ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿಗೆ ಒಳಪಡುವ ಬಾಡೇನಹಳ್ಳಿ ಗ್ರಾಮದ ತಿಗಳ ಸಮುದಾಯದವರಿಂದ 5ನೇ ವರ್ಷದ ಅಗ್ನಿ ಬನ್ನಿರಾಯ ಸ್ವಾಮಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
{“capture_mode”:”AutoModule”,”faces”:[]}
ಸದರಿ ಕಾರ್ಯಕ್ರಮದಲ್ಲಿ ತಿಗಳ ಸಮುದಾಯದ ಮುಖಂಡರು ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ಮುನೇಶ್ ಮಾತನಾಡಿ ನಮ್ಮ ಗ್ರಾಮದಲ್ಲಿ 250 ಜನ ತಾಲೂಕಿನಲ್ಲಿ 20,000 ಜನ ತಿಗಳ ಸಮುದಾಯದರಾದ್ದೇವೆ ಈ ಬಾರಿ 5ನೇ ವರ್ಷದ ಅಗ್ನಿ ಬನ್ನಿರಾಯ ಸ್ವಾಮಿಯ ಜಯಂತಿಯನ್ನು ಆಚರಿಸಿದ್ದು, ನಮ್ಮ ಗ್ರಾಮದಲ್ಲಿ ಪ್ರತಿವರ್ಷವೂ ಸದರಿ ಜಯಂತಿ ಆಚರಿಸಲಾಗುತ್ತದೆ ನಮ್ಮ ಸಮುದಾಯ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿದ್ದು ಸಮಾಜದ ಮುಖ್ಯ ವಾಹಿನಿಗೆ ಬರಲು ಪ್ರಯತ್ನಿಸುತ್ತಿದೆ, ಈ ಹಿನ್ನಲೆಯಲ್ಲಿ ಹಿಂದಿನ ಸರ್ಕಾರ ನಮ್ಮ ಸಮುದಾಯಕ್ಕೆ ಕರ್ನಾಟಕ ತಿಗಳ ಅಭಿವೃದ್ಧಿ ನಿಗಮವನ್ನು ನಾಮಕಾವಸ್ಥೆಗೆ ರಚಿಸಲಾಗಿದೆ ಆದರೆ ನಮ್ಮ ಸಮುದಾಯಕ್ಕೆ ಯಾವುದೇ ಸೌಲಭ್ಯ ಇನ್ನೂ ದೊರೆತಿಲ್ಲ ಈಗಿನ ಆಡಳಿತ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಅಲ್ಲದೆ ನಮ್ಮ ಸಮುದಾಯಕ್ಕೆ ಒಂದು ಸಮುದಾಯ ಭವನ ನಿರ್ಮಾಣ ಮಾಡಲು ಹಾಲಿ ಶಾಸಕರಿಗೆ ಮನವಿ ಮಾಡಿದ್ದೇವೆ ಅದನ್ನು ಅನುಷ್ಠಾನಕ್ಕೆ ತರಬೇಕಿದೆ ನಮ್ಮ ಸಮುದಾಯದ ಜನ ಜೀವನ ನಡೆಸಲು ಯಾವುದೇ ಶೈಕ್ಷಣಿಕ ಮತ್ತು ಉದ್ಯಮ ಕ್ಷೇತ್ರದಲ್ಲಿ ಹೆಚ್ಚು ಅವಲಂಬಿತವಾಗಿಲ್ಲ ಬದಲಾಗಿ 10 ಕುಂಟೆ ಜಮೀನಿದ್ದರೂ ಅದರಲ್ಲಿ ತರಕಾರಿ ಕೃಷಿ ಮಾಡಿ ಸ್ವಾವಲಂಬಿ ಬದುಕು ನಡೆಸುತ್ತಾ ಬಂದಿದೆ, ನಮ್ಮ ಅಗ್ನಿ ಬನ್ನಿರಾಯ ಸ್ವಾಮಿಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಸಮಾಜವನ್ನು ಕಟ್ಟಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ತಿಗಳ ಸಮುದಾಯದ ಶ್ರೀ ಲಕ್ಷ್ಮಯ್ಯ ಶ್ರೀ ರೇವಣಸಿದ್ದಯ್ಯನವರು, ಕುಲ ಯಜಮಾನರಾದ ಶ್ರೀ ಯರೇಗೌಡ ಮುದ್ರೆಯವರಾದ ಶ್ರೀ ನಟರಾಜು ದೇವಸ್ಥಾನದ ಅರ್ಚಕರಾದ ಶ್ರೀ ಶ್ರೀನಿವಾಸ್ ದೇವಸ್ಥಾನದ ಕನ್ವಿನಿಯರ್ ಮತ್ತು ವಕೀಲರಾದ ಶ್ರೀ ಶಾಂತಕುಮಾರ್ ಉಪಸಿತರಿದ್ದರು. ತಿಗಳ ಸಮುದಾಯದ ಮುಖಂಡರು, ಹಿರಿಯರು, ಗ್ರಾಮಸ್ಥರು ಸದರಿ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.
. ತಿಪಟೂರು ನಗರಸಭೆ 2025-26ನೇ ಸಾಲಿನ ಆಯ ವ್ಯಯವನ್ನ ತಿಪಟೂರು ಶಾಸಕ ಕೆ.ಷಡಕ್ಷರಿಯವರ ಸಮ್ಮುಖದಲ್ಲಿ ಅಧ್ಯಕ್ಷೆ ಯಮುನಾ ಧರಣೇಶ್ ಮಂಡಿಸಿದರು. ಬಜೆಟ್ ಬಂದಿಸಿದ ಅಧ್ಯಕ್ಷರು ಮಾತನಾಡಿ2025 -2026 ನೇ ಸಾಲಿನ ಬಜೆಟ್ ತುಂಬ ಹರ್ಷ ಉಂಟುಮಾಡಿದೆ,ಸಮಗ್ರ ನಗರದ ಪಕ್ಷಿನೋಟದಂತ್ತಿರುವ ಬಜೆಟ್ ಸಭೆಯಲ್ಲಿ ಅನುಮೋದನೆ ಮಾಡಿದು,ಶಾಸಕರ ಮಾರ್ಗದರ್ಶನ ,ಸಹಕಾರ ಹಾಗೂ ಎಲ್ಲಾ ಸದಸ್ಯರ ನೆರವಿನೊಂದಿಗೆ ನಗರದ ಅಭಿವೃದ್ದಿ ಒತ್ತುನೀಡುವುದ್ದಾಗಿ ತಿಳಿಸಿದರು.
ಬಜೆಟ್ ಸಭೆಯಲ್ಲಿ ಉಪಸ್ಥಿತರಿದ ಶಾಸಕ ಕೆ.ಷಡಕ್ಷರಿ ಮಾತನಾಡಿ ನಗರಸಭಾ ಸದಸ್ಯರ ಕೊನೆಯ ಬಜೆಟ್‌ಯಾಗಿದ್ದು, ಉತ್ತಮವಾದ ಉಳಿತಾಯದ ಬಜೆಟ್ ಮಂಡನೆಯಾಗಿದ್ದು, ಹೆಚ್ಚು ಉಳಿತಾಯ ಮಾಡುವುದು ಅಭಿವೃದ್ದಿ ದೃಷ್ಟಿಯಿಂದ ಒಳ್ಳೆಯದಲ್ಲ ಆದರೂ ಸಹ ಆಶಾದಾಯಕ ಬಜೆಟ್ ಆಗಿದೆ. ನಾವುಗಳು ತಾಲ್ಲೂಕಿನ ಜನತೆಗೆ ದಿನದ 24 ಗಂಟೆಯೂ ಸಹ ಶುದ್ದ ಕುಡಿಯುವ ನೀರನ್ನು ಒದಗಿಸುವ ಕೆಲಸ ಪ್ರಮುಖವಾಗಿದ್ದು, ಈಗಾಗಲೇ ಕುಡಿಯುವ ನೀರಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು ಮೂವರು ಮಂತ್ರಿಗಳ ಹಾಗೂ ಜಿಲ್ಲಾಧಿಕಾರಿಗಳ ಸಮ್ಮಖದಲ್ಲಿ ಸಭೆಯನ್ನು ಮಾಡಲಾಗಿದೆ. ನೊಣವಿನಕೆರೆಗೆ ಈಗಾಗಲೇ ಅಚ್ಚುಕಟ್ಟು ಪ್ರದೇಶದ ಬೆಳೆ ಬೆಳೆಯಲು ನೀರನ್ನು ಒದಗಿಸಲಾಗಿದ್ದು, ಅದರಂತೆ ಕುಡಿಯುವ ನೀರಿಗೂ ಅದ್ಯತೆ ನೀಡಲಾಗಿದ್ದು, ಹೆಚ್ಚುವರಿ ನೀರನ್ನು ಬಿಡುಗಡೆಗೆ ಅನುಮೋದನೆಯಾಗಿದೆ ಎಂದರು. ಖಾಸಗಿ ಬಸ್ ನಿಲ್ದಾಣದಲ್ಲಿ ಕಾಂಪ್ಲೇಕ್ಸ್ ನಿರ್ಮಾಣ, ಸುವ್ಯವಸ್ಥಿತವಾದ ಪುಡ್ ಕೋರ್ಟ್ ನಿರ್ಮಾಣಕ್ಕೆ ಅಧ್ಯತೆ ನೀಡಲಾಗುವುದು ಎಂದರು. ತಿಪಟೂರು ನಗರಸಭೆ 2025-2026ನೇ ಸಾಲಿನ ಬಜೆಟ್ ನಲ್ಲಿ ಧೋಬಿಘಾಟ್‌ನ ಅಭಿವೃದ್ದಿಗೆ 20 ಲಕ್ಷ, ಬಸ್ ತಂಗುದಾಣ ಅಭಿವೃದ್ದಿ 50 ಲಕ್ಷ, ಜಾಹೀರಾತು ಫಲಕಗಳಿಗೆ 10ಲಕ್ಷ, ನಗರ ವ್ಯಾಪ್ತಿಯ ನಾಯಿ ಹಾವಳಿಯನ್ನು ತಪ್ಪಿಸಲು ಎಬಿಸಿ ಶಸ್ತçಚಿಕಿತ್ಸೆಗಾಗಿ 30 ಲಕ್ಷ, ನಗರಸಭಾ ಸದಸ್ಯರ ಅಧ್ಯಯನ ಪ್ರವಾಸಕ್ಕೆ 10 ಲಕ್ಷ, ಸಾರ್ವಜನಿಕ ಶೌಚಾಲಯಕ ನಿರ್ಮಾಣಕ್ಕೆ 50 ಲಕ್ಷ, ಬೀದಿ ದೀಪ, ವಿದ್ಯುತ್ ಕಂಬ, ಹೈಮಾಸ್ಕ್ ಉನ್ನತೀಕರಣಕ್ಕೆ 50 ಲಕ್ಷ, ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ 50 ಲಕ್ಷ, ಒಣತ್ಯಾಜ್ಯ ನಿರ್ವಹಣೆಗಾಗಿ ಮೆಟೀರಿಯಲ್ ರಿಕವರಿ ಫೆಸಲಿಟಿ ಸ್ಥಾಪನೆಗೆ 83 ಲಕ್ಷ, ನಗರದ ಸೌಂದರ್ಯೀಕರಣ ಹಾಗೂ ಹಸಿರೀಕರಣಕ್ಕಾಗಿ 100 ಲಕ್ಷ, ರಾಜಕಾಲುವೆಗಳ ಒತ್ತುವರಿ ತೆರವಿಗೆ 10 ಲಕ್ಷ, ಮೀಸಲಿಡಲಾಗಿದೆ.
