ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ್ ತುಮಕೂರು ತಾಲ್ಲೋಕು ಪಂಚಾಯ್ತಿ ತಿಪಟೂರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ತುಮಕೂರು, ಉಪ ವಿಭಾಗ ತಿಪಟೂರು.ಕರಡಿ ಗ್ರಾಮ ಪಂಚಾಯ್ತಿ ಪುಣ್ಯಕೋಟಿ ಇಂಟಿಗ್ರೇಟೆಡ್ ರೂರಲ್ ಡೆವಲಪ್ಮೆಂಟ್ ಸೊಸೈಟಿ ತುಮಕೂರು, ಇವರ ಸಂಯುಕ್ತ ಆಶ್ರಯದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಮಳೆ ನೀರು ಕೊಯ್ಲು ಮತ್ತು ಬೂದು ನೀರು ನಿರ್ವಹಣೆ ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆಯ ತರಬೇತಿ ಕಾರ್ಯಕ್ರಮ ನಡೆಸಲಾಯಿತು.ಕರಡಿ ಗ್ರಾಮಪಂಚಾಯ್ತಿ ಅಧ್ಯಕ್ಷ ಜಯರಾಮ್ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ದೇವರಾಜು ಮಾತನಾಡಿ, ಅನಗತ್ಯವಾಗಿ ವ್ಯಯ ಮಾಡುವ ಬದಲು, ಮಳೆನೀರು ಕೋಯ್ಲು ವಿಧಾನದ ಮೂಲಕ ನೀರು ಸಂರಕ್ಷಣೆ ಮಾಡಿ ಬಳಸ ಬಹುದು, ಹಾಗೂ ನೀರು ಭೂಮಿಯಲ್ಲಿ ಇಂಗುವಂತ್ತೆ ಮಾಡಬಹುದು. ಬೂದು ನೀರು ನಿರ್ವಹಣೆ ,ಇಂಗು ಗುಂಡಿಗಳನ್ನು ನಿರ್ಮಾಣ ಮಾಡಿಕೊಂಡು ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ,ಭವಿಷ್ಯದಲ್ಲಿ ನೀರಿನ ಸಮಸ್ಯೆಗೆ ಪರಿಹಾರವಾಗುವುದು. ಮೇಲ್ಮೈ ಮಳೆ ನೀರು ಕೊಯ್ಲು ಕಾರ್ಯಕ್ರಮದಲ್ಲಿ ಜಮೀನುಗಳಲ್ಲಿ ಕೃಷಿ ಹೊಂಡ, ಕ್ಷೇತ್ರಬದುಗಳನ್ನ ಮಳೆ ನೀರು ಹಿಂಗುವಂತಹ ರಚನೆಗಳಲ್ಲಿ ನಿರ್ಮಾಣ ಮಾಡುವುದರಿಂದ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಹಾಗೂ ಮಣ್ಣಿನ ಸವಕಳಿಯನ್ನು ತಡೆಯಲು ಅನುಕೂಲವಾಗುತ್ತದೆ. ರೈತರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಯಡಿ ಅವಕಾಶಗಳಿದ್ದು, ರೈತರು ಹಾಗೂ ಗ್ರಾಮೀಣ ಭಾಗದ ಜನ ಸದುಪಯೋಗಪಡಿಸಿಕೊಳ್ಳ ಬಹುದು, ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ. ಕರಡಿ ಗ್ರಾಮಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಕವಿತ,ಸಂಪನ್ಮೂಲ ವ್ಯಕ್ತಿಗಳಾದ ದೇವರಾಜು ಬಿ. ಕೆ. ಐ ಎಸ್ ಆರ್ ಎ ಸಿಬ್ಬಂದಿ ಭರತ್ ಕುಮಾರ್ ಮುಂತ್ತಾದವರು ಉಪಸ್ಥಿತರಿದರು
ತುಮಕೂರು ಜಿಲ್ಲೆ ತಿಪಟೂರು ತಾಲ್ಲೋಕಿನ ಅರಳಗುಪ್ಪೆ ರೈಲು ನಿಲ್ದಾಣದಲ್ಲಿ ಚಿಕ್ಕಮಂಗಳೂರು ರೈಲು ಗಾಡಿ ನಿಲುಗಡೆಗೆ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯಖಾತೆ ಸಚಿವ ವಿ.ಸೋಮಣ್ಣ ,ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹಸಿರು ನಿಶಾನೆ ತೋರಿದರು
ಅರಳಗುಪ್ಪೆ ರೈಲ್ವೆ ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಕೇಂದ್ರ ಸರ್ಕಾರದಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಹಣಕಾಸಿನ ಕೊರತೆಇಲ್ಲ, ರೈಲ್ವೆಯೋಜನೆ ಅಭಿವೃದ್ದಿಗೆ ಸಾಕಷ್ಟು ಹಣಕಾಸಿನ ನೆರವು ನೀಡುತ್ತಿದ್ದೆ,ತಿಪಟೂರಿಗೆ ಶೀಘ್ರದಲ್ಲಿಯೇ,ಮೆನೋ ರೈಲು ಕಾರ್ಯರಂಭ ಮಾಡಲಿದೆ, ತಿಪಟೂರು ರೈಲು ನಿಲ್ದಾಣ ಅಭಿವೃದ್ದಿ ಕಾಮಗಾರಿ ಪ್ರಗತಿಯಲ್ಲಿದ್ದು,ಒಂದು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು,ತಿಪಟೂರು ತಾಲ್ಲೋಕಿನ ಪ್ರಸಿದ್ದ ಕ್ಷೇತ್ರ ಕೆರಗೋಡಿ ರಂಗಾಪುರ ಸುಕ್ಷೇತ್ರಕ್ಕೆ ಸಂಪರ್ಕಿಸುವ ರಸ್ತೆ ವಿಸ್ತರಣೆ ಹಾಗೂ ಮೇಲ್ಸೇತುವೆ ನಿರ್ಮಾಣಕ್ಕೆ ಸರ್ವೇ ಕಾರ್ಯಕ್ಕೆ ಆದೇಶ ನೀಡಿದ್ದು, ಶೀಘ್ರದಲ್ಲಿಯೇ ಸಾರ್ವಜನಿಕರೊಂದಿಗೆ ಸಭೆ ನಡೆಸಿ, ಮೇಲ್ಸೇತುವೆ ನಿರ್ಮಾಣಕ್ಕೆ ಇರುವ ತೊಡಕು ನಿವಾರಿಸಲಾಗುವುದು.ಜ್ಞಾಸದಾಸೋಹಿ ಸಿದ್ದಗಂಗ ಶ್ರೀಗಳ ಹೆಸರಿನಲ್ಲಿ ಖ್ಯಾತಸಂದ್ರ ರೈಲು ನಿಲ್ದಾಣ 100ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಪಡಿಸುವ ಯೋಜನೆ ರೂಪಿಸಲಾಗುತ್ತಿದೆ,ತಿಪಟೂರು ತಾಲ್ಲೋಕಿನ ನೊಣವಿನಕೆರೆ ಹೊಬಳಿಯಲ್ಲಿ ಕೈಗಾರಿಕೆಗಳಿಗೆ ಸ್ಥಾಪನೆಗೆ ಅಗತ್ಯವಿರುವ ಭೂಮಿ ನೀಡಿದರೆ, ಕೇಂದ್ರ ಕೈಗಾರಿಕ ಸಚಿವ ಹೆಚ್.ಡಿ ಕುಮಾರಸ್ವಾಮಿಯವರೊಂದಿಗೆ ಮಾತನಾಡಿ ಕೈಗಾರಿಕೆಗಳ ಸ್ಥಾಪನೆಗೆ ಕ್ರಮವಹಿಸಲಾಗುವುದು,ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ತುಮಕೂರು ಶಾಸಕ ಬಿ.ಜಿ ಜ್ಯೋತಿಗಣೇಶ್,ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್,ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್,ಮುಂತ್ತಾದವರು ಉಪಸ್ಥಿತರಿದರು
ತುರುವೇಕೆರೆ:ಪಟ್ಟಣದ ಮಾಯಸಂದ್ರ ರಸ್ತೆ ಮತ್ತು ತುರುವೇಕೆರೆ ಪೊಲೀಸ್ ಠಾಣೆ ಎದುರು ಇರುವ ಅಂಬೇಡ್ಕರ್ ಭವನದ ಜಾಗವನ್ನ ಪ್ರಭಾವಿ ವ್ಯಕ್ತಿಯೊಬ್ಬರು ಅತಿಕ್ರಮಿಸಿದ್ದು,ಅಂಬೇಡ್ಕರ್ ಭವನದ ಜಾಗವನ್ನ ಅಳತೆಮಾಡಿ ತೆರವುಗೊಳಿಸಬೇಕು ಎಂದು ಎಂದು ತುರುವೇಕೆರೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳಿಗೆ ಕರ್ನಾಟಕ ದಲಿತ ಸಂಘರ್ಷ, ಸಮಿತಿ ಹಾಗೂ ಚಲವಾದಿ ಮಹಾಸಭಾ ಸೇರಿದಂತೆ ದಲಿತಪರಸಂಘಟನೆಗಳ ಮುಖಂಡರು ಮನವಿ ಪತ್ರಸಲ್ಲಿಸಿದರು.
