ತ ಭಾರತವಾಗುವತ್ತ ದಾಪುಗಾಲುವಿಡುತ್ತಿದೆ, ನಾವು ಇಂದು ಎಲ್ಲಾಕ್ಷೇತ್ರದಲ್ಲೂ ಸಧೃಡತೆ ಕಂಡುಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಹೆಚ್.ವಿ ನಾಗರಾಜು ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಮಹಾಸ್ವಾಮಿಜಿಗಳ ಪರಿಶ್ರಮದ ಫಲವಾಗಿ ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಶಿಕ್ಷಣ ದೊರೆಯುವಂತ್ತಾಗಿದೆ,ಶ್ರೀಗಳ ಆಶಯದಂತೆ ಹಾಲ್ಕುರಿಕೆ ತರಳಬಾಳು ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಉತ್ತನ ಶಿಕ್ಷಣ ನೀಡುವ ಕೆಲಸವನ್ನ ಶ್ರೀಮಠದ ಸದ್ಬಕ್ತರ ಸಲಹೆ ಸಹಕಾರದೊಂದಿಗೆ ಮಾಡಲಾಗುವುದು ಎಂದು ತಿಳಿಸಿದರು, ಕಾರ್ಯಕ್ರಮದಲ್ಲಿ ಪ್ರತಿವರ್ಷ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳ ಸ್ಮಾರಣಾರ್ಥ ನೀಡುವ ಕಾಯಕ ಯೋಗಿ ರೈತಪ್ರಶಸ್ತಿಯನ್ನ ಪಟ್ರೆಹಳ್ಳಿ ಗ್ರಾಮದ ರೈತ.ಪಿ.ಸಿ ಭರತ್ ಕುಮಾರ್ ರವರಿಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಾಧುವೀರಶೈವ ಸಮಾಜದ ಅಧ್ಯಕ್ಷ ನಂಜುಂಡಪ್ಪ.ತರಳಬಾಳು ಇಂಟರ್ ನ್ಯಾಷನಲ್ ಸ್ಕೂಲ್ ಮುಖ್ಯೋಪಧ್ಯಾಯ ವಿಜಯ್. ಸ್ಥಳೀಯ ಸಲಹ ಸಮಿತಿ ಮುಖಂಡರಾದ ಘನಾನಂದಮೂರ್ತಿ,ಜಾನಪದ ಕಲಾವಿದ ತಿಮ್ಮಯ್ಯ,ಶಿಕ್ಷಣ ಸಂಯೋಜಕರಾದ ಮಂಜುನಾಥ್,ಶ್ಯಾಮ್ ಸುಂದರ್ ಉಪಸ್ಥಿತರಿದರು. ಶಾಲಾಮಕ್ಕಳಿಂದ ವಿವಿದ ಸಂಸ್ಕೃತಿಕ ಕಾರ್ಯಕ್ರಮಗಳನ್ನ ನಡೆಸಲಾಯಿತು.
ತಿಪಟೂರು ನಗರದ ನಗರಸಭೆಪಕ್ಕ ಅತ್ಯಾಧುನಿಕ ಸೌಲಭ್ಯ ಉಳ್ಳ ಶೇಖರ್ ರಕ್ತ ನಿಧಿ ಕೇಂದ್ರ ಫೆಬ್ರವರಿ 02ರಂದು ಪ್ರಾರಂಭಗೊಳ್ಳಲಿದೆ
ನಗರದ ಶೇಖರ್ ಬ್ಲಡ್ ಬ್ಯಾಂಕ್ ಆವರಣದಲ್ಲಿ ನಡೆದ ಸುದ್ದಿ ಘೋಷ್ಠಿ ಉದೇಶಿಸಿ, ಶೇಖರ್ ಬ್ಲಡ್ ಬ್ಯಾಂಕ್ ಮುಖ್ಯಸ್ಥರಾದ ಡಾ//ಸೋಮಶೇಖರ್ ಮಾತನಾಡಿ ಕಲ್ಪತರು ನಾಡಿನ ಜನರ ಬಹುದಿನಗಳ ಬೇಡಿಕೆಯಾಗಿದ ಬ್ಲಡ್ ಬ್ಯಾಂಕ್ ಫೆಬ್ರವರಿ 2ರಂದು ಪ್ರಾರಂಭೋತ್ಸವ ನಡೆಯಲಿದೆ. ಅತಿಥಿಗಳಾಗಿ ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಉದ್ಘಾಟಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ಶಾಸಕರಾದ ಕೆ.