Year: 2025

ಕಷ್ಟದ ಅನುಭವ ಇರುವವರು ಮಾತ್ರ ಕಷ್ಟದಲ್ಲಿ ಇರುವವರಿಗೆ ಸ್ವಂದಿಸಲು ಸಾಧ್ಯ,ನೊಂದವರ ಸಮಸ್ಯೆಗೆ ತಮ್ಮ ಕೈಲಾದ ಸೇವೆ ಮಾಡಿದರೆ ಹೆಚ್ಚು ಆತ್ಮತೃಪ್ತಿ ದೊರೆಯುತ್ತದೆ,ಕಷ್ಟದಲ್ಲಿ ಇರುವ ಮನುಷ್ಯ ಸಹಾಯದೊರೆತ್ತಾಗ ಮಾಡುವ ನಮಸ್ಕಾರ ಹಾಗೂ ಅವನ ನಗು ಸಾವಿರ ಸನ್ಮಾನಕ್ಕೆ ಸಮನಾಗುತ್ತದೆ ಎಂದು ಖ್ಯಾತ ವೈದ್ಯರು ಹಾಗೂ ಕುಮಾರ್ ಆಸ್ಪತ್ರೆ ಅಡಳಿತಾಧಿರಿಗಳಾದ ಕಲ್ಪತರು ರತ್ನ ಡಾ//ಶ್ರೀಧರ್ ಅಭಿಪ್ರಾಯಪಟ್ಟರು


ಡಾ//ಶ್ರೀಧರ್ ರವರಿಗೆ ನಗರದ ನಮ್ರತಾ ಅಯಿಲ್ ರಿಫೈನರಿ ಪ್ರವೈಟ್ ಲಿಮಿಡೆಟ್ ವತಿಯಿಂದ ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ//ಶ್ರೀಧರ್ ರವರು ನಾವೂ ಗಳಿಸಿದ ಹಣದಲ್ಲಿ ಸ್ಪಲ್ಪಭಾಗವನ್ನ ಸಮಾಜಕ್ಕೆ ವಿನಿಯೋಗಿಸುವ ಮನಸ್ಥಿತಿ ಬೆಳಸಿಕೊಳ್ಳಬೇಕು,ಕಷ್ಟದಲ್ಲಿ ಇರುವ ಮನಷ್ಯನಿಗೆ ಸಹಾಯ ಮಾಡಿದರೆ,ಹೆಚ್ಚು ತೃಪ್ತಿದೊರೆಯುತ್ತದೆ, ನಾವೂ ಮಾಡುವ ಕೆಲಸ ಪ್ರಾಮಾಣಿಕವಾಗಿದ್ದರೆ, ಸಮಾಜ ನಮ್ಮಜೊತೆ ಇರುತ್ತದೆ ,ನಾನು ಹಲವಾರು ಸಮಾಜಮುಖಿ ಕೆಲಸಗಳಿಗೆ ಮುಂದಾದಗ,ಹಲವಾರು ಜನ ಕೈ ಜೊಡಿಸಿದ್ದಾರೆ, ಅಂತಹ ಸಹೃದಯರಲ್ಲಿ ನಮ್ರತಾ ಆಯಿಲ್ ರಿಫೈನರಿ ಮಾಲೀಕರಾದ ಶಿವಪ್ರಸಾದ್ ಹಾಗೂ ಡಾ//ವಿವೇಚನ್ ಕೂಡ ಯಾವಾಗಲೂ ನಮ್ಮ ಜೊತೆಗಿರುತ್ತಾರೆ,ಕೋವಿಡ್ ಸಂಕಷ್ಟದ ಸಮಯದಲ್ಲಿ ನಮ್ಮ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅನುಕೂಲವಾಗುವಂತೆ ಆಕ್ಸಿಜನ್ ಪ್ಲಾಂಟ್ ಹಾಕಲು ಹೊರಟಾಗ ಎಷ್ಟೊ ಜನ ನನಗೆ ಅರಿವಿಲ್ಲದಂತೆ ಕೈ ಜೋಡಿಸಿದರು, ರಾಜ್ಯದಲ್ಲಿಯೇ ಖಾಸಗೀ ಆಸ್ಪತ್ರೆ ಸಂಕಷ್ಟ ಸಮಯದಲ್ಲಿ ಆಕ್ಸಿಜನ್ ಪ್ಲಾಂಟ್ ಮಾಡಿ ರೋಗಿಗಳ ಆರೈಕೆ ಮಾಡಿದೆ,ಎನ್ನ ಬಹುದು,ನಾವೂ ಯಾವುದೇ ಪ್ರತಿಫಲಾಫೇಕ್ಷೆ ಇಲ್ಲದೆ ಕೆಲಸ ಮಾಡಿದರೆ ಜನ ನಮ್ಮೊಂದಿಗೆ ಇರುತ್ತಾರೆ, ತೋರಿಕೆಗಾಗಿ ಮಾಡುವ ಸೇವೆ ಜಾಸ್ತಿದಿನ ಉಳಿಯುವುದಿಲ್ಲ,ಪ್ರಾಮಾಣಿಕ ಸೇವೆ ದೇವರ ಕೆಲಸವಿದ್ದಂತೆ ಎಂದು ತಿಳಿಸಿದರು.
ನಮ್ರತಾ ಆಯಿಲ್ ರಿಫೈನರಿ ಮಾಲೀಕರಾದ ಶಿವಪ್ರಸಾದ್ ಮಾತನಾಡಿ ಡಾ//ಶ್ರೀಧರ್ ರವರಿಗೆ ಜೀ ಕನ್ನಡ ಪ್ರಶಸ್ತಿ ದೊರೆತ್ತಿರುವುದು , ತಾಲ್ಲೋಕಿನ ಹೆಮ್ಮಯ ವಿಷಯವಾಗಿದೆ,ಅವರ ಸಮಾಜಮುಖಿ ಸೇವಾಕಾರ್ಯಗಳು ಸದಾ ಅವಿಸ್ಮರಣೀಯ, ಹಾಗೂ ಅನುಕರಣೀಯವಾಗಿವೆ,ಅವರ ಜೊತೆ,ಸ್ನೇಹಿತರಾಗಿ,ಜನಸೇವೆಮಾಡುವಅವಕಾಶದೊರೆತಿರುವುದು,ಸಂತೋಷದ ವಿಚಾರವಾಗಿದೆ.ದೇವರು ಅವರಿಗೆ ಹೆಚ್ಚಿನ ಶಕ್ತಿ ನೀಡಲಿ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಡಾ//ಜಿ.ಬಿ ವಿವೇಚನ್ ಮಾತನಾಡಿ ವಯುಕ್ತಿಕ ಕೆಲಸಗಳ ಒತ್ತಡದ ಜೊತೆ ಡಾ//ಶ್ರೀಧರ್ ಸಮಾಜದ ಬಗ್ಗೆ ಹೆಚ್ಚು ಕಳಕಳಿ ಹೊಂದಿದ್ದಾರೆ,ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆ ಹಾಗೂ ಚಿಕಿತ್ಸೆಜೊತೆ,ತೊಂದರೆಯಲ್ಲಿ ಇರುವ ಜನರಿಗೂ ಕೈಲಾದ ಸಹಾಯ ಮಾಡುತ್ತಿದ್ದಾರೆ,ಪ್ರತಿಫಲಾಫೇಕ್ಷೆ ಇಲ್ಲದೆ ಸಮಾಜದ ಬಗ್ಗೆ ಕಾಳಜಿಯಿಂದ ಮಾಡುವ ಸೇವೆ,ಆತ್ಮತೃಪ್ತಿಯ ಕೆಲಸ ಎಂದು ಮಾಡುತ್ತಿದ್ದು, ಜನಸೇವೆಯಲ್ಲಿಯೇ ಹೆಚ್ಚು ಸಂತೋಷಪಡೆಯುತ್ತಿದ್ದಾರೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ನಮ್ರತಾ ಆಯಿಲ್ ರಿಫೈನರಿ ಸಿಬ್ಬಂದಿ ಹಾಗೂ ಕಲಾಕೃತಿ ಸದಸ್ಯರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಿಪಟೂರು ತಾಲೂಕು ಘಟಕದ ವತಿಯಿಂದ ಇದೇ ತಿಂಗಳ 1.3.2025ನೇ ಶನಿವಾರ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ ಹಾಗೂ ಉಚಿತ ಕಣ್ಣಿನ ಪರೀಕ್ಷೆ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ತಿಪಟೂರು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್ ಈ ರಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಜನಪ್ರಿಯ ಶಾಸಕರಾದ ಕೆ ಷಡಕ್ಷರಿ ಅವರು ಉದ್ಘಾಟಿಸಲಿದ್ದು
ನಿವೃತ್ತ ನೌಕರರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಧ್ಯಕ್ಷ ಷಡಕ್ಷರಿ ಹಾಗೂ ಅಧ್ಯಕ್ಷ ಎನ್ ನರಸಿಂಹರಾಜು ಅವರು ಸನ್ಮಾನಿಸಲಿದ್ದಾರೆ ಹಾಗೂ
ಇದೇ ದಿನ ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಾಗೂ ಶಂಕರ್ ಆಪ್ಟಿಕಲ್ಸ್ ತಿಪಟೂರು ಇವರಿಂದ ಉಚಿತ ಕಣ್ಣಿನ ಪರೀಕ್ಷೆಯನ್ನು ಸಂಘದ ಕಚೇರಿಯಲ್ಲಿ ಆಯೋಜಿಸಲಾಗಿದೆ. ಇದರ ಸದುಪಯೋಗವನ್ನು ತಾಲೂಕಿನ ಎಲ್ಲಾ ಸರ್ಕಾರಿ ನೌಕರರು ಹಾಗೂ ನಿವೃತ್ತಿ ನೌಕರರು ಪಡೆಯಬೇಕು ಎಂದು ಇದೇ ವೇಳೆ ಅವರು ತಿಳಿಸಿದರು

