Year: 2025

ತಿಪಟೂರು : ನಾಡು ಕಂಡ ಅಪ್ರತಿಮ ಕಾಯಕ ಯೋಗಿ, ಪವಾಡ ಪುರುಷರು, ಸಂತ ಯೋಗಿ, ನಾಥ ಸಂಪ್ರದಾಯದ ಮೂಲಕ ಸನಾತನ ಸಂಸ್ಕೃತಿಯನ್ನು ಪುನರುಜ್ಜೀವನ ಗೊಳಿಸಿದ ಶತಮಾನದ ಸಂತ ಬಾಲಗಂಗಾಧರನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕಿದೆ ಎಂದು ದಸರೀಘಟ್ಟದ ಆದಿಚುಂಚನಗಿರಿ ಶಾಖಾ ಮಠದ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.ತಾಲ್ಲೂಕಿನ ದಸರೀಘಟ್ಟದ ಆದಿಚುಂಚನಗಿರಿ ಶಾಖಾ ಮಠದ ಚೌಡೇಶ್ವರಿ ದೇವಿಯ ದೇವಾಲಯದಲ್ಲಿ ಸೋಮವಾರ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ ಪುಣ್ಯಾರಾಧನಾ ಸಮಾರಂಭ ಅಂಗವಾಗಿ ಆಯೋಜಿಸಿದ್ದ ‘ಶ್ರೀ ಗುರು ಸ್ಮರಣಾಂಜಲಿ’ ಸಮಾರಂಭದಲ್ಲಿ ಮಾತನಾಡಿದ ಅವರು ಬಾಲಗಂಗಾಧರನಾಥ ಸ್ವಾಮೀಜಿಯವರ ಸಾಮಾಜಿಕ ಕಾಳಕಳಿ ಕಾರಣದಿಂದಲೇ ಜಗತ್ತಿನಾದ್ಯಂತ ಚಿರಸ್ಮರಣಿಯಾರಿದ್ದು ಸಮಾಜಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಪ್ರಗತಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಎಲ್ಲಾ ವರ್ಗದ ಜನಸಾಮಾನ್ಯರಿಗೆ ದಾರಿ ದೀಪವಾಗಿ ಪ್ರಜ್ವಲಿಸುತ್ತಿದ್ದಾರೆ. ಶ್ರೀಗಳು ಅನ್ನ, ಅಕ್ಷರ, ಆರೋಗ್ಯ ಕ್ಷೇತ್ರವನ್ನು ತಮ್ಮ ಮೂಲ ಮಂತ್ರವಾಗಿಸಿಕೊAಡು ರೈತರಿಗೆ, ದೀನ-ದಲಿತರಿಗೆ ನೀಡಿದ ಸೇವೆ ಅವಿಸ್ಮರಣೀಯ. ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದಂತಹ ವಿಶಿಷ್ಟ ಯೋಜನೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಿ ಎಲ್ಲರೂ ಒಂದೇ ಎನ್ನುವಂತಹ ಮನೋಭಾವ ಮೂಡುವ ಸಲುವಾಗಿ ಎಲ್ಲರನ್ನು ಗೌರವವಿಸುತ್ತಿದ್ದರು. ಪ್ರಕೃತಿಯ ವಿನಾಶದಿಂದ ಮಾನವ ಅಂತ್ಯ ಎಂಬ ಸಂದೇಶವನ್ನು ಅರಿತಿದ್ದ ಅವರು ಸಸಿಗಳನ್ನು ನೆಟ್ಟು ಪೋಷಣೆಯನ್ನು ಮಾಡುವಂತಹ ಕಾರ್ಯದಲ್ಲಿ ತೊಡಗಿದ್ದರು. ಸೇವಾ ಮನೋಭಾವಕ್ಕೆ ಉದಾಹರಣೆಯಾಗಿ ರಾಜ್ಯದ ಮೂಲೆ ಮೂಲೆಗಳಲ್ಲಿ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಮುಖಾಂತರ ಉಚಿತ ಸೇವೆ, ಜ್ಞಾನ ಪ್ರಸರಣವನ್ನು ಇಂದಿಗೂ ಮಾಡುತ್ತಿರುವುದು ಶ್ಲಾಘನೀಯ ಎಂದರು.ಈ ಸಮಾರಂಭದಲ್ಲಿ ಗುಡಿಗೌಡರು ಕುಮಾರಸ್ವಾಮಿ, ಎಪಿಎಂಸಿ ಇಂಜಿನಿಯರ್ ಮಂಜುನಾಥ್ ಸೇರಿದಂತೆ ಗ್ರಾಮಸ್ಥರು, ಮಠದ ಸಿಬ್ಬಂದಿಗಳು ಹಾಗೂ ಭಕ್ತಾಧಿಗಳು ಇದ್ದರು.ಪೋಟೋ : ದಸರೀಘಟ್ಟದ ಆದಚುಂಚನಗಿರಿ ಶಾಖಾ ಮಠದ ಚೌಡೇಶ್ವರಿ ದೇವಿಯ ದೇವಾಲಯದಲ್ಲಿ ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿಯವರು ೧೨ನೇ ಪುಣ್ಯಾರಾಧನಾ ಸಮಾರಂಭ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ವಿಶೇಷ ಪೂಜಾ ಕೈಂಕರ್ಯ ಕೈಗೊಳ್ಳಲಾಯಿತು.

ವರದಿ: ಸಂತೋಷ್ ಓಬಳ. ಗುಬ್ಬಿ

ತುಮಕೂರು ಜಿಲ್ಲೆ ತುರುವೇಕೆರೆ ಪೊಲೀಸ್ ಠಾಣೆ ಆವರಣದಲ್ಲಿ ಕುಣಿಗಲ್ ಡಿವೈಎಸ್ಪಿ ಓಂಪ್ರಕಾಶ್ ಆಧ್ಯಕ್ಷತೆಯಲ್ಲಿ ಪರಿಶಿಷ್ಠ ಜಾತಿ ವರ್ಗಗಳ, ಕುಂದುಕೊರತೆ ಸಭೆ ನಡೆಸಲಾಯಿತು.

ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ,ದಲಿತರ ಮೇಲೆ ದೌರ್ಜನ್ಯ ಮಾಡಿದ ವ್ಯಕ್ತಿಗಳಿಂದ ಪ್ರತಿದೂರು ಪಡೆದು,ಪ್ರಕರಣ ದಾಖಲಿಸುವ ಕೃತ್ಯಗಳು ನಡೆಯುತ್ತಿವೆ,ದೌರ್ಜನ್ಯಕ್ಕೊಳಗಾದ ವ್ಯಕ್ತಿಗಳ ಮೇಲೆಯೇ ಕೇಸು ದಾಖಲಾದರೇ ಅವರ ಆತ್ಮಸ್ಥೈರ್ಯ ಕಡಿಮೆಯಾಗುತ್ತದೆ ಎಂದು ಒತ್ತಾಯಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ ಡಿವೈಎಸ್ಪಿ ಓಂಪ್ರಕಾಶ್ ಮಾತನಾಡಿ ಪೊಲೀಸ್ ಇಲಾಖೆ ಪರಿಶಿಷ್ಠ ಜಾತಿ ಹಾಗೂ ವರ್ಗಗಳ ರಕ್ಷಣೆ ವಿಚಾರದಲ್ಲಿ ಕಾನೂನು ವ್ಯಾಕ್ತಿಯಲ್ಲಿ ಸೂಕ್ತಕ್ರಮಗೈಗೊಂಡಿದೆ, ಪರಿಶಿಷ್ಠ ಜಾತಿ ವರ್ಗಗಳ ಮೇಲೆ ದೌರ್ಜನ್ಯಗಳು ನಡೆಯದಂತೆ ಕ್ರಮಕೈಗೊಳ್ಳಲಾಗುವುದು. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಾಗರೀಕರ ಸಹಕಾರ ಅಗತ್ಯ, ಸಮಾಜದಲ್ಲಿ ಕಾನೂನು ವಿರೋದಿ ಕೃತ್ಯಗಳು ನಡೆದಾಗಿ,ಮಾಹಿತಿ ನೀಡಬೇಕು ಎಂದು ತಿಳಿಸಿದರು.
ತುರುವೇಕೆರೆ ಠಾಣೆ ವೃತ್ತ ನಿರೀಕ್ಷಕರಾದ ಲೋಹಿತ್ ಮಾತನಾಡಿ
ಪೊಲೀಸ್ ಇಲಾಖೆಯು ನಾಗರೀಕರ ಕಾನೂನು ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಸಂದರ್ಭದಲ್ಲಿ ಪರಿಶಿಷ್ಟರ ಮೇಲೆ ದೌರ್ಜನ್ಯಗಳು ನಡೆದರೆ ಕೂಡಲೇ ಸ್ಥಳೀಯ ಠಾಣೆಗೆ ನಿರ್ಭಯವಾಗಿ ಬಂದು ದೂರನ್ನು ನೀಡಿ ಯಾವುದೇ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು.ನಾವು ಕಾನೂನಾತ್ಮಕವಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇವೆ. ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ತಮ್ಮ ಸಹಕಾರವು ಸಹಾ ಅತ್ಯಮೂಲ್ಯ ಎಂದು ತಿಳಿಸಿದರು.

ಸಭೆಯಲ್ಲಿ ತುರುವೇಕೆರೆ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ಸಂಗಪ್ಪ ಮೇಟಿ, ಮೂರ್ತಿ ಮತ್ತು ದಂಡಿನ ಶಿವರ ಪೊಲೀಸ್ ಠಾಣೆಯ ಪಿಎಸ್ಐ ಚಿತ್ತರಂಜನ್, ಸಿಬ್ಬಂದಿಗಳಾದ ಎ.ಎಸ್. ಐ ಶಂಕರಪ್ಪ, ಮಂಜಣ್ಣ. , ಸೇರಿದಂತೆ ತಾಲೂಕಿನ ದಲಿತಪರ ಸಂಘಟನೆಗಳ ಮುಖಂಡರಾದ ಮೂರ್ತಿ, ಡೊಂಕಿಹಳ್ಳಿ ರಾಮಣ್ಣ, ಕೃಷ್ಣ ಮಾದರ್, ಹುಲ್ಲೇಕೆರೆ ಜಗದೀಶ್, ಬೀಚನಹಳ್ಳಿ ರಾಮಣ್ಣ, ಪುಟ್ಟರಾಜು, ರಾಯಣ್ಣ, ಮಹೇಶ್, ಚಂದ್ರಯ್ಯ, ಬೋರಪ್ಪ, ಮಂಜುನಾಥ್, ಹಟ್ಟಪ್ಪ, ಮುಂತಾದ ದಲಿತ ಮುಖಂಡರು ಉಪಸ್ಥಿತರಿದರು.

ವರದಿ : ಸಂಪಿಗೆ ಮೂರ್ತಿ

ತಿಪಟೂರಿನ ಸೌರಭ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಟಿ.ಎನ್.ಆಶಾಕಿರಣ್ ಮತ್ತು ಉಪಾಧ್ಯಕ್ಷರಾಗಿ ಬಿ.ಎಸ್.ಶೋಭ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶಂಶಾದ್ ಬೇಗಂ ಘೋಷಿಸಿದ್ದಾರೆ. ನಿರ್ದೇಶಕರುಗಳಾಗಿ ಎಚ್.ವಿ.ಪಂಕಜ ಚಂದ್ರಕಾAತ, ಎಮ್.ಪಿ.ಮಂಜಳ, ಎಮ್.ಎಸ್.ಚೆನ್ನಾಂಬಿಕ, ಕುಸುಮ ನಂದಕುಮಾರಿ ಮಮತಾ ಕೆ.ಮಂಜುಳ ಭಾಗ್ಯಮ್ಮ ನಾಗಮಣಿ ಶಾಂತಮ್ಮ ಆಯ್ಕೆಯಾಗಿದ್ದಾರೆ ಈ ಸಂದರ್ಭದಲ್ಲಿ, ಸಿಬ್ಬಂದಿ ವರ್ಗ, ಕಾರ್ಯದರ್ಶಿ ಕಲ್ಪನ, ಜಮುನ ಚೈತ್ರ ಮೇಘನ ಹಾಜರಿದ್ದರು.

