ತಿಪಟೂರು ನಗರದ ಶ್ರೀಕಲ್ಲೇಶ್ವರ ಸ್ವಾಮಿದೇವಾಲಯದ ಆವರಣದಲ್ಲಿ ಶ್ರೀಗುರುದತ್ತಾತ್ರೇಯ ಜಯಂತಿಯನ್ನ ಅದ್ದೂರಿಯಾಗಿ ಆಚರಿಸಲಾಯಿತು.ಶ್ರೀಗುರು ದತ್ತಜಯಂತಿ ಅಂಗವಾಗಿ ಶ್ರೀ ದತ್ತಾತ್ರೇಯ ಹೋಮ ಹವನ, ಹಾಗೂ ವಿಶೇಷ ಪೂಜೆ.ಮತ್ತು ಭಜನಾ ಕಾರ್ಯಕ್ರಮ ನೆರವೇರಿಸಲಾಯಿತು
ಬೆಳಗ್ಗೆಯಿಂದ ಆರಂಭವಾದ ಪೂಜಾಕೈಂಕರ್ಯಗಳು ಹೋಮ ಹವನಗಳನ್ನ ನೆರವೇರಿಸಿ,ನಿರಂತರ ಅನ್ನ ಸಂತರ್ಪಣೆ ನೆರವೇರಿಸಲಾಯಿತು.ನಂತರ ದತ್ತಮಾಲೆಧರಿಸಿದ ನೂರಾರು ಭಕ್ತರು,ಶೋಭಾಯಾತ್ರೆ ನಡೆಸಿ, ಚಿಕ್ಕಮಂಗಳೂರು ಜಿಲ್ಲೆ ಚಂದ್ರದ್ರೋಣಪರ್ವತದ ದತ್ತಾತ್ರೇಯ ದೇವಾಲಯಕ್ಕೆ ತೆರಳಿದರು.
ಬಿಜೆಪಿ ಮುಖಂಡ ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್. ಮುಖಂಡರಾದ ವಿನಯ್ ಕುಮಾರ್ ಹಳಿಕಾರ್ ಮಡೇನೂರು, ಭಜರಂಗದಳ ಮುಖಂಡ ಕೃಷ್ಣ,ಮಲ್ಲಿಕಾರ್ಜುನ್.ಮಾಜಿ ನಗರಸಭಾ ಉಪಾಧ್ಯಕ್ಷ ಸೊಪ್ಪು ಗಣೇಶ್ ಮುಂತ್ತಾದವರು ಭೇಟಿ ನೀಡಿ ಪೂಜೆಸಲ್ಲಿಸಿದರು
ತಿಪಟೂರು ತಾಲ್ಲೋಕಿನ ,ಹಾಲೇನಹಳ್ಳಿ,ಗ್ರಾಮಕ್ಕೆ ಸೂಕ್ತ ಬಸ್ ಸೌಲಭ್ಯಕ್ಕಾಗಿ ಹಾಲೇನಹಳ್ಳಿ ಬೋವಿಕಾಲೋನಿ, ಹೊಸೂರು,ಹಾಲೇನಹಳ್ಳಿ ಗೊಲ್ಲರಹಟ್ಟಿ ಗ್ರಾಮಗಳಿಗೆ ಯಾವುದೇ ಬಸ್ ಸೌಕರ್ಯವಿಲ್ಲದೆ ಜನ ಪರದಾಡುವಂತ್ತಾಗಿದೆ, ಪ್ರತಿದಿನ 5 ಕಿಲೋಮೀಟರ್ ನಡೆದುಕೊಂಡೆ, ಹೊಸೂರು, ಬೋವಿಕಾಲೋನಿ.ಗೊಲ್ಲರಹಟ್ಟಿ ಯ,ವಿದ್ಯಾರ್ಥಿಗಳ, ಕೂಲಿ ಕಾರ್ಮಿಕರು,ಬಸ್ ಗಳಿಗೆ ಬರಬೇಕಿದೆ.ಈ ಗ್ರಾಮಗಳ ಜನ ಬಹುತೇಕ ಬಡವರು.