ಷಡಕ್ಷರಿ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹಾಗೂ ನಿವೃತ್ತ ಎಸಿಪಿ ಲೋಕೇಶ್ವರ್ ಸೇರಿದಂತೆಅನೇಕ ಗಣ್ಯರು ಭಾಗವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಕೆರಗೋಡಿ ರಂಗಾಪುರ ಭೂಸುಕ್ಷೇತ್ರ ಅಧ್ಯಕ್ಷರಾದ ಶ್ರೀ ಶ್ರೀ ಗುರು ಪರದೇಶಿಕೇಂದ್ರ ಮಹಾಸ್ವಾಮೀಜಿಗಳು, ನೊಣವಿನಕೆರೆ ಸೋಮೆಕಟ್ಟೆ ಕಾಡಸಿದ್ದೇಶ್ವರ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಕರಿಋಷಭ ದೇಶೀಕೇಂದ್ರ ಶಿವಯೋಗಿಶ್ವರ ಮಹಾಸ್ವಾಮಿಜಿಗಳು, ತಿಪಟೂರು ಗುರುಕುಲಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಕರಿಬಸವ ದೇಶಿ ಕೇಂದ್ರ ಮಹಾಸ್ವಾಮಿಜಿಗಳು, ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಅರಸೀಕೆರೆ ಶಾಸಕ ಕೆ.ಎಂ ಶಿವಲಿಂಗೆಗೌಡ, ಚಿ.ನಾ ಹಳ್ಳಿ ಶಾಸಕ ಸಿ.ಬಿ ಸುರೇಶ್ ಭಾಬು. ತುರುವೇಕೆರೆ ಶಾಸಕ ಎಂ.ಟಿ ಕೃಷ್ಣಪ್ಪ,ಮುಖಂಟರಾದ ಲೋಕೇಶ್ವರ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸುವರು.
ತಿಪಟೂರು ಸೇರಿದಂತೆ ಸುತ್ತಮುತ್ತಲ ತಾಲೂಕು ಜನರಿಗೆ ತುರ್ತು ಅಗತ್ಯವಾಗಿದ್ದ ಬ್ಲಡ್ ಬ್ಯಾಂಕ್ ಸೌಲಭ್ಯ ತರಲು ಸತತ ನಾಲ್ಕು ವರ್ಷಗಳಿಂದ ಪ್ರಯತ್ನಿಸಿದ್ದು ನಿವೃತ್ತ ಎಸಿಪಿ ಹಾಗೂ ಮುಖಂಡರಾದ ಲೋಕೇಶ್ವರ್ ರವರ ಸಹಕಾರದಿಂದ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಚಿವರಾದ ವಿ.