ಚಲವಾದಿ ಮಹಾಸಭಾ ಕುಣಿಕೇನಹಳ್ಳಿ ಜಗದೀಶ್ ಮಾತನಾಡಿ, ಅಂಬೇಡ್ಕರ್ ಭವನದ ಜಾಗವನ್ನ ಒತ್ತುವರಿ ಮಾಡಿರುವ ಬಗ್ಗೆ ಪಟ್ಟಣ ಪಂಚಾಯಿತಿಗೆ ಹಲವರು ದೂರು ಕೊಟ್ಟರು ಏನು ಪ್ರಯೋಜವಾಗಿಲ್ಲ, ಪಟ್ಟಣಪಂಚಾಯ್ತಿಗೆ ಸೇರಿದ ಸ್ವತ್ತನ್ನ ರಕ್ಷಣೆ ಮಾಡಲು ಪಟ್ಟಣ ಪಂಚಾಯ್ತಿ ವಿಫಲವಾಗಿದೆ.ಸಾರ್ವಜನಿಕರಿಗೆ ಸೇರಿದ ಸ್ಥಳವನ್ನ ಅತಿಕ್ರಮಿಸಿದ್ದರೂ,ಪಟ್ಟಣಪಂಚಾಯ್ತಿ ಅಧಿಕಾರಿಗಳು ಪ್ರಬಾವಿಗಳ ಒತ್ತಡಕ್ಕೆ ಮಣಿದು ಕೈಕಟ್ಟಿಕುಳಿತ್ತಿದ್ದಾರೆ.ದಲಿತಪರ ಸಂಘಟನೆಗಳ ಮುಖಂಡರು ಅನೇಕಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ, ಅಂಬೇಡ್ಕರ್ ಭವನದ ಜಾಗ ಅತಿಕ್ರಮಿಸಿ ಅನಾಧೀಕೃತ ಕಟ್ಟಡ ನಿರ್ಮಿಸಲಾಗಿದೆ. ನಿರ್ಮಾಣವಾಗಿದೆ.ಅಂಬೇಡ್ಕರ್ ಭವನಕ್ಕೆ ಸಂಬಂದಿಸಿದ ಎಲ್ಲಾ ದಾಖಲೆಗಳೊಂದಿಗೆ ಮೇಲಧಿಕಾರಿಗಳಿಗೂ ದೂರು ನೀಡಲಾಗಿದೆ. ಅಂಬೇಡ್ಕರ್ ಭವನದ ಜಾಗ ಒತ್ತುವರಿಯಾಗಿದ್ದು ತೆರವು ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ, ಪಟ್ಟಣ ಪಂಚಾಯ್ತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಪಟ್ಟಣಪಂಚಾಯ್ತಿ ಮುಂದೆ ಉಗ್ರಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕರಾದ ಕೃಷ್ಣ ಮಾದರ್ ಮಾತನಾಡಿ ಸುಮಾರು ನಾಲ್ಕೈದು ವರ್ಷಗಳಿಂದಲೂ ಇದರ ಬಗ್ಗೆ ಹಲವು ಬಾರಿ ಪಟ್ಟಣ ಪಂಚಾಯಿತಿಗೆ ದೂರು ಕೊಟ್ಟರು ಏನು ಪ್ರಯೋಜನವಾಗಿಲ್ಲ ಜೊತೆಗೆ ಉಪ ವಿಭಾಗಾಧಿಕಾರಿ(a c) , ಸಿಇಓ, ತಾಲೂಕಿನ ತಹಶೀಲ್ದಾರ್ ಜಿಲ್ಲಾಧಿಕಾರಿಗಳ ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಸಹ ಜಾಗ ಒತ್ತೂವರಿಯಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡು ಅಧಿಕಾರಿಗಳಿಗೆ ಕೂಡಲೇ ಈ ಜಾಗವನ್ನು ತೆರೆವು ಗೊಳಿಸಬೇಕೆಂದು ಸೂಚನೆ ಸಹ ನೀಡಿದ್ದಾರೆ, ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ನಿರ್ಲಕ್ಷ್ಯ ಹೊಂದಿದ್ದಾರೆ.ಮೇಲಾಧಿಕಾರಿಗಳ, ಆದೇಶಕ್ಕೂ ತಲೆಕೆಡಿಸಿಕೊಳ್ಳದೆ.ಕೈಕಟ್ಟಿಕುಳಿತ್ತಿದ್ದಾರೆ, ಸರ್ಕಾರ ಕೂಡಲೆ ಒತ್ತುವರಿ ತೆರವು ಮಾಡದೆ, ನಿರ್ಲಕ್ಷ್ಯ ಮಾಡಿರುವ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಯನ್ನ ಅಮಾನತ್ತುಗೊಳಿಸಬೇಕು ಹಾಗೂಅಂಬೇಡ್ಕರ್ ಭವನದ ಜಾಗದ ಒತ್ತುವರಿ ತೆರವುಮಾಡಬೇಕು ಎಂದು ಒತ್ತಾಯಿಸಿದರು. ಟೌನ್ ಬ್ಯಾಂಕ್ ನಿರ್ದೇಶಕ ಬಡಾವಣೆ ಶಿವರಾಜ್, ಸುನಿಲ್, ಪ್ರಸಾದ್, ಇನ್ನೂ ಮುಂತ್ತಾದವರು ಉಪಸ್ಥಿತರಿದ್ದರು.