ವರದಿ: ಸಂತೋಷ್ ಓಬಳ. ಗುಬ್ಬಿ

ತಿಪಟೂರು ನಗರಕ್ಕೆ ನೀರುಪೂರೈಸುವ ಈಚನೂರು ಕೆರೆಗೆ ಕಲೂಷಿತ ನೀರು ಸೇರಿರುವ ಪರಿಣಾಮ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ, ನಗರಕ್ಕೆ ಕುಡಿಯುವ ನೀರು ಪೂರೈಕೆ ಬಗ್ಗೆ ನಗರಸಭೆ ಸದಸ್ಯ ಜೊತೆ ಚರ್ಚಿಸಲು ನಗರಸಭೆ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿತ್ತು, ಆದರೆ ವಿರೋದ ಪಕ್ಷದ ಸದಸ್ಯರು ಸಭೆಯಲ್ಲಿ ಗದ್ದಲ ಉಂಟುಮಾಡಿದ ಕಾರಣ,ಸಭೆಯಲ್ಲಿ ಸೂಕ್ತವಾಗಿ ಚರ್ಚೆ ಮಾಡಲು ಸಾಧ್ಯವಾಗಿಲ್ಲ,ಸಧ್ಯಕ್ಕೆ ನಗರದಲ್ಲಿ ನೀರಿನ ಅಭಾವ ಆಗದಂತೆ ಸೂಚನೆ ನೀಡಿದೇನೆ ಎಂದರು

ನಗರದ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಟಿಯಲ್ಲಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ಯವರು

ತಿಪಟೂರು ನಗರಕ್ಕೆ ಕುಡಿಯುವ ನೀರು ಪೂರೈಸುತ್ತಿದ್ದ ಈಚನೂರು ಕೆರೆಯಲ್ಲಿ ತಾಲ್ಲೋಕಿನಲ್ಲಿ ಸುರಿದ ಭಾರೀ ಮಳೆಯಿಂದ ಮಳೆನೀರಿನೊಂದಿಗೆ ಯುಜಿಡಿ ನೀರು ಸೇರಿ,ಕೆರೆನೀರು ಕಲೂಷಿತವಾಗಿದೆ,ತಿಪಟೂರು ನಗರದಲ್ಲಿ ಜನಸಂಖ್ಯೆ ದಿನೆದಿನೆ ಜಾಸ್ತಿಯಾಗುತ್ತಿದ್ದು,ನಗರ ಬೆಳೆಯುತ್ತಿರುವ ಕಾರಣ ಹೆಚ್ಚು ನೀರಿನ ಅಗತ್ಯವಿದ್ದು,ಈಚನೂರು ಕೆರೆ ನೀರು ಶೇಖರಣ ಸಾಮರ್ಥ್ಯ ಕಡಿಮೆ ಇದ್ದು, ಮುಂದಿನ ದಿನಗಳಲ್ಲಿ ನೀರಿನ ಅಭಾವ ಎದುರಾಗಲಿದೆ.ಎನ್ನುವುದನ್ನ ಅರಿತು, ತಾಲ್ಲೋಕಿಗೆ ನೈಸರ್ಗಿಕವಾಗಿ ನೀರು ಹರಿಯುವ ನೊಣವಿನಕೆರೆ ಕೆರೆಯಿಂದ ನೀರು ತರುವ ಯೋಜನೆ ರೂಪಿಸಲಾಗಿತ್ತು,ಅಚ್ಚುಕಟ್ಟು ಪ್ರದೇಶದ ರೈತರಿಗೆ ತೊಂದರೆಯಾಗದಂತೆ ಹೆಚ್ಚುವರಿ ಹಂಚಿಕೆ ಮಾಡಲಾಗಿತ್ತು,ಆದರೆ ನೊಣವಿನಕೆರೆ ಭಾಗದ ರೈತರು ಹಾಗೂ ಅಚ್ಚುಕಟ್ಟುದಾರರಿಗೆ ಸುಳ್ಳುವದಂತಿ ಹಬ್ಬಿದ ಕಾರಣ, ಮಠಾಧೀಶರು ಸೇರಿದಂತೆ ಈ ಭಾಗದ ಕೆಲ ನಾಯಕರು,ಯೋಜನೆ ವಿರುದ್ದ ಹೋರಾಟನಡೆಸಿದರು,ನ್ಯಾಯಾಲಯದಲ್ಲಿ ಮೊಕದ್ದಮೆ ಕೂಡ ದಾಖಲು ಸಹ ಮಾಡಲಾಗಿತ್ತು.ಆದರೆ ಸುಪ್ರೀಂಕೋರ್ಟ್ ನಿರ್ದೇಶನದಂತೆ ಕುಡಿಯುವ ನೀರಿಗೆ ತೊಂದರೆ ಮಾಡುವಂತ್ತಿಲ್ಲ,ನೊಣವಿನಕೆರೆ ಅಚ್ಚುಕಟ್ಟುದಾರರಿಗೆ ತೊಂದರೆಯಾಗದಂತೆ ನೀರು ನಿಗದಿ ಮಾಡಲಾಗಿದೆ ಎಂದು ನ್ಯಾಯಾದೀಶರು ತಿಳಿಸಿದ ಪರಿಣಾಮ ನ್ಯಾಯಾಲಯದಲ್ಲಿ ಇದ್ದ ಪ್ರಕರಣ ವಾಪಾಸ್ ಪಡೆಯಲಾಗಿದ್ದು,ನ್ಯಾಯಾಲಯದ ಪ್ರಕರಣ ಸಹ ವಜಾವಾಗಿದೆ,ಆದರಿಂದ ಜಿಲ್ಲಾಡಳಿತ .ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಜನವರಿ 15ರ ನಂತರ ಸೂಕ್ತ ಕ್ರಮವಹಿಸಲು ಚರ್ಚೆ ನಡೆಸಿದ್ದೇನೆ ನಗರದ ಜನರಿಗೆ ತೊಂದರೆಯಾಗದಂತೆ ಕ್ರಮವಹಿಸಲು ಸೂಚಿಸಿದ್ದೇನೆ ಎಂದರು