ತಿಪಟೂರು: ತೀವ್ರ ಕುತೂಹಲ ಕೆರಳಿಸಿದ್ದ ತಿಪಟೂರು ಶಾಸಕರು ಹಾಗೂ ರಾಜ್ಯ ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷರಾದ ಕೆ. ಷಡಕ್ಷರಿರವರ ಸ್ವ ಕ್ಷೇತ್ರ ಬೆನ್ನಾಯಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತಕ್ಕೆ ಶಾಸಕ ಕೆ.ಷಡಕ್ಷರಿ ರವರ ಮಾರ್ಗದರ್ಶನದಂತೆ, ಚುನಾವಣೆ ನಡೆಯದೆ,ಯಾರು ಕೂಡ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದೆ ಈ ಹಿಂದೆ ಇದ್ದ ನಿರ್ದೇಶಕರಗಳನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದು, ಕುತೂಹಲ ಚುನಾವಣೆಗೆ ತೆರೆ ಬಿದ್ದಂತಾಗಿದೆ. ನೂತನ ನಿರ್ದೇಶಕರುಗಳಾಗಿ ಸಾಲಗಾರರ ಕ್ಷೇತ್ರದಿಂದ ಶಾಸಕರು ಹಾಗೂ ರಾಜ್ಯ ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷರಾದ ಕೆ.ಷಡಕ್ಷರಿ,ಯವರು ಅವಿರೋಧವಾಗಿ ಆಯ್ಕೆಯಾದರು

ಅದೇ ರೀತಿ,ಬಿ.ಜಿ. ಉಮೇಶ್,ಕೆ.ಆರ್.ಮೋಹನ್ ಮಹದೇವಯ್ಯ,ಜವರಪ್ಪ, ಮಹಾಲಿಂಗಯ್ಯ,ಎಸ್. ಗುರುಸ್ವಾಮಿ,ಶಶಿಕಲಾ, ಸಿದ್ದಲಿಂಗಮ್ಮ,ಚಂದ್ರಕುಮಾರ್ ಮತ್ತು ಬಿ.ಆರ್.ಶೇಖರಯ್ಯ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಬಿ.ಎನ್. ಮಂಜುನಾಥ್ ಅವಿರೋಧವಾಗಿ ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ತಿಳಿಸಿದ್ದಾರೆ.

ಹುಚ್ಚಗೊಂಡನಹಳ್ಳಿ ಗ್ರಾಪಂ ಅಧ್ಯಕ್ಷ ಬಿ.ಬಿ.ಬಸವರಾಜ್, ಮಾಜಿ ಪ್ರಧಾನರಾದ ಎಂ.ಸಿ. ಮಂಜುನಾಥ್ ಮತ್ತು ಕಾರ್ಯದರ್ಶಿ ಮರುಳಪ್ಪ ಸೇರಿದಂತೆ ಸದಸ್ಯರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.

ನೂತನ ನಿರ್ದೇಶಕರು ಆಯ್ಕೆ ವೇಳೆ ಪ್ರತ್ಯಕ್ಷವಾದ ಕೋತಿ ದೇವರ ದರ್ಶನವೆಂದು ಹಣ್ಣು ಹಾಗೂ ಸಿಹಿ ಅರ್ಪಿಸಿದ ಸದಸ್ಯರು:
ಬೆನ್ನಾಯ್ಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಪ್ರಕ್ರಿಯೆ ನಡೆದ ನೂತನವಾಗಿ ಅವಿರೋಧವಾಗಿ ಆಯ್ಕೆಯಾದ ಸದಸ್ಯರು ಸಂಭ್ರಮಾಚರಣೆ ನಡೆಸಿ ಪೂಜೆಸಲ್ಲಿಸುವ ವೇಳೆಗೆ ಅಚಾನಕ್ಕಾಗಿ ಕೋತಿಯೊಂದು ಸಹಕಾರ ಸಂಘದ ಕಚೇರಿ ಪ್ರವೇಶ ಮಾಡಿತು.ಪೂಜೆಸಲ್ಲಿಸುತ್ತಿದ್ದ ಟೇಬಲ್ ಬಳಿ ತೆರಳಿ ಪೂಜೆಗೆ ಇಟ್ಟದ ಬಾಳೆಹಣ್ಣು ಹಾಗೂ ಸಿಹಿಯನ್ನ ತಿಂದಿದೆ,ಸಹಕಾರ ಸಂಘದ ಬಳಿ ಇದ್ದ ಸದಸ್ಯರು ಹಾಗೂ ಸಿಬ್ಬಂದಿ ದೇವರ ದರ್ಶನವಾಗಿದೆ ಎಂದು ಬಾಳೆಹಣ್ಣು ಹಾಗೂ ಸಿಹಿಯನ್ನ ನೀಡಿದ್ದಾರೆ. ಹಣ್ಣು ತಿಂದ ಕೋತಿ ಅಲ್ಲಿಂದ ತೆರಳಿದೆ.

