Month: January 2025

ಗುಬ್ಬಿ: ರೈಲ್ವೆ ರಸ್ತೆ ಅಂಡರ್ ಪಾಸ್ ಕಾಮಗಾರಿಗಳಿಗೆ ಇತ್ತೀಚಿಗಷ್ಟೇ ಸಂಪಿಗೆ ರೋಡ್ ರೈಲ್ವೇ ಸ್ಟೇಷನ್ ಕಾರ್ಯಕ್ರಮಕ್ಕೆ ರೈಲ್ವೇ ಸಚಿವ ವಿ ಸೋಮಣ್ಣ ಭೇಟಿ ವೇಗ ತುಂಬಿದ್ದರು ಇದರ ಬೆನ್ನಲ್ಲೇ ತಾಲ್ಲೂಕಿನ ಕಡಬಾ ಹೋಬಳಿಯ ಬಾಡೇನಹಳ್ಳಿ ರೈಲ್ವೆ ಗೇಟ್ 64 ನಲ್ಲಿ ರೈಲ್ವೇ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದ್ದು ಬಾಡೇನಹಳ್ಳಿ ಗ್ರಾಮಸ್ಥರು ಅಂದಿನಿಂದ ಕೆರೆ, ಕಾವಲ್ ಮತ್ತು ಬೀದಿಗಳಿಗೆ ತೆರಳಲು ಬಳಸುತ್ತಿದ್ದ ರಸ್ತೆಗಳನ್ನು ತಡೆಯಲಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ, ಗ್ರಾಮಸ್ಥರಾದ ಮಂಜುನಾಥ್ ಬಿ.ಡಿ ಮಾತನಾಡಿ ಸದರಿ ಕಾಮಗಾರಿಯ ಎಸ್ಟಿಮೇಟ್ ನಲ್ಲಿ ನಮ್ಮ ಗ್ರಾಮದ ಕೆರೆ, ಕಾವಲ್ ಮತ್ತು ನಮ್ಮ ಛಲವಾದಿ ಕಾಲೋನಿಗಳಿಗೆ ತಿರುಗಾಡಲು ಅಂದಿನಿಂದ ಇದ್ದ ರಸ್ತೆಗಳನ್ನು ಕೈ ಬಿಡಲಾಗಿದೆ ಅಲ್ಲದೆ ಸದರಿ ಕಾಮಗಾರಿಯ ನಿರ್ಧಾರಗಳಿಂದ ನಮ್ಮ ಗ್ರಾಮಸ್ಥರು ರಸ್ತೆಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಸಂಬಂಧ ಪಟ್ಟ ರೈಲ್ವೇ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ನಮಗೆ ಸೂಕ್ತ ರಸ್ತೆ ಕಲ್ಪಿಸುವವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು ಮತ್ತೂಬ್ಬ ಗ್ರಾಮಸ್ಥ ಶಶಿಕುಮಾರ್ ಮಾತನಾಡಿ ಅಂದಿನಿಂದ ರಸ್ತೆಗಳು ನಾವು ಬಳಸುತ್ತಿದ್ದೇವೆ ಇದೇ ರಸ್ತೆಗಳನ್ನು ಮುಂದುವರೆಸಬೇಕು ಇಲ್ಲ ಬದಲಿ ಸೂಕ್ತ ರಸ್ತೆ ವ್ಯವಸ್ಥೆ ಮಾಡಲಿ ಆದರೆ ಸಂಬಂಧ ಪಟ್ಟ ಈ ರೈಲ್ವೇ ಅಧಿಕಾರಿಗಳ ಗಮನ ಕಾಮಗಾರಿ ಪೂರ್ಣಗೊಳಿಸಲು ಒತ್ತು ನೀಡುತ್ತಾರೆ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿದರು.

ವರದಿ: ಸಂತೋಷ್ ಓಬಳ

ತಿಪಟೂರು :ಮೈಕ್ರೋ ಫೈನಾನ್ಸ್ ಸಾಲಗಾರರ ಕಿರುಕುಳ ತಾಳಲಾರದ ವಿಡಿಯೋ ಮಾಡಿ ,ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ನಗರದ ಗಾಂಧೀನಗರ ಬೋವಿ ಕಾಲೊನಿ 13ನೇ ಕ್ರಾಸ್ ನಲ್ಲಿ ನಡೆದಿದೆ,

ಗಾಂಧೀ ನಗರ ಬೋವಿ ಕಾಲೋನಿ ವಾಸಿಯಾದ 42ವರ್ಷ ವಯಸ್ಸಿನ ಸಾಧಿಕ ಬೇಗಂ ಆತ್ಮಹತ್ಯೆಗೊಳಗಾದ ಮೃತ ದುರ್ದೈವಿ

