ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಭೂತಪೂರ್ವ ಜಯಭೇರಿಗಳಿಸಿದ ಹಿನ್ನೆಲೆ, ತಿಪಟೂರು ನಗರದ ನಗರಸಭಾ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು.
ಸಂಭ್ರಮಾಚರಣೆಯಲ್ಲಿ ಕಾರ್ಯಕರ್ತರನ್ನ ಉದೇಶಿಸಿ ಮಾತನಾಡಿದ ಮಾಜಿ ಸಚಿವ ಬಿ.ಸಿ ನಾಗೇಶ್ ದೆಹಲಿ ಸರ್ಕಾರದ ಭ್ರಷ್ಟಚಾರ ಹಾಗೂ ಜನವಿರೋಧ ಆಡಳಿತಕ್ಕೆ ಜನ ತಕ್ಕ ಉತ್ತರ ನೀಡಿದ್ದಾರೆ, ಇಬ್ಬರು ಮುಖ್ಯಮಂತ್ರಿಗಳಿಗೆ ಸೋಲು ನೀಡುವ ಮೂಲಕ,ಬಿಜೆಪಿ ಹೋರಾಟಕ್ಕೆ ಮನ್ನಣೆ ನೀಡಿದ್ದಾರೆ,ಅಭ್ಕಾರಿ ಹಗರಣ ಸೇರಿದಂತೆ ಹಲವಾರು ಹಗರಣದಲ್ಲಿ ಭಾಗಿಯಾದ ಎಲ್ಲರಿಗೂ ಮನೆದಾರಿತೋರಿದ್ದಾರೆ,ಬಿಜೆಪಿ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ನಂಬಿಕೆ ಇಟ್ಟು ಕೆಲಸ ಮಾಡಿ ಉತ್ತಮ ಫಲಿತಾಂಶ ಬಂದೇಬರುತ್ತದೆ.ಕರ್ನಾಟಕದಲ್ಲಿಯೂ ಸಹ ಸರ್ಕಾರ ಇದೆಯೋ ಇಲ್ಲವೋ ಎನ್ನುವುದೇ,ಜನಕ್ಕೆ ಗೊತ್ತಾಗದಂತ್ತಾಗಿದೆ,ರಾಜ್ಯಸರ್ಕಾರದ ಜನವಿರೋಧಿ ಆಡಳಿತಕ್ಕೆ ಜನ ತಕ್ಕಪಾಠ ಕಲಿಸುವ ಕಾಲದೂರವಿಲ್ಲ,ಎಂದು ತಿಳಿಸಿದರು ಸಂಭ್ರಮಾಚರಣೆಯಲ್ಲಿ ಬಿಜೆಪಿ ಅಧ್ಯಕ್ಷ ಸತೀಶ್, ನಗರಾಧ್ಯಕ್ಷ ಜಗದೀಶ್,ಮುಖಂಡರಾದ ಗಂಗರಾಜು,ಪ್ರಸನ್ನ ಕುಮಾರ್,ಹರಿಸಮುದ್ರ ಗಂಗಾಧರ್,ಬಿಸ್ಲೇಹಳ್ಳಿ ಜಗದೀಶ್,ಕರಡಿದೇವರಾಜು,ಬಳ್ಳೆಕಟ್ಟೆ ಸುರೇಶ್,ಗುಲಾಬಿ ಸುರೇಶ್,ಹಾಲ್ಕುರಿಕೆ ನಾಗರಾಜು,ನಗರಸಭಾ ಸದಸ್ಯರಾದ ಪದ್ಮತಿಮ್ಮೆಗೌಡ,ಮುಂತ್ತಾದವರು ಉಪಸ್ಥಿತರಿದರು.
ತಿಪಟೂರು: ತಿಪಟೂರು ತಾಲ್ಲೂಕಿನ ಕಸಬಾ ಹೋಬಳಿಯ ಗೌಡನಕಟ್ಟೆ ಗ್ರಾಮದ ಶ್ರೀ ಬಿದಿರಾಂಬಿಕಾ ದೇವಿಗೆ ಸುವರ್ಣ ಮುಖಭಾವವನ್ನು (ಚಿನ್ನ ಲೇಪಿತ) ಸಮರ್ಪಣೆ ಮಾಡಲಾಯಿತು. ಎಮ್.ಆರ್ ಶಿವರುದ್ರಶಾಸ್ತಿç ಪೂಜಾ ಕೈಂಕರ್ಯದೊAದಿಗೆ ಗುಡಿಗೌಡ ಜಿ.ಪಿ ರಾಜು ಮುಖಂಡತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಹಾಲಿನ ಬಾಕಿ ಪಾವತಿ ಮಾಡಬೇಕು ಹಾಗೂ ಹಾಲಿನ ದರ ಹೆಚ್ಚಳಕ್ಕೆ ಒತ್ತಾಯಿಸಿ,ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೆಎಂಎಫ್ ಕೇಂದ್ರ ಕಚೇರಿಮುಂಭಾಗ ಬೃಹತ್ ಪ್ರತಿಭಟನೆ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ತಿಪಟೂರು