Month: December 2024

ತುಮಕೂರು ಜಿಲ್ಲೆ ತಿಪಟೂರು ಶ್ರೀಸತ್ಯಗಣಪತಿ ಗಣೇಶೋತ್ಸವ ಐತಿಹಾಸಿಕ ಜಾತ್ರಾ ಕಾರ್ಯಕ್ರಮವಾಗಿದ್ದು ನಾಡಿದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ, ಜಾತ್ರೆಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್,ಸೇರಿದಂತೆ ಹಲವುಕಡೆ , ಕಲರ್ ಮಿಶ್ರಿತ ಬಣ್ಣ ಬಣ್ಣದ ಗೋಬಿ ಮಂಚೂರಿ,ಕಲರ್ ಕ್ಯಾಂಡಿ , ಬಾಂಬೆ ಫುಡ್ ಸ್ಟಲ್ ನಲ್ಲಿ ಮಾರಾಟ ಮಾಡುವ, ಆಲೂಕಬಾಬ್,ಬೋಡ,ಪಾಪ್ಕಾನ್,ಪಾಪಡ್,ಸೇರಿದಂತೆ ಆಹಾರ ಪದಾರ್ಥಗಳನ್ನ ಕಳೆಪೆಗುಣಮಟ್ಟದ ವಸ್ತುಗಳನ್ನ ಉಪಯೋಗಿಸಿ ತಯಾರಿಸಲಾಗುತ್ತದೆ,ಸ್ಟಾಲ್ ಗಳಲ್ಲಿ ಬಳಸುವ ಅಡುಗೆ ಎಣ್ಣೆಯೇ ಕಳಪೆಗುಣಮಟ್ಟದಿಂದ ಕೂಡಿರುತ್ತದೆ, ಆದರಿಂದ ನಗರಸಭೆ ಅಧಿಕಾರಿಗಳು ಆಹಾರ ಸುರಕ್ಷತೆಗೆ ಹೆಚ್ಚಿನ ಆಧ್ಯತೆ ವಹಿಸಬೇಕು, ಕಳೆದ ವರ್ಷದ ಜಾತ್ರಾಮಹೋತ್ಸವದಲ್ಲಿ ಕಳಪೆಗುಣಮಟ್ಟದ ಆಹಾರ ಪದಾರ್ಥಗಳು ಮಾರಾಟ ಮಾಡುತ್ತಿರುವ ಬಗ್ಗೆ ನಗರಸಭೆ ಅನೇಕ ದೂರುಗಳು ಬಂದಿದ್ದು, ಅಧಿಕಾರಿಗಳು ಮಾತ್ರ ಜಾಣಕುರುಡುತನ ಪ್ರದರ್ಶನ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.


ಆರೋಗ್ಯ ಇಲಾಖೆಯ ಅಧಿಕಾರಿಗಳು ಅಮ್ಯೂಸ್ ಮೆಂಟ್ ಪಾರ್ಕ್ ಸೇರಿದಂತೆ ಜಾತ್ರೆಯಲ್ಲಿ ಮಾರಾಟ ಮಾಡಲಾಗುವ ವಸ್ತುಗಳ ಗುಣಮಟ್ಟ ಪರೀಕ್ಷೆ ಮಾಡಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.
ಮೊನ್ನೆ ಶಾಸಕ ಕೆ.ಷಡಕ್ಷರಿಯವರ ನೇತೃತ್ವದಲ್ಲಿ ನಡೆದ ಶ್ರೀಸತ್ಯಗಣಪತಿ ವಿಸರ್ಜನಾ ಮಹೋತ್ಸವ ಶಾಂತಿ ಸಭೆಯಲ್ಲಿಯೂ ಸಹ ನಗರಸಭೆ ಸದಸ್ಯರಾದ ಡಾ// ಓಹೀಲಾ ಗಂಗಾಧರ್ , ಕಳಪೆಗುಣಮಟ್ಟದ ವಸ್ತುಗಳ ಮಾರಾಟದ ಮೇಲೆ ನಿಗವಹಿಸಲು ಒತ್ತಾಯಿಸಿದರು. ಭಕ್ತಿಭಾವದಿಂದ ಖುಷಿಯಾಗಿ ಜಾತ್ರೆಗೆ ಬರುವ ಜನರಿಗೆ, ಕಳಪೆ ಆಹಾರದಿಂದ ಆರೋಗ್ಯ ಹಾಳಾದಬಾರದು, ಈ ನಿಟ್ಟಿನಲ್ಲಿ ನಗರಸಭೆ ಕ್ರಮವಹಿಸಬೇಕು