ವರದಿ: ಮಂಜುನಾಥ್ ಹಾಲ್ಕುರಿಕೆ

ತುರುವೇಕೆರೆ: ತಾಲ್ಲೂಕಿನಾದ್ಯಂತ ವೆಂಕಟೇಶ್ವರ ಮತ್ತು ಶ್ರೀನಿವಾಸ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ಶುಕ್ರವಾರ ಜರುಗಿದವು.ತಾಲ್ಲೂಕಿನ ದಂಡಿನಶಿವರ ಹೋಬಳಿ ಸಂಪಿಗೆ ಗ್ರಾಮದ ಎರಡನೇ ತಿರುಪತಿ ಎಂದೇ ಖ್ಯಾತರಾಗಿರುವ ಶ್ರೀನಿವಾಸ, ದೇವಾಲಯದಲ್ಲಿ ಭಕ್ತರು ವೈಕುಂಠ ಏಕಾದಶಿಯನ್ನು ಅದ್ದೂರಿಯಾಗಿ ಆಚರಿಸಿದರು.ಸಂಪಿಗೆಯ ಶ್ರೀನಿವಾಸ ದೇವಾಲಯದಲ್ಲಿ ಮುಂಜಾನೆ ಸಾಲು ಸಾಲಾಗಿ ಅಪಾರ ಸಂಖ್ಯೆಯ ಭಕ್ತಾಧಿಗಳು ದೇವರ ದರ್ಶನಕ್ಕೆ ಕಾದು ನಿಂತಿದ್ದರು. ಭಕ್ತರಿಗೆ ಬೃಹತ್ ಶಾಮಿಯಾನ ಹಾಕಿ ಫಲಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಗೋವುಗಳನ್ನು ಪ್ರವೇಶ ಮಾಡಿಸುವ ಮೂಲಕ ವೈಕುಂಠ ದ್ವಾರ ತೆರೆಯಲಾಯಿತು.ರಾತ್ರಿ ವೇಳೆಗೆ 50 ಸಾವಿರಕ್ಕೂ ಹೆಚ್ಚು ಭಕ್ತರು ಸಂಪಿಗೆ ಶ್ರೀನಿವಾಸ ದೇವಾಲಯಕ್ಕೆ ಆಗಮಿಸಿದ್ದರು ಭಕ್ತರಿಗೆ ಲಘು ಉಪಹಾರ ವ್ಯವಸ್ಥೆ ಸಹ ಮಾಡಲಾಗಿತ್ತು.

ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಹಾಗೂ ಶಾಸಕ ಕೆ.ಷಡಕ್ಷರಿ ಸೋದರ ದಿವಂಗತ ಕೆ.ರಾಜಶೇಖರ್,(ರಾಜು ಬೈಯಾ) ರವರ 14ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನ ತಿಪಟೂರು ನಗರದ ಎಸ್,ಎನ್ ,ಎಸ್ ಕನ್ವೆಷನ್ ಹಾಲ್ ನಲ್ಲಿ ಕೆ.ರಾಜಶೇಖರ್ ಅಭಿಮಾನಿ ಬಳಗದಿಂದ ಬೃಹತ್ ಉಚಿತ ಆರೋಗ್ಯ ಶಿಭಿರ ಹಾಗೂ ರಕ್ತದಾನ ಶಿಬಿರ ಹಾಗೂ ಪೌರಕಾರ್ಮಿಕರಿಗೆ ಜರ್ಕಿನ್ ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ತಿಪಟೂರು ಶಾಸಕ ಕೆ.ಷಡಕ್ಷರಿ ಯವರು ದಿವಂಗತ ಕೆ.ರಾಜಶೇಖರ್ ಹಾಗೂ ಕೆ.ಜಯಣ್ಣ ನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪುಣ್ಯಸ್ಮರಣೆ ಹಾಗೂ ಉಚಿತ ಆರೋಗ್ಯ ಶಿಭಿರಕ್ಕೆ ಚಾಲನೆ ನೀಡಿದರು
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ನನ್ನ ಸೋದರ ಕೆ.ರಾಜಶೇಖರ್ ಧಣಿವರಿಯದ ಜನ ನಾಯಕ, ತಮ್ಮ ಜೀವಿತಾವದಿಯುದ್ದಕ್ಕೂ ಜನಸೇವೆಯಲ್ಲಿ ಇದ್ದವರು,ದೀನ ದಲಿತರು, ಕಾರ್ಮಿಕರು,ಬಡವರ ಜನಸೇವೆ ಮೂಲಕ ಜನಮನಗೆದ್ದ ಜನ ಸೇವಕ, ಅವರ ನಿಧನ ನಮ್ಮ ಕುಟಂಬ ಅನುಯಾಯಿಗಳಿಗೆ ಅತೀವ ನೋವುಂಟು ಮಾಡಿದೆ.ಸದಾ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದ ರಾಜಶೇಖರ್ ,ಕಾರ್ಯವೈಖರಿ ನೋಡಿ ನಾನು ಮತ್ತು ನನ್ನ ತಂದೆ ಇಬ್ಬರು ಬೈಯುತ್ತಿದೆವು, ನಿನ್ನ ವಯುಕ್ತಿಕ ಕೆಲಸಗಳಿಗೆ ಆಧ್ಯತೆನೀಡುವಂತೆ ಹೇಳುತ್ತಿದ್ದೆವು, ಆದರೇ ದೇವರ ಇಚ್ಚೆಯಂತೆ ಅವರ ನಿಧನದ ದಿನ ಜನರ ಅರ್ಶೂತರ್ಪಣಾ ನೋಡಿ ಅವರ ಸೇವೆಯ ಮಹತ್ವ ಅರಿವಾಯಿತು,ಅವರ ಸೇವಾಕಾರ್ಯ ಮುಂದುವರೆಸಿ ,ರಾಜುಬೈಯ್ ಆತ್ಮಕ್ಕೆ ಶಾಂತಿಕೋರಬೇಕು ಎನ್ನುವ ದೃಷ್ಠಿಯಿಂದ ರಾಜುಬೈಯ್ ಅಭಿಮಾನಿಗಳು,ಪ್ರತಿವರ್ಷ ಪುಣ್ಯಸ್ಮರಣೆಯಂದು, ಆರೋಗ್ಯಶಿಭಿರ ರಕ್ತದಾನ ಶಿಬಿರ ಹಮ್ಮಿಕೊಳ್ಳುತ್ತಾ ಬಂದಿದ್ದೇವೆ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಖ್ಯಾತವೈದ್ಯರಾದ ಡಾ//ಶ್ರೀಧರ್ ಮಾತನಾಡಿ ಕೆ.ರಾಜಶೇಖರ್ ಜನಸೇವೆಗೆ ತಮ್ಮ ಜೀವನ ಮುಡುಪಾಗಿಟ್ಟ ನಾಯಕ,ಹೆಚ್ಚು ಜನಸೇವೆ ಮಾಡಬೇಕು ಎನ್ನುವ ದೃಷ್ಠಿಯಿಂದ ಜಿಲ್ಲಾಪಂಚಾಯ್ತಿ ಚುನಾವಣೆಗೆ ಸ್ವರ್ಥಿಸಿ ಗೆದ್ದರು,ಆದರೇ ಅಧಿಕಾರ ಸ್ವೀಕರಿಸಿ ಜನರ ಸೇವೆ ಮಾಡುವ ಮೊದಲೇ ವಿಧಿಯಾಟದಂತೆ ದೈವಾಧೀನರಾದರು.ಅವರ ಸ್ಮರಣಾರ್ಥ ಉಚಿತ ಆರೋಗ್ಯ ತಪಾಸಣಾ ಶಿಭಿರ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಖ್ಯಾತವೈದ್ಯರಾದ ಡಾ//ಶ್ರೀಧರ್.ಡಾ//ವಿವೇಚನ್.ಮುಖಂಡರಾದ ಎಂ.ಆರ್ ಸಂಗಮೇಶ್.ತರಕಾರಿ ಪ್ರಕಾಶ್.ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ.ಎನ್ ಕಾಂತರಾಜು,ಬಜಗೂರು ಮಂಜುನಾಥ್.ಕೊಪ್ಪ ಶಾಂತಪ್ಪ ಗ್ರಾ.ಪಂ ಅಧ್ಯಕ್ಷ ಬಿ.ಬಿ ಬಸವರಾಜು ಧರಣೇಶ್ ಮಾದಿಹಳ್ಳಿ ರೇಣು ನಾಗರಾಜು ತರಕಾರಿ ಕಿಟ್ಟಿ ಕಿಟ್ಟಿಮಾಸ್ಟರ್ . ಶಿವರ ನಾಗರಾಜು.ಮುಂತ್ತಾದವರು ಉಪಸ್ಥಿತರಿದರು

ವರದಿ : ಮಂಜುನಾಥ್ ಹಾಲ್ಕುರಿಕೆ

ತಿಪಟೂರು ನಗರದ ಕೋಟೆ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಶ್ರೀ ವೆಂಕಟೇಶ್ವರ ಸ್ವಾಮಿ,ಶ್ರೀಮಹಾಲಕ್ಷ್ಮಿಹಾಗೂ ಪದ್ಮಾವತಿ ಅಮ್ಮನವರಿಗೆ ವಿಶೇಷ ಅಲಂಕಾರ ಹಾಗೂ ಪೂಜಾಕೈಂಕರ್ಯ ನೆರವೇರಿಸಲಾಯಿತು. ವೈಕುಂಠ ಏಕಾದಶಿ ಅಂಗವಾಗಿ ಶ್ರೀವೆಂಕಟೇಶ್ವರಸ್ವಾಮಿಗೆ ರಜತ ಕಿರೀಟಧಾರಣೆ, ರಜತ ತ್ರಿಪುಂಡ್ರ ನಾಮಧಾರಣೆ ,ಸ್ವರ್ಣಪಾಧುಕೆಧಾರಣೆ ವಿಶೇಷ ಅಲಂಕಾರ ನೆರವೇರಿಸಲಾಯಿತು
ಏಕಾದಶಿಯಂದು ಉತ್ತರವೈಕುಂಠದ್ವಾರದ ವಿಶೇಷ ದರ್ಶನ ಹಾಗೂ ಪ್ರವೇಶಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು ದ್ವಾದಶಿಯಂದು ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಹೋಮ ಹವನ ವಿಶೇಷ ಪೂಜಾಕೈಂಕರ್ಯಗಳನ್ನ ನೆರವೇರಿಸಲಾಗುತ್ತಿದೆ,ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದ ಭಕ್ತ ಸಮೂಹ ಗೋವಿಂದ ನಾಮಸ್ಮರಣೆಗೊಂದಿಗೆ ಪೂಜೆಸಲ್ಲಿಸಿ ಕೃತಾರ್ಥರಾದರು.

ಶ್ರೀಕ್ಷೇತ್ರ ಭಕ್ತರು ಹಾಗೂ ದೇವಾಲಯ ಸಮಿತಿಯ ಅಶೋಕ್ ಮಾತನಾಡಿ ಭಕ್ತಪರಾದೀನ ಶ್ರೀವೆಂಕಟೇಶ್ವರ ಸ್ವಾಮಿಯ ಭಕ್ತರ ಅಭಿಷ್ಠೆಗೋಸ್ಕರ 33ವರ್ಷಗಳ ಹಿಂದೆ ಕುಲಬಂಧುಗಳು ಸೇರಿ ಸಿಂಗ್ರಿ ನಂಜಪ್ಪ ನವರ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯ ಆವರಣದಲ್ಲಿಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ ಸ್ಥಾಪನೆ ಮಾಡಿದ್ದು,ಸರ್ವಜನರ ಅಭಿಲಾಷೆಯಂತೆ ಪೂಜಾಕೈಂಕರ್ಯಗಳು ನಡೆಯುತ್ತಿದ್ದು,ಶ್ರೀಕ್ಷೇತ್ರ ತಿಪಟೂರು ಜನರ ಆರಾಧ್ಯದೈವವಾಗಿ ಭಕ್ತರ ಇಷ್ಟಾರ್ಥ ನೆರವೇರಿಸುತ್ತಾ ಬಂದಿದೆ.33 ವರ್ಷಗಳಿಂದ ವೈಕುಂಠ ಏಕಾದಶಿ ಆಚರಣೆ ಮಾಡಲಾಗುತ್ತಿದ್ದು, ಪ್ರತಿವರ್ಷದಂತೆ ಈ ವರ್ಷವೂ ಸಹ ಶ್ರೀಸ್ವಾಮಿಯವರಿಗೆ ವಿಶೇಷ ಅಲಂಕಾರ ಪೂಜೆ ಹಾಗೂ ಹವನಗಳನ್ನ ಏರ್ಪಡಿಸಿದ್ದು, ಉತ್ತರ ವೈಕುಂಠ ದರ್ಶನ ಹಾಗೂ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