ನಗರದ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಶಾಖೆ ಕಚೇರಿಯಲ್ಲಿ ಪತ್ರಿಕಾ ಘೋಷ್ಟಿ ಉದೇಶಿಸಿ ಕರ್ನಾಟಕ ರಾಜ್ಯ ರೈತಸಂಘದ ತಾಲ್ಲೂಕು ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ ಮಾತನಾಡಿ ರಾಜ್ಯಸರ್ಕಾರ ಹಾಲಿಗೆ ನೀಡುವ ಪ್ರೋತ್ಸಾಹ ಧನ ನೀಡದೆ, ರೈತರನ್ನ ನಿರ್ಲಕ್ಷ್ಯ ಮಾಡುತ್ತಿದೆ,ಕೃಷಿ ಉಪಕರಣಗಳ ವೆಚ್ಚ ಹಾಗೂ ಹೈನು ನಿರ್ವಹಣಾ,ವೆಚ್ಚ ಹೆಚ್ಚಳವಾಗುತ್ತಿದ್ದು,ಹೈನುಗಾರರುಸಂಕಷ್ಟಎದುರಿಸುವಂತ್ತಾಗಿದೆ,
ರೈತರ ಉಪಕಸುಬಾದ ಹೈನುಗಾರಿಕೆ ಕರ್ನಾಟಕ ಸಹಕಾರಿ ಕ್ಷೇತ್ರದಲ್ಲಿ ಯಶಸ್ವಿಯಾಗಿ ನಾಡಿನ ಜನತೆಗೆ ಉತ್ತಮ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನೀಡುತ್ತಾ ಬೃಹತ್ ಉದ್ಯಮವಾಗಿ ಬೆಳೆದು ಸಾವಿರಾರು ಜನರಿಗೆ ಉದ್ಯೋಗವನ್ನು ಸೃಷ್ಟಿಸಿ ದೇಶದಲ್ಲಿ ನಂದಿನಿ ಬ್ರಾಂಡ್ ಹೆಸರಿನಲ್ಲಿ ಚಿರಪರಿಚಿತವಾಗಿದೆ. ಆಡಳಿತ ಮಂಡಳಿಯ ಅವೈಜ್ಞಾನಿಕ ನಿರ್ಧಾರ. ನೌಕರಶಾಹಿಯ ನಿರ್ಲಕ್ಷತನ, ಅನಾವಶ್ಯಕ ದುಂದುವೆಚ್ಚ, ರಾಜಕೀಯ ಹಸ್ತಕ್ಷೇಪ, ಮುಂತಾದ ಕಾರ್ಯಗಳಿಂದ ಈ ಬೃಹತ್ ಉದ್ದಿಮೆಯನ್ನ ಶೋಷಣೆ ಮಾಡುವ ಮೂಲಕ ಅವನತಿಯ ಹಾದಿ ಹಿಡಿಯುತ್ತಿರುವುದು, ದುರಂತದ ಸಂಗತಿ, ಬರಗಾಲ ಮೇವಿನ ಕೊರತೆ, ಕಾಲುಬಾಯಿ ಜ್ವರ, ಚರ್ಮಗಂಟು ರೋಗ, ಹೆಚ್ಚಲು ಬಾವು, ಗರ್ಭ ಧರಿಸದೇ ಇರುವುದು. ಮುಂತಾದ ರೋಗಗಳಿಂದ ಹಾಲು ಉತ್ಪಾದಕರ ಆರ್ಥಿಕ ಸ್ಥಿತಿ ಅದೋಗತಿಯಾಗಿದೆ, ಬಾಟಲ್ ನೀರಿಗೆ ನೀಡುವ ಬೆಲೆ ಹಾಲಿಗಿಲ್ಲ, ಹಾಲು ತರಕಾರಿ ಹಾಗೂ ರೈತರ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರೆಯದೆ ನಿರಂತರ ಸಾವು ಬದುಕಿನ ನಡುವೆ ಜೀವನ ಸಾಗಿಸುತ್ತಿದ್ದಾರೆ. ದೇಶದ ಯಾವುದೇ ರಾಜ್ಯದಲ್ಲಿ ಇಷ್ಟು ಕಡಿಮೆ ಬೆಲೆ ಹಾಲಿಗೆ ಇರುವುದಿಲ್ಲ. ರೈತರು ಸಾಲಸೂಲಮಾಡಿ ಹಸುಗಳನ್ನು ಖರೀದಿಸಿ ದುಬಾರಿ ಬೆಲೆಗೆ ಹಿಂಡಿ, ಬೂಸ ಮತ್ತು ಪಶು ಆಹಾರಗಳನ್ನು ಖರೀದಿಸಿ ಪುಕ್ಕಟೆ ಹಾಲು ನೀಡಿದಂತಾಗಿದೆ. ಸತತ ನಷ್ಟಕ್ಕೆ ಒಳಗಾಗುತ್ತ ಸಾವಿರಾರು ರೈತರು ಹೈನು ಉದ್ಯಮದಿಂದ ಹಿಂದೆ ಸರಿಯುವಂತಾಗುತ್ತಿದೆ. ಆದ್ದರಿಂದ ಈ ಎಲ್ಲಾ ಶೋಷಣೆಗೆ ಕಾರಣವಾದ ನೀತಿ ನಿರ್ದಾರಗಳನ್ನು ಪರಿಪಡಿಸಲು ಮತ್ತು ಹಾಲಿಗೆ ವೈಜ್ಞಾನಿಕ ಬೆಲೆಯನ್ನು ನಿಗದಿಪಡಿಸುವಂತೆ ಒತ್ತಾಯಿಸಲು ಸಾವಿರಾರು ಹಾಲು ಉತ್ಪಾದಕರು ಪಾಲ್ಗೊಳ್ಳುವ ಮೂಲಕ ಈ ಬೃಹತ್ ಉದ್ಯಮವನ್ನು ಸರಿಯಾಗಿ ಮುನ್ನಡೆಸಬೇಕಾಗದೆ, ರೈತರು ಸರಬರಾಜು ಮಾಡುವ ಪ್ರತಿ ಲೀಟರ್ ಹಾಲಿಗೆ ಕನಿಷ್ಠ 50 ರೂ. ನಿಗದಿಪಡಿಸಬೇಕು.