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು : ಶಿವರಾತ್ರಿ ದಿನವಾದ ಇಂದು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ವಿಶೇಷ ಪೂಜೆ, ನಿತ್ಯಾರುದ್ರಾಭೀಷೇಕ, ಬಿಲ್ವಾರ್ಚನೆ ಕಾರ್ಯಕ್ರಮಗಳು ಜರುಗಲಿವೆ, ನಗರದ ಕಲ್ಲೇಶ್ವರ ದೇವಾಲಯದಲ್ಲಿ ಬೆಳಗ್ಗೆ ೫.೦೦ ಗಂಟೆಗೆ ರುದ್ರಾಭೀಷೇಕ ನಂತರ ಕಲ್ಲೇಶ್ವರ, ದಕ್ಷೀಣಾಮೂರ್ತಿ, ಗಂಗಾಧರೇಶ್ವರ ಸ್ವಾಮಿಗೆ ಸಹಸ್ರ ಸಹಸ್ರ ಬಿಲ್ವ ಪುಪ್ಷಾರ್ಚನಾ ಕಾರ್ಯಕ್ರಮ, ಕಾಶಿ ವಿಶ್ವನಾಥ ದೇವಾಲಯದಲ್ಲಿ ಮಲ್ಲಿಕಾರ್ಜುನ ದೇವಾಲಯ, ವಿಶೇಷ ಪೂಜೆ, ಅರಳಗುಪ್ಪೆ ಗ್ರಾಮದ ಚೋಳರ ಕಾಲದ ಕಲ್ಲೇಶ್ವರ ಷಡ್ಲಿಂಗ ದೇವಾಲಯದಲ್ಲಿ ಅಕ್ಕಿ ಪೂಜೆ ಪ್ರದರ್ಶನ, ಹರಚನಹಳ್ಳಿ ಶಾಲಿವಾಹನ ಶಕ ನಳ ಮಹಾರಾಜರಿಂದ ನಿರ್ಮಾಣವಾದ ಮೂರು ಲಿಂಗವುಳ್ಳ ದೇವಾಲಯದಲ್ಲಿ ಮಕ್ಕಳ ಸಂತತಿಗಾಗಿ ಪೂಜಾಲಂಕಾರ, ಕರಡಾಳು ಪಂಚಲಿAಗೇಶ್ವರ ದೇವಾ¯ಯ, ಹಾಲ್ಕುರಿಕೆ ಕಲ್ಲೇಶ್ವರ, ಪಾರ್ಥೇಶ್ವರ, ವೀರಭದ್ರೇಶ್ವರ ದೇವಾಲಯ, ಬಿಳಿಗೆರೆ ಗ್ರಾಮದ ಕಣೀವೆ ಮಲ್ಲೇಶ್ವರ ದೇವಾಲಯ, ಬಳವನೇರಲು ಈಶ್ವರ ದೇವಾಲಯ, ಕರೀಕೆರೆ ಗ್ರಾಮದ ಬ್ರಹ್ಮಲಿಂಗೇಶ್ವರ. ಕಲ್ಲೇಶ್ವರ ದೇವಾಲಯದಲ್ಲಿ ದಶಏಕಾರುದ್ರಭೀಷೇಕ, ಪ್ರಸಾದ ವಿನಿಯೋಗ, ಚಿಕ್ಕಬಿದರೆ ಗ್ರಾಮದ ಮಲ್ಲೇಶ್ವರ ದೇವಾಲಯ, ಮತ್ತಿಹಳ್ಳಿ ಈಶ್ವರ ದೇವಾಲಯದಲ್ಲಿ ಅಭೀಷೇಕ, ಕೆರಗೋಡಿ-ರಂಗಾಪುರದ ಶಂಕರೇಶ್ವರ ದೇವಾಲಯ, ಹಾಲ್ಕುರಿಕೆ ರೇವಣಸಿದ್ದೇಶ್ವರ ಬೆಟ್ಟ, ಶಿವರದ ಕಲೇಶ್ವರ ದೇವಾಲಯದಲ್ಲಿ ಭಜನೆ, ಹೊಸಹಳ್ಳಿ ಪುರದ ಬಸವಣ್ಣ ದೇವಾಲಯ, ಈಚನೂರು ರುದ್ರೇಶ್ವರ ದೇವಾಲಯ, ನೊಣವಿನಕೆರೆ ಗ್ರಾಮದ ಪಂಚಲಿAಗೇಶ್ವರ ನೊಣಬೇಶ್ವರ ದೇವಾಲಯ, ಚೋಳೇಶ್ವರ, ಗಂಗೇಶ್ವರ, ಶಾಂತೇಶ್ವರ, ಕಲ್ಲೇಶ್ವರ ದೇವಾಲಯ, ಕಾಡಸಿದ್ದೇಶ್ವರ ಮಠದ ಕಾಡಸಿದ್ದೇಶ್ವರ ವಿಶೇಷ ಪೂಜಾ ಕೈಂಕರ್ಯಗಳು, ಚಿಕ್ಕಮಾರ್ಪನಹಳ್ಳಿ ಮಾದೇಶ್ವರ ದೇವಾಲಯ, ರಾಮಚಂದ್ರಪುರ ಕಲ್ಲೇಶ್ವರ, ಹೊನ್ನವಳ್ಳಿ ಭೈರೇಶ್ವರ, ಬಸ್ತಿಹಳ್ಳೀ ಪುರಾತನ ಈಶ್ವರ ಸಾಸಲಹಳ್ಳಿ ಕಲ್ಲೇಶ್ವರ, ಹುಣಸೇಘಟ್ಟ, ಬಜಗೂರು. ಸೂಗೂರು, ಲಿಂಗದೇವರಹಳ್ಳಿ, ಜೈಪುರ ಮುಂತಾದ ಕಡೆ ಅನ್ನ ಸಂತರ್ಪಣೆ ಕಾರ್ಯ ನಡೆಯಲಿದೆ.

ವರದಿ: ಸಂತೋಷ್ ಓಬಳ. ಗುಬ್ಬಿ

: ತಾಲ್ಲೂಕಿನ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಮೂರು ದಿನಗಳ ಕಾಲ ನಡೆದ ಅಜ್ಜಯ್ಯನ ಜಾತ್ರಾ ಮಹೋತ್ಸವದಲ್ಲಿಹಾಗೂ ಕರಿಬಸವ ಸ್ವಾಮಿಗಳ 232 ನೇ ವಾರ್ಷಿಕ ಸ್ಮರಣೋತ್ಸವ ಹಾಗೂ ಕರಿಬಸವದೇಶಿಕೇಂದ್ರ ಮಹಾಸ್ವಾಮಿಗಳವರ 17 ನೇ ವರ್ಷದ ಪುಣ್ಯಾರಾಧನೆ, ಕಾಡಸಿದ್ದೇಶ್ವರ ಸ್ವಾಮಿಯ ಅಡ್ಡಪಲ್ಲಕ್ಕಿ ಉತ್ಸವ, ಕಾಡಸಿದ್ದೇಶ್ವರ ಸ್ವಾಮಿಯ ರಥೋತ್ಸವ ಮಕ್ಕಳ ವಿದ್ಯಾಯಜ್ಞ ಸಂಕಲ್ಪ ಕಾರ್ಯಕ್ರಮ, ಲಿಂಗದೀಕ್ಷೆ, ವೈಭವದಿಂದ ಅದ್ದೂರಿಯಾಗಿ ನಡೆದವು,

ಕಾಡಸಿದ್ದೇಶ್ವರ ಮಠದ ಅಜ್ಜಯ್ಯನ ಜಾತ್ರಾ ಮಹೋತ್ಸದ ಭಾನುವಾರ ಏರ್ಪಡಿಸಿದ್ದ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಮನುಷ್ಯ ಜೀವನ ಸಾಕ್ಷಾತ್ಕಾರಕ್ಕೆ ಗುರಿ ಗುರುವಿನ ಮಾರ್ಗದರ್ಶನ ಮುಖ್ಯ,ಗುರುತೋರಿದ ದಾರಿಯಲ್ಲಿ ನಡೆದರೆ,ಜೀವನ ಸುಖಮಯವಾಗುತ್ತದೆ,ಭ್ರಮೆಯಲ್ಲಿ ಬದುಕುವ ಮನುಷ್ಯ,ನಾವು ಎಷ್ಟು ಆಸ್ತಿ ಮಾಡುತ್ತಿದ್ದೇವೆ ಎಂದು ಲೆಕ್ಕ ಹಾಕುತ್ತಿದ್ದರೆ ದೇವರು ನಮ್ಮ ಆಯಸ್ಸು ಎಷ್ಟು ಕಡಿಮೆಯಾಯಿತು ಎಂದು ಲೆಕ್ಕ ಹಾಕುತ್ತಿರುತ್ತಾನೆ ಯಾವಗಲೂ ಭಗವಂತ ಕೆಟ್ಟವರಿಗೆ ಅನುಗ್ರಹಿಸುವುದಿಲ್ಲ. ಆದ್ದರಿಂದ ನಾವು ಯಾವಾಗಲೂ ಒಳ್ಳೆಯದನ್ನೇ ಮಾಡಬೇಕು. ನಂಬಿದ ದೇವರು ನಮಗೆ ಯಾವುದೇ ರೂಪದಲ್ಲಿಯಾದರೂ ಸಹಾಯ ಮಾಡುತ್ತಾನೆ,ಅಜ್ಜಯ್ಯನ ಕೃಪೆ ದೊರೆತರೆ ಭಕ್ತರ ಜೀವನ ಸುಖಮಯವಾಗುತ್ತದೆ,ನನ್ನ ಜೀವನ ಪ್ರತಿ ತಿರುವಿನಲ್ಲೂ ಅಜ್ಜಯ್ಯನ ಕೃಪೆಯಿದೆ
ನಾವು ಇಲ್ಲಿಗೆ ಸಂಸದರಾಗಿ ಶಾಸಕರಾಗಿ ಬಂದಿಲ್ಲ. ಮಠದ ಭಕ್ತರಾಗಿ ಬಂದಿದ್ದೇವೆ. ಗುರುಗಳ ಹಾಗೂ ದೇವರ ಅನುಗ್ರಹದಿಂದ ನಾವು ಸಾಧನೆ ಮಾಡಿದ್ದೇವೆ ಅಷ್ಟೆ. ಉಪಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಮೂಲಕ ನನಗೆ ಮಠದ ಪರಿಚಯವಾಯಿತು. ಮಠದ ಭಕ್ತನಾಗಿ ಸಂಪೂರ್ಣವಾಗಿ ಅಜ್ಜೇಯನಿಗೆ ಶರಣಾದ ಮೇಲೆಯೇ ನನಗೆ ಒಳ್ಳೆಯದಾಗಿದೆ. ಎರಡು ಬಾರಿ ರಾಜ್ಯಸಭಾ ಸದಸ್ಯನಾಗಿ ಆಯ್ಕೆಯಾದೆ. ಎಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿಯೂ ನನಗೆ ಒಳ್ಳೆಯದೇ ಆಯಿತು ಎಂದರು.

