Year: 2025

ತಿಪಟೂರು ತಾಲ್ಲೋಕಿನ ಕಿಬ್ಬನಹಳ್ಳಿ ಹೋಬಳಿ ಮದ್ಲೇಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆಯ ಯಡವಟ್ಟಿನಿಂದ ವನ್ಯಜೀವಿ ಚಿರತೆ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ,


ತಿಪಟೂರು ತಾಲ್ಲೋಕಿನ ಕಿಬ್ಬನಹಳ್ಳಿ ಹೋಬಳಿ ಮದ್ಲೇಹಳ್ಳಿ ಚಿರತೆ ಹಾವಳಿ ಹೆಚ್ಚಾದ ಹಿನ್ನೆಲೆ ಅರಣ್ಯ ಇಲಾಖೆ ಮದ್ಲೇಹಳ್ಳಿ ಗ್ರಾಮದ ಸರ್ವೇನಂಬರ್ 10ರಲ್ಲಿ ನಾರಾಯಣಪ್ಪ ಬಿನ್ ಶಂಕರಪ್ಪ ಎಂಬುವವರ ಜಮೀನಿನಲ್ಲಿ ಚಿರತೆ ಸೆರೆಗೆ ಬೋನ್ ಇಡಲಾಗಿತ್ತು,ಅರಣ್ಯ ಇಲಾಖೆ ಇಟ್ಟಿದ ಬೋನಿಗೆ ಚಿರತೆ ಸೇರೆಯಾಗಿದೆ,ಆದರೆ ಈ ಪ್ರದೇಶದಲ್ಲಿ ಆಕಸ್ಮಿಕ ಅಗ್ನಿ ಅವಘಡ ಉಂಟಾಗಿ ಬೋನಿನಲ್ಲಿ ಇಟ್ಟಿದ ಚಿರತೆ ಹೊರಹೋಗಲಾಗದೆ ಬೆಂಕಿ ಕೆನ್ನಾಲಿಗೆಯಿಗೆ ಬಲಿಯಾಗಿದ್ದು ಹುಸಿರುಕಟ್ಟಿ ಸಾವನ್ನಪ್ಪಿದೆ,ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು.ಹಾಗೂ ಕಿಬ್ಬನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಕೆ.ಬಿ ಕ್ರಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,

ಚಿರತೆ ಮರಣೋತ್ತರ ಪರೀಕ್ಷೆ ನಂತರ ಚಿರತೆ ಕಳೆಬರ, ವಿಲೇವಾರಿ ಮಾಡಲಾಗಿದ್ದು, ಅರಣ್ಯ ಇಲಾಖೆ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ,ಅರಣ್ಯ ಇಲಾಖೆ ಬೋನ್ ಇಟ್ಟಿದೆ ಆದರೆ ಬೋನಿನಲ್ಲಿ ಚಿರತೆ ಬಿದ್ದಿರುವ ಬಗ್ಗೆ ಮಾಹಿತಿ ಕಲೆಹಾಕಲು ವಿಫಲವಾದ ಹಿನ್ನೆಲೆ ಚಿರತೆ ಸಾವು ಸಂಭವಿಸಿದೆ ಎಂದು ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ಮಾರ್ಚ್ 8 ರಂದು “ರಾಷ್ಟ್ರೀಯ ಲೋಕ ಅದಾಲತ್” ಅನ್ನು ಏರ್ಪಡಿಸಲಾಗಿದ್ದು ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಗೌರವಾನ್ವಿತ ತಿಪಟೂರು ಐದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಪುಷ್ಪಾವತಿ ತಿಳಿಸಿದರು