Your Attractive Heading

ತಿಪಟೂರು ತಾಲ್ಲೋಕಿನ ಕಸಬಾ ಹೋಬಳಿ ಶಿವಮೊಗ್ಗ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206ರ ಮಾದಿಹಳ್ಳಿ ಕಬ್ಬಿಣದ ಸೇತುವೆ ಬಳಿ ಬೈಕ್ ಗಳ ನಡುವೆ ಭೀಕರ ಅಪಘಾತ ಉಂಟಾಗಿದ್ದು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ರಾತ್ರಿ 8.ಗಂಟೆ ಸಮಯದಲ್ಲಿ kA 44 J8554ಹಾಗೂ KK44 EB 3486 ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಗೆ ತೀವ್ರಗಾಯಗಳಾಗಿದ್ದು. ಚಿಕಿತ್ಸೆಗಾಗಿ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.ಗಾಯಳುಗಳ ವಿಳಾಸ ಹೆಸರು ಪತ್ತೆಯಾಗಿರುವುದಿಲ್ಲ.ಸ್ಥಳಕ್ಕೆ ತಿಪಟೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ವರದಿ:ಮಂಜುನಾಥ್ ಹಾಲ್ಕುರಿಕೆ

ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಹಾಗೂ ಶಾಸಕ ಕೆ.ಷಡಕ್ಷರಿ ಸೋದರ ದಿವಂಗತ ಕೆ.ರಾಜಶೇಖರ್,(ರಾಜು ಬೈಯಾ) ರವರ 14ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ದಿನಾಂಕ 11.01.2025 ರಂದು ಶನಿವಾರ ತಿಪಟೂರು ನಗರದ ಈಡೇನಹಳ್ಳಿ ಗೇಟ್ ಬಳಿ ಇರುವ ಎಸ್ಎನ್ ಎಸ್ ಕನ್ವೆಷನ್ ಹಾಲ್ ನಲ್ಲಿ ಕೆ.ರಾಜಶೇಖರ್ ಅಭಿಮಾನಿ ಬಳಗದಿಂದ ಬೃಹತ್ ಉಚಿತ ಆರೋಗ್ಯ ಶಿಭಿರ ಹಾಗೂ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿದೆ.

ತಿಪಟೂರು ನಗರದ ವೈಭವ್ ಕಚೇರಿಯಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ನಗರಸಭಾ ಸದಸ್ಯ ತರಕಾರಿ ಪ್ರಕಾಶ್ , ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯ ಕೆ.ರಾಜಶೇಖರ್ ಧಣಿವರಿಯದ ಜನ ನಾಯಕ, ತಮ್ಮ ಜೀವಿತಾವದಿಯುದ್ದಕ್ಕೂ ಜನಸೇವೆಯಲ್ಲಿ ಇದ್ದವರು, ಜನಸೇವೆ ಮೂಲಕ ಜನಮನಗೆದ್ದ ರಾಜುಬೈಯ್ ನಿಧನ ಅವರ ಅನುಯಾಯಿಗಳಿಗೆ ಅತೀವ ನೋವುಂಟು ಮಾಡಿದ್ದು, ಅವರ ಸೇವಾಕಾರ್ಯ ಮುಂದುವರೆಸಿ ,ರಾಜುಬೈಯ್ ಆತ್ಮಕ್ಕೆ ಶಾಂತಿಕೋರಬೇಕು ಎನ್ನುವ ದೃಷ್ಠಿಯಿಂದ ರಾಜುಬೈಯ್ ಅಭಿಮಾನಿಗಳು,ಪ್ರತಿವರ್ಷ ಪುಣ್ಯಸ್ಮರಣೆಯಂದು, ಆರೋಗ್ಯಶಿಭಿರ ರಕ್ತದಾನ ಶಿಬಿರ ಹಮ್ಮಿಕೊಳ್ಳುತ್ತಾ ಬಂದಿದ್ದು.14ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ದಿನಾಂಕ 11.01.2025ರಂದು ಶನಿವಾರ ತಿಪಟೂರು ನಗರದ ಎಸ್.ಎನ್.ಎಸ್ ಕನ್ವೆಷನ್ ಹಾಲ್ ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನೇತ್ರತಪಾಸಣೆ,ಮತ್ತು ಶ್ರದ್ದಾ ಐಕೇರ್ ಸಹಯೋಗದಲ್ಲಿ ಶಸ್ತ್ರ ಚಿಕಿತ್ಸಾ ಶಿಭಿರ ಆಯೋಜಿಸಿದ್ದು, ನಾಗರೀಕರು ಶಿಬಿರದ ಸೌಲಭ್ಯ ಪಡೆಯಬೇಕು ಎಂದು ತಿಳಿಸಿದರು