ಬಜೆಟ್ ಕುರಿತು ಚರ್ಚೆ ವೇಳೆ ಮಾತನಾಡಿದ ನಗರಸಭಾ ಸದಸ್ಯ ರಾಮ್ ಮೋಹನ್ ನಗರದ ಹೃದಯ ಭಾಗದಲ್ಲಿ ಕಾಸಾಯಿಖಾನೆಗಳಿದ್ದು ಇದರ ಸುತ್ತಮುತ್ತಾ ಅಂಚೆಕಛೇರಿ, ಬಿಎಸ್‌ಎನ್‌ಎಲ್ ಕಛೇರಿ, ಧರ್ಮಕೇಂದ್ರಗಳು, ಶಾಲೆಗಳು, ಹಾಗೂ ಪೊಲೀಸ್ ಠಾಣೆಯಿದ್ದು ಪ್ರತಿ ನಿತ್ಯ ಸಾರ್ವಜನಿಕರು ಸಂಚಾರ ಮಾಡುತ್ತಿರುವ ಸ್ಥಳವಾಗಿದೆ, ಈಗಾಗಲೇ ಹೊಸಳ್ಳಿ ಗ್ರಾಮದ ಹತ್ತಿರ ಮಂಜೂರು ಆಗಿರುವ ಸ್ಥಳಕ್ಕೆ ಸ್ಥಳಾಂತರ ಮಾಡಬೇಕಾಗಿದೆ, ಪ್ಲಾಸ್ಟಿಕ್ ಮುಕ್ತ ಮಾಡುವಂತೆ ಬಟ್ಟೆ ಬ್ಯಾಗ್‌ಗಳ ಬಳಕೆ ಹೆಚ್ಚಿನ ಅದ್ಯತೆ ನೀಡಬೇಕು ಎಂದರು.
ನಗರಸಭಾ ಸದಸ್ಯ ಸೊಪ್ಪು ಗಣೇಶ್ ಮಾತನಾಡಿ ಜಿಲ್ಲೆಯಾಗುವ ನಗರಕ್ಕೆ ಯಾವ ಕಡೆಯಲ್ಲೂ ಸ್ವಾಗತ ಕಮಾನುಗಳು ಇಲ್ಲ ತುರ್ತಾಗಿ ಕಮಾನುಗಳನ್ನು ನಿರ್ಮಾಣ ಮಾಡಿ ನಗರದ ಸೌಂದರ್ಯೀಕರಣವನ್ನು ಹೆಚ್ಚಿಸಬೇಕು ಎಂದರು. ಯೋಗಿಶ್ ಮಾತನಾಡಿ ಅಧ್ಯಯನ ಪ್ರವಾಸಕ್ಕೆ ಮೀಸಲಿರಿಸುವ ಹಣವನ್ನು ಹೆಚ್ಚಳ ಮಾಡಿ, ನಗರದಲ್ಲಿರುವ ಭೂಸ್ವಾಧೀನವಾಗ ಜಾಗಗಳನ್ನು ಗುರುತಿಸಿವಿಕೆ ಕಾರ್ಯ ಆಗಬೇಕು ಎಂದರು. ಅಧ್ಯಕ್ಷೆ ಯಮುನಾ ಮಾತನಾಡಿ ಪ್ಲಾಸ್ಟೀಕ್ ಮುಕ್ತ ತಿಪಟೂರು ನಗರವನ್ನು ಮಾಡುವುದು ನಮ್ಮಲ್ಲೆರ ಜವಾಬ್ದಾರಿಯಾಗಿದ್ದು, ಸದಸ್ಯರ ಸಹಕಾರ ಪ್ರಮುಖವಾಗಿದೆ ಹಾಗೂ ಎನ್‌ಜಿಟಿ ಅನುದಾನದಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗುವುದು ಎಂದರು. ಸಭೆಯಲ್ಲಿ ಶಾಸಕ ಕೆ.ಷಡಕ್ಷರಿ, ಉಪಾಧ್ಯಕ್ಷೆ ಮೇಘನ ಸುಜಿತ್‌ಭೂಷಣ್, ಪೌರಯುಕ್ತ ವಿಶ್ವೇಶ್ವರ ಬದರಗಡೆ ನಗರಸಬೆಯ ಚುನಾಯಿತ ಸದಸ್ಯರು ಹಾಗೂ ನಾಮನಿರ್ಧೇಶನ ಸದಸ್ಯರು, ಅಧಿಕಾರಿ ವರ್ಗ ಹಾಜರಿದ್ದರು.
ತಿಪಟೂರು: ದಲಿತ ಸಂಘಟನೆಗಳು ರಾಜ್ಯದಲ್ಲಿ ನೊಂದವರು ಶೋಷಿತರು ಹಾಗೂ ಧ್ವನಿಇಲ್ಲದ ಜನರ ಧ್ವನಿಯಾಗಿ ಕೆಲಸ ಮಾಡಿದೆ,ಯುವ ಪೀಳಿಗೆ ನಿಸ್ವಾರ್ಥ ಸೇವೆ ಮೂಲಕ ಜನರಲ್ಲಿ ಭರವಣೆ ಮೂಡಿಸುವ ಕೆಲಸ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೋಪೆಸರ್ ಬಿ.ಕೃಷ್ಣಪ್ಪ ಸ್ಥಾಪಿತ )ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ತಿಳಿಸಿದರು ತಿಪಟೂರು ನಗರ ಪ್ರವಾಸಿ ಮಂದಿರದಲ್ಲಿ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೋಪೆಸರ್ ಬಿ.ಕೃಷ್ಣಪ್ಪ ಸ್ಥಾಪಿತ ತಿಪಟೂರು ತಾಲ್ಲೋಕು ಶಾಖೆ ಪುನರ್ ರಚನೆ ಹಾಗೂ ಕಾರ್ಯಕರ್ತರ ಸಭೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಮಾತನಾಡಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯದಲ್ಲಿ ದಲಿತರು, ಶೋಷಿತರು ಹಾಗೂ ದಮನಿತರ ಧ್ವನಿಯಾಗಿ ಕೆಲಸ ಮಾಡುತ್ತಾ ಬಂದಿದೆ,ನಾವೂ ಸಂಘಟನೆಯನ್ನ ನಿಸ್ವಾರ್ಥ ಮನೋಭಾವನೆಯಿಂದ ತಾತ್ವಿಕ ನೆಲೆಗಟ್ಟಿನಲ್ಲಿ ಮುನ್ನೆಡೆಸಿದ್ದಾಗ, ಸಮುದಾಯ ವಿಶ್ವಾಸರ್ಹತೆಗಳಿಸಲು ಸಾಧ್ಯ,ಯುವ ಪೀಳಿಗೆ ಜಾಗರೂಕತೆಯಿಂದ ಸಂಘಟನೆ ಮುನ್ನೆಡೆಸಬೇಕು,ಹೆಚ್ಚು ಹೆಚ್ಚು ಸಂಘಟಿತರಾದಂತೆ, ನಮ್ಮ ಧ್ವನಿಗಟ್ಟಿಯಾಗುತ್ತದೆ, ದಸಂಸ ಹುಟ್ಟಿದ್ದಾಗಿನಿಂದ ಅನೇಕ ಮಹನೀಯರು ತಮ್ಮ ಜೀವವನ್ನೆ ಸವೆಸಿದ್ದಾರೆ, ಡಿಎಸ್ಎಸ್ ಪ್ರಭಾವಿ ನಾಯಕರಾಗಿದ ಮತ್ತಿಹಳ್ಳಿ ದೊಡ್ಡ ಗೌಡ್ರು ದಲಿತ ಚಳುವಳಿಯ ಗಟ್ಟಿತನದ ನಾಯಕ, ಒಬ್ಬ ನಿಸ್ವಾರ್ಥ ಸೇವಾ ಮನೋಭಾವದ ದಿಟ್ಟತನದ ನಾಯಕ ಜಿಲ್ಲೆಯಲ್ಲಿ ಹಲವಾರು ದಲಿತಪರ ಜನಪರ ಹೋರಾಟಗಳ ಮೂಲಕ ನೊಂದ ಜನರಿಗೆ ನ್ಯಾಯದೊರಕಿಸಿ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಡಿಎಸ್ಎಸ್ ಭದ್ರ ನೆಲೆಕಂಡುಕೊಳ್ಳಲು, ಅವರ ಸೇವೆಯೂ ಕಾರಣ,ಹಲವಾರು ಜನಪರಕಾಳಜಿಯ ಮುಖಂಡರ ನಡುವೆಯೂ ಕೆಲವರು ತಮ್ಮ ಸ್ವಾರ್ಥಕ್ಕೆ ಸಂಘಟನೆಯ ಹೆಸರು ಬಳಸಿಕೊಂಡು ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ,ಅಂತಹ ಜನರ ಬಗ್ಗೆ ಸಮುದಾಯ,ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು
ಜಿಲ್ಲಾ ಸಂಘಟನಾ ಸಂಚಾಲಕರಾದ ಮತ್ತಿಹಳ್ಳಿ ಹರೀಶ್ ಗೌಡ ಮಾತನಾಡಿ ಸಂಘಟನೆ ಒಂದು ದೊಡ್ಡ ಶಕ್ತಿ ಇವತ್ತು ನಮಗೆ ಅನ್ಯಾಯವಾದಾಗ ಪ್ರಶ್ನಿಸುವ ಎದೆಗಾರಿಕೆ ರೂಡಿಸಿಕೊಳ್ಳಬೇಕು.ಎಲ್ಲಾ ಸಮುದಾಯದ ಶೋಷಿತರನ್ನ ಒಗ್ಗೂಡಿಸಿಕೊಂಡು ಉತ್ತಮ ಸಮಾಜ ಕಟ್ಟುವಂತಹ ಕೆಲಸ ಆಗಬೇಕಾಗಿದೆ ,ಎಂದು ತಿಳಿಸಿದರು
ಡಿಎಸ್ಎಸ್ ಮುಖಂಡರಾದ ರಾಘು ಯಗಚೀಕಟ್ಟೆ ಮಾತನಾಡಿ ಸಂಘಟನೆ ಒಂದು ದೊಡ್ಡಶಕ್ತಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನಲ್ಲಿ ಪ್ರಾರಂಭವಾಯಿತು ತದನಂತರ ರಾಜ್ಯದಾದ್ಯಂತ ತನ್ನ ವ್ಯಾಪ್ತಿಯನ್ನು ವಿಸ್ತಾರ ಮಾಡಿಕೊಂಡು ದೊಡ್ಡ ಆಲದ ಮರವಾಗಿ ಬೆಳೆದು ನಿಂತಿದೆ ಇಂಥ ಒಂದು ಸಂಘಟನೆಯಲ್ಲಿ ಯುವಕರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರುವುದು ಬಹಳ ಸಂತೋಷದ ವಿಷಯ ನಾವುಗಳು ಸಂಘಟನೆಯಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿನ ನೋವು ನಲಿವಿನಲ್ಲಿ ಬಾಗಿಯಾಗುವುದರ ಜೊತೆಯಲ್ಲಿ ಆರ್ಥಿಕವಾಗಿ ಸದೃಢರಾಗಬೇಕು ವಿದ್ಯಾವಂತರಾಗಿ ಪ್ರಜ್ಞಾವಂತರಾಗಿ ಸಮಾಜದಲ್ಲಿ ಅಭಿವೃದ್ಧಿಯತ್ತ ಸಾಗಬೇಕಾಗಿದೆ ಎಂದು ತಿಳಿಸಿದರು .
ದಲಿತ ಮುಖಂಡರಾದ ಶಿವಪುರ ರಮೇಶ್ ರವರು ಮಾತನಾಡಿ ದಲಿತರು ಒಗ್ಗೂಡಿದ್ದಾಗ ಮಾತ್ರ,ತಮ್ಮ ಹಕ್ಕು ಹಾಗೂ ನ್ಯಾಯಪಡೆಯಲು ಸಾಧ್ಯವಾಗುತ್ತದೆ, ದಲಿತರಿಗೆ ಅನ್ಯಾಯ ಹಾಗೂ ದೌರ್ಜನ್ಯಗಳಾದಗ ದಲಿತ ಮುಖಂಡರು ತಮ್ಮ ಸಂಘಟನೆಗಳ ವಯುಕ್ತಿಕ ಪ್ರತಿಷ್ಠೆ ಬಿಟ್ಟು ಒಗ್ಗೂಡಿ ಹೋರಾಟ ಮಾಡಬೇಕು, ಪ್ರತಿಷ್ಠೆ ಬಿಟ್ಟು ಸಮುದಾಯಗಳ ಸಹಾಯಕ್ಕೆ ನಿಲ್ಲಬೇಕಾಗಿದೆ ಆಗ ಮಾತ್ರ ನ್ಯಾಯಪಡೆಯಲು ಸಾಧ್ಯ ಎಂದರು,
ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಮತ್ತಿಘಟ್ಟ ಶಿವಕುಮಾರ್ ಮಾತನಾಡಿ ಪ್ರೋಪೇಸರ್ ಬಿ.ಕೃಷ್ಣಪ್ಪ ಸರ್ವಸಮಾಜದ ಧ್ವನಿಯಾಗಿದರು,ಸಂಘಟನೆ ಮೂಲಕ ದಲಿತರ ಬದುಕಿನಲ್ಲಿ ಬೆಳಕು ನೀಡಿದ್ದಾರೆ,ಅವರದಾರಿಯಲ್ಲಿ ಎಲ್ಲಾ ಮುಖಂಡರು ಒಗ್ಗೂಡಿ ಕೆಲಸ ಮಾಡಬೇಕು ಎಂದು ತಿಳಿಸಿದರು, ಕಾರ್ಯಕ್ರಮದಲ್ಲಿ ನೂತನ ಡಿಎಸ್ಎಸ್ ತಿಪಟೂರು ತಾಲೂಕು ಪದಾಧಿಕಾರಿಗಳನ್ನ ಆಯ್ಕೆ ಮಾಡಲಾಯಿತು. ಸಂಚಾಲಕರಾಗಿ ಮೋಹನ್ ಜಕ್ಕನಹಳ್ಳಿ .ಮತ್ತು ಮಹಿಳಾ ಘಟಕದ ತಾಲ್ಲೋಕುಸಂಚಾಲಕರಾಗಿ ಕವಿತಾ ಮಹೇಶ್ ಮತ್ತು ಮಹಿಳಾ ನಗರ ಸಂಚಾಲಕರಾಗಿ ಭವ್ಯ . ತಾಲೂಕು ಸಂಘಟನಾ ಸಂಚಾಲಕರಾಗಿ ಸೌಮ್ಯ. ಸೀಮಾ. ಕುಸುಮ ಅರಳುಗುಪ್ಪೆ. ಅಶ್ವಿನಿ .ಶೃತಿ. ಹೇಮಾ ಸವಿತಾ ಕಮಲಮ್ಮ ರವರನ್ನು ಆಯ್ಕೆ ಮಾಡಲಾಯಿತು ಡಿ.ಎಸ್.ಎಸ್. ಮುಖಂಡರಾದ ಸತೀಶ್ ಮಾರನಗೆರೆ.ಕುಮಾರ್ ಬೈರಾಪುರ .ಬಾಗವಾಳ ಲಿಂಗದೇವರು. ರಮೇಶ್ ಮಾರನಗೆರೆ. ಕೀರ್ತಿ ಹತ್ಯಾಳ್. ಗಿಣಿಕೀಕೆರೆಯ ಗ್ರಾಮ ಶಾಖೆ ಮುಖಂಡರಾದ ಜಗದೀಶ್. ಪ್ರಭುಸ್ವಾಮಿ. ಸಂಜಯ್. ಕೃಷ್ಣಮೂರ್ತಿ. ಮತ್ತು ಮೂಗತಿಹಳ್ಳಿ ತಿಮ್ಮೇಗೌಡರು. ಹುಳಿಯಾರ್ ಡಿಎಸ್ಎಸ್ ಯುವ ಮುಖಂಡರಾದ ದೇವರಾಜು ಮಾರುವಳೆ ಗಾಣಧಾಳು ರವಿಪ್ರಸಾದ್. ಮದ್ಲಿಹಳ್ಳಿ ಅನಿಲ್ ಮುಂತಾದವರು ಉಪಸ್ಥಿತರಿದರು
ತಿಪಟೂರು:ತಿಪಟೂರು ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿ ಮಾಡುತ್ತಿರುವ ರಾಗಿ ಖರೀದಿ ಕೇಂದ್ರದಲ್ಲಿ ರೈತರಿಂದ ಹೆಚ್ಚವರಿ ಅಧಿಕಾರಿಗಳು 3ಕೆ.ಜಿ ರಾಗಿ ವಸೂಲಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳ ಬಂದ ಹಿನ್ನೆಲೆ ಶಾಸಕ ಕೆ.ಷಡಕ್ಷರಿ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