‌ನ್ಯಾಯಾಲಯದ ಆವರಣದಲ್ಲಿ ಸಾರ್ವಜನಿಕ ಪ್ರಕಟಣೆ ನೀಡಿದ ಅವರು ದಿನಾಂಕ: 08.03.2025 ರಂದು “ರಾಷ್ಟ್ರೀಯ ಲೋಕ ಅದಾಲತ್” ಅನ್ನು ಹಮ್ಮಿಕೊಳ್ಳಲಾಗಿದ್ದು, ರಾಜಿ ಸಂಧಾನದ ಮೂಲಕ ಯಾವುದೇ ನ್ಯಾಯಾಲಯದ ಶುಲ್ಕವಿಲ್ಲದೆ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಇದು ಬೃಹತ್ ಆಂದೋಲನ ಹಮ್ಮಿಕೊಂಡಿದ್ದು, ನ್ಯಾಯಾಲಯ ನೀಡಿರುವ ಸುವರ್ಣ ಅವಕಾಶವನ್ನ ಸಾರ್ವಜನಿಕರು,ಹಾಗೂ ಕಕ್ಷೀದಾರರು ಬಳಸಿಕೊಳ್ಳ ಬೇಕುಎಂದು ತಿಳಿಸಿದರು.
ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವಾ ಸಮಿತಿ, ತಿಪಟೂರು ಅಧ್ಯಕ್ಷರಾದ ಶ್ರೀ ಮಹಮದ್ ಆರಿಪುಲ್ಲ.ಸಿ.ಎಫ್ ಮಾತನಾಡಿ ಈ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಪ್ರಕರಣಗಳು ಹೆಚ್ಚು ಕಾಲಾವಕಾಶ ತೆಗೆದುಕೊಳ್ಳದೆ, ಸೌಹಾರ್ದಯುತವಾಗಿ ಮುಗಿಯಬೇಕು. ಪ್ರಕರಣಗಳನ್ನು ವಕೀಲರ ಮೂಲಕವಾಗಲಿ ಹಾಗೂ ವೈಯಕ್ತಿಕವಾಗಿ ಆಗಲಿ ಬಗೆಹರಿಸಿಕೊಳ್ಳಬಹುದು ಹಾಗೂ ಈ ಲೋಕ ಅದಾಲತ್ ನಲ್ಲಿ ವ್ಯಾಜ್ಯಪೂರ್ವ ಪ್ರಕರಣಗಳನ್ನು ಯಾವುದೇ ಶುಲ್ಕವಿಲ್ಲದೆ ಕಡಿಮೆ ಕಾಲಾವಕಾಶದಲ್ಲಿ ಇತ್ಯರ್ಥ ಪಡಿಸಿಕೊಳ್ಳಬಹುದು,ಕಾನೂನಿನ ಮೂಲಕ ಸಾರ್ವಜನಿಕರು ನ್ಯಾಯದಾನ ಪಡೆಯಬಹುದುಎಂದು ತಿಳಿಸಿದರು.
ಗೌರವಾನ್ವಿತ ಅಧಿಕ ಸಿವಿಲ್ ನ್ಯಾಯಾಧೀಶರು ಹಾಗೂ, ತಾಲೂಕು ಕಾನೂನು ಸೇವಾ ಸಮಿತಿ, ತಿಪಟೂರು ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ಮಧುಶ್ರೀ ಜಿ.ಎನ್ ರವರು ಮಾತನಾಡಿ ಸದರಿ ಲೋಕ ಅದಾಲತ್ನಲ್ಲಿ ಕೌಟುಂಬಿಕ ಪ್ರಕರಣಗಳು, ಅಪಘಾತ ಪ್ರಕರಣಗಳು, ವಿಮೆ ಸಂಬಂಧಿತ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಸ್ತ್ರೀಶಕ್ತಿ ಸಂಘದವರು ಬ್ಯಾಂಕುಗಳಿಂದ ಪಡೆದ ಸಾಲದ ಪ್ರಕರಣಗಳು, ಎಂ.ಎಂ.ಡಿ.ಆರ್ ಪ್ರಕರಣಗಳು, ಪಾಲು ವಿಭಾಗ ಪ್ರಕರಣಗಳು, ಎಲ್.ಎ.ಸಿ ಹಾಗೂ ಇನ್ನಿತರ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬಹುದು. ಈಗಾಗಲೇ ಸದರಿ ಇತ್ಯರ್ಥ ಪಡಿಸಿಕೊಳ್ಳಬಹುದು ಪ್ರಕರಣಗಳಿಗೆ ಸಂಬಂಧಿಸಿದಂತೆ ಪೂರ್ವಭಾವಿ ಬೈಠಕ್ ಗಳು ನಡೆಯುತ್ತಿದ್ದು ತಮ್ಮ ತಮ್ಮ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಸದರಿ ಲೋಕ ಅದಾಲತ್ನಲ್ಲಿ ಪರಿಹರಿಸಿಕೊಳ್ಳುವಂತೆಯೂ ಹಾಗೂ ಹೆಚ್ಚಿನ ಮಾಹಿತಿಗಾಗಿ ತಮ್ಮ ತಮ್ಮ ವ್ಯಾಪ್ತಿಯ ತಾಲೂಕು ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು.
ಸಭೆಯಲ್ಲಿ ಶ್ರೀ ಬಿ.ಎನ್ ಅಜಯ್., ಅಧ್ಯಕ್ಷರು, ತಾಲೂಕು ವಕೀಲರ ಸಂಘ, ಶ್ರೀ ಬಿ ಮಲ್ಲಿಕಾರ್ಜುನಯ್ಯ., ಕಾರ್ಯದರ್ಶಿಗಳು, ತಾಲೂಕು ವಕೀಲರ ಸಂಘ, ತಿಪಟೂರು ರವರು ಮತ್ತು ವಕೀಲರ ಸಂಘದ ಎಲ್ಲಾ ಸದಸ್ಯ ವಕೀಲರು ಹಾಜರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು: ಕಲಾಕೃತಿ (ರಿ), ತಿಪಟೂರು, ಕಲ್ಪತರು ವಿದ್ಯಾಸಂಸ್ಥೆ,ಆದಿತ್ಯವಾಣಿ ಕನ್ನಡ ಪತ್ರಿಕೆ ಮತ್ತು ಸತ್ಯಕುಮಾರ್ ರಿಲೀಫ್ ಫೌಂಡೇಷನ್ಇವರ ಸಂಯುಕ್ತಾಶ್ರಯದಲ್ಲಿ
ಕಲಾಕೃತಿಯ 28ನೇ ವರ್ಷದ ವಾರ್ಷಿಕೋತ್ಸವ, ಆದಿತ್ಯವಾಣಿ ಪತ್ರಿಕೆಯ 25ನೇ ವರ್ಷದ ರಜತ ಮಹೋತ್ಸವ, ಅನ್ನಪೂರ್ಣ ಸಂಚಾರಿ ನಿತ್ಯ ಅನ್ನ ದಾಸೋಹ ಕಾರ್ಯಕ್ರಮದ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಹಾಗೂ ನಾಡಿನ ಸಾಹಿತ್ಯ ದಿಗ್ಗಜ, ಸಾಮಾಜಿಕ ಚಿಂತಕ, ನಾಡೋಜ ಸನ್ಮಾನ್ಯ ಶ್ರೀ ಬರಗೂರು ರಾಮಚಂದ್ರಪ್ಪ ಅವರಿಗೆ ಕಲ್ಪತರು ನಾಡಿನ ಪ್ರತಿಷ್ಠಿತ ನಾಗರಿಕ ಪ್ರಶಸ್ತಿ “ಕಲ್ಪತರು ರತ್ನ” ಪ್ರಶಸ್ತಿ ಪ್ರಧಾನ, ಹಿರಿಯ ಪತ್ರಕರ್ತರಿಗೆ ಸನ್ಮಾನ ಹಾಗೂ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ನವೋದ್ಯಮದ ಬಗ್ಗೆ ಮಾಹಿತಿ ಕಾರ್ಯಾಗಾರ ಹಾಗೂ ಉದ್ಯಮಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು, . ತಿಪಟೂರಿನ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಕೆ.ಐ.ಟಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ ನವರಿಗೆ ಕಲ್ಪತರು ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.


ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಾಡೋಜ ಬರಗೂರು ರಾಮಚಂದ್ರಪ್ಪ ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಕೆಲಸಕ್ಕಾಗಿ ಸಂದರ್ಶನಕ್ಕೆ ಬಂದಿದ್ದೆ.ಆಗ ನಾನು ಆಯ್ಕೆಯಾಗಿರಲಿಲ್ಲ. ಈಗ ಅದೇ ಸಂಸ್ಥೆಯಲ್ಲಿ ನನ್ನನ್ನು ಅತಿಥಿಯಾಗಿ ಸನ್ಮಾನ ಮಾಡುತ್ತಿರುವುದು ನನಗೆ ಸಂತೋಷದ ಸಂಗತಿಯಾಗಿದೆ.

ಮೂಢನಂಬಿಕೆಯ ಕಾರಣದಿಂದ ನನ್ನ ಅಕ್ಕ ವೈದ್ಯರಿಗೆ ತೋರಿಸದೆ ತೀರಿಕೊಂಡರು. ತಂಗಿ ಧನುರ್ವಾಯು ಕಾರಣದಿಂದ ತೀರಿಕೊಂಡರು. ಆ ಕಾರಣದಿಂದ ನಾನು ವೈದ್ಯನಾಗಬೇಕೆಂದು ಬಯಸಿದ್ದುಂಟು.
ಶಿಕ್ಷಕರು ವಿದ್ಯಾರ್ಥಿಗಳ ಧರ್ಮ ಜಾತಿಯನ್ನು ನೋಡಬಾರದು.
ಅಂತಹ ಶಿಕ್ಷಕರು ನನಗೆ ಅಕ್ಷರ ಕಲಿಸಿದ್ದರಿಂದ ನನಗೆ ಅಕ್ಷರ ಅಹಂಕಾರವಾಗಲಿಲ್ಲ. ಅಕ್ಷರ ಅಂತಃಕರಣವಾಯಿತು.ಈ ಅಂತಃಕರಣದಿಂದಲೇ ನೀವು ನನಗೆ ಪ್ರಶಸ್ತಿಯನ್ನು ಕೊಟ್ಟಿದ್ದೀರಿ. ಬರಗೂರಿನವರಿಗೆ ತಿಪಟೂರು ಹಸಿರು ಭೂಮಿ ಇದ್ದಂತೆ. ಎರಡು ವರ್ಷಗಳ ಹಿಂದೆ ನಮ್ಮ ಊರಿನ ಕೆರೆ ಕೋಡಿ ಬಿಟ್ಟಿತು. 42 ವರ್ಷಗಳ ನಂತರ ನಮ್ಮ ಊರಿನ ಕೆರೆ ಕೋಡಿ ಬಿದ್ದಿರುವುದು. ನಾನು ಒಣ ಭೂಮಿಗೆ ಸೇರಿದವನು. ಹಸಿರು ಭೂಮಿ ಒಣ ಭೂಮಿಯನ್ನು ಸನ್ಮಾನ ಮಾಡುವುದು,ಪ್ರಶಂಶಿಸುವುದು ಬಹಳ ವಿಶೇಷವಾದದ್ದು.
ಬದುಕಿನಲ್ಲಿ ಕಲ್ಪತರು ಹಾಗೂ ಜಾಲಿ ಮರ ಎರಡು ಇರುತ್ತದೆ ರಾಜ್ಯ ದೇಶ ಏಕಮುಖಿಯಾಗಿರುವುದಿಲ್ಲ.ಅನೇಕ ವೈರುಧ್ಯಗಳಿರುತ್ತವೆ. ಹಸಿರು ಭೂಮಿ ಒಣ ಭೂಮಿ ಒಟ್ಟಿಗೆ ಸೇರುವುದು ವೈರುಧ್ಯಗಳನ್ನು ಒಂದು ಮಾಡುವ ಸಂಕೇತ.ಸೌಹಾರ್ದತೆಯ ಸಂಕೇತ. ಸೃಷ್ಟಿಯಲ್ಲಿ ಶ್ರೇಷ್ಠ ಕನಿಷ್ಠ ಎಂಬುದಿಲ್ಲ.ಎಲ್ಲದಕ್ಕೂ ಅದರದ್ದೆ ಆದ ಕರ್ತವ್ಯವಿದೆ.