ಪಶುಆಹಾರದ ಬೆಲೆಯನ್ನು ಕಡಿಮೆ ಮಾಡಿ ಹೆಚ್ಚಿನ ಸಹಾಯಧನ ನೀಡಬೇಕು. ಪಶುಆಹಾರಕ್ಕೆ ಬಳಸುವ ಮೆಕ್ಕೆಜೋಳವನ್ನು ರೈತರಿಂದಲೇ ನೇರವಾಗಿಖರೀದಿಸಬೇಕು.ಸ್ಥಳೀಯ ಹಾಲು ಮಾರಾಟಕ್ಕೆ ವಿಧಿಸುವ ಲೇವಿಯನ್ನು ರದ್ದುಗೊಳಿಸಬೇಕು. ಸರ್ಕಾರ ನೀಡುವ ಪ್ರೋತ್ಸಾಹಧನ ರೂ.5 ಗಳಿಂದ 10 ರೂಪಾಯಿಗೆ ಹೆಚ್ಚಿಸಬೇಕು. ಹಾಲಿನ ಬೆಲೆ ನಿಗಧಿಯಲ್ಲಿ ಒಕ್ಕೂಟಗಳು ಸ್ವತಂತ್ರವಾಗಿರಬೇಕು. ಗರಿಷ್ಠ ವೇತನಮಿತಿ ನಿಯಮ ಜಾರಿಮಾಡಬೇಕು.ಈ ಸಂಸ್ಥೆಯ ನೇಮಕಾತಿಯಲ್ಲಿ ಹಾಲು ಉತ್ಪಾದಕರ ಮಕ್ಕಳಿಗೆ ಮಾತ್ರ ಸೀಮಿತವಾಗಿರಬೇಕು.ಸ್ಥಳೀಯ ಪ್ರಾಥಮಿಕ ಸಹಕಾರಿ ಸಂಘಗಳ ನೌಕರರನ್ನು ಒಕ್ಕೂಟದ ನೌಕರರೆಂದು ಪರಿಗಣಿಸಬೇಕು. ಬಾಕಿ ಇರುವ ಸಹಾಯಧನ ಬಾಬು 620 ಕೋಟಿ ಕೂಡಲೇ ಬಿಡುಗಡೆ ಮಾಡಬೇಕು.ಒತ್ತಾಯಿಸಿದರು ಪತ್ರಿಕಾ ಘೋಷ್ಠಿಯಲ್ಲಿ ರೈತ ಸಂಘದ ಕಾರ್ಯದರ್ಶಿ, ಉಮಾಶಂಕರ್ ತಿಮ್ಮಲಾಪುರ ರೇಣುಕಮೂರ್ತಿ,ಸಂಘಟನಾ ಕಾರ್ಯದರ್ಶಿ ತಿಮ್ಮಯ್ಯ ಕೆ.ಸಿ.ಗಿರೀಶ್ ನೆಲ್ಲಿಕೆರೆ,ಕಾಂತರಾಜು ಬಿ. ಮಲ್ಲೇನಹಳ್ಳಿ, ಆರ್.ಡಿ. ಯೋಗಾನಂದಸ್ವಾಮಿ ಮುಂತ್ತಾದವರು ಉಪಸ್ಥಿತರಿದರು.
ತಿಪಟೂರು: ತಾಲ್ಲೂಕಿನಲ್ಲಿ ವಿವಿಧ ಕಡೆದ ಅಪಘಾತದಲ್ಲಿ ಐವರು ದುರ್ಮರಣಹೊಂದಿರುವ,ಘಟನೆ ನಡೆದಿದ್ದು, ತಿಪಟೂರು ತಾಲ್ಲೂಕಿನ ನೊಣವಿನಕೆರೆ ಹೋಬಳಿ ಆಲ್ಬೂರು ಕೆರೆ ಏರಿಯ ಮೇಲೆ ಬೈಕ್ ಗೆ ಕೆ.ಎಸ್ ಆರ್ ಟಿ ಸಿ ಬಸ್ ಡಿಕ್ಕಿ ಹೊಡೆದು,ಬೈಕ್ ಸವಾರರು ಸ್ಥಳದಲ್ಲೆ ಮೃತಪಟ್ಟ. ತುರುವೇಕೆರೆ ಮಡಿವಾಳ ಬೀದಿ ವಾಸಿ ಯೋಗೇಶ್ (24)ಬಿನ್ ಬಸವರಾಜು, ಮೆಕ್ಯಾನಿಕ್ ಕೆಲಸ ಹಾಗೂ ದಯಾನಂದ (23) ಬಿನ್ ಶ್ರೀನಿವಾಸ್ ವೆಲ್ಡಿಂಗ್ ಕೆಲಸ. ಇಬ್ಬರು ನೊಣವಿನಕೆರೆಯಿಂದ ತುರುವೇಕೆರೆ ನಗರಕ್ಕೆ ತೆರಳುವಾಗ ಆಲ್ಬೂರು ಕೆರೆ ಏರಿ ಮೇಲೆ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಖಾದರ್ ಭೇಟಿ ನೀಡಿದ್ದು ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಾಳಮ್ಮಗುಡ್ಡದ ಅಯ್ಯನ ಕೆರೆಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು ತಿಪಟೂರು ತಾಲ್ಲೋಕು ಹೊನ್ನವಳ್ಳಿ ಹೋಬಳಿ ಪ್ರಸಿದ್ದ ಯಾತ್ರಾಕ್ಷೇತ್ರ ಕಾಳಮ್ಮನ ಬೆಟ್ಟದ ಅಯ್ಯನ ಕೆರೆಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು. ತಿಪಟೂರು ತಾಲ್ಲೋಕಿನ ಬೊಮ್ಮೆನಹಳ್ಳಿ, ತಾಂಡ್ಯಾ ನಿವಾಸಿ ಮಂಜಾನಾಯ್ಕ ಬಿನ್ ಲಕ್ಷ್ಮಾನಾಯ್ಕ 45 ವರ್ಷ ಮೃತ ದುರ್ದೈವಿ ಸ್ಥಳಕ್ಕೆ ಹೊನ್ನವಳ್ಳಿ ಪೊಲೀಸ್ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಪೊಲೀಸರು ಭೇಟಿ ನೀಡಿದ್ದು ಶವಪತ್ತೆಗಾಗಿ ಹುಡುಕಾಟ ಕೈಗೊಳ್ಳಲಾಗಿದೆ. ತಿಪಟೂರು ತಾಲ್ಲೋಕಿನ ಕಸಬಾ ಹೋಬಳಿ ತಡಸೂರು ಗೇಟ್ ಬಳಿ KA 44 U 2575 ಹೋಡಾ ಆಕ್ಟೀವಾ ಬೈಕ್ ಗೆ KA06 MB 4308 ಕಾರು ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ. ತಾಲ್ಲೋಕಿನ ಸಿದ್ದರಾಮೇದೇವರ ಪಾಳ್ಯ ನಿವಾಸಿ ಕಾಶಿನಾಥ್ ಬಿನ್ ದೊಡ್ಡಶಂಕರಯ್ಯ 71 ವರ್ಷ ಮೃತದುರ್ದೈವಿ, ಸ್ಥಳಕ್ಕೆ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.ವರದಿ
ತಿಪಟೂರು ತಾಲ್ಲೂಕಿನ ಅರಳಗುಪ್ಪೆ ಗ್ರಾಮದ ಅರಳಗುಪ್ಪೆ ಪ್ರಾಥಮಿಕ ಕೃಷಿ ಸಹಕಾರ ಸಂಘದ ನಿರ್ದೇಶಕಿ ಪಾರ್ವತಮ್ಮ ತಮ್ಮ ಆಕ್ಟೀವಾ ಬೈಕ್ ನಲ್ಲಿ ತೆರಳುವಾಗ ನಿಯಂತ್ರಣತಪ್ಪಿ ಕೆಳಕ್ಕೆ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಸ್ಥಳದಲ್ಲೆ ಮೃತಪಟ್ಟಿರುತ್ತಾರೆ. ಒಂದೇ ದಿನ ಐದು ಸಾವು ಸಂಭವಿಸಿದ್ದು, ಕಾರಾಳ ಶುಕ್ರವಾರವಾಗಿದೆ.
ತಿಪಟೂರು ತಾಲ್ಲೋಕು ಹೊನ್ನವಳ್ಳಿ ಹೋಬಳಿ ಪ್ರಸಿದ್ದ ಯಾತ್ರಾಕ್ಷೇತ್ರ ಕಾಳಮ್ಮನ ಬೆಟ್ಟದ ಅಯ್ಯನ ಕೆರೆಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ
. ತಿಪಟೂರು ತಾಲ್ಲೋಕಿನ ಬೊಮ್ಮೆನಹಳ್ಳಿ, ತಾಂಡ್ಯಾ ನಿವಾಸಿ ಮಂಜಾನಾಯ್ಕ ಬಿನ್ ಲಕ್ಷ್ಮಾನಾಯ್ಕ 45 ವರ್ಷ ಮೃತ ದುರ್ದೈವಿ ಸ್ಥಳಕ್ಕೆ ಹೊನ್ನವಳ್ಳಿ ಪೊಲೀಸ್ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಪೊಲೀಸರು ಭೇಟಿ ನೀಡಿದ್ದು ಶವಪತ್ತೆಗಾಗಿ ಹುಡುಕಾಟ ಮುಂದುವರೆದಿದೆ.
