Month: February 2025

ತಿಪಟೂರು.ವಿದ್ಯಾರ್ಥಿಗಳು ಆಚಲ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು ಆಗ ಮಾತ್ರ ಜ್ಞಾನವಂತರಾಗಲು ಸಾಧ್ಯ ಆಧುನಿಕ ಸೌಲಭ್ಯಗಳಿಂದ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಏಕಾಗ್ರತೆ ಕಡಿಮೆಯಾಗುತ್ತಿದೆ. ವಿಕಾಗ್ರತೆಯ ಕೊರತೆಯಿಂದಾಗಿ ವಿದ್ಯಾರ್ಥಿಗಳು ತಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಅನಾವರಣಗೊಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ವಿದ್ಯಾರ್ಥಿಗಳು ಶ್ರದ್ಧೆಯಿಂದ ವಿದ್ಯಾರ್ಜನೆ ಮಾಡಬೇಕು ಎಂದು ಶ್ರೀ ಗುರುಕುಲ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರತಿಭೋತ್ಸವದ ದಿವ್ಯ ಸಾನ್ನಿಧ್ಯ ವಹಿಸಿದ್ದ ಸಿಡ್ಲೆಹಳ್ಳಿ ಮಹಾಸಂಸ್ಥಾನ ಮಠ ಶ್ರೀ ಗುರುಕುಲಾನಂದಾಶ್ರಮದ ಸದ್ಗುರು ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಮಹಾಸ್ವಾಮಿಗಳು ಕರೆ ನೀಡಿದರು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದ ಲೇಖಕರೂ, ಸ್ವದೇಶಿ ಜಾಗರಣಾ ವೇದಿಕೆ, ಬಿಳಿಗೆರೆಯ ಪ್ರತಾಪ್ ಸಿಂಗ್‌, ಮಾತನಾಡಿ ಇಂದಿನ ಯುವ ಪೀಳಿಗೆಯ ವಿದ್ಯಾರ್ಥಿಗಳಿಗೆ ಯಾರುಆದರ್ಶಪ್ರಾಯರಾಗುತ್ತಿದ್ದಾರೆ ಅವರ ಆಲೋಚನೆಗಳು ಯಾವ ದಿಕ್ಕಿನಲ್ಲಿಸಾಗಿವೆಎಂಬವಿಚಾರವಾಗಿ ವಿಶೇಷ ಉಪನ್ಯಾಸ ನೀಡಿ ಸರ್ಕಸ್ ಹುಲಿಗಳನ್ನು ಕಾಡಿಗೆ ಬಿಟ್ಟಾಗ ಅವುಗಳ ದಾರುಣ ಅಂತ್ಯದ ಪ್ರಸಂಗವನ್ನು ವಿವರಿಸಿ. ಈ ದೇಶಕ್ಕಾಗಿ ದುಡಿದ, ನಮ್ಮ ಇಂದಿನ ಸುಖಕ್ಕಾಗಿ ತ್ಯಾಗ ಮಾಡಿದ, ತಮ್ಮ ಬದುಕನ್ನು ರಾಷ್ಟ್ರಸೇವೆಗೆ ಮುಡುಪಾಗಿಟ್ಟ ಮಹನೀಯರು ಅಬ್ದುಲ್ ಕಲಾಂರಂತಹ ರಾಷ್ಟ್ರನಾಯಕರು ಇಂದಿನ ಯುವ ವಿದ್ಯಾರ್ಥಿಗಳ ಪ್ರೇರಣೆಯಾಗಬೇಕೆಂದು ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿಕ್ಷಣ ಸಂಯೋಜನಾಧಿಕಾರಿಗಳಾದ ಶ್ರೀ ಎಂ. ಮಂಜುನಾಥ್ ಗುರುಕುಲ ಪರಂಪರೆಯಲ್ಲಿ ವಿದ್ಯಾಭ್ಯಾಸ ಹೊಂದಿದ ವಿದ್ಯಾರ್ಥಿಗಳಲ್ಲಿ ವಿಶೇಷ ಸಂಸ್ಕಾರ, ಸೇವಾಗುಣ, ಸಾಧನೆಯ ಭಲವನ್ನು ಕಾಣಬಹುದು ಎಂದು ಶ್ಲಾಘಿಸಿದರು.
ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಮಾಡಿ ಮಾತನಾಡಿದ ವಿಜಯ ಕರ್ನಾಟಕ ದಿನಪತ್ರಿಕೆಯ ವರದಿಗಾರರಾದ ಟಿ.ಎಸ್.ದಯಾನಂದ್‌ರವರು ಪೋಷಕರು ಮಕ್ಕಳಿಗೆ ಅಂಕಗಳಿಸುವಂತೆ ಒತ್ತಡ ಹೇರಬಾರದು ಅವರಿಗೆ ಕುಳಿತು ಓದುವ ಒಳ್ಳೆಯ ವಾತಾವರಣ ನಿರ್ಮಾಣಮಾಡಿ ವಿಧ್ಯಾರ್ಥಿಗಳಲ್ಲಿ ಸಾಧಿಸುವ ಛಲವನ್ನು ಉಂಟುಮಾಡಬಹುದು ತಮ್ಮ ಪುತ್ರ ಇಡೀರಾಜ್ಯಕ್ಕೆ ಪಿ.ಯು.ಸಿ ಪರೀಕ್ಷೆಯಲ್ಲಿ ದ್ವಿತೀಯ ರ್‍ಯಾಂಕ್‌ ಗಳಿಸಿದ್ದನ್ನು ಈ ಸಂದರ್ಭದಲ್ಲಿ ಉದಾಹರಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿದ್ದ ಹಿರಿಯ ಕೃಷಿಕರೂ ಹಾಗೂ ತಾಲ್ಲೋಕಿನ ಪಾರಂಪರಿಕ ನಾಟಿ ವೈದ್ಯರಾಗಿರುವ, ಅಸ್ತಮಾ ಕಾಯಿಲೆಗೆ ಸಹಸ್ರಾರು ಜನರಿಗೆ ಉಚಿತ ಔಷದೋಪಚಾರ ನೀಡುತ್ತಿರುವ ವಿ. ಮಲ್ಲೇನಹಳ್ಳಿಯ ಶ್ರೀ ಎಂ.ಎನ್. ಮಲ್ಲಿಕಾರ್ಜುನಯ್ಯನವರನ್ನು ಗೌರವಿಸಲಾಯಿತು.
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹ ಕಾರ್ಯದರ್ಶಿ ಸಿ.ಎನ್. ಸಿದ್ದೇಶ್ವ‌ರ ರವರು ಮಾತನಾಡಿ ಶ್ರೀ ಗುರುಕುಲಾನಂದಾಶ್ರಮವು ಶತಮಾನಗಳಿಂದ ಸರ್ಕಾರದ ಯಾವುದೇ ಹಣಕಾಸಿನ ನೆರವು ಪಡೆಯದೇ ಯಾವುದೇ ಜಾತಿ ಬೇಧವಿಲ್ಲದೇ, ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗೆ ಸೇವೆ ಸಲ್ಲಿಸುತ್ತಿದ್ದು ಇಲ್ಲಿ ವಿದ್ಯಭ್ಯಾಸ ಹೊಂದಿದ ವಿದ್ಯಾರ್ಥಿಗಳ ವ್ಯಕ್ತಿತ್ವ ಉನ್ನತದರ್ಜೆಯದ್ದಾಗಿರುತ್ತದೆ ಎಂದರು.ಮುಖ್ಯ ಶಿಕ್ಷಕಿ ಶ್ರೀಮತಿ ಲತಾಮಣಿ ಸ್ವಾಗತಿಸಿ ಕಾರ್ಯಕ್ರಮವನ್ನು ಶ್ರೀಮತಿ ಶಾಂತಲಕ್ಷ್ಮಿ ನಿರೂಪಿಸಿ, ಓಂಕಾರಮೂರ್ತಿ ವಂದನಾರ್ಪಣೆ ಮಾಡಿದರು. ಆಡಳಿತಾಧಿಕಾರಿ ವಿ.ಬಿ. ಮಹಾಲಿಂಗಯ್ಯ ಮತ್ತಿತರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೇರವೇರಿದವು.