ಕಾಗೆ ಕೋಗಿಲೆಯ ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡುತ್ತದೆ.ಕೋಗಿಲೆಯ ಸಂತತಿಯನ್ನು ಹೆಚ್ಚಿಸುತ್ತದೆ.ಹಾಗಾದರೆ ಕಾಗೆಯನ್ನು ನಿಕೃಷ್ಟ ಎಂದು ಏಕೆ ಕರೆಯಬೇಕು ?
ಎಲ್ಲರೂ ಅವರವರು ಬೆಳೆದು ಬಂದ ವಾತಾವರಣದಿಂದಲೇ ಪ್ರೇರಣೆ ಪಡೆಯುತ್ತಾರೆ.

ಸೌಹಾರ್ದಕ್ಕೆ ವಿರುದ್ಧವಾದ ವಾತಾವರಣದಲ್ಲಿ ನಾವು ಬದುಕುತ್ತಿದ್ದೇವೆ. ನನ್ನಂತಹ ಅನೇಕರಿಗೆ ಆತಂಕವಾಗಿದೆ ನಮ್ಮ ಪರಂಪರೆಯು ಜಾತಿ,ಧರ್ಮ,ಭೇದ,ಭಾವ ಹೇಳಿಕೊಡಲಿಲ್ಲ. ಪಂಪನೆ ಶತಮಾನದಲ್ಲಿ ಜಾತಿ ಪದ್ಧತಿಯನ್ನು ವಿರೋಧಿಸಿದ. ಬಸವಣ್ಣನವರು ಹೊಸ ಧರ್ಮ ಕಟ್ಟಿದರು. ಕ್ರಿ.ಶ. 850ರಲ್ಲಿ ರಚನೆಯಾದ ಕವಿರಾಜಮಾರ್ಗದಲ್ಲಿ ನಾವು ಹೇಗೆ ಬದುಕಬೇಕೆಂದು ತಿಳಿಸಿದ್ದಾರೆ. ಬಸವಣ್ಣನವರ ದೇಹವೇ ದೇಗುಲವೆಂದು ಹೇಳಿದ್ದಾರೆ. ಗಾಂಧೀಜಿಯವರು ಆಸ್ತಿಕರಾಗಿದ್ದರು.ಆದರೆ ಎಂದಿಗೂ ತಾವು ನಂಬಿದ ದೇವರು ಧರ್ಮವನ್ನು ಸ್ವಾತಂತ್ರ ಹೋರಾಟಕ್ಕೆ ಬಳಸಲಿಲ್ಲ. ಸಾವಿತ್ರಿಬಾಯಿ ಪುಲೆ, ಫಾತಿಮಾ ಶೇಖ್ ರವರು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದರು.

ಯಾವುದು ಪ್ರಜಾಸತ್ತಾತ್ಮಕವಲ್ಲವೋ ಅದು ಸೃಜನಶೀಲತೆಯಲ್ಲ. ಶಿಕ್ಷಣ ಕಲೆ ಸಾಹಿತ್ಯದ ಬಗ್ಗೆ ಮಾತನಾಡುವಾಗಲೆಲ್ಲ ಆತಂಕವಾಗುತ್ತದೆ. ಇಂದು ನಾವು ಮಾರುಕಟ್ಟೆ ಪ್ರಧಾನವಾಗಿರುವ ಸಮಾಜವನ್ನು ನೋಡುತ್ತಿದ್ದೇವೆ. ಮಾರುಕಟ್ಟೆಯು ಮೌಲ್ಯಗಳನ್ನು ನಾಶ ಮಾಡಬಾರದು. ಇಂದು ಶಿಕ್ಷಣವೂ ಉದ್ಯಮವಾಗಿದೆ ಮೌಲ್ಯಗಳು ಬೆಳೆಯಬೇಕಾದರೆ ಸಾಂಸ್ಕೃತಿಕ ಪ್ರಜ್ಞೆ ಇರಬೇಕು.ಸಂವಾದದಿಂದ ಹೆಚ್ಚು ಮೌಲ್ಯಗಳನ್ನು ಕಟ್ಟಿಕೊಳ್ಳಲು ಸಾಧ್ಯ.

ನಮ್ಮ ನಮ್ಮ ನಡುವೆ ಪರಸ್ಪರ ಮಾತು ಕಡಿಮೆಯಾಗುತ್ತಿದೆ ದ್ವೇಷ ವಿರೋಧ ಹೆಚ್ಚಾಗುತ್ತಿದೆ ಸಮಾಜದಲ್ಲಿ ಕಲುಷಿತವಾದ,ಆಘಾತಕಾರಿಯಾದ, ಅಮಾನವೀಯವಾದ ವಾತಾವರಣ ಸೃಷ್ಟಿಯಾಗುತ್ತಿದೆ. ದೇಶದಲ್ಲಿ ದಿನಕ್ಕೆ 85 ಮಹಿಳೆಯರ ಅತ್ಯಾಚಾರವಾಗುತ್ತಿದೆ ಒಂದು ಗಂಟೆಗೆ 51 ಮಹಿಳೆಯರ ಮೇಲೆ ದೌರ್ಜನ್ಯವಾಗುತ್ತಿದೆ ಅತ್ಯಾಚಾರ ಪ್ರಕರಣ ಶೇಕಡ 7.1 ರಷ್ಟಿದೆ. ಈ ಅಂಕಿ ಅಂಶಗಳನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಹೇಳಿದೆ.
ಪ್ರಶಸ್ತಿಗಳು ನಮಗೆ ಬಂದಾಗ ನಾವು ಎಷ್ಟು ಮನುಷ್ಯರು ಎಂದು ಪ್ರಶ್ನಿಸಿಕೊಳ್ಳಬೇಕು.ಇಂದು ವಿವೇಕದ ಭಾಗವನ್ನು ಉದ್ರೇಕ ಆವರಿಸಿಕೊಂಡಿದೆ. ಹಿಂದೂ ಧರ್ಮವನ್ನು ನಂಬಿಯೂ ಸಹ ಎಲ್ಲ ಧರ್ಮದ ಜೊತೆ ಇರಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ ಸತ್ಯದ ಜಾಗವನ್ನು ಅಸತ್ಯ, ಮಾನವೀಯತೆಯ ಜಾಗವನ್ನು ಮತೀಯತೆ ಆವರಿಸಿಕೊಂಡಿದೆ.ಇಂತಹ ಸಂದರ್ಭದಲ್ಲಿ ನಾವೆಲ್ಲಾ ಮನುಷ್ಯರಾಗಬೇಕು ನಮ್ಮಲ್ಲಿರುವ ಮೃಘೀಯತೆಯನ್ನು ನಾಶ ಮಾಡಿಕೊಳ್ಳಬೇಕು. ನಿಜವಾದ ಮನುಷ್ಯರಾಗಬೇಕು ಎಂದು ಹೇಳಿದರು.

