Year: 2025

ತಿಪಟೂರು: ಮಾ.20ರಂದುತುಮಕೂರಿನಲ್ಲಿ
ನಡೆಯಲಿರುವಭಾರತದಅಸ್ಪಶ್ಯರಮೊದಲಪ್ರತಿರೋಧ ಚಳವಳಿ, ಮಹಾಡ್ ಕೆರೆ ಸತ್ಯಾಗ್ರಹದ
ನೆನಪು ಕಾರ್ಯಕ್ರಮವನ್ನ ಕರ್ನಾಟಕ ದಲಿತ
ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಆಯೋಜನೆ ಮಾಡಿದ್ದು ದಲಿತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಪಟೂರು ತಾಲೂಕು,ಸಂಚಾಲಕ ಗಡಬನಹಳ್ಳಿ ಚಂದ್ರಶೇಖರಯ್ಯ ತಿಳಿಸಿದರು


ನಗರದ ಕೌಸ್ತುಭ ಹೋಟೆಲ್ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು , ತುಮಕೂರಿನ ಜಿಲ್ಲಾ ಆಸ್ಪತ್ರೆಯಸಭಾಂಗಣದಲ್ಲಿ ಮಾ.20ರಂದು ನಡೆಯುತ್ತಿರುವಭಾರತದ ಅಸ್ಪೃಶ್ಯರ ಮೊದಲ ಪ್ರತಿರೋಧ ಚಳವಳಿಯ ನೆನಪು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ತಿಪಟೂರು ತಾಲೂಕಿನಾದ್ಯಂತ ದಲಿತ ಸಂಘಟನೆಗಳ ಮುಖಂಡರು,ಹಿರಿಯಮಹಿಳೆಯರು ಸೇರಿದಂತೆ ನೂರಾರು ಜನ ಭೀಮ ಬಂಧುಗಳುಈ ಮಹಾಡ್
ಸತ್ಯಾಗ್ರಹ ನೆನಪು ಕಾರ್ಯಕ್ರಮದಲ್ಲಿ. ಭಾಗಹಿಸುತ್ತಿದ್ದಾರೆ. ಮಹಾಡ್ ಕೆರೆ ಸತ್ಯಾಗ್ರಹ ಆಧುನಿಕ ಭಾರತದ ಇತಿಹಾಸದಲ್ಲೇಅತ್ಯಂತ ಮಹತ್ವವಾಗಿದ್ದು ಭಾರತದ ಮಟ್ಟದಲ್ಲಿದಲಿತ ಚಳವಳಿಗೆ ಅಡಿಪಾಯ ಹಾಕಿದ ಘಟನೆಎಂದು ಕರೆಯಲಾಗುತ್ತದೆ. ಬಾಬಾ ಸಾಹೇಬರುಈಮೂಲಕಮಾನವಹಕ್ಕುಗಳನ್ನುಎತ್ತಿಹಿಡಿದರು.1927ರಲ್ಲಿ ಬಾಬಾ ಸಾಹೇಬರು ಸಾರ್ವಜನಿಕಸ್ಥಳದಲ್ಲಿ ನೀರನ್ನು ಬಳಸುವ ಹಕ್ಕುಗಳನ್ನ,ಪ್ರತಿಪಾದಿಸಲು ಮಹಾಡ್ಆರಂಭಿಸಿದರು.ಸತ್ಯಾಗ್ರಹವನ್ನು1927 ಮಾ. 20 ರಂದು ಸಾವಿರಾರುಅಸ್ಪೃಶ್ಯರೊಂದಿಗೆ ಮಹಾಡ್ ಕೆರೆಗೆ ಹೋಗಿ ಅಲ್ಲಿನನೀರನ್ನು ಮುಟ್ಟುವುದರ ಮೂಲಕ ಮಾನವಹಕ್ಕುಗಳನ್ನು ಎತ್ತಿ ಹಿಡಿದರು. ಈ ನಿಟ್ಟಿನಲ್ಲಿಮಹಾಡ್ ಸತ್ಯಾಗ್ರಹ ಭಾರತ ಇತಿಹಾಸದಲ್ಲಿ
ಚಿರಸ್ಥಾಯಿಯಾಗಿ ಉಳಿಯಿತು. ಈ ಚಳವಳಿ
ನಡೆದು ಇಂದಿಗೆ 98 ವರ್ಷಗಳು ತುಂಬುತ್ತಿದೆ. 98
ವರ್ಷ ಕಳೆದರೂ ಕೂಡ ನೀರಿನ ವಿಷಯದಲ್ಲಿ, ಬಟ್ಟೆ
ವಿಷಯದಲ್ಲಿ ದಲಿತರ ವಿಷಯದಲ್ಲಿ ದಿನನಿತ್ಯ
ಕೊಲೆ ಸುಲಿಗೆ ಅತ್ಯಾಚಾರಗಳು ನಿರಂತರವಾಗಿ
ನಡೆಯುತ್ತಲೇ ಇವೆ. ದೇಶವು ಸಮಾನತೆಯ ಕಡೆಗೆ
ಎಲ್ಲಿ ನಡೆಯುತ್ತಿದೆ, ಬರೀ ಅಸಮಾನತೆಯ ದ್ವೇಷ
ವಿಕೃತಿಯ ಕಡೆಗೆ ನಡೆಯುತ್ತಿದೆ ಎಂಬುದನ್ನು
ತೋರುತ್ತಿದೆ ಎಂದರು.ಪತ್ರಿಕಾ ಘೋಷ್ಠಿಯಲ್ಲಿ ತಾಲ್ಲೋಕು ಸಂಘಟನಾ ಸಂಚಾಲಕ ಉಗ್ರನರಸಿಂಹಯ್ಯ, ಯಗಚೀಕಟ್ಟೆ. ಮಾತನಾಡಿ ತುಮಕೂರಿನಲ್ಲಿ ನಡೆಯುವ ಸತ್ಯಾಗ್ರಹ ನೆನಪು ಕಾರ್ಯಕ್ರಮಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ರಾಜ್ಯಸಮಿತಿ ಸದಸ್ಯ ಕುಂದೂರು ತಿಮ್ಮಯ್ಯ ಸೇರಿಅನೇಕ ಚಿಂತಕರು ಸಾಹಿತಿಗಳು ಸೇರಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು ಪತ್ರಿಕಾ ಘೋಷ್ಠಿಯಲ್ಲಿ ಮುಖಂಡರಾದ ಶಿವಪುರ ರಮೇಶ್,ಶೆಟ್ಟಿಹಳ್ಳಿ ಮಹೇಶ್,ಸೋಮಶೇಖರ್ ಈಚನೂರು, ಲಕ್ಕಿಹಳ್ಳಿ ತಿಮ್ಮಯ್ಯ, ಮಂಜುಳ ರಂಗಸ್ವಾಮಿ ಕುಪ್ಪಾಳು,ಚಿಗ್ಗಾವಿ ಲೋಕೇಶ್,ಮನೋಹರ್ ಕೆರೆಗೋಡಿ ಸೇರಿದಂತೆ ಅನೇಕರುಭಾಗವಹಿಸಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ತಾಲ್ಲೋಕಿನ .ನೊಣವಿನಕೆರೆ ಕೆರೆ ವ್ಯಾಪ್ತಿಯ ಅಚ್ಚುಕಟ್ಟುದಾರ ರೈತರ ತುತ್ತಿಗೆ ಕನ್ನಹಾಕಿ ತಿಪಟೂರು ನಗರಕ್ಕೆ ಕುಡಿಯವ ನೀರು ತೆಗೆದುಕೊಂಡು ಹೋಗಲು ಹೊರಟಿರುವಿದು,ಖಂಡನೀಯ ಎಂದು ನೊಣವಿನಕೆರೆ ಅಚ್ಚುಕಟ್ಟು ರೈತರು ಅಕ್ರೋಶ ವ್ಯಕ್ತಪಡಿಸಿದರು.