ಸೋಮಣ್ಣ ನವರು ಹೆಚ್ಚಿನ ಆಸಕ್ತಿ ತೋರಿ ಬ್ಲಡ್ ಬ್ಯಾಂಕ್ ಗೆ ಅನುಮತಿ ನೀಡಲು ನೆರವಾದರು, ಅವರ ಸಹಕಾರಕ್ಕೆ ತಾಲ್ಲೋಕಿನ ಜನತೆಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ, ನಮ್ಮ ಶೇಖರ್ ಬ್ಲಡ್ ಬ್ಯಾಂಕ್ ನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಉಳ್ಳ ಯಂತ್ರೋಪಕರಣಗಳು, ನುರಿತ ತಂತ್ರಜ್ಞರು ಹಾಗೂ ವೈದ್ಯರು ಲಭ್ಯವಿರುತ್ತಾರೆ. ತಿಪಟೂರು ಸೇರಿದಂತೆ ಸುತ್ತಮುತ್ತಲ ಅನೇಕ ಕಡೆ ಅಪಘಾತಗಳು ಸೇರಿದಂತೆ, ತುರ್ತು ಸಂದರ್ಭಗಳಲ್ಲಿ ಬ್ಲಡ್ ಕೊರತೆಯಿಂದ ಜೀವನ್ಮರಣ ಅನುಭವಿಸಿದ ಸಂದರ್ಭಗಳು ಉಂಟು, ಜನರ ಸಮಸ್ಯೆಗಳನ್ನ ಅರಿತು, ತಿಪಟೂರಿನಲ್ಲಿ ಶೇಖರ್ ರಕ್ತನಿಧಿ ಸೆಂಟರ್ ಪ್ರಾರಂಭವಾಗುವುದರಿಂದ,ತಿಪಟೂರು ತುರುವೇಕೆರೆ ಚಿಕ್ಕನಾಯಕನಹಳ್ಳಿ, ಅರಸೀಕೆರೆ, ಶ್ರೀರಾಂಪುರ ಸೇರಿದಂತೆ ಸುಮಾರು 70 ಕಿಲೋ ಮೀಟರ್ ವ್ಯಾಪ್ತಿಯಲ್ಲಿ, ಬರುವಂತಹ ಗ್ರಾಮೀಣ ಭಾಗದ ಜನರಿಗೆ ಅನುಕೂಲ ಆಗಲಿದೆ, ತುರ್ತು ಅಪಘಾತಗಳು ಸೇರಿದಂತೆ ಚಿಕಿತ್ಸೆಯ ಸಂದರ್ಭದಲ್ಲಿ, ರಕ್ತದ ಅಗತ್ಯಕ್ಕಾಗಿ, ಸುಮಾರು 70 ಕಿಲೋಮೀಟರ್ ದೂರದಿಂದ ರಕ್ತ ತರಬೇಕಿತ್ತು,ತಿಪಟೂರಿನಲ್ಲಿ ಬ್ಲಡ್ ಬ್ಯಾಂಕ್ ಪ್ರಾರಂಭಗೊಳ್ಳುತ್ತಿರುವುದು, ತುರ್ತು ಸಂದರ್ಭಗಳಲ್ಲಿ ಸಂಕಷ್ಟದಲ್ಲಿ ಇರುವವರಿಗೆನೆರವಾಗಲಿದೆ, ರೀತಿ ಉತ್ತಮವಾದ ಸೇವೆಯನ್ನು ನಮ್ಮ ಬ್ಲಡ್ ಬ್ಯಾಂಕ್ ನಿಂದ ನೀಡಲಾಗುವುದು. ಬ್ಲಡ್ ಬ್ಯಾಕ್ ನಲ್ಲಿ ರಕ್ತದಾನಿಗಳು ನೀಡುವ ರಕ್ತವನ್ನು ಪರೀಕ್ಷೆ ಮಾಡಿ ಹಲವಾರು ವಿಭಾಗಗಳಲ್ಲಿ ವಿಂಗಡಿಸಿ ಅಗತ್ಯವಿರುವಂತಹ ರೋಗಿಗಳಿಗೆ ನೀಡಲಾಗುವುದು ಪರೀಕ್ಷಾ ಶುಲ್ಕ ಹಾಗೂ ಕೇಂದ್ರದ ನಿರ್ವಹಣೆ ಶುಲ್ಕಗಳನ್ನ ಮಾತ್ರ ವಿಧಿಸಲಾಗುವುದು, ಕೇಂದ್ರ ಸರ್ಕಾರದ ನಿಯಮಗಳಂತೆ, ಕೇಂದ್ರ ಸರ್ಕಾರ ನಿಗದಿಪಡಿಸಿರುವ ದರಕ್ಕೆ ರಕ್ತವನ್ನು ನೀಡಲಾಗುವುದು ಎಂದು ತಿಳಿಸಿದರು ಪತ್ರಿಕಾ ಘೋಷ್ಠಿಯಲ್ಲಿ ಬ್ಲಡ್ ಬ್ಯಾಂಕ್ ತಂತ್ರಜ್ಞರಾದ ನಾಗೇಶ್ ಅದಂ.ಉಪಸ್ಥಿತರಿದರು
ತಿಪಟೂರು ನಗರದ ನಗರಸಭೆ ಪಕ್ಕದಲ್ಲಿ ಅತ್ಯಾಧುನಿಕ ಉಪಕರಣಗಳನ್ನ ಒಳಗೊಂಡ ಶೇಖರ್ ರಕ್ತನಿಧಿ ಕೇಂದ್ರ (ಬ್ಲಡ್ ಬ್ಯಾಂಕ್) ಪ್ರಾರಂಭೋತ್ಸವ ನಡೆಯಲಿದೆ.