, ರೈತರು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಶಾಸಕರು,ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆಯಾಗಬಾರದು,ರೈತರಿಂದ ಕ್ವಿಂಟಲ್ ಕಸಕಡ್ಡಿ ಧೂಳು ಇರುತ್ತದೆ ಎಂದು 3ಕೆ.ಜಿ ರಾಗಿ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳಿದ್ದು, ಪ್ರತಿ ಚೀಲಕ್ಕೆ ಅರ್ಧ ಕೆ.ಜಿ ರಾಗಿ ಹೊರತುಪಡಿಸಿ, ಹೆಚ್ಚುವರಿ ರಾಗಿ ಪಡೆದರೆ ನಿಮ್ಮ ಮೇಲೆ ಕಟ್ಟನಿಟ್ಟಿನ ಕ್ರಮಕೈಗೊಳ್ಳುತ್ತೇವೆ,
ರೈತರು ಕಷ್ಟಪಟ್ಟು ರಾಗಿ ಬೆಳೆದು ಮಾರಾಟ ಮಾಡುತ್ತಿದ್ದಾರೆ, ಆದರೆ ನೀವು ,ರೈತರಿಂದ ಹಣ ವಸೂಲಿ ಮಾಡುವುದು,ಹೆಚ್ಚುವರಿ ರಾಗಿ ಪಡೆಯುವುದು ಮಾಡಿದರೆ,ಕ್ರಮ ಎದುರಿಸಬೇಕಾಗುತ್ತದೆ, ರೈತರು ಯಾವುದೇ ಕಾರಣಕ್ಕೂ ಆತುರ ಪಟ್ಟು ಖಾಸಗೀ ವ್ಯಕ್ತಿಗಳಿಗೆ, ಕಡಿಮೆ ಬೆಲೆಗೆ ರಾಗಿ ಮಾರಾಟ ಮಾಡಬೇಡಿ,ನಿಮ್ಮ ಎಲ್ಲಾ ರಾಗಿಯನ್ನೂ ಸರ್ಕಾರ ನಿಗಧಿತ ಕಾಲದೊಳಗೆ ಕೊಂಡುಕೊಳ್ಳತ್ತದೆ,ಸ್ವಲ್ಪ ತಡವಾದರೂ ನಿಮ್ಮ ಖಾತೆಗೆ ಹಣಜಮಾ ಮಾಡುತ್ತೇವೆ,ಎಂದು ತಿಳಿಸಿದರು
ಎಪಿಎಂಸಿ ಕಾರ್ಯದರ್ಶಿ ನ್ಯಾಮೇಗೌಡ, ರಾಗಿ ಖರೀದಿ ಕೇಂದ್ರದ ಅಧಿಕಾರಿ ಲೋಕೇಶ್, ಸೇರಿದಂತೆ ಅನೇಕರು ಉಪಸ್ಥಿತರಿದರು
ತಿಪಟೂರು:ನಮ್ಮ ದೇಶದ ಕಾನೂನಿನಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಸಮಾನ ಸ್ಥಾನಮಾನಗಳಿವೆ,ಸಮಾಜದ ಅಭಿವೃದ್ದಿಯಲ್ಲಿ ಮಹಿಳೆಯ ಪಾತ್ರವೂ ಅತಿಮುಖ್ಯವಾಗಿದ್ದು, ಮಹಿಳೆಯನ್ನ ಗೌರವದಿಂದ ಕಾಣಬೇಕು ಎಂದು ತಿಪಟೂರು 5ನೇ ಅಧಿಕ ಜಿಲ್ಲಾ ಸತ್ರನ್ಯಾಯಾಧೀಶರಾದ ಪುಷ್ಪಾವತಿ.ವಿ ತಿಳಿಸಿದರು.
ನಗರದ ಕೆ. ಎಲ್ .ಎ .ಸ್ಕೂಲ್ ಆಫ್ ಲಾ ಕಾಲೇಜಿನಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಹಿಳೆಗೆ ಕಾನೂನಿನಲ್ಲಿ ಸಮಾನ ಅವಕಾಶ ಹಾಗೂ ಗೌರವಗಳಿವೆ, ಹಲವಾರು ಸಾಮಾಜಿಕ ಅವಕಾಶಗಳು ದೊರೆತರೂ ತನ್ನ ಕೌಟುಂಬಿಕ ಒತ್ತಡವನ್ನು ನಿಭಾಯಿಸಿ ನಿರ್ವಹಿಸಲು ಕಷ್ಟಪಡುತ್ತಿದ್ದಳು ಆದರೆ ಇಂದು ಮಹಿಳೆಯು ಮಾನಸಿಕ ಮತ್ತು ದೈಹಿಕವಾಗಿ ಶಕ್ತಳಾಗಿದ್ದಾಳೆ,ಯಾವುದೇ ಕಾರ್ಯಗಳನ್ನ ನಿರ್ವಹಿಸುವ ಮಟ್ಟಿಗೆ ಮಹಿಳಾ ಸಾಮರ್ಥ್ಯ ಸುಧಾರಿಸಿದೆ, ಸಮಾಜದ ಬದಲಾವಣೆಯಲ್ಲಿ ಮಹಿಳೆಯ ಪಾತ್ರ ಅನನ್ಯವಾದ್ದುದು, ಜಗತ್ತಿನ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿದ್ದಾರೆ, ಗ್ರಾಮೀಣ ಭಾಗದ ಮಹಿಳೆಯರು ಸಮಾಜಿಕ ಕಟ್ಟುಪಾಡುಗಳನ್ನ ಮೆಟ್ಟಿನಿಂತು ಕಾನೂನಿನ ಅರಿವು ಪಡೆಯಬೇಕು,ಕಾನೂನಿನ ಅರಿವಿದ್ದಾಗ ಮಾತ್ರ ,ಸಮಾಜದಲ್ಲಿ ಗೌರವ ಪಡೆಯಲು ಸಾಧ್ಯವಾಗುತ್ತದೆ, ಮಹಿಳೆವಕೀಲರು ವಿಚಾರಣೆ,ತನಿಖೆ ಪ್ರಕ್ರಿಯೆಗಳಲ್ಲಿ ವಿಭಿನ್ನ ರೀತಿ ನಡೆಸಬೇಕು ಇದಕ್ಕೆ ಸಿನಿಮಾ ಪೂರಕವಾಗಬಲ್ಲವು ಆ ನಿಟ್ಟಿನಲ್ಲಿ ಮುಂಬರುವ ವಕೀಲರು ಜ್ಞಾನವಂತರಾಗಬೇಕು ಎಂದು ಕಾನೂನು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಎನ್.ಎಸ್.ಎಸ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ನಾಗೇಂದ್ರ .ಜಿ ಎನ್ ಮಾತನಾಡಿ ಪ್ರಕೃತಿಯಲ್ಲಿ ಪ್ರತಿಯೊಂದು ಹೆಣ್ಣಿನ ಪ್ರತಿರೂಪವಾಗಿದೆ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯು ಮುಂಚಾಣೆಯಿದ್ದಾಳೆ,ಮೇಲು ಕೀಳು ಭಾವನೆ ಬಿಟ್ಟು ಮಹಿಳೆಯನ್ನ ಸಮಾನ ಗೌರವದಿಂದ ಕಾಣುವಂತ್ತಾಗ ಬೇಕು, ಇದಕ್ಕೆ ಪೂರಕವಾಗಿ ನಮ್ಮ ಕಾಲೇಜಿನ ಬೋಧಕ ಮತ್ತು ಬೋಧಕೇತರ ಮಹಿಳಾ ಸಿಬ್ಬಂದಿಗಳು ಅತ್ಯಂತ ಸಮರ್ಥ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪ್ರಶಂಸನೆ ವ್ಯಕ್ತಪಡಿಸಿದರು.