ನಗರದ ಖಾಸಗೀ ಹೋಟೆಲ್ ನಲ್ಲಿ ಪತ್ರಿಕಾ ಘೋಷ್ಠಿ ಉದೇಶಿಸಿ ಮಾತನಾಡಿದ ಎಸ್ ‌ವಿ, ಸ್ವಾಮಿ ನೊಣವಿನಕೆರೆ ಪುರಾತನ ಕಾಲದಿಂದಲ್ಲೂ ಕೃಷಿ ಮತ್ತು ಮೀನುಗಾರಿಕೆರೆ ಮೀಸಲಾಗಿರುವ ಕೆರೆ,ತಿಪಟೂರಿಗೆ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ,ಅಚ್ಚುಕಟ್ಟು ಪ್ರದೇಶ ಸಾವಿರಾರು ಜನ ರೈತರು ಬೈಲನ್ನೆ ಆಶ್ರಯಿಸಿದ್ದೇವೆ,ಆದರೆ ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿಯ ಪರಿಣಾಮ ಸೂಕ್ತ ನಿರ್ವಹಣೆ ಕೊರತೆಯಿಂದ,ಎಸ್.ಟಿ.ಪಿ ಘಟಕದ ನೀರು ಈಚನೂರು ಕೆರೆ ಸೇರಿ ನೀರು ಮಲೀನವಾಗಿದೆ,ತಿಪಟೂರು ಜನ ಕುಡಿಯುವ ಈಚನೂರು ಜಲಸಂಗ್ರಹಗಾರ ಕಲೂಷಿತದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮವಹಿಸಿ, ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿ ತಿಪಟೂರು ಜನರಿಗೆ ನೀರು ಪೂರೈಕೆ ಕಡೆ ಗಮನಹರಿಸಬೇಕು,ಅಥವಾ ತಿಪಟೂರಿಗೆ ನೀರು ಪೂರೈಸಲು ಹಲವಾರು ನೈಸರ್ಗಿಕಮಾರ್ಗೋಪಾಯಗಳಿದರು,ನೊಣವಿನಕೆರೆಯಿಂದ ತಿಪಟೂರಿಗೆ ನೀರು ತೆಗೆದುಕೊಂಡು ಹೋಗುತ್ತೇವೆ ಎಂದು ಹೊರಟಿರುವ ಶಾಸಕರ ನಡೆ ಸರಿಇಲ್ಲ, ಕೂಡಲೇ ನೊಣವಿನಕೆರೆ ಕೆರೆ ಹೊರತುಪಡಿಸಿ ,ಪರ್ಯಾಯ ಮಾರ್ಗಗಳ ಬಗ್ಗೆ ಪರಿಶೀಲನೆಮಾಡಬೇಕು,ನೊಣವಿನಕೆರೆ ಬೈಲು ಪ್ರದೇಶದ ಬಲದಂಡೆ ಹಾಗೂ ಎಡದಂಡೆ ಭಾಗದಲ್ಲಿ 4.5 ಮತ್ತು 6.6 ಕಿಲೋಮೀಟರ್ ಕಾಲುವೆಗಳಲ್ಲಿ 540.98 ಪ್ರದೇಶಕ್ಕೆ ನೀರು ಹರಿಸಿ ಭತ್ತಬೆಳೆಯಲು ಸಾಧ್ಯವಾಗಿದೆ,ನೊಣವಿನಕೆರೆ ಒಟ್ಟು ವಿಸ್ತೀರ್ಣ499.30 ಹೆಕ್ಟೇರ್, ನೀರು ಸಂಗ್ರಹಣ ಸಾರ್ಮರ್ಥ್ಯ349.91 ಎಂಸಿಎಫ್ಟಿ ,ಒತ್ತುವರಿ ಹಾಗೂ ಹೂಳುತುಂಬಿ ಸಂಗ್ರಹಣ ಸಾರ್ಮರ್ಥ್ಯ ಕುಸಿದಿದೆ,ತಿಪಟೂರು ನಗರಕ್ಕೆ ನೀರು ತೆಗೆದುಕೊಂಡು ಹೋದರೆ ನೊಣವಿನಕೆರೆ ಕೆರೆಯನ್ನೇ ಆಶ್ರಯಿಸಿರುವ,1600 ಹೆಕ್ಟೆರ್ ಅಚ್ಚುಕಟ್ಟು 1900 ಬಾಗಾಯ್ತು ಪ್ರದೇಶ ಹಾಗೂ ಅರೆಕಾಲಿಕ ಕೃಷಿ ಬೆಳೆಗಳಿಗೆ ನೀರು ಇಲ್ಲದಂತ್ತಾಗುತ್ತದೆ, ಸರ್ಕಾರ ಯಾವುದೇ ಕಾರಣಕ್ಕು ನೊಣವಿನಕೆರೆ ಕೆರೆಯಿಂದ ನೀರು ತೆಗೆದುಕೊಂಡು ಹೋಗುವ ನಿರ್ಧಾರ ಕೈ ಬಿಡಬೇಕು, ರೈತರ ಅನ್ನಕ್ಕೆ ಕಲ್ಲುಹಾಕುವ ಕೆಲಸಬಿಡಬೇಕು,ಹನಿ ನೀರನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ತಿಳಿಸಿದರು.
ರೈತಮುಖಂಡ ಬಸ್ತಿಹಳ್ಳಿ ರಾಜಣ್ಣ ರೈತರ ಬಾಯಿಗೆ ಮಣ್ಣುಹಾಕಿ ತಿಪಟೂರಿಗೆ ನೀರು ತೆಗೆದುಕೊಂಡು ಹೋಗುವ ಜಿಲ್ಲಾಡಳಿತದ ನಿರ್ಧಾರಕ್ಕೆ ರೈತರು ಅಚ್ಚುಕಟ್ಟುದಾರರ ಸಂಪೂರ್ಣ ವಿರೋಧವಿದೆ, ನಮ್ಮ ರಕ್ತಕೊಡುತ್ತೇವೆ ಹನಿ ನೀರುಕೊಡುವುದಿಲ್ಲ,ನಮ್ಮ ನೀರು ನಮ್ಮ ಹಕ್ಕು , ದೇಶಕ್ಕೆ ಅನ್ನ ನೀಡುವ ರೈತರ ಮೇಲೆ ದಬ್ಬಾಳಿಕೆಗೆ ಮುಂದಾದರೆ ಸರ್ಕಾರ ಪರಿಣಾಮ ಎದುರಿಸಬೇಕಾಗುತ್ತದೆ, ಹಿಂದಿನ ಸರ್ಕಾರ ಈಚನೂರು ಕೆರೆ ನೀರು 2030 ಇಸವಿ ವರೆಗೂ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗುವುದಿಲ್ಲ, ಈಚನೂರು ಕೆರೆ ನವೀಕರಣಗೊಳಿಸಿ ಕುಡಿಯುವ ನೀರು ಪೂರೈಸುತ್ತೇವೆ, ಯಾವುದೇ ಕಾರಣಕ್ಕೂ ನೊಣನಿನಕೆರೆ ಯೋಜನೆಗೆ ಕೈ ಹಾಕುವುದಿಲ್ಲ ಎಂದು ಕೋರ್ಟ್ ಗೆ ಅಫಿಡವಿಟ್ ನೀಡಿದೆ, ಆದರೆ ಈ ಸರ್ಕಾರ ಕುಡಿಯುವ ನೀರು ಪೂರೈಕೆ ಹೆಸರಿನಲ್ಲಿ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಪತ್ರಿಕಾ ಘೋಷ್ಠಿಯಲ್ಲಿ ರೈತ ಮುಖಂಡರಾದ ನೇತ್ರಾನಂದ,ವೃಷಬೇಂದ್ರ,ಜಯಶರ್ಮ,ಮುಂತ್ತಾದವರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

.