ನಗರದ ಶೇಖರ್ ಬ್ಲಡ್ ಬ್ಯಾಂಕ್ ಆವರಣದಲ್ಲಿ ನಡೆದ ಸುದ್ದಿ ಘೋಷ್ಠಿ ಉದೇಶಿಸಿ ಮಾತನಾಡಿದ ಶೇಖರ್ ಬ್ಲಡ್ ಬ್ಯಾಂಕ್ ಮುಖ್ಯಸ್ಥರಾದ ಡಾ//ಸೋಮಶೇಖರ್ ಮಾತನಾಡಿ ಕಲ್ಪತರು ನಾಡಿನ ಜನರ ಬಹುದಿನಗಳ ಬೇಡಿಕೆಯಾಗಿದ ಬ್ಲಡ್ ಬ್ಯಾಂಕ್ ಫೆಬ್ರವರಿ 2ರಂದು ಪ್ರಾರಂಭೋತ್ಸವ ನಡೆಯಲಿದೆ. ಅತಿಥಿಗಳಾಗಿ ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಉದ್ಘಾಟಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ಶಾಸಕರಾದ ಕೆ.ಷಡಕ್ಷರಿ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಕಾರ್ಯಕ್ರಮದಲ್ಲಿ ಕೆರಗೋಡಿ ರಂಗಾಪುರ ಭೂಸುಕ್ಷೇತ್ರ ಅಧ್ಯಕ್ಷರಾದ ಶ್ರೀ ಶ್ರೀ ಗುರು ಪರದೇಶಿಕೇಂದ್ರ ಮಹಾಸ್ವಾಮೀಜಿಗಳು ನೊಣವಿನಕೆರೆ ಸೋಮೆಕಟ್ಟೆ ಕಾಡಸಿದ್ದೇಶ್ವರ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಕರಿಋಷಭ ದೇಶೀಕೇಂದ್ರ ಶಿವಯೋಗಿಶ್ವರ ಮಹಾಸ್ವಾಮಿಜಿಗಳು, ತಿಪಟೂರು ಗುರುಕುಲಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಕರಿಬಸವ ದೇಶಿ ಕೇಂದ್ರ ಮಹಾಸ್ವಾಮಿಜಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಅರಸೀಕೆರೆ ಶಾಸಕ ಕೆ.ಎಂ ಶಿವಲಿಂಗೆಗೌಡ, ಚಿ.ನಾ ಹಳ್ಳಿ ಶಾಸಕ ಸಿ.ಬಿ ಸುರೇಶ್ ಭಾಬು. ತುರುವೇಕೆರೆ ಶಾಸಕ ಎಂ.ಟಿ ಕೃಷ್ಣಪ್ಪ,ಮುಖಂಟರಾದ ಲೋಕೇಶ್ವರ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸುವರು. ತಿಪಟೂರು ಸೇರಿದಂತೆ ಸುತ್ತಮುತ್ತಲ ತಾಲೂಕು ಜನರಿಗೆ ತುರ್ತು ಅಗತ್ಯವಾಗಿದ್ದ ಬ್ಲಡ್ ಬ್ಯಾಂಕ್ ಸೌಲಭ್ಯ ತರಲು ಸತತ ನಾಲ್ಕು ವರ್ಷಗಳಿಂದ ಪ್ರಯತ್ನಿಸಿದ್ದು ಪ್ರಯತ್ನದ ಫಲವಾಗಿ ತಿಪಟೂರಿಗೆ ಅತ್ಯಾಧುನಿಕ ತಂತ್ರಜ್ಞಾನ ಉಳ್ಳ ಯಂತ್ರೋಪಕರಣಗಳು, ನುರಿತ ತಂತ್ರಜ್ಞರು ಹಾಗೂ ವೈದ್ಯರು ಲಭ್ಯವಿರುತ್ತಾರೆ. ತಿಪಟೂರು ಸೇರಿದಂತೆ ಸುತ್ತಮುತ್ತಲ ಅನೇಕ ಕಡೆ ಅಪಘಾತಗಳು ಸೇರಿದಂತೆ, ತುರ್ತು ಸಂದರ್ಭಗಳಲ್ಲಿ ಬ್ಲಡ್ ಕೊರತೆಯಿಂದ ಜೀವನ್ಮರಣ ಅನುಭವಿಸಿದ ಸಂದರ್ಭಗಳು ಉಂಟು, ಜನರ ಸಮಸ್ಯೆಗಳನ್ನ ಅರಿತು. ತಿಪಟೂರಿನಲ್ಲಿ ಬ್ಲಡ್ ಬ್ಯಾಂಕ್ ಪ್ರಾರಂಭ ಮಾಡಬೇಕು ಎಂದು ಸತತ ನಾಲ್ಕುವರ್ಷದ ಪ್ರಯತ್ನದ ಫಲವಾಗಿ ತಿಪಟೂರಿಗೆ ಬ್ಲಡ್ ಬ್ಯಾಂಕ್ ಅನುಮತಿ ದೊರೆತ್ತಿದ್ದು, ಸಂತೋಷ ಉಂಟುಮಾಡಿದೆ. ತಿಪಟೂರಿನಲ್ಲಿ ಶೇಖರ್ ರಕ್ತನಿಧಿ ಸೆಂಟರ್ ಪ್ರರಂಭವಾಗುವುದರಿಂದ,ತಿಪಟೂರು ತುರುವೇಕೆರೆ ಚಿಕ್ಕನಾಯಕನಹಳ್ಳಿ, ಅರಸೀಕೆರೆ ಶ್ರೀರಾಂಪುರ ಸೇರಿದಂತೆ ಸುಮಾರು 70 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬರುವಂತಹ ಗ್ರಾಮೀಣ ಭಾಗದ ಜನರಿಗೆ ಅನುಕೂಲ ಆಗಲಿದೆ, ತುರ್ತು ಅಪಘಾತಗಳು ಸೇರಿದಂತೆ ಚಿಕಿತ್ಸೆಯ ಸಂದರ್ಭದಲ್ಲಿ ರಕ್ತದ ಅಗತ್ಯಕ್ಕಾಗಿ ಸುಮಾರು 70 ಕಿಲೋಮೀಟರ್ ದೂರದಿಂದ ರಕ್ತ ತರಬೇಕಿತ್ತು ತಿಪಟೂರಿನಲ್ಲಿ ಬ್ಲಡ್ ಬ್ಯಾಂಕ್ ಪ್ರಾರಂಭಗೊಳ್ಳುತ್ತಿರುವುದು ಉತ್ತಮವಾದ ಬೆಳವಣಿಗೆಯಾಗಿದೆ ಅದೇ ರೀತಿ ಉತ್ತಮವಾದ ಸೇವೆಯನ್ನು ನಮ್ಮ ಬ್ಲಡ್ ಬ್ಯಾಂಕ್ ನಿಂದ ನೀಡಲಾಗುವುದು. ಬ್ಲಡ್ ಬ್ಯಾಕ್ ನಲ್ಲಿ ರಕ್ತದಾನಿಗಳು ನೀಡುವ ರಕ್ತವನ್ನು ಪರೀಕ್ಷೆ ಮಾಡಿ ಹಲವಾರು ವಿಭಾಗಗಳಲ್ಲಿ ವಿಂಗಡಿಸಿ ಅಗತ್ಯವಿರುವಂತಹ ರೋಗಿಗಳಿಗೆ ನೀಡಲಾಗುವುದು ಪರೀಕ್ಷಾ ಶುಲ್ಕ ಹಾಗೂ ಕೇಂದ್ರದ ನಿರ್ವಹಣೆ ಶುಲ್ಕಗಳನ್ನ ಮಾತ್ರ ವಿಧಿಸಲಾಗುವುದು, ಕೇಂದ್ರ ಸರ್ಕಾರದ ನಿಯಮಗಳಂತೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ದರಕ್ಕೆ ರಕ್ತವನ್ನು ನೀಡಲಾಗುವುದು ಎಂದು ತಿಳಿಸಿದರು ಪತ್ರಿಕಾ ಘೋಷ್ಠಿಯಲ್ಲಿ ಬ್ಲಡ್ ಬ್ಯಾಂಕ್ ತಂತ್ರಜ್ಞರಾದ ನಾಗೇಶ್ ಅದಂ.ಉಪಸ್ಥಿತರಿದರು
ಉಂಡೆ ಕೊಬ್ಬರಿ ಸೇರಿದಂತೆ ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ. ಕರ್ನಾಟಕ ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ರೈತಪರ ಸಂಘಟನೆಗಳಿಂದ ತಿಪಟೂರು ಆಡಳಿತ ಸೌಧದ ಮುಂಭಾಗ ಉಪವಾಸ ಸತ್ಯಾಗ್ರಹ ಹಾಗೂ ಪ್ರತಿಭಟನೆ ನಡೆಸಲಾಯಿತು
ಪ್ರತಿಭಟನೆ ನಡೆಸಿದ ರೈತಪರ ಸಂಘಟನೆಗಳು ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು ಕೇಂದ್ರ ಸರ್ಕಾರ ಪ್ರಸಕ್ತ ವರ್ಷ ಉಂಡೆಗೊಬ್ಬರಿಗೆ ಕೇವಲ ಒಂದು ರೂಪಾಯಿ ಬೆಂಬಲ ಬೆಲೆ ಹೆಚ್ಚು ಮಾಡುವ ಮೂಲಕ ಕೊಬ್ಬರಿ ಬೆಳೆಗಾರರು ಹಾಗೂ ರೈತರನ್ನ ಅವಮಾನಿಸಿದೆ ಕೇಂದ್ರ ಸರ್ಕಾರದ ರೈತ ನಿರ್ಲಕ್ಷ ಧೋರಣೆ ಖಂಡಿಸಿ ತಾಲೂಕಿನ ರೈತರು ಒಂದು ರೂಪಾಯಿ ಹಣ ಸಂಗ್ರಹಿಸಿ ಆಡಳಿತರೂಢ ಕೇಂದ್ರ ಸರ್ಕಾರ ಹಾಗೂ ವಿರೋಧ ಪಕ್ಷಗಳಿಗೆ ಮನಿ ಆರ್ಡರ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು
ಪ್ರತಿಭಟನಾ ನಿರತರನ್ನ ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ತಿಮ್ಲಾಪುರ ದೇವರಾಜು ,ರೈತರ ಉತ್ಪಾದನಾ ವೆಚ್ಚಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಬೆಲೆಗಳು ಮಾತ್ರ ಕುಸಿತವಾಗುತ್ತಿರುವ ಕಾರಣ ರೈತ ಜೀವನ ನಡೆಸಲು ಕಷ್ಟವಾಗುತ್ತಿದೆ. ಕೇಂದ್ರ ಸರ್ಕಾರ ಸ್ವಾಮಿನಾಥನ್ ವರದಿ ಪ್ರಕಾರ ಉತ್ಪಾದನಾ ವೆಚ್ಚ ಆಧರಿಸಿ ಬೆಂಬಲ ಬೆಲೆ ನೀಡಬೇಕು. ಕೇಂದ್ರದ ಆಡಳಿತರೂಢ ಬಿಜೆಪಿ ಸರ್ಕಾರ ರೈತರ ನಿರ್ಲಕ್ಷ್ಯ ಮಾಡುತ್ತಿದೆ.27 ಬೆಳೆಗಳಿಗೆ ಬೆಂಬಲ ಬೆಲೆ ನೀಡುವುದಾಗಿ ಹೇಳಿದ ಸರ್ಕಾರ ಕನಿಷ್ಟ ಬೆಂಬಲ ಬೆಲೆಗೆ ಕಾನೂನು ಜಾರಿಮಾಡದ ನಿರ್ಲಕ್ಷ್ಯ ಮಾಡುತ್ತಿದೆ. ಕಲ್ಪತರು ನಾಡಿನ ಜೀವನಾಡಿಯಾದ ಕೊಬ್ಬರಿ ಬೆಲೆ ಕುಸಿತವಾಗುತ್ತಿದ್ದು ಕನಿಷ್ಠ ಬೆಂಬಲ ಬೆಲೆ ನೀಡದೆ ಕೇವಲ ಒಂದು ರೂಪಾಯಿಯನ್ನ ಈ ವರ್ಷ ಹೆಚ್ಚಳ ಮಾಡಿ ರೈತರನ್ನ ಅವಮಾನ ಮಾಡಿರುವುದು ಖಂಡನೀಯ. ಕೇಂದ್ರ ಸರ್ಕಾರ ಕೂಡಲೇ ಕನಿಷ್ಟ ಬೆಂಬಲ ಬೆಲೆ ಕಾನೂನು ಜಾರಿಗೊಳಿಸಬೇಕು ಎಂದು ರೈತ ಮುಖಂಡ ಜಗಜಿತ್ ಸಿಂಗ್ ದಾಲೇವಾಲ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ನಮ್ಮ ಬೆಂಬಲವಿದೆ.ನಾವೂ ಸಹ ಅವರ ಹೋರಾಟ ಬೆಂಬಲಿಸಿ ಒಂದು ದಿನದ ಉಪವಾಸ ಸತ್ಯಾಗ್ರಮ ಮಾಡಿ ಬೆಂಬಲ ಸೂಚಿಸಿದ್ದೇವೆ.ಸರ್ಕಾರ ರೈತರನ್ನ ನಿರ್ಲಕ್ಷ್ಯ ಮಾಡಿದರೆ ಕೇಂದ್ರ ಹಾಗೂ ರಾಜ್ಯಸರ್ಕಾರಗಳಿಗೆ ಪಾಠಕಲಿಸುವ ಕಾಲ ದೂರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಿಪಟೂರು ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ ಶಶಿಧರ್ ಮಾತನಾಡಿ ಕೇಂದ್ರ ಸರ್ಕಾರ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು ಎನ್ನುವುದ ರೈತರ ನ್ಯಾಯಯುತ ಬೇಡಿಕೆ, ರೈತರ ಸಂಕಷ್ಟ ಅರಿಯತೆ ಸರ್ಕಾರ ಮೊಂಡುತನ ತೋರುತ್ತಿದೆ. ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಕೇವಲ ಒಂದು ರೂಪಾಯಿ ಕೊಬ್ಬರಿ ಬೆಂಬಲ ಬೆಲೆ ನೀಡಿರುವುದು ತೀವ್ರ ಹಾಸ್ಯಾಸ್ಪದವಾಗಿದೆ, ಕೇಂದ್ರ ಸರ್ಕಾರದ ಧೋರಣೆಯನ್ನ ಖಂಡಿಸಬೇಕಾದ, ನಮ್ಮ ಜನಪ್ರತಿನಿಧಿಗಳು, ಕಣ್ಣು ಮುಚ್ಚಿ ಕೂತಿದ್ದಾರೆ, ನಮ್ಮ ಮತಗಳ ಮೂಲಕವೇ ಆಯ್ಕೆಯಾಗಿ ನಮ್ಮ ಪ್ರತಿನಿಧಿಯಾದ,ಕೇಂದ್ರ ರೈಲ್ವೆ ಹಾಗೂ ಜನಶಕ್ತಿ ಸಚಿವ ವಿ. ಸೋಮಣ್ಣನವರು ಸ್ವತಃ ರೈತರು ತೆಂಗು ಬೆಳೆಗಾರರು ಸಹ ಆಗಿರುವ ಕೇಂದ್ರ ಹುಕ್ಕು ಮತ್ತು ಕೈಗಾರಿಕಾ ಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರು ತೆಂಗು ಬೆಳೆಗಾರರ ಸಮಸ್ಯೆಯನ್ನು ಅರಿತು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಬೇಕಿತ್ತು, ಆದರೆ ಅವರು ರೈತರ ಸಮಸ್ಯೆಗಳಿಗೆ ಧ್ವನಿಗೂಡಿಸುತ್ತಿಲ್ಲ, ಲೋಕಸಭಾ ಚುನಾವಣೆ ವೇಳೆ ತಿಪಟೂರಿನಲ್ಲಿ ತೆಂಗು ಬೆಳೆಗಾರರ ಸಮಾವೇಶ ನಡೆಸಿದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ರವರು ತೆಂಗು ಬೆಳೆಗಾರರ ಹಿತ ಮರೆತಿದ್ದಾರೆ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 15 ಸಾವಿರ ಕೊಬ್ಬರಿ ಧಾರಣೆ ನಿಗದಿ ಮಾಡುವುದಾಗಿ ಭರವಸೆ ನೀಡಿದ್ದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಸಹ ತೆಂಗು ಬೆಳೆಗಾರರ ಬಗ್ಗೆ ಗಮನಹರಿಸುತ್ತಿಲ್ಲ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಬಂದ ಕೇಂದ್ರ ಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಅಡಿಕೆ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವುದಾಗಿ ಹೇಳಿದ್ದಾರೆ ಆದರೆ ತೆಂಗು ಬೆಳೆಗಾರರಿಗೆ ಒಬ್ಬ ಕೇಂದ್ರ ಮಂತ್ರಿಯಿಂದ ರೈತರ ಸಮಸ್ಯೆಗಳನ್ನ ಈಡೇರಿಸುವ ಭರವಸೆ ಇಲ್ಲ ಎನ್ನುವುದಾದರೆ ತೆಂಗು ಬೆಳೆಗಾರರ ಬಗ್ಗೆ ಸರ್ಕಾರಕ್ಕಿರುವ ನಿರ್ಲಕ್ಷ ಧೋರಣೆ ಕಾರಣ ಎನ್ನಬಹುದು. ರೈತರು ಒಗ್ಗಟ್ಟಿನಿಂದ ಹೋರಾಡಿ ಕನಿಷ್ಠ ಬೆಂಬಲ ಬೆಲೆಯನ್ನ ಪಡೆಯಬೇಕು ಎಂದು ಒತ್ತಾಯಿಸಿದರು