ರಾಜ್ಯ ಸರ್ಕಾರ ರೈತರು ಸಾಗುವಳಿಮಾಡುತ್ತಿರುವ ಜಮೀನಿಗೆ ಬಗರ್ ಹುಕ್ಕುಂ ಸಾಗುವಳಿ ಚೀಟಿ ನೀಡಬೇಕು ಎಂದು ಒತ್ತಾಯಿಸಿ ಫೆಬ್ರವರಿ 24 ರಂದು ಸೋಮವಾರ ತಿಪಟೂರು ಆಡಳಿತ ಸೌಧದ ಮುಂಬಾಗ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ತಿಪಟೂರು ಶಾಸಕರು ಹಾಗೂ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಕರ್ನಾಟಕ ಪ್ರಾಂತರೈತ ಸಂಘದ ಅಧ್ಯಕ್ಷ ರಂಗಾಪುರ ಚನ್ನಬಸವಣ್ಣ ತಿಳಿಸಿದರು


ನಗರದ ಖಾಸಗೀ ಹೋಟೆಲ್ ನಲ್ಲಿ ಪತ್ರಿಕಾಘೋಷ್ಠಿ ನಡೆದಿದ ಅವರು ರಾಜ್ಯದಲ್ಲಿ ಸರ್ಕಾರ ಬಗರ್ ಹುಕ್ಕು ಸಾಗುವಳಿ ನೀಡಲು ಅರ್ಜಿ ಆಹ್ವಾನ ಮಾಡಿ ದಶಕಗಳೆ ಕಳೆಯುತ್ತಿವೆ, ಆದರೆ ಸಾಗುವಳಿ ಚೀಟಿ ಪಡೆಯುವ ರೈತರ ಕನಸು ಮಾರೀಚಿಕೆಯಾಗಿದ್ದು, ರೈತರು ಭ್ರಮನಿರಸನಗೊಂಡಿದ್ದಾರೆ,ಸರ್ಕಾರಸಾಗುವಳಿಗೆ ಪತ್ರ ನೀಡಲು ವಿಧಿಸಿರುವ ಷರತ್ತುಗಳು ದೋಷಪೂರಿತವಾಗಿದ್ದು, ಕಳೆದ ಇಪತ್ತು ಮುವತ್ತು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಅನ್ಯಾಯವಾಗುತ್ತಿದೆ, ಸರ್ಕಾರ ಕೂಡಲೇ, ಸರ್ಕಾರಿಗೋಮಳ,ಹುಲ್ಲುಬನ್ನಿ ಕರಾಬು, ಸೇದಿವನಗಳಿಗೆ,ಮುಂಜೂರಿಗೆ ಅವಕಾಶ ನೀಡಬೇಕು, ಅರಣ್ಯದಂಚಿನಲ್ಲಿ ಹಲವಾರು ವರ್ಷಗಳಿಂದ ಭೂಮಿ ಉಳಿಮೆ ಮಾಡಿಕೊಂಡು ಜೀವನ ನಡೆಸುತ್ತಿರುವ ರೈತರನ್ನ ಒಕ್ಕಲೆಬಿಸಲು,ಅರಣ್ಯ ಇಲಾಖೆ ಮುಂದಾಗಿದ್ದು, ಜೀವನಾಧಾರಕ್ಕೆ ಜಮೀನು ಉಳಿಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡ ಬೇಕು

ಬೆಸ್ಕಾಂ ಇಲಾಖೆ ರಾತ್ರಿ ವೇಳೆ ರೈತರ ತೋಟದ ಮನೆಗಳಿಗೆ ಕರೆಂಟ್ ಇಲ್ಲದಂತೆವಮಾಡುತ್ತಿದ್ದು,ರಾತ್ರಿ ವೇಳೆ ಕರೆಂಟ್ ತೆಗೆಯುವುದರಿಂದ ರಾತ್ರಿವೇಳೆ ಪರೀಕ್ಷಾ ಸಮಯವಾದ ಕಾರಣ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದ್ದು,ವಚಿರತೆ ಕಾಟ, ಕಾಡುಪ್ರಾಣಿಗಳ ಕಾಟ ಹೆಚ್ಚಾಗಿರು ಸಮಯದಲ್ಲಿ ಕತ್ತಲಿನಲ್ಲಿ ರೈತರು ಬದುಕಬೇಕಿದೆ ಆದರಿಂದ ಸರ್ಕಾರ ರೈತರ ತೋಟದ ಮನೆಗಳಿಗೆ ವಿದ್ಯುತ್ ನೀಡಬೇಕು ಒತ್ತಾ ಯಿಸಿ ತಿಪಟೂರು ತಾಲ್ಲೋಕು ಆಡಳಿತ ಸೌಧದ ಮುಂದೆ ಫೆಬ್ರವರಿ 24ರಂದು ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಗುವುದು,ಎಂದು ತಿಳಿಸಿದರು.ಪತ್ರಿಕಾಘೋಷ್ಠಿಯಲ್ಲಿ ಪ್ರಾಂತ್ಯ ರೈತರ ಸಂಘದ ಮುಖಂಡರಾದ ಮಲ್ಲಿಕಾರ್ಜುನಯ್ಯ.
ಬಳುವನೇರಲುಸಿದ್ದಯ್ಯ.ಸುಧಾಕರ್,ಕೊಟ್ಟೂರಪ್ಪ,ಮಂಜುನಾಥ್ ಮೀಸೆತಿಮ್ಮನಹಳ್ಳಿ,ರಾಜಮ್ಮ.ಮುಂತ್ತಾದವರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು:ರಾಜ್ಯ ಸರ್ಕಾರವು 9ವಿಶ್ವಾವಿದ್ಯಾನಿಲಯಗಳನ್ನು ಮುಚ್ಚಲು ಸಚಿವ ಸಂಪುಟ ತೀರ್ಮಾನ ತೆಗೆದುಕೂoಡಿರುವುದು ದುರ್ದೈವದಸಂಗತಿಯಾಗಿದೆ.ಸರ್ಕಾರದ ನಿರ್ಧಾರದಿಂದ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ,ಸರ್ಕಾರ ತಮ್ಮ ನಿರ್ಧಾರ ವಾಪಾಸ್ ಪಡೆಯಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯ ಮಾಜಿ ಸಿಂಡಿಕೇಟ್ ಸದಸ್ಯ ರಾಜು ರಾಜ್ಯ ಸರ್ಕಾರವನ್ನ ಒತ್ತಾಯಿಸಿದರು.
ರಾಜ್ಯಸರ್ಕಾರ ನೆಡೆಯಿಂದ ಆಯಾ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಾಡಿದ ಅನ್ಯಾವಾಗಿದೆ, ಕೇವಲ ಹಣಕಾಸಿನ ದೃಷ್ಟಿಯಿಂದವಿಶ್ವಾವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವುದು ಘನ ಸರ್ಕಾರಕ್ಕೆ ಶೋಭೆ ತರುವಂಥದ್ದಲ್ಲ, ಸರ್ಕಾರಿ ವಿ. ವಿ ಗಳನ್ನು ಬಲಿಷ್ಟಗೊಳಿಸುವ ಕಾಳಜಿ ಮತ್ತು ಇಚ್ಛಾಶಕ್ತಿಯನ್ನು ರಾಜ್ಯ ಸರ್ಕಾರ ಮಾಡಬೇಕು. ರಾಜ್ಯದಲ್ಲಿ ಇತ್ತೀಚೆಗೆಖಾಸಗಿವಿಶ್ವವಿದ್ಯಾನಿಲಯಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಸರ್ಕಾರಿವಿವಿಗಳನ್ನುಮುಚ್ಚುತ್ತಿರುವುದರಿಂದ ರಾಜ್ಯದ ದಲಿತ ಬಡವ ಹಿಂದುಳಿದ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾಡುತ್ತಿರುವ ಅನ್ಯಾಯವಾಗಿದೆ ರಾಜ್ಯ ಸರ್ಕಾರ ಉಚಿತಗ್ಯಾರಂಟಿಯೋಜನೆಗಳಿಗಾಗಿ ಸಾವಿರಾರು ಬಜೆಟ್ ನಲ್ಲಿ ಕೊಟ್ಟಿದೆ ಆದರೆ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹಣವನ್ನು ನೀಡಲಾಗದೆ 9 ವಿಶ್ವವಿದ್ಯಾನಿಲಯಗಳನ್ನು ಮುಚ್ಚಲು ಹೊರಟಿರುವುದು ಶಿಕ್ಷಣಕ್ಕೆ ಮಾಡಿದ,ಅನ್ಯಾಯವಾಗಿದೆ,ಯಾವ ಶಿಕ್ಷಣ ತಜ್ಞರಾಶಿಫಾರಸಿನ ಮೇಲೆ ವಿವಿ ಮುಚ್ಚಲು ಸಚಿವ ಸಂಪುಟ ತೀರ್ಮಾನಿಸಿದ್ದೀರಿ ಎಂಬುದನ್ನು ರಾಜ್ಯದ ಜನತೆಗೆ ತಿಳಿಸಿ ಕ್ಷಮೆ ಯಾಚಿಸಬೇಕು ಎಂದು ಅಗ್ರಹ ಮಾಡುತ್ತೇನೆ ರಾಜ್ಯದ ಉನ್ನತ ಶಿಕ್ಷಣ ಪರಿಷತ್ ಶಿಫಾರಸು ಮಾಡಿರುವ ಹಣವನ್ನು ರಾಜ್ಯ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದ ಎಲ್ಲಾ ವಿವಿಗಳಲ್ಲೂ ಈ ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹ ಪಡಿಸುತ್ತೇನೆ ತುಮಕೂರು ವಿಶ್ವವಿದ್ಯಾನಿಲಯ ಸೇರಿದಂತೆ , ರಾಜ್ಯದ ವಿಶ್ವವಿದ್ಯಾನಿಲಯದಲ್ಲಿ ಖಾಲಿ ಇರುವ ಬೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ಈ ಕೂಡಲೇ ಭರ್ತಿ ಮಾಡಲು ಸೂಚಿಸಬೇಕು ಎಂದು ಒತ್ತಾಯಿಸಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು,:ಭಾಗದಯುವಜನತೆಯ ಉದ್ಯೋಗಾರ್ಹತೆಹೆಚ್ಚಿಸಲು ಇಲ್ಲಿನ ಸತ್ಯಕುಮಾರ್ ರಿಲೀಫ್
ಫೌಂಡೇಷನ್ ವತಿಯಿಂದ ಇಲ್ಲಿ ಸ್ಥಾಪಿಸಲಾಗಿರುವ ಸಂಪೂರ್ಣ ಉಚಿತ ಕೌಶಲತರಬೇತಿ ಕೇಂದ್ರ ಕಾರ್ಯಾರಂಭಗೊಂಡಿದ್ದು.ಮೊದಲ ಬ್ಯಾಚಿನ ತರಬೇತಿ ಕಾರ್ಯಗಾರಕ್ಕೆ ತಿಪಟೂರು ಶಾಸಕ ಕೆ.ಷಡಕ್ಷರಿ ಚಾಲನೆ ನೀಡಿದರು.