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು ನಗರದ ಕಲ್ಪತರು ಮಾಂಟಸರಿ ಶಾಲೆ ಮುಂಭಾಗ ರಾಷ್ಟ್ರೀಯ ಹೆದ್ದಾರಿ 206 ರಸ್ತೆಯಲ್ಲಿ ದಿನಾಂಕ 26-11-2019ರಂದು ಪೂಜಾ ಎಂಬುವವರು ತಮ್ಮ ಹೋಂಡಾ ಆಕ್ಟೀವಾ ಗಾಡಿಯಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಬಂದ NL01AC3803 ಲಾರಿ ಚಾಲಕ ನರಸಿಂಹಪ್ಪ ಅತಿವೇಗ ಅಜಾಗರೂಕತೆಯಿಂದ ಲಾರಿಚಾಲಯಿಸಿಕೊಂಡು ಬಂದು ಹೋಡಾ ಆಕ್ಟೀವಾಗೆ ಡಿಕ್ಕಿ ಹೊಡೆದ ಪರಿಣಾಮ,ಆಕ್ಟೀವಾ ದಲ್ಲಿತೆರಳುತ್ತಿದ್ದ, ಹಿಂಬದಿ ಸವಾರರಾದ ಭಾಗ್ಯಶ್ರೀ ಬಿ.ಎಸ್ ಕೆಳಕ್ಕೆ ಬಿದ್ದು , ಭಾಗ್ಯಶ್ರೀ ತಲೆ ಹಾಗೂ ಎದೆ ಮೇಲೆ ಲಾರಿ ಹರಿದ ಪರಿಣಾಮ, ಮಹಿಳೆ ಸ್ಥಳದಲ್ಲೇ ಮೃತಪಟ್ಟಿದರೂ, ಹೋಡಾ ಆಕ್ಟೀವಾ ಬೈಕ್ ಚಾಲಯಿಸುತ್ತಿದೆ ಪೂಜಾ ಗೆ ರವರು,ಕೆಳಕ್ಕೆ ಬಿದ್ದುಬಲಭಾಗದ ಮಂಡಿ,ಎಡಭುಜಕ್ಕೆ ತೀವ್ರಪೆಟ್ಟಾದ ಕಾರಣ,ಭಾರತೀಯ ದಂಡಸಂಹಿತೆ,279.337.304(ಎ)ಪ್ರಕಾರ ಪ್ರಕರಣದಾಖಲಿಸಿ ತನಿಖೆ ನಡೆಸಲಾಗಿದ್ದು,ತನಿಖೆ ನಡೆಸಿದ,ತಿಪಟೂರು ನಗರಠಾಣೆ ತನಿಖಾಧಿಕಾರಿ,ಸಿ.ಎ ನವೀನ್ ದೋಷಾರೋಪಪಟ್ಟಿ ಸಲ್ಲಿಸಿದರು.ಸಾಕ್ಷಿ ಪುರಾವೆಗಳನ್ನ ಪರಿಶೀಲನೆ ಮಾಡಿ,ವಿಚಾರಣೆ ನಡೆಸಿದ. ತಿಪಟೂರು ಹಿರಿಯ ದಿವಾನಿ&ಜೆಎಂಎಫ್ ಸಿ ನ್ಯಾಯಾಧೀಶರಾದ ಸಿ.ಎಫ್ ಅರೀಪ್ ಉಲ್ಲಾ,ಪ್ರಕರಣದ ಆರೋಪಿತನಾದ ಬಾಗೇಪಲ್ಲಿ ತಾಲ್ಲೋಕು ಗುಟ್ಟಮೇಂಪಲ್ಲಿ ಗ್ರಾಮದ ನರಸಿಂಹಪ್ಪ.ಸಿ ಎಂಬುವವರಿಗೆ 6ತಿಂಗಳ ಜೈಲು ಶಿಕ್ಷೆ ಹಾಗೂ 6500ರೂಪಾಯಿ ದಂಡ ವಿದಿಸಿ,ತೀರ್ಪನೀಡಿರುತ್ತಾರೆ.
ಸರ್ಕಾರಿ ಅಭಿಯೋಜಕರಾಗಿ ಶಿವಬಸಪ್ಪ ಎಸ್ ಹುಕ್ಕೆರಿ ವಾದಮಂಡಿಸಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು: ಮೊಬೈಲ್ ಕೇವಲ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ವಸ್ತುವಾಗ ಬೇಕೇ ಹೊರತು, ಮಾರಕ ವಸ್ತುವಾಗಬಾರದು ವಿದ್ಯಾರ್ಥಿಗಳು ಮೊಬೈಲ್ ಅನ್ನು ಪಕ್ಕಕ್ಕಿಟ್ಟು ಪುಸ್ತಕ ಹಿಡಿದು ಓದಬೇಕು. ಯಾವುದಾದರೂ ಸರಿಯೇ ಒಳ್ಳೆಯದನ್ನು ಕಲಿಯಬೇಕು ಎಂದು ಪ್ರಸಿದ್ಧ ರಂಗಭೂಮಿ ಕಲಾವಿದರು ಮತ್ತು ಕೇಂದ್ರಸಾಹಿತ್ಯ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತರಾದ ಡಾ|| ಲಕ್ಷ್ಮಣ ದಾಸ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಿಪಟೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2024-25 ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ, ಎನ್.ಎಸ್.ಎಸ್., ಎನ್. ಸಿ. ಸಿ., ದಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಯುವ ರೆಡ್ ಕ್ರಾಸ್, ರೆಡ್ ರಿಬ್ಬನ್, ಐ ಕ್ಯೂ ಎ ಸಿ ಮತ್ತು ಇತರೆ ಘಟಕಗಳ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ನೀವೆಲ್ಲರೂ ತಾಯಿಗೆ ಹೆಚ್ಚು ಗೌರವ ಕೊಡಬೇಕು. ವಿದ್ಯಾರ್ಥಿಗಳು ಚೆನ್ನಾಗಿ ಓದಿ ಬಹಳ ಎತ್ತರಕ್ಕೆ ಎತ್ತರಕ್ಕೆ ಬೆಳೆದಷ್ಠು ಜನರು ನಿಮ್ಮ ಹತ್ತಿರ ಹಗುತ್ತಾ ಬಸವಣ್ಣನವರ ವಚನಗಳನ್ನು ಹಾಗೂ ಪುರಂದರದಾಸರ ಕೀರ್ತನೆಗಳನ್ನು ಕಲಿಯಬೇಕು. ಪ್ರಸಿದ್ಧ ಹಾಸ್ಯ ನಟರಾದ ನರಸಿಂಹ ರಾಜು ಅವರು ಈ ಕ್ಷೇತ್ರದವರೇ. ಇಂತಹ ಹಲವಾರು ಕಲಾವಿದರು ಈ ನಾಡಿನಲ್ಲಿ ಹುಟ್ಟಿದ್ದಾರೆ. ಅವರನ್ನೊಮ್ಮೆ ಸ್ಮರಿಸಬೇಕು. ಕಾಲೇಜಿನಲ್ಲಿ ಉತ್ತಮವಾಗಿ ಪಾಠ ಮಾಡುವ ಶಿಕ್ಷಕ ವೃಂದವಿದೆ ಎಂದರು.