ಶಾಸಕ ಕೆ.ಷಡಕ್ಷರಿ ಮಾತನಾಡಿ ಶ್ರೀಕ್ಷೇತ್ರ ಇಷ್ಟು ವಿಶಾಲವಾಗಿ ಬೆಳೆಯುತ್ತದೆ ಎಂದು ಎಣಿಸಿರಲಿಲ್ಲ. ಅಜ್ಜಯ್ಯನ ಶಕ್ತಿ ಅಪಾರ. ನನಗೆ ಅದನ್ನು ಅರ್ಥ ಮಾಡಿಕೊಳ್ಳಲು ಸಮಯ ಬೇಕಾಯಿತು. ನಾನು ಸಹಕಾರ ಕ್ಷೇತ್ರದಲ್ಲಿ ಬೆಳೆದು ಬಂದದ್ದರಿದ ಕಾಯಕಶಕ್ತಿಯಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ. ಈ ಬಾರಿ ನನ್ನ ಕ್ಷೇತ್ರಕ್ಕೆ ಜಿಲ್ಲೆಯಾಗಲು ಬೇಕಾಗಿರುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ನನ್ನ ಸಂಕಲ್ಪ ಹಾಗೂ ಗುರಿಯಾಗಿದೆ.ಅಜ್ಜಯ್ಯ ಕೃಪೆನನ್ನ ಮೇಲೆ ಇನ್ನೂ ಆಗಿಲ್ಲ,ಕಳೆದ ಭಾರೀ ಶಾಸಕನಾಗಿದ್ದ ಅವಧಿಯಲ್ಲಿ ಸಚಿವನಾಗುವ ಅವಕಾಶ ಸ್ಪಲ್ಪದರಲ್ಲಿ ವಂಚಿತನಾದೆ,ಈ ಭಾರೀ ಅಜ್ಜಯ್ಯ ಕೃಪೆಮಾಡಿದರೆ ಸಚಿವನಾಗುತ್ತೇನೆ ಎಂದ ಅವರು ಇಡೀ ತಾಲೂಕಿನ ಪ್ರತಿ ಮನೆಗೂ ಕುಡಿಯುವ ನೀರನ್ನು ಕೊಡುವ ಯೋಜನೆ ಮಾಡಿದ್ದೇನೆ ಗ್ರಾಮೀಣ ಪ್ರದೇಶಕ್ಕೆ ಗನೀಘಡದಿಂದ ನೀರು ತರಲು ಯೋಜನೆ ರೂಪಿಸಿದ್ದೇನೆ,ತಿಪಟೂರು ನಗರಕ್ಕೆ ನೀರಿನ ತೀವ್ರತೊಂದರೆಯಾಗಿದೆ,ಯಾವುದ್ದಾದರೂ ಶಾಶ್ವತ ನೀರಿನ ಮೂಲದಿಂದ ನೀರು ಕೊಡಲು ಯೋಜನೆ ರೂಪಿಸಿದ್ದು ಶೀಘ್ರವಾಗಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು

ಕಾಡಸಿದ್ದೇಶ್ವರ ಮಠದ ಕಿರಿಯ ಶ್ರೀಗಳಾದ ಅಭಿನವ ಕಾಡಸಿದ್ದೇಶ್ವರಸ್ವಾಮಿಗಳು ಮಾತನಾಡಿ ಮಠಕ್ಕೆ 800 ವರ್ಷಗಳ ಇತಿಹಾಸವಿದೆ. ಆಗಿನಿಂದ ಈವರೆಗೆ 19ಪೂಜ್ಯರ ತಪಸ್ಸಿನ ಫಲ ಹಾಗೂ ಈಗಿನ ಶ್ರೀಗಳ ಮಾರ್ಗದರ್ಶನದಿಂದ ನಮ್ಮ ಮಠ ಬೆಳೆದಿದೆ. ಶ್ರೀಮಠವು ಅನ್ನ-ಅರಿವು-ಅಭಯದಾನ ಆರೋಗ್ಯದ ಸತ್‌ಸಂಕಲ್ಪ ಹಾಗೂ ಶ್ರೀಗಳ ಆಶೀರ್ವಾದದ ಬಲದಿಂದ ನಡೆಯುತ್ತಿದ್ದು ಎಲ್ಲ ಜಾತಿ, ಧರ್ಮದವರೂ ಇಲ್ಲಿ ಬಂದು ಸೇವೆ ಸಲ್ಲಿಸಿ ಆಶೀರ್ವಾದ ಪಡೆದುಕೊಳ್ಳುತ್ತಾರೆ. ನಾವು ಆಚಾರ-ವಿಚಾರ-ಸಂಸ್ಕಾರಗಳನ್ನು ಪಾಲಿಸಿದರೆ ಮಕ್ಕಳು ಅದನ್ನು ಕಲಿಯುತ್ತಾರೆ. ಮಕ್ಕಳಿಗೆ ತಿಳಿಹೇಳಬೇಕೆಂದರೆ ನಾವು ಮೊದಲು ಸರಿಯಾಗಿರಬೇಕು ಎಂದರು.

ಮಹಾರಾಷ್ಟçದ ಪಾನಮಂಗಳೂರು ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ನಾನು ಕಾಡಸಿದ್ದೇಶ್ವರಮಠದಲ್ಲಿ 18ವರ್ಷ ಸೇವೆ ಸಲ್ಲಿಸಿ ನಂತರ ಮಹಾರಾಷ್ಟçಕ್ಕೆ ಹೋಗಿದ್ದೇನೆ. ಇಲ್ಲಿಯ ಶ್ರೀಗಳ ಪವಾಡಗಳನ್ನು ಎಣಿಸಲಾಗಲ್ಲ. ಶ್ರೀಗಳು 101ದಿನದ ಅನುಷ್ಠಾನದ ಕಠಿಣವ್ರತ ಮಾಡಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಇಲ್ಲಿಯ ಶ್ರೀಗಳ ಮಂತ್ರಾಕ್ಷತೆಯ ಫಲ ಹಾಗೂ ಅನುಗ್ರಹದಿಂದ ನಮ್ಮ ಮಠ ನಡೆಯುತ್ತಿದೆ ಎಂದು ತಿಳಿಸಿದರು.

ಬೆಂಗಳೂರಿನ ವಿಭೂತಿಪುರ ಮಠದ ಮಹಾಂತಲಿಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಕಾಡಸಿದ್ದೇಶ್ವರ ಮಠದಲ್ಲಿ ಸಾಕ್ಷಾತ್ ಮಾತನಾಡುವ ಅಜ್ಜೇಯನ ಸ್ವರೂಪವಾಗಿ ಶ್ರೀಗಳು ಇದ್ದು ಮಾರ್ಗದರ್ಶನ ಮಾಡುತ್ತಿದ್ದಾರೆ. ಜನರಿಗೆ ಸನ್ಮಾರ್ಗ ತೋರಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಬದುಕಿನ ಜ್ಞಾನ ನಮಗಿಲ್ಲಿ ದೊರೆಯುತ್ತದೆ. ಶರೀರ, ಸಂಪತ್ತು ಶಾಶ್ವತವಲ್ಲ. ದಿನಕಳೆದಂತೆಲ್ಲಾ ಮೃತ್ಯು ನಮಗೆ ಹತ್ತಿರವಾಗುತ್ತಿರುತ್ತಾನೆ. ಆದ್ದರಿಂದ ನಾವು ಮತ್ತೊಬ್ಬರಿಗೆ ಒಳ್ಳೆಯದನ್ನು ಮಾಡಬೇಕು ಎಂದರು.