ಶ್ರೀಸತ್ಯಕುಮಾರ್ ರಿಲೀಫ್ ಫೌಂಡೇಷನ್,ಎಂ.ಜಿ.ಎಸ್.ಪಿ ಆರ್ .ಹಾಗೂ ಉನ್ನತಿ ಪ್ರತಿಷ್ಠಾನ, ರಾಷ್ಟ್ರೀಯ ಸ್ಕಿಲ್ ಡೆವಲಪ್ ಮೆಂಟಲ್ ಕೌನ್ಸಿಲ್ ಸಹಯೋಗದಲ್ಲಿ ಉದ್ಯೋಗ ಕೌಶಲ್ಯ ತರಬೇತಿನೀಡುತ್ತಿದ್ದು,ಶೇಕಡ ನೂರರಷ್ಟು ಉದ್ಯೋಗ ಗ್ಯಾರಂಟಿಯೊಂದಿಗೆ ರೂಪಿಸಿರುವ 35 ದಿನಗಳಉಚಿತ ತರಬೇತಿ ಕಾರ್ಯಕ್ರಮವಾಗಿದೆ.ಎಸ್‌ಎಸ್‌ಎಲ್‌ಸಿ, ಡಿಪ್ಲೊಮಾ ಮತ್ತು ಪದವಿ
ಪಾಸ್ ಅಥವಾ ಫೇಲ್ ಆದವರಿಗೆ,ತರಬೇತಿಯಲ್ಲಿ ಪಾಲ್ಗೊಳ್ಳಲು,ಅವಕಾಶವಿದೆ.
ಟ್ಯಾಲಿ, ಸ್ಪೋಕನ್ ಇಂಗ್ಲಿಷ್, ಕಂಪ್ಯೂಟರ್,ಜಿಎಸ್‌ಟಿ, ಜೀವನ ಕೌಶಲ್ಯಗಳು, ಆಪ್ತಸಮಾಲೋಚನೆ ಹಾಗೂ ಆತ್ಮವಿಶ್ವಾಸವೃದ್ಧಿಗೆ ಆದ್ಯತೆ ನೀಡುವ ಮೂಲಕಅಭ್ಯರ್ಥಿಗಳನ್ನು ಉದ್ಯೋಗಕ್ಕೆ ಸಜ್ಜುಗೊಳಿಸ
ಲಾಗುತ್ತದೆ ಎಂದು ಖ್ಯಾತ ವೈದ್ಯರು ಹಾಗೂ ಶ್ರೀ ಸತ್ಯಕುಮಾರ್ ರೀಲಿಫ್ ಫೌಂಡೇಷನ್ ಮುಖ್ಯಸ್ಥರಾದ ಶ್ರೀಧರ್ ವಿವರಿಸಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಕ್ಷೇತ್ರದ ಶಾಸಕ ಕೆ.ಷಡಕ್ಷರಿ ಅವರು
ಮಾತನಾಡಿ, “ಸತ್ಯಕುಮಾರ್ ಪ್ರತಿಷ್ಠಾನವ,ಎಂಜೆ ಎಸ್‌ಪಿ‌ ಮತ್ತು ಉನ್ನತಿಸಂಸ್ಥೆಯ ಸಹಯೋಗದಲ್ಲಿ ಈ ಕೌಶಲ್ಯಕೇಂದ್ರ ಸ್ಥಾಪಿಸಿ ಶ್ಲಾಘನೀಯ ಕಾರ್ಯಮಾಡಿದೆ. ಪ್ರಸ್ತುತ ಉದ್ದಿಮೆಗಳ ನಿರೀಕ್ಷೆಗಳಿಗೆ ಅನು ಗುಣವಾಗಿ ಯುವಜನತೆಯಲ್ಲಿಕೌಶಲ ಗಳನ್ನು ಮೈಗೂಡಿಸಬೇಕೆಂಬುದೇಈ ಉಪಕ್ರಮದ ಉದ್ದೇಶವಾಗಿದ್ದು, ಇಲ್ಲಿನಯುವಜನತೆ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಉನ್ನತಿ ಪ್ರತಿಷ್ಠಾನವು ರಾಷ್ಟ್ರೀಯಕೌಶಲಾಭಿವೃದ್ಧಿ ಮಂಡಳಿಯಿಂದ(ನ್ಯಾಷನಲ್ ಸ್ಕಿಲ್ ಡೆವಲಪ್ ಮೆಂಟಲ್ಕೌನ್ಸಿಲ್) ಮಾನ್ಯತೆ ಹೊಂದಿದ್ದು, ದೇಶದಾದ್ಯಂತ 38 ಕೌಶಲ ಕೇಂದ್ರಗಳನ್ನು ಸ್ಥಾಪಿಸಿದೆ.ಸಂಸ್ಥೆಯು ವಿವಿಧ ಮುಂಚೂಣಿ ಕಂಪನಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದು,ಈವರೆಗೆ 70,000ಕ್ಕೂಹೆಚ್ಚುಜನರನ್ನುತರಬೇತಿಯೊಂದಿಗೆ ಸಜ್ಜುಗೊಳಿಸಿಉದ್ಯೋಗಲಭ್ಯವಾಗಿಸಿದೆ ಎಂದು ಎಂ ಜೆ ಎಸ್ಪಿ ಆರ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಎಂ ಜೆ ಶ್ರೀಕಾಂತ್ ಹೇಳಿದರು.ಶಂಕರ ಕಿಯೋನಿಕ್ಸ್‌ ಸಂಸ್ಥೆಯ ಶಿವಪ್ರಕಾಶ್‌,,ಉನ್ನತಿತರಬೇತುದಾರರಾದ ತೃಪ್ತಿ, ಚೇತನಾಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ಸೇರಿದಂತೆ ರಾಜ್ಯದ ಹಲವೆಡೆ ಮನೆಕಳ್ಳತನ ಮಾಡುತ್ತಿದ್ದ ಕಳ್ಳನನ್ನ ಸೆರೆಹಿಡಿಯುವಲ್ಲಿ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿ ಹಗಲು ವೇಳೆಯಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕನ್ನ ಹಾಕಿ ಮನೆಗಳಲ್ಲಿರುವ
ಚಿನ್ನಾಭರಣ, ಬೆಳ್ಳಿ ನಗದು ಹಣ, ಇತರೆ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದು, ಸದರಿ ಆಸಾಮಿಯು ಒಂಟಿ ಮನೆ, ತೋಟದಮನೆಗಳನ್ನು ತನ್ನ ಬೈಕ್‌ ನಂ KA 13 X 3793ರಲ್ಲಿ ಓಡಾಡಿಕೊಂಡು ಗುರ್ತಿಸಿ ಕಳ್ಳತನ ಮಾಡುತ್ತಿರುತ್ತಾನೆ.

ಆರೋಪಿತನ,ವಿರುದ್ದ ಈಗಾಗಲೇ ಹಾಸನ ಚಿಕ್ಕಮಗಳೂರು, ದಾವಣಗೆರೆ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ,ಪ್ರಕರಣಗಳು ದಾಖಲಾಗಿರುತ್ತವೆ. ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮನೆ ಕಳವು ಪ್ರಕರಣಗಳನ್ನು ಪತ್ತೆ ಮಾಡಲು ತಂಡವನ್ನು ರಚನೆ ಮಾಡಿದ್ದು, ಅದರಂತೆ ಕಾರ್ಯ ಪ್ರವೃತ್ತರಾದ ತಂಡವು ಸಂತೋಷ @ ರಂಗೇಗೌಡ ಎಂ, ಎ@ ಐಪಿಎಲ್ ಸಂತು ! ಮುದಿಗೆರೆ ಸಂತು ಬಿನ್ ವೆಂಕಟೇಶ್‌, ಸುಮಾರು 38 ವರ್ಷ, ಜಿರಾಯ್ತಿ, ಮುದಿಗೆರೆ,ದೊಡ್ಡಕನಗಲ ಪೋಸ್ಟ್, ಕಸಬಾ ಹೋಬಳಿ, ಆಲೂರು ತಾಲ್ಲೋಕ್, ಹಾಸನ ಜಿಲ್ಲೆ ರವರನ್ನು ಬಂಧಿಸಿರುತ್ತೆ.ಈತನ ದಸ್ತಗಿರಿಯಿಂದ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯ ಮೊ. ನಂ. 44/2023 ಕಲಂ: 454, 380,ಐಪಿಸಿ ಮತ್ತು ಮೊ.ನಂ. 34/2024 ಕಲಂ: 454, 380 ಐಪಿಸಿ ಕೇಸಿನಲ್ಲಿ ಕಳ್ಳತನವಾದ ಮಾಲುಗಳು ಪತ್ತೆಯಾಗಿದ್ದು, ಕಳವು,ಮಾಡಿದ 127ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಿರುತ್ತೆ. ಇದರ ಅಂದಾಜು ಮೌಲ್ಯ ಸುಮಾರು 900000/-ರೂಪಾಯಿ
ಆಗಿರುತ್ತೆ.ಮಾನ್ಯ ತುಮಕೂರು ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಅಶೋಕ್.ಕೆ.ವಿ ರವರ ಮಾರ್ಗದರ್ಶನದಲ್ಲಿ, ತುಮಕೂರು.ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರುಗಳಾದ,ವಿ.ಮರಿಯಪ್ಪ ಹಾಗೂ ಬಿ.ಎಸ್.ಅಬ್ದುಲ್ ಖಾದರ್,ನೇತೃತ್ವದಲ್ಲಿದಲ್ಲಿ, ತಿಪಟೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ವಿನಾಯಕ ಎನ್ ಶೆಟ್ಟಿಗೇರಿ ರವರ
ಮಾರ್ಗಸೂಚನೆ ಮೇರೆಗೆ ತಿಪಟೂರು ಗ್ರಾಮಾಂತರ ಠಾಣಾ ಇನ್ಸೆಕ್ಟರ್ ರವಿ.ಕೆ. ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯಸಬ್‌ ಇನ್ಸೆಕ್ಟರ್ ನಾಗರಾಜು.ಐ.ಡಿ, ಸಿಬ್ಬಂದಿಯವರಾದ ಹನುಮಂತ ಕಮಕೇರಿ, ಶರತ್ ಎನ್.ಜೆ, ಚೇತನ್ ಕುಮಾರ್ ಜಿ.ಈ,ಇಮ್ರಾನ್ ಕೆ.ಆರ್, ಜೀಪ್ ಚಾಲಕ ಜೀವನ್ ಮತ್ತು ಮಲ್ಲಿಕಾರ್ಜುನ ಎಂ.ಆರ್. ರವರು ಆರೋಪಿತನನ್ನು ಬಂಧಿಸುವಲ್ಲಿಯಶಸ್ವಿಯಾಗಿರುತ್ತಾರೆ. ಸದರಿ ಪತ್ತೆ ತಂಡವನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಕೆ.ವಿ.ಅಶೋಕ್, ಐ.ಪಿ.ಎಸ್ ರವರುಪ್ರಶಂಸಿರುತ್ತಾರೆ.