ಮೈಕ್ರೋಫೈನಾನ್ಸ್ ಗಳು ಹಾಗೂ ಸ್ಥಳೀಯವಾಗಿ ಬಡ್ಡಿ ನೀಡುವ ವ್ಯಕ್ತಿಗಳಿಂದ ಸಾಧಿಕ ಬೇಗಂ ಸಾಲ ಮಾಡಿದರು ಎನ್ನಲಾಗಿದ್ದು, ಮೈಕ್ರೋ ಫೈನಾನ್ಸ್ ನವರು ಮನೆ ಬಳಿ ಸಾಲವಸೂಲಿಗೆ ಬಂದು ಕಿರುಕುಳ ನೀಡುದ್ದಾರೆ ಎನ್ನಲಾಗಿದ್ದು.ಮೈಕ್ರೋಫೈನಾನ್ಸ್ ಕಿರುಕುಳಕೊಳಗಾದ ಮಹಿಳೆ ತಮ್ಮ ಪತಿ ಸಯೀದ್ ನಯಾಜ್ ಗೆ ಪೋನ್ ಮಾಡಿ ವಿಚಾರ ತಿಳಿಸಿದ್ದು, ಸಾಲಮಾಡಿತಪ್ಪು ಮಾಡಿದ್ದೇನೆ.ಸಾಲಗಾರರ ಕಿರುಕುಳ ಜಾಸ್ತಿಯಾಗಿದೆ ಎಂದು ಅವಲತ್ತುಕೊಂಡಿದ್ದಾಳೆ.

ಹಾಸನದಲ್ಲಿ ಕೆಲಸ ಮಾಡುತ್ತಿದ್ದ ಪತಿ ನಾನು ಊರಿಗೆ ಬರುತ್ತೇನೆ ಸಾಲ ಎಷ್ಟಿದರೂ ತೀರಿಸುತ್ತೇನೆ ಧೈರ್ಯವಾಗಿರು,ಹೆದರ ಬೇಡಎಂದು ಧೈರ್ಯ ಹೇಳಿದರು.ಮಹಿಳೆ ನಾಲೆಗೆ ಬಿದ್ದು ಸಾವನ್ನಪ್ಪಿದ್ದಾರೆ.

ಸೋಮವಾರ ಮಹಿಳೆ ಮೈಕ್ರೋಪೈನಾನ್ಸ್ ಗಳು ಹಾಗೂ ಸಾಲಗಾರರಿಂದ ಕಿರುಕಿಳವಾಗುತ್ತಿರುವ ಬಗ್ಗೆ ವಿಡಿಯೋ ಮಾಡಿಟ್ಟು ಮನೆಯಿಂದ ಕಾಣಿಯಾಗಿದ್ದಾರೆ.ಮನೆಗೆ ಬಂದ ಪತಿ ಸಯಿದಾ ನಯಾಜ್ ಪತ್ನಿ ಕಾಣದಿದ್ದಾಗ, ಎಲ್ಲಕಡೆ ಹುಡುಕಲು ಆರಂಭಿಸಿದ್ದು, ಮನೆಪತ್ತೆಯಾಗದ ಕಾರಣ ಬುದವಾರ ತಿಪಟೂರು ನಗರಠಾಣೆಗೆ ಮಹಿಳೆ ಕಾಣಿಯಾದ ಬಗ್ಗೆ ದೂರು ನೀಡಿದ್ದು, ಪತಿಯ ದೂರಿನಂತೆ ತಿಪಟೂರು ನಗರಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣಿಯಾದ ಬಗ್ಗೆ ದೂರು ದಾಖಲಿಸಲಾಗಿದ್ದು.ಇಂದು ತಿಪಟೂರು ತಾಲ್ಲೋಕಿನ ಕಿಬ್ಬನಹಳ್ಳಿ ಹೋಬಳಿ ಕಲ್ಲುಶೆಟ್ಟಿಹಳ್ಳಿ ಬಳಿ ಶವ ದೊರೆತ್ತಿದೆ.

ಕೊನೆ ಭಾರೀ ದೇವರಲ್ಲಿ ಕ್ಷಮೆಯಾಚಿಸಿದ ಮಹಿಳೆ:ಮೈಕ್ರೋಪೈನಾನ್ಸ್ ಹಾಗೂ ಸಾಲಗಾರರು ಕಿರುಕುಳದಿಂದ ಮನನೊಂದಿದ್ದೇನೆ ,ನನ್ನ ಪತಿ ಹಾಗೂ ಮಕ್ಕಳು ನನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ.ದೇವರೇ ನನನ್ನು ಕ್ಷಮಿಸು ಎಂದು ಕೇಳಿಕೊಂಡಿದ್ದಾಳೆ

ಕೆ.ಬಿ ಕ್ರಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.