ಕಲಾಕೃತಿ ಅಧ್ಯಕ್ಷರಾದ ಡಾ. ಜಿ.ಎಸ್.ಶ್ರೀಧರ್ ರವರು ಮಾತನಾಡಿ ನಾಡೋಜ ಬರಗೂರು ರಾಮಚಂದ್ರಪ್ಪನವರಿಗೆ ಕಲ್ಪತರು ನಾಡಿನ ಪ್ರತಿಷ್ಠಿತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಹೇಳಿದರು.ನಮ್ಮ ನಾಡಿನ ಹೇಳಿಗೆಗಾಗಿ ಕಲೆ,ಸಾಹಿತ್ಯ,ಸಂಗೀತ,ಸೇವೆಕಾರ್ಯಗಳ ಜೊತೆ ಹಲವಾರು ರಚನಾತ್ಮಕ ಕಾರ್ಯಗಳು, ನಡೆಯಲಿವೆ, ಸಹೃದ ನಾಗರೀಕರ ಸಹಕಾದಲ್ಲಿ ನಡೆಯುತ್ತಿರುವ ಅನ್ನಪೂರ್ಣ ಸಂಚಾರಿ ನಿತ್ಯ ಅನ್ನದಾಸೋಹ ಕಾರ್ಯಕ್ರಮ ಪ್ರಾರಂಭಿಸಿ ಒಂದು ವರ್ಷವಾಗಿದ್ದು, ಸುಮಾರು 400 ಜನರಿಗೆ ಮಧ್ಯಾಹ್ನ ಅನ್ನದಾಸೋಹ ನಡೆಯುತ್ತಿದ್ದು ಎಲ್ಲರ ಸಹಕಾರದಿಂದ ನಿರಂತರವಾಗಿ ನಡೆಯಲಿದೆ ಎಂದರು,

ಕಾರ್ಯಕ್ರಮದಲ್ಲಿ ಕಲಾಕೃತಿ ಸಂಸ್ಥೆಯ ಅಧ್ಯಕ್ಷರಾದ ಡಾ. ಜಿ.ಎಸ್. ಶ್ರೀಧರ್ ರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷರಾದ ಶ್ರೀಮತಿ ಯಮುನಾ ಧರಣೇಶ್, ಕಲ್ಪತರು ವಿದ್ಯಾ ಸಂಸ್ಥೆಯ ಪದಾಧಿಕಾರಿಗಳಾದ ಬಾಗೇಪಲ್ಲಿ ನಟರಾಜು, ಸಂಗಮೇಶ್, ಶಿವಪ್ರಸಾದ್. ಐ.ಎಫ್. ಡಬ್ಲ್ಯೂ. ಜೆ. ಪ್ರಧಾನ ಕಾರ್ಯದರ್ಶಿ ಮಧನ ಗೌಡ,ಕೆ.ಯು. ಡಬ್ಲ್ಯೂ.ಜೆ.ತಾಲ್ಲೂಕು ಅಧ್ಯಕ್ಷರಾದ ಪ್ರಶಾಂತ್ ಕರೀಕೆರೆ,
ಕಲಾಕೃತಿ ಸಂಸ್ಥೆಯ ಪದಾಧಿಕಾರಿಗಳಾದ ಡಿ.ವಿ.ಎಸ್.ಗುಪ್ತ,ಬಿ.ಎಸ್. ಶಿವಪ್ರಸಾದ್, ಜ್ಯೋತಿ ಗಣೇಶ್, ಎ.ಟಿ. ಪ್ರಸಾದ್, ನಿರಂಜನ ಮೂರ್ತಿ, ತಿಪಟೂರು ಕೃಷ್ಣ, ಶೋಭಾ ಜಯದೇವ್, ಪ್ರಭಾ ವಿಶ್ವನಾಥ್ ಮಂಜುಳಾ ತಿಮ್ಮೇಗೌಡ ವೊಡಾಫೋನ್ ಚಂದ್ರು, ತರಕಾರಿ ಗಂಗಾಧರ್, ಕಲ್ಪತರು ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಹಾಗೂ ಮತ್ತಿತರರು ಭಾಗವಹಿಸಿದ್ದರು.

ವರದಿ:ಮಂಜುನಾಥ್ ಹಾಲ್ಕುರಿಕೆ

ಪ್ರಯಾಣಿಕರ ಸೋಗಿನಲ್ಲಿ ಬಸ್ ಗಳಲ್ಲಿ ಪ್ರಯಾಣಿಕರ ಪರ್ಸ್, ಬ್ಯಾಗ್,ಹಾಗೂ ವಸ್ತುಗಳ ಕಳ್ಳವು ಮಾಡುತ್ತಿದ್ದ, ಐನಾತಿ ಕಳ್ಳರ ಹುಳಿಯಾರಯ ಪೊಲೀಸರ ಬಲೆಗೆ ಬಿದ್ದಿದ್ದಾರೆ,
ಪ್ರಯಾಣಿಕರು ಬಸ್ ಹತ್ತುವ ವೇಳೆ ಬಸ್ಸಿನಲ್ಲಿ ಪಿಕ್ ಪಾಕೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಕಳ್ಳಿಯರ ಬಂಧಿಸಿದ್ದು ಒಟ್ಟು ಸಮಾರು 10,05,000/- ಲಕ್ಷ ಬೆಲೆ ಬಾಳುವ ಚಿನ್ನದ ವಡವೆಗಳ ವಶ.
ದಿನಾಂಕ:-09-01-2025 ರಂದು ಬೆಳಗ್ಗೆ ತಿಪಟೂರು ತಾಲ್ಲೂಕು, ಹೊನ್ನವಳ್ಳಿ ಹೋಬಳಿ,
ಗೌಡನಕಟ್ಟೆ ಗ್ರಾಮದ ರಾಜೇಶ್ವರಿ ರವರು ಸಂಬಂಧಿಕರ ಮಗಳ ನಾಮಕರಣಕ್ಕೆ ಹೊಸದುರ್ಗದ
ಮಾಳಪ್ಪನಹಳ್ಳಿಗೆ ಹೋಗಲು ತಿಪಟೂರಿನಿಂದ ಹುಳಿಯಾರಿಗೆ ಬಂದು ಹುಳಿಯಾರಿನಿಂದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಮಾಳಪ್ಪನಹಳ್ಳಿಗೆ ಹೋಗಲು ಹುಳಿಯಾರು ಬಸ್ ಸ್ಟಾಪ್ ನಲ್ಲಿ ಬೆಳಗ್ಗೆ 10.45 ರ ಸಮಯದಲ್ಲಿ ಬಸ್ ಗೆ ಹತ್ತುವ ಸಮಯದಲ್ಲಿ ತಾನು ಬಗಲಿನಲ್ಲಿ ನೇತು ಹಾಕಿಕೊಂಡಿದ್ದ ಬ್ಯಾಗ್ ನಲ್ಲಿದ್ದ ಪರ್ಸನ್ನು ಆದರಲ್ಲಿದ್ದ ಚಿನ್ನದ ವಡವೆಗಳ ಸಮೇತ ಯಾರೋ ಕಳ್ಳರು ಪಿಕ್ ಪಾಕೆಟ್ ಮಾಡಿ ಕದ್ದಿರುತ್ತಾರೆ,