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ನಗರಸಭೆಯ ವ್ಯಾಪ್ತಿಯಲ್ಲಿ ಬರುವಂತಹ ಸ್ವತ್ತುಗಳಿಗೆ ,ಸ್ವತ್ತಿನ ಮಾಲೀಕರು ಇ-ಸ್ವತ್ತು ಖಾತೆ ಮಾಡಿಸಿಕೊಳ್ಳಲು,ಸರ್ಕಾರ ಅವಕಾಶ ನೀಡಿದ್ದು,ನಾಗರೀಕರು ತಮ್ಮ ಸ್ವತ್ತುಗಳನ್ನ ಇ-ಸ್ವತ್ತು ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು.
ನಗರಸಭೆ ಶಾಸಕರ ಕಾರ್ಯಾಲಯದಲ್ಲಿ ಇ-ಸ್ವತ್ತು ಖಾತೆ ಪತ್ರ ವಿತರಿಸಿದ ಶಾಸಕರು ಮಾತನಾಡಿ,ನಗರವ್ಯಾಪ್ತಿಯಲ್ಲಿ ಸಾರ್ವಜನಿಕರು ಸ್ವತ್ತುಗಳ ಮಾಲೀಕತ್ವ ಪಡೆಯಲು ಹಲವಾರು ವರ್ಷಗಳಿಂದ ಪರದಾಡಬೇಕಾಗಿತ್ತು ಹಲವಾರು ಕಾರಣಗಳಿಂದ ಸಾಧ್ಯವಾಗಿರಲ್ಲಿಲ್ಲ,ಸರ್ಕಾರ ಕಾನೂನಿಗೆ ತಿದ್ದುಪಡಿ ಮಾಡುವ ಮೂಲಕ ನಿಯಮಗಳನ್ನ ಸರಳಿಕರಣಗೊಳಿಸಲಾಗಿದೆ,
ಸೌಲಭ್ಯ ವನ್ನು 2016 ರಿಂದ ಜಾರಿಗೊಳಿಸಲಾಗಿದೆ. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಸ್ತಿ ತಂತ್ರಾಂಶವನ್ನು ಬಳಸಿ ಇ-ಖಾತಾ ನೀಡುವ,ಇ-ಖಾತಾಗಳನ್ನು ಸೃಜನೆ ಮಾಡಿ ಆಸ್ತಿ ಮಾಲೀಕರಿಗೆ ವಿತರಿಸಲಾಗಿದೆ.

ಅದರಂತೆ ಕಳೆದ 9 ವರ್ಷಗಳಲ್ಲಿ ತಿಪಟೂರು ನಗರಸಭೆ ವ್ಯಾಪ್ತಿಯಲ್ಲಿ 14 ಸಾವಿರ.ಈವರೆಗೆ ಇ-ಆಸ್ತಿ ತಂತ್ರಾಂಶದಲ್ಲಿ ಅಧಿಕೃತ ಆಸ್ತಿಗಳಿಗೆ ಮಾತ್ರ ಇ-ಖಾತಾ ಸೃಜನೆ ಮಾಡಿ,ನೀಡುತ್ತಿದ್ದು, ಯೋಜನಾಪ್ರಾಧಿಕಾರದಿಂದ,ಅನುಮೋದನೆಯಾಗದ ಬಡಾವಣೆಗಳಲ್ಲಿನಆಸ್ತಿಗಳಿಗೆ ಇ-ಖಾತಾ ನೀಡದೇ ಇರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.ಸಾರ್ವಜನಿಕರಿಗೆ ಉಂಟಾಗುತ್ತಿದ್ದ ಈ ಸಮಸ್ಯೆ ಬಗೆಹರಿಸಲು ಸಚಿವ ಸಂಪುಟ ಉಪಸಮಿತಿಯನ್ನು ರಚಿಸಿ, ಅಗತ್ಯ ಶಿಫಾರಸ್ಸುಗಳ ಮೇರೆಗೆಅನಧಿಕೃತ ನಿವೇಶನಗಳಿಗೆ ಇ-ಖಾತಾ,ನೀಡಲು ಅನುವಾಗುವಂತೆ ಕರ್ನಾಟಕ

ಮುನಿಸಿಪಲ್‌ ಕಾಯ್ದೆ ಮತ್ತು ನಿಯಮಗಳಿಗೆ ಫೆಬ್ರವರಿ2025ರಲ್ಲಿತಿದ್ದುಪಡಿಯನ್ನು ಅದರಂತೆದಿನಾಂಕ 10-09-20240
ಪೂರ್ವದಲ್ಲಿ ನೋಂದಣಿಯಾದ ಅನಧಿಕೃತ,ಸ್ವತ್ತುಗಳಿಗೆ ಇ-ಖಾತಾ ನೀಡಲು ಅವಕಾಶ ನೀಡಲಾಗಿದೆ.ಈ ಕ್ರಮದಿಂದ, ಅನಧಿಕೃತ ಆಸ್ತಿಗಳನ್ನು ಆಸ್ತಿತೆರಿಗೆ ವ್ಯಾಪ್ತಿಗೆ ಒಳಪಡಿಸಿ, ಪ್ರತ್ಯೇಕ ವಹಿ(ಬಿ-ರಿಜಿಸ್ಟರ್)ಯಲ್ಲಿ ದಾಖಲಿಸಲು ಅವಕಾಶ ಕಲಿಸಿದ್ದು, ಇದರಿಂದ ತಿಪಟೂರು ನಗರಸಭೆಗೆಹೆಚ್ಚಿನ ಆಸ್ತಿತೆರಿಗೆ ಸಂಗ್ರಹಣೆ ಮಾಡಲು ಅನುಕೂಲವಾಗುತ್ತದೆ. ಹಾಗೂ ಸಾರ್ವಜನಿಕರಿಗೆ,ತಮ್ಮಆಸ್ತಿಯಇ-ಖಾತಾದೊರೆಯುವುದರಿಂದವಹಿವಾಟುಗಳನ್ನು ನಡೆಸಲುಕೂಡಅನುಕೂಲವಾಗುತ್ತದೆ.ಇ-ಖಾತಾ ನೀಡುವುದನ್ನು ಅಭಿಯಾನದ ರೂಪದಲ್ಲಿ ಕೈಗೊಂಡು ಮುಂದಿನ 3 ತಿಂಗಳ
ಒಳಗಾಗಿ ತಿಪಟೂರು ನಗರಸಭೆ ವ್ಯಾಪ್ತಿಯ ಎಲ್ಲಾ ಸ್ವತ್ತುಗಳಿಗೂ ಇ-ಖಾತಾ ನೀಡಲು
ಉದ್ದೇಶಿಸಲಾಗಿದೆ.ಸಾರ್ವಜನಿಕರು ತಮ್ಮ ಸ್ವತ್ತುಗಳ ಮೂಲ ದಾಖಲೆಗಳು ಸೇರಿದಂತೆ ಅಗತ್ಯದಾಖಲೆಗಳು ಹಾಗೂ ಕಂದಾಯ ವಗೈರೆಗಳನ್ನ,ಪಾವತಿಮಾಡಿ