ಮುಖ್ಯಾತಿಥಿಗಳಾಗಿ ಭಾಗವಹಿಸಿದ ಕಿರುತೆರೆ ಹಾಗೂ ಚಲನಚಿತ್ರ ನಟಿ ಶ್ರೀಮತಿ ಸಂಧ್ಯಾ ಶ್ರೀ ಮಾತನಾಡಿ ಪುರುಷನ ಘನತೆಗೆ ಅರ್ಥ ಬರಬೇಕಾದರೆ ಅದು ಮಹಿಳಾ ಹಕ್ಕುಗಳಿಗೆ ಗೌರವ ಬಂದಾಗ ಬರುತ್ತದೆ. ಹೆಣ್ಣಿಗೆ ಹೆಣ್ಣು ವೈರಿ ಎಂಬುದರ ಬದಲಾಗಿ ಹೆಣ್ಣಿಗೆ ಹೆಣ್ಣು ಸಹಕಾರ ಮನೋಭಾವ ಬೆಳೆಸಿಕೊಳ್ಳಬೇಕು, ಆಗ ಮಹಿಳಾ ಶಕ್ತಿಗೆ ಮತ್ತಷ್ಟು ಗಟ್ಟಿತನ ಬರುತ್ತದೆ ಎಂದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಟ್ರಸ್ಟ್ ಸದಸ್ಯರಾದ ಶ್ರೀ ಹರೀಶ್ ಎಂ, ಪ್ರಾಂಶುಪಾಲರಾದ ಶ್ರೀಮತಿ ವಿನಿತಾ ಪಿ.ಕೆ, ಕಾಲೇಜಿನ ಸಹಾಯಕ ಪ್ರಾಧ್ಯಾಪಕರುಗಳಾದ ಶ್ರೀ ಪ್ರಸನ್ನ ಕುಮಾರ್, ಶ್ರೀ ಪುನೀತ್ ಕುಮಾರ್ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತಿಪಟೂರು: ನಗರದ ಕೆ ಎಲ್ ಎ ಸ್ಕೂಲ್ ಆಫ್ ಲಾ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು,ಸದರಿ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಗೌರವಾನ್ವಿತ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಪುಷ್ಪಾವತಿ ವಿ ಮಹಿಳೆಗೆ ಹಲವಾರು ಸಾಮಾಜಿಕ ಅವಕಾಶಗಳು ದೊರೆತರೂ ತನ್ನ ಕೌಟುಂಬಿಕ ಒತ್ತಡವನ್ನು ನಿಭಾಯಿಸಿ ನಿರ್ವಹಿಸಲು ಕಷ್ಟಪಡುತ್ತಿದ್ದಳು ಆದರೆ ಇಂದು ಮಹಿಳೆಯು ಮಾನಸಿಕ ಮತ್ತು ದೈಹಿಕವಾಗಿ ಶಕ್ತಳಾಗಿದ್ದಾಳೆ,ಯಾವುದೇ ಬಹು ಕಾರ್ಯಗಳನ್ನ ನಿರ್ವಹಿಸುವ ಮಟ್ಟಿಗೆ ಮಹಿಳಾ ಸಾಮರ್ಥ್ಯ ಸುಧಾರಿಸಿದೆ, ವಕೀಲರು ವಿಚಾರಣೆಯ ತನಿಖೆ ಪ್ರಕ್ರಿಯೆಗಳಲ್ಲಿ ವಿಭಿನ್ನ ರೀತಿ ನಡೆಸಬೇಕು ಇದಕ್ಕೆ ಸಿನಿಮಾ ಪೂರಕವಾಗಬಲ್ಲವು ಆ ನಿಟ್ಟಿನಲ್ಲಿ ಮುಂಬರುವ ವಕೀಲರು ಜ್ಞಾನವಂತರಾಗಬೇಕು ಎಂದು ಕಾನೂನು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸದರಿ ಕಾಲೇಜಿನ ಎನ್ಎಸ್ಎಸ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ನಾಗೇಂದ್ರ ಜಿ ಎನ್ ಮಾತನಾಡಿ ಪ್ರಕೃತಿಯಲ್ಲಿ ಪ್ರತಿಯೊಂದು ಹೆಣ್ಣಿನ ಪ್ರತಿರೂಪವಾಗಿದೆ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯು ಮುಂಚಾಣೆಯಿದ್ದಾಳೆ, ಇದಕ್ಕೆ ಪೂರಕವಾಗಿ ನಮ್ಮ ಕಾಲೇಜಿನ ಬೋಧಕ ಮತ್ತು ಬೋಧಕೇತರ ಮಹಿಳಾ ಸಿಬ್ಬಂದಿಗಳು ಅತ್ಯಂತ ಸಮರ್ಥ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪ್ರಶಂಸನೆ ವ್ಯಕ್ತಪಡಿಸಿದರು.ವಿಶೇಷ ಆಹ್ವಾನಿತರಾದ ಕಿರುತೆರೆ ಮತ್ತು ಸಿನಿಮಾ ನಟಿಯಾದ ಶ್ರೀಮತಿ ಸಂಧ್ಯಾ ಶ್ರೀ ಮಾತನಾಡಿ ಪುರುಷನ ಘನತೆಗೆ ಅರ್ಥ ಬರಬೇಕಾದರೆ ಅದು ಮಹಿಳಾ ಹಕ್ಕುಗಳಿಗೆ ಗೌರವ ಬಂದಾಗ ಬರುತ್ತದೆ ಹೆಣ್ಣಿಗೆ ಹೆಣ್ಣು ವೈರಿ ಎಂಬುದರ ಬದಲಾಗಿ ಹೆಣ್ಣಿಗೆ ಹೆಣ್ಣು ಸಹಕಾರ ಮನೋಭಾವ ಬೆಳೆಸಿಕೊಳ್ಳಬೇಕು ಆಗ ಮಹಿಳಾ ಶಕ್ತಿಗೆ ಮತ್ತಷ್ಟು ಗಟ್ಟಿತನ ಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗೌರವಾನ್ವಿತ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಪುಷ್ಪಾವತಿ ವಿ ಸದರಿ ಕಾಲೇಜಿನ ಎನ್ಎಸ್ಎಸ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ನಾಗೇಂದ್ರ ಜಿ ಎನ್, ಸದಸ್ಯರಾದ ಶ್ರೀ ಹರೀಶ್ ಎಂ, ಪ್ರಾಂಶುಪಾಲರಾದ ಶ್ರೀಮತಿ ವಿನಿತಾ ಪಿ.ಕೆ, ಕಿರುತೆರೆ ಮತ್ತು ಸಿನಿಮಾ ನಟಿಯಾದ ಶ್ರೀಮತಿ ಸಂಧ್ಯಾ ಶ್ರೀ ಉಪಸ್ಥಿತರಿದ್ದರು ಹಾಗೂ ಸದರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರುಗಳಾದ ಶ್ರೀ ಪ್ರಸನ್ನ ಕುಮಾರ್, ಶ್ರೀ ಪುನೀತ್ ಕುಮಾರ್ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತುರುವೇಕೆರೆ, ಪಟ್ಟಣದ ತಿಪಟೂರು ರಸ್ತೆಯಲ್ಲಿ ಕೊಡಗಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವತಿಯಿಂದ ತುರುವೇಕೆರೆ ಪಟ್ಟಣದಲ್ಲಿ ನೂತನ ವಾಣಿಜ್ಯ ಮಳಿಗೆ ನಿರ್ಮಾಣವಾಗಿದ್ದು ಸಹಕಾರ ಸಚಿವರಾದ ಕೆ ಎನ್ ರಾಜಣ್ಣ ಅವರು ನೂತನ ಕಟ್ಟಡವನ್ನು ಉದ್ಘಾಟಿಸಿದರು
ಶ್ರೀ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸಹಕಾರಿಗಳಾದ ನಾವುಗಳು ಸಹಕಾರಿ ಆಂದೋಲನವನ್ನು ಪಕ್ಷಾತೀತವಾಗಿ ಜಾತ್ಯತೀತವಾಗಿ ಮುನ್ನಡೆಸಬೇಕೆಂಬುದು ನಮ್ಮೆಲ್ಲರ ಅಭಿಲಾಷೆ ಕೂಡ, ಸಾಮೂಹಿಕವಾಗಿ ಮುಂದಿನ ಪೀಳಿಗೆಗೆ ಆಸ್ತಿಯನ್ನು ಸೃಷ್ಟಿ ಮಾಡುವಂತಹ ಮನಸ್ಥಿತಿ ಬರುತ್ತದೆ ಅಂದರೆ ಅದು ಸಹಕಾರಿಗಳಿಗೆ ಮಾತ್ರ ಎನ್ನುವ ಮನೋಭಾವನೆ ಮತ್ತು ಹೆಮ್ಮೆ ಪಡುವಂತಾಗಬೇಕು ಸಹಕಾರಿ ಆಂದೋಲನ ಇವತ್ತು ಬಹಳ ದೊಡ್ಡದಾಗಿ ಬೆಳೆಯುತ್ತಾ ಇದೆ ನಮ್ಮ ತುಮಕೂರು ಜಿಲ್ಲೆಯಲ್ಲಿ ನಿಮ್ಮ ತುರುವೇಕೆರೆ ತಾಲೂಕು ಸಹಕಾರಿ ಸಂಘವನ್ನು ಬೆಳೆಸಲು ಪ್ರಯತ್ನ ಮಾಡಿರುವ ಎಲ್ಲರಿಗೂ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ ಈ ಹಿಂದೆ ಸಹಕಾರಿ ಸಂಘಗಳಲ್ಲಿ ಕೇವಲ 2 ರಿಂದ 5 ಸಾವಿರವರೆಗೆ ಮಾತ್ರ ಸಾಲವನ್ನ ಕೊಡಲಾಗುತ್ತಿತ್ತು ಆದರೆ ಅಂದಿನ ಹಣಕಾಸಿನ ಲಭ್ಯತೆ ಅಷ್ಟು ಕಡಿಮೆ ಇತ್ತು, ಆದರೆ ಇಂದಿನ ದಿನಗಳಲ್ಲಿ ಹಣಕಾಸಿನ ಲಭ್ಯತೆ ಇರುವುದರಿಂದ ನಮ್ಮ ತುಮಕೂರು ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕ್ಗಳಿಗೆ ಹೆಚ್ಚು ಸಾಲ ನೀಡುತ್ತಿರುವುದರಿಂದ ಸಹಕಾರಿ ಸಂಘಗಳು ಉನ್ನತ ಸ್ಥಾನಕ್ಕೆ ಏರಲು ಸಾಧ್ಯವಾಗಿದೆ ಅದರಲ್ಲೂ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡಿರುವಂತಹ ತುರುವೇಕೆರೆ ತಾಲೂಕು ಎರಡನೆಯ ಸ್ಥಾನದಲ್ಲಿದೆ ಅದರಲ್ಲೂ ಈ ಭಾಗಕ್ಕೆ ಸಹಕಾರ ಸಂಘದಿಂದ ಹೆಚ್ಚು ಸಾಲ ರೈತರಿಗೆ ದೊರೆಯುವಂತೆ ಮತ್ತು ರೈತರ ಸಮಸ್ಯೆಗಳನ್ನು ಬಹಳ ಹತ್ತಿರದಿಂದ ನೋಡಿರುವಂತಹ ಈಗಾಗಲೇ ತುಮಕೂರಿನ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಕೊಡಗಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಎಮ್ ಸಿದ್ದಲಿಂಗಪ್ಪ ಅವರ ಶ್ರಮ ಬಹಳಷ್ಟು ಇದೆ ಇದರ ಜೊತೆಗೆ ಸಂಘದ ಸದಸ್ಯರುಗಳು ಸಿಬ್ಬಂದಿಗಳು ಸಹ, ಸಾರ್ವಜನಿಕರ ಹಣದಲ್ಲಿ ಮಾತ್ರ ನಿಮಗೆ ಸಾಲ ಸಹಕಾರಿ ಬ್ಯಾಂಕ್ ಗಳಲ್ಲಿ ನೀಡುತ್ತಿರುವುದು ಯಾವುದೇ ಕಾರಣಕ್ಕೂ ಇದಕ್ಕೆ ಸರ್ಕಾರದಿಂದ ಯಾವುದೇ ಹಣ ನೀಡುವುದಿಲ್ಲ ಕೆಲವರಲ್ಲಿ ಇದು ಸರ್ಕಾರದ ಹಣ ಹಾಗಾಗಿ ಸಹಕಾರಿ ಬ್ಯಾಂಕಲ್ಲಿ ಸಾಲ ನೀಡುತ್ತಾರೆ ಎಂಬ ಮನೋಭಾವ ಇದೆ, ಯಾವುದೇ ಕಾರಣಕ್ಕೂ ಆ ರೀತಿ ಯಾರು ಸಹ ಅಂದುಕೊಳ್ಳಬೇಡಿ ಸಹಕಾರಿ ಬ್ಯಾಂಕ್ ಗಳಲ್ಲಿ ಸಾರ್ವಜನಿಕರಿಂದ ಬಂದಂತಹ ಹಣದಲ್ಲಿಯೇ ರೈತಾಪಿ ವರ್ಗಕ್ಕೆ ಸಾಲ ನೀಡುತ್ತಿರುವುದು ಕಾರಣ ಇಷ್ಟೇ ರೈತರು ಆರ್ಥಿಕವಾಗಿ ಸದೃಢವಾಗಬೇಕು, ಜಾತ್ಯತೀತವಾಗಿ ಯಾವುದೇ ರಾಜಕಾರಣವಿಲ್ಲದೆ ಎಸ್ ಸಿ, ಎಸ್ ಟಿ, ಓ ಬಿ ಸಿ ಸೇರಿದಂತೆ ಎಲ್ಲಾ ಬಡ ರೈತಾಪಿ ವರ್ಗಕ್ಕೆ ಅನುಕೂಲವಾಗುವಂತೆ ಮುಂದಿನ ದಿನಗಳಲ್ಲಿ ಸಹಕಾರಿ ಸಂಘದ ಅಧ್ಯಕ್ಷರ ಆಯ್ಕೆಯನ್ನು ಲಾಟರಿ ಮೂಲಕ ಆಯ್ಕೆ ಮಾಡಿ ಎಲ್ಲರೂ ಸಹ ಸಮಾನತೆಯಿಂದ ಪಕ್ಷಾತೀತವಾಗಿ ಸಹಕಾರಿಗಳಾಗಲು ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಒಂದೊಂದು ಸಹಕಾರ ಸಂಘ ಮಾಡಲೇಬೇಕೆಂದು ಗಾಂಧೀಜಿಯವರ ಚಿಂತನೆಯಂತೆ ನಾವುಗಳು ಈಗಾಗಲೇ ಚಿಂತನೆಲ್ಲಿದ್ದು ಅದನ್ನು ಆದಷ್ಟು ಬೇಗನೆ ಕಾರ್ಯರೂಪಕ್ಕೆ ತರುವ ಕೆಲಸವನ್ನು ಮಾಡುತ್ತೇನೆ, ಜೊತೆಗೆ ಯಶಸ್ವಿ ಯೋಜನೆಯಲ್ಲಿ ಆಸ್ಪತ್ರೆಗಳಲ್ಲಿ ಸೌಲಭ್ಯ ಪಡೆಯಲು ಪ್ರತಿಯೊಬ್ಬರು ಅದರ ಸದುಪಯೋಗ ಪಡೆದುಕೊಳ್ಳಬೇಕು ಈ ಯೋಜನೆಯ ಸದುಪಯೋಗ ಪಡೆಯಲು ಇದೇ ತಿಂಗಳ 31- 3 -2025 ರಂದು ಕಡೆಯ ದಿನವಾಗಿದ್ದು ಅಷ್ಟರಲ್ಲಿ ಪ್ರತಿಯೊಬ್ಬರೂ ಯಶಸ್ವಿ ಯೋಜನೆಯ ನೋಂದಣಿಯನ್ನು ಮಾಡಿಕೊಳ್ಳಿ ಇದರ ಜೊತೆಗೆ ಖಾಸಗಿ ಬ್ಯಾಂಕ್ ಗಳಲ್ಲಿ ಸಾರ್ವಜನಿಕರು ಚಿನ್ನದ ಸಾಲ ಪಡೆಯಲು ಅತಿ ಹೆಚ್ಚು ಬಡ್ಡಿಯನ್ನು ಕೊಟ್ಟು ಸಾಲವನ್ನ ಪಡೆಯುತ್ತಿದ್ದಾರೆ ದಯಮಾಡಿ ಸಹಕಾರಿ ಬ್ಯಾಂಕ್ ಗಳಲ್ಲೂ ಸಹ ಚಿನ್ನದ ಸಾಲವನ್ನು ನೀಡಲಾಗುತ್ತಿದ್ದು ಕಡಿಮೆ ಬಡ್ಡಿ ದರದಲ್ಲಿ ಕೇವಲ ಐದರಿಂದ ಹತ್ತು ನಿಮಿಷದಲ್ಲಿ ವೇಗವಾಗಿ ನಿಮಗೆ ಚಿನ್ನದ ಸಾಲ ದೊರಕಿಸಿಕೊಡಲಾಗುವುದು ಹಾಗಾಗಿ ಆದಷ್ಟು ನೀವುಗಳು ಖಾಸಗಿ ಬ್ಯಾಂಕ್ ಗಳಲ್ಲಿ ಚಿನ್ನದ ಸಾಲವನ್ನು ಹೆಚ್ಚು ಬಡ್ಡಿಯನ್ನು ಕಟ್ಟುವ ಬದಲು ಸಹಕಾರಿ ಬ್ಯಾಂಕ್ ಗಳಲ್ಲಿ ಚಿನ್ನವನ್ನು ಇಟ್ಟು ಸಾಲವನ್ನು ಪಡೆದುಕೊಳ್ಳಿ ಒಟ್ಟಾರೆ ಸಹಕಾರಿ ಸಂಘಗಳಲ್ಲಿ ಯಾವುದೇ ಪಕ್ಷ, ಜಾತಿ, ಮತ್ತು ರಾಜಕಾರಣವನ್ನು ಮಾಡದೆ ಸಹಕಾರ ಸಂಘ ಕೆಲಸದಲ್ಲಿ ತೊಡಗಿಕೊಳ್ಳಿ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಂ ಡಿ ಲಕ್ಷ್ಮಿ ನಾರಾಯಣ್, ಮಾಜಿ ವಿಧಾನಪರಿಷತ್ ಸದಸ್ಯರಾದ ಬೆಮೆಲ್ ಕಾಂತರಾಜು, ತುಮಕೂರು ಜಿಲ್ಲೆ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳ ನಿರ್ದೇಶಕರುಗಳಾದ ಮೂರ್ತಿ, ಲಕ್ಷ್ಮೀನಾರಾಯಣ್ ,ಪ್ರಬಣ್ಣ, ನರಸಿಂಹಣ್ಣ, ರಮೇಶ್ ಗೌಡ, ಜಂಗಮಪ್ಪ,ರಾಜಕುಮಾರ, ನಾಗೇಶ್ ಬಾಬು, ತುಮುಲ್ ನಿರ್ದೇಶಕ ಮಹಾಲಿಂಗಯ್ಯ,ಹಾಗೂ ತುರುವೇಕೆರೆ ತಾಲೂಕಿನ ಸಹಕಾರಿ ಸಂಘದ ಕೊಡಗಿಹಳ್ಳಿಅಧ್ಯಕ್ಷರು ಮಹಾಲಿಂಗಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷರು ಸ್ವಪ್ನ ನಟೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರು ಕಿರಣ್, ತಾಲೂಕು ದಂಡಾಧಿಕಾರಿ ಅಹ್ಮದ್, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಭಾಗ್ಯಮ್ಮ, ಸುನಿಲ್ ವಿನೋಬನಗರ, ಮಾಜಿ ಅಧ್ಯಕ್ಷರಾದ ಚಿದಾನಂದ್, ಕೀರ್ತಿ ಪ್ರಭಾ, ಮಲ್ಲೂರ್ ತಿಮ್ಮೆಶ್, ಮುನಿಯೂರು ರಂಗಸ್ವಾಮಿ, ದಂಡಿನ ಶಿವರ ಕುಮಾರ್, ಪ್ರಸನ್ನ ಕುಮಾರ್, ಇನ್ನು ಅನೇಕ ಪಕ್ಷದ ಮುಖಂಡರುಗಳು, ತಾಲೂಕು ಆಡಳಿತ ವರ್ಗದ ಸಿಬ್ಬಂದಿಗಳು ಅಧಿಕಾರಿಗಳು ನೂರಾರು ಸಹಕಾರಿಗಳು ಉಪಸ್ಥಿತರಿದ್ದರು.
ತಿಪಟೂರು ನಗರದ ಮಾವಿನತೋಪು ಬಡಾವಣೆಯ ಶ್ರೀ ಪ್ಲೇಗಿನಮ್ಮ ದೇವಿ ದೇವಾಲಯದ ಬೀಗ ಮುರಿದು ಚಿನ್ನಾಭರಣ ಸೇರಿ ಸುಮಾರು ಲಕ್ಷ ಮೌಲ್ಯದ ವಸ್ತುಗಳನ್ನ ಕಳ್ಳತನ ಮಾಡಿರುವ ಘಟನೆ ನಡೆದಿದೆ, ರಾತ್ರಿ ದೇವಾಲಯದ ಬೀಗ ಮುರಿದ ಕಳ್ಳರು,ಶ್ರೀ ಪ್ಲೇಗಿನಮ್ಮ ದೇವಿಯವರ ಮೇಲಿದ್ದ ಉಂಗುರ, ಬಂಗಾರದ ತಾಳಿ,ತಡೆ ಬಳೆ,ಬೆಳ್ಳಿ ಛತ್ರಿ, ನಗದು ಸೇರಿ ಸುಮಾರು ಒಂದು ಲಕ್ಷ ಮೌಲ್ಯದ ವಸ್ತುಗಳನ್ನ ಕಳ್ಳತನ ಮಾಡಲಾಗಿದೆ, ಸ್ಥಳಕ್ಕೆ ತಿಪಟೂರು ನಗರಠಾಣೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ, ಇನ್ನೂ ದೇವಾಲಯದ ಪಕ್ಕದಲ್ಲೆ ಇದ್ದ ಶಿವಣ್ಣ ಎಂಬುವವರ ಮನೆಯಲ್ಲಿ ಯಾರು ಇಲ್ಲ ಎಂಬುದನ್ನ ಗಮನಿಸಿ ಮನೆ ಬೀಗಮುರಿದು ಹಣ ಕಳ್ಳತನ ಮಾಡಲಾಗಿದೆ.