,ರೈತರ ಪ್ರತಿಭಟನೆಗೆ ಭಾರತೀಯ ವೈದ್ಯಕೀಯ ಸಂಘ ಸಹ ಬೆಂಬಲ ನೀಡಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ ಭಾರತೀಯ ವೈದ್ಯಕೀಯ ಸಂಘದ ಮುಖಂಡರಾದ ಡಾ//ಅನೀಲ್ ಮಾತನಾಡಿ ಕೇಂದ್ರ ಸರ್ಕಾರ ರೈತರು ಬೆಳೆದ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನೀಡದೆ. ನಿರ್ಲಕ್ಷ್ಯ ವಹಿಸಿದೆ,27ಬೆಳೆಗಳಿಗೆ ಬೆಂಬಲ ಬೆಲೆ ನೀಡುವುದ್ದಾಗಿ ಹೇಳುವ ಕೇಂದ್ರ ಸರ್ಕಾರ ಕನಿಷ್ಟ ಬೆಂಬಲ ಬೆಲೆ ಕಾನೂನು ಜಾರಿಗೊಳಿಸಲು ಮೀನಾಮೇಷ ಏಣಿಸುತ್ತಿದೆ. ಸರ್ಕಾರ ರೈತರ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು ಹಾಗೂ ತಿಪಟೂರು ಜನರ ಜೀವನಾಧಾರವಾದ ಕೊಬ್ಬರಿ ಬೆಲೆ ಹೆಚ್ಚಳಕ್ಕೆ ಕ್ರಮತೆಗೆದುಕೊಳ್ಳಬೇಕು ,ವೈದ್ಯರು ಹಾಗೂ ರೈತರ ಮಕ್ಕಳೆ, ರೈತರ ನ್ಯಾಯಯುತ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ತಿಳಿಸಿದರು
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಯೋಗಾನಂದ ಸ್ವಾಮಿ ಜಯಚಂದ್ರ ಶರ್ಮ ತಿಮ್ಲಾಪುರ ದೇವರಾಜು ರಂಗಪುರ ಚೆನ್ನಬಸವಣ್ಣ ತಿಪಟೂರು ಸೌಹಾರ್ದ ವೇದಿಕೆ ಅಧ್ಯಕ್ಷ ಅಲ್ಲಾಭಕಾಶ್ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷರಾದ ಅನುಸೂಯಮ್ಮ,ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಕಸಾಪ ಅಧ್ಯಕ್ಷ ಬಸವರಾಜು.ಮುಖಂಡರಾದ ಶ್ರೀಕಾಂತ್ ಕೆಳಹಟ್ಟಿ,ರಾಜಣ್ಣ, ಕಲ್ಪತರು ವಿದ್ಯಾಸಂಸ್ಥೆ ಕಾರ್ಯದರ್ಶಿ ಸಂಗಮೇಶ್,ಜಯಾನಂದಯ್ಯ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ//ರಾಮೇಗೌಡ.ಪ್ರದಾನಕಾರ್ಯದರ್ಶಿ ಡಾ//ಮಧುಸೂಧನ್ .ಕುಮಾರ್ ಆಸ್ಪತ್ರೆ ವೈದ್ಯಾಧಿಕಾರಿ ಡಾ// ಶ್ರೀಧರ್.ಮುಂತ್ತಾದವರು ಉಪಸ್ಥಿತರಿದರು
ಬುಲೇಟ್ ಬೈಕ್ ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲ್ಲೋಕು ನೊಣವಿನಕೆರೆ ಹೊಬಳಿ ಕೈದಾಳ್ ಗೇಟ್ ಬಳಿ ನಡೆದಿದೆ
ಬೈಕ್ ಅಪಘಾತದಲ್ಲಿ ಕೋಡಿಹಳ್ಳಿ ಕಾವಲ್ ತೋಟದ ಮನೆ ವಾಸಿ ವರುಣ್ ಅಲಿಯಾಸ್ ಸ್ವಾಮಿ 25 ವರ್ಷ ಮೃತ ದುರ್ದೈವಿ
ಬೈಕ್ ಹಿಂಬದಿ ಸವಾರ ಪ್ರಜ್ವಲ್ 25 ವರ್ಷ ಅಪಘಾತದಲ್ಲಿ ತೀರ್ವವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆನೊಣವಿನಕೆರೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