ಅರ್ಜಿಸಲ್ಲಿಸಬೇಕು. ನಗರವ್ಯಾಪ್ತಿಯಲ್ಲಿ ಜನರಿಗೆಜನದಟ್ಟಣೆತೊಂದರೆಯಾಗಬಾರದು ಎನ್ನುವ ಕಾರಣಕ್ಕೆ,ತಿಪಟೂರು ನಗರಸಭೆ ಕಚೇರಿ,ಶಾರದ ನಗರ ಬೈಫ್ ಕಚೇರಿ, ಅಣ್ಣಾಪುರ ಶ್ರೀರಾಮದೇವಾಲಯ,ಹೌಸಿಂಗ್ ಬೋರ್ಡ್ ಕಾಲೋನಿ,ಮತ್ತು ಗಾಂಧೀ ನಗರ ಪಾರ್ಕ್ ಬಳಿ ಅರ್ಜಿಸಲ್ಲಿಸಲು ಅವಕಾಶ ನೀಡಲಾಗಿದೆ,ಸಾರ್ವಜನಿಕರುಮಧ್ಯವರ್ತಿಗಳಿಗೆ ಅವಕಾಶ ನೀಡದಂತೆ ನೇರವಾಗಿ ಅರ್ಜಿಸಲ್ಲಿಸಲುಮನವಿ ಮಾಡಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ ನಗರಸಭೆ ಅಧ್ಯಕ್ಷ ಶ್ರೀಮತಿ ಯಮುನಾಧರಣೇಶ್ ಮಾತನಾಡಿ, ಸರ್ಕಾರದ ನಿರ್ದೇಶನದಂತೆ 10.09.2024ರ ಪೂರ್ವದಲ್ಲಿ ಅಧಿಕೃತ ಹಾಗೂ ಅನಾಧಿಕೃತ ಸ್ವತ್ತುಗಳಿಗೆ ಎ.ಖಾತಾ ಮತ್ತು ಬಿ.ಖಾತೆ ಗಳ ಇಸ್ವತ್ತು ಖಾತೆ ಮಾಡಲು ಅವಕಾಶ ನೀಡಿದ್ದು, ಹೊಸ ಇ-ಸ್ವತ್ತು ತಂತ್ರಾಂಶದಲ್ಲಿ ದಾಖಲೆ ಪಡೆಯಲು, ತಮ್ಮ ಸ್ವತ್ತುಗಳ ಮೂಲದಾಖಲೆಗಳು ಹಾಗೂ ತೆರಿಗೆ ಪಾವತಿ ರಸೀತಿ,ಹಾಗೂ ಅಗತ್ಯದಾಖಲೆಗಳಲೊಂದಿಗೆ ಅಧೀಕೃತ ಅರ್ಜಿ ನಮೂನೆಯಲ್ಲಿ ಅರ್ಜಿಸಲ್ಲಿಸಿ,ಇ- ಸ್ವತ್ತು ಖಾತೆ ಮಾಡಿಸಿಕೊಳ್ಳ ಬೇಕು 3ತಿಂಗಳು ಕಾಲಾವಕಾಶ ನೀಡಿದ್ದು, ನಿಗಧಿತ ಕಾಲವಧಿಯಲ್ಲಿ ಅರ್ಜಿಸಲ್ಲಿಸಿ ನಂತರ ಅವಕಾಶವಿರುವುದಿಲ್ಲ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ,ನಗರಸಭೆ ಸದಸ್ಯ ವಿನುತಾ ತಿಲಕ್,ಮುನ್ನಾ,ಮುಂತ್ತಾದವರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ಶಾಸಕ ಕೆ.ಷಡಕ್ಷರಿ ನಮ್ಮ ಪಕ್ಷದಲ್ಲಿ ಹಿರಿಯ ಮುತ್ಸದ್ದಿ ರಾಜಕಾರಣಿ ಅನುಭವಿಗಳು, ಯಾವುದೇ ಸಚಿವ ಸ್ಥಾನಮಾನ ನೀಡಿದರೂ ನಿಭಾಯಿಸುವ ಸಾಮರ್ಥ್ಯವಿದೆ,ಪಕ್ಷದ ಹಾಗೂ ವರೀಷ್ಠರೂ ಅವರ ಸಾಮರ್ಥ್ಯದಂತೆ ಸಚಿವ ಸ್ಥಾನ ನೀಡಿದರೆ ನಾನೂ ಖುಷಿಪಡುತ್ತೇನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.


ತಿಪಟೂರು ಸಾರ್ವಜನಿಕ ಆಸ್ಪತ್ರೆ ಭೇಟಿ ನೀಡಿ, ಒಪಿಡಿ ಘಟಕ ಉದ್ಘಾಟನೆ ನೆರವೇರಿಸಿ ನಂತರ ಆಸ್ಪತ್ರೆ ಪರಿಶೀಲನೆ ನಡೆಸಿ ಆಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು ಮಾಧ್ಯಮಗಳೊಂದಿಗೆ ಮಾತನಾಡಿ ತಿಪಟೂರು ಶಾಸಕ ಕೆ.ಷಡಕ್ಷರಿ ಯವರು ಹಿರಿಯ ರಾಜಕಾರಣಿ,ಸಹಕಾರಿ ಕ್ಷೇತ್ರ ಹಾಗೂ ಕೃಷಿ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ,ಅವರಿಗೆ ಸಚಿವಸ್ಥಾನ ಪಡೆಯುವ,ಎಲ್ಲಾ ಅರ್ಹತೆ ಹಾಗೂ ಸಾಮರ್ಥ್ಯವಿದೆ,ಅವರು ಸಚಿವರಾದರೆ ರಾಜ್ಯದ ಜನತೆಗೆ ಅನುಕೂಲವಾಗುತ್ತದೆ,ಪಕ್ಷದ ವರೀಷ್ಟರು ಸಚಿವ ಸ್ಥಾನ ನೀಡಿದರೆ ನಾನು ಖುಷಿಪಡುತ್ತೇನೆ ಎಂದು ತಿಳಿಸಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

ತುಮಕೂರು ಜಿಲ್ಲೆ ತಿಪಟೂರು ನಗರದ ವೈಭವಿ ತಾಯಿ ಮತ್ತು ಮಕ್ಕಳ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ತಿಪಟೂರಿನ ಜನರಿಗೆ ಅತ್ಯುತ್ತಮ NICU ವೈದ್ಯಕೀಯ ಸೇವೆ ನೀಡುತ್ತಿದೆ,ಸಂತಸದ ವಿಚಾರವಾಗಿದ್ದು ಬೆಂಗಳೂರು ಹಾಸನ ತುಮಕೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ದೊರೆಯುವ ಸೂಪರ್ ಸ್ಪೆಷಲಿಟಿ ಸೌಲಭ್ಯ ನಮ್ಮ ಆಸ್ಪತ್ರೆಯಲ್ಲಿ ದೊರೆಯುತ್ತಿದೆ ಎಂದು ವೈಭವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯಾಧಿಕಾರಿಗಳಾದ ಡಾ//ಮಧುಸೂಧನ್ ತಿಳಿಸಿದರು