ಕಾಂಗ್ರೇಸ್ ಪಕ್ಷದ ಹಿರಿಯ ಮುತ್ಸದಿ ರಾಜಕಾರಣಿ ಹಾಗೂ ತಿಪಟೂರು ಶಾಸಕರು ಹಾಗೂ ರಾಜ್ಯ ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷರಾದ ಕೆ.ಷಡಕ್ಷರಿ ಯವರಿಗೆ ಸಚಿವ ಸ್ಥಾನ ಕೈ ತಪ್ಪಲು ಸಮುದಾಯದ ಪ್ರಭಾವಿ ಸ್ವಾಮೀಜಿಯೊಬ್ಬರ ಒತ್ತಡ ಕಾರಣವಾಗಿದೆ ಎನ್ನುವ ಸುದ್ದಿ ಕೆ.ಷಡಕ್ಷರಿ ಅಭಿಮಾನಿಗಳು ಹಾಗೂ ತಿಪಟೂರು ಜನತೆಯ ಬೇಸರಕ್ಕೆ ಕಾರಣವಾಗಿದೆ.
ಕಳೆದ ಕಾಂಗ್ರೇಸ್ ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಹಿರಿತನ ಹಾಗೂ ಲಿಂಗಾಯಿತ ಸಮುದಾಯದ ಪ್ರಭಾವಿ ಶಾಸಕ ಎನ್ನುವ ಕಾರಣಕ್ಕೆ ಸಚಿವ ಸ್ಥಾನ ನೀಡಲಾಗುದು ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತು,ಶಾಸಕ ಕೆ.ಷಡಕ್ಷರಿಯವರು ಸಹ ತಮಗೆ ಸಚಿವ ಸ್ಥಾನ ದೊರೆಯುತ್ತದೆ ಎನ್ನುವ ಆಶಾವಾದದ ಮಾತುಗಳನಾಡಿದರೂ, ಆದರೆ ಪ್ರಮಾಣವಚನದ ಕೊನೆಕ್ಷಣದಲ್ಲಿ ಸಚಿವ ಸ್ಥಾನದ ಪಟ್ಟಿಯಲ್ಲಿ ಶಾಸಕ .ಕೆ.ಷಡಕ್ಷರಿ ಹೆಸರು ಇಲ್ಲದೇ ಇರುವುದು ತಾಲ್ಲೋಕಿನ ಜನತೆ ಹಾಗೂ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು, ಆದರೆ ಸಿದ್ದರಾಮಯ್ಯ ನವರ ನೇತೃತ್ವದ ಸರ್ಕಾರದಲ್ಲಿ ಶಾಸಕ ಕೆ.ಷಡಕ್ಷರಿ ಸಚಿವರಾಗುತ್ತಾರೆ ಎನ್ನುವ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದವು,ಜಿಲ್ಲೆಯಿಂದ ಗೃಹ ಸಚಿವ ಡಾ//ಜಿ.ಪರಮೇಶ್ವರ್ ಹಾಗೂ ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಮಂತ್ರಿಗಳಾದ ಕಾರಣ ಸಚಿವ ಸ್ಥಾನ ಕೈ ತಪ್ಪಿತು, ಪಕ್ಷ ನಿಷ್ಟೆ,ಹಿರಿತನ ಎಲ್ಲಾ ಇದ್ದರು, ನಮ್ಮ ಶಾಸಕರಿಗೆ ಸಚಿವ ಸ್ಥಾನದೊರೆಯುತ್ತಿಲ್ಲ,ಎಂದು ಹಲವಾರು ಸಭೆ ಸಮಾರಂಭಗಳಲ್ಲಿ ಬೇಸರ ವ್ಯಕ್ತಪಡಿಸಿ ,ಸಚಿವ ಸ್ಥಾನಕ್ಕೆ ಒತ್ತಾಯ ಮಾಡುತ್ತಿರುವ ಅಭಿಮಾನಿಗಳು ಇಂದು ತಿಪಟೂರು ಎಪಿಎಂಸಿ ಆವರಣದಲ್ಲಿ ನಡೆದ ನಂದಿನಿ ಕ್ಷೀರಭವನ ಉದ್ಘಾಟನೆ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯಾತಿಥಿಗಳಾಗಿದ ಕೆ.ಎನ್ ರಾಜಣ್ಣ ಮಾತನಾಡುವಾಗ ಸಾರ್ವಜನಿಕರು ಹಾಗೂ ಕೆ.ಷಡಕ್ಷರಿ ಅಭಿಮಾನಿಗಳು ಶಾಸಕ ಕೆ.ಷಡಕ್ಷರಿ ಯವರಿಗೆ ಸಚಿವ ಸ್ಥಾನ ನೀಡಿ ಎಂದು ಕೂಗಿದ್ದಾಗ, ಸಚಿವ ಕೆ.ಎನ್ ರಾಜಣ್ಣ ನಿಮ್ಮ ಶಾಸಕ ಕೆ.ಷಡಕ್ಷರಿಯವರಿಗೆ ಸಚಿವ ಸ್ಥಾನ ಕೈತಪ್ಪಲು ನನಾಗಲಿ ಅಥವಾ ಗೃಹ ಸಚಿವರಾದ ಡಾ//ಜಿ ಪರಮೇಶ್ವರ್ ಅವರಾಗಲಿ ಕಾರಣರಲ್ಲ,ನಿಮ್ಮ ಸಮುದಾಯದ ಪ್ರಭಾವಿ ಮಠಾಧೀಶರೊಬ್ಬರ ಒತ್ತಡದ ಕಾರಣದಿಂದ ಸಚಿವ ಸ್ಥಾನ ಕೈ ತಪ್ಪಿದೆ. ಶಾಸಕ ಕೆ.ಷಡಕ್ಷರಿಯವರಿಗೆ ಸಚಿವ ಸ್ಥಾನದೊರೆತರೆ, ನಮಗೂ ಸಂತೋಷ,ಎಂದರು ಕೆ.ಎನ್ ರಾಜಣ್ಣ ನವರ ಮಾತಿನಿಂದ ಶಾಸಕರ ಅಭಿಮಾನಿಗಳಿಗೆ ಆತಂಕ ಹಾಗೂ ನಿರಾಸೆ ಉಂಟುಮಾಡಿದೆ, ಸಮುದಾಯದ ಪ್ರಭಾವಿ ಸ್ವಾಮೀಜಿಗಳಿಗೆ ನಮ್ಮ ಶಾಸಕರ ಮೇಲೆ ಏಕೆ ಬೇಸರ ,ಅಸಮಾಧಾನ,ಸಮುದಾಯವನ್ನ ತಿದ್ದಿ ಮುನ್ನಡೆಸಬೇಕಾದ ಮಠಾಧೀಶರೇ ಜನನಾಯಕರ ಕಾಲೆಳೆದರೆ,ಮುಂದೆ ಬೆಳೆಯುವ ಮುಖಂಡರ ಪಾಡೇನು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸಹಕಾರಿ ಅಂದೋಲನ ಸಾರ್ವಜನಿಕರಿಗೆ ಅತಿಸುಲಭವಾಗಿ ಸೇವೆ ಮಾಡುವ ಕ್ಷೇತ್ರವಾಗಿದೆ ಸಹಕಾರಿ ಆಂದೋಲನದಲ್ಲಿ ಎಲ್ಲಾ ಸಮುದಾಯದ ಜನ ಭಾಗವಹಿಸಬೇಕು ಎನ್ನುವ ದೃಷ್ಠಿಯಿಂದ ಮೀಸಲಾತಿಯನ್ನ ಶೀಘ್ರದಲ್ಲಿಯೇ ಜಾರಿಗೊಳಿಸಲಾಗುವುದು ಎಂದು ಸಹಕಾರಿ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು
ನಗರದ ಎಪಿಎಂಸಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ನಂದಿನಿ ಕ್ಷೀರಭವನ ಉದ್ಘಾಟಿಸಿ, ಸಾರ್ವಜನಿಕ ಸಮಾರಂಭ ಉದ್ಘಾಟಿಸಿದ ಅವರು ಮಾತನಾಡಿ ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಮಾತನಾಡಿ ಸಿದ್ದರಾಮಯ್ಯ ನವರ ಸರ್ಕಾರ ಜನಪರವಾಗಿ ಆಡಳಿತ ನಡೆಸುತ್ತಿದೆ,ಎಲ್ಲಾ ಸಮುದಾಯಗಳ ಜನ ಸಹಕಾರಿ ಆಂದೋಲನದಲ್ಲಿ ಭಾಗವಹಿಸಬೇಕು ಎನ್ನುವುದು ನಮ್ಮ ಸರ್ಕಾರದ ಆಶಯವಾಗಿದ್ದು ಎಸ್.