ತುರುವೇಕೆರೆ.ಪಟ್ಟಣದ ಹೃದಯ ಭಾಗದಲ್ಲಿರುವ ತಾಲೂಕು ಬಿಮೋತ್ಸವ ಆಚರಣ ಸಮಿತಿ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಭೆ ನಡೆಸಲಾಯಿತು,ದಿನಾಂಕ 20.03.2025 ನೇ ಗುರುವಾರ ತುಮಕೂರಿನ ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯುತ್ತಿರುವ ಭಾರತದ ಅಸ್ಪೃಶ್ಯರ ಮೊದಲ ಪ್ರತಿರೋಧ ಚಳುವಳಿ,ಮಹಾಡ್ ಸತ್ಯಾಗ್ರಹದ ನೆನಪಿನ ಕಾರ್ಯಕ್ರಮ ನಡೆಯಲಿದ್ದು,ದಲಿತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಡಿ‌ ಎಸ್.ಎಸ್ ಸಂಚಾಲ ಕೃಷ್ಣ ಮಾದಿಗ ಮಾತನಾಡಿ, ತುರುವೇಕೆರೆ ತಾಲೂಕಿನಾದ್ಯಂತ ಅತಿ ಹೆಚ್ಚು ಸಂಖ್ಯೆಯಲ್ಲಿ ಸಮುದಾಯದ ಹಿರಿಯ ಮತ್ತು ಕಿರಿಯ ಹಾಗೂ ಮಹಿಳಾ ಮಣಿಗಳು ಈ ಮಹಾಡ್ ಸತ್ಯಾಗ್ರಹದಲ್ಲಿ ಭಾಗವಹಿಸಲ್ಲಿದ್ದಾರೆ,ಅವರು ಭಾರತದ ಇತಿಹಾಸದಲ್ಲಿ ಅಸ್ಪೃಶ್ಯರ ಮೊದಲ ಪ್ರತಿರೋಧ ಚಳುವಳಿ ಮಹಾಡ್ ಸತ್ಯಾಗ್ರಹ ನೆನಪಿನ ಕಾರ್ಯಕ್ರಮ ನಡೆಯುತ್ತಿದ್ದು, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತುರುವೇಕೆರೆ ಶಾಖೆ ವತಿಯಿಂದಲೂ ಸುಮಾರು ನೂರಾರು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು ಮಹಾಡ್ ಸತ್ಯಾಗ್ರಹ ಆಧುನಿಕ ಭಾರತದ ಇತಿಹಾಸದಲ್ಲೇ ಅತ್ಯಂತ ಮಹತ್ವವಾದದ್ದು ಇದನ್ನು ಭಾರತದ ಮಟ್ಟದಲ್ಲಿ ದಲಿತ ಚಳುವಳಿ ಅಡಿಪಾಯ ಹಾಕಿದ ಘಟನೆ ಎಂದು ಕರೆಯಲಾಗುತ್ತದೆ, ಬಾಬಾ ಸಾಹೇಬರು ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿರುವ ಮಹಾಡ್ ನಲ್ಲಿ 1927 ಮಾರ್ಚ್ 20ರಂದು ಸಾರ್ವಜನಿಕರಾಗಿ ಕೆರೆಯ ನೀರನ್ನು ಮುಟ್ಟುವ ಮೂಲಕ ಇದು ಎಲ್ಲರಿಗೂ ಸೇರಿದ್ದು ಎನ್ನುವುದು ಸಾರಿ ಹೇಳಿದರು ಈ ಮೂಲಕ ಮಾನವ ಹಕ್ಕುಗಳನ್ನು ಎತ್ತಿ ಹಿಡಿದರು ಭಾರತೀಯ ಸವರ್ಣೀಯರು ಅಸ್ಪೃಶ್ಯತೆ ಎಂಬ ಹೊಲಸನ್ನು ಮೆದುಳಿಗೆ ತುಂಬಿಕೊಂಡು ದೇಶಾದ್ಯಂತ ಓಡಾಡುತ್ತಿದ್ದಾರೆ ಇದಕ್ಕೆ ಈ ದೇಶದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಕೂಡ ಇದೆ ಇಂದಿಗೂ ಇಲ್ಲಿನ ದಲಿತ ಆದಿವಾಸಿಗಳನ್ನು ಅವಮಾನಿಸುತ್ತಲೇ ಇದೆ ಸವರ್ಣಿಯರು ಅಸ್ಪೃಶ್ಯರು ಎಂಬ ಹೊಲಸು ಪದ್ಧತಿಯನ್ನು ಮೆದುಳಿಗೆ ತುಂಬಿಕೊಂಡು ದಲಿತರು ಮಾತ್ರ ಕೆರೆ ನೀರನ್ನು ಮುಟ್ಟುವಂತಿರಲಿಲ್ಲ ಎಂದು ನಿಷೇಧ ಹೇರಿದ್ದರು ಆದರೆ ಅವರು ಮಾತ್ರ ದನ ಹೆಮ್ಮೆ ಹಾಡು ಕುರಿ ಮತ್ತು ತಮ್ಮ ನಿತ್ಯ ಕ್ರಮದ ಸ್ವಚ್ಛತೆಯನ್ನು ಅಲ್ಲೇ ಮಾಡುತ್ತಿದ್ದರು ಆದರೆ ದಲಿತರು ಮಾತ್ರ ಮುಟ್ಟುವಂತಿರಲಿಲ್ಲ ಎಂಬ ಕಾನೂನು ಮಾಡಿಕೊಂಡಿದ್ದು ಅದನ್ನು ಬಾಬಾ ಸಾಹೇಬರು ವಿರೋಧಿಸಿದರು, ಅಂದಿನ ಬಾಂಬೆ ಶಾಸನಸಭೆ ನಂತರ 1923ರಲ್ಲಿ ಬಾಂಬೆ ಶಾಸನ ಮಂಡಳಿ ಸಾರ್ವಜನಿಕ ಸ್ಥಳಗಳನ್ನು ಅಸ್ಪೃಶ್ಯರು ಬಳಸಬಹುದೆಂದು ನಿರ್ಣಯವನ್ನು ಅಂಗೀಕರಿಸಿತು ಆದರೆ ಸವರ್ಣೀಯ ಹಿಂದೂಗಳು ಇದನ್ನು ಒಪ್ಪಲಿಲ್ಲ ತಮ್ಮ ಹಿಂದಿನ ಚಾಳಿಯನ್ನು ಮುಂದುವರಿಸಿದರು 1924ರಲ್ಲಿ ಮತ್ತೊಮ್ಮೆ ಮಹಾಡ್ ಪುರಸಭೆಯಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸುವ ನಿರ್ಣಯ ತೆಗೆದುಕೊಳ್ಳಲಾಯಿತು, ಅದಾಗಿಯೂ ಸವರ್ಣಿಯರು ಭಾರಿ ವಿರೋಧ ದಿಂದಾಗಿ ಅದನ್ನು ಕಾರ್ಯಗತಗೊಳಿಸಲಿಲ್ಲ ಈ ಸುದ್ದಿ ಬಾಬಾ ಸಾಹೇಬರ ಕಿವಿಗೆ ಮುಟ್ಟಿದ ನಂತರ 1927ರಲ್ಲಿ ಬಾಬಾ ಸಾಹೇಬರು ಸಾರ್ವಜನಿಕ ಸ್ಥಳದಲ್ಲಿ ನೀರನ್ನು ಬಳಸುವ ಹಕ್ಕುಗಳನ್ನು ಪ್ರತಿಪಾದಿಸಲು ಮಹಡ್ ಸತ್ಯಾಗ್ರಹವನ್ನು ಆರಂಭಿಸಿದರು 1927 ಮಾರ್ಚ್ 20 ರಂದು ಸಾವಿರಾರು ಅಸ್ಪೃಶ್ಯರೊಂದಿಗೆ ಮಾಹಾಡ್ ಕೆರೆಗೆ ಹೋಗಿ ಅಲ್ಲಿನ ನೀರನ್ನು ಮುಟ್ಟುವುದರ ಮೂಲಕ ಮಾನವ ಹಕ್ಕುಗಳ ಗಣತಿಯನ್ನು ಎತ್ತಿ ಹಿಡಿದರು ಬಾಬಾ ಸಾಹೇಬರಿಗೆ ಈ ವಿಚಾರದಲ್ಲಿ ಒಂದು ಸ್ಪಷ್ಟತೆ ಇತ್ತು, ಸವರ್ಣಿಯರು ಬಳಸುವ ಈ ಅಶುದ್ಧ ನೀರನ್ನು ಅಸ್ಪೃಶ್ಯರು ಬಳಸಿದರೆ ಪಾವನವಾಗುತ್ತದೆ ಎಂಬುದನ್ನ ಭಾವಿಸಲಿಲ್ಲ ಆದರೆ ಸಾರ್ವಜನಿಕರ ಸಂಪನ್ಮೂಲಗಳನ್ನು ಎಲ್ಲರೂ ಬಳಸುವ ಹಕ್ಕುಳ್ಳವರು ಎಂಬುದನ್ನು ಪ್ರತಿಪಾದಿಸುವುದೇ ಮುಖ್ಯವಾಗಿತ್ತು ಇದೇ ಸಂದರ್ಭದಲ್ಲಿ ಬಾಬಾ ಸಾಹೇಬರು ಮಹಿಳೆಯರನ್ನು ಕುರಿತು ಸ್ವಚ್ಛತೆಯ ಬಗ್ಗೆ ಹಾಗೂ ಧರಿಸುವ ಬಟ್ಟೆಯ ಬಗ್ಗೆ ತಿಳಿ ಹೇಳಿದರು ನಮಗೆ ಉಪಾಸವಿದ್ದರೂ ಕೊಳಕುತನದಿಂದ ಇರಬಾರದು ಇನ್ನು ಮುಂದೆ ನೀವು ತುಂಡು ಬಟ್ಟೆ ಧರಿಸಬಾರದು ಸವರ್ಣಿಯರ ಹೆಂಗಸರಂತೆ ಸೀರೆ ಧರಿಸಬೇಕು ಎಂದು ಪ್ರೋತ್ಸಾಹಿಸಿದರು, ಈ ನಿಟ್ಟಿನಲ್ಲಿ ಮಹಾಡ್ ಸತ್ಯಾಗ್ರಹ ಭಾರತ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯಿತು ಈ ಚಳುವಳಿ ನಡೆದ ಇಂದಿಗೆ ಅಂದರೆ ದಿನಾಂಕ 20.03.2025 ಗುರುವಾರಕ್ಕೆ 98 ವರ್ಷಗಳು ತುಂಬುತ್ತಿದೆ 98 ವರ್ಷ ಕಳೆದರೂ ಕೂಡ ನೀರಿನ ವಿಷಯದಲ್ಲಿ ಬಟ್ಟೆ ವಿಷಯದಲ್ಲಿ ದಲಿತರ ವಿಷಯದಲ್ಲಿ ದಿನನಿತ್ಯ ಕೊಲೆ ಸುಲಿಗೆ ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಲೇ ಇದೆ ಇತ್ತೀಚಿಗೆ ರಾಜಸ್ಥಾನದ ಶಾಲೆ ಒಂದರಲ್ಲಿ ಏಳನೇ ತರಗತಿಯ ಬಾಲಕನೊಬ್ಬ ನೀರು ಕುಡಿದೆನೆಂಬ ಕಾರಣಕ್ಕೆ ಹೊಡೆದು ಸಾಯಿಸಿದರು, ಉತ್ತರ ಪ್ರದೇಶದಲ್ಲಿ ಯುವಕನೊಬ್ಬ ಸಾರ್ವಜನಿಕ ಬಾವಿಯಿಂದ ನೀರನ್ನು ಮುಟ್ಟಿದ ಕಾರಣಕ್ಕೆ ಕೊಲೆ ಮಾಡಲಾಯಿತು ಹೀಗೆ ಪ್ರತಿನಿತ್ಯ ನೀರನ್ನು ಬಳಸಿದರು ಎಂದು ನಿರಂತರ ದೌರ್ಜನ್ಯಗಳು ನಡೆಯುತ್ತಲೇ ಇವೆ ಇದು ದೇಶದ ಸಮಾನತೆಯ ಕಡೆಗೆ ಎಲ್ಲಿ ನಡೆಯುತ್ತದೆ ಬರೀ ಅಸಮಾನತೆಯ ದ್ವೇಷ ವಿಕೃತಿಯ ಕಡೆಗೆ ನಡೆಯುತ್ತಿದೆ ಎಂಬುದನ್ನು ತೋರುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಪುರ ಗ್ರಾಮದ ಆದರ್ಶ , ರಾಯಣ್ಣ, ವಿನೋಬನಗರ, ನವೀನ್ ಅರಕೆರೆ, ಚಂದ್ರು ಹುಲ್ಲೇಕೆರೆ, ವಿಜಿ ಕುಮಾರ್ ರೈತ ಸಂಘ, ಜಗದೀಶ್ ಜಕ್ನಳ್ಳಿ, ಲೋಕೇಶ್ ಕುಣಿಕೆನಹಳ್ಳಿ, ನಟರಾಜಣ್ಣ ಪುರ ,ಅಶೋಕ್ ಪುರ, ಅವಿನಾಶ್ ಕುಣಿಕೇನಹಳ್ಳಿ, ತಬಲಾ ಪ್ರದೀಪ್ ತಬಲಾ ನಾರಾಯಣಿ, ಇನ್ನು ಅನೇಕರು ಈ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.