ನಗರದ ಆಸ್ಪತ್ರೆಯಲ್ಲಿ ವಾರ್ಷಿಕೋತ್ಸವ ಸಮಾರಂಭದ ಆಂಗವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಧುಸೂಧನ್ ಕೇರಳದಲ್ಲಿ ಸೇವೆಸಲ್ಲಿಸುತ್ತಿದ್ದ ನಾನು ನಮ್ಮ ಊರಿನಲ್ಲಿ ಸೇವೆಸಲ್ಲಿಸಬೇಕು ನಮ್ಮ ಊರಿನ ಜನರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕು ಎನ್ನುವ ಮಹಾದಾಸೆಯೊಂದಿಗೆ ತಿಪಟೂರಿನಲ್ಲಿ ವೈಭವಿ ಮಕ್ಕಳ ಆಸ್ಪತ್ರೆ ಆರಂಭಿಸಿದು, ಈಗ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ದೊರೆಯುವ ಸೂಪರ್ ಸ್ಪಷಾಲಿಟಿ ವೈದ್ಯಕೀಯ ಸೌಲಭ್ಯಗಳು ದೊರೆಯಬೇಕು ಎನ್ನುವ ಕಾರಣಕ್ಕೆ ಬೆಂಗಳೂರಿನ ಮದರ್ ಹುಡ್ ಆಸ್ಪತ್ರೆಯೊಂದಿಗೆ ಟೈಯಪ್ ಆಗಿ ಸೂಪರ್ ಸ್ಪೆಷಾಲಿಟಿ ಸೌಲಭ್ಯ ನೀಡಲಾಗುತ್ತಿದೆ,ನಮ್ಮ ವೈಭವಿ ಆಸ್ಪತ್ರೆ ,ವೈಭವಿ ತಾಯಿ ಮತ್ತು ಮಕ್ಕಳ ಸೂಪರ್ ಮಲ್ಟಿಸ್ಪೆಷಾಲಿಟಿ ಅಸ್ಪತ್ರೆಯಾಗಿ ಒಂದು ವರ್ಷ ಪೂರೈಸಿದ್ದು, ನಮ್ಮ ಆಸ್ಪತ್ರೆಯಲ್ಲಿ ನೂರಾರು ತೀವ್ರ ಆನಾರೋಗ್ಯದಿಂದ ಜೀವನ್ಮಾರಣದ ಹೋರಾಟದಲ್ಲಿದ ಮಕ್ಕಳಿಗೆ ಉತ್ತಮ ಚಿಕಿತ್ಸೆ ನೀಡಿ ಆರೋಗ್ಯ ಸುಧಾರಿಸಿದ್ದು, ಉತ್ತಮ ಆರೋಗ್ಯವಂತರಾಗಿದ್ದು, ಪೋಷಕರಿಂದ ಶ್ಲಾಘನೆ ವ್ಯಕ್ತವಾಗಿದೆ.ನಮ್ಮಲ್ಲಿ NICUಸೌಲಭ್ಯಗಳು ದೊರೆಯುತ್ತವೆ,ಹೆರಿಗೆ ಸೌಲಭ್ಯ, ನಮಜಾತ ಶಿಶುಗಳ ಹಾರೈಕೆ,ನವಜಾತಶಿಶುಗಳ ಉಸಿರಾಟದ ತೊಂದರೆ,ಕೆಟ್ಟನೀರು ಹಾಗೂ ಮಲ ಕುಡಿದ ಮಕ್ಕಳಿಗೆ ಚಿಕಿತ್ಸೆ ಸೇರಿದಂತೆ.ನೀಡುತ್ತಿದು,ಮಕ್ಕಳ ಐಸಿಯು ಸೌಲಭ್ಯ ದೊರೆಯುತ್ತಿದೆ,ತಿಪಟೂರು ಸುತ್ತಮುತ್ತಲ ತಾಲ್ಲೂಕುಗಳಲ್ಲಿ ತೀವ್ರ ಆನಾರೋಗ್ಯಕ್ಕೊಳಗಾದ ನವಜಾತಶಿಶುಗಳ ,ಚಿಕಿತ್ಸೆಗಾಗಿ ಬೆಂಗಳೂರು,ಶಿವಮೊಗ್ಗ, ಹಾಸನ ತುಮಕೂರಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಾಬೇಕಾಗಿತ್ತು, ಈ ಅವಧಿಯಲ್ಲಿ ಮಕ್ಕಳು,ಪ್ರಾಣಾಪಾಯ ಎದುರಿಸ ಬೇಕಾಗಿತ್ತು,ಆದರೆ ನಮ್ಮ ಆಸ್ಪತ್ರೆಯಲ್ಲಿ ಬೆಂಗಳೂರಿನ ಆಸ್ಪತ್ರೆಯ ಗುಣಮಟ್ಟದ ಸೂಪರ್ ಸ್ಪೆಷಾಲಿಟಿ ಸೌಲಭ್ಯ ದೊರೆಯುತ್ತಿರುವ ಕಾರಣ,ನೂರಾರು ಮಕ್ಕಳ ಜೀವ ಉಳಿಸಲು ಸಾಧ್ಯವಾಗಿದೆ.ನಮ್ಮ ಆಸ್ಪತ್ರೆಯಲ್ಲಿ 7ತಿಂಗಳಿಗೆ ಜನನವಾದ ಮಗು ಕೇವಲ 1ಕೆ.ಜಿ ತೂಕದ ಮಗುವಿಗೆ ಒಂದು ತಿಂಗಳ ಕಾಲ ಶೃಶ್ರೂಷೆ ಮಾಡಲಾಗಿದೆ,ಮಗು ಆರೋಗ್ಯವಾಗಿದ್ದು 4.5ಕೆ.ಜಿ ತೂಕವಿದೆ,ಇಂತಹ ಕಠಿಣ ಆರೋಗ್ಯ ಸಮಸ್ಯೆ ಇರುವ ಹಲವಾರು ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ,ಸಾರ್ವಜನಿಕರಿಂದಲೂ ಉತ್ತಮ ಪ್ರಶಂಶೆ ವ್ಯಕ್ತವಾಗಿದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಆಸ್ಪತ್ರೆ ಆಡಳಿತಾಧಿಕಾರಿ ಡಾ//ಕೃತಿಕ,ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾದ ಡಾ//ಹರ್ಷಿತಾ ಮುಂತ್ತಾದವರು ಉಪಸ್ಥಿತರಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು : ನಗರದ ಸಾರ್ವಜನಿಕ ಆಸ್ವತ್ರೆಯ ತಾಯಿ ಮತ್ತು ಮಕ್ಕಳ ಆಸ್ವತ್ರೆಗೆ ಭೇಟಿ ಮತ್ತು ಪರೀಶೀಲನೆ ನಡೆಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸಮಸ್ಯೆಗಳ ಸುರಿಮಳೆಯನ್ನೇ ಎದುರಿಸ ಬೇಕಾಯಿತು. ಆಸ್ಪತ್ರೆಯ ಸಿಬ್ಬಂದಿಗಳು
ಸಾರ್ವಜನಿಕ ಆಸ್ವತ್ರೆಯಲ್ಲಿ ಸಿಬ್ಬಂದಿಗಳ ಕೊರತೆ, ವೈದ್ಯರ ಕೊರತೆ, ರಕ್ಷಣೆ ಕೊರತೆ, ರೋಗಿಗಳ ಸಂಬಂಧಿಕರಿಗೆ ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ ವಿಶ್ರಾಂತಿ ಸ್ಥಳ, ಬಿಸಿ ನೀರಿನ ಸಮಸ್ಯೆಗೆ ಸೋಲಾರ್ ವ್ಯವಸ್ಥೆ, ಆಧುನಿಕತೆ ಸೌಲಭ್ಯವುಳ್ಳ ಡಾರ್ಮಿಂಟರಿ ಕಟ್ಟಡದ ವ್ಯವಸ್ಥೆ, ಎಕ್ಸರೇ ಯಂತ್ರ, ಸಿಟಿ ಸ್ಕಾನಿಂಗ್ ಎಮ್‌ಆರ್‌ಐ ಯಂತ್ರಗಳ ತುರ್ತಾಗಿ ಬೇಕಾಗಿದೆ,ಎಂದು ಆಸ್ವತ್ರೆಯ ಆಡಳಿತಾಧಿಕಾರಿ ಶಿವಕುಮಾರ್ ತಿಳಿಸಿದರು,