ಕಾರ್ಯಕ್ರಮದ ಉದ್ಘಾಟನೆಮಾಡಿದ ತಿಪಟೂರಿನ ನಗರಸಭೆಯ ಅಧ್ಯಕ್ಷರಾದ ಯಮುನಾ ಧರಣೇಶ್ ಮಾತನಾಡಿ ಜ್ಞಾನವನ್ನು ಬಯಸುವವನೇ ನಿಜವಾದ ವಿದ್ಯಾರ್ಥಿ. ವಿದ್ಯಾರ್ಥಿಯು ತನ್ನ ಜ್ಞಾನ ಹೆಚ್ಚಿಸುವ ವಿಷಯದ ಕಡೆ ಗಮನಹರಿಸಬೇಕು. ವಿದ್ಯಾರ್ಥಿಗಳಲ್ಲಿ ಪ್ರಮುಖವಾಗಿ ಐದು ಗುಣಗಳಿರಬೇಕು. ಪರಿಶ್ರಮ, ಫೋಕಸ್, ಅಲರ್ಟ್ನೆಸ್, ಈಟ್ಲೆಸ್ ಮತ್ತು ಗೃಹತ್ಯಾಗಿ ಎಂಬ ಐದು ಗುಣಗಳು ಒಬ್ಬ ವ್ಯಕ್ತಿಯನ್ನು ಉತ್ತಮ ವಿದ್ಯಾರ್ಥಿಯನ್ನಾಗಿ ರೂಪಿಸಲು ಸಹಾಯ ಮಾಡುತ್ತವೆ. ವಿದ್ಯಾರ್ಥಿಗಳು ಓದುವುದರ ಕಡೆ ಮನಸ್ಸನ್ನು ಕೇಂದ್ರೀಕರಿಸಬೇಕು. ಸಾಧ್ಯವಾದಷ್ಟು ಮನೆಯಿಂದ ಹೊರಗಿದ್ದು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಬೇಕು. ಸುತ್ತಮುತ್ತ ಇರುವ ವ್ಯಕ್ತಿಗಳ ಬಗ್ಗೆ ಜಾಗರೂಕತೆಯಿಂದ ಇರಬೇಕು. ವಿದ್ಯಾರ್ಥಿಗಳು ಪಟ್ಟದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸುವುದು ಉತ್ತಮ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊಫೆಸರ್ ಡಾ|| ಹೆಚ್. ಬಿ.ಕುಮಾರಸ್ವಾಮಿಯವರು ತಿಪಟೂರು ಒಂದು ಶೈಕ್ಷಣಿಕ ಕ್ಷೇತ್ರವಾಗಿದೆ. ಈ ಕಾಲೇಜಿಗೆ ಬಹಳ ದೂರದಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ತಂದೆ ತಾಯಿಯಂದಿರು ಬಹಳ ನಂಬಿಕೆ ಇಟ್ಟು ಇಲ್ಲಿಗೆ ಓದಲು ಕಳುಹಿಸಿರುತ್ತಾರೆ. ವಿದ್ಯಾರ್ಥಿಗಳಾದವರು ಉತ್ತಮ ರೀತಿಯಲ್ಲಿ ಓದಿ ತಂದೆ ತಾಯಿಗೆ ಮತ್ತು ಕಾಲೇಜಿಗೆ ಕೀರ್ತಿ ತಂದು ಕೊಡಬೇಕು ಎಂದು ಹೇಳಿದರು.

ಡಾ|| ಶಿವಕುಮಾರ್.ಸಿ.ಜಿ ಅವರು ಮಾತನಾಡಿ ಕಾಲೇಜಿಗೆ 2007ರಲ್ಲಿ ಈ ಕಾಲೇಜು ಪ್ರಾರಂಭವಾಯಿತು. ಇದರ ಮೊದಲ ಪ್ರಾಂಶುಪಾಲರು ಜಯದೇವಪ್ಪ ಇಂದಿದಿನಿ ಇಲ್ಲಿಯವರೆಗೆ ಕಾಲೇಜು ಉತ್ತಮ ಫಲಿತಾಂಶ ಪಡೆಯುತ್ತಾ ಬಂದಿದೆ. ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಹಲವಾರು ರಾಂಕ್ ಗಳನ್ನು ಕೂಡ ಪಡೆದುಕೊಂಡಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಅಥವಾ ಕೌಶಲ್ಯಾಧಾರಿತ ಶಿಕ್ಷಣದ ಮೂಲಕ ವಿದ್ಯಾರ್ಥಿಗಳು ಸರ್ಕಾರಿ ಕೆಲಸ ಪಡೆಯಲು ಉತ್ತೇಜನ ನೀಡುತ್ತಾ ಬಂದಿದೆ. ಎನ್ ಎಸ್ ಎಸ್ ಘಟಕವು ನಾಲ್ಕು ಹಂತಗಳಲ್ಲಿಯೂ ತನ್ನ ಕಾರ್ಯಗಳನ್ನು ಹಮ್ಮಿಕೊಂಡಿದೆ. ಎನ್ ಸಿ ಸಿ ವಿದ್ಯಾರ್ಥಿಗಳಿಗೆ ದೆಹಲಿಯಲ್ಲಿ ಸ್ಪರ್ಧಿಸಲು ಅವಕಾಶವಿದೆ. ಕ್ರೀಡೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಮುಂದಿದ್ದಾರೆ. ಈ ಕಾಲೇಜಿನಲ್ಲಿ ಕೆಲವು ಕೊರತೆಗಳಿವೆ. ಸರಿಯಾದ ನೀರಿನ ಸೌಲಭ್ಯವಿಲ್ಲ ಹಾಗೂ ಸರಿಯಾದ ಶೌಚಾಲಯ ನಿರ್ವಹಣೆ ಇಲ್ಲ. ಸುಮಾರು ಹತ್ತು ಸಾವಿರ ಲೀಟರ್ ಆರ್ ಓ ನೀರನ್ನು ನೀಡಬೇಕು ಎಂದು ನಗರಸಭಾ ಸದಸ್ಯರು ಹಾಗೂ ಅಧ್ಯಕ್ಷರ ಮುಂದೆ ಬೇಡಿಕೆಗಳನ್ನು ಇಟ್ಟರು.
ತುಮಕೂರಿನ ಸಿದ್ದಗಂಗಾ ಮಠದ ಉಪನ್ಯಾಸಕರಾದ ಬಾಲಚಂದ್ರ. ಎಂ. ,ಪಲ್ಲಗಟ್ಟಿ ಅಡವಪ್ಪ ಕಲಾ ಹಾಗೂ ವಾಣಿಜ್ಯ ಕಾಲೇಜಿನ ದೈಹಿಕ ಶಿಕ್ಷಕರಾದ ಶ್ರೀನಿವಾಸ್ , ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಯೋಗೀಶ್, ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ,ಗಾಯಕರಾದ ದಿಬ್ಬೂರು ಮಂಜುನಾಥ್, ಕಾಲೇಜಿನ ಪೋಷಕರ ಸಂಘದ ಅಧ್ಯಕ್ಷರಾದ ಬಿಲ್ಲೆಮನೆ ಚಂದ್ರಶೇಖರ್,ಸಿ.ಡಿ.ಸಿ. ಸದಸ್ಯರಾದ ಝರಾ ಜಬೀನ್,ಉಪನ್ಯಾಸಕರಾದ ಡಾ.ಸ್ಮಿತಾ,ಡಾ,ಚಿಕ್ಕಹೆಗಡ್ಡೆ,ಡಾ,ಸುಭದ್ರಮ್ಮ,ಪತ್ರಿಕೋದ್ಯಮ ವಿಭಾಗದ ಶಂಕರಪ್ಪ ಹಾರೋಗೆರೆ,ನಾಗರಾಜು,ಸುರೇಶ್ ಬೋಧಕ ಹಾಗೂ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.