ಈಸಂಬಂಧ ಹುಳಿಯಾರು ಪೊಲೀಸ್ ಠಾಣಾ ಮೊ.ನಂ-35/2025 ಕಲಂ 303 (2) ಬಿ.ಎನ್.ಎಸ್-2023 ರರೀತ್ಯಾ ಪ್ರಕರಣ ದಾಖಲಾಗಿರುತ್ತೆ.ಈ ಕೇಸಿನ ಆರೋಪಿತರನ್ನು ಪತ್ತೆ ಮಾಡಲು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ
ಅಶೋಕ್ ಕೆ.ವಿ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್
ಅಧೀಕ್ಷಕರವರುಗಳಾದ ವಿ.ಮರಿಯಪ್ಪ ಹಾಗೂ ಬಿ.ಎಸ್. ಅಬ್ದುಲ್ ಖಾದರ್ ರವರ ನೇತೃತ್ವದಲ್ಲಿ, ತಿಪಟೂರುಉಪವಿಭಾಗದ ಡಿ.ಎಸ್.ಪಿ. ವಿನಾಯಕ ಎನ್ ಶೆಟಗೇರಿ ರವರ ಮಾರ್ಗ ಸೂಚನೆ ಮೇರೆಗೆ ತಂಡ ರಚಿಸಿದ್ದು,ದಿನಾಂಕ:-27/02/2025 ರಂದು ಈ ಕೆಳಕಂಡ ಆರೋಪಿತರುಗಳನ್ನು ದಸ್ತಗಿರಿ ಮಾಡಿ ವಿಚಾರಣೆಗೆಒಳಪಡಿಸಿದಾಗ ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯ 01 ಪ್ರಕರಣ ಹಾಗೂ ಕಿಬ್ಬನಹಳ್ಳಿ ಕ್ರಾಸ್ ಠಾಣಾವ್ಯಾಪ್ತಿಯ 01 ಪ್ರಕರಣಗಳಲ್ಲಿ ವರದಿಯಾಗಿದ್ದ ಕಳ್ಳತನಗಳಲ್ಲಿ ಭಾಗಿಯಾಗಿರುವುದಾಗಿ ತನಿಖೆಗೆ ಒಳಪಡಿಸಿದಾಗ
ತಿಳಿದು ಬಂದಿರುತ್ತೆ. ಸದರಿ ಆರೋಪಿತರಿಂದ ಒಟ್ಟು 10,05,000/- ಲಕ್ಷ ಬೆಲೆ ಬಾಳುವ 134 ಗ್ರಾಂ ಚಿನ್ನದ,ವಡವೆಗಳನ್ನು ಅಮಾನತ್ತು ಪಡಿಸಿಕೊಂಡು ಕಾನೂನು ರಿತ್ಯಾ ಕ್ರಮ ಕೈಗೊಂಡಿರುತ್ತೆ.
ಆರೋಪಿಗಳ ಹೆಸರು ವಿಳಾಸ

  1. ಅಲುವೇಲಮ್ಮ ತಂದೆ ಲೇಟ್ ವೆಂಕಟೇಶಪ್ಪ, 25 ವರ್ಷ, ಕೂಲಿ ಕೆಲಸ, ಕೊರಟಗೆರೆ ಬೋವಿ
    ಕಾಲೋನಿ ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ. ಹಾಗೂ ಇತರೆ ಆರೋಪಿಗಳನ್ನ ಬಂಧಿಲಾಗಿದ್ದು

  2. ಆರೋಪಿಗಳ ಪತ್ತೆಕಾರ್ಯದಲ್ಲಿ ಶ್ರಮಿಸಿದ ಚಿ.ನಾ.ಹಳ್ಳಿ ವೃತ್ತ ನಿರೀಕ್ಷಕರಾದ ನದಾಫ್ ಎಫ್.ಕೆ, ಹುಳಿಯಾರು ಪೊಲೀಸ್ ಠಾಣೆ ಪಿ.ಎಸ್.ಐ ಧರ್ಮಾಂಜಿ, ಮತ್ತುಸಿಬ್ಬಂದಿಗಳಾದ ದಕ್ಷಿಣಮೂರ್ತಿ ಕೆ.ವಿ, ಚೇತನ್ ಕೆ.ವಿ, ಪಾಂಡುರಂಗಯ್ಯ, ನಾಗಭೂಷಣ್, ರಂಗಸ್ವಾಮಿ
    ಸಿಬ್ಬಂದಿಗಳ ತಂಡವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ ಐ.ಪಿ.ಎಸ್ ರವರು ಅಭಿನಂದಿಸಿದ್ದಾರೆ.

ವರದಿ :ಮಂಜುನಾಥ್ ಹಾಲ್ಕುರಿಕೆ

ತುರುವೇಕೆರೆ, ತಾಲೂಕಿನ ಕೊಡಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸೂಳೆಕೆರೆ ಗ್ರಾಮದಲ್ಲಿ ಪ್ರತಿವರ್ಷದಂತೆ ನಡೆಯುವ ಶ್ರೀ ಭದ್ರಕಾಳಿ ಸಮೇತ ವೀರಭದ್ರೇಶ್ವರ ಜಾತ್ರಾ ಮಹೋತ್ಸವಕ್ಕೆ ಇಂದು ತಹಶೀಲ್ದಾರ್ ಅಹಮದ್ ಇವರ ನೇತೃತ್ವದಲ್ಲಿ ತಾಲೂಕು ಕಚೇರಿಯಲ್ಲಿ ಮುಜರಾಯಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಗುಡಿ ಗೌಡರ ಮತ್ತು ಗ್ರಾಮಸ್ಥರ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು,