ತಿಪಟೂರು : ನಗರದ ಎಸ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ೨೦೨೪-೨೫ ನೇ ಸಾಲಿನ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಬಹುಮಾನ ವಿತರಣಾ ಕಾರ್ಯಕ್ರಮ, ಸಾಂಸ್ಕೃತಿಕ ಉಡುಗೆ ಹಾಗೂ ಹೊಸ ವರ್ಷಚಾರಣೆ ಕಾರ್ಯಕ್ರಮವನ್ನು ಕಾಲೇಜಿನ ಸಾವಿತ್ರಿ ಬಾಯಿಫುಲೆ ವೇದಿಕೆಯಲ್ಲಿ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್ ವಿದ್ಯಾರ್ಥೀಗಳಿಗೆ ಬಹುಮಾನ ವಿತರಣೆ ಮಾತನಾಡಿ ಮಕ್ಕಳು ಪಠ್ಯ ವಿಷಯಗಳ ಜೊತೆ ಕ್ರೀಡೆ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಕ್ರೀಡೆಯಲ್ಲಿ ಭಾಗವಹಿಸುವಿಕೆಯಿಂದ ಏಕಾಗ್ರತೆಯಿಂದ, ನಾಯಕತ್ವ ಗುಣಗಳು, ಪರೋಪಕಾರದ ಗುಣಗಳು ಆಳವಾಗಿ ಮೂಡುತ್ತವೆ, ವಿದ್ಯಾರ್ಥಿಗಳಿಗೆ ಅಂಕಕ್ಕೆ ಸೀಮಿತವಾಗಿ ಜ್ಞಾನಾರ್ಜನೆ ಮಾಡಬಾರದು, ಸಮಾಜದ ವಿದ್ಯಾಮಾನಗಳನ್ನು ತಿಳಿಯುತ್ತಾ ವ್ಯಾಸಂಗ ಮಾಡಬೇಕು. ಪಿಯು ಹಂತದಲ್ಲಿ ಮಕ್ಕಳ ಮನಸ್ಸು ಚಂಚಲತೆಯಿAದ ಇದ್ದು ಈ ಸಮಯದಲ್ಲಿ ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಲು ತಿಳಿಸಿದರು. ನಗರಸಭೆ ಮಾಜಿ ಅಧ್ಯಕ್ಷ ಪಿ.ಜೆ. ರಾಮಮೋಹನ್ ಮಾತನಾಡಿ ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಸಮಯ ಬಹಳ ಮುಖ್ಯ. ಎಲ್ಲರೂ ಸಮಯದ ಪರಿಮಿತಿಯಲ್ಲಿ ತಮ್ಮ ಕೆಲಸಗಳನ್ನು ಪೂರೈಸಿ, ವಿದ್ಯಾಭ್ಯಾಸದ ಕಡೆ ಗಮನ ಹರಿಸಬೇಕು, ಹಾಗೂ ಗುರು ಹಿರಿಯರಿಗೆ ತಂದೆ ತಾಯಿಗೆ ಗೌರವ ನೀಡುವುದು ರೂಢಿಸಿಕೊಳ್ಳಬೇಕು ಎಂದರು. ಎಸ್‌ಎಸ್ ಪದವಿ ಪೂರ್ವ ಕಾಲೇಜು ನಿರಂತರವಾಗಿ ಉತ್ತಮ ಫಲಿತಾಂಶ ನೀಡುತ್ತಾ ಸುತ್ತಮುತ್ತಲಿನ ವಿದ್ಯಾರ್ಥಿಗಳ ಮತ್ತು ಪೋಷಕರ ವಿಶ್ವಾಸವನ್ನು ಗಳಿಸಿದೆ ಎಂದರು. ಸAಸ್ಥೆಯ ಕಾರ್ಯದರ್ಶಿ ಯಮುನ.ಎ.ಆರ್. ಮಾತನಾಡಿ ಕಾಲೇಜಿನಲ್ಲಿ ಕಲಿತ ಜ್ಞಾನವನ್ನು ರಚನಾತ್ಮಕ ಉದ್ದೇಶಗಳಿಗಾಗಿ ಮತ್ತು ಮತ್ತೊಬ್ಬರ ಕಲ್ಯಾಣಕ್ಕಾಗಿ ಬಳಸಬೇಕು ಹಾಗೂ ಯಾರಿಗೂ ತೊಂದರೆ ಮಾಡುವಂತಹ ಜ್ಞಾನವನ್ನು ಪಡೆಯಬಾರದು. ವಿದ್ಯೆಯು ಎಂದಿಗೂ ತನ್ನ ಅನುಕೂಲದ ಜೊತೆಗೆ ದೇಶದ ಅಭ್ಯುದಯಕ್ಕೆ ಬಳಕೆಯಾಗಬೇಕು ನಮ್ಮ ಶಿಕ್ಷಣವು ತನ್ನ ಮತ್ತು ಇಡೀ ಮಾನವಕುಲದ ಕಲ್ಯಾಣಕ್ಕಾಗಿ ಸದುಪಯೋಗಪಡಿಸಿಕೊಳ್ಳುವ ವ್ಯಕ್ತಿಗಳಾಗಬೇಕು. ಕಾರ್ಯಕ್ರಮದಲ್ಲಿ ಕಾಲೇಜಿನ ಶೈಕ್ಷಣಿಕ ಮುಖ್ಯಸ್ಥ ಡಾ.ಎ.ಎಂ.ಶಿವಣ್ಣ, ಆಡಳಿತ ಮಂಡಳಿ ಸದಸ್ಯ ಎ.ಬಿ.ರಾಜಶೇಖರ್, ಪ್ರಾಂಶುಪಾಲೆ ವೀಣಾ.ಡಿ. ಭಾಗವಹಿಸಿದ್ದರು. ಪೋಟೋ : ನಗರದ ಎಸ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ೨೦೨೪-೨೫ ನೇ ಸಾಲಿನ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಬಹುಮಾನ ವಿತರಣಾ ಕಾರ್ಯಕ್ರಮ. ನಗರದ ಎಸ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ೨೦೨೪-೨೫ ನೇ ಸಾಲಿನ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್, ಉದ್ಘಾಟಿಸಿದರು.
ತುಮಕೂರು ಜಿಲ್ಲೆ ತಿಪಟೂರು ತಾಲ್ಲೋಕಿನ ನೊಣವಿನಕೆರೆ ಹಾಗೂ ಬಿಳಿಗೆರೆ ಗ್ರಾಮಪಂಚಾಯ್ತಿ ವ್ಯಕ್ತಿಯ ಕಿಬ್ಬನಹಳ್ಳಿ ಗ್ರಾಮದಲ್ಲಿ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ಜನ ಸಂಪರ್ಕ ಸಭೆ ನಡೆಸಿದರು.