ಕಾರ್ಯಕ್ರಮವು ಮಠದ ಪೀಠಾಧ್ಯಕ್ಷರಾದ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನೇರವೇರಿತು. ತೆವಡಿಹಳ್ಳಿ ಮಠದ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ಅರಸೀಕೆರೆ ತಾ ಬೂದಿಹಾಳ್ ಮಠದ ಶಶಿಶೇಖರ ಸಿದ್ದಬಸವ ಮಹಾಸ್ವಾಮಿ, ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳು, ಷಡ್ಭಾವರಹಿತೇಶ್ವರ ಶಿವಾಚಾರ್ಯ ಸ್ವಾಮಿಜಿ, ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳು, ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ, ಕೊಳ್ಳೆಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ತುರುವೇಕೆರೆ ಶಾಖಾಮಠದ ಗುರುಚನ್ನಬಸವಯ್ಯ, ಡಾ.ಹಿರೇಮಠ್, ವಿಶ್ವ ಕಲ್ಯಾಣ ಟ್ರಸ್ಟ್ನ ಜಯಣ್ಣ, ಶಂಭುಗೌಡರು, ಶ್ರೀಮಠದ ಮೇನೇಜರ್ ಶಂಭು, ಉಮೇಶಣ್ಣ, ಲೋಕೇಶ್ ಸೇರಿದಂತೆ ಹಲವಾರು ಸ್ವಾಮೀಜಿ, ರಾಜಕಾರಣಿಗಳು ಅಧಿಕಾರಿಗಳು ಭೇಟಿ ನೀಡಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

ಸರ್ಕಾರ ರೈತರು ಸಾಗುವಳಿಮಾಡುತ್ತಿರುವ ಜಮೀನಿಗೆ ಬಗರ್ ಹುಕ್ಕುಂ ಸಾಗುವಳಿ ಚೀಟಿ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತರೈತ ಸಂಘ,ಕರ್ನಾಟಕ ರೈತ ಕೃಷಿ ಕಾರ್ಮಿಕ ಸಂಘಟನೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ. ಪ್ರಗತಿ ಪರ ಸಂಘಟನೆಗಳ ಒಕ್ಕೂಟದಿಂದ ತಿಪಟೂರು ಆಡಳಿತ ಸೌಧದ ಮುಂಬಾಗ ಬೃಹತ್ ಪ್ರತಿಭಟನೆ ನಡೆಸಲಾಯಿತು.
ತಿಪಟೂರುಉಪವಿಭಾಗಾಧಿಕಾರಿಗಳಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ ರೈತರು ರಾಜ್ಯಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಪ್ರಾಂತರೈತ ಸಂಘ ಜಿಲ್ಲಾಧ್ಯಕ್ಷ ಚನ್ನಬಸವಣ್ಣ ಮಾತನಾಡಿ ರಾಜ್ಯದಲ್ಲಿ ಸರ್ಕಾರ ಬಗರ್ ಹುಕ್ಕು ಸಾಗುವಳಿ ನೀಡಲು ಅರ್ಜಿ ಆಹ್ವಾನ ಮಾಡಿ ದಶಕಗಳೆ ಕಳೆಯುತ್ತಿವೆ, ಆದರೆ ಸಾಗುವಳಿ ಚೀಟಿ ಪಡೆಯುವ ರೈತರ ಕನಸು ಮಾರೀಚಿಕೆಯಾಗಿದ್ದು, ರೈತರು ಭ್ರಮನಿರಸನಗೊಂಡಿದ್ದಾರೆ,ಸರ್ಕಾರಸಾಗುವಳಿಗೆ ಪತ್ರ ನೀಡಲು ವಿಧಿಸಿರುವ ಷರತ್ತುಗಳು ದೋಷಪೂರಿತವಾಗಿದ್ದು, ಕಳೆದ ಇಪತ್ತು ಮುವತ್ತು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಅನ್ಯಾಯವಾಗುತ್ತಿದೆ, ಸರ್ಕಾರ ಕೂಡಲೇ,ಸರ್ಕಾರಿಗೋಮಾಳ,ಹುಲ್ಲುಬನ್ನಿ ಖರಾಬು, ಸೇದಿವನ,ಮುಂಜೂರಿಗೆ ಅವಕಾಶ ನೀಡಬೇಕು,ಬಡರೈತರು,ಅಲ್ಪಸ್ವಲ್ಪ ಭೂಮಿ ಉಳಿಮೆಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ,ಆದರೆ ಸರ್ಕಾರ ಭೂಮಿ ಮುಂಜೂರಿಗೆ ಅವೈಜ್ಞಾನಿಕ ನಿಯಮ ಹೇರಿ ಬಡವರ ಜೀವನಕ್ಕೆ ಮಣ್ಣುಹಾಕಲು ಹೊರಟಿದೆ,ಇಪ್ಪತ್ತು ಮುವತ್ತು ವರ್ಷಗಳಿಂದ ಜಮೀನು ಉಳಿಮೆ ಮಾಡಿರುವ,ಮುಂಜೂರಿ ಇಲ್ಲದೆ ಪರದಾಡುತ್ತಿದ್ದಾರೆ,ಜಮೀನು ಇಲ್ಲ,ಜಮೀನಿಗಾಗಿ ಇಡೀ ಜೀವನ ಸವೆಸಿರುವ ರೈತ,ಬೀದಿಗೆ ಬೀಳುವಂತ್ತಾಗಿದ್ದು ಸರ್ಕಾರ ಬಡರೈತರಿಗೆ ಜಮೀನು ಮಂಜೂರು ಮಾಡಬೇಕು ಅರಣ್ಯದಂಚಿನಲ್ಲಿ ಹಲವಾರು ವರ್ಷಗಳಿಂದ ಭೂಮಿ ಉಳಿಮೆ ಮಾಡಿಕೊಂಡು ಜೀವನ ನಡೆಸುತ್ತಿರುವ ರೈತರನ್ನ ಒಕ್ಕಲೆಬಿಸಲು,ಅರಣ್ಯ ಇಲಾಖೆ ಮುಂದಾಗಿದ್ದು, ಜೀವನಾಧಾರಕ್ಕೆ ಜಮೀನು ಉಳಿಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡ ಬೇಕು ಎಂದು ಒತ್ತಾಯಿಸಿದರು.