ಇದೇ ಸಂದರ್ಭದಲ್ಲಿ ಫೆಬ್ರವರಿ 18ರಂದು ಶ್ರೀ ಭದ್ರಕಾಳಿ ಸಮೇತ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಆಚರಣೆಗೆ ದಿನಾಂಕ ನಿಗದಿ ಮಾಡಿದ್ದು ಪೂರ್ವಭಾವಿ ಸಭೆಯ ಎಲ್ಲರ ಸಮ್ಮುಖದಲ್ಲಿ ತೀರ್ಮಾನ ಕೈಗೊಂಡಂತೆ ಜಾತ್ರಾ ಮಹೋತ್ಸವವನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಜರಾಯಿ ಇಲಾಖೆಯ ಅಧಿಕಾರಿ ಸಿಬ್ಬಂದಿಗಳ ಮತ್ತು ಪೊಲೀಸ್ ಇಲಾಖೆಯ ಉಪಸ್ಥಿತಿಯಲ್ಲಿ ನಡೆಸಲಾಗುವುದು ಇನ್ನು ಜಾತ್ರಾ ಮಹೋತ್ಸವ ನಡೆಯುವ ಗ್ರಾಮದಲ್ಲಿ ಯಾವುದೇ ಲೋಪದೋಷಗಳಿಲ್ಲದೆ ಶ್ರೀ ಭದ್ರಕಾಳಿ ಸಮೇತ ವೀರಭದ್ರೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಗ್ರಾಮಸ್ಥರ ಎರಡು ಬಣಗಳ ಜಿದ್ದಾಜಿದ್ದಿನ ವೈ ಮನಸನ್ನು ದೂರ ಮಾಡಿ ಎಲ್ಲರೂ ಒಟ್ಟುಗೂಡಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಬೇಕು,ಗ್ರಾಮದಲ್ಲಿ ಶಾಂತಿ ಕದಡಲು ಯಾರೇ ಪ್ರಯತ್ನಿಸಿದರು ನಿರ್ಧಾಕ್ಷಣ್ಯ ಕ್ರಮಕೈಗೊಳ್ಳಲಾಗುವುದು, ಎಲ್ಲಾ ಉತ್ತಮವಾಗಿ ಜಾತ್ರೆ ನಡೆಯಲು ತಾಲ್ಲೋಕು ಆಡಳಿತದೊಂದಿಗೆ ಕೈ ಜೋಡಿಸಿ ಎಂದರು, ಸಭೆಯಲ್ಲಿ ಉಪಸ್ಥಿತರಿದ, ತುರುವೇಕೆರೆ ಸರ್ಕಲ್ ಇನ್ಸ್ಪೆಕ್ಟರ್ ಲೋಹಿತ್ ಮಾತನಾಡಿ ಪ್ರತಿಯೊಂದು ಗ್ರಾಮದಲ್ಲಿ ಊರ ಹಬ್ಬವನ್ನು ಆಚರಣೆ ಮಾಡುತ್ತೇವೆ ಆ ಹಬ್ಬಕ್ಕೆ ಒಂದು ಇತಿಹಾಸ ಹಾಗೂ ಸಂಪ್ರದಾಯಗಳ ನೆಲೆ ಇರುತ್ತದೆ, ತಮ್ಮ ತಮ್ಮ ಮನೆಯ ಹೆಣ್ಣು ಮಕ್ಕಳು ನೆಟ್ಟರಿಷ್ಟರು,ಬಂಧುಗಳು ಕುಟುಂಬದ ಸದಸ್ಯರೊಂದಿಗೆ ಸೇರಿ ವಷಕೊಮ್ಮೆ ನಡೆಯುವ ಇಂತಹ ಅರ್ಥಪೂರ್ಣವಾದ ಜಾತ್ರಾ ಮಹೋತ್ಸವದಲ್ಲಿ ಖುಷಿಯಿಂದ ಆಚರಿಸುವ ಹಬ್ಬ ಆಗಿರುತ್ತೆ, ಇಂತಹ ಹಬ್ಬಗಳು ಇರುವಂತಹ ಸಂದರ್ಭದಲ್ಲಿ ಗ್ರಾಮಗಳಲ್ಲಿ ವಾಸಿಸುವ ಕೆಲ ಗ್ರಾಮಸ್ಥರು ಕೆಲವು ಸಂದರ್ಭದಲ್ಲಿ ತಮ್ಮ ತಮ್ಮ ವೈಯಕ್ತಿಕ ವಿಷಯಗಳನ್ನ ಮುಂದಿಟ್ಟುಕೊಂಡು ಯಾವುದೇ ದ್ವೇಷ, ಅಸೂಹೆ,ಯಿಂದ ದ್ವೇಷ ಬಿತ್ತುವ ಕೆಲಸ ಮಾಡಬಾರದು, ಅಹಿತಕರ ಘಟನೆಗಳು ನಡೆಯದಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ.ನಿಮ್ಮ ಊರಿಗೆ ಕೆಟ್ಟ ಹೆಸರುಬಾರದ ರೀತಿ ಜಾತ್ರಾ ಮಹೋತ್ಸವವನ್ನು ಆಚರಿಸಿಕೊಂಡು ಹೋಗಬೇಕು ಜೊತೆಗೆ ಇಂತಹ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಜಾತ್ರಾ ಮಹೋತ್ಸವ ನಡೆಯುವ ವೇಳೆ ಪೊಲೀಸರೊಂದಿಗೆ ಕೈಜೋಡಿಸಿ ಯಾವುದೇ ರೀತಿಯ ಅಡೆತಡೆಗಳಾಗದಂತೆ ಒಗ್ಗಟ್ಟಿನಲ್ಲಿ ಊರ ಹಬ್ಬಗಳನ್ನು ಆಚರಿಸಬೇಕೆಂದು ಹೇಳಿದರು, ಇದೆ ವೇಳೆ ಶ್ರೀ ಭದ್ರಕಾಳಿ ಸಮೇತ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಉಸ್ತುವಾರಿಯನ್ನ ಯಾರ ಮುಂದಾಳತ್ವದಲ್ಲಿ ನಡೆಸಬೇಕು ಎಂಬ ಆಯ್ಕೆ ಪ್ರಕ್ರಿಯೆಯಲ್ಲಿ ಸುಮಾರು 20 ಹೆಸರನ್ನು ಒಂದು ಡಬ್ಬಿಯಲ್ಲಿ ಹಾಕಿ ಚೀಟಿ ಎತ್ತುವುದರ ಮೂಲಕ ಆಯ್ಕೆ ಮಾಡಲಾಯಿತು. ಈ ಆಯ್ಕೆ ಪ್ರಕ್ರಿಯೆಯಲ್ಲಿ ಸೂಳೆಕೆರೆ ಗ್ರಾಮದ ಹಿರಿಯ ಸಮಾಜಸೇವಕ ಗ್ರಾಮದ ಹಿತಚಿಂತಕ ಎಂದೆ ಖ್ಯಾತಿ ಪಡೆದಿರುವ ಸೂಳೆಕೆರೆ ಗ್ರಾಮದ ಶಂಕರೇಗೌಡ ಇವರ ಹೆಸರು ಬಂದಿದ್ದು ಅವರ ಮೇಲ್ವಿಚಾರಣೆಯಲ್ಲಿ ವಿಜೃಂಭಣೆಯಿಂದ ಜಾತ್ರೆ ನಡೆಸಲು ತೀರ್ಮಾನಿಸಲಾಯಿತು.

ವರದಿ, ಮಂಜುನಾಥ್ ಕೆ ಎ ತುರುವೇಕೆರೆ.

ತುರುವೇಕೆರೆ, :ತಾಲೂಕಿನ ತೊರೆಮಾವಿನಹಳ್ಳಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಮನೆ ಮುಂದೆ ಮಲಗಿದ್ದ ನಾಯಿಯನ್ನು ಚಿರತೆ ಒತ್ತೊಯ್ದ ಘಟನೆ ನಡೆದಿದೆ

, ತೊರೆಮಾವಿನಹಳ್ಳಿ ಗ್ರಾಮದ ಶಂಕ್ರಯ್ಯ ಎಂಬುವರ ಮನೆ ಮುಂದೆ ನಿನ್ನೆ ತಡರಾತ್ರಿ ಮಲಗಿದ್ದ ನಾಯಿಯನ್ನು ಚಿರತೆ ಒತ್ತೊಯ್ದಿದ್ದು ಇದರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಗ್ರಾಮಸ್ಥರಲ್ಲಿ ಆತಂಕವು ಸಹ ಹೆಚ್ಚಾಗಿದೆ ಇದೇ ಗ್ರಾಮದ ಸುತ್ತಮುತ್ತ ಕೆಲ ದಿನಗಳ ಹಿಂದೆ ಚಿರತೆ ಕಾಣಿಸಿಕೊಂಡಿದ್ದು ಗ್ರಾಮಕ್ಕೆ ಬಂದು ಮನೆಯ ಮುಂದೆ ಮಲಗಿದ್ದ ನಾಯಿಯನ್ನು ಒತ್ತೊಯ್ದಿದೆ, ಈ ಘಟನೆ ತುರುವೇಕೆರೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು ಈಗಾಗಲೇ ಗ್ರಾಮಸ್ಥರು ಇದಕ್ಕೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದು ಅರಣ್ಯ ಇಲಾಖೆ ಚಿರತೆಯನ್ನು ಸೆರೆಹಿಡಿದು ಗ್ರಾಮಸ್ಥರ ಆತಂಕಕ್ಕೆ ತೆರೆ ಎಳೆಯುತ್ತಾರ ಕಾದುನೋಡಬೇಕು, ಒಟ್ಟಾರೆ ನೆನ್ನೆ ತಡ ರಾತ್ರಿ ಗ್ರಾಮಕ್ಕೆ ಚಿರತೆಯೊಂದು ಬಂದು ನಾಯಿಯನ್ನು ಹೊತ್ತೊಯ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿ ಮನೆಯಿಂದ ಹೊರಬರಲು ಭಯಪಡುವಂತಹ ಸ್ಥಿತಿಯಂತು ನಿರ್ಮಾಣವಾಗಿದೆ.