ವರದಿ : ಮಂಜುನಾಥ್ ಹಾಲ್ಕುರಿಕೆ,

ತಿಪಟೂರು ನಗರದ ಕಲ್ಪತರು ಇಂಜಿನಿಯರಿಂಗ್ ಕಾಲೇಜು ಆಡಿಟೋರಿಯಂ ಶಾಸಕರಾದ ಕೆ.ಷಡಕ್ಷರಿ ತುಮಕೂರು ಅಡಿಷನಲ್ ಎಸ್ಪಿ ಮರಿಯಪ್ಪ,ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ, ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ,ನಗರಸಭಾ ಅಧ್ಯಕ್ಷರಾದ ಶ್ರೀಮತಿ ಯಮುನಾಧರಣೇಶ್,ತಿಪಟೂರು ನಗರಠಾಣೆ ವೃತ್ತ ನಿರೀಕ್ಷಕ ವೆಂಕಟೇಶ್ ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ, ಉಪಸ್ಥಿತಿಯಲ್ಲಿ ಶಾಂತಿ ಸಭೆ ನಡೆಸಲಾಯಿತು

ಶಾಂತಿಸಭೆಯಲ್ಲಿ ಮಾತನಾಡಿದ ಶಾಸಕ ಕೆ.ಷಡಕ್ಷರಿ ತಿಪಟೂರುಶ್ರೀಸತ್ಯಗಣಪತಿ ವಿಸರ್ಜನಾ ಮಹೋತ್ಸವ ಶಾಂತಿ ಸೌಹಾರ್ದತೆಗೆ ಹೆಸರಾಗಿದ್ದು, ಹಿಂದೂ ಮುಸ್ಲೀಂ,ಕ್ರೈಸ್ತ ಸೇರಿದಂತೆ ಎಲ್ಲಾ ಸಮುದಾಯಗಳ ಜನರು,ಒಗ್ಗಟಿನಿಂದ ಜಾತ್ರೆ ಆಚರಿಸಲಾಗುತ್ತದೆ, ದೇಶದ ವಿವಿಧ ಭಾಗಗಳಿಂದ ಜನಸೇರುತ್ತಾರೆ, ನಮ್ಮ ಊರಿನ ಗೌರವ ಹೆಚ್ಚುವಂತೆ ಎಲ್ಲರೂ ಸಹಕಾರದಿಂದ ಕೆಲಸ ಮಾಡೋಣ, ತಾಲ್ಲೋಕು ಆಡಳಿತ ಸಂಪೂರ್ಣ ಸಹಕಾರ ನೀಡುತ್ತದೆ,ಬೆಸ್ಕಾಂ ಇಲಾಖೆ ವಿದ್ಯುತ್ ಅವಘಡಗಳು ಆಗದಂತೆ ಕ್ರಮವಹಿಸಿದ್ದು,ಪೋಲಿಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಂಡಿದ್ದು, ಪೊಲೀಸ್ ಇಲಾಖೆಯ ಸೂಚನೆಗಳ ಎಲ್ಲರೂ ಪಾಲಿಸಬೇಕು ಎಂದು ತಿಳಿಸಿದರು.
ಮಾಜಿ ನಗರಸಭಾ ಅಧ್ಯಕ್ಷ ರಾಮ್ ಮೋಹನ್ ಮಾತನಾಡಿ ಪ್ರತಿವರ್ಷದ ಸಂಪ್ರದಾಯದಂತೆ ಶ್ರೀಸತ್ಯಗಣಪತಿ ವಿಸರ್ಜನಾ ಮಹೋತ್ಸವ ಜಾತ್ರೆ ನಡೆಯುತ್ತಿದೆ, ತಾಲ್ಲೋಕು ಆಡಳಿತ ಸಹಕಾರ ನೀಡಬೇಕು, ರಾಜ್ಯದ ವಿವಿಧ ಭಾಗಗಳಿಂದ ಬರುವ ಭಕ್ತರಿಗೆ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದ್ದು, ನಗರದ ಹೊರವಲಯದಲ್ಲಿ ಬಸ್ ಗಳು ಪ್ರಯಾಣಿಕರನ್ನ ಇಳಿಸುವ ಕಾರಣ ತೊಂದರೆಯಾಗುತ್ತದೆ, ಪೊಲೀಸ್ ಇಲಾಖೆ ನಗರದೊಳಗೆ ವಾಹನಗಳು,ಬರುವಂತೆ ವ್ಯವಸ್ಥೆ ಮಾಡಬೇಕು.ಗಣೇಶ ವಿಸರ್ಜನೆ ವೇಳೆ ಸ್ವಯಂ ಸೇವಕರಿಗೆ ತೊಂದರೆಯಾಗದಂತೆ ಕಲ್ಯಾಣಿ ಬಳಿ ಬರುವುದಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು
ಮಾಜಿ ನಗರಸಭಾ ಸದಸ್ಯ ಪ್ರಸನ್ನಕುಮಾರ್ ಮಾತನಾಡಿ 95 ವರ್ಷಗಳಿಂದ ಅದ್ದೂರಿಯಾಗಿ ಗಣೇಶೋತ್ಸವ ನಡೆಯುತ್ತಿದೆ, ಐತಿಹಾಸಿಕ ಪಾವಿತ್ರತೆ ಪಡೆದಿದೆ,ಪೊಲೀಸ್ ಇಲಾಖೆ ಗಣೇಶ ಸಂಚರಿಸುವ ಮಾರ್ಗಗಳನ್ನ ಸಾರ್ವಜನಿಕರಿಗೆ ತೊಂದರೆಯಾಗದಂತೆ, ವ್ಯವಸ್ಥೆ ಕಲ್ಪಿಸಬೇಕು. ನಗರದಲ್ಲಿ ಅಗತ್ಯವಿರುವಕಡೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದರೂ.
ಜಾಮೀಯಾ ಮಸೀದಿ ಮುಖಂಡರಾದ ಷಫಿಉಲ್ಲಾ ಷರೀಫ್ ಮಾತನಾಡಿ ತಿಪಟೂರು ಶ್ರೀ ಸತ್ಯಗಣಪತಿ ಸೌಹಾರ್ದತೆ ಸಂಕೇತವಾಗಿದೆ, ಹಿಂದೂ ಮುಸ್ಲೀಂ ರು ಭಾವೈಕ್ಯತೆಯಿಂದ ಹಬ್ಬ ಆಚರಿಸುತ್ತೇವೆ.ಪ್ರತಿವರ್ಷದಂತೆ ಜಾತ್ರೆಗೆ ಎಲ್ಲಾ ಮುಸ್ಲೀಂ ಬಾಂದವರು ಸಹಕಾರ ನೀಡುತ್ತೇವೆ ಎಂದರೂ.
ತುಮಕೂರು ಅಡಿಷನಲ್ ಎಸ್ಪಿ ಮರಿಯಪ್ಪ ಮಾತನಾಡಿ ತಿಪಟೂರು ಶ್ರೀ ಸತ್ಯಗಣಪತಿ ಜಾತ್ರಾಮಹೋತ್ಸವಕ್ಕೆ ಪೊಲೀಸ್ ಇಲಾಖೆ ಸಕಲ ಸಜ್ಜಗಿದೆ, ಜಾತ್ರೆಸೌಹಾರ್ದವಾಗಿ ಆಚರಿಸಲು ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಪೊಲೀಸ್ ಇಲಾಖೆಯ ಸೂಚನೆಗಳನ್ನ ಪಾಲಿಸಬೇಕು ಎಂದರು.