ನೊಣವಿನಕೆರೆ ಗ್ರಾಮದ ಗ್ರಾಮಪಂಚಾಯ್ತಿ ಬಯಲು ರಂಗಮಂದಿರದ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು,ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿ.ಸೋಮಣ್ಣ ನಾನು ಸಾಮಾನ್ಯ ಹಳ್ಳಿಯಲ್ಲಿ ಹುಟ್ಟಿದ ರೈತರ ಮಗ, ಗ್ರಾಮೀಣ ಜನರ ಕಷ್ಟ ಸುಖಗಳ ಅರಿವು, ನನಗೆ ಇದೆ, ಜನರ ಕಷ್ಟಗಳನ್ನ ಹತ್ತಿರದಿಂದ ಅರಿತ್ತಿದ್ದೇನೆ,ಪಕ್ಷದ ವರಿಷ್ಠರು ನೀಡಿದ ಜವಾಬ್ದಾರಿಯಂತೆ ಕಡಿಮೆ ಅವಧಿಯಲ್ಲಿ ತುಮಕೂರು ಲೋಕಸಭಾ ಅಭ್ಯಾರ್ಥಿಯಾಗಿ ಸ್ವರ್ಥಿಸಿದೆ,.ನನ್ನ ಮೇಲೆ ಹಾಗೂ ನಮ್ಮ ಪಕ್ಷ ಹಾಗೂ ದೇಶಕಂಡ ಪ್ರಾಮಾಣಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ. ಮೇಲೆ ಬರವಸೆ ಇಟ್ಟು ತುಮಕೂರು ಕ್ಷೇತ್ರದ ಜನ ಚುನಾಯಿಸಿ ಕಳಿಸಿದ್ದೀರಿ. ನಿಮ್ಮ ಋಣ ನನ್ನ ಮೇಲೆದೆ,ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಬ್ಬಂದು, ಕೆಲಸಕ್ಕು ಗಮನಹರಿಸುತ್ತೇನೆ, ನೀವು ನೀಡಿರುವ ಜವಾಬ್ದಾರಿಯನ್ನ ಪ್ರಾಮಾಣಿಕವಾಗಿ ನಿಬಾಯಿಸಿ, ನಿಮ್ಮ ಋಣ ತೀರಿಸುತ್ತೇನೆ.ನೀವು ಕೊಟ್ಟ ಜವಾಬ್ದಾರಿಯಿಂದ ತಿಪಟೂರು ಜನರ ಬಹುದಿನಗಳ ಬೇಡಿಕೆಯಾದ ಜನಶತಾಬ್ದಿ ಎಕ್ಸ್ ಪ್ರೆಸ್ ನಿಲುಗಡೆಮಾಡಲಾಗಿದೆ.ಅರಳಗುಪ್ಪೆಯಲ್ಲಿ ಚಿಕ್ಕಮಂಗಳೂರು ಎಕ್ಸ್‌ಪ್ರೆಸ್ ನಿಲುಗಡೆ ಮಾಡಲಾಗುತ್ತಿದೆ, ನಿಧಾನಗತಿಯಲ್ಲಿ ಸಾಗುತ್ತಿದ್ದ,ರಾಷ್ಟ್ರೀಯ ಹೆದ್ದಾರಿ 206 ಕಾಮಗಾರಿ ವೇಗದಲ್ಲಿ ನಡೆಯುತ್ತಿದ್ದು,ಶೀಘ್ರವಾಗಿ ಲೋಕಾರ್ಪಣೆಗೊಳ್ಳಲಿದೆ ಎಂದ ಅವರು ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಬೇಕು,ನೀವು ಜನರ ಸೇವಕರು ಎನ್ನುವುದನ್ನ ಮರೆಯಬಾರದು,ಗ್ರಾಮಪಂಚಾಯ್ತಿ ಅಧಿಕಾರಿಗಳು ಜನರಿಗೆ ಸೂಕ್ತವಾಗಿ ಸ್ಪಂದಿಸಿ, ಕಾನೂನು ವ್ಯಾಪ್ತಿಯಲ್ಲಿರುವ ಸಮಸ್ಯೆಗಳನ್ನ ಪರಿಹಾರಮಾಡಿದರೆ ಎಷ್ಟೋ ಜನ ಬಡವರಿಗೆ ಸಹಾಯ ಮಾಡಿದಂತ್ತಾಗುತ್ತದೆ,ನಮ್ಮ ಬಳಿಗೆ ದೂರುಬರದಂತೆ ಕೆಲಸ ಮಾಡಿ.ಜನರ ಕಷ್ಟಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯವಹಿಸಿದ ದೂರುಗಳುಬಂದರೆ ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲ ಎಂದು ತಿಳಿಸಿದರು
ಸಭೆಯಲ್ಲಿ ತಿಪಟೂರು ತಹಸೀಲ್ದಾರ್ ಪವನ್ ಕುಮಾರ್.ಇಒ ಸುದರ್ಶನ್.ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದರು ನೊಣವಿನಕೆರೆ ಹೋಬಳಿ ವ್ಯಾಪ್ತಿಯ ನೊಣವಿನಕೆರೆ, ಗುಂಗರಮಳೆ,ಬಜಗೂರು,ಮಸಣಘಟ್ಟ,ಹುಣಸೇಘಟ್ಟ,ನಾಗರಘಟ್ಟ,ನೆಲ್ಲೀಕೆರೆ ಗ್ರಾಮಪಂಚಾಯ್ತಿಗಳಿಂದ ಸುಮಾರು 67 ಅರ್ಜಿಗಳನ್ನ ಸಾರ್ವಜನಿಕರು ಸಚಿವರಿಗೆ ಸಲ್ಲಿಸಿದರು. ಕಿಬ್ಬನಹಳ್ಳಿ ಹೋಬಳಿ ವ್ಯಾಪ್ತಿಯಬಿಳಿಗೆರೆ,ಹಿಂಡಿಸ್ಕೆರೆ,ಕರಡಿ,ಕುಪ್ಪಾಳು, ಅರಳಗುಪ್ಪೆ ಗ್ರಾಮಪಂಚಾಯ್ತಿಗಳಿಂದ ಸುಮಾರು 40ಕ್ಕೂ ಹೆಚ್ಚು ಅರ್ಜಿಗಳನ್ನ ಸಚಿವರಿಗೆ ಸಲ್ಲಿಸಿದರು
ತಿಪಟೂರಿನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ ) ಮಹಿಳಾ ಘಟಕ ಹಾಗೂ ದಲಿತಪರ ಸಂಘಟನೆಗಳಿಂದ ಅಕ್ಷರ ಮಾತೆ ಸಾವಿತ್ರಿ ಬಾ ಪುಲೆಯವರ ಜನ್ಮಜಯಂತಿ ಆಚರಿಸಲಾಯಿತು, ಸಾವಿತ್ರಿ ಬಾ ಪುಲೆ ಜನ್ಮ ಜಯಂತಿ ಅಂಗವಾಗಿ ತಿಪಟೂರು ನಗರ ಠಾಣೆಗೆ ತೆರಳಿದ ದಲಿತಪರ ಸಂಘಟನೆಗಳ ಮುಖಂಡರು ನಗರಠಾಣೆ ವೃತ್ತ ನಿರೀಕ್ಷಕರಾದ ವೆಂಕಟೇಶ್ ಹಾಗೂ ಸಬ್ ಇನ್ಪೆಕ್ಟರ್ ಕೃಷ್ಣಪ್ಪ ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿಯನ್ನ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಗರಠಾಣೆ ವೃತ್ತನಿರೀಕ್ಷಕ ವೆಂಕಟೇಶ್, ಭಾರತದ ಮೊದಲ ಶಿಕ್ಷಕಿ ಸಾವಿತ್ರಿ ಬಾ ಪುಲೆಯವರು ಮಹಿಳೆಯರು ಶಿಕ್ಷಣಪಡೆಯಲು ಅರ್ಹರಲ್ಲ ಎನ್ನುವ ಕಾಲಘಟ್ಟದಲ್ಲಿ ದಿಟ್ಟತನದಿಂದ ಶಿಕ್ಷಣ ಕಲಿತ ಪುಲೆ ಯವರು, ಹೆಣ್ಣು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ದೇಶದಲ್ಲಿ ಅಕ್ಷರ ಜ್ಯೋತಿಯನ್ನ ಹಂಚಿದರು,ಅವರ ನಿರಂತರ ಹೋರಾಟದ ಪರಿಣಾಮ ಇಂದು ಮಹಿಳೆಯರು ಶಿಕ್ಷಣ ಪಡೆಯುವಂತ್ತಾಗಿದೆ ಎಂದು ತಿಳಿಸಿದರು