ವರದಿ, ಮಂಜುನಾಥ್ ಕೆ ಎ ತುರುವೇಕೆರೆ.

ತಿಪಟೂರು:ಕನ್ನಡ ಕುಲಕೋಟಿಯ ಆರಾಧ್ಯದೈವ, ಅಭಿಮಾನಿಗಳ,ದೇವರು ಡಾ//ಪುನಿತ್ ರಾಜಕುಮಾರ್ ರವರ50 ವರ್ಷದ ಹುಟ್ಟು ಹಬ್ಬದ ಅಂಗವಾಗಿ ಡಾ//ಪುನಿತ್ ರಾಜಕುಮಾರ್ ಅಭಿಮಾನಿ ಬಳಗ ವತಿಯಿಂದ ದಿನಾಂಕ 17.03.2025 ರಂದು ಸೋಮವಾರ ಬೆಳಗ್ಗೆ 10 ಗಂಟೆಗೆತಿಪಟೂರು ನಗರದ ತ್ರಿಮೂರ್ತಿ ಚಿತ್ರಮಂದಿರದಲ್ಲಿ ಅದ್ದೂರಿ ಹುಟ್ಟುಹಬ್ಬ ಹಾಗೂ ಪುನಿತ್ ರಾಜ್ ಕುಮಾರ್ ರವರ ಮೊದಲ ಚಲನಚಿತ್ರ ಅಪ್ಪು ಪ್ರದರ್ಶನ,ತಿಪಟೂರು ಶೇಖರ್ ರಕ್ತ ನಿಧಿ ಕೇಂದ್ರ ಸಹಯೋಗದಲ್ಲಿ ಅಭಿಮಾನಿಗಳಿಂದ ಸ್ವಯಂ ಪ್ರೇರಿತ ರಕ್ತದಾನ ಹಾಗೂ ಪರೀಕ್ಷೆ ಶಿಭಿರ ಏರ್ಪಡಿಸಲಾಗಿದೆ
ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಅಭಿಮಾನಿಗಳು ಮನವಿ ಮಾಡಿದ್ದಾರೆ.

ವರದಿ :ಮಂಜುನಾಥ್ ಹಾಲ್ಕುರಿಕೆ

ತುಮಕೂರು ಜಿಲ್ಲೆ ತಿಪಟೂರು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹುಲಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸುಮಾರು ಎರಡು ವರ್ಷ ವಯಸ್ಸಿನ ಗಂಡು ಚಿರತೆ ಅನೇಕ ದಿನಗಳಿಂದ ಹುಲಿಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಭೀತಿ ಉಂಟು ಮಾಡಿತು

ದನ ಹಾಗೂ ಕುರಿಗಳ ಮೇಲೆ ದಾಳಿ ಮಾಡಿ,ತಿಂದುಹಾಕಿದ್ದ ಚಿರತೆ ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿತ್ತು,ಗ್ರಾಮಸ್ಥರ ದೂರಿನಹಿನ್ನೆಲೆ ಅರಣ್ಯ ಇಲಾಖೆ ಬೋನ್ ಇರಿಸಿತ್ತು , ಆಹಾರ ಅರಸಿಬಂದ ಚಿರತೆ,ಬೋನಿನಲ್ಲಿ ಸೆರೆಯಾಗಿದೆ,

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು: ಕುರುಕ್ಷೇತ್ರ ಮಾಹಾಯುದ್ದ ನ್ಯಾಯ ಅನ್ಯಾಯಗಳ ನಡುವೆ ನಡೆದ ಮಹಾಕಾಳಗ,ಸತ್ಯ ನ್ಯಾಯ ಮಾರ್ಗದಲ್ಲಿ ನಡೆದರೆ ಮನುಷ್ಯನಿಗೆ ನೆಮ್ಮದಿ ದೊರೆಯುತ್ತದೆ,ಕಲಹದಿಂದ ಯಾರಿಗೂ ನೆಮ್ಮದಿ ಇಲ್ಲ ಎನ್ನುವುದನ್ನ ಪ್ರತಿಯೊಬ್ಬರು ಅರಿತು ಬದುಕಬೇಕು ಎಂದು ನ್ಯಾಯಾಧೀಶರಾದ ಅರೀಪ್ ಉಲ್ಲಾ ತಿಳಿಸಿದರು