ಸೌರ್ಹಾರ್ದ ತಿಪಟೂರು ವೇದಿಕೆ ಅಧ್ಯಕ್ಷ ಅಲ್ಲಾಭಕಾಷ್, ಮಾತನಾಡಿ,ಆಳುವ ಸರ್ಕಾರಗಳು ಬಡವರು ರೈತರ ಪರವಾಗಿ ಆಡಳಿತ ಮಾಡಬೇಕು, ಬಡವರಿಗೆ ಭೂಮಿ ನೀಡಿದರೆ ಇಡೀ ಅವರ ಕುಟುಂಬಕ್ಕೆ ಅನ್ನದೊರೆಯುತ್ತದೆ,ತಲೆಮಾರುಗಳಿಂದ ಭೂಮಿಯನ್ನ ನಂಬಿ ಬದುಕಿರುವ,ದಲಿತರು ಹಿಂದುಳಿದವರು,ಬಡವರು, ಭೂಮಿ ಇಲ್ಲದೆ,ಜೀವನ ಮೂರಾಬಟ್ಟೆಯಾಗಿದೆ.ನಗರ ಪ್ರದೇಶಕ್ಕೆ 5ಕಿಲೋಮಿಟರ್ ವ್ಯಾಪ್ತಿ ನಿಗದಿಪಡಿಸಿರುವುದು ಸರಿಯಲ್ಲ,ಗ್ರಾಮೀಣ ಭಾಗದಲ್ಲಿ ಬಡವರು ಉಳಿಮೆ ಮಾಡಿರುವುದು ಬಹುತೇಕ ಗೋಮಾಳ, ಸೇಂದಿವನ,ಹುಲ್ಲುಬನ್ನಿ ಖರಾಬುಗಳೆ ಜಾಸ್ತಿ, ಆದರೇ ಸರ್ಕಾರ ಮುಂಜೂರಿ ನೀಡದೆ,ಬಡವರ ವಿರೋಧಿಯಾದ ಕಾನೂನು ರೂಪಿಸಿದೆ.ಬಡವರ ಪರವಾದ ಮುಖ್ಯಮಂತ್ರಿಗಳು ಏನ್ನುವುದಾದರೆ, ಬಡವರಿಗೆ ಭೂಮಿ ಮಂಜೂರು ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು
ಪ್ರತಿಭಟನೆಯಲ್ಲಿ ಪ್ರಾಂತ್ಯ ರೈತರ ಸಂಘದ ಅಧ್ಯಕ್ಷ.ಮಲ್ಲಿಕಾರ್ಜುನಯ್ಯ,ಸಂಚಾಲಕಿ ರಾಜಮ್ಮ,ರೈತ ಮುಖಂಡರಾದ
ಬಳುವನೇರಲುಸಿದ್ದಯ್ಯ.ಕಾರ್ಯದರ್ಶಿ,ಸುಧಾಕರ್,ಕೊಟ್ಟೂರಪ್ಪ,ಮಂಜುನಾಥ್ ಮೀಸೆತಿಮ್ಮನಹಳ್ಳಿ,ಮುಂತ್ತಾದವರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ನಗರದ ಮಟ್ಕಾ ಅಡ್ಡೆಯ ಮೇಲೆ ತಿಪಟೂರು ಪೊಲೀಸರು ದಾಳಿ ನಡೆಸಿದ್ದು,ತಿಪಟೂರುನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಮಟ್ಕಾ ಜೂಜಾಟ ಆಡುತ್ತಿದ್ದ ಬಸವರಾಜು ಈಡೇನಹಳ್ಳಿ ಹಾಗೂ ದೊಡ್ಡಯ್ಯಪಾಳ್ಯದ ಬಳಿ ಅರಳೀಕಟ್ಟೆ ಬಳಿ ಹಳೇಪಾಳ್ಯದ ಶ್ರೀನಿವಾಸ್ ಎಂಬುವವರು ಮಟ್ಕಾ ಜೂಜಾಟದಲ್ಲಿ ಭಾಗಿಯಾಗಿದ್ದವರನ್ನು ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ,ಪ್ರಕರಣ ದಾಖಲಿಸಿಕೊಂಡಿದ್ದು,ಹಣ ಹಾಗೂ ಮಟ್ಕಾ ಚೀಟಿ ವಶಪಡಿಸಿಕೊಂಡು ತನಿಖೆಕೈಗೊಳ್ಳಲಾಗಿದೆ.

ತಿಪಟೂರು.ವಿದ್ಯಾರ್ಥಿಗಳು ಆಚಲ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು ಆಗ ಮಾತ್ರ ಜ್ಞಾನವಂತರಾಗಲು ಸಾಧ್ಯ ಆಧುನಿಕ ಸೌಲಭ್ಯಗಳಿಂದ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಏಕಾಗ್ರತೆ ಕಡಿಮೆಯಾಗುತ್ತಿದೆ. ವಿಕಾಗ್ರತೆಯ ಕೊರತೆಯಿಂದಾಗಿ ವಿದ್ಯಾರ್ಥಿಗಳು ತಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಅನಾವರಣಗೊಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ವಿದ್ಯಾರ್ಥಿಗಳು ಶ್ರದ್ಧೆಯಿಂದ ವಿದ್ಯಾರ್ಜನೆ ಮಾಡಬೇಕು ಎಂದು ಶ್ರೀ ಗುರುಕುಲ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರತಿಭೋತ್ಸವದ ದಿವ್ಯ ಸಾನ್ನಿಧ್ಯ ವಹಿಸಿದ್ದ ಸಿಡ್ಲೆಹಳ್ಳಿ ಮಹಾಸಂಸ್ಥಾನ ಮಠ ಶ್ರೀ ಗುರುಕುಲಾನಂದಾಶ್ರಮದ ಸದ್ಗುರು ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಮಹಾಸ್ವಾಮಿಗಳು ಕರೆ ನೀಡಿದರು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದ ಲೇಖಕರೂ, ಸ್ವದೇಶಿ ಜಾಗರಣಾ ವೇದಿಕೆ, ಬಿಳಿಗೆರೆಯ ಪ್ರತಾಪ್ ಸಿಂಗ್‌, ಮಾತನಾಡಿ ಇಂದಿನ ಯುವ ಪೀಳಿಗೆಯ ವಿದ್ಯಾರ್ಥಿಗಳಿಗೆ ಯಾರುಆದರ್ಶಪ್ರಾಯರಾಗುತ್ತಿದ್ದಾರೆ ಅವರ ಆಲೋಚನೆಗಳು ಯಾವ ದಿಕ್ಕಿನಲ್ಲಿಸಾಗಿವೆಎಂಬವಿಚಾರವಾಗಿ ವಿಶೇಷ ಉಪನ್ಯಾಸ ನೀಡಿ ಸರ್ಕಸ್ ಹುಲಿಗಳನ್ನು ಕಾಡಿಗೆ ಬಿಟ್ಟಾಗ ಅವುಗಳ ದಾರುಣ ಅಂತ್ಯದ ಪ್ರಸಂಗವನ್ನು ವಿವರಿಸಿ. ಈ ದೇಶಕ್ಕಾಗಿ ದುಡಿದ, ನಮ್ಮ ಇಂದಿನ ಸುಖಕ್ಕಾಗಿ ತ್ಯಾಗ ಮಾಡಿದ, ತಮ್ಮ ಬದುಕನ್ನು ರಾಷ್ಟ್ರಸೇವೆಗೆ ಮುಡುಪಾಗಿಟ್ಟ ಮಹನೀಯರು ಅಬ್ದುಲ್ ಕಲಾಂರಂತಹ ರಾಷ್ಟ್ರನಾಯಕರು ಇಂದಿನ ಯುವ ವಿದ್ಯಾರ್ಥಿಗಳ ಪ್ರೇರಣೆಯಾಗಬೇಕೆಂದು ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿಕ್ಷಣ ಸಂಯೋಜನಾಧಿಕಾರಿಗಳಾದ ಶ್ರೀ ಎಂ. ಮಂಜುನಾಥ್ ಗುರುಕುಲ ಪರಂಪರೆಯಲ್ಲಿ ವಿದ್ಯಾಭ್ಯಾಸ ಹೊಂದಿದ ವಿದ್ಯಾರ್ಥಿಗಳಲ್ಲಿ ವಿಶೇಷ ಸಂಸ್ಕಾರ, ಸೇವಾಗುಣ, ಸಾಧನೆಯ ಭಲವನ್ನು ಕಾಣಬಹುದು ಎಂದು ಶ್ಲಾಘಿಸಿದರು.
ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಮಾಡಿ ಮಾತನಾಡಿದ ವಿಜಯ ಕರ್ನಾಟಕ ದಿನಪತ್ರಿಕೆಯ ವರದಿಗಾರರಾದ ಟಿ.ಎಸ್.ದಯಾನಂದ್‌ರವರು ಪೋಷಕರು ಮಕ್ಕಳಿಗೆ ಅಂಕಗಳಿಸುವಂತೆ ಒತ್ತಡ ಹೇರಬಾರದು ಅವರಿಗೆ ಕುಳಿತು ಓದುವ ಒಳ್ಳೆಯ ವಾತಾವರಣ ನಿರ್ಮಾಣಮಾಡಿ ವಿಧ್ಯಾರ್ಥಿಗಳಲ್ಲಿ ಸಾಧಿಸುವ ಛಲವನ್ನು ಉಂಟುಮಾಡಬಹುದು ತಮ್ಮ ಪುತ್ರ ಇಡೀರಾಜ್ಯಕ್ಕೆ ಪಿ.ಯು.ಸಿ ಪರೀಕ್ಷೆಯಲ್ಲಿ ದ್ವಿತೀಯ ರ್‍ಯಾಂಕ್‌ ಗಳಿಸಿದ್ದನ್ನು ಈ ಸಂದರ್ಭದಲ್ಲಿ ಉದಾಹರಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿದ್ದ ಹಿರಿಯ ಕೃಷಿಕರೂ ಹಾಗೂ ತಾಲ್ಲೋಕಿನ ಪಾರಂಪರಿಕ ನಾಟಿ ವೈದ್ಯರಾಗಿರುವ, ಅಸ್ತಮಾ ಕಾಯಿಲೆಗೆ ಸಹಸ್ರಾರು ಜನರಿಗೆ ಉಚಿತ ಔಷದೋಪಚಾರ ನೀಡುತ್ತಿರುವ ವಿ. ಮಲ್ಲೇನಹಳ್ಳಿಯ ಶ್ರೀ ಎಂ.ಎನ್. ಮಲ್ಲಿಕಾರ್ಜುನಯ್ಯನವರನ್ನು ಗೌರವಿಸಲಾಯಿತು.
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹ ಕಾರ್ಯದರ್ಶಿ ಸಿ.ಎನ್. ಸಿದ್ದೇಶ್ವ‌ರ ರವರು ಮಾತನಾಡಿ ಶ್ರೀ ಗುರುಕುಲಾನಂದಾಶ್ರಮವು ಶತಮಾನಗಳಿಂದ ಸರ್ಕಾರದ ಯಾವುದೇ ಹಣಕಾಸಿನ ನೆರವು ಪಡೆಯದೇ ಯಾವುದೇ ಜಾತಿ ಬೇಧವಿಲ್ಲದೇ, ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗೆ ಸೇವೆ ಸಲ್ಲಿಸುತ್ತಿದ್ದು ಇಲ್ಲಿ ವಿದ್ಯಭ್ಯಾಸ ಹೊಂದಿದ ವಿದ್ಯಾರ್ಥಿಗಳ ವ್ಯಕ್ತಿತ್ವ ಉನ್ನತದರ್ಜೆಯದ್ದಾಗಿರುತ್ತದೆ ಎಂದರು.ಮುಖ್ಯ ಶಿಕ್ಷಕಿ ಶ್ರೀಮತಿ ಲತಾಮಣಿ ಸ್ವಾಗತಿಸಿ ಕಾರ್ಯಕ್ರಮವನ್ನು ಶ್ರೀಮತಿ ಶಾಂತಲಕ್ಷ್ಮಿ ನಿರೂಪಿಸಿ, ಓಂಕಾರಮೂರ್ತಿ ವಂದನಾರ್ಪಣೆ ಮಾಡಿದರು. ಆಡಳಿತಾಧಿಕಾರಿ ವಿ.ಬಿ. ಮಹಾಲಿಂಗಯ್ಯ ಮತ್ತಿತರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೇರವೇರಿದವು.