ತಿಪಟೂರು ತಾಲ್ಲೋಕಿನ ನೊಣವಿನಕೆರೆ ಹೋಬಳಿ ಆಲ್ಬುರು ಕೆರೆ ಏರಿ ಮೇಲೆ ಬೈಕ್ ಗೆ ಕೆ.ಎಸ್ ಆರ್ ಟಿ ಸಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ತುರುವೇಕೆರೆ ಟೌನ್ ವಾಸಿ ಯೋಗೇಶ್ ಬಿನ್ ಬಸವರಾಜು, ಮೆಕ್ಯಾನಿಕ್ ಕೆಲಸ ಹಾಗೂ ದಯಾನಂದ ಬಿನ್ ಶ್ರೀನಿವಾಸ್ ವೆಲ್ಡಿಂಗ್ ಕೆಲಸ ಇಬ್ಬರು ಬೈಕ್ ನಲ್ಲಿ ತೆರಳುವಾಗ ಆಲ್ಬೂರು ಕೆರೆ ಏರಿಮೇಲೆ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ ಹೊಡೆದಪರಿಣಾಮ ಬೈಕ್ ಸವಾರರಿಬ್ಬರು ಸಾವನ್ನಪ್ಪಿರುತ್ತಾರೆ.ಸ್ಥಳಕ್ಕೆ ನೊಣವಿನಕೆರೆ ಪೊಲೀಸರು ಭೇಟಿ ನೀಡಿಪರಿಶೀಲನೆ ನಡೆಸಿದ್ದು.ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಗುಬ್ಬಿ: ತಾಲೂಕಿನ ಕಡಬಾ ಹೋಬಳಿಯ ಬಾಡೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿಭಿನ್ನ ವಿಜ್ಞಾನದ ಉಷ್ಣ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಪ್ರಯೋಗಕ್ಕೆ ವಿದ್ಯಾರ್ಥಿಗಳು ಬಹುಮಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸದರಿ ಶಾಲೆಯ ಸಹ ಶಿಕ್ಷಕಿ ಇಂದು ಶ್ರೀ ಮಾತನಾಡಿ ಇಂದಿನ ದಿನಮಾನಗಳಲ್ಲಿ ತ್ಯಾಜ್ಯಗಳ ನಿರ್ವಹಣೆಯ ಸಾಹಸವಾಗಿರುತ್ತದೆ, ನಮ್ಮ ಈ ಶಾಲೆಯ ಪ್ರಯೋಗವನ್ನು ದೊಡ್ಡ ಮಟ್ಟದಲ್ಲಿ ತ್ಯಾಜ್ಯಗಳನ್ನು ಉಪಯೋಗಿಸಿ ಬಳಸುವುದರಿಂದ ತ್ಯಾಜ್ಯದಿಂದ ವಿದ್ಯುತ್ತನ್ನು ಪರಿವರ್ತಿಸಬಹುದಾಗಿದೆ ಅಲ್ಲದೆ ಸೋಲಾರ್ ತಂತ್ರಜ್ಞಾನಕ್ಕಿಂತ ಆರ್ಥಿಕವಾಗಿ ಸಡಿಲ ವಾಗಿರುತ್ತದೆ ಇದರಿಂದ ತ್ಯಾಜ್ಯ ವಿಲೇವಾರಿ ಸುಧಾರಿಸಬಹುದಾಗಿದೆ ಎಂದರು ಶಾಲೆಯ ವಿದ್ಯಾರ್ಥಿ ದಿವ್ಯ ಮಾತನಾಡಿ ನಮ್ಮ ಶಾಲೆಯ ಶಿಕ್ಷಕರು ಈ ಪ್ರಯೋಗ ಮಾಡಲು ಮಾರ್ಗದರ್ಶನವನ್ನು ನೀಡಿದ್ದಾರೆ ತ್ಯಾಜ್ಯವನ್ನ ವಿದ್ಯುತ್ ತಯಾರಿಸಬಹುದು ಎಂಬ ವಿಷಯವನ್ನು ಈ ಪ್ರಯೋಗದಿಂದ ಕಲಿತಿದ್ದೇನೆ ಎಂದರು.
ತಿಪಟೂರು ನಗರದ ದೊಡ್ಡಪೇಟೆ ಶ್ರೀ ಪಾಂಡುರಂಗಸ್ವಾಮಿ ದೇವಾಲಯದಲ್ಲಿ ಶ್ರೀ ಭಾವಸಾರ ಕ್ಷತ್ರಿಯದೈವಮಂಡಳಿ,ಹಾಗೂ ಶ್ರೀ ಭಾವಸಾರ ಕ್ಷತ್ರಿಯ ಭಜನಾ ಮಂಡಳಿಯಿಂದ 44 ನೇ ದಿಂಡೀ ಉತ್ಸವ,ಶ್ರೀ ಹಿಂಗಲಾಂಬಿಕ ದೇವಿ ಹಾಗೂ ನವಗ್ರಹ ಪ್ರತಿಷ್ಠಾಪನೆ ಅದ್ದೂರಿಯಾಗಿ ನೆರವೇರಿಸಲಾಯಿತು.
ಶ್ರೀ ಹಿಂಗಲಾಂಬಿಕ ದೇವಿ ಹಾಗೂ ನವಗ್ರಹ ಪ್ರತಿಷ್ಠಾಪನೆ ಅಂಗವಾಗಿ ಶ್ರೀವಿಠಲರುಕುಮಾಯಿ,ಶ್ರೀಗಣಪತಿ,ಶ್ರೀ ದತ್ತಾತ್ರೇಯಸ್ವಾಮಿ ಯವರಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ನೆರವೇರಿಸಲಾಯಿತು.ನಂತರ ಪುಷ್ಪಲಂಕೃತ ಮಂಟಪದಲ್ಲಿ ಶ್ರೀಪಾಂಡುರಂಗರುಕ್ಮಾಯಿ ಉತ್ಸವ ಮೂರ್ತಿಯನ್ನ ಕೂರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಭಜನೆ ಯೊಂದಿಗೆ ಉತ್ಸವ ನಡೆಸಲಾಯಿತು.