ಕಣ್ಣಿಗೆ ಸಂಬಂಧಿಸಿದ ರೇಸರ್ ಚಿಕಿತ್ಸೆಗೆ ಅವಶ್ಯಕ ಸಾಧನಗಳು, ಕಲ್ಲು ಗಣಿ, ಗಾರ್ಮೇಂಟ್ಸ್ನಲ್ಲಿ ಕೂಲಿ ಕಾರ್ಮೀಕರು ಹೆಚ್ಚಳವಿರುವುದರಿಂದ ತಾಲ್ಲೂಕು ಆಸ್ವತ್ರೆಗೆ ಚರ್ಮ ರೋಗ ತಜ್ಞರ ಹುದ್ದೆ ಅವಶ್ಯಕತೆಯಿರುತ್ತದೆ ಆದರೆ ಇಲ್ಲಿ ಮುಂಚೂರು ಆಗಿರುವುದಿಲ್ಲ ತುರ್ತಾಗಿ ಬೇಕಾಗಿರುತ್ತದೆ ಎಂದು ಮನವಿ ಮಾಡಿದರು ತಿಪಟೂರು ಸಾರ್ವಜನಿಕ ಆಸ್ಪತ್ರೆ ಮೂರ್ನಾಲ್ಕು ಜಿಲ್ಲೆಗಳ ಗಡಿಭಾಗಕ್ಕೆ ಪ್ರಮುಖ ಆಸ್ಪತ್ರೆಯಾಗಿದ್ದು, ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಹೊರರೋಗಿಗಳ ಚಿಕಿತ್ಸೆಗಾಗಿ ಬರುವ ಕಾರಣ,ವೈದ್ಯರೂ ಹಾಗೂ ವೈದ್ಯಕೇತರ ಸಿಬ್ಬಂದಿಯ ಕೊರತೆಇದೆ, ತಿಪಟೂರು ಉಪವಿಭಾಗ ಕೇಂದ್ರವಾಗಿರುವ ಕಾರಣ ಉಪವಿಭಾಗ ಆಸ್ಪತ್ರೆಯಾಗಿ ಮೆಲ್ದಾರ್ಜೆಗೇರಿಸಲು,ಶಾಸಕರು ಹಾಗೂ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿಗಳ ಮನವಿಗೆ ಸಚಿವ ಉತ್ತರ ಮಾತ್ರನಿರಾಶಾಧಾಯಕವಾಗಿತ್ತು, ತಿಪಟೂರು ಸಾರ್ವಜನಿಕ ಆಸ್ಪತ್ರೆ ಚೆನ್ನಾಗಿನಡೆಯುತ್ತಿದೆ,ಹೊರರೋಗಿಗಳು ಹೆಚ್ಚಾಗಿರುವ ಕಾರಣ ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಚರ್ಚೆ ಮಾಡಿ ಮೆಡಿಕಲ್ ಕಾಲೇಜು ಆರಂಭಿಸಲು ಪ್ರಯತ್ನಿಸಿದರೆ ಸಹಕಾರ ನೀಡುವುದ್ದಾಗಿ ತಿಳಿಸಿದರು.

.ಶಾಸಕ ಕೆ.ಷಡಕ್ಷರಿ ಮಾತ್ರ ನಮ್ಮ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಆಸ್ಪತ್ರೆಯಷ್ಟೇ ಒತ್ತಡವಿದೆ,ನಾವೂ ಆಸ್ಪತ್ರೆಗೆ ಅಗತ್ಯವಿರುವ ಜಾಗ ಕೊಡುತ್ತೇವೆ,ಗಣಿ ಪ್ರದೇಶ ಪುನರ್ ಅಭಿವೃದ್ದಿ ಹಣವೂ ಸಹ ಇದೆ ಈ ಭಾಗದ ಜನ ತುರ್ತು ಸಂದರ್ಭಗಳಲ್ಲಿ 70ಕಿ‌ಲೋ ಮೀಟರ್ ಪ್ರಯಾಣಿಸಬೇಕು,ಆದರಿಂದ 70ರಿಂದ 80ಕಿಲೋ ಮೀಟರ್ ವ್ಯಾಪ್ತಿಯ ಜನರಿಗೆ ಅನುಕೂಲವಾಗುವಂತೆ ಆಸ್ಪತ್ರೆ ಮುಂಜೂರು ಮಾಡಲು ಮನವಿ ಮಾಡಿದರು,ಆಡಳಿತಾಧಿಕಾರಿ ಶಿವಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಮಂಜುನಾಥ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಧಿಕಾ, ಇಒ ಸುದರ್ಶನ್, ತಹಶೀಲ್ದಾರ್ ಪವನ್‌ಕುಮಾರ್, ಡಿವೈಎಸ್‌ಪಿ ವಿನಾಯಕ ಶೆಟಗೇರಿ, ನಗರ ಪೋಲೀಸ್ ವೃತ್ತ ನಿರೀಕ್ಷಕ ವೆಂಕಟೇಶ್, ಗ್ಯಾರಂಟಿ ಯೋಜನೆಯ ತಾ ಅಧ್ಯಕ್ಷ ಕಾಂತರಾಜು ಮತ್ತಿತ್ತರು ಹಾಜರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು :ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ರವರು ದಿನಾಂಕ 19.02.2025 ರಂದು ಬುಧವಾರ ತಿಪಟೂರಿಗೆ ಆಗಮಿಸಲಿದ್ದಾರೆ,

ತುಮಕೂರು ನಗರದ ಶ್ರೀದೇವಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಆಯೋಜನೆ ಮಾಡಿರುವ CATHಪ್ರಯೋಗಾಲಯ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸುವ ಸಚಿವರು.ನಂತರ ಚಿಕ್ಕನಾಯ್ಕನಹಳ್ಳಿ ತಾಲ್ಲೋಕಿನ ಗೂಬೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ ನಂತರ ತಿಪಟೂರು ಸುಮಾರು 2.30ಗಂಟೆಗೆ ಆಗಮಿಸಲಿದ್ದಾರೆ,ತಿಪಟೂರಿಗೆ ಭೇಟಿನೀಡಿ ತಿಪಟೂರು ಸಾರ್ವಜನಿಕ ಆಸ್ಪತ್ರೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿನೀಡಿ ಆಸ್ಪತ್ರೆಯ ವ್ಯವಸ್ಥೆಗಳ ಪರಿಶೀಲನೆ ನಡೆಸಲಿದ್ದು ಶಾಸಕ ಕೆ.ಷಡಕ್ಷರಿಯವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು,ಇಲಾಖೆಯ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿರಲ್ಲಿದ್ದಾರೆ.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!