ತಿಪಟೂರು.ವಿದ್ಯಾರ್ಥಿಗಳು ಆಚಲ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು ಆಗ ಮಾತ್ರ ಜ್ಞಾನವಂತರಾಗಲು ಸಾಧ್ಯ ಆಧುನಿಕ ಸೌಲಭ್ಯಗಳಿಂದ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಏಕಾಗ್ರತೆ ಕಡಿಮೆಯಾಗುತ್ತಿದೆ. ವಿಕಾಗ್ರತೆಯ ಕೊರತೆಯಿಂದಾಗಿ ವಿದ್ಯಾರ್ಥಿಗಳು ತಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಅನಾವರಣಗೊಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ವಿದ್ಯಾರ್ಥಿಗಳು ಶ್ರದ್ಧೆಯಿಂದ ವಿದ್ಯಾರ್ಜನೆ ಮಾಡಬೇಕು ಎಂದು ಶ್ರೀ ಗುರುಕುಲ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರತಿಭೋತ್ಸವದ ದಿವ್ಯ ಸಾನ್ನಿಧ್ಯ ವಹಿಸಿದ್ದ ಸಿಡ್ಲೆಹಳ್ಳಿ ಮಹಾಸಂಸ್ಥಾನ ಮಠ ಶ್ರೀ ಗುರುಕುಲಾನಂದಾಶ್ರಮದ ಸದ್ಗುರು ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಮಹಾಸ್ವಾಮಿಗಳು ಕರೆ ನೀಡಿದರು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದ ಲೇಖಕರೂ, ಸ್ವದೇಶಿ ಜಾಗರಣಾ ವೇದಿಕೆ, ಬಿಳಿಗೆರೆಯ ಪ್ರತಾಪ್ ಸಿಂಗ್‌, ಮಾತನಾಡಿ ಇಂದಿನ ಯುವ ಪೀಳಿಗೆಯ ವಿದ್ಯಾರ್ಥಿಗಳಿಗೆ ಯಾರುಆದರ್ಶಪ್ರಾಯರಾಗುತ್ತಿದ್ದಾರೆ ಅವರ ಆಲೋಚನೆಗಳು ಯಾವ ದಿಕ್ಕಿನಲ್ಲಿಸಾಗಿವೆಎಂಬವಿಚಾರವಾಗಿ ವಿಶೇಷ ಉಪನ್ಯಾಸ ನೀಡಿ ಸರ್ಕಸ್ ಹುಲಿಗಳನ್ನು ಕಾಡಿಗೆ ಬಿಟ್ಟಾಗ ಅವುಗಳ ದಾರುಣ ಅಂತ್ಯದ ಪ್ರಸಂಗವನ್ನು ವಿವರಿಸಿ. ಈ ದೇಶಕ್ಕಾಗಿ ದುಡಿದ, ನಮ್ಮ ಇಂದಿನ ಸುಖಕ್ಕಾಗಿ ತ್ಯಾಗ ಮಾಡಿದ, ತಮ್ಮ ಬದುಕನ್ನು ರಾಷ್ಟ್ರಸೇವೆಗೆ ಮುಡುಪಾಗಿಟ್ಟ ಮಹನೀಯರು ಅಬ್ದುಲ್ ಕಲಾಂರಂತಹ ರಾಷ್ಟ್ರನಾಯಕರು ಇಂದಿನ ಯುವ ವಿದ್ಯಾರ್ಥಿಗಳ ಪ್ರೇರಣೆಯಾಗಬೇಕೆಂದು ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿಕ್ಷಣ ಸಂಯೋಜನಾಧಿಕಾರಿಗಳಾದ ಶ್ರೀ ಎಂ. ಮಂಜುನಾಥ್ ಗುರುಕುಲ ಪರಂಪರೆಯಲ್ಲಿ ವಿದ್ಯಾಭ್ಯಾಸ ಹೊಂದಿದ ವಿದ್ಯಾರ್ಥಿಗಳಲ್ಲಿ ವಿಶೇಷ ಸಂಸ್ಕಾರ, ಸೇವಾಗುಣ, ಸಾಧನೆಯ ಭಲವನ್ನು ಕಾಣಬಹುದು ಎಂದು ಶ್ಲಾಘಿಸಿದರು.
ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಮಾಡಿ ಮಾತನಾಡಿದ ವಿಜಯ ಕರ್ನಾಟಕ ದಿನಪತ್ರಿಕೆಯ ವರದಿಗಾರರಾದ ಟಿ.ಎಸ್.ದಯಾನಂದ್‌ರವರು ಪೋಷಕರು ಮಕ್ಕಳಿಗೆ ಅಂಕಗಳಿಸುವಂತೆ ಒತ್ತಡ ಹೇರಬಾರದು ಅವರಿಗೆ ಕುಳಿತು ಓದುವ ಒಳ್ಳೆಯ ವಾತಾವರಣ ನಿರ್ಮಾಣಮಾಡಿ ವಿಧ್ಯಾರ್ಥಿಗಳಲ್ಲಿ ಸಾಧಿಸುವ ಛಲವನ್ನು ಉಂಟುಮಾಡಬಹುದು ತಮ್ಮ ಪುತ್ರ ಇಡೀರಾಜ್ಯಕ್ಕೆ ಪಿ.ಯು.ಸಿ ಪರೀಕ್ಷೆಯಲ್ಲಿ ದ್ವಿತೀಯ ರ್‍ಯಾಂಕ್‌ ಗಳಿಸಿದ್ದನ್ನು ಈ ಸಂದರ್ಭದಲ್ಲಿ ಉದಾಹರಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿದ್ದ ಹಿರಿಯ ಕೃಷಿಕರೂ ಹಾಗೂ ತಾಲ್ಲೋಕಿನ ಪಾರಂಪರಿಕ ನಾಟಿ ವೈದ್ಯರಾಗಿರುವ, ಅಸ್ತಮಾ ಕಾಯಿಲೆಗೆ ಸಹಸ್ರಾರು ಜನರಿಗೆ ಉಚಿತ ಔಷದೋಪಚಾರ ನೀಡುತ್ತಿರುವ ವಿ. ಮಲ್ಲೇನಹಳ್ಳಿಯ ಶ್ರೀ ಎಂ.ಎನ್. ಮಲ್ಲಿಕಾರ್ಜುನಯ್ಯನವರನ್ನು ಗೌರವಿಸಲಾಯಿತು.
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹ ಕಾರ್ಯದರ್ಶಿ ಸಿ.ಎನ್. ಸಿದ್ದೇಶ್ವ‌ರ ರವರು ಮಾತನಾಡಿ ಶ್ರೀ ಗುರುಕುಲಾನಂದಾಶ್ರಮವು ಶತಮಾನಗಳಿಂದ ಸರ್ಕಾರದ ಯಾವುದೇ ಹಣಕಾಸಿನ ನೆರವು ಪಡೆಯದೇ ಯಾವುದೇ ಜಾತಿ ಬೇಧವಿಲ್ಲದೇ, ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗೆ ಸೇವೆ ಸಲ್ಲಿಸುತ್ತಿದ್ದು ಇಲ್ಲಿ ವಿದ್ಯಭ್ಯಾಸ ಹೊಂದಿದ ವಿದ್ಯಾರ್ಥಿಗಳ ವ್ಯಕ್ತಿತ್ವ ಉನ್ನತದರ್ಜೆಯದ್ದಾಗಿರುತ್ತದೆ ಎಂದರು.ಮುಖ್ಯ ಶಿಕ್ಷಕಿ ಶ್ರೀಮತಿ ಲತಾಮಣಿ ಸ್ವಾಗತಿಸಿ ಕಾರ್ಯಕ್ರಮವನ್ನು ಶ್ರೀಮತಿ ಶಾಂತಲಕ್ಷ್ಮಿ ನಿರೂಪಿಸಿ, ಓಂಕಾರಮೂರ್ತಿ ವಂದನಾರ್ಪಣೆ ಮಾಡಿದರು. ಆಡಳಿತಾಧಿಕಾರಿ ವಿ.ಬಿ. ಮಹಾಲಿಂಗಯ್ಯ ಮತ್ತಿತರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೇರವೇರಿದವು.