ನಗರದ ಸರ್ಕಾರಿ ಬಾಲಕ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಿಪಟೂರು ಉಪವಿಭಾಗ ಪೊಲೀಸ್ ಇಲಾಖೆ ಸಿಬ್ಬಂದಿ ಶ್ರೀಮಾರುತಿ ಕೃಪಾಪೋಷಿತ ನಾಟಕ ಮಂಡಳಿ ಯಿಂದ ಅಭಿನಯಿಸಿದ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಪೌರಾಣಿಕ ನಾಟಕ ಉದ್ಘಾಟಿಸಿದ ನ್ಯಾಯಾಧೀಶರು ಮಾತನಾಡಿ ಕುರುಕ್ಷೇತ್ರ ನಾಟಕ ಮನುಷ್ಯನ ಜೀವನಕ್ಕೆ ಸರಿದಾರಿ ತೋರುತ್ತದೆ, ಕುರುಕ್ಷೇತ್ರ ಮಹಾಯುದ್ದದಲ್ಲಿ ಧರ್ಮಾ, ಅಧರ್ಮಗಳ ನಡೆದ ದಾಯಾದಿ ಕಲಹವಾಗಿದ್ದು,ಸತ್ಯಮಾರ್ಗದಲ್ಲಿ ನಡೆದರೆ ಶಾಂತಿ ಸನ್ಮಾರ್ಗದೊರೆಯುತ್ತದೆ ಎನ್ನುವುದನ್ನ ಕಾಣಬಹುದು.ಕುರುಕ್ಷೇತ್ರದಲ್ಲಿ ಶಸ್ತ್ರ, ಅಸ್ತ್ರಗಳ ನಡುವೆ ನಡೆದರೆ,ಕಲಿಯುಗದಲ್ಲಿ ಪೆನ್ನುಗಳ ನಡುವೆ ಯುದ್ದವಾಗುತ್ತಿದೆ,ಸ್ವಂತ ಒಡಹುಟ್ಟಿದವರ ನಡುವೆಯೇ,ಕೋರ್ಟ್ ಕೇಸು ಅಂತ ಹಲೆಯುವುದನ್ನ ಕಾಣುತ್ತಿದ್ದೆವೆ, ರಾಜೀಸಂಧಾನದ ಮೂಲಕ ವ್ಯಾಜ್ಯ ಬಗೆಹರಿಸಿಕೊಳ್ಳ ಹಲವಾರು ಮಾರ್ಗಗಳಿದರೂ,ದುರಾಸೆ ,ಪ್ರತಿಷ್ಠೆಯ ಕಾರಣಗಳಿಂದ ವ್ಯಾಜ್ಯಗಳು ಕೋರ್ಟ್ ಮೆಟ್ಟಿಲೇರುತ್ತಿರುವುದು, ಸರಿಯಲ್ಲ,ಎಲ್ಲಾ ಸಮಸ್ಯೆಗಳನ್ನು ರಾಜೀಸಂಧಾನದ ಮೂಲಕ ಬಗೆಹರಿಸಿಕೊಂಡರೆ ಶಾಂತಿ ನೆಮ್ಮದಿ ಜೀವನ ನಡೆಸಬಹುದು ಎಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಕೆ.ಷಡಕ್ಷರಿ ಮಾತನಾಡಿ ಪೊಲೀಸ್ ಇಲಾಖೆ ಸದಾ ಒತ್ತಡದ ನಡುವೆ ಕೆಲಸ ಮಾಡುತ್ತದೆ,ಒತ್ತಡದ ನಡುವೆಯೂ, ಮಾನಸಿಕ ನೆಮ್ಮದಿ ಹಾಗೂ ಮನೋರಂಜನೆ ಅಗತ್ಯವಾಗಿದ್ದು, ಕೆಲಸದ ನಡುವೆ ಬಿಡುವು ಮಾಡಿಕೊಂಡು ಕುರುಕ್ಷೇತ್ರ ನಾಟಕ ಕಲಿತು ಅಭಿನಯಿಸುತ್ತಿದ್ದಾರೆ, ಕಲೆಗೆ ಪ್ರೋತ್ಸಹಿಸುವುದು ಪ್ರತಿಯೊಬ್ಬರ ಜವಾಬ್ದಾರಿ,ಕಲೆಯನ್ನ ಶ್ರದ್ದೆಯಿಂದ ಕಲಿತರೆ ಕಲಾದೇವಿ ಒಲಿಯುತ್ತಾಳೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಮುಖ್ಯಾತಿಥಿಗಳಾಗಿ ಭಾಗವಹಿಸಿದ ತಿಪಟೂರು ಉಪವಿಭಾಗ ಪೊಲೀಸ್ ಉಪ ಅಧೀಕ್ಷಕರಾದ ವಿನಾಯಕ ಎಸ್ ಶೆಟಗೇರಿ ನಮ್ಮ ಪೊಲೀಸ್ ಸಿಬ್ಬಂದಿ ಸದಾ ಒತ್ತಡದಲ್ಲಿ ಕೆಲಸ ಮಾಡುತ್ತಾರೆ, ಅವರಿಗೆ ಮಾನಸಿಕ ನೆಮ್ಮದಿಗಾಗಿ ಮನೋರಂಜನೆ ಅಗತ್ಯವಿದೆ, ನಮ್ಮ ಸಿಬ್ಬಂದಿ ಕುರುಕ್ಷೇತ್ರ ನಾಟಕಮಾಡುವುದ್ದಾಗಿ ಹೇಳಿದ್ದಾಗ ತುಂಬಾ ಖುಷಿಆಯ್ತು, ಅವರ ಕಲೆಗೆ ಪ್ರೊತ್ಸಾಹಿಸುವ ದೃಷ್ಠಿಯಿಂದ ಮೇಲಾಧಿಕಾರಿಗಳ ಅನುಮತಿ ಪಡೆದು. ನಾಟಕ ಪ್ರದರ್ಶನ ಮಾಡುತ್ತಿದ್ದೇ ,ನಾಟಕ ನೋಡಿ ಕಲೆಯನ್ನ ಪ್ರೋತ್ಸಾಹಿಸಿ, ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಶ್ರೀಮತಿ ಪುಷ್ಪಾವತಿ,ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್,ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ,ತಹಸೀಲ್ದಾರ್ ಪವನ್ ಕುಮಾರ್,ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ,ಇಒ ಸುದರ್ಶನ್,ನಗರಸಭೆ ಅಧ್ಯಕ್ಷೆ ಶ್ರೀಮತಿ ಯಮುನಾಧರಣೇಶ್,ಉಪಾಧ್ಯಕ್ಷೆ ಮೇಘಶ್ರೀ ಭೂಷಣ್,ಜಿಲ್ಲಾ ಕಾಂಗ್ರೇಸ್ ಯುವ ಅಧ್ಯಕ್ಷ ನಿಖಿಲ್ ರಾಜಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದರು
ಕಲಾಭಿಮಾನಿಗಳ ಮನಸೂರೆಗೊಂಡ ನಾಟಕ ಪ್ರದರ್ಶನ:

ವೃತ್ತಿಯಲ್ಲಿ ಪೊಲೀಸರಾದ್ರು ನಾಟಕದಲ್ಲಿ ಪರಕಾಯ ಪ್ರದರ್ಶನ ಮಾಡಿದವರಂತೆ ಪಾತ್ರಗಳಿಗೆ ಜೀವತುಂಬಿ ಅಭಿನಯಿಸಿದರು ಪ್ರೇಕ್ಷಕರು, ಶಿಳ್ಳೆ,ಚಪ್ಪಾಳೆ ಮೂಲಕ ಪ್ರೋತ್ಸಾಹಿಸಿದರು.ವೃತ್ತಿರಂಗಭೂಮಿ ಕಲಾವಿದರಂತೆ ನಾಟಕ ಪ್ರದರ್ಶನ ನೀಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ಪೊಲೀಸ್ ಇಲಾಖೆಯ ಸಂಭ್ರಮ ಸಡಗರಕ್ಕೆ ಸಾರ್ವಜನಿಕರು ಫುಲ್ ಫಿದಾ:

ತಿಪಟೂರು ಉಪವಿಭಾಗಾ ಪೊಲೀಸ್ ಇಲಾಖೆಯಿಂದ ಅಭಿನಯಿಸಿದ ಕುರುಕ್ಷೇತ್ರ ನಾಟಕದ ವೇಳೆ ತಿಪಟೂರು ಉಪವಿಭಾಗಪೊಲೀಸ್ ಉಪವಿಭಾಗ ಪೊಲೀಸ್ ಅಧೀಕ್ಷಕರು ಎನ್ನುವ ಹಮ್ಮುಬಿಮ್ಮು ಮರೆತ ವಿನಾಯಕ ಶೆಟ್ಟಿಗೇರಿಯವರು ತಮ್ಮ ಸಹ ಸಿಬ್ಬಂದಿಯೊಂದಿಗೆ ಬೆರೆತು,ಸಂಡಗರದಿಂದ ನಾಟಕ ವ್ಯವಸ್ಥೆಗಳನ್ನ ನೋಡುತ್ತಿದ್ದರೆ ಸಹ ಎಲ್ಲಾ ವೃತ್ತ ನಿರೀಕ್ಷಕರು, ಸಬ್ ಇನ್ಸ್ಪೆಕ್ಟರ್ ಗಳು ಹಾಗೂ ಸಿಬ್ಬಂದಿಗಳು,ತಮ್ಮ ಮನೆಯ ಶುಭಕಾರ್ಯವೆನೋ ಎನ್ನುವಂತ್ತೆ ಕೆಲಸ ಮಾಡುತ್ತ,ಪಾತ್ರಾಧಾರಿಗಳಿಗೆ ಪ್ರೋತ್ಸಹಿಸಿ ,ಕಲಾಭಿಮಾನಿಗಳಿಗೆ ಉಮ್ಮಸುತುಂಬುತ್ತಿರುವುದು ಕಂಡ ಸಾರ್ವಜನಿಕರು ಫುಲ್ ಫಿದಾ ಆದರು.

