ಗುಬ್ಬಿ: ಗ್ರಾಮ ಆಡಳಿತ ಅಧಿಕಾರಿಗಳು ವಿವಿಧ ಬೇಡಿಕೆಗಳನ್ನು ರಾಜ್ಯ ಸರ್ಕಾರದಿಂದ ಪಡೆಯಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಎರಡನೇ ಬಾರಿ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಗೊಂಡು ಅಂತೆಯೇ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಮುಷ್ಕರವನ್ನು ನಡೆಸಲಾಗುತ್ತಿದೆ. ಗುಬ್ಬಿ ತಾಲ್ಲೂಕು ಗ್ರಾಮ ಲೆಕ್ಕಾಧಿಕಾರಿಗಳವರ ಅಧ್ಯಕ್ಷೆ ಸುಮತಿ ಮಾತನಾಡಿ ಈ ಹಿಂದೆ ನಮ್ಮ ಗ್ರಾಮ ಲೆಕ್ಕಾಧಿಕಾರಿಗಳು 24 ಬೇಡಿಗಳನ್ನು ಇಟ್ಟು ಮುಷ್ಕರವನ್ನು ನಡೆಸಿದ್ದೆವು ಆದರೆ ರಾಜ್ಯ ಸರ್ಕಾರ ಮಾತ್ರ ನಮ್ಮ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿದೆ ಕೇವಲ ನಾಮಕಾವಸ್ಥೆಗೆ ಎರಡನ್ನು ಮಾತ್ರ ಈಡೇರಿಸಿದ್ದಾರೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮೊಬೈಲ್ ಆಪ್ ಗಳಿಂದ ಕಾರ್ಯನಿರ್ವಹಿಸಲು ನಮಗೆ ನೀಡಿದ್ದಾರೆ ಆದರೆ ನಿರ್ದಿಷ್ಟ ಕಾಲಾವಕಾಶವನ್ನು ನೀಡುತ್ತಿಲ್ಲ ಬದಲಾಗಿ ತುರ್ತಾಗಿ ಮಾಡಲು ಒತ್ತಡವನ್ನು ಹೇರಲಾಗುತ್ತಿದೆ ಇದರಿಂದ ನಾವು ತಪ್ಪು ಮಾಹಿತಿ ನೀಡುವ ಸಾಧ್ಯತೆ ಇರುತ್ತದೆ ಎಂದರು. ಅಲ್ಲದೆ ನಮ್ಮ ಗ್ರಾಮ ಲೆಕ್ಕಾಧಿಕಾರಿಗಳಿಗೆ ಪ್ರತ್ಯೇಕ ಕಚೇರಿ ವ್ಯವಸ್ಥೆ ಇಲ್ಲದ ಪರಿಣಾಮ ನಾವು ಬಾಡಿಗೆ ಕಟ್ಟಡದಲ್ಲಿ ಕಚೇರಿ ನಡೆಸಿ ರೈತರಿಗೆ ಲಭ್ಯವಾಗುವ ದುಸ್ಥಿತಿ ನಿರ್ಮಾಣವಾಗಿದೆ ಇದರಿಂದ ನಮಗೆ ಆರ್ಥಿಕವಾಗಿ ಹೊರೆಯಾಗಿದೆ ಎಂದರು. ತಾಂತ್ರಿಕ ಸಾಧನಗಳನ್ನು ಮತ್ತಷ್ಟು ನಮಗೆ ನೀಡುವುದರಿಂದ ಸಾರ್ವಜನಿಕರಿಗೆ ಹಾಗೂ ನಮಗೆ ಅರ್ಜಿ ವಿಲೇವಾರಿ ಮಾಡಲು ಸುಧಾರಿಸಬಹುದಾಗಿದೆ ಹಾಗೂ ನಮಗೆ ಹಲವಾರು ವರ್ಷಗಳಿಂದ ವರ್ಗಾವಣೆಗಳು ಆಗುತ್ತಿಲ್ಲ ಇದರಿಂದ ನಮ್ಮ ಕುಟುಂಬದವರಿಂದ ದೂರ ಇರುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಮತ್ತು ನಮಗೆ ಮುಂಬಡ್ತಿ ಕೂಡ ನೀಡಲಾಗುತ್ತಿಲ್ಲ ,ಇವುಗಳಿಂದ ಬೇಸತ್ತು ಎರಡನೇ ಬಾರಿ ರಾಜ್ಯಾದ್ಯಂತ ಮುಷ್ಕರವನ್ನ ಕೈಗೊಂಡಿದ್ದೇವೆ. ನಮ್ಮ ರಾಜ್ಯ ಸರ್ಕಾರ ಬೇಡಿಕೆ ಈಡೇರಿಸುವವರೆಗೂ ರಾಜ್ಯಾದ್ಯಂತ ನಮ್ಮ ಮುಷ್ಕರದಿಂದ ನಾವು ಹಿಂದೆ ಸರಿಯುವುದಿಲ್ಲ ಎಂದು ಅಳುವಿನೊಂದಿಗೆ ಆಕ್ರೋಶ ವ್ಯಕ್ತಪಡಿಸಿದರು.
ವರದಿ: ಸಂತೋಷ್ ಓಬಳ. ಗುಬ್ಬಿ