ರಾಜ್ಯ ಸರ್ಕಾರ ರೈತರು ಸಾಗುವಳಿಮಾಡುತ್ತಿರುವ ಜಮೀನಿಗೆ ಬಗರ್ ಹುಕ್ಕುಂ ಸಾಗುವಳಿ ಚೀಟಿ ನೀಡಬೇಕು ಎಂದು ಒತ್ತಾಯಿಸಿ ಫೆಬ್ರವರಿ 24 ರಂದು ಸೋಮವಾರ ತಿಪಟೂರು ಆಡಳಿತ ಸೌಧದ ಮುಂಬಾಗ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ತಿಪಟೂರು ಶಾಸಕರು ಹಾಗೂ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಕರ್ನಾಟಕ ಪ್ರಾಂತರೈತ ಸಂಘದ ಅಧ್ಯಕ್ಷ ರಂಗಾಪುರ ಚನ್ನಬಸವಣ್ಣ ತಿಳಿಸಿದರು


ನಗರದ ಖಾಸಗೀ ಹೋಟೆಲ್ ನಲ್ಲಿ ಪತ್ರಿಕಾಘೋಷ್ಠಿ ನಡೆದಿದ ಅವರು ರಾಜ್ಯದಲ್ಲಿ ಸರ್ಕಾರ ಬಗರ್ ಹುಕ್ಕು ಸಾಗುವಳಿ ನೀಡಲು ಅರ್ಜಿ ಆಹ್ವಾನ ಮಾಡಿ ದಶಕಗಳೆ ಕಳೆಯುತ್ತಿವೆ, ಆದರೆ ಸಾಗುವಳಿ ಚೀಟಿ ಪಡೆಯುವ ರೈತರ ಕನಸು ಮಾರೀಚಿಕೆಯಾಗಿದ್ದು, ರೈತರು ಭ್ರಮನಿರಸನಗೊಂಡಿದ್ದಾರೆ,ಸರ್ಕಾರಸಾಗುವಳಿಗೆ ಪತ್ರ ನೀಡಲು ವಿಧಿಸಿರುವ ಷರತ್ತುಗಳು ದೋಷಪೂರಿತವಾಗಿದ್ದು, ಕಳೆದ ಇಪತ್ತು ಮುವತ್ತು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಅನ್ಯಾಯವಾಗುತ್ತಿದೆ, ಸರ್ಕಾರ ಕೂಡಲೇ, ಸರ್ಕಾರಿಗೋಮಳ,ಹುಲ್ಲುಬನ್ನಿ ಕರಾಬು, ಸೇದಿವನಗಳಿಗೆ,ಮುಂಜೂರಿಗೆ ಅವಕಾಶ ನೀಡಬೇಕು, ಅರಣ್ಯದಂಚಿನಲ್ಲಿ ಹಲವಾರು ವರ್ಷಗಳಿಂದ ಭೂಮಿ ಉಳಿಮೆ ಮಾಡಿಕೊಂಡು ಜೀವನ ನಡೆಸುತ್ತಿರುವ ರೈತರನ್ನ ಒಕ್ಕಲೆಬಿಸಲು,ಅರಣ್ಯ ಇಲಾಖೆ ಮುಂದಾಗಿದ್ದು, ಜೀವನಾಧಾರಕ್ಕೆ ಜಮೀನು ಉಳಿಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡ ಬೇಕು

ಬೆಸ್ಕಾಂ ಇಲಾಖೆ ರಾತ್ರಿ ವೇಳೆ ರೈತರ ತೋಟದ ಮನೆಗಳಿಗೆ ಕರೆಂಟ್ ಇಲ್ಲದಂತೆವಮಾಡುತ್ತಿದ್ದು,ರಾತ್ರಿ ವೇಳೆ ಕರೆಂಟ್ ತೆಗೆಯುವುದರಿಂದ ರಾತ್ರಿವೇಳೆ ಪರೀಕ್ಷಾ ಸಮಯವಾದ ಕಾರಣ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದ್ದು,ವಚಿರತೆ ಕಾಟ, ಕಾಡುಪ್ರಾಣಿಗಳ ಕಾಟ ಹೆಚ್ಚಾಗಿರು ಸಮಯದಲ್ಲಿ ಕತ್ತಲಿನಲ್ಲಿ ರೈತರು ಬದುಕಬೇಕಿದೆ ಆದರಿಂದ ಸರ್ಕಾರ ರೈತರ ತೋಟದ ಮನೆಗಳಿಗೆ ವಿದ್ಯುತ್ ನೀಡಬೇಕು ಒತ್ತಾ ಯಿಸಿ ತಿಪಟೂರು ತಾಲ್ಲೋಕು ಆಡಳಿತ ಸೌಧದ ಮುಂದೆ ಫೆಬ್ರವರಿ 24ರಂದು ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಗುವುದು,ಎಂದು ತಿಳಿಸಿದರು.ಪತ್ರಿಕಾಘೋಷ್ಠಿಯಲ್ಲಿ ಪ್ರಾಂತ್ಯ ರೈತರ ಸಂಘದ ಮುಖಂಡರಾದ ಮಲ್ಲಿಕಾರ್ಜುನಯ್ಯ.
ಬಳುವನೇರಲುಸಿದ್ದಯ್ಯ.ಸುಧಾಕರ್,ಕೊಟ್ಟೂರಪ್ಪ,ಮಂಜುನಾಥ್ ಮೀಸೆತಿಮ್ಮನಹಳ್ಳಿ,ರಾಜಮ್ಮ.ಮುಂತ್ತಾದವರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!