ವರದಿ: ಮಂಜುನಾಥ್ ಹಾಲ್ಕುರಿಕೆ

ತಿಪಟೂರು ಕಲ್ಲೆಗೌಡನಪಾಳ್ಯ ಬಳಿ ಅರಣ್ಯ ಇಲಾಖೆ ಬೋನಿಗೆ ಬಿದ್ದ ಚಿರತೆ .ಕಳೆದ ಹಲವಾರುವ ದಿನಗಳಲ್ಲಿ ಕಲ್ಲೇಗೌಡನಪಾಳ್ಯ, ರಾಮಶೆಟ್ಟಿಹಳ್ಳಿ, ಈಡೇನಹಳ್ಳಿ ಭಾಗದಲ್ಲಿ ಮೂರು ಚಿರತೆಗಳು ಕಾಣಿಸಿಕೊಂಡಿದ್ದು,ಗ್ರಾಮಸ್ಥರಲ್ಲಿ ಭಯ ಆತಂಕ ಉಂಟುಮಾಡಿತ್ತು. ಆದರೆ ಕಲ್ಲೇಗೌಡನಪಾಳ್ಯ ರೇಷ್ಮೆ ಇಲಾಖೆ ಫಾರಂ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನ್ ಗೆ ಚಿರತೆ ಬಿದ್ದಿದ್ದೆ.

ಮೂರು ಚಿರತೆಗಳ ಪೈಕಿ ಒಂದು ಚಿರತೆ ಬೋನಿಗೆ ಬಿದ್ದಿದ್ದು ಇನ್ನೂ ಎರಡು ಚಿರತೆಗಳು ಹೊರಗೆ ಉಳಿದಿರುವುದು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ,

ಉಪ ಅರಣ್ಯಸಂರಕ್ಷಣಾಧಿಕಾರಿ ಅನುಪಮ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭರತ್ ಡಿ.ವಲಯ ಅರಣ್ಯಾಧಿಕಾರಿ ಕೆ.ಎಲ್ ಮಧು‌.ಉಪ ಅರಣ್ಯಾಧಿಕಾರಿ ಪ್ರದೀಪ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಸಿಕ್ಕಿರುವ ಚಿರತೆ ಸ್ಥಳಾಂತರ ಮಾಡಿದ್ದು ಉಳಿದ ಚಿರತೆಗಳ ಹಿಡಿಯಲು ಕಾರ್ಯಚರಣೆ ನಡೆಸಲಾಗುತ್ತಿದೆ.

ವರದಿ :ಮಂಜುನಾಥ್ ಹಾಲ್ಕುರಿಕೆ

ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೊಕು ದಬ್ಬೆಘಟ್ಟ ಹೊಬಳಿ ಗೋಣಿ ತುಮಕೂರು ಗ್ರಾಮದ ಅರಣಸಮ್ಮ ದೇವಾಲಯ ಬಳಿ ಬೈಕ್ ಗೆ ಕೆ,ಎಸ್,ಆರ್,ಟಿ ಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ನಡೆದಿದೆ,

ತುರುವೇಕೆರೆ ಕದಬಳ್ಳಿ ಮಾರ್ಗದ ಕೆ.ಎಸ್ ಆರ್ ಟಿಸಿ. ಬಸ್ ಗೋಣಿ ತುಮಕೂರು ಬಳಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಡುಮಾರನಹಳ್ಳಿ ಗ್ರಾಮದ ದೀಪಕ್ ಹಾಗೂ ಪುಟ್ಟಸ್ವಾಮಿ ಅಪಘಾತದಲ್ಲಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ,

ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ವರದಿ: ಸಂಪಿಗೆ ಮೂರ್ತಿ

ತುರುವೇಕೆರೆ ತಾಲ್ಲೊಕು ಬಿಜೆಪಿ ಮಾಜಿ ಅಧ್ಯಕ್ಷ ದುಂಡ ರೇಣುಕಪ್ಪ ನಿಧನರಾದ ಹಿನ್ನಲೆ ತುರುವೇಕೆರೆ ತಾಲ್ಲೊಕು ಬಿಜೆಪಿ ವತಿಯಿಂದ ಭಾವಪೂರ್ಣ ನುಡಿನಮನ ಸಲ್ಲಿಸಲಾಯಿತು.
ತುರುವೇಕೆರೆ ನಗರದ ಶ್ರೀಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಅಯೋಜಿಸಿದ ನುಡಿನಮನ ಕಾರ್ಯಕ್ರಮದಲ್ಲಿ ಮೃತ ರೇಣುಕಪ್ಪ ನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದಾಂಜಲಿ ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ ಮಾಜಿ ಶಾಸಕ ಎಂ.ಡಿ ಲಕ್ಷ್ಮಿನಾರಾಯಣ್ ಮಾತನಾಡಿ ದುಂಡ ರೇಣುಕಪ್ಪ ಹಾಗೂ ಬವರಾಜು ಗೆಳೆಯರು ಬಿಜೆಪಿ ಶಿಸ್ತಿನ ಸಿಪಾಯಿಗಳಾಗಿ ಕಟ್ಟಾಳುಗಳಂತೆ ಕೆಲಸ ಮಾಡಿದ್ದಾರೆ,ಅವರ ಅಕಾಲಿಕ ನಿಧನ ಪಕ್ಷಕ್ಕೆ ನಷ್ಟ ಉಂಟುಮಾಡಿದೆ,ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಸೂಕ್ತವಾಗಿ ಸಂಘಟನೆ ಮಾಡಬಲ್ಲ ವ್ಯಕ್ತಿಯನ್ನ ಎಲ್ಲರೂ ಸೇರಿ ನೇಮಕ ಮಾಡಿ,ಪಕ್ಷದ ಸಂಘಟನೆಗೆ ಕೆಲಸ ಮಾಡೋಣ,ಬಿಜೆಪಿ ರಾಜ್ಯ ಹಾಗೂ ರಾಷ್ಟ್ರ ನಾಯಕ ಮಾರ್ಗದರ್ಶನದಲ್ಲಿ ಕೆಲಸ ಮಾಡೋಣ ಎಂದು ತಿಳಿಸಿದರು.
ಮಾಜಿ ಶಾಸಕ ಮಸಾಲೆ ಜಯರಾಮ್ ಮಾತನಾಡಿ ಬಿಜೆಪಿ ಕಾರ್ಯಕರ್ತರ ಶ್ರಮದಿಂದ ಬೆಳೆದ ಪಕ್ಷ ತಾಲ್ಲೋಕಿನ ಪಕ್ಷ ಸಂಘಟನೆಗೆ ದುಂಡ ರೇಣುಕಪ್ಪ ,ಬಸವರಾಜುರ,ರಾಮೇಗೌಡ,ಚಂದ್ರಶೇಖರ್ ಶಿಸ್ತಿನಿಂದ ಕೆಲಸ ಮಾಡಿ,ಪಕ್ಷಕಟ್ಟುವಲ್ಲಿ ನೆರವಾಗಿದ್ದಾರೆ,ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಬಿಜೆಪಿ ವಕ್ತಾರ ಚಂದ್ರಶೇಖರ್ ,ಮುಖಂಡರಾದ ನಂಜೇಗೌಡ.ಮೂರ್ತಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದರು

ವರದಿ : ಸಂಪಿಗೆ ಮೂರ್ತಿ

ತುರುವೇಕೆರೆ ನಗರದ ಡಾ//ಬಿ.ಆರ್ ಅಂಬೇಡ್ಕರ್ ಭವನದ ಜಾಗವನ್ನ ಕೆಲವು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು,ಅನಾಧೀಕೃತವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ,ಒತ್ತುವರಿಯಾಗಿರುವ ಸರ್ಕಾರಿ ಜಾಗವನ್ನು ಕೂಡಲೇ ತೆರವುಗೊಳಿಸಬೇಕು,ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ದಲಿತಪರ ಸಂಘಟನೆಗಳಿಂದ ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ,