ತಿಪಟೂರು ನಗರಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ದಕ್ಷಿಣ ಕರ್ನಾಟಕದ ವಿವಿಧ ಜಿಲ್ಲೆಗಳ ಗೂಡ್ಸ್ ವಾಹನ, ಆಟೋ ರೀಕ್ಷಾ ವಾಹನ, ಕೊಬ್ಬರಿ, ಗುಜರಿ ವಸ್ತುಗಳು,ತೆಂಗಿನಕಾಯಿ ಮತ್ತು ಪಡಿತರ ಅಕ್ಕಿಯ ಕಳ್ಳತನ ಮಾಡಿದ ಕುಖ್ಯಾತ ಕಳ್ಳರ ಬಂಧನ ಮಾಡುವಲ್ಲಿ ತಿಪಟೂರು ಪೊಲೀಸರು ಯಶಸ್ವಿಯಾಗಿದ್ದಾರೆ.


05:27.01.2025 ರಂದು ರಾತ್ರಿ ತಿಪಟೂರುಟೌನಿನ ಪ್ರತಿಷ್ಟಿತ ಕೃಷಿ ಉತ್ಪನ್ನ ಕೊಬ್ಬರಿ
ಮಾರುಕಟ್ಟೆಯಲ್ಲಿರುವ ಶ್ರೀಗಂಗಾ ಟೇಡರ್ಸ್‌ ಕೊಬ್ಬರಿ ಅಂಗಡಿಯ ಬಾಗಿಲು ಮುರಿದು ಕೊಬ್ಬರಿ ತುಂಬಿರುವ,ಚೀಲಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಅಂಗಡಿಯ ಮಾಲೀಕರಾದ ಲಕ್ಷಣ ತಂದೆ ನಾಗರಾಜು,ವಿದ್ಯಾನಗರ, ತಿಪಟೂರುಟೌನ್ ರವರು ನೀಡಿದ ದೂರಿನ ಮೇರೆಗೆ ತಿಪಟೂರು ನಗರ ಪೊಲೀಸ್ ಠಾಣಾ ಮೊಕದ್ದಮೆ
ಸಂಖ್ಯೆ 19/2025 ಕಲಂ 331(4), 305 BNS ರೀತ್ಯ ಪ್ರಕರಣ ದಾಖಲಿಸಿರುತ್ತೆ.
ಮೇಲ್ಕಂಡ ಪ್ರಕರಣವನ್ನು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಅಶೋಕ್ ಕೆ.ವಿ.
ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರವರುಗಳಾದ ವಿ.ಮರಿಯಪ್ಪ ಹಾಗೂಬಿ.ಎಸ್.ಅಬ್ದುಲ್ ಖಾದರ್ ರವರ ನೇತೃತ್ವದಲ್ಲಿ ತಿಪಟೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರವರಾದ ವಿನಾಯಕ ಶೆಟಗೇರಿ ರವರ ಮಾರ್ಗಸೂಚನೆ ಮೇರೆಗೆ ತಿಪಟೂರು ನಗರ ಪೊಲೀಸ್ ಠಾಣೆಯ ವೆಂಕಟೇಶ್ ಸಿ,ಪೊಲೀಸ್ ಇನ್ಸ್‌ಪೆಕ್ಟರ್, ಡಿ.ಕೃಷ್ಣಪ್ಪ, ಪೊಲೀಸ್ ಸಬ್ ಇನ್ಸ್ ಪೆಕ್ಟರ್, ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದಚಿಕ್ಕಲಕ್ಕೇಗೌಡ ಎನ್.ಡಿ & ಉಸ್ಮಾನ್ ಸಾಬ್ ಮತ್ತು ಸಿಬ್ಬಂದಿಯವರಾದ ಮೋಹನ್ ಕುಮಾರ್ ಜಿ.ಎಂ,ಲೋಕೇಶ್ ಜಿ.ಆರ್, ಕಿರಣ್ ಕುಮಾರ್ ಎ.ಪಿ, ಯತೀಶ್ ಕುಮಾರ್ ಕೆ.ಎಸ್, ಕಿರಣ್ ಕುಮಾರ್ ಎನ್.ಬಿ, ಸಾಗರ್
ಅಂಬಿಗೇರ್, ಮಂಜುನಾಥ ಎಂ ಕುಪ್ಪಾಡ, ಚಾಲಕರಾದ ಮನೋಜ್ ರವರು ಹಾಗೂ ವೈರ್‌ಲೆಸ್ ಪೊಲೀಸ್ಇನ್ಸ್‌ಪೆಕ್ಟರ್ ರಮೇಶ್ ಮತ್ತು ಜಿಲ್ಲಾಪೊಲೀಸ್ ಕಛೇರಿಯ ನರಸಿಂಹರಾಜು ಹಾಗೂ ಜಗದೀಶ್‌ರವರುಗಳುಕಾರ್ಯಾಚರಣೆ ಮಾಡಿ ದಿನಾಂಕ 09.03.2025 ರಂದು
ಆರೋಪಿಗಳಾದ 1) ಸದ್ದಾಂ ಹುಸೇನ್ @ ಜೀಶಾನ್ ಬಿನ್ ರಫೀಕ್ ಅಹಮದ್, 24 ವರ್ಷ, ಲಾರಿಡೈವರ್ ಕೆಲಸ, ವಾಸ: ಸ್ಲಂಬೋರ್ಡ್, ಹಾಲಹಳ್ಳಿ, ಮಂಡ್ಯ ಟೌನ್ ಸ್ವಂತ ಊರು: ದೊಡ್ಡಕವಲಂದೆ, ಕವಲಂದೆ ಹೋಬಳಿ,ನಂಜನಗೂಡು ತಾ, ಮೈಸೂರು ಜಿಲ್ಲೆ.
2) ರಾಹೀಲ್ ಬಿನ್ ಅಜೀಜ್ ಪಾಷ, 22 ವರ್ಷ, ಗಾರೆ ಕೆಲಸ, ವಾಸ: 2 ನೇ ಮೈನ್, 16 ನೇ ಕ್ರಾಸ್,
ಚರ್ಚ ಹತ್ತಿರ, ಬಿ.ಎಂ.ಶ್ರೀ ನಗರ, ಮೈಸೂರು ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಇವರುಗಳನ್ನುಬಂಧಿಸಿರುತ್ತದೆ.

ಇವರಿಂದ ದಿನಾಂಕ:09.03.2025 ರಂದು ಆರೋಪಿಗಳಿಂದ ಮೇಲ್ಕಂಡ ಪ್ರಕರಣದಲ್ಲಿ 38 ಚೀಲಗಳಷ್ಟುಕೊಬ್ಬರಿಯನ್ನು ಮತ್ತು ಹಾಸನ ಜಿಲ್ಲೆ ಗೋರೂರು ಪೊಲೀಸ್ ಠಾಣಾ ಪ್ರಕರಣದಲ್ಲಿ ಕಳ್ಳತನ ಮಾಡಿದ್ದ ಕೆಎ-35 ಬಿ-4095 ನೇ ಆಶೋಕ ಲೈಲ್ಯಾಂಡ್ ವಾಹನವನ್ನು ಮತ್ತು ಕಳ್ಳತನ ಮಾಡಲು ಬಳಸಿದ್ದ ಕಬ್ಬಿಣದ ರಾಡು, ಹಗ್ಗ,ಟರ್ಪಾಲ್,ಚಾಕನ್ನು ವಶಕ್ಕೆ ಪಡೆದು ನಂತರ ತಿಪಟೂರು ನಗರ ಬಂಡಿಹಳ್ಳಿ ಗೇಟ್ ನ ಮಸೂದ್ ಇಂಜಿನಿಯರಿಂಗ್ ವರ್ಕ ನಲ್ಲಿ
ಕಳ್ಳತನ ಮಾಡಿದ ಗುಜರಿ ಮಾಲುಗಳನ್ನು ಮಾರಾಟ ಮಾಡಿ ಪಡೆದ 1 ಲಕ್ಷ ರೂ ಹಣ ವಶಕ್ಕೆ ಪಡೆದುಕೊಂಡಿದ್ದು,ಇದರೊಂದಿಗೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕ್ ಬೆಳ್ಳೂರು ಪೊಲೀಸ್ ಠಾಣಾ ಪ್ರಕರಣದಲ್ಲಿ ಕಳ್ಳತನ ಮಾಡಿದ್ದಕೆಎ-02 ಎ.ಎ-2750 ನೇ ಆಟೋ ರೀಕ್ಷಾ ವಾಹನವನ್ನು ವಶಕ್ಕೆ ಪಡೆದುಕೊಂಡಿರುತ್ತದೆ. ಇದಲ್ಲದೇ ಮೈಸೂರು ಜಿಲ್ಲೆ ಕೆ.ಆರ್. ನಗರ ಪೊಲೀಸ್‌ ಠಾಣಾ ಪ್ರಕರಣದಲ್ಲಿ ಕಳ್ಳತನ ಮಾಡಿದ್ದ ಗೂಡ್ಸ್ ವಾಹನ ಮತ್ತು ತುಮಕೂರು ಜಿಲ್ಲೆ ನೊಣವಿನಕೆರೆ ಪೊಲೀಸ್ ಠಾಣಾ ಪ್ರಕರಣದಲ್ಲಿ ಕಳ್ಳತನ ಮಾಡಿದ್ದ ಗೂಡ್ಸ್ ವಾಹನಗಳನ್ನು ವಶಕ್ಕೆ ಪಡೆದುಕೊಂಡಿರುತ್ತದೆ.
ಹಾಗೂ ರಾಜ್ಯ ವಿವಿಧ ಪೊಲೀಸ್ ಠಾಣಾ ಸರಹದ್ದಿನಲ್ಲಿ ಸರ್ಕಾರಿ ಗೋದಾಮುಗಳಲ್ಲಿ ಪಡಿತರ ಆಹಾರ ಧಾನ್ಯವಾದಅಕ್ಕಿಯನ್ನು ಮತ್ತು ತುಮಕೂರು ಜಿಲ್ಲೆ ತುರುವೇರೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ತೆಂಗಿನಕಾಯಿ ಕಳ್ಳತನ ಮಾಡಿರುತ್ತಾರೆ
ಈ ಬಗ್ಗೆ ಮಾಹಿತಿಯನ್ನು ಸಂಬಂಧಪಟ್ಟ ಠಾಣೆಗಳಿಗೆ ಮಾಹಿತಿ ನೀಡಿರುತ್ತದೆ.
ಮೇಲ್ಕಂಡ ಆರೋಪಿಗಳಿಂದ ಕಳ್ಳತನ ಮಾಡಿದ್ದ ಸುಮಾರು 10ಲಕ್ಷ ರೂ ಮೌಲ್ಯದ ಕೊಬ್ಬರಿ, ಗೂಡ್ಸ್ ವಾಹನ,ಆಟೋರೀಕ್ಷಾ ವಾಹನ, 1ಲಕ್ಷ ರೂ ಹಣ ಹಾಗೂ ಕೃತ್ಯಕ್ಕೆ ಬಳಸಿದ ಕಬ್ಬಿಣದ ರಾಡು, ಹಗ್ಗ, ಟಾರ್ಪಲ್, ಚಾಕುಗಳನ್ನು ಅಮಾನತ್ತು ಪಡಿಸಿಕೊಂಡು ಘನ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿ, ಆರೋಪಿಗಳು ನ್ಯಾಯಾಂಗಬಂಧನದಲ್ಲಿರುತ್ತಾರೆ. ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಯವರನ್ನು ಮಾನ್ಯ ತುಮಕೂರು ಜಿಲ್ಲಾಪೊಲೀಸ್‌ ಅಧೀಕ್ಷಕರಾದ ಅಶೋಕ್ ಕೆ.ಎ, ಐ.ಪಿ.ಎಸ್ ರವರು ಪ್ರಶಂಶಿಸಿರುತ್ತಾರೆ.

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ನಗರದ ಕೆ.ಆರ್ ಬಡಾವಣೆ ಬಿ.ಹೆಚ್ ರಸ್ತೆ ಪಕ್ಕದ ಬೀದಿ ಬದಿಯ ಮಾಂಸಹಾರ ಅಂಗಡಿಗಳನ್ನ ಒಕ್ಕಲೆಬಿಸಲಾಗಿದೆ,ಮನುಷ್ಯನ ಆಹಾರ ಸಂಸ್ಕೃತಿಯನ್ನ ಅಪಹಾಸ್ಯ ಮಾಡಿರುವ ನಗರಸಭೆ ಅಧಿಕಾರಿಗಳ ನಡೆ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.

ಮನುಷ್ಯನ ಜೀವನ ಕ್ರಮ ಆರಂಭವಾದಾಗಿನಿಂದ ಸಸ್ಯಹಾರ ಮಾಂಸಾಹಾರಗಳು ಆದಿ ಮಾನವನ ಕಾಲದಿಂದ ರೂಢಿಗತವಾಗಿಬಂದಿವೆ, ಸಸ್ಯಹಾರಿಗಳಿಗೆ,ಸಸ್ಯಹಾರ ಪ್ರಿಯವಾದರೇ ಮಾಂಸಾಹಾರಿಗಳಿಗೆ ಮಾಂಸಾಹಾರವೇ ಅತಿಪ್ರಿಯಾ, ಅವರ ಆಹಾರ ಅವರ ಹಕ್ಕು ಆದರೆ ನಗರಸಭೆ ನಡೆಮಾತ್ರ ದಲಿತರು,ಹಿಂದುಳಿದ ವರ್ಗಗಳು , ಸೇರಿದಂತೆ ಮಾಂಸಪ್ರಿಯ ತಳಸಮುದಾಯಗಳ ಆಹಾರಕ್ರಮವನ್ನೇ ತುಚ್ಚವಾಗಿ ಕಂಡಿದ್ದಾರೆ, ಭೂಮಿಯ ಮೇಲೆ ಸಸ್ಯಹಾರಿಗಳು ಶ್ರೇಷ್ಠರು ಮಾಂಸಾಹಾರಿಗಳು ಕನಿಷ್ಠರು ಅನೋ ಯಾವುದೇ ನಿಯಮವಿಲ್ಲ, ಭಾರತದಂತ ಬಹುಸಂಸ್ಕೃತಿ ದೇಶದಲ್ಲಿ ಮಾಂಸಾಹಾರಕ್ಕೆ ತನ್ನದೇ ಆದ ಪೂಜನೀಯ ಸ್ಥಾನಮಾನವಿದೆ,ಆದರೆ ತಿಪಟೂರು ನಗರದ ಕೆ.ಆರ್ ಬಡಾವಣೆ ಬಿ.ಹೆಚ್ ರಸ್ತೆ ಪಕ್ಕದಲ್ಲಿ ಹಲವಾರು ರೀತಿಯ ಅಂಗಡಿ ವ್ಯಾಪಾರ ನಡೆಯುತ್ತಿದೆ, ತಿಂಡಿ ಊಟದ ಹೋಟೆಲ್ ಗಳು ಪಾನಿಪೂರಿ ಗೋಬಿಮಂಚೂರಿ, ಚುರುಮುರಿಯಂತ ಸ್ನ್ಯಾಕ್ಸ್ ಅಂಗಡಿಗಳು ಇವೆ ಇವುಗಳ ಮಧ್ಯೆಯೆ ಪ್ರೈಡ್ ರೈಸ್, ಹೆಗ್ ರೈಸ್ ಕಬಾಬ್ ,ಮೊಟ್ಟೆ ಬೋಂಡ,ಹೆಗ್ ಬುರ್ಜಿ ಸೇರಿದಂತೆ ಚಿಕನ್ ಖಾದ್ಯಗಳ ಅಂಗಡಿಗಳು ಇದ್ದವೂ, ಅದರೆ ನಗರ ಸಭೆಯ ಅಧಿಕಾರಿಗಳ ಕಣ್ಣು,ಚಿಕನ್ ಕಬಾಬ್ ಅಂಗಡಿ . ಹೆಗ್ ರೈಸ್, ಮೊಟ್ಟೆ ಬೋಂಡದ ಅಂಗಡಿಗಳ ಮೇಲೆ ಬಿದ್ದಿದೆ.ಕೆ.ಆರ್ ಬಡಾವಣೆಯು ಮೇಲ್ಜಾತಿಯ ಜನವಾಸಮಾಡುವ ಇಲ್ಲಿ ಮಾಂಸಾಹಾರ, ಮೊಟ್ಟೆ ಹಾಗೂ ಮೊಟ್ಟೆಯ ತಿನಿಸುಗಳನ್ನ ಮಾರಾಟ ಮಾಡುವಂತ್ತಿಲ್ಲ ಎಂದು ಒಕ್ಕಲೆಬ್ಬಿಸಲಾಗಿದೆ,ಹತ್ತಾರು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ,ಜನರನ್ನ ಒಕ್ಕಲೆಬಿಸಿ ಅವರ ಹೊಟ್ಟೆಮೇಲೆ ಹೊಡೆದಿದ್ದಾರೆ,ದಾರಿಯಲ್ಲಿ ಓಡಾಡುವ ನಾಗರೀಕರೋರ್ವರು ನಾನೂ ಮೇಲ್ಜಾತಿಯವರು ಇದೇ ರಸ್ತೆಯಲ್ಲಿ ಓಡಾಡಬೇಕು ಮೊಟ್ಟೆವಾಸನೆ ಹಾಗೂ ಕಬಾಬ್ ವಾಸನೆಯಿಂದ ಮೈಲಿಗೆಆಗುತ್ತದೆಅಂತ ಹೇಳಿದ್ದಾರಂತೆ, ಅವರ ಮಾತನೇ ಪ್ರಸಾದವೆಂದ ಕೌನ್ಸಿಲರ್ ತಮ್ಮ ಆಧಿಕಾರನ್ನ ಕೈಗೆತ್ತಿಕೊಂಡು, ಬಿ.ಹೆಚ್ ರಸ್ತೆ ಫುಡ್ ಸ್ಟ್ರೀಟ್ ಫಿಲ್ಡ್ ಗೆ ಇಳಿದಿದ್ದಾರೆ,ಇದು ಮೇಲ್ಜಾತಿಯವರು ವಾಸ ಮಾಡುವ ಪ್ರದೇಶ ಇಲ್ಲಿ ಚಿಕನ್ ಮಟನ್, ಮಾಡುವಂತ್ತಿಲ್ಲ.ಮೀನು ಮೊಟ್ಟೆ ಮಾರುವಂತ್ತಿಲ್ಲ,ಎಂದು ಪಾರ್ಮಾನು ಹೊರಡಿಸಿ, ಅಂಗಡಿಯನ್ನ ಒಕ್ಕಲೆಬಿಸಿದ್ದಾರೆ, ಅಂಗಡಿಯವರು ಮಾತ್ರ ಅಣ್ಣ ನಾವು ಯಾರಿಗೂ ತೊಂದರೆ ಮಾಡಿಲ್ಲ. ಬೀದಿ ಬದಿ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದೇವೆ,ಯಾರಿಗೂ ಒತ್ತಾಯ ಮಾಡಿಲ್ಲ,ಎಂದೂ ಗೋಗರೆದರೂ ಬಿಡದಂತ್ತೆ ಅಂಗಡಿ ಎತ್ತಿಸಿದರು ಎಂದೂ ಆರೋಪಿಸಿದ್ದಾರೆ, ಮಾಂಸಾಹಾರ ಇಷ್ಟೋಂದು ಅಪವಿತ್ರವೇ ಎನ್ನುವಂತ್ತಾಗಿದೆ,ನಗರಸಭೆ ಹಾಗೂ ಕೌನ್ಸಿಲರ್ ನಡೆಗೆ ಸಾರ್ವಜನಿಕರು ಆಕ್ಷೇಪಿಸಿದ್ದು,ಜಾತ್ಯಾತೀತ ಮೌಲ್ಯಗಳು ಹಿಂದುಳಿದ ವರ್ಗಗಳು ಹಾಗೂ ಅವರ ಆಹಾರ ಸಂಸ್ಕೃತಿ ಗೌರವಿಸ ಬೇಕಾದ ಕಾಂಗ್ರೇಸ್ ಪಕ್ಷದ ಮುಖಂಡರ ವರ್ತನೆ ಹಿಂಗಾದರೆ,ಬೇರೆಯವರ ಕಥೆ ಏನು..? ಎನ್ನುವಂತ್ತಾಗಿದೆ, ಬಿಜೆಪಿಯ ಮುಖಂಡರೊಬ್ಬರು ಮಾತ್ರ ನಮ್ಮ ಪಕ್ಷದಲ್ಲಿ ಹಲಾಲ್ ಕಟ್ ಜಟ್ಕಕಟ್ ಅಂತ ಹೋರಾಟ ಮಾಡಿದ್ವಿ ಆದ್ರೆ ಇವರು ಮಟನ್ ಚಿಕನ್ ಕಬಾಬ್ ಸೇರಿ, ಮೊಟ್ಟೆಯೂ ಬೇಡ ಎನ್ನುತ್ತಿದ್ದಾರೆ, ಭೇಷ್ ಎಂದು ಕುಟುಕಿದ್ದಾರೆ, ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ, ಕಸವಿಲೇವಾರಿ ಸಮಸ್ಯೆ, ಸೇರಿ ನೂರಾರು ಸಮಸ್ಯೆಗಳು ಹಾಸುಹೊಕ್ಕಾಗಿವೆ ಇವುಗಳ ಪರಿಹಾರದ ಕಡೆಗಮನಹರಿಸಲಿ, ಅವರ ಆಹಾರ ಅವರ ಹಕ್ಕು, ಅವರಿಗೆ ಇಷ್ಟ ಇರೋ ಆಹಾರ ಅವರುತಿನ್ನುತ್ತಾರೆ. ಮಡಿಮೈಲಿಗೆ ಹೆಸರಿಲ್ಲಿ ಬಡವರ ತುತ್ತು ಕಿತ್ತುಕೊಳೋದು ಬೇಡ..