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಹರೀಶ್ ಗೌಡ ಮಾತನಾಡಿ ಮಾತೆ ಸಾವಿತ್ರಿ ಬಾ ಪುಲೆ ಭಾರತ ಅಕ್ಷರ ಮಾತೆ ಮನುವಾದದ ಕಟ್ಟುಪಾಡುಗಳನ್ನ ಮೆಟ್ಟಿನಿಂತು ಶಿಕ್ಷಣ ಪಡೆದರು, ಮಹಿಳೆಯರಿಗೂ ಶಿಕ್ಷಣ ಪಡೆಯುವ ಶಕ್ತಿಯಿದೆ ಎಂದು ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ಬೋದಿಸಿದರು, ಜಾತಿವಾದಿಗಳು,ಎಷ್ಟೆ ಕಿರುಕುಳ ನೀಡಿದರು ಮೆಟ್ಟಿನಿಂತರು, ಶಾಲೆಗೆ ತೆರಳುವಾಗ, ಸಗಣಿ ನೀರು ಹಾಕಿದರು ಎದೆಗುಂದದೆ, ಶಿಕ್ಷಣ ನೀಡಿದ ಮಹಾಮತೆ ಸಾವಿತ್ರಿ ಬಾ ಪುಲೆ ರವರು ಎಂದು ತಿಳಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಹಿಳಾ ಘಟಕದ ಜಿಲ್ಲಾ ಸಂಘಟನಾ ಸಂಚಾಲಕಿ ನಂದಿನಿ ಮಾತನಾಡಿ ಸಾವಿತ್ರ ಬಾ ಪುಲೆ ರವರು ಭಾರತದ ಮೊದಲ ಶಿಕ್ಷಕಿ,ಒಬ್ಬಗಂಡಿನ ಸಾಧನೆಗೆ ಹೆಣ್ಣಿನ ಬೆಂಬಲ ಎಷ್ಟು ಮುಖ್ಯವೂ ಹೆಣ್ಣಿನ ಸಾಧನೆಗೆ ಗಂಡನ ಪ್ರೋತ್ಸಹವೂ ಅಷ್ಟೆ ಮುಖ್ಯ ಎಂಬುದಕ್ಕೆ ಪುಲೆ ದಂಪತಿಗಳೆ ಸಾಕ್ಷಿ,ಮನುವಾದದ ಕಂದಾಚಾರಗಳೆ ತುಂಬಿದ ಸಮಾಜದಲ್ಲಿ ,ದಿಟ್ಟತನದಿಂದ ಶಿಕ್ಷಣಪಡೆದು ಶಾಲೆಗಳನ್ನ ಆರಂಭಿಸಿ ದೇಶದಲ್ಲಿ ಅಕ್ಷರಜ್ಯೋತಿ ಹಚ್ಚಿದ ದಂಪತಿಗಳು, ಸರ್ವಕಾಲಕ್ಕೂ ಅವಿಸ್ಮರಣೀಯರು,ದೇಶದ ಪ್ರತಿಯೊಬ್ಬರು ಸಾವಿತ್ರಿ ಬಾ ಪುಲೆ ಹಾಗೂ ಜ್ಯೋತಿ ಬಾ ಪುಲೆ ರವರ ಆದರ್ಶಗಳನ್ನ ಮೈಗೂಡಿಸಿಕೊಳ್ಳ ಬೇಕು ಎಂದು ತಿಳಿಸಿದರು ಸಾವಿತ್ರಿ ಬಾ ಪುಲೆ ಜಯಂತಿ ಅಂಗವಾಗಿ ದಲಿತಪರ ಸಂಘಟನೆಗಳ ಮುಖಂಡರು ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ ಯವರನ್ನ ಸನ್ಮಾನಿಸಿದರು ಕಾರ್ಯಕ್ತಮದಲ್ಲಿ ಡಾ//ಬಿ.ಆರ್ ಅಂಬೇಡ್ಕರ್ ಸ್ವಾಭಿಮಾನಿ ಸಮಿತಿ ಅಧ್ಯಕ್ಷ ಮತ್ತಿಘಟ್ಟ ಶಿವಕುಮಾರ್. ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಿಪಟೂರು ಸಂಚಾಲಕ ಮೋಹನ್ ಜಕ್ಕನಹಳ್ಳಿ, ಕೊರಚ ಮಹಾಸಭಾ ಅಧ್ಯಕ್ಷ ಸತೀಶ್, ತಿಪಟೂರು ಡಿಎಸ್ಎಸ್ ಮಹಿಳಾ ಘಟಕದ ಮುಖಂಡರಾದ ಕವಿತಾ . ಭಾಗ್ಯ, ಮುಂತ್ತಾದವರು ಉಪಸ್ಥಿತರಿದರು
ತಿಪಟೂರು ನಗರದ ಹಾಸನ ರಸ್ತೆ ಶಿಲ್ಪ ಬಾರ್ ಸಮೀಪ ಟಿವಿಸ್ ಎಕ್ಸ್ ಎಲ್ ಗೆ ಬೊಲೇರೋ ಟೆಂಪೋ ಡಿಕ್ಕಿ ಹೊಡೆದು ಟಿವಿಎಸ್ ಸವಾರ ಸ್ಥಳದಲ್ಲೆ ಸಾವನ್ನಪಿರುವ ಘಟನೆ ನಡೆದಿದೆ.
ಅರಸೀಕೆರೆ ತಾಲ್ಲೋಕು ಯಡವನಹಳ್ಳಿ ವಾಸಿ 54 ವರ್ಷದ ಕಾಂತರಾಜು ಮೃತ ದುರ್ದೈವಿ
ಯಡವನಹಳ್ಳಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಕಾಂತರಾಜು ಕೆಲಸಕ್ಕೆಂದು ತಿಪಟೂರಿಗೆ ಬಂದಿದರು ಎನ್ನಲಾಗಿದ್ದು, ಕೆಲಸಮುಗಿಸಿ ಮನೆಗೆ ತೆರಳುವಾಗ ಹಿಂಬದಿಯಿಂದ ಬಂದ ಕುರಿತುಂಬಿದ ಬೋಲೆರೋ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಕಾಂತರಾಜು ಸ್ಥಳದಲ್ಲೇ ಸಾವನ್ನಪ್ಪಿದರೆ
ಸ್ಥಳಕ್ಕೆ ತಿಪಟೂರು ಉಪವಿಭಾಗ ಪೊಲೀಸ್ ಅಧೀಕ್ಷಕರಾದ ವಿನಾಯಕ ಎಸ್ ಶೆಟ್ಟಿಗೆರಿ, ನಗರವೃತ್ತ ನಿರೀಕ್ಷಕ ವೆಂಕಟೇಶ್,ಸಬ್ ಇನ್ಪೆಕ್ಟರ್ ಕೃಷ್ಣಪ್ಪ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದು,ನಗರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ತುಮಕೂರು ಜಿಲ್ಲೆ ತುರುವೇಕೆರೆ ನಗರದ ಡಾ//ಬಿ.ಆರ್ ಅಂಬೇಡ್ಕರ್ ಭವನದ ಮುಂಭಾಗ ಭೀಮಾಕೋರೆಗಾವ್ ವಿಜಯ ಸ್ಮಾರಕದ ಪ್ರತಿಕೃತಿ ರಚಿಸಿದ ದಲಿತ ಸಂಘಟನೆಗಳ ಮುಖಂಡರು ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಅಂಬೇಡ್ಕರ್ ಹಾಗೂ ಭೀಮಾಕೋರೆಗಾವ್ ವಿಜಯಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೊಹರ್ ಸೈನಿಕರಿಗೆ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ವಾದ ತಾಲೂಕು ಸಂಚಾಲಕ ಕೃಷ್ಣ ಮಾದರ್, ಮಾತನಾಡಿ ಭೀಮಾಕೋರೆಗಾವ್ ಭಾರತದಲ್ಲಿ ದಲಿತರು ಶೋಷಿತರು ಆತ್ಮಾಭಿಮಾನದ ಯುದ್ದ, ಸಾವಿರಾರು ವರ್ಷಗಳ ಅಸ್ಪೃಷ್ಯತೆಯ ಜ್ವಾಲೆಯ ಪ್ರತಿಕಾರವಾಗಿ ಹೊರಹೊಮ್ಮಿದ ಮಹರ್ ಸೈನಿಕರು, ತಮಗೆ ಆಗುತ್ತಿರುವ ಅನ್ಯಾಯದ ವಿರುದ್ದಿ ಹೋರಾಡಿ ಮನುವಾದಿಗಳಿಗೆ ದಿಟ್ಟ ಉತ್ತರ ನೀಡಿದ್ದಾರೆ, ಅವರ ಜೀವದಾನದ ಫಲ ಇಂದು ಕೋಟ್ಯಾನು ಕೋಟಿ ದಲಿತ ಬಂಧುಗಳಿಗೆ ಸಾಮಾಜಿಕ ನ್ಯಾಯಕ್ಕೆ ಮುನ್ನಡಿ ನೀಡಿದೆ ಎಂದು ತಿಳಿಸಿದರು. ಚಲವಾದಿ ಮಹಾಸಭಾ ಅಧ್ಯಕ್ಷ ಕುಣಿಕೇನಹಳ್ಳಿ ಜಗದೀಶ್ ಮಾತನಾಡಿ ಭೀಮಾಕೋರೆಗಾವ್ ಯುದ್ದ ಸ್ಮಾರಕ ದಲಿತರ ಸ್ವಾಭಿಮಾನದ ಸಂಕೇತ ಸಾವಿರಾರು ವರ್ಷಗಳಿಂದ ಅಟ್ಟಹಾಸ ಮೆರಯುತ್ತಿದ ಮನುವಾದಿ ಪೇಶ್ವೆಗಳ ದುಷ್ಟತನದ ವಿರುದ್ದ ಮಹರ್ ಸೈನಿಕರು ಆತ್ಮಾಭಿಮಾನದಿಂದ ಹೋರಾಟ ಮಾಡಿ ಜಯಗಳಿಸಿದ ವಿಜಯದಿನ ಡಾ//ಬಿ.ಆರ್ ಅಂಬೇಡ್ಕರ್ ರವರಿಗೆ ಸ್ಪುರ್ತಿಯ ಸ್ಥಳವಾಗಿತ್ತು, ಪ್ರತಿವರ್ಷ ಜನವರಿ ಒಂದನೇ ತಾರೀಕು ,ಬಾಬಾ ಸಾಹೇಬರ್ ಭೀಮಾಕೋರೆಗಾವ್ ಗೆ ಭೇಟಿನೀಡಿ ನಮನ ಸಲ್ಲಿಸುತ್ತಿದರು. ಸರ್ಕಾರ ಪ್ರತಿ ವರ್ಷ ವಿಜಯೋತ್ಸವ ಆಚರಿಸಬೇಕು, ಹಾಗೂ ಪಠ್ಯಪುಸ್ತಕಗಳಲ್ಲಿ ಭೀಮಾಕೋರೆಗಾವ್ ಇತಿಹಾಸ ಅಳವಡಿಸಬೇಕು ಎಂದು ತಿಳಿಸಿದರು
ಸಮಾಜ ಸೇವಕ ರಾಘು ಮಾತನಾಡಿ , ಭೀಮಾ ಕೋರೇಗಾoವ್ ಒಂದು ನೆನಪು ಬಾಬಾ ಸಾಹೇಬರು ಪ್ರತಿಬಾರಿ ಭೇಟಿ ನೀಡುತ್ತಿದ್ದ ಸ್ಥಳಗಳ ಪೈಕಿ ಕೋರೇಗಾoವ್ ಕೂಡಾ ಒಂದು.ದಾಸ್ಯದ ವಿರುದ್ಧ ಹಾಗೂ ಮನುವಾದಿಗಳ ಅಮಾನವೀಯ ಶೋಷಣೆಯ ವಿರುದ್ಧ ಮೊಟ್ಟ ಮೊದಲ ಬಾರಿಗೆ ಸ್ಪೋಟಗೊಂಡ ಈ ಹೋರಾಟವು ಭಾರತದ ಪಾಲಿಗೆ ಮೊದಲನೇ ಸಾಮಾಜಿಕ ಸ್ವಾತಂತ್ರ್ಯ ಸಂಗ್ರಾಮವೆಂದೇ ಹೆಸರಾಗಿದೆ ಎಂದರು,
ನಿವೃತ್ತ ಶಿಕ್ಷಕ ನೀರಗುಂದ ಮಹೇಶ್ ಮಾತನಾಡಿ ಇತಿಹಾಸದಲ್ಲಿ ಮುಚ್ಚಿಹೋದ ಸಾಹಸದ ಘಟನೆ 28,000 ಸೈನಿಕರನ್ನು ಕೇವಲ ಐದುನೂರು ಜನ ಸೈನಿಕರು ಸೋಲಿಸಿದ ಕದನ .ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ ಅಸ್ಪೃಶ್ಯತೆ ಮೇಲು ಕೀಳುಗಳ ವಿರುದ್ಧ ಸೆಟೆದು ನಿಂತು ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸಿದ,ಮಹರ್ ಸೈನಿಕರ ಧೈರ್ಯ, ಸಾಹಸ, ಕೆಚ್ಚೆದೆಯ ಹೋರಾಟದಿಂದ ಗೆಲುವನ್ನು ಸಾಧಿಸಲಾಯಿತು ಈ ಯುದ್ಧ ಭೀಮಾತೀರದಲ್ಲಿ ನಡೆದಿದ್ದರಿಂದ ಇತಿಹಾಸದಲ್ಲಿ ಭೀಮ ಕೋರೆಗಾoವ್ ಯುದ್ಧವೆಂದೆ ಪ್ರಸಿದ್ಧವಾಗಿತ್ತು ಎಂದು ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಸೋಮೇನಹಳ್ಳಿ ಜಗದೀಶ್, ಸೋಮಣ್ಣ ಮಾರಪ್ಪನಹಳ್ಳಿ , ಅನ್ನಪೂರ್ಣಮ್ಮ ಜಗದೀಶ್ ಡಿಎಸ್ಎಸ್ ಮಹಿಳಾ ಸಂಘಟನೆಯ ಸಂಚಾಲಕರು, ಸಮಾಜ ಸೇವಕರು ಜಗದೀಶ್ ಸೋಮನಹಳ್ಳಿ, ಮಹಾದೇವಯ್ಯ ಬೀಚನಹಳ್ಳಿ ಶಿವಣ್ಣ, ಟೌನ್ ಬ್ಯಾಂಕ್ ನಿರ್ದೇಶಕರು , ಸೋಮಶೇಖರಯ್ಯ ಬಾಳೆಕಾಯಿ ಪುಟ್ಟರಾಜು ಬಿಗ್ಗೆನಹಳ್ಳಿ, ಕುಮಾರ್ ಕಡಬ, ರಾಮಚಂದ್ರಯ್ಯ, ವಿಜಯ್ ಕುಮಾರ್ ರೈತ ಸಂಘಟನೆ, ಶೇಖರ್ ಅರಳಿಕೆರೆ,ರಾಯಣ್ಣತುರುವೇಕೆರೆ, ನರಸಿಂಹಯ್ಯ,ತಿಮ್ಮಯ್ಯ, ಶಿವಶೇಖರ್,ಪ್ರಸನ್ನಕುಮಾರ್, ಲೋಕೇಶ್(ರಂಗನಾಥ ಪುರ) ಲೋಕೇಶ್(ಅಜ್ಜನಹಳ್ಳಿ) ಲೋಕೇಶ್(ಗೋವಿಂದಘಟ್ಟ) ಆಕಾಶ್, ಶಶಿಧರ್, ಸತೀಶ್ ಕಾರ್ಮಿಕ ಮುಖಂಡರು ಮಾರುತಿ ತುರುವೇಕೆರೆ, ಕೇಶವ ಕೋಲಘಟ್ಟ , ಪುಟ್ಟರಾಜು,ದೇವರಾಜು, ಸಾವಿತ್ರಮ್ಮ,ನಂದಿನಿ, ಇನ್ನು ಅನೇಕ ದಲಿತ ಪರ ರೈತಪರ ಮುಖಂಡರುಗಳು ಉಪಸ್ಥಿತರಿದ್ದರು,