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲ್ಲೊಕ್ ಸಂಚಾಲಕ ಕೃಷ್ಣ ಮಾದಿಗ ಮಾತನಾಡಿ, ಅಂಬೇಡ್ಕರ್ ಭವನದ ಜಾಗವನ್ನ ಒತ್ತುವರಿ ಮಾಡಿರುವ ಬಗ್ಗೆ ಪಟ್ಟಣ ಪಂಚಾಯಿತಿಗೆ ಹಲವರು ದೂರು ಕೊಟ್ಟರು ಏನು ಪ್ರಯೋಜವಾಗಿಲ್ಲ, ಪಟ್ಟಣಪಂಚಾಯ್ತಿಗೆ ಸೇರಿದ ಸ್ವತ್ತನ್ನ ರಕ್ಷಣೆ ಮಾಡಲು ಪಟ್ಟಣ ಪಂಚಾಯ್ತಿ ವಿಫಲವಾಗಿದೆ.ಸಾರ್ವಜನಿಕರಿಗೆ ಸೇರಿದ ಸ್ಥಳವನ್ನ ಅತಿಕ್ರಮಿಸಿದ್ದರೂ,ಪಟ್ಟಣಪಂಚಾಯ್ತಿ ಅಧಿಕಾರಿಗಳು ಪ್ರಬಾವಿಗಳ ಒತ್ತಡಕ್ಕೆ ಮಣಿದು ಕೈಕಟ್ಟಿಕುಳಿತ್ತಿದ್ದಾರೆ.ದಲಿತಪರ ಸಂಘಟನೆಗಳ ಮುಖಂಡರು ಅನೇಕಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ, ಅಂಬೇಡ್ಕರ್ ಭವನದ ಜಾಗ ಅತಿಕ್ರಮಿಸಿ ಅನಾಧೀಕೃತ ಕಟ್ಟಡ ನಿರ್ಮಿಸಲಾಗಿದೆ‌.ಅಂಬೇಡ್ಕರ್ ಭವನಕ್ಕೆ ಸಂಬಂದಿಸಿದ ಎಲ್ಲಾ ದಾಖಲೆಗಳೊಂದಿಗೆ ಮೇಲಧಿಕಾರಿಗಳಿಗೂ ದೂರು ನೀಡಲಾಗಿದೆ. ಅಂಬೇಡ್ಕರ್ ಭವನದ ಜಾಗ ಒತ್ತುವರಿಯಾಗಿದ್ದು ತೆರವು ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ, ಪಟ್ಟಣ ಪಂಚಾಯ್ತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ.ಸರ್ಕಾರ ಕೂಡಲೇ ಅಂಬೇಡ್ಕರ್ ಭವನದ ಸರ್ಕಾರಿ ಸ್ವತ್ತು ರಕ್ಷಣೆ ಮಾಡಲು ವಿಫಲವಾದ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳನ್ನ ಅಮಾನತ್ತುಗೊಳಿಸಬೇಕು ಹಾಗೂ ಕೂಡಲೇ ಒತ್ತುವರಿ ತೆರವುಗೊಳಿಸುವ ವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ತಿಳಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾಸಂಘಟನಾ ಸಂಚಾಲಕ ಕುಂದೂರು ಮುರುಳಿ ಮಾತನಾಡಿ ಸ ನಾಲ್ಕೈದು ವರ್ಷಗಳಿಂದಲೂ ಇದರ ಬಗ್ಗೆ ಹಲವು ಬಾರಿ ಪಟ್ಟಣ ಪಂಚಾಯಿತಿಗೆ ದೂರು ಕೊಟ್ಟರು ಏನು ಪ್ರಯೋಜನವಾಗಿಲ್ಲ ಜೊತೆಗೆ ಉಪ ವಿಭಾಗಾಧಿಕಾರಿಗಳು ಸಿಇಓ, ಹಾಗೂ ಜಿಲ್ಲಾಧಿಕಾರಿಗಳಿಗೂ ದೂರು ನೀಡಲಾಗಿದೆ. ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಸಹ ಜಾಗ ಒತ್ತೂವರಿಯಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡು ಅಧಿಕಾರಿಗಳಿಗೆ ಕೂಡಲೇ ಈ ಜಾಗವನ್ನು ತೆರೆವು ಗೊಳಿಸಬೇಕೆಂದು ಸೂಚನೆ ಸಹ ನೀಡಿದ್ದಾರೆ, ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ನಿರ್ಲಕ್ಷ್ಯ ಹೊಂದಿದ್ದಾರೆ.ಮೇಲಾಧಿಕಾರಿಗಳ, ಆದೇಶಕ್ಕೂ ತಲೆಕೆಡಿಸಿಕೊಳ್ಳದೆ.ಕೈಕಟ್ಟಿಕುಳಿತ್ತಿದ್ದಾರೆ, ಸರ್ಕಾರ ಕೂಡಲೆ ಒತ್ತುವರಿ ತೆರವು ಮಾಡದೆ ನಿರ್ಲಕ್ಷ್ಯ ಮಾಡಿರುವ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಯನ್ನ ಅಮಾನತ್ತುಗೊಳಿಸಬೇಕು ಹಾಗೂಅಂಬೇಡ್ಕರ್ ಭವನದ ಜಾಗದ ಒತ್ತುವರಿ ತೆರವುಮಾಡಬೇಕು ನಮ್ಮ ಹೋರಾಟ ನ್ಯಾಯದ ಪರವಾಗಿದ್ದು, ನಮ್ಮ ಹೋರಾಟಕ್ಕೆ ನ್ಯಾಯ ಸಿಗಯವವರೆಗೂ ಹೋರಾಟದಿಂದ ಹಿಂದೆಸರಿಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು

ಪ್ರತಿಭಟನೆಯಲ್ಲಿ ಶಿವರಾಜ್, ಸುನಿಲ್, ಪ್ರಸಾದ್, ಇನ್ನೂ ಮುಂತ್ತಾದವರು ಉಪಸ್ಥಿತರಿದ್ದರು.