ತುಮಕೂರು ಜಿಲ್ಲೆ ತಿಪಟೂರು ನಗರದ ತಾಲ್ಲೋಕು ಪಂಚಾಯ್ತಿ ಸಭಾಂಗಣದಲ್ಲಿ ತುಮಕೂರು ಲೋಕಾಯುಕ್ತ ಪೊಲೀಸ್ ವರೀಷ್ಠಾಧಿಕಾರಿ ಲಕ್ಷ್ಮಿನಾರಾಯಣ್ ಹಾಗೂ ಲೋಕಾಯುಕ್ತ ಡಿವೈಎಸ್ಪಿ ರಾಮಕೃಷ್ಣ ನೇತೃತ್ವದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಲಾಯಿತು
. ಸಭೆಯಲ್ಲಿ ಮಾತನಾಡಿದ ಲೋಕಾಯುಕ್ತ ಎಸ್.ಪಿ ಲಕ್ಷ್ಮೀನಾರಾಯಣ್, ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿ ಕೆಲಸ ಮಾಡಬೇಕು,ನಿಮ್ಮ ಹಂತದಲ್ಲಿ ಆಗುವಂತಹ ಕೆಲಸಗಳಿಗೆ,ಕಚೇರಿಗೆ ಅಲೆಸಬೇಡಿ,ಎಂದು ಸೂಚನೆ ನೀಡಿದರು, ತಿಪಟೂರು ನಗರಕ್ಕೆ ಕುಡಿಯುವ ನೀರುಪೂರೈಸುವ ಈಚನೂರು ಕೆರೆಗೆ ಯುಜಿಡಿ ನೀರು ಸೇರಿ ಕಲೂಷಿತವಾಗಿರುವ ಬಗ್ಗೆ ಪತ್ರಕರ್ತರ ಗಮನಸೆಳೆದಾಗ ಕಳವಳ ವ್ಯಕ್ತಪಡಿಸಿದ ಲೋಕಾಯುಕ್ತರು,ಸಾರ್ವಜನಿಕರು ಕುಡಿಯುವ ನೀರು ಜನರ ಜೀವದ ಜೊತೆ ಚೆಲ್ಲಾಟವಾಡಬೇಡಿ,ಅಡ್ವಾನ್ಸ್ ಟೆಕ್ನಾಲಜಿ ಬಳಸಿ,ಜಲಶುದ್ದಿಕರಣಕ್ಕೆ ಸೂಕ್ತ ಕ್ರಮಕೈಗೊಳ್ಳ ಬೇಕಾಗಿ ಪೌರಾಯುಕ್ತರಿಗೆ ಸೂಚನೆ ನೀಡಿದರು, ತಿಪಟೂರು ಉಪವಿಭಾಗ ಜೈಲು ನವೀಕರಣ ಮಾಡಲು ಸ್ಥಳಾಂತರ ಮಾಡಿದ್ದು,2018 ರಲ್ಲಿ ಆರಂಭವಾದ ನವೀಕರಣ ಕಾಮಗಾರಿ,ಇನ್ನೂ ಮುಗಿದಿಲ್ಲ ಎನ್ನುತ್ತಿದ್ದಾರೆ,ಲಕ್ಷಾಂತರ ರೂಪಾಯಿ ಸರ್ಕಾರಿ ಖಜಾನೆಹಣ ಸದುಪಯೋಗವಾಗಿಲ್ಲ,ತಿಪಟೂರಿನಿಂದ ಕೈದಿಗಳನ್ನ ಜೈಲಿಗೆ ಕರೆದುಕೊಂಡು ಹೋಗಲು,ಮತ್ತು ಜೈಲಿನಿಂದ ಕೋರ್ಟ್ ಗೆ ಕರೆತರಲು,ಕೊರತೆ ಸಿಬ್ಬಂದಿ ನಡುವೇ,ಪೊಲೀಸರು ಹರೆಸಾಹಸ ಪಡುವಂತ್ತಾಗಿದು,ಪೊಲೀಸರು ಅಪಾಯ ಹಾಗೂ ಆತಂಕದಲ್ಲಿ ಕರ್ತವ್ಯ ನಿರ್ವಹಿಸಬೇಕಿದೆ,ಎಂದು ಪತ್ರಕರ್ತರು ಪ್ರಶ್ನೆ ಮಾಡಿದ್ದಾಗ, ತುರ್ತಾಗಿ ಸಂಭಂದಿಸಿದ ಇಲಾಖೆಗೆ ಪತ್ರಬರೆದು ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಲಾಗುವುದು ಎಂದರು.