ತಿಪಟೂರುನಗರದ ಶ್ರೀ ಶಾರದ ಗ್ರಾಫಿಕ್ಸ್ ನ ಸಂಘದ ಕಾರ್ಯಲಯದ ಆವರಣದಲ್ಲಿ ಬಯಲು ಸೀಮೆ ಸಾಮಾಜಿಕ ಸಾಂಸ್ಕೃತಿಕ ಸಂಘದ 24 ನೇ ವರ್ಷದ ಸಂಸ್ಥಾಪನಾ ದಿನವನ್ನ ಅದ್ದೂರಿಯಾಗಿ ಆಚರಿಸಲಾಯಿತು ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾತನಾಡಿ ಸಂಘ ಸಂಸ್ಥೆಗಳು ಸಮಾಜದ ಕಷ್ಟ ಸುಖಗಳನ್ನ ಆಡಳಿತ ವರ್ಗದೊಂದಿಗೆ ಬೆಸೆಯುವ ಕೊಂಡಿಯಾಗಿ ಕೆಲಸವಮಾಡಬೇಕು, ಸಮಾಜದ ಬೆಳವಣಿಗೆಗೆ ಅಗತ್ಯವಾದ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನ, ಹಮ್ಮಿಕೊಳ್ಳುವ ಮೂಲಕ, ಉತ್ತಮ ಕೆಲಸ ಮಾಡುವುದು ಅತಿಮುಖ್ಯ, ಮೊಬೈಲ್ ಮೋಹಕ್ಕೆ ಬಿದ್ದ ಯುವ ಪೀಳಿಗೆ ಸಾಮಾಜಿಕ ವ್ಯವಸ್ಥೆಯಿಂದ ದೂರ ಉಳಿದಿರುವ ಕಾಲದಲ್ಲಿ ಬಯಲು ಸೀಮೆ ಸಾಮಾಜಿಕ ಸಾಂಸ್ಕೃತಿಕ ಸಂಘ ಸಮಾಜಕ್ಕೆ,ಹಾಗೂ ಯುವ ಪೀಳಿಗೆಗೆ ಅಗತ್ಯವಿರುವ ಕೆಲಸಗಳನ್ನ ಮಾಡುತ್ತಿದೆ, ಮಕ್ಕಳಲ್ಲಿ ಸಾಹಿತ್ಯದ ಜಾಗೃತಿ, ಭಾವಗೀತೆ, ಜಾನಪದ ಗೀತೆ ಕಲಿಕೆ ಹಾಗೂ ಗಾಯನದಂತ ಕಾರ್ಯಕ್ರಮಗಳ ನಡೆಸುತ್ತಿದೆ,ಸಾಹಿತಿಗಳು ಕವಿಗಳು ಹಾಗೂ ಸಮಾಜದ ಸಾಧಕರನ್ನ ಕಾರ್ಯಕ್ರಮಗಳಿಗೆ ಆಹ್ವಾನಿಸಿ, ಅವರಿಂದ ಸ್ಪೂರ್ತಿದಾಯಕ, ಸಂದೇಶವನ್ನ ಯುವಪೀಳಿಗೆಗೆ ನೀಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ,ನಮ್ಮಲ್ಲಿ ಹಲವಾರು ಸಂಘ ಸಂಸ್ಥೆಗಳು ಹುಟ್ಟುತ್ತವೆ ಆದರೇ ದೀರ್ಘಕಾಲದವರೆಗೆ ಸಮಾಜಿ ಮುಖಿಯಾಗಿ ಕೆಲಸ ಮಾಡಲು, ಸಾಧ್ಯವಾಗದೇ,ಅಸ್ಥಿತ್ವಕಳೆದುಕೊಳ್ಳುತ್ತಿವೆ, ಇಂತಹ ಬೆಳವಣಿಗೆಗಳ ನಡುವೆ ನಮ್ಮ ತಾಲ್ಲೋಕಿನಲ್ಲಿ ಬಯಲು ಸೀಮೆ ಸಾಮಾಜಿಕ ಸಾಂಸ್ಕೃತಿಕ ಸಂಘ 24 ವರ್ಷಗಳಿಂದ ನಿರಂತರ ಸಮಾಜಮುಖಿ ಕಾರ್ಯಗಳೊಂದಿಗೆ ಸಾಗುತ್ತಿರುವುದು ಉತ್ತಮ ಬೆಳವಣಿಗೆ, ಸಂಘ ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಲಿಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಾತಿಥಿಗಳಾಗಿ ಭಾಗವಹಿಸಿದ ತಹಸೀಲ್ದಾರ್ ಪವನ್ ಕುಮಾರ್ ಮಾತನಾಡಿ ತಿಪಟೂರು ತಾಲ್ಲೋಕಿನಲ್ಲಿ ಹಲವಾರು ಸಂಸ್ಕೃತಿಕ ಚಟುವಟಿಕೆಗಳ ನಿರಂತರವಾಗಿ ನಡೆಯುತ್ತಿರುವೆ, ಆದರಿಂದಲ್ಲೆ ಉತ್ತಮ ಶಿಕ್ಷಣ ನೆಲಗಟ್ಟನು ಹೊಂದಿದೆ, ಸಂಸ್ಕೃತಿ ಸಂಸ್ಕಾರ ಬೆಳವಣಿಗೆಗೆ ಸಂಘ ಸಂಸ್ಥೆಗಳ ಪಾತ್ರ ಮುಖ್ಯ, ಕನ್ನಡ ಕಲಿಕೆಯಲ್ಲಿ ಮಕ್ಕಳು ಹಿಂದುಳಿಯುತ್ತಿರು ಸಮಯದಲ್ಲಿ ನಮ್ಮ ಭಾಷೆ ಉಳಿಯಬೇಕು. ನಮ್ಮ ಭಾಷೆಯ ವ್ಯಾಕರಣ ಜ್ಞಾನ ಮಕ್ಕಳಿಗೆ ದೊರೆಯಬೇಕು ಎಂದು, ಸರ್ಕಾರಿ ಶಾಲೆ ಮಕ್ಕಳಿಗೆ ವ್ಯಾಕರಣ ಪುಸ್ತಕ ವಿತರಣೆ ಮಾಡುತ್ತಿರುದು ಉತ್ತಮ ಕೆಲಸ, ಹಲವಾರು ಸಂಸ್ಕೃತಿ ಸಾಹಿತಿಕ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವ ಸಂಘ ಉತ್ತಮ ದಾರಿಯಲ್ಲಿ ನಡೆಯಲಿ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಮುಖ್ಯಾತಿಥಿಗಳಾಗಿ ಭಾಗವಹಿಸಿ ತಾಲ್ಲೋಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್ ಮಾತನಾಡಿ ಸಂಸ್ಕೃತಿಕ ವಾಗಿ ಕೆಲಸ ನಿರ್ವಹಿಸುವ ಜೊತೆಗೆ ಸಾಮಾಜಿಕವಾಗಿಯೋ ತೊಡಗಿಸಿಕೊಂಡಿರುವ ಸಂಘ ಕೋವಿಡ್ ಸಮಯದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡುವ ಮೂಲಕ ಮಾನವೀಯ ಸೇವೆ ಮಾಡಿದೆ ಎಂದರು
ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ ಮಾತನಾಡಿ ಸಮಾಜದಲ್ಲಿ ಸಂಘ ಸಂಸ್ಥೆಗಳು ಹಲವು ಕಾರಣಗಳಿಂದ ಹುಟ್ಟಿಕೊಳ್ಳುತ್ತವೆ.ಕೆಲವು ಸಂಘಗಳುಹಾಗೇಯೆ ಕಣ್ಮರೆಯಾಗುತ್ತವೆ,ತಿಪಟೂರು ಕಲೆ ಸಾಹಿತ್ಯ ಸಂಸ್ಕೃತಿಗೆ ಮೊದಲಿಂದಲ್ಲೂ ಮನ್ನಣೆ ನೀಡುತ್ತಿರುವ ನಾಡು, ಅದೇ ದಾರಿಯಲ್ಲಿ ಬಯಲು ಸೀಮೆ ಸಂಘತನ್ನ 24 ವರ್ಷಗಳ ಸುಧೀರ್ಘ ಸಮಾಜಮುಖಿ ಕಾರ್ಯಶ್ಲಾಘನೀಯ ಎಂದು ತಿಳಿಸಿದರು
ಎಸ್ ವಿಪಿ ಕಾಲೇಜು ಪ್ರಚಾರ್ಯ ರೇಣುಕಯ್ಯ ಮಾತನಾಡಿ ನಮ್ಮ ಸಂಘ ಯಾವುದೇ ನಾಯಕತ್ವದ ಲಾಲಸೆ ಇಲ್ಲದೆ, ಸಮಾಜಸೇವೆಯ ಗುರಿಯೊಂದಿಗೆ ಮುನ್ನಡೆಯುತ್ತಿದ್ದು, ಸಮಾಜ ಮನಸ್ಕರು ಸಮಾನ ಚಿಂತನೆಉಳ್ಳವರು, ಸಾರ್ವಜನಿಕರ ಸಹಕಾರದಿಂದ ಸಂಘ ನಡೆಯುತ್ತಿದೆ ಎಂದು ತಿಳಿಸಿದರು