ಕಾಂಗ್ರೇಸ್ ಮುಖಂಡ ಲೋಕನಾಥ್ ಸಿಂಗ್ ಮಾತನಾಡಿ ರಾಜುಬೈಯ್ ಪುಣ್ಯಸ್ಮರಣೆ ಅಂಗವಾಗಿ ತಿಪಟೂರಿನ ಶ್ರೀ ರಂಗ ಆಸ್ಪತ್ರೆ, ಕುಮಾರ್ ಆಸ್ಪತ್ರೆ ವೈಭವಿ ಮಕ್ಕಳ ಆಸ್ಪತ್ರೆ, ತಿಪಟೂರು ಹೆಲ್ತ್ ಸೆಂಟರ್ ಸೇರಿದಂತೆ ಅನುಭವಿ ತಜ್ಞ ವೈದ್ಯರ ತಂಡದೊಂದಿಗೆ ಆರೋಗ್ಯ ಶಿಬಿರ ನಡೆಸಲಾಗುತ್ತಿದೆ.ಉಚಿತ ಹೃದಯ ರೋಗ ತಪಾಸಣೆ,ಅಪೆಂಡಿಕ್ಸ್ ಪರೀಕ್ಷೆ,ಕೀಲು ಮತ್ತು ಮೂಳೆ ಪರೀಕ್ಷೆ,ಕಿಡ್ನಿಕಲ್ಲು ಹಾಗೂ ಪ್ರೊಸೈಡ್ ಪರೀಕ್ಷೆ.ಸ್ತ್ರೀ ರೋಗ ಹಾಗೂ ಗರ್ಭಕೋಶ ಸಂಬಂದಿಸಿದ ಪರೀಕ್ಷೆಗಳು ಸೇರಿದಂತೆ ತಪಾಸಣೆ ಶಿಬಿರ ನಡೆಸಲಾಗುತ್ತದೆ ಎಂದು ತಿಳಿಸಿದರು
ಪತ್ರಿಕಾ ಘೋಷ್ಠಿಯಲ್ಲಿ ಮುಖಂಡರಾದ ಧರಣೇಶ್, ಅಣ್ಣಯ್ಯ,ಮಾದಿಹಳ್ಳಿ ರೇಣು. ಎಂ.ಎಸ್ ಯೋಗೆಶ್,ವಗ್ಗನಘಟ್ಟ ಯೋಗಾನಂದಸ್ವಾಮಿ,ಎಂ.ಸಿ ನಟರಾಜ್, ಶಂಕರಮೂರ್ತಿ,ಕುಮಾರ್.ಮುಂತ್ತಾದವರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

ತುಮಕೂರು ಜಿಲ್ಲೆ ತಿಪಟೂರು ನಗರಕ್ಕೆ ಕುಡಿಯುವ ನೀರು ನಿಲ್ಲಿಸಿದ್ದು, ನಗರದ ಜನ ಕುಡಿಯುವ ನೀರಿಗೂ ತತ್ಪರ ಪಡುವಂತ್ತಾಗಿದೆ, ಸರ್ಕಾರ ಹಾಗೂ ನಗರಸಭೆಗೆ ಅನೇಕ ಭಾರೀ ಮನವಿ ಮಾಡಲಾಗಿದೆ ಮಧ್ಯಮಗಳಲ್ಲೂ ವರದಿಗಳು ಬಂದಿವೆ, ನಗರ ಆಡಳಿತ ಹಾಗೂ ಪೌರಾಯುಕ್ತರು, ನಗರದ ಜನರಿಗೆ ಕುಡಿಯುವ ನೀರು ನೀಡದೆ, ನಗರದ ಜನಕ್ಕೆ ತೊಂದರೆ ಮಾಡಲಾಗುತ್ತಿದೆ ಕೂಡಲೇ ನಗರಸಭೆ ಆಡಳಿತ ಉತ್ತರ ನೀಡಬೇಕು ಎಂದು ಒತ್ತಾಯಿಸಿ ನಗರಸಭೆ ವಿರೋಧ ಪಕ್ಷದ ನಾಯಕ ರಾಮ್ ಮೋಹನ್ ನೇತೃತ್ವದಲ್ಲಿ ನಗರಸಭೆ ವಿಶೇಷ ಸಾಮಾನ್ಯ ಸಭೆ ಬಹಿಷ್ಕರಿಸಿ ನಗರಸಭೆ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲಾಯಿತು.