ತಿಪಟೂರು ತಾಲ್ಲೋಕಿನ ಕಿಬ್ಬನಹಳ್ಳಿ ಹೋಬಳಿ ಭದ್ರಾಪುರ ಬಳಿ ಪಲ್ಲಾಗಟ್ಟಿ ಅಡವಪ್ಪ ಟ್ರಸ್ಟ್ ಗೆ ಸೇರಿದ ಸುಮಾರು 180ಎಕರೆ ಜಮೀನನ್ನು ಕೆಲಪಟ್ಟಭದ್ರ ವ್ಯಕ್ತಿಗಳು ಕಬಳಿಸಲು ಸಂಚುರೂಪಿಸಿದ್ದು,1966 ರಲ್ಲಿ ಪಲ್ಲಾಗಟ್ಟಿ ಅಡವಪ್ಪನವರು 9ಜನ ಸೇರಿ ಟ್ರಸ್ಟ್ ನೋಂದಣಿ ಮಾಡಿಸಿದ್ದು ಸಾರ್ವಜನಿಕರ ಉಪಯೋಗಕ್ಕಾಗಿ ಭೂಮಿಯನ್ನ ಸಹ ಮಂಜೂರು ಮಾಡಿಸಿದರು, ಆದರೆ ಪಲ್ಲಾಗಟ್ಟಿ ಅಡವಪ್ಪನವರ ಕುಟುಂಬಕ್ಕೆ ಸಂಬಂದವಿಲ್ಲದ ಕೆಲವು ವ್ಯಕ್ತಿಗಳು ಅಕ್ರಮವಾಗಿ ಟ್ರಸ್ಟ್ ರಿನಿವಲ್ ಮಾಡಿಸಲು ಹೊರಟಿದ್ದಾರೆ, ಸಂಪೂರ್ಣವಾಗಿ ಮೂಲಬೈಲ ಉಲಂಗನೆ ಮಾಡಿದ್ದು, ನಿಯಮಬಾಹಿರ ಟ್ರಸ್ಟ್ ರಿನಿವಲ್ ನಲ್ಲಿ ತಿಪಟೂರು ಸಬ್ ರಿಜಿಸ್ಟರ್ ಶಾಮೀಲಾಗಿದ್ದು,ಕೂಡಲೇ ಟ್ರಸ್ಟ್ ರಿನಿವಲ್ ವಜಾಗೊಳಿಸಬೇಕು ಎಂದು ಭದ್ರಾಪುರ,ಸುತ್ತಮುತ್ತಲ ಗ್ರಾಮಸ್ಥರು ಲೋಕಾಯುಕ್ತರಿಗೆ ದೂರು ನೀಡಿದರು ತಿಪಟೂರು ನಗರದ ವಿವೇಕಾನಂದ ನಗರದಲ್ಲಿ ಅಕ್ರಮ ಮದ್ಯಮಾರಾಟ ರಾಜಾರೋಷವಾಗಿ ನಡೆಯುತ್ತಿದೆ ಪೊಲೀಸ್ ಹಾಗೂ ಅಬ್ಕಾರಿ ಇಲಾಖೆಗೆ ಮಾಹಿತಿ ನೀಡಿದರು ಕ್ರಮಕೈಗೊಂಡಿಲ್ಲ ಎಂದು ಲೋಕಾಯುಕ್ತರ ಮುಂದೆ ಚಂದ್ರಶೇಖರ್ ಎಂಬುವವರು ದೂರು ನೀಡಿ ತುರ್ತು ಕ್ರಮಕ್ಕೆ ಒತ್ತಾಯಿಸಿದರು.ಬೆಸ್ಕಾಂ ಇಲಾಖೆ ಯಿಂದ ರಾತ್ರಿವೇಳೆ ತೋಟದ ಮನೆಗಳಿಗೆ ಕರಂಟ್ ನೀಡುತ್ತಿಲ್ಲ,ಇದರಿಂದ ತೋಟದಮನೆವಾಸಿಗಳಿಗೆ ತೊಂದರೆಯಾಗುತ್ತಿದ್ದು ,ಸಮಸ್ಯೆ ಸರಿಪಡಿಸಬೇಕು ಎಂದು ಒತ್ತಾಯಿಸಲಾಯಿತು. ಸಾರ್ವಜನಿಕರಿಂದ ಹಲವಾರು ಸಮಸ್ಯೆಗಳ ಕುರಿತು ಅಹವಾಲು ಸ್ವೀಕರಿಸಲಾಯಿತು.ಸಭೆಯಲ್ಲಿ ತಿಪಟೂರು ಡಿವೈಎಸ್ಪಿ ವಿನಾಯಕ ಶೇಟ್ಟಿಗೇರಿ,ತಹಸೀಲ್ದಾರ್ ಪವನ್ ಕುಮಾರ್.ಇಒ ಸುದರ್ಶನ್,ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ,ಸೇರಿದಂತೆ ಲೋಕಾಯುಕ್ತರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದರು
ತಿಪಟೂರು ತಾಲ್ಲೋಕಿನ ಭದ್ರಪುರ ತಿಪಟೂರು ತಾಲ್ಲೋಕಿನ ಸಮಾಜಸೇವಕರಾದ ಪಲಾಘಟ್ಟಿ ಅಡವಪ್ಪ ಮತ್ತು 9ಜನ ಸೇರಿ ಫಲಾಗಟ್ಟಿ ಅಡವಪ್ಪ ಟ್ರಸ್ಟ್ ರಿಜಿಸ್ಟರ್ ಮಾಡಿದ್ದು ಈ ಟ್ರಸ್ಟ್ ಹೆಸರಿಗೆ ಸುಮಾರು 180 ಎಕರೆ ಜಮೀನು ಮಂಜೂರು ಮಾಡಿಸಿ,ಕಲ್ಪತರು ವಿದ್ಯಾ ಸಂಸ್ಥೆ ಸೇರಿದಂತೆ ಸಾರ್ವಜನಿಕ ಉಪಯೋಗಕ್ಕೆ ಮೀಸಲಿರಸಲಾಗಿತ್ತು 1966 ರಲ್ಲಿ ಆರಂಭವಾದ ಟ್ರಸ್ಟ್ ನ್ನು,ನಕಲಿ ದಾಖಲೆ ಸೃಷ್ಠಿಮಾಡಿ ಜಮೀನು ಕಬಳಿಸಲು ಸಂಚುರೂಪಿಸಲಾಗಿದೆ, ಎಂದು ಆರೋಪಿಸಿ ಭದ್ರಪುರ ಸುತ್ತಮುತ್ತಲ ಗ್ರಾಮಸ್ಥರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದರು.