ವರದಿ:ಸಂಪಿಗೆ ಮೂರ್ತಿ,

ರುರುಮಕೂರು ಜಿಲ್ಲೆ ತಿಪಟೂರು ತಾಲ್ಲೋಕಿನ ಕುಂದೂರು ಬಳಿ ವ್ಯಕ್ತಿಯೋರ್ವ ಬೈಕ್ ಸಮೇತ ಹೇಮಾವತಿ ನಾಲೆಗೆ ಬಿದ್ದಿರುವ ಬಗ್ಗೆ ಸ್ಥಳೀಯರು ಕೆ.ಬಿ ಕ್ರಾಸ್ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಕೆ.ಬಿ ಕ್ರಾಸ್ ಪೊಲೀಸರು ಹಾಗೂ ಅಗ್ನಿ ಶಾಮಕ ಠಾಣೆ ತಂಡ ನುರಿತ ಈಜುಗಾರರು ಹಾಗೂ ಬೋಟ್ ಸಹಾಯದಿಂದ ಶವಕ್ಕಾಗಿ ಹುಡುಕ್ಕಾಟ ನಡೆಸಿದ್ದರು, ಮೂರು ನಾಲ್ಕು ದಿನಗಳಾದರು ಶವ ಪತ್ತೆಯಾಗಿರುವುದಿಲ್ಲ, ಆದರೆ ಸೋಮಲಾಪುರ ಬಳಿ ಶವ ಪತ್ತೆಯಾಗಿದೆ.

ಅಜೀಬ್ ವುಲ್ಲಾ(33) ಖಾನ್ ಮೃತ ದುರ್ದೈವಿ. ಹೇಮಾವತಿ ನಾಲೆಯಿಂದ 28 ಕಿಲೋಮೀಟರ್ ದೂರದಲ್ಲಿ ಮೃತ ದೇಹ ಪತ್ತೆಯಾಗಿದೆ.

ಕುಂದೂರು ಬಳಿ ಹೇಮಾವತಿ ನಾಲೆಗೆ ಬಿದ್ದ ಅಜೀಬ್ ವುಲ್ಲಾ ಖಾನ್ ತಿಪಟೂರು ತಾಲ್ಲೂಕು ಕೆ.ಬಿ.ಕ್ರಾಸ್ ನಿವಾಸಿಯಾಗಿದ್ದಾರೆ. ಜ.2ನೇ ತಾರೀಕು ಅಜೀಬ್ ವುಲ್ಲಾ ನಾಲೆಗೆ ಬಿದ್ದಿದ್ದಾರೆ. ಕುಂದೂರು ಬಳಿಯ ನಾಲೆಯಲ್ಲೆ ಬೈಕ್ ಪತ್ತೆಯಾಗಿದೆ.

ಗುಬ್ಬಿ ತಾಲ್ಲೂಕಿನ ಸೋಮಲಾಪುರದ ಬಳಿ ಪತ್ತೆಯಾದ ಮೃತ ದೇಹ ಪತ್ತೆಯಾಗಿದೆ. ಮೃತ ದೇಹ ನಾಲೆಯಿಂದ ಹೊರ ತೆಗೆಯಲು ನಿನ್ನೆಯಿಂದ ಹರಸಾಹಸ ಪಡುವಂತಾಗಿದೆ. ನಿನ್ನೆಯೇ ಮೃತದೇಹ ನಾಲೆಯಲ್ಲಿ ಪತ್ತೆಯಾಗಿದೆ.

ವರದಿ:ಮಂಜುನಾಥ್ ಹಾಲ್ಕುರಿಕೆ

Your Attractive Heading

ತಿಪಟೂರು ತಾಲ್ಲೋಕಿನ ಕಸಬಾ ಹೋಬಳಿ ಕೆರೆಗೋಡಿ ರಂಗಾಪುರ ಬಳಿ ಹಲವಾರು ದಿನಗಳಿಂದ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದ ಚಿರತೆಯನ್ನ ಸಾರ್ವಜನಿಕರ ನೆರವಿನೊಂದಿಗೆ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ

ತಿಪಟೂರು ತಾಲ್ಲೋಕಿನ ರಂಗಾಪುರ ಗ್ರಾಮದ ಪುರಲೇಹಳ್ಳಿ ರಸ್ತೆ ಕುಮಾರಣ್ಣ ಎಂಬುವವರ ತೋಟದಲ್ಲಿ ಬೀಡುಬಿಟ್ಟಿದ ಸುಮಾರು 04ರಿಂದ 05 ವರ್ಷ ಪ್ರಾಯದ ಚಿರತೆಯನ್ನ ಹಿಡಿಯಲು ಅರಣ್ಯ ಇಲಾಖೆ ಬಲೆಬಿಸಲಾಗಿತ್ತು, ಆದರೆ ಸಾರ್ವಜನಿಕರ ಕೂಗಾಟದಿಂದ ಬಲೆಗೆ ಬೀಳದೆ ತಪ್ಪಿಸಿಕೊಳ್ಳುತ್ತಿದ್ದ ಚಿರತೆಯನ್ನ ರಂಗಾಪುರ ಗ್ರಾಮದ ಆನಂದ್ ಎಂಬ ಯುವಕ ಚಿರತೆ ಬಾಲ ಹಿಡಿದು ಅರಣ್ಯ ಇಲಾಖೆ ಬಲೆಗೆ ಕೆಡವಿದ್ದು, ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಚಿರತೆ ಹಿಡಿದ್ದು, ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.
ತುಮಕೂರು ಉಪ ಅರಣ್ಯಸಂರಕ್ಷಣಾಧಿಕಾರಿ ಅನುಪಮ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭರತ್ ಡಿ.ವಲಯ ಅರಣ್ಯಾಧಿಕಾರಿ ಕೆ.ಎಲ್ ಮಧು‌.ಉಪ ಅರಣ್ಯಾಧಿಕಾರಿ ಪ್ರದೀಪ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