ಶಾಂತಿ ಸಭೆಯಲ್ಲಿ ಮುಖಂಡರಾದ ರಾಮ್ ಮೋಹನ್. ಶಶಿಕಿರಣ್, ಪ್ರಸನ್ನ ಕುಮಾರ್,ಲಾಯರ್ ನಟರಾಜ್ .ನಗರಸಭೆ ಸದಸ್ಯರಾದ ಮಹೇಶ್,ಯೋಗೀಶ್,ಓಹಿಲಾ ಗಂಗಾಧರ್.ತರಕಾರಿ ಗಂಗಾಧರ್.ನಿಜಗುಣ ಹರಿಬಾಬು,.ಮುಂತ್ತಾದವರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

ತುಮಕೂರು: ನಗರದ ವಿದ್ಯೋದಯ ಲಾ ಕಾಲೇಜಿನಲ್ಲಿ ಕೆ.ಎಸ್.ಎಲ್ ಯು ಕಾನೂನು ವಿಶ್ವವಿದ್ಯಾಲಯದಿಂದ ಅಂತರ ಕಾಲೇಜು ಯೋಗ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಡಿಸೆಂಬರ್ 04 ರಿಂದ 05 ರವರೆಗೆ 2 ದಿನಗಳ ಕಾಲ ನಡೆಯುತ್ತಿದೆ, ತಿಪಟೂರು ಕೆ ಎಲ್ ಎ ಸ್ಕೂಲ್ ಆಫ್ ಲಾ ಕಾಲೇಜು ಸೇರಿದಂತೆ ರಾಜ್ಯದ ಸಂಯೋಜಿತ ಕಾನೂನು ವಿಶ್ವವಿದ್ಯಾಲಯಗಳಿಂದ ಯೋಗ ಪಟುಗಳು ಭಾಗವಹಿಸಿ ಯೋಗ ಪ್ರದರ್ಶನ ಮಾಡುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಪ್ರದಾನ ಭಾಷಣ ಮಾಡಿದ ಯೋಗ ಎಕ್ಸ್ಪೋನೆಂಟ್ ಡಾ. ಎಂ.ಕೆ ನಾಗರಾಜು ರವರು ಯೋಗ ಎಂಬುದು ಅಭ್ಯಸಿಸಿ ಅನುಭವಿಸಿಬೇಕಾದ ಒಂದು ವಿದ್ಯೆ ಇಂದು ಇದರ ಅನುಕೂಲವನ್ನು ವಿದೇಶದಲ್ಲಿ ಪಡೆದುಕೊಳ್ಳಲಾಗುತ್ತಿದೆ ಆದರೆ ಭಾರತದಲ್ಲಿ ಎಷ್ಟು ಪರಿಣಾಮಕಾರಿಯಾಗಿ ಯೋಗದ ಅನುಕೂಲ ಪಡೆಯುತ್ತಿದ್ದೇವೆ ಎಂಬುದರ ಬಗ್ಗೆ ನಾವು ಆತ್ಮಾವಲೋಕನದ ಮಾಡಿಕೂಳ್ಳಬೇಕಿದೆ, ದೇಶದ ಆರ್ಥಿಕತೆಗೆ ವೈದ್ಯಕೀಯ ವೆಚ್ಚವನ್ನು ತಗ್ಗಿಸಲು ಯೋಗವನ್ನು ಅಭ್ಯಸಿಸಬೇಕಾಗಿರುವುದು ನಮ್ಮೆಲ್ಲರ ತುರ್ತು ಅಗತ್ಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಸಂಸ್ಥೆಯ ಕಾರ್ಯದರ್ಶಿ ಆರ್ ಎ ಸುರೇಶ್ ಕುಮಾರ್, ಯೋಗ ಎಕ್ಸ್ಪೋನೆಂಟ್ ಡಾ ಎಂ ಕೆ ನಾಗರಾಜು, ವಿದ್ಯೋದಯ ಲಾ ಕಾಲೇಜಿನ ವ್ಯವಸ್ಥಾಪಕ ಟ್ರಸ್ಟಿ ಎಚ್ ಎಸ್ ರಾಜು ಸದರಿ ಕಾಲೇಜಿನ ಕಾರ್ಯ ನಿರ್ವಾಹಕ ಅಧಿಕಾರಿ ಕೆ ಚಂದ್ರಣ್ಣ ಮತ್ತು ಸದರಿ ಕಾಲೇಜಿನ ಪ್ರಾಂಶುಪಾಲರು ಉಪಸ್ಥಿತರಿದ್ದರು ಹಾಗೂ ಸಂಯೋಜಿತ ಕಾನೂನು ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರಾದ, ಉಪನ್ಯಾಸಕರು, ದೈಹಿಕ ಶಿಕ್ಷಣ ಉಪನ್ಯಾಸಕರು ಮತ್ತು ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವರದಿ: ಸಂತೋಷ್ ಓಬಳ. ಗುಬ್ಬಿ

ತಿಪಟೂರು ನಗರದ ಹಳೇಪಾಳ್ಯದಿಂದ ಮಾರುಕಟ್ಟೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಗೆ ಕೆ.ಎ 05ಎಜಿ 5713 ಸಂಖ್ಯೆಯ ಮಾರುತಿ ಓಮಿನಿ ಕಾರುಡಿಕ್ಕಿಹೊಡೆದ ಪರಿಣಾಮ, ವಿದ್ಯಾರ್ಥಿನಿ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಳೇಪಾಳ್ಯ ಗ್ರಾಮದ ದೀಪಿಕ 18ವರ್ಷ ಅಪಘಾತಕ್ಕೆ ಒಳಗಾದ ವಿದ್ಯಾರ್ಥಿನಿ

ತಿಪಟೂರು ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ದೀಪಿಕ,
ಬೆಳಗ್ಗೆ 8ಗಂಟೆ ಸಮಯದಲ್ಲಿ ಮಾರುಕಟ್ಟೆಗೆ ಹೋಗುವಾಗ ನೊಣವಿನಕೆರೆ ಮೂಲದ ಪಾನಮತ್ತ ವ್ಯಕ್ತಿ ಅತಿವೇಗದಿಂದ ವಾಹನ ಚಾಲಯಿಸಿಕೊಂಡು ಬಂದು ವಿದ್ಯಾರ್ಥಿಗೆ ಡಿಕ್ಕಿ ಹೊಡೆದಿದ್ದು, ವಿದ್ಯಾರ್ಥಿನಿಯ ತಲೆ‌,ಕಾಲು ಭುಜದ ಭಾಗಕ್ಕೆ ತೀವ್ರಪೆಟ್ಟಾಗಿದ್ದು ಸ್ಥಳೀಯರ ನೆರವಿನಿಂದ ವಿದ್ಯಾರ್ಥಿನಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು.
ಪಾನಮತ್ತನಾಗಿ ವಿಧ್ಯಾರ್ಥಿಗೆ ಡಿಕ್ಕಿಹೊಡೆದ ಚಾಲಕ ನಂತರ ರಸ್ತೆ ಬದಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಹೊಡೆದಿದ್ದು ಕಾರನ್ನು ಸ್ಥಳದಲ್ಲೇ ಬಿಟ್ಟುಪರಾರಿಯಾಗಿದ್ದಾನೆ
ತಿಪಟೂರು ನಗರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವರದಿ:ಮಂಜುನಾಥ್ ಹಾಲ್ಕುರಿಕೆ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ ಖಂಡಿಸಿ ತಿಪಟೂರಿನಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆ ನಡೆಸಿ ತಿಪಟೂರು ಉಪವಿಭಾಗಾಧಿಕಾರಿಗಳ ಮೂಲಕ ಕೇಂದ್ರಸರ್ಕಾರಕ್ಕೆ ಮನವಿಪತ್ರಸಲ್ಲಿಸಲಾಯಿತು.
ತಿಪಟೂರು ಗ್ರಾಮದೇವತೆ ಶ್ರೀ ಕೆಂಪಮ್ಮದೇವಿ ದೇವಾಲಯದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಕೋಡಿಸರ್ಕಲ್, ದೊಡ್ಡಪೇಟೆ,ಬಿ.ಹೆಚ್ ರಸ್ತೆ ಮೂಲಕಸಾಗಿ ಶ್ರೀಜಯದೇವ ವಿದ್ಯಾರ್ಥಿನಿಲಯದ ಆವರಣದಲ್ಲಿ ಸಮಾವೇಷ ನಡೆಸಲಾಯಿತು.ಪ್ರತಿಭಟನಾನಿರತರು ಬಾಂಗ್ಲಾದೇಶದ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಪ್ರತಿಭಟನೆ ನೇತೃತ್ವ ವಹಿಸಿದ ಕುಪ್ಪೂರು ತಮ್ಮಡಿಹಳ್ಳಿ ವಿರಕ್ತ ಮಠದ ಪೀಠಾಧ್ಯಕ್ಷರಾದ ಶ್ರೀ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಮಹಾಸ್ವಾಮೀಜಿಗಳು ಹಿಂದೂ ಸಮಾಜ ತಮ್ಮ ಉಳಿವಿಗಾಗಿ ಶತೃಗಳ ಬಗ್ಗೆ ಜಾಗೃತಿಯಾಗುವ ಅಗತ್ಯವಿದೆ.
ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ, ಜಿಹಾದಿಶಕ್ತಿಗಳ ನಡೆಯುತ್ತಿರುವ ದೌರ್ಜನ್ಯವನ್ನ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗ ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕು.
ಹಿಂದೂ ಸಮಾಜದಲ್ಲಿಮನೆಗೊಬ್ಬ ಭಗತ್ ಸಿಂಗ್ ಹುಟ್ಟಬೇಕು ಎಂದು ಕರೆನೀಡಿದರು
ತಿಪಟೂರು ಗುರುಕುಲಾನಂದಾಶ್ರಮದ ಶ್ರೀಶ್ರೀ ಇಮ್ಮಡಿಕರಿಬಸವ ದೇಶೀಕೇಂದ್ರ ಮಹಾಸ್ವಾಮೀಜಿಗಳ ಮಾತನಾಡಿ ವಿಶ್ವದಲ್ಲಿಯೇ ಶಾಂತಿ ಸೌರ್ಹಾರ್ದತೆ ಕಾಪಾಡುವ ಹಿಂದೂಸಮಾಜದ ಮೇಲೇ ದುಷ್ಟಶಕ್ತಿಗಳ,ದೌರ್ಜನ್ಯ ಮಾಡುತ್ತಿದ್ದಾರೆ,ಬಾಂಗ್ಲಾದೇಶದಲ್ಲಿ ಅತ್ಯಚಾರ, ಅನಾಚಾರ ಮಿತಿಮೀರಿದೆ,ಇಸ್ಕಾನ್ ಮಂದಿರ ದುರ್ಗಾಮಂದಿರ ಸೇರಿದಂತೆ ಹಿಂದೂಗಳ ಮನೆಮಠಗಳು ಧ್ವಂಸಮಾಡಲಾಗಿದೆ, ಭಾರತ ಸರ್ಕಾರ ಸಂಕಷ್ಟದಲ್ಲಿ ಇರುವ ಹಿಂದೂಗಳ ನೆರವಿಗೆ ದಾವಿಸಬೇಕು, ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾರ್ಗಸೂಚಿ ಭಾಷಣಕಾರರಾಗಿ ಆಗಮಿಸಿದ ಉಮೇಶ್ ಮಾತನಾಡಿ ಬಾಂಗ್ಲಾದೇಶದಲ್ಲಿ ಯೂನಿಸ್ ಖಾನ್ ನೇತೃತ್ವದ ತಾತ್ಕಾಲಿಕ ಸರ್ಕಾರದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ
ಜಿಹಾದಿಗಳು,ಹಿಂದೂ ಸಮಾಜವನ್ನ ನಾಶಮಾಡಲು ಹೊರಡುತ್ತಿದ್ದು, ನಮ್ಮ ಸಂತಸಮಾಜವೇ ಬೀದಿಯಲ್ಲಿ ಹೋರಾಟಕಿಳಿದಿದೆ,1952 ರಲ್ಲಿ 52 %ಇದ್ದ ಹಿಂದೂಗಳು 7% ಇಳಿದಿದೆ,
ಸರ್ಕಾರಿ ಪ್ರಯೋಜಿತ ಲೂಟಿನಡೆಯುತ್ತಿದೆ.ಸರ್ಕಾರವೇ ಬಯೋತ್ವದನೆಗೆ ಕುಮ್ಮಕು ನೀಡುತ್ತಿದೆ.
ಚಿನ್ಮಯಿ ಕೃಷ್ಣದಾಸ್ ರವರನ್ನ ಭಯೋತ್ಪಾದಕ ರಂತೆ ಬಿಂಬಿಸಲಾಗುತ್ತಿದೆ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತಹಿಂದೂಗಳ ಮೇಲೆ ನಿರಂತರದೌರ್ಜನ್ಯ ನಡೆಯುತ್ತಿದೆ, ಮಾನವಹಕ್ಕುಗಳ ಹರಣವಾಗುತ್ತಿದೆ, ವಿಶ್ವಸಂಸ್ಥೆ ಮಾನವಹಕ್ಕುಗಳ ರಕ್ಷಣ ಸಮಿತಿ ಮೌನವಾಗಿರುವುದು ಆತಂಕಕ್ಕೆ ಕಾರಣವಾಗಿದೆ, ಪ್ರತಿಯೋಬ್ಬ ಹಿಂದೂವೂ ಸಹ ಬಾಂಗ್ಲಾದೇಶದ ಹಿಂದೂಗಳ ಪರವಾಗಿ ನಿಲ್ಲಬೇಕು.
ಎಂದು ಒತ್ತಾಯಿಸಿದರು