ತಿಪಟೂರು ನಗರಸಭೆ ಅಧ್ಯಕ್ಷರಾದ ಶ್ರೀಮತಿ ಯಮುನಾ ಧರಣೇಶ್, ಅಧ್ಯಕ್ಷತೆಯಲ್ಲಿ ಶಾಸಕರಾದ ಕೆ.ಷಡಕ್ಷರಿಯವರ ಉಪಸ್ಥಿತಿಯಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಸಲಾಯಿತು, ಸಭೆ ಆರಂಭವಾಗುತ್ತಿದ್ದಂತೆ, ಬಿಜೆಪಿ ಸದಸ್ಯರು ತಿಪಟೂರಿನಲ್ಲಿ ಕುಡಿಯುವ ನೀರಿಗೆ ಆಹಾಕಾರವಿದೆ, ತಿಪಟೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಈಚನೂರು ನಗರಕ್ಕೆ ನೀರುಪೂರೈಸುವ ನೀರು ನಿಲ್ಲಿಸಲಾಗಿದೆ,ಈಚನೂರು ಕೆರೆ ನೀರಿಗೆ ಯುಜಿಡಿ ಕೊಳಚೆ ನೀರು ಸೇರಿ, ಕಲುಷಿತವಾಗಿದ್ದು.ಕುಡಿಯಲು ಯೋಗ್ಯವಾಗಿಲ್ಲ ಎನ್ನಲಾಗಿದ್ದು.ನಗರಸಭೆ ಆಡಳಿತ ನಗರದ ಜನರಿಗೆ ಕುಡಿಯುವ ನೀರೊದಗಿಸಲು, ಪರ್ಯಾಯವಾಗಿ ಯಾವ ವ್ಯವಸ್ಥೆ ಮಾಡಿಕೊಳ್ಳಲಾಗಿದೆಯಾ ಎಂದು ಸಭೆಯಲ್ಲಿ ಬಿಜೆಪಿ ಸದಸ್ಯರು ಪ್ರಶ್ನೆ ಮಾಡಿದ್ದಾಗ ಅಡಳಿತ ಪಕ್ಷದ ಸದಸ್ಯರು ಹಾಗೂ ವಿರೋಧ ಪಕ್ಷದ ಸದಸ್ಯರು ನಡುವೆ ವಾಗ್ವಾದ ನಡೆಯಿತು, ಶಾಸಕ ಕೆ.ಷಡಕ್ಷರಿ ಮಾತನಾಡಿ ತಾಲ್ಲೋಕಿನಲ್ಲಿ ಹೆಚ್ಚು ಮಳೆಯಾದ ಕಾರಣ ಈಚನೂರು ಕೆರೆಗೆ ಮಳೆನೀರಿನೊಂದಿಗೆ ಯುಜಿಡಿ ನೀರು ಸೇರಿ, ಕಲುಷಿತವಾಗಿದೆ, ಈಚನೂರು ಕೆರೆ ನೀರನ್ನ ಲ್ಯಾಬ್ ಗೆ ಕಳುಹಿಸಲಾಗಿದ್ದು. ತಜ್ಞಾರ ವರದಿಯಂತೆ ಮುಂದಿನ ಕ್ರಮವಹಿಸುತ್ತೇವೆ. ನಗರದ ಜನರಿಗೆ ತೊಂದರೆಯಾಗದಂತೆ ನಗರಕ್ಕೆ ನೀರುಕೊಡಲು ಪರ್ಯಾಯ ಮಾರ್ಗಗಳನ್ನ ಯೋಚನೆ ಮಾಡಿ ಕ್ರಮಕೈಗೊಳ್ಳುಲಾಗುವುದು ಎಂದು ತಿಳಿಸಿದರು, ಶಾಸಕರ ಉತ್ತರದಿಂದ ತೃಪ್ತರಾಗದ ಬಿಜೆಪಿ ಸದಸ್ಯರು ಸಭೆ ಬಹಿಷ್ಕಾರಿಸಿ ನಗರಸಭೆ ಮುಂಭಾಗ ಧರಣಿ ನಡೆಸಿ ನಗರಸಭೆ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಧರಣಿ ನಿರತ ಸದಸ್ಯರ ಬಳಿ ಆಗಮಿಸಿದ ನಗರಸಭೆ ಅಧ್ಯಕ್ಷೆ ಶ್ರೀಮತಿ ಯಮುನಾ ಧರಣೇಶ್ ಮಾತನಾಡಿ ತಿಪಟೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವುದು ನಮ್ಮ ಮೊದಲ ಆಧ್ಯತೆ, ಈಚನೂರು ಕೆರೆ ನೀರು ಕಲುಷಿತವಾಗಿದೆ,ನಗರದ ಜನರಿಗೆ ತೊಂದರೆಯಾಗದಂತೆ ಪರ್ಯಾಯ ಮೂಲಗಳಿಂದ ನೀರುಪೂರೈಸಲು, ಎಲ್ಲಾ ಸದಸ್ಯರು ಸಹಕಾರ ನೀಡಿ. ನಿಮ್ಮ ವಾರ್ಡ್ ಸಮಸ್ಯೆಗಳನ್ನ ಮುಕ್ತವಾಗಿ ಚರ್ಚೆ ಮಾಡಿ, ಎಲ್ಲರ ಸಮಸ್ಯೆಗಳಿಗೂ ಸೂಕ್ತವಾಗಿ ಸ್ಪಂದಿಸುತ್ತೇವೆ ಎಂದರು

ನಗರಸಭೆ ಬಿಜೆಪಿ ವಿರೋಧ ಪಕ್ಷದ ನಾಯಕ ಮಾಜಿ ನಗರಸಭೆ ಅಧ್ಯಕ್ಷ ರಾಮ್ ಮೋಹನ್ ಮಾತನಾಡಿ ಬೇಸಿಗೆ ಆರಂಭವಾಗುವ ಮೊದಲೆಡ ತಿಪಟೂರಿನಲ್ಲಿ ಕುಡಿಯುವ ನೀರಿಗೆ ಆಹಾಕಾರ ಪಟುವಂತ್ತಾಗಿದೆ,ನಗರದ ಜನ ಟ್ಯಾಂಕರ್ ಮೊರೆಹೋಗುತ್ತಿದ್ದಾರೆ.ನಗರದ ಜನರಿಗೆ ಕುಡಿಯುವ ನೀರು ಪೂರೈಸಬೇಕ್ಕಾದ ನಗರ ಆಡಳಿತ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು ಸದಸ್ಯರ ವಾರ್ಡ್ ಗಳ ಸಮಸ್ಯೆಗಳಿಗೆ ಪೌರಾಯುಕ್ತರು ಸ್ಪಂದಿಸುತ್ತಿಲ್ಲ.ಸಮಸ್ಯೆಯ ಆರಂಭದಲ್ಲೆ ನಗರದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು, ಯಾವುದೇ ಮುಂದಾಲೋಚನೆ ಮಾಡದೆನಿರ್ಲಕ್ಷ್ಯ ವಹಿಸಲಾಗಿದೆ.ನಗರದ ಜನರಿಗೆ ಮುಂದಿನ ನೀರುಪೂರೈಸಲು ,ಯಾವಕ್ರಮಕೈಗೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ಸಭೆಯಲ್ಲಿ ಪೌರಾಯುಕ್ತ ವಿಶವೇಶ್ವರಯ್ಯ ಬದರಗಡೆ ಸಭೆಯಲ್ಲಿ ಉಪಸ್ಥಿತರಿದರು.
ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯರಾದ ರಾಮ್ ಮೋಹನ್. ಸಂಗಮೇಶ್,ಪ್ರಸನ್ನ ಕುಮಾರ್.ಸಂಧ್ಯಾಕಿರಣ್,ಶ್ರೀನಿವಾಸ್.ಮಲ್ಲೇಶ್ ನಾಯ್ಕ,ಶಶಿಕಿರಣ್.ಲತಾ ಲೋಕೇಶ್.ಜಯಲಕ್ಷ್ಮಿ,ಓಹಿಲಾಗಂಗಾಧರ್ ಮುಂತ್ತಾದವರು ಉಪಸ್ಥಿತರಿದರು

ವರದಿ: ಮಂಜುನಾಥ್ ಹಾಲ್ಕುರಿಕೆ

error: Content is protected !!