ಸಿ ಎಸ್ ಟಿ ಒಬಿಸಿ ಗಳು ಸಹಕಾರಿ ಆಂದೋಲನದಲ್ಲಿ ಪಾಳ್ಗೊಳಲ್ಲಿ ಎನ್ನುವ ದೃಷ್ಠಿಯಿಂದ ಸದ್ಯದಲ್ಲಿಯೇ ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ಹಾಗೂ ಹಾಲು ಉತ್ವಾದಕರ ಸಹಕಾರ ಸಂಘಗಳು ಸೇರಿದಂತೆ ಸಹಕಾರಿ ಕ್ಷೇತ್ರಗಳಲ್ಲಿಯೂ ಮೀಸಲು ನಿಗಧಿಗೊಳಿಸಬೇಕು ಹಾಗೂ ಅಲ್ಲಿಯೂ ಸಹ ಅಧ್ಯಕ್ಷರು ಉಪಾಧ್ಯಕ್ಷರು ಮೀಸಲು ಆಧಾರದಲ್ಲಿ ನಿಗಧಿಯಾಗ ಬೇಕು ಎನ್ನುವುದೇ ಸರ್ಕಾರದ ಆಶಯವಾಗಿದ್ದು, ಕಳೆದ ವಿಧಾನ ಸಭೆಯಲ್ಲಿ ಹಲವಾರು ಬಿಲ್ ಗಳು,ಪಾಸ್ ಆಗಿವೆ,ಸದ್ಯದಲ್ಲಿಯೇ ಮೀಸಲು ನಿಗದಿ ಮಾಡುತ್ತೇವೆ.ಸಹಕಾರಿ ಕ್ಷೇತ್ರ ಉತ್ತಮವಾಗಿ ಬೆಳೆಯಲು ಸರ್ಕಾರ ರೈತರ ಸಾಲಕ್ಕೆ ಬಡ್ಡಿ ನೀಡುತ್ತಿದೆ,ಹಾಲು ಉತ್ವಾದಕರಿಗೆ ನೆರವಾಗುವ ದೃಷ್ಠಿಯಿಂದ ಕ್ಷೀರಭಾಗ್ಯ ಯೋಜನೆ ಆರಂಭಿಸಿ ಶಾಲಾ ಮಕ್ಕಳಿಗೆ ಹಾಲು ನೀಡುತ್ತಿದೆ,ಹಾಲಿಗೆ 5ರೂಪಾಯಿ ಸಹಾಯಧನ ನೀಡುತ್ತಿದ್ದು,ತುಮಕೂರು ಒಕ್ಕೂಟದಿಂದ ಹೆಚ್ಚುವರಿಯಾಗಿ 2ರೂಪಾಯಿ ಹಣ ನೀಡುವ ಚಿಂತನೆಇದ್ದು, ,ಸರ್ಕಾರ ಗ್ರಹಕರಿಗೆ ಹೊರೆಯಾಗದಂತೆ 5ರೂಪಾಯಿ ಸಹಾಯಧನ ನೀಡುವ ಚಿಂತನೆ ನಡೆಯುತ್ತಿದೆ,ನಂದಿನಿ ಹಾಲು ಒಕ್ಕೂಟ ರೈತರ ಆರ್ಥಿಕ ನೆರವಿಗೆ,ನೆರವಾಗುತ್ತಿದ್ದು ರೈತನ ಉತ್ವಾದನಾ ವೆಚ್ಚಕ್ಕೆ ಸರಿತೂಗುವಂತೆ,ಬೆಲೆ ನೀಡುಬೇಕು, ಸಹಕಾರಿ ಸಂಘಗಳು ರಾಸುಗಳಿಗೆ ನೀಡುತ್ತಿರುವ ಪಶುಆಹಾರ ಕಳಪೆಗುಣಮಟ್ಟದಿಂದ ಕೂಡಿದೆ ಎನ್ನುವ ದೂರುಗಳಿದ್ದು,ಗುಣಮಟ್ಟದ ಆಹಾರ ನೀಡಲು ಸೂಕ್ತಕ್ರಮಕೈಗೊಳ್ಳ ಬೇಕು. ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು ಎನ್ನುವುದು ನಮ್ಮ ಉದೇಶ,ಹಾಲು ಗುಣಮಟ್ಟ ಪರೀಕ್ಷೆಕ್ಕೆ ಗಣಕೀಕೃತ ವ್ಯವಸ್ಥೆ ಜಾರಿಗೊಳಿಸಲಾಗಿದೆ ,ಒಂದು ಅಂದಾಜಿನ ಪ್ರಕಾರ ಮುವತ್ತೈದು ಸಾವಿರ ಲೀಟರ್ ನೀರು ಮಿಕ್ಸ್ ಆಗುತ್ತಿದೆ ರೈತರು ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು ಎಂದು ತಿಳಿಸಿದರು
ಕಾರ್ಯಕ್ರಮ ಉದ್ಘಾಟಿಸಿದ ಗೃಹಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ//ಜಿ ಪರಮೇಶ್ವರ್ ಮಾತನಾಡಿ ರೈತರು ಅಭಿವೃದ್ದಯಾದರೆ ದೇಶದ ಅಭಿವೃದ್ದಿಯಾಗುತ್ತದೆ, ಕೃಷಿಯ ಜೊತೆಗೆ ಹೈನುಗಾರಿಕೆ ಕೈಗೊಂಡರೆ ರೈತ ಆರ್ಥಿಕ ಸಂಕಷ್ಟದಿಂದ ಮೇಲೆ ಬರಬಹುದು, ಸಿಲ್ಕ್ ಹಾಗೂ ಮಿಲ್ಕ್ ರೈತರ ಆಧಾರದ ಮೂಲಗಳು ನಮ್ಮ ಸರ್ಕಾರ ಹೈನುಗಾರಿಕೆ ಅಭಿವೃದ್ದಿಗೆ ಹಲವಾರು ಕ್ರಮಗಳನ್ನ ಕೈಗೊಂಡಿದೆ, ಕ್ಷೀರಕ್ರಾಂತಿಯಲ್ಲಿ ನಮ್ಮ ರಾಜ್ಯ ಉತ್ತಮ ಸಾಧನೆ, ಮಾಡುತ್ತಿದ್ದು ಇನ್ನೂ ಹೆಚ್ಚಿನಸಾಧನೆ ಮಾಡಬೇಕು,ಸರ್ಕಾರ ಕ್ಷೀರಭಾಗ್ಯ ಯೋಜನೆ ಮೂಲಕ ಅನ್ನದಾತರಿಗೆ ನೆರವಾಗಿದೆ 5ರೂಪಾಯಿ ಪ್ರೋತ್ಸಹ ಧನ ನೀಡುವುದರಿಂದ ರೈತರಿಗೆ ಸಹಕಾರವಾಗುತ್ತಿದ್ದು ,ಪ್ರೋತ್ಸಾಹ ಧನ ಹೆಚ್ಚಿಸುವ ಪ್ರಸ್ಥಾವನೆ ಸರ್ಕಾರದ ಮುಂದಿದೆ,ಎಂದ ಅವರು ತಿಪಟೂರು ಜಿಲ್ಲೆ ಮಾಡುವಂತ್ತೆ ಶಾಸಕ ಕೆ.ಷಡಕ್ಷರಿ ಒತ್ತಡ ಮಾಡುತ್ತಿದ್ದಾರೆ,ನಾವೂ ಮಧುಗಿರಿ ಜಿಲ್ಲೆ ಮಾಡುವಂತ್ತೆ ಕೇಳಿದ್ದೇವೆ,ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ನೋಡೋಣ ನಿಮ್ಮ ಹೋರಾಟಕ್ಕೆ ಶುಭವಾಗಲಿ,ಎಂದರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಶಾಸಕ ಕೆ.ಷಡಕ್ಷರಿ ಮಾತನಾಡಿ ನಮ್ಮ ಸರ್ಕಾರ ಸಹಕಾರಿ ಸಂಘಗಳಲ್ಲಿ ಐದು ಲಕ್ಷದ ವರೆಗೆ ಸಾಲ ಸೌಲಭ್ಯ ನೀಡುವ ಯೋಜನೆ ಮಾಡುತ್ತಿದೆ ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪ್ರಸ್ಥಾವನೆ ಸಲ್ಲಿಸಿದ್ದೇವೆ,ಪಿಎಲ್ ಡಿ ಬ್ಯಾಂಕ್ ನಂತೆ ಸಹಕಾರಿ ಬ್ಯಾಂಕ್ ನಲ್ಲೂ ಸಾಲನೀಡಲಾಗುವುದು,ತಿಪಟೂರಿಗೆ ಸಬ್ ಜೈಲ್ ಮುಂಜೂರಾಗಿತ್ತು 8ಕೋಟಿ ಅನುದಾನ ನೀಡಿದರು ಆದರೆ ಹಿಂದಿನ ಶಾಸಕರು ಪರಪ್ಪನ ಅಗ್ರಹಾರಕ್ಕೆ ಅನುದಾನ ತೆಗೆದುಕೊಂಡು ಹೋಗಲು ಬಿಟ್ಟುಕೊಟ್ಟ ಕಾರಣ ,ತಿಪಟೂರಿಗೆ ಜೈಲ್ ಇಲ್ಲದಾಗಿದ್ದೆ ಗೃಹಸಚಿವರು ಶೀಘ್ರದಲ್ಲೆ ಹಣ ಬಿಡುಗಡೆ ಮಾಡಬೇಕು, ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ವೆಂಕಟೇಶ್ ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಸಿಇಒ ಪ್ರಭು, ಎಸ್ಪಿ ಅಶೋಕ್,ತುಮುಲ್ ನಿರ್ದೇಶಕರಾದ ಮಾದಿಹಳ್ಳಿ ಪ್ರಕಾಶ್ ಕೃಷ್ಣಕುಮಾರ್,ಮಹಾಲಿಂಗಯ್ಯ,ಶಿವಪ್ರಕಾಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದರು