ತಿಪಟೂರು : ಕುಡಿಯುವ ನೀರಿಗಾಗಿ ಅಳವಡಿಸಿರುವ ಮೋಟರ್ ಪಂಪ್ ಸೆಟ್‌ನ್ನು ಪಂಚಾಯತಿಯ ಪಿಡಿಓ ಹಾಗೂ ಸದಸ್ಯರ ಗಮನಕ್ಕೆ ಮಾಹಿತಿ ನೀಡದೆ ಏಕಾಏಕಿ ಮೋಟರ್ ಎತ್ತಿ ಮಾರಾಟ ಮಾಡಲು ಯತ್ನಿಸಲಾಗಿದೆ ಎಂದು ಆರೋಪಿಸಿ ಗ್ರಾಮಪಂಚಾಯ್ತಿ ಮುಂಭಾಗ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ರಂಗಾಪುರ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಮೋಟರ್ ಎತ್ತುವ ಕೆಲಸ ನಿರ್ವಹಿಸುತ್ತಿದ್ದ ಯತೀಶ್ ಎಂಬ ವ್ಯಕ್ತಿ ಏಕಾಏಕಿ ಯಾರಿಗೂ ಮಾಹಿತಿ ನೀಡದೆ ಮೋಟರ್ ಎತ್ತಿ ಸ್ಥಳಾಂತರ ಮಾಡಿದ್ದು, ಚೆನ್ನಾಗಿರುವ ಮೋಟರ್ ಎತ್ತುವ ಔಚಿತ್ಯವೇನು ,ಮಾರಾಟ ಮಾಡುವ ಉದೇಶದಿಂದ ಮೋಟರ್ ಎತ್ತಿ ಸ್ಥಳಾಂತರ ಮಾಡಲಾಗಿದೆ ಎಂದು ಪಂಚಾಯಿತಿ ವ್ಯಾಪ್ತಿಯ ಸದಸ್ಯರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಪಿಡಿಓ ಹಾಗೂ ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ರಂಗಾಪುರ ಗ್ರಾಮ ಪಂಚಾಯತಿಯ ಎದುರು ಗುರುವಾರ ನಡೆಯಿತು.
ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿರುವ ಎರಡು ವರ್ಷಗಳಿಂದ ನಿಷ್ಕಿçಯವಾಗಿದ್ದ ಕುಡಿಯುವ ನೀರಿನ ಕೊಳವೆ ಬಾವಿಯ 15 ಹೆಚ್.ಪಿ ಮೋಟರ್ ಪಂಪ್ ಸೆಟ್, 41 ಜಿಐ ಪೈಪ್ ಹಾಗೂ 500ಮೀ ಕೇಬಲ್ ವೈರ್‌ನ್ನು ಮಾರ್ಚ್ 17ರಂದು ಸಂಜೆ 4 ಗಂಟೆಯ ಸಮಯದಲ್ಲಿ ವ್ಯಾಪ್ತಿಯ ಮೋಟರ್ ಎತ್ತುವ ವ್ಯಕ್ತಿ ಎತ್ತಿ ಬೇರೆ ಯಾವುದೇ ಕೊಳವೆ ಬಾವಿಗೆ ಸರಬರಾಜು ಮಾಡದೆ, ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರ ಮಾಹಿತಿಯಿಂದಾಗಿ ಸ್ಥಳೀಯ ಪಿಡಿಓಗೆ ತಿಳಿಸಲಾಗಿ, ಮತ್ತೆ ಅದೇ ಜಾಗಕ್ಕೆ ಮೋಟರ್ ಪಂಪ್ ಸೆಟ್ ಬಿಡಸಲಾಗಿದ್ದು ಈ ಪ್ರಕರಣ ಕುರಿತು ಸದಸ್ಯರು ಮತ್ತು ಸಾರ್ವಜನಿಕರು ರಂಗಾಪುರ ಗ್ರಾಮ ಪಂಚಾಯತಿ ಎದುರು ಅಧ್ಯಕ್ಷ ಹಾಗೂ ಪಿಡಿಓ ಮತ್ತು ಗ್ರಾಮಪಂಚಾಯ್ತಿ ಆಡಳಿತ ಮಂಡಳಿ ವಿರುದ್ಧ ಪ್ರತಿಭಟಿಸಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ಧೇಶಕರಿಗೆ ಮನವಿ ಸಲ್ಲಿಸಲಾಯಿತು.
ಪಂಚಾಯಿತಿ ಸದಸ್ಯ ಜಯಣ್ಣ ಮಾತನಾಡಿ ಪಂಪ್ ಸೆಟ್ ಎತ್ತುವ ವಿಚಾರ ಸದಸ್ಯರ ಗಮನಕ್ಕೆ ಬಾರದೆ ಹಾಗು ಪಂಚಾಯಿತಿಯ ವಾಟ್ಸಪ್ ಗ್ರೂಪ್ ಗೆ ಮಾಹಿತಿ ನೀಡದೆ ಏಕಾಏಕಿ ಈ ಕೃತ್ಯವನ್ನು ಮಾಡಿದ್ದಾರೆ. ಇಲ್ಲಿ ಅಧ್ಯಕ್ಷ ಏಕಪಕ್ಷೀಯವಾಗಿ ವರ್ತಿಸುತ್ತಿದ್ದು, ಪಿಡಿಓ ಸದಸ್ಯರ ಗಮನಕ್ಕೆ ವಿಷಯಗಳನ್ನು ಬಹಿರಂಗಪಡಿಸದೆ ತೀರ್ಮಾನಗಳನ್ನು ತೆಗೆದುಕೊಂಡಿರುತ್ತಾರೆ. ಹೊಸಹಳ್ಳಿ ಗ್ರಾಮದ ಮೋಟರ್ ಪಂಪ್ ಸೆಟ್ ಬಗ್ಗೆ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯ ಮಾಡಿದರು.
ಗ್ರಾ ಪಂ ಸದಸ್ಯ ಶಿವಶಂಕರ್ ಮಾತನಾಡಿ ಅಧಿಕಾರಿಗಳ ಇಲ್ಲದ ಸಮಯದಲ್ಲಿ ಮೋಟರ್ ಪಂಪ್‌ಗಳನ್ನು ಎತ್ತಿದ್ದು, ಯಾರು ಇಲ್ಲದ ಸಮಯದಲ್ಲಿ ಪಿಡಿಒ ಮತ್ತೆ ಬಿಡಲು ಹೇಳಿ, ತದ ನಂತರ ದಾಖಾಲೆಗೊಸ್ಕರ ಪದೇ ಪದೇ ಕೊಳವೆಬಾವಿ ಮೋಟರ್ ಬಿಟ್ಟಿದ್ದು ಸುಮ್ಮನೆ ಗ್ರಾ ಪಂ ಹಣವು ಸುಖಾಸುಮ್ಮನೆ ದುರೋಪಯೋಗ ಮಾಡಲಾಗಿದೆ, ಯಾವುದೇ ರಿಪೇರಿ ಮಾಡದೆ ಮತ್ತೆ ಅದೇ ಕೊಳವೆ ಬಾವಿಗೆ ಅಳವಡಿಸಲಾಗಿದೆ ಇದರ ಬಗ್ಗೆ ತನಿಖೆಯನ್ನು ಮಾಡಬೇಕು ಎಂದರು.
ಗ್ರಾ.ಪಂ ಸದಸ್ಯೆ ತ್ರಿವೇಣಿಸೀತಾರಾಮ್ ಮಾತನಾಡಿ ಮೋಟರ ಪಂಪ್‌ಸೆಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಹಳ್ಳಿ ಗ್ರಾಮದ ಸದಸ್ಯೆನಾಗಿದ್ದರೂ ಸಹ ನಮ್ಮ ಗಮನಕ್ಕೆ ತಂದಿರುವುದಿಲ್ಲ. ಈ ವಿಚಾರವಾಗಿ ಪಿಡಿಒರವರಿಗೆ ದೂರವಾಣಿ ಮೂಲಕ ಸಂಪರ್ಕಸಿದರೂ ಸಹ ಉತ್ತರ ನೀಡುವುದಿಲ್ಲ ಪಿಡಿಒ ಏಕಾಏಕಿ ಗ್ರಾಮಕ್ಕೆ ತೆರಳಿ ಕಾಮಗಾರಿಗಳನ್ನು ಮಾಡುತ್ತಾರೆ ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಕೆರಗೋಡಿ ಸಂತೋಷ್ ಮಾತನಾಡಿ ನಮ್ಮ ಗ್ರಾಮದಲ್ಲಿ ನಾಲ್ಕು ದಿನಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದ್ದು ನೀರಿನ ಸಮಸ್ಯೆಯ ಬಗ್ಗೆ ಇನ್ನೂರು ಗ್ರಾಮಸ್ಥರ ಸಹಿಯೊಂದಿಗೆ ಪಿಡಿಒಗೆ ದೂರು ನೀಡಿದರೂ ಸಹ ಯಾವುದೇ ಕ್ರಮವನ್ನು ತೆಗೆದುಕೊಳ್ಳದೆ ಉದಾಸೀನ ತೋರಿದ್ದಾರೆ
ಪ್ರತಿಭಟನಾ ಸ್ಥಳಕ್ಕೆ ಸಹಾಯಕ ನಿರ್ಧೇಶಕ (ಗ್ರಾಮೀಣ ಉದ್ಯೋಗ )ಶಿವಕುಮಾರ್ ಆಗಮಿಸಿ ಪ್ರತಿಭಟನೆ ನಿರತರನ್ನು ಉದ್ದೇಶಿಸಿ ಮಾತನಾಡಿ ಮೋಟರ್ ಪಂಪ್ ಸೆಟ್ ವಿಚಾರವಾಗಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಧರಣಿಯಲ್ಲಿ ಗ್ರಾ.ಪಂ ಸದಸ್ಯರಾದ ನಟರಾಜ್, ಕೇಶವ ಹಾವೇನಹಳ್ಳಿ, ಶೇಖರ್ ಚಿಕ್ಕರಂಗಾಪುರ, ಕೃಷಿಕ ಸಮಾಜದ ನಿರ್ಧೇಶಕ ಬಸವರಾಜು, ಶ್ರೇಷ್ಟನಾಥ್‌ಸ್ವಾಮಿ, ಹೋಘನಗಟ್ಟ ಶಶಿವಧನ, ಶಂಕರಮೂರ್ತಿ, ವಸಂತ್ ಬಳ್ಳೆಕಟ್ಟೆ, ಗಂಗಾಧರ್ ಹೊಸಹಳ್ಳಿ, ಮೂರ್ತಿ, ಮನೋಹರ್. ಸತೀಶ್,
ಆನಂದ್, ಲೋಹಿತಾಶ್ವ, ಆಲದಹಳ್ಳಿ ಹರೀಶ್, ಯೋಗನಂದಸ್ವಾಮಿ, ಲೋಹಿತ್, ಕೆರಗೋಡಿ ನಿಂಗಪ್ಪ, ಮಂಜುನಾಥ್, ಸಚ್ಚಿದಾನಂದ, ಸೇರಿದಂತೆ ನೂರಾರು ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