ತಿಪಟೂರು ಸಹಾಯಕ ಸರ್ಕಾರಿ ಅಭಿಯೋಜಕ ವಸಂತಕುಮಾರ್ ಮಾತನಾಡಿ ಕಲೆ ಸಾಹಿತಿ ಸಂಸ್ಕೃತಿಗಳು ದೇಶದ ಶ್ರೀಮಂತಿಕೆಯ ಪ್ರತೀಕವಾಗಿ, ನಾವೂ ಎಷ್ಟೆ ಆರ್ಥಿಕವಾಗಿ ಶ್ರೀಮಂತರಾದರು ಸಾಂಸ್ಕೃತಿಕ ನೆಲೆಗಟ್ಟಿನ ಬದುಕು ಅತಿಮುಖ್ಯ, ಈ ನಿಟ್ಟಿನಲ್ಲಿ ಬಯಲು ಸೀಮೆ ಸಂಘ ಕಾರ್ಯೋನ್ಮುಖವಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದರು
ಕಾರ್ಯಕ್ರಮದಲ್ಲಿಮುಖ್ಯಾತಿಥಿಗಳಾಗಿ ಗ್ರೇಡ್ 2 ತಹಸೀಲ್ದಾರ್ ಜಗನ್ನಾಥ್,ಅಧ್ಯಕ್ಷರಾದ ನಾಗರಾಜು ಸಂಸ್ಥಾಪಕರಾದ ಎನ್ ಬಾನುಪ್ರಶಾಂತ್. ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಕರೀಕೆರೆ,ಕವಿ ಸತ್ಯನಾರಾಯಣ್ ಶ್ರೇಷ್ಠಿ,ಮುಂತ್ತಾದವರು ಉಪಸ್ಥಿತರಿದರು
ತಿಪಟೂರು ನಗರದ ಮಂಜುಳಮ್ಮ ಗಾರ್ಡ್ ನಲ್ಲಿ ನಡೆದ ಸರಗಳ್ಳತನ ಪ್ರಕರಣ ಬೇದಿಸಿದ ಪೊಲೀಸರ ತಂಡ, ಮಹಾರಾಷ್ಟ್ರದ ಪೂನಾ ಇರಾನಿ ಗ್ಯಾಂಗ್ ಗೆ ಹೆಡೆಮುರಿಕಟ್ಟಿದ್ದಾರೆ
ದಿನಾಂಕ 17-10-2024 ರಂದು ಸಂಜೆ ತಿಪಟೂರು ಟೌನ್ ಮಂಜುಳಮ್ಮ ಗಾರ್ಡನ್ ಏರಿಯಾ ವಾಸಿಯಾದ ವೆಂಕಟಮ್ಮ ತಿಪಟೂರು ಇವರು ನೀಡಿದ ದೂರಿನ ಅಂಶವೇನೆಂದರೆ ಇದೇ ದಿನ ಮಧ್ಯಾಹ್ನ ಸುಮಾರು 12-00 ಗಂಟೆ ಸಮಯದಲ್ಲಿ ತನ್ನ ಮನೆ ಕಡೆಗೆ ಹೋಗುತಿದ್ದಾಗ, ಬಜಾಜ್ ಪಲ್ಸರ್ ಬೈಕ್ ನಲ್ಲಿ ಇಬ್ಬರು ಆಸಾಮಿಗಳು ಹೋಗಿ, ಆಕೆಯ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಬೈಕ್ ನ ಹಿಂಬದಿ ಸವಾರ ಕಿತ್ತುಕೊಳ್ಳಲು ಹೋದಾಗ ಆಕೆ ಬಿಗಿಯಾಗಿ ಹಿಡಿದುಕೊಂಡಿದ್ದರಿಂದ ಅರ್ಧ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುವ ಸಂಬಂದ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಮೊ.ನಂ 184/2024 ಕಲಂ 309(4) ಬಿ ಎನ್ ಎಸ್ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ. ಈ ಪ್ರಕರಣದಲ್ಲಿ ಆರೋಪಿಯನ್ನು ಪತ್ತೆ ಮಾಡಲು ವಿಶೇಷ ತಂಡವನ್ನು ರಚಿಸಿ, ಈ ಪತ್ತೆ ತಂಡವು ಅಸ್ಟರ್ ಅಲಿ ಎಂಬುವನನ್ನು ದಸ್ತಗಿರಿ ಮಾಡಿ, ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ ಬಜಾಜ್ ಪಲ್ಸರ್ ಬೈಕ್ ಅಮಾನತ್ತುಪಡಿಸಿಕೊಂಡು, ಈತನು ನೀಡಿದ ಮಾಹಿತಿ ಮೇರೆಗೆ ಮತ್ತೊಬ್ಬ ಆರೋಪಿ ಮಹಾರಾಷ್ಟ್ರ ರಾಜ್ಯದ ಪೂನಾ ನಗರದ ಇರಾನಿ ಗಲ್ಲಿಯಲ್ಲಿದ್ದ ಹೈದರ್ ಅಲಿ ಎಂಬಾತನನ್ನು ದಸ್ತಗಿರಿ ಮಾಡಿ ಸದರಿ ಆರೋಪಿಯಿಂದ ತಿಪಟೂರು ನಗರದಲ್ಲಿ ಹಾಗೂ ಹುಳಿಯಾರು, ಚಿಕ್ಕನಾಯಕನಹಳ್ಳಿ ಮತ್ತು ಚನ್ನಪಟ್ಟಣ ಟೌನ್ ನಲ್ಲಿ ಸರಗಳ್ಳತನ ಮಾಡಿದ್ದ ಒಟ್ಟು 05 ಪ್ರಕರಣಗಳಲ್ಲಿ 7 ಲಕ್ಷ ರೂ ಬೆಲೆ ಬಾಳುವ 100 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಹಾಗೂ 1 ಲಕ್ಷ ರೂ ಬೆಲೆ ಬಾಳುವ ಬಜಾಜ್ ಪಲ್ಸರ್ ಬೈಕ್‌ನ್ನು ಅಮಾನತ್ತು ಪಡಿಸಿಕೊಂಡು, ಆರೋಪಿಗಳನ್ನು ಘನ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ. ಈ ಪ್ರಕರಣಗಳ ಆರೋಪಿ ಮತ್ತು ಮಾಲನ್ನು ಪತ್ತೆ ಹಚ್ಚಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ವಿ ಮರಿಯಪ್ಪ, ಅಬ್ದುಲ್ ಖಾದರ್ ರವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚನೆ ಮಾಡಿದ್ದು ತಂಡದಲ್ಲಿ ತಿಪಟೂರು ಉಪ ವಿಭಾಗದ ವಿನಾಯಕ ಎನ್ ಶೆಟಗೆರಿ ರವರ ನೇತೃತ್ವದಲ್ಲಿ, ತಿಪಟೂರು ನಗರ ಪೊಲೀಸ್ ಠಾಣೆಯ ಪಿ ಐ ಸಿ ವೆಂಕಟೇಶ್ ರವರು ಪಿ ಎಸ್ ಐ ಕೃಷ್ಣಪ್ಪ ಹಾಗೂ ಎ ಎಸ್ ಐ ರವರುಗಳಾದ ಚಿಕ್ಕಲಕ್ಕೇಗೌಡ, ಉಸ್ಮಾನ್ ಸಾಬ್ ಸಿಬ್ಬಂದಿಗಳಾದ ಮೋಹನ್ ಕುಮಾರ್, ಲೋಕೇಶ್, ಯತೀಶ್, ಮಂಜುನಾಥ್, ಸಾಗರ್, ಚಿರಂಜೀವಿ, ವಸೀಂ ಜಛೇ, ಕಿರಣ್ ಮಹಿಳಾ ಸಿಬ್ಬಂದಿಗಳಾದ ಪಲ್ಲವಿ, ಸುಮಾ, ತನಿಖಾ ಸಹಾಯಕರಾಗಿ ಬೋರಲಿಂಗಯ್ಯ, ಹಾಗೂ ಚಾಲಕರುಗಳಾದ ಸಂತೋಷ್, ಮನೋಜ್ ರವರುಗಳನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ ವಿ ಐ.ಪಿ.ಎಸ್ ರವರು ಶ್ಲಾಘಿಸಿದ್ದಾರೆ.