ಅಧ್ಯಕ್ಷರು ಎಂ.ಎಸ್ ಯೋಗೇಶ್.ಉಪಾಧ್ಯಕ್ಷರುಮೋಹನ್ ಕಲ್ಲೇಗೌಡನಪಾಳ್ಯ,ಪ್ರಧಾನ ಕಾರ್ಯದರ್ಶಿ ಎಂ.ಜಿಯೋಗಾನಂದಸ್ವಾಮಿ ಮೂಗ್ತಿಹಳ್ಳಿ,ಖಜಾಂಚಿ: ವಿಜಯ್ ಕುಮಾರ್ ಅನಗೊಂಡನಹಳ್ಳಿ ಜಿಲ್ಲಾ ಪ್ರತಿನಿಧಿ ಎಂ.ಸಿ ನಟರಾಜ್

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಂ‌ಎಸ್ ಯೋಗೇಶ್ ಮಾತನಾಡಿ ತಾಲ್ಲೋಕಿನ ಕೃಷಿಕ ಸಮಾಜದ ಬಂಧುಗಳು ಹಾಗೂ ತಿಪಟೂರು ಕೃಷಿಕ ಸಮಾಜದ ಅಧ್ಯಕ್ಷನನ್ನಾಗಿ ಆಯ್ಕೆಮಾಡಿರುವುದಕ್ಕೆ ಅಭಿನಂದಿಸುತ್ತೇವೆ.ತಾಲ್ಲೋಕಿನ ಸಮಸ್ತ ಕೃಷಿಕ ಸಮಾಜ ಹಾಗೂ ಕೃಷಿಕ ಸಮಾಜ ಆಶೋತ್ತರಗಳಿಗೆ ತಕ್ಕಂತೆ ಕೆಲಸ ಮಾಡುತ್ತೇನೆ. ಸರ್ಕಾರ ಹಾಗೂ ಕೃಷಿ ಇಲಾಖೆಯಿಂದ ಕೃಷಿಕ ಸಮಾಜಕ್ಕೆ ದೊರೆಯುವ ಸವಲತ್ತುಗಳನ್ನ ಪ್ರಮಾಣಿಕವಾಗಿ ತಲುಪಿಸುವ ಕೆಲಸ ಮಾಡುತ್ತೇನೆ, ಎಂದು ತಿಳಿಸಿದರು
ಕೃಷಿಕ ಸಮಾಜದ ಜಿಲ್ಲಾಪ್ರತಿನಿಧಿಯಾಗಿ ಆಯ್ಕೆಯಾದ ಎಂ.ಸಿ ನಟರಾಜ್ ಮಾತನಾಡಿ ತಿಪಟೂರು ಶಾಸಕರಾದ ಕೆ.ಷಡಕ್ಷರಿಯವರ ಮಾರ್ಗದರ್ಶನ ಹಾಗೂ ಕೃಷಿಕ ಸಮಾಜದ ನೆರವಿನಿಂದ ನೂತನ ಕಮಿಟಿ ಆಯ್ಕೆಯಾಗಿದ್ದು ಜಿಲ್ಲಾ ಪ್ರತಿನಿಧಿಯಾಗಿ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಅಭಾರಿಯಾಗಿರುತ್ತೇವೆ.ತಾಲ್ಲೋಕಿನ ರೈತರು ಹಾಗೂ ಕೃಷಿಕ ಸಮಾಜದ ಸದಸ್ಯರಿಗೆ ಸರ್ಕಾರದಿಂದ ದೊರೆಯುವ ಸಮಲತ್ತುಗಳನ್ನ ನೇರವಾಗಿ ದೊರೆಯುವಂತ್ತೇ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.ನಮ್ಮ ಸಮಿತಿಯ ಎಲ್ಲರೂ ರೈತರ ಸೇವೆಮಾಡುತ್ತೇವೆ ಹಿರಿಯ ಸದಸ್ಯರ ಮಾರ್ಗದರ್ಶನದಂತೆ,ಕಿರಿಯರ ಸಲಹೆಯಂತೆ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು
ಉಪಾಧ್ಯಕ್ಷರಾದ ಮೋಹನ್ ಕಲ್ಲೇಗೌಡನಪಾಳ್ಯ ಮತನಾಡಿ ಕೃಷಿಕ ಸಮಾಜ ತಾಲ್ಲೋಕಿನ ರೈತರು ಹಾಗೂ ಕೃಷಿ ಇಲಾಖೆಯ ನಡುವೆ ಕೊಂಡಿಯಂತೆ ಕೆಲಸ ಮಾಡುತ್ತದೆ, ನಾವು ಕೃಷಿಕ ಸಮಾಜದಿಂದ ಸರ್ಕಾರದಿಂದ ದೊರೆಯುವ ಸಮಲತ್ತುಗಳನ್ನ ರೈತರಿಗೆ ಪ್ರಾಮಾಣಿಕವಾಗಿ ದೊರೆಯುವಂತ್ತೆ ಮಾಡುತ್ತೇವೆ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಸದಸ್ಯರಾದ ಮತ್ತಿಹಳ್ಳಿ ಗಂಗಾಧರ್ .ವಗನಘಟ್ಟ ಯೋಗಾನಂದ್ ಮಾಜಿ ತಾಲ್ಲೋಕು ಪಂಚಾಯ್ತಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್. ಎಂಬಿ ಪರಮಶಿವಯ್ಯ, ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಕೆರಗೋಡಿ ದೇವರಾಜು,ಮಾಜಿ ಜಿಲ್ಲಾಪ್ರತಿನಿಧಿ ಸದಾಶಿವಯ್ಯ,ಕಾಂಗ್ರೇಸ್ ನಗರಾಧ್ಯಕ್ಷ ತರಕಾರಿ ಪ್ರಕಾಶ್.ವಿನಾಯಕ್.ಶಿವರನಾಗರಾಜು.ಮುಂತ್ತಾದವರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು ನಗರದ ಡಾ//ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಹಾಲ್ಕುರಿಕೆ ರಸ್ತೆ ರಾಷ್ಟ್ರೀಯ ಹೆದ್ದಾರಿ 206 ರ ಚತುಷ್ಪತ ರಸ್ತೆಗೆ ಸಂಪರ್ಕಿಸುವ 2ಕಿಲೋ ಮೀಟರ್ ಚತುಷ್ಪಥ ನಗರಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿಗೆ ತಿಪಟೂರು ಶಾಸಕ ಕೆ.ಷಡಕ್ಷರಿ ಗುದ್ದಲಿಪೂಜೆ ನೆರವೇರಿಸಿದರು

ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ ಶಾಸಕ ಕೆ.ಷಡಕ್ಷರಿ ಸರ್ಕಾರ ಎಸ್ಎಸ್ ಟಿಪಿ ಯೋಜನೆ ಅಡಿ 20 ಕೋಟಿ ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಅನುದಾನ ಮಂಜೂರಾಗಿದ್ದು,ನಗರದ ಡಾ//ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಹಾಲ್ಕುರಿಕೆ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿ 206ಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 8ಕೋಟಿ ವೆಚ್ಚದ ನಗರ ಸಂಪರ್ಕ ಚತುಷ್ಪಥ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲಾಗಿದ್ದು,ಶೀಘ್ರದಲ್ಲಿಯೇ ಕಾಮಗಾರಿ ಪ್ರರಂಭಿಸಲಾಗುವುದು. ಹಾಲ್ಕುರಿಕೆ ರಸ್ತೆ ರಾಜ್ಯ ಹೆದ್ದಾರಿಯಾಗಿರುವ ಕಾರಣ ರಾಜ್ಯಹೆದ್ದಾರಿ ನಿಯಮಗಳಂತೆ ಕಾಮಗಾರಿ ನಡೆಸಲಾಗುತ್ತದೆ. ಹಾಲ್ಕುರಿಕೆ ರಸ್ತೆ ನಗರದಿಂದ ಹೆದ್ದಾರಿಗೆ ಸಂಪರ್ಕಿಸುವ ರಸ್ತೆಯಾಗಿರುವ ಕಾರಣ,ಅಪಘಾತಗಳು ,ಹೆಚ್ಚಾದ ಹಿನ್ನೆಲೆ ರಸ್ತೆ ಅಗಲೀಕರಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಯಮುನಾ ಧರಣೇಶ್,ಉಪಾಧ್ಯಕ್ಷರಾದ ಶ್ರೀಮತಿ ಮೇಘನಾ ಭೂಷಣ್,ನಗರಸಭಾ ಸದಸ್ಯರಾದ ಯೋಗೇಶ್,ಪ್ರಕಾಶ್,ಶಶಿಕಿರಣ್ ಲೋಕನಾಥ್ ಸಿಂಗ್ ಮುಖಂಡರಾದ ವಗನಘಟ್ಟ ಯೋಗಾನಂದ್, ಗುತ್ತಿಗೆದಾರ ಮಧು,ನಟರಾಜ್.ಮುಂತ್ತಾದವರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!