ತಿಪಟೂರು ನಗರದ ತಾಲ್ಲೋಕು ಪಂಚಾಯ್ತಿ ಸಭಾಂಗಣದಲ್ಲಿ ಆಯೋಜಿಸಿದ ತುಮಕೂರು ಲೋಕಾಯುಕ್ತರ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ದೂರು ನೀಡಿದ ಭದ್ರಪುರ ಅರಳಗುಪ್ಪೆ ಸುತ್ತಮುತ್ತಲ ಗ್ರಾಮಸ್ಥರು 1966 ರಲ್ಲಿ ಫಲ್ಲಾಗಟ್ಟಿ ಚೆನ್ನವೀರಪ್ಪ ಅಡವಪ್ಪ ನವರು 9ಜನ ಆರಂಭಿಸಿದ ಫಲ್ಲಾ ಗಟ್ಟಿ ಅಡವಪ್ಪ ಟ್ರಸ್ಟ್, ಸಾರ್ವಜನಿಕರ ಉಪಯೋಗಕ್ಕಾಗಿ ಹಲವಾರು ಕಾರ್ಯಕ್ರಮ ರೂಪಿಸಿತ್ತು, ಆದರೇ ಟ್ರಸ್ಟ್ ನ ಎಲ್ಲಾ ಸದಸ್ಯರೂ ಮರಣಹೊಂದಿದರೂ,ಒಂದೇ ಕುಟುಂಬದ 9ಜನ ಸೇರಿ ಟ್ರಸ್ಟ್ ಜಮೀನು ಕಬಳಿಸುವ ದೃಷ್ಟಿಯಿಂದ ನಕಲಿ ದಾಖಲೆ ಸೃಷ್ಟಿ ಮಾಡಿ,ತಿದ್ದುಪಡಿ ಮಾಡಲಾಗಿದ್ದು, ತಿದ್ದುಪಡಿ ಕಾನೂನು ಬಾಹಿರವಾಗಿದೆ, ಅಲ್ಲದೆ ತಿಪಟೂರು ಸಬ್ ರಿಜಿಸ್ಟರ್ ಅಕ್ರಮದಲ್ಲಿ ಶಾಮೀಲಾಗಿರುತ್ತಾರೆ, ತಿಪಟೂರು ತಾಲ್ಲೋಕಿನ ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಟ್ಟ ಜಮೀನು ಕಬಳಿಸಲು ಸಂಚುರೂಪಿಸಲಾಗಿದ್ದು ಕೂಡಲೇ ಟ್ರಸ್ಟ್ ರಿನಿವಲ್ ವಜಾಗೊಳಿಸಬೇಕು, ಫಲ್ಲಾಗಟ್ಟಿ. ಅಡವಪ್ಪ ಟ್ರಸ್ಟ್ ಹೆಸರಿನಲ್ಲಿ ಇರುವ ಜಮೀನನ್ನು ಶಾಲಾಕಾಲೇಜು, ಆಸ್ಪತ್ರೆ ಸೇರಿದಂತೆ ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ದೂರು ನೀಡಿದ ಮುಖಂಡರಾದ ರೇಣುಕಮೂರ್ತಿ ಮಾತನಾಡಿ 1966 ರಲ್ಲಿ ನೋಂದಣಿಯಾದ ಮೂಲ ಟ್ರಸ್ಟ್ ಮೂಲ ಉದೇಶ ಮರೆಮಾಚಲಾಗಿದೆ, ಹಾಲಿ ರಿನಿವಲ್ ಮಾಡಿಕೊಂಡಿರುವ ಆರ್ ಎಸ್ ಉಮಮಹೇಶ್, ಹಾಗೂ ಅವರ ಧರ್ಮಪತ್ನಿ ಮಧು ಎಸ್,ಆರ್ ರವರ ಕುಟುಂಬಕ್ಕೂ ಫಲ್ಲಾಗಟ್ಟಿ ಅಡವಪ್ಪ ನವರ ಕುಟುಂಬಕ್ಕು ಯಾವುದೇ ಸಂಬಂದವಿರುವುದಿಲ್ಲ ಆದರೂ ಸಹ ಟ್ರಸ್ಟ್ ತಿದ್ದುಪಡಿ ಮಾಡಿರುವುದು, ಕಾನೂನು ಭಾಹಿರವಾಗಿದೆ,ಕೂಡಲೇ ತಿದ್ದುಪಡಿ ರದ್ದುಗೊಳಿಸಿ, 180ಎಕರೆ ಜಮೀನನ್ನ ಸಾರ್ವಜನಿಕ ಉದೇಶಕ್ಕೆ ಬಳಸಬೇಕು, ಹಾಗೂ ಪಲ್ಲಾಗಟ್ಟಿ ಅಡವಪ್ಪ ಕೆರೆಯನ್ನ ಸಾರ್ವಜನಿಕ ಬಳಕೆಗೆ ಅನುಕೂಲವಾಗಬೇಕು ಎಂದು ಒತ್ತಾಯಿಸಿದರು