ವರದಿ,ಮಂಜುನಾಥ್ ಕೆ ಎ ತುರುವೇಕೆರೆ.

ಬೆಳ್ಳಂಬೆಳ್ಳಗ್ಗೆ ಪೊಲೀಸ್ ಕ್ವಾಟ್ರಸ್ ಪಕ್ಕದಲ್ಲೆ ಮಹಿಳೆಯೋರ್ವಳ ಸರಗಳ್ಳತನಕ್ಕೆ,ಮನೆಯ ಹಿಂಬದಿಯಿಂದ ಬಂದು ಸರಗಳ್ಳತನಕ್ಕೆ ಯತ್ನಿಸಿ ಮಹಿಳೆಕೂಗಾಟ,ಕೇಳಿ ಸಾರ್ವಜನಿಕರು ಬಂದಾಗ ಮಹಿಳೆಯನ್ನ ತಳ್ಳಿ ಕಳ್ಳ ಪಾರಾರಿಯಾಗಿರುವ ಘಟನೆ ನಗರದ ಅರಣ್ಯ ಇಲಾಖೆ ಕ್ವಾಟ್ರಸ್ ನಲ್ಲಿ ನಡೆದಿದೆ.


ತಿಪಟೂರು ನಗರದ ಹೆಚ್ಚು ಸುರಕ್ಷಿತ ಪ್ರದೇಶ ಎಂದೇ ಪರಿಗಣಿಸಿರುವ ಒಂದೆಡೆ, ಪೊಲೀಸ್ ಇಲಾಖೆ, ಕ್ವಾಟ್ರಸ್,ಇನ್ನೋದೆಡೆ, ನ್ಯಾಯಲಯ ಸಮುಚ್ಚಯ, ತಾಲ್ಲೋಕು ಆಡಳಿತ ಸೌಧ ಹಾಗೂ ಸ್ಪಲ್ಪದೂರದಲ್ಲಿಯೇ ಹಲವಾರು ಇಲಾಖೆಗಳ ಕಚೇರಿ ಹೊಂದಿರುವ ಪ್ರಮುಖ ಸ್ಥಳವಾದ ಅರಣ್ಯ ಇಲಾಖೆಯ ಕ್ವಾಟ್ರಸ್ ಬಳಿ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರ ಪತ್ನಿ ಸೌಮ್ಯ ಎಂಬುವವರ ಸರಕಳ್ಳ ತನಕ್ಕೆ ಯತ್ನಿಸಲಾಗಿದೆ,
ಬೆಳಗ್ಗೆ ತನ್ನ ಮನೆಯ ಅಡುಗೆ ಕೋಣೆಯಲ್ಲಿ ಸೌಮ್ಯ ಅಡುಗೆ ಮಾಡುತ್ತಿದ್ದಾಗ, ಮನೆಹಿಂಬದಿಯಿಂದ ಯಾರೋ ಮುಸುಕುದಾರಿ, ಹಾದುಹೋಗಿರುವುದು,ಕಂಡಿದೆ, ನಮ್ಮ ಮನೆಹಿಂಭಾಗ ಯಾರು ಹೋಗುತ್ತಿರ ಬಹುದೆಂದು ಅನುಮಾನಗೊಂಡ ಮಹಿಳೆ ಮನೆಹಿಂಬದಿಹೋಗಿ ನೋಡಿದ್ದಾಗ, ಮನೆಹಿಂದೆ ಇಟ್ಟಿದ ಡ್ರಮ್ ಹಿಂಬಾಗ ಅವಿತುಕುಳಿತ್ತಿದ,ಮುಸುಕುದ್ದಾರಿ,ಕಳ್ಳ, ಮಹಿಳೆಯ ಕತ್ತಿಗೆ ಕೈ ಹಾಕಿ ಕೊರಳಿನಲ್ಲಿ ಇದ್ದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಳ್ಳಲು,ಯತ್ನಿಸಿದ್ದು, ಮಹಿಳೆ ಸರವನ್ನ ಕೈಯಲ್ಲಿ ಬೀಗಿಯಾಗಿ ಹಿಡಿದು, ಜೋರಾಗಿ ಕೂಗಿಕೊಂಡಾಗ, ಮುಸುಕುದಾರಿ ಕಳ್ಳ ಮಹಿಳೆಯನ್ನ ಜೋರಾಗಿ ತಳ್ಳಿದ್ದಾನೆ, ಅಷ್ಟರಲ್ಲಿ ಅಕ್ಕಪಕ್ಕದ ಮನೆಯವರು ಬಂದಿದ್ದನ್ನ ಗಮನಿಸಿ,ಕಳ್ಳ ಓಡಿಹೋಗಿದ್ದಾನೆ,ಸಾರ್ವಜನಿಕರು ಎಲ್ಲಾಕಡೆ ಹುಡುಕಿದರು ಸಿಕ್ಕಿಲ್ಲ,ತಕ್ಷಣ,ಈ ಬಗ್ಗೆ ತಿಪಟೂರು ನಗರಪೊಲೀಸ್ ಠಾಣೆಗೆ ದೂರು ನೀಡಲಾಗಿದೆ,
ತಿಪಟೂರಿನಲ್ಲಿ ಸರಗಳ್ಳರು ಹಾಗೂ ಮನೆಗಳ್ಳರ ಹಾವಳಿ ಹೆಚ್ಚಾಗಿದ್ದು ಪೊಲೀಸ್ ಇಲಾಖೆ ಕಠಣಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವರದಿ :ಮಂಜುನಾಥ್ ಹಾಲ್ಕುರಿಕೆ

ತುಮಕೂರು ಜಿಲ್ಲೆ ತಿಪಟೂರು ತಾಲ್ಲೋಕಿನ ಜನರ ಬಹುನಿರೀಕ್ಷಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಕಳಪೆಕಾಮಗಾರಿ ಕಂಡುಬಂದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ

.ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ,ತುಮಕೂರಿನಿಂದ ಹೊನ್ನಾವಾರದ ವರೆಗೆ ನಡೆಯುತ್ತಿರುವ ಸುಮಾರು 250 ಕೋಟಿಗೂ ಹೆಚ್ಚು ಹೆಚ್ಚದ ಕಾಮಗಾರಿಯಲ್ಲಿ ಕಳೆಪೆಕಾಮಗಾರಿಯ ಆರೋಪಗಳು ಕೇಳಿಬಂದಿವೆ, ಸಾರ್ವಜನಿಕರ ಆರೋಪಕ್ಕೆ ಇಂಬು ನೀಡುವಂತ್ತೆ ತಿಪಟೂರು ತಾಲ್ಲೋಕಿನ ಹಾಲ್ಕುರಿಕೆ ರಸ್ತೆಯ ಟಿ.ಎಂ ಮಂಜುನಾಥ್ ನಗರ ಬಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ರಸ್ತೆ ಕುಸಿದ್ದಿದ್ದು, ವಾಹನ ಸವಾರರಿಗೆ ಆತಂಕ ಉಂಟುಮಾಡಿದೆ,ಕಾಮಗಾರಿ ನಿರ್ಮಾಣವಾಗಿ ಕೇವಲ ಆರು ತಿಂಗಳು ಕಳೆಯುವ ಒಳಗಾಗಿಯೇ, ರಸ್ತೆಯಲ್ಲಿ ಕುಸಿತವಾಗಿರುವುದು, ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ.ಕೇವಲ 4ಇಂಚು ಕಾಂಕ್ರೇಟ್ ಹಾಕಿದ್ದು 12 ಎಂ.ಎಂ ಕಬ್ಬಿಣ ಬಳಸಲಾಗಿದೆ,ಕಳಪೆಕಾಮಗಾರಿಗೆ ಸಾಕ್ಷಿಎನ್ನ ಬಹುದು, ಅಲ್ಲದೆ ಹೆದ್ದಾರಿಯಲ್ಲಿ ಕುಸಿತವಾಗಿರುವ ಸ್ಥಳದ ಪಕ್ಕದಲ್ಲೆಯೇ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಇದ್ದು ಭಾರೀ ವಾಹನಗಳು ಸಂಚರಿಸುವಾಗ ಬ್ರಿಡ್ಜ್ ಕಂಪನವಾಗುತ್ತದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದು, ಮೂರ್ನಾಲ್ಕು ಕಡೆ ರಸ್ತೆ ಕುಸಿತವಾಗಿರುವ ಕಾರಣ ಹೆದ್ದಾರಿ ಗುತ್ತಿಗೆದಾರರು ತಾತ್ಕಾಲಿಕ ತೇಪೆಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ.ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿರುವ ಕಾಮಗಾರಿಯಲ್ಲಿ ಕಳಪೆ ಕಾಮಗಾರಿಯ ವಾಸನೆ ಕಂಡುಬಂದಿದ್ದು,

ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಟೋಲ್ ಸಂಗ್ರಹಕ್ಕೆ ಮುಂದಾಗಿರುವ ಏಜನ್ಸಿಗಳು,ಕಾಮಗಾರಿ ಕಳೆಪೆಯಾಗಿದದರೂ,ಯಾವುದೇ ತಲೆಕೆಡಿಸಿಕೊಂಡಿಲ್ಲ, ಅಲ್ಲದೇ ಪ್ರತಿದಿನ ನೂರಾರು 10ವೀಲರ್,12ವೀಲರ್ ಗೂ ಹೆಚ್ಚಿನ ಭಾರೀ ಗಾತ್ರದ ವಾಹನಗಳು ಸಂಚರಿಸುವುದರಿಂದ, ಕಳಪೆಕಾಮಗಾರಿಯಿಂದ ಯಾವ ಅನಾಹುತವಾಗುವುದೊ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.ಸರ್ಕಾರ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೂಡಲೇ ಸ್ಥಳ ತನಿಖೆ ಮಾಡಿ, ಪ್ರಗತಿಯಲ್ಲಿರುವ ಕಾಮಗಾರಿ ಪರಿಶೀಲನೆ ಮಾಡಬೇಕು ಹಾಗೂ ಕಳಪೆಕಾಮಗಾರಿ ಕಂಡುಬಂದರೆ ಕೂಡಲೆ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ

ವರದಿ :ಮಂಜುನಾಥ್ ಹಾಲ್ಕುರಿಕೆ

ತುಮಕೂರು ಜಿಲ್ಲೆ ತಿಪಟೂರು ತಾಲ್ಲೋಕಿನ ಕಸಬಾ ಹೋಬಳಿ ರಂಗಾಪುರ ಗ್ರಾಮದ ಪ್ರಾಥಮಿಕ ಕೃಷಿ ಸಹಕಾರ ಸಂಘದ ಬೀಗ ಮುರಿದು ಒಳನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಹಣ ಹಾಗೂ ದಾಖಲೆಗಳನ್ನ ಕಳ್ಳವು ಮಾಡಿರುವ ಘಟನೆ ನಡೆದಿದೆ.

ರಾತ್ರಿ 1.00 ರಿಂದ 2 ಗಂಟೆಯ ಸಮಯದಲ್ಲಿ ಬಾಗಿಲನ್ನು ಗ್ಯಾಸ್ ಕಟ್ಟರ್ ನಿಂದ ಮುರಿದು ಬ್ಯಾಂಕ್ ಒಳಗೆ ನುಗ್ಗಿ ಸಿಸಿಟಿವಿಯ ಡಿವಿಯರ್, ಖಜಾನೆಯಲ್ಲಿದ್ದ ಒಂದು ಲಕ್ಷದ ಐವತ್ತು ಸಾವಿರ ರೂಪಾಯಿಗಳನ್ನು ತೆಗೆದುಕೊಂಡು, ದಾಖಲೆಗಳ ಪುಸ್ತಕವನ್ನು ಚೆಲ್ಲಾಡಿ ಕಳ್ಳತನ ಮಾಡಿದ್ದಾರೆ.


ಸ್ಥಳಕ್ಕೆ ತಿಪಟೂರು ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ,ಗ್ರಾಮಾಂತರ ವೃತ್ತ ನಿರೀಕ್ಷಕರಾದ ರವಿಕುಮಾರ್ ಸ್ಥಳಪರಿಶೀಲನೆ ಮಾಡಿದ್ದು,

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ,

ವರದಿ :ಮಂಜುನಾಥ್ ಹಾಲ್ಕುರಿಕೆ

ತುಮಕೂರು ಜಿಲ್ಲೆ ತಿಪಟೂರು ತಾಲ್ಲೋಕಿನ ಕಸಬಾ ಹೋಬಳಿ ರಂಗಾಪುರ ಗ್ರಾಮದ ಪ್ರಾಥಮಿಕ ಕೃಷಿ ಸಹಕಾರ ಸಂಘದ ಬೀಗ ಮುರಿದು ಒಳನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಹಣ ಹಾಗೂ ದಾಖಲೆಗಳನ್ನ ಕಳ್ಳವು ಮಾಡಿದ್ದಾರೆ.

ರಾತ್ರಿ 1.00 ರಿಂದ 2 ಗಂಟೆಯ ಸಮಯದಲ್ಲಿ ಬಾಗಿಲನ್ನು ಗ್ಯಾಸ್ ಕಟ್ಟರ್ ನಿಂದ ಮುರಿದು ಬ್ಯಾಂಕ್ ಒಳಗೆ ನುಗ್ಗಿ ಸಿಸಿಟಿವಿಯ ಡಿವಿಯರ್, ಖಜಾನೆಯಲ್ಲಿದ್ದ ಒಂದು ಲಕ್ಷದ ಐವತ್ತು ಸಾವಿರ ರೂಪಾಯಿಗಳನ್ನು ತೆಗೆದುಕೊಂಡು, ದಾಖಲೆಗಳ ಪುಸ್ತಕವನ್ನು ಚೆಲ್ಲಾಡಿ ಕಳ್ಳತನ ಮಾಡಿದ್ದಾರೆ.


ಸ್ಥಳಕ್ಕೆ ತಿಪಟೂರು ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ,ಗ್ರಾಮಾಂತರ ವೃತ್ತ ನಿರೀಕ್ಷಕರಾದ ರವಿಕುಮಾರ್ ಸ್ಥಳಪರಿಶೀಲನೆ ಮಾಡಿದ್ದು,

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ,

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!