ತುಮಕೂರು ಜಿಲ್ಲೆ ತಿಪಟೂರು ನಗರದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಿಂದ 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ತಿಪಟೂರು ತಹಸೀಲ್ದಾರ್ ಪವನ್ ಕುಮಾರ್ ಚಾಲನೆ ನೀಡಿದರು.

ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿ
ಪ್ರತಿಯೊಬ್ಬರು ರಸ್ತೆ ಸುರಕ್ಷತಾ ನಿಯಮಗಳನ್ನ ಪಾಲಿಸಬೇಕು, ಕಡ್ಡಾಯವಾಗಿ ಸಾರಿಗೆ ಇಲಾಖೆಯ ನಿಯಮಗಳನ್ನ ಪಾಲನೆ ಮಾಡಿದರೆ ಅಪಘಾತ ಹಾಗೂ ಅಪಾಯಗಳು ಕಡಿಮೆಯಾಗುತ್ತವೆ.
ರಸ್ತೆ ಸುರಕ್ಷತಾ ನಿಯಮಗಳನ್ನ ಪಾಲಿಸಿ ನೀವೂ ಸುರಕ್ಷಿತವಾಗಿರಿ.
ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಅಪಘಾತದಲ್ಲಿ ಸಾವನ್ನಪ್ಪಿರುವ ಬಹುತೇಕ ಸಾವುಗಳಲ್ಲಿ ಹೆಲ್ಮೆಟ್ ಧರಿಸದೆ, ತಲೆಗೆ ಪೆಟ್ಟುಬಿದ್ದು ಸಾವನ್ನಪ್ಪಿರುವ ಘಟನೆಗಳೆ ಜಾಸ್ತಿ ಆದರಿಂದ ಪ್ರತಿಯೊಬ್ಬರು ಸುರಕ್ಷತೆಗೆ ಆಧ್ಯತೆ ನೀಡಬೇಕು, ನಿಮ್ಮ ಅಜಾಗರೂಕತೆ ನಿಮ್ಮ ಇಡೀ ಕುಟುಂಬದ ಸಂಕಟಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಭಗವಾನ್ ದಾಸ್ ಮಾತನಾಡಿ ಪ್ರತಿಯೊಬ್ಬ ನಾಗರೀಕರು ರಸ್ತೆ ಸುರಕ್ಷತಾ ನಿಯಮಗಳನ್ನ ಪಾಲಿಸ ಬೇಕು, ಸರ್ಕಾರದ ನಿಯಮಗಳು ಸಾರ್ವಜನಿಕ ರಕ್ಷಣೆಗೆ ಇರುವುದು, ಜವಾಬ್ದಾರಿ ಅರಿತು ವಾಹನ ಚಲಾಯಿಸಿದರೆ ಅಪಘಾತಗಳು ಕಡಿಮೆಯಾಗುತ್ತವೆ, ಪ್ರತಿಯೊಬ್ಬರು ಕಡ್ಡಾಯವಾಗಿ ವಾಹನಗಳ ದಾಖಲೆಗಳನ್ನ ಇಟ್ಟುಕೊಳ್ಳಬೇಕು, ಅಪಘಾತಗಳು ಅಕಸ್ಮಿಕವಾಗಿ ವಾಹನಗಳ ಇನ್ಸುರೆನ್ಸ್ ಮಾಡಿಸಿಕೊಳ್ಳಿ ಅಪಘಾತ ,ಸಂಕಷ್ಟದ ಸಮಯದಲ್ಲಿ ನಿಮಗೆ ನಿಮ್ಮ ಕುಟುಂಬಕ್ಕೆ ನೆರವಾಗುತ್ತವೆ ಎಂದು ತಿಳಿಸಿದರು
ಸಪ್ತಾಹದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕುಮಾರ್ ಆಸ್ಪತ್ರೆ ವೈದ್ಯಾಧಿಕಾರಿ ಡಾ//ಶ್ರೀಧರ್ ಮಾತನಾಡಿ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ, ಅಪ್ರಾಪ್ತ ಮಕ್ಕಳಿಗೆ ವಾಹನಗಳನ್ನ ಚಲಾಯಿಸಲು ಕೊಡಬೇಡಿ,ಮಕ್ಕಳು ಅಪಘಾತಕ್ಕೆ ಒಳಗಾದರೆ ಪೋಷಕರು ತೊಂದರೆ ಸಿಲುಕಬೇಕಾಗುತ್ತದೆ, ಎಲ್ಲರೂ ಕಡ್ಡಾಯವಾಗಿ ಇನ್ಸುರೇನ್ಸ್ ಮಾಡಿಸಿಕೊಳ್ಳ ಬೇಕು ಕಷ್ಟಕಾಲದಲ್ಲಿ ಸಮಸ್ಯೆಯಿಂದ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಎಆರ್ ಟಿಒ ಇನ್ಪೆಕ್ಟರ್ ಕಿರಣ್,ತಿಪಟೂರು ನಗರಠಾಣೆ ಸರ್ಕಲ್ ಇನ್ಪೆಕ್ಟರ್ ವೆಂಕಟೇಶ್,ಸಬ್ ಇನ್ಪೆಕ್ಟರ್ ಡಿ.ಕೃಷ್ಣಪ್ಪ,ಸರ್ಕಾರಿ ಬಾಲಕರ ಪದವಿ ಪೂರ್ವಕಾಲೇಜು ಪ್ರಾಚಾರ್ಯ ಶಿವಕುಮಾರ್ ತಾಲ್ಲೋಕು ಆರೋಗ್ಯಾಧಿಕಾರಿ ಕುಸುಮಾ ಮುಂತ್ತಾದವರು ಉಪಸ್ಥಿತರಿದರು
ಶಾಲಾಮಕ್ಕಳು ಹಾಗೂ ಡ್ರೈವಿಂಗ್ ಸ್ಕೂಲ್ ಗಳಿಂದ ಜಾಥ ನಡೆಸಲಾಯಿತು.
ವರದಿ :ಮಂಜುನಾಥ್ ಹಾಲ್ಕುರಿಕೆ