ಪ್ರತಿಭಟನೆಯಲ್ಲಿ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಂಗರಾಜು.ಬಿಸ್ಲೇಹಳ್ಳಿ ಜಗಧೀಶ್. ಮಾಜಿ ನಗರಸಭೆ ಅಧ್ಯಕ್ಷ ರಾಮ್ ಮೋಹನ್ ಸದಸ್ಯರಾದ ಶಶಿಕಿರಣ್. ಬಜರಂಗದಳ ಮುಖಂಡ.ಹಾವೇನಹಳ್ಳಿ ನಾಗೇಶ್.ರಂಗಾಪುರ ನಾಗೇಶ್.ಗೊರಗೊಂಡನಹಳ್ಳಿ ಉಮೇಶ್.ವಿನಯ್ ಮಡೇನೂರು.ಬಳ್ಳೆಕಟ್ಟೆ ಸುರೇಶ್ .ಗುಲಾಬಿ ಸುರೇಶ್.ರೇಣುಕಾರಾಧ್ಯ, ಮುಂತ್ತಾದವರು ಉಪಸ್ಥಿತರಿದರು

ವರದಿ: ಮಂಜುನಾಥ್ ಹಾಲ್ಕುರಿಕೆ

ಖ್ಯಾತ ವೈದ್ಯರಾದ ಸಮಾಜ ಸೇವಕರಾದ ಡಾಕ್ಟರ್ ಜಿ.ಎಸ್ ಶ್ರೀಧರ್ ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಈ ದೇಶದಲ್ಲಿ ನಾಡ ಧ್ವಜ ಹಿಡಿದು ಅತಿ ಹೆಚ್ಚು ಜೈಕಾರಗಳನ್ನು ಕೂಗುತ್ತಾ ರಾಜ್ಯೋತ್ಸವವನ್ನು ಮಾಡುವವರು ಚಾಲಕರು, ನಾಡು ನುಡಿ ನೆಲ ಜಲದ ವಿಚಾರದಲ್ಲಿ ಕನ್ನಡಾಭಿಮಾನ ಮೆರೆಯುವ ಚಾಲಕರ ಕೆಲಸಕ್ಕೆ ಹೆಮ್ಮೆಪಡಬೇಕು, ಕಷ್ಟಪಟ್ಟು ದುಡಿಮೆ ಮಾಡುವ ಚಾಲಕರು, ನಿಮ್ಮ ಕುಟುಂಬಗಳ ಸುರಕ್ಷತೆಗೆ ಆಧ್ಯತೆ ನೀಡಬೇಕು,ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳಬೇಕು. ಸತತ ಆರು ವರ್ಷಗಳ ಪ್ರಯತ್ನದಿಂದ ಕುಮಾರ್ ಆಸ್ಪತ್ರೆ ಇ.ಎಸ್.ಐ ಸೌಲಭ್ಯಗಳನ್ನ ನೀಡುವ ಯೋಜನೆ ಅನುಮತಿ ಪಡೆದುಕೊಂಡಿದೆ. ಚಾಲಕ ವೃತ್ತಿ ಅತಿ ಮುಖ್ಯವಾದ ವೃತ್ತಿ ,ವೃತ್ತಿಯನ್ನು ನಿರ್ವಹಿಸುವ ನೀವು ಸಮಾಜದ ಆಸ್ತಿ, ಹಾಗೆ ಗ್ರಾಮೀಣ ಪ್ರದೇಶದಿಂದ ಬರುವಂತ ಮಹಿಳೆಯರನ್ನು ಸರಿಯಾದ ಸಮಯಕ್ಕೆ ಗಾರ್ಮೆಂಟ್ಸ್ ಗಳಿಗೆ ಬಿಡುವುದರಿಂದ ಕಾರ್ಖಾನೆಯ ಉದ್ದಿಮೆ ಸರಿಯಾಗಿ ನಡೆಯುತ್ತದೆ, ಮಹಿಳೆಯರ ಕುಟುಂಬಗಳಲ್ಲೂ ಭದ್ರತೆ ಚಿಂತೆ ಇರುವುದಿಲ್ಲ.ಅವರ ಜೀವನೋಪಾಯವೂ ಕೂಡ ನಡೆಯುತ್ತದೆ ಎಂದು ತಿಳಿಸಿದರು,

ಸರ್ಕಾರಿ ವೈದ್ಯರಾದ ಡಾ// ರಕ್ಷಿತ್ ಮಾತನಾಡಿ ಆಟೋ ಚಾಲಕರುಹೆಚ್ಚಿನ ಕನ್ನಡಾಭಿಮಾನ ಹೊಂದಿದ್ದಾರೆ,ಶ್ರಮಜೀವಿಗಳಾದ ಚಾಲಕರು,ದುಡಿಮೆಜೊತೆ ಆರೋಗ್ಯದ ಕಡೆ ಹೆಚ್ಚು ಗಮನಕೊಡಿ,ದುಶ್ಚಟಗಳಿಂದ ದೂರವಿದ್ದು,ದುಡಿದ ಹಣದಲ್ಲಿ ಅಲ್ಪಸ್ವಲ್ಪ ಉಳಿತಾಯ ಮಾಡಿ ತಮ್ಮ ಕುಟುಂಬದ ರಕ್ಷಣೆ ಮಾಡಬೇಕು ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಮುಖಂಡರಾದ ನವಿಲೆಪರಮೇಶ್,ಜಾಕಿಗಾರ್ಮೇಂಟ್ಸ್ ಚಂದನ್.ವೇರ್ ವೆಲ್ ಗಾರ್ಮೇಟ್ಸ್ ಅಧಿಕಾರಿ ಲೋಕೇಶ್,ಜೈಮಾರುತಿ ಆಟೋ ಚಾಲಕರ ಸಂಘದ ಅಧ್ಯಕ್ಷ ಮಹೇಶ್, ರಂಗಸ್ವಾಮಿ ಖಜಾಂಚಿ ಪುಟ್ಟೆಗೌಡ,ಕಾರ್ಯದರ್ಶಿ ಹರ್ಷವರ್ಧನ್,ಜವರೇಗೌಡ,ಮುಖಂಡರಾದ ಯತೀಶ್,ನವೀನ್,ನಾಗೇಶ್ .ಟಿ ರಾಜು ಬೆಣ್ಣೇನಹಳ್ಳಿ,ಚಿನ್ನಿ.ಉಮೇಶ್ ಮಂಜಣ್ಣ ,ಮುಂತ್ತಾದವರು ಉಪಸ್ಥಿತರಿದರು

ವರದಿ; ಮಂಜುನಾಥ್ ಹಾಲ್ಕುರಿಕೆ

ತಿಪಟೂರು ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ವಿಶ್ವ ಏಡ್ಸ್ ದಿನದ ಪ್ರಯುಕ್ತ ಹೆಚ್.ಐವಿ ಮುಕ್ತ ಭಾರತ ಸಂಕಲ್ಪ ಜಾಥಕ್ಕೆ ತಿಪಟೂರು ಜೆಎಂಎಫ್ ಸಿ ಮತ್ತು ಸಿವಿಲ್ ನ್ಯಾಯಾಧೀಶರಾದ ಮಹಮದ್ ಅರೀಫ್ ಉಲ್ಲಾ .ರವರು ಚಾಲನೆ ನೀಡಿದರು

ಜಾಥ ಉದ್ಘಾಟಿಸಿದ ತಿಪಟೂರು ಜೆಎಂಎಫ್ ಸಿ & ಸಿವಿಲ್ ನ್ಯಾಯಾಧೀಶರಾದ ಮಹಮದ್ ಅರೀಪ್ ಉಲ್ಲಾ ಮಾತನಾಡಿ ದೇಶದಲ್ಲಿ ಹೆಚ್ ಐವಿ ರೋಗದಿಂದ ಮುಕ್ತವಾಗ ಬೇಕಾದರೇ ಸಮಾಜ ಜಾಗೃತವಾಗಬೇಕು,ಮಾದಕ ವಸ್ತುಗಳಿಂದ ದೂರವಿರಬೇಕು,ನಮ್ಮ ಕಾನೂನು ಹೆಚ್ಐವಿ ಪೀಡಿತರನ್ನ ಗೌರವದಿಂದ ಕಾಣಬೇಕು, ರೋಗಿಗಳನ್ನ ಸಮಾನವಾಗಿ ಬದುಕವಂತೆ ನೋಡಿಕೊಳ್ಳಬೇಕು,ಹೆಚ್ಐವಿ ತಡೆಕಾಯ್ದೆ2017ರೋಗಪೀಡಿತರಿಗೆ ಸಮಾಜದಲ್ಲಿ ಗೌರವದಿಂದ ಬದುಕುವ ಅವಕಾಶ ಕಲ್ಪಿಸಿದೆ,ರೋಗಪೀಡುತರಿಗೆ ಔಷದೋಪಚಾರ ಸೇರಿದಂತೆ ಹಲವಾರು ಸವಲತ್ತುಗಳನ್ನ ನೀಡಿದೆ.ಎಂದು ತಿಳಿಸಿದರು
ತಿಪಟೂರು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ//ಶಿವಕುಮಾರ್ ಮಾತನಾಡಿ ಮಾದಕ ವಸ್ತುಗಳ ಬಳಕೆ, ಅಸುರಕ್ಷಿತ ಲೈಂಗಿಕ ಕ್ರಿಯೆಗಳಿಂದ,ದೂರವಿರಬೇಕು, ರೋಗಬಂದಾಗ ತೊಂದರೆ ಅನುಭವಿಸುವ ಬದಲು ರೋಗಬರದಂತೆ ಎಚ್ಚರವಹಿಸಬೇಕು.ಹೆಚ್ಐ ಪೀಡಿತರು ಸಮಾನ್ಯ ಮನುಷ್ಯರಂತೆ ಬದುಕ ಬಹುದು, ಅನೇಕರು ಈ ರೋಗಪೀಡಿತರು ಸಮಾನ್ಯ ಜೀವನ ನಡೆಸುತ್ತಿದ್ದಾರೆ,ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಚಂದ್ರಯ್ಯ ಖ್ಯಾತವೈದ್ಯರಾದ ಡಾ//ವಿವೇಚನ್.ಡಾ//ರಕ್ಷಿತ್ ಗೌಡ,ಡಾ//ರವಿ ಸಿಂಡಿಕೇಟ್ ಸದಸ್ಯ ನಾಗರಾಜು.ರೇಣುಕಾರಾಧ್ಯ ಮುಂತ್ತಾದವರು ಉಪಸ್ಥಿತರಿದರು

ವರದಿ: ಮಂಜುನಾಥ್ ಹಾಲ್ಕುರಿಕೆ

ತಿಪಟೂರು ತಾಲ್ಲೋಕಿನ ಪುಣ್ಯಕ್ಷೇತ್ರ ಹಾಗೂ ಕಲ್ಪತರು ನಾಡಿನ ಶಕ್ತಿಪೀಠ ಎಂದೇ ಖ್ಯಾತವಾಗಿರುವ ದಸರೀಘಟ್ಟ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಕಾರ್ತಿಕ ಅಮಾವಾಸ್ಯೆ ಅಂಗವಾಗಿ ಅದ್ದೂರಿಯಾಗಿ ದೀಪಾರಾಧನೆ ನೆರವೇರಿಸಲಾಯಿತು

ಆದಿಚುಂಚನಗಿರಿ ದಸರೀಘಟ್ಟ ಶಾಖಾಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರನಾಥ ಮಹಾಸ್ವಾಮೀಜಿಯವರು ವಿಶೇಷ ದೀಪಾರಾಧನೆ ನೆರವೇರಿಸಿದರು
ಶ್ರೀಚೌಡೇಶ್ವರಿದೇವಿ ಹಾಗೂ ಶ್ರೀ ಕರಿಯಮ್ಮದೇವಿಯವರಿಗೆ ವಿಶೇಷ ಅಲಂಕಾರ ನೆರವೇರಿಸಿ ಶ್ರೀ ಚೌಡೇಶ್ವರಿ ದೇವಿಯವರ ಉತ್ಸವ ಮೂರ್ತಿಯನ್ನ ರಥದಲ್ಲಿ ಕೂರಿಸಿ ಪ್ರಾಕಾರೋತ್ಸವ ನೆರವೇರಿಸಲಾಯಿತು

ದೇವಾಲಯಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಭೇಟಿನೀಡಿ ಪೂಜೆಸಲಿಸಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

error: Content is protected !!