ವರದಿ :ಮಂಜುನಾಥ್ ಹಾಲ್ಕುರಿಕೆ

ತುರುವೇಕೆರೆ :ತಾಲೂಕುನ ದಂಡಿನ ಶಿವರ ಹೋಬಳಿ ಸಂಪಿಗೆ ದಂಡಿನ ಶಿವರ ರಸ್ತೆ ಮಾರ್ಗ ಮಧ್ಯೆ ಇರುವ ಕೆರೆಕೋಡಿ ತಿರುವಿನಲ್ಲಿವಿದ್ಯುತ್ ಕಂಬ ತುಂಬಿದ್ದ KA 09 T 1275 ಟ್ರ್ಯಾಕ್ಟರ್ ಪಲ್ಟಿ ಯಾಗಿದ್ದು,ವಿದ್ಯುತ್ ಕಂಬದ ಕೆಳಗೆ ಸಿಲುಕಿದ್ದ,ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ,ತುರುವೇಕೆರೆ ತಾಲ್ಲೋಕು, ತೋವಿನಕೆರೆ ಗೊಲ್ಲರ ಹಟ್ಟಿಯ ಕುಮಾರಯ್ಯ 40 ವರ್ಷ ಮೃತ ದುರ್ದೈವಿ. ಈ ಟ್ರಾಕ್ಟರ್ ಗುತ್ತಿಗೆದಾರ ಪ್ರಕಾಶ್ ತೋವಿನಕೆರೆ,ಕೆ.ಇ.ಬಿ ಕಾಂಟ್ರಾಕ್ಟರ್ ರವರಿಗೆ ಸೇರಿದೆ ಎನ್ನಲಾಗಿದ್ದು, ಸ್ಥಳಕ್ಕೆ ದಂಡಿನ ಶಿವರ ಪೊಲೀಸ್ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ತಿಪಟೂರು:ನಗರ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಾರ್ಚ್ 15ರಂದು ಶವಿವಾರ ರಾತ್ರಿ 08 ಗಂಟೆಗೆ ಶ್ರೀ ಮಾರುತಿ ಕೃಪಾಪೋಷಿತ ನಾಟಕ ಮಂಡಳಿ, ತಿಪಟೂರು ಉಪವಿಭಾಗ ಪೋಲೀಸ್ ಇಲಾಖೆಯಿಂದ ಕುರುಕ್ಷೇತ್ರಹಾಗೂ ಧರ್ಮರಾಜ್ಯ ಸ್ಥಾಪನೆ ನಾಟಕ ಏರ್ಪಡಿಸಲಾಗಿದ್ದು.ದಿವ್ಯ ಸಾನಿಧ್ಯವನ್ನ ಕೆರೆಗೋಡಿ ರಂಗಾಪೂರ ಭೂಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿಗಳು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೇಂದ್ರ ವಲಯ ಪೊಲೀಸ್ ಮಹಾನಿರ್ದೇಶಕರಾದ ಶ್ರೀಲಾಬೂರಾಮ್ ಐಪಿಎಸ್ ರವರು ಹಾಗೂ ತುಮಕೂರು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ,ಅಶೋಕ್ ಕೆ.ಪಿ.ಐಪಿಎಸ್ ರವರು ಹಾಗೂ ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿ.ಮರಿಯಪ್ಪ ಕೆಎಸ್ಪಿಎಸ್,ಶ್ರೀ ಬಿ.ಎಸ್ ಅಬ್ದುಲ್ ಖಾದರ್ .ಕೆಎಸ್ಪಿಎಸ್.ತಿಪಟೂರು ಉಪವಿಭಾಗ ಪೊಲೀಸ್ ಉಪ ಅಧೀಕ್ಷಕರಾದ ಶ್ರೀ ವಿನಾಯಕ ಎಸ್ ಶಟಗೇರಿ ಸೇರಿದಂತೆ ತಿಪಟೂರು ಉಪವಿಭಾಗ ವ್ಯಪ್ತಿಯ ಎಲ್ಲಾ ಪೊಲೀಸ್ ಅಧಿಕಾರಿಗಳು ಭಾಗವಹಿಸುತ್ತಿದ್ದು,ಕಲಾಸಕ್ತರು ಹಾಗೂ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸ ಬೇಕಿದೆ.

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!