ಕೂಲಿ ಕಾರ್ಮಿಕರು ಮಧ್ಯವ ವರ್ಗದ ಜನರೇ ವಾಸವಾಗಿದ್ದು, ಕೆಲವು ಉಳ್ಳವರು ಮಾತ್ರ ಸ್ವಂತ ವಾಹನ ಹೊಂದಿದರೂ. ಬಹುತೇಕರು ಸರ್ಕಾರಿ ಬಸ್ ಗಳನ್ನ ಆಶ್ರಯಿದಿದ್ದಾರೆ. ವಿದ್ಯಾರ್ಥಿಗಳಂತು, ತಮ್ಮ ಗ್ರಾಮಗಳಿಂದ ನಡೆದುಕೊಂಡು ಹಾಲ್ಕುರಿಕೆ- ತಿಪಟೂರು ಮಾರ್ಗದ ಹಾಲೇನಹಳ್ಳಿ ಗೇಟ್ ಗೆ ಬಂದು ಬಸ್ ಹತ್ತ,ಬೇಕಿದೆ. ವಿದ್ಯಾರ್ಥಿಗಳ 5ಕಿಲೋಮೀಟರ್ ನಡೆದು, ಬಸ್ ಹಿಡಿದು ಶಾಲಾ ಕಾಲೇಜುಗಳಿಗೆ ಹೋಗುವುದರೊಳಗೆ ಶಾಲಾ ಕಾಲೇಜುಗಳೇ, ಪ್ರಾರಂಭವಾಗಿರುತ್ತವೆ, ಪ್ರತಿದಿನ ವಿದ್ಯಾರ್ಥಿಗಳ ಗೋಳು ಕೇಳುವವರೆ ಇಲ್ಲ ಎನ್ನುವಂತ್ತಾಗಿದೆ. ಗ್ರಾಮದ ಮುಖಂಡ ದಿಲೀಪ್ ಕುಮಾರ್ ಮಾತನಾಡಿ ಈ ಹಿಂದೆ ಹಾಲೇನಹಳ್ಳಿ ಗ್ರಾಮದಲ್ಲಿ ನಡೆದಿದ್ದ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯದ ವೇಳೆ ಸರ್ವಜನಿಕರ ಮನವಿಯಂತೆ ಸರ್ಕಾರ ತಿಪಟೂರು ಹುಳಿಯಾರು ಸಬ್ಬೆನಹಳ್ಳಿ ಮಾರ್ಗವಾಗಿ ಹಾಲೇನಹಳ್ಳಿಗೆ ಬಸ್ ಬರುವ ವ್ಯವಸ್ಥೆ ಕಲ್ಪಿಸಲಾಗಿತು.ಆದರೇ ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆ ಕಾರಣಕ್ಕೆ ಸ್ವಲ್ಪದಿನ ಬಂದ ಬಸ್ ನಿಗಧಿತ ಸಮಯಕ್ಕೆ ಭಾರದೆ,ವಾರಕ್ಕೆ ಎರಡು ಮಾತ್ರ ಬಸ್ ಹಾಲೇನಹಳ್ಳಿ ಗ್ರಾಮಕ್ಕೆ ಬರುವ ಕಾರಣ ಸಾರ್ವಜನಿಕರಿಗೆ ತೊಂದರೆಯಾಗಿ.ಈ ಬಗ್ಗೆ ತುಮಕೂರು ಕೆಎಸ್ಆರ್ಟಿಸಿ ಡಿ.ಸಿ ಯವರಿಗೂ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.ಸರ್ಕಾರ ಕೂಡಲೇ ತಿಪಟೂರು-ಹುಳಿಯಾರು ಹಾಲ್ಕುರಿಕೆ ಮಾರ್ಗದ ಬಸ್ ಗಳು ಹಾಲೇನಹಳ್ಳಿ ಗ್ರಾಮಕ್ಕ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು
ತಿಪಟೂರು ನಗರದ ಕರಿಬಸಪ್ಪ ಕಾಲೋನಿಯಲ್ಲಿ ಗಾಂಧೀನಗರದಲ್ಲಿ ಅಕ್ರಮ ಮಟ್ಕಾ ಅಡ್ಡದ ಮೇಲೆ ತಿಪಟೂರು ನಗರ ಠಾಣೆ ಪೋಲಿಸರು ದಾಳಿ ನಡೆಸಿದ್ದು, ಪ್ರಕರಣ ದಾಖಲಿಸಲಾಗಿದೆ
ಗಾಂಧೀ ನಗರದ ವಾಸಿಯಾದ ರಫೀ ಅಲಿಯಾಸ್ ಡಬ್ಬ ಎಂಬುವವನು ಅಕ್ರಮವಾಗಿ ಗುಂಪುಕಟ್ಟಿಕೊಂಡು ಒಂದು ರೂಪಾಯಿಗೆ 70 ರೂಪಾಯಿ ಹಣ ಕೊಡುವುದ್ದಾಗಿ,ಜನರನ್ನ ಸೇರಿಸಿಕೊಂಡು ಮಟ್ಕಾ ಬರೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ತಿಪಟೂರು ನಗರಠಾಣೆ ಪೊಲೀಸರು ದಾಳಿ ನಡೆಸಿದ್ದು. ಆರೋಪಿ ರಫೀ ಯನ್ನ ಬಂಧಿಸಿದ್ದು, ಮಟ್ಕಾ ಬರೆಯುತ್ತಿದ್ದ ಮಟ್ಕಾ ಹಾಳೆ,ಪೆನ್ ವಶಕ್ಕೆ ಪಡೆದಿದ್ದು ಆರೋಪಿ ಬಳಿ ಇದ್ದ 300ಹಣ ಸಹ ವಶಪಡಿಸಿಕೊಂಡು. ಪ್ರಕರಣ ದಾಖಲಿಸಲಾಗಿದೆ. ತುಮಕೂರು ಜಿಲ್ಲಾಪೊಲೀಸ್ ವರೀಷ್ಠಾಧಿಕಾರಿ ಅಶೋಕ್, ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ, ನಗರಠಾಣೆ ವೃತ್ತನಿರೀಕ್ಷಕರಾದ ವೆಂಕಟೇಶ್ ನೇತೃತ್ವದಲ್ಲಿ ತನಿಖೆ ಕೈಗೊಂಡಿದ್ದಾರೆ
ತಿಪಟೂರು : ಸಾಹಿತ್ಯ- ಸಂಶೋಧನೆಯ ಮೂಲಕ ಶರಣ-ಸೂಫಿ ವಿಚಾರಧಾರಣೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿದ ಸಂಶೋಧಕ-ಸಾಹಿತಿ ಡಾ. ಅಬ್ದುಲ್ ಹಮೀದ್ (87) ವಯೋಸಹಜವಾಗಿ ಸಾವನ್ನಪ್ಪಿದ್ದಾರೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಂದನಕೆರೆ ಗ್ರಾಮದಲ್ಲಿನ ಸ್ವಗೃಹದಲ್ಲಿ ಶುಕ್ರವಾರ ಮಧ್ಯಾಹ್ನ ನಿಧನ ಹೊಂದಿದ್ದಾರೆ.
ಬಾಲ್ಯದಿಂದಲೇ ಪ್ರತಿಭಾವಂತರಾಗಿದ್ದ ಹಮೀದ್ ಬಿ.ಎ., ಬಿ.ಎಡ್, ಎಂಎ(ಕನ್ನಡ) ಪದವಿಯನ್ನು ಪಡೆದಿದ್ದು ಹಿಂದಿಯಲ್ಲಿ ವಿಶಾರದ, ಕನ್ನಡ ರತ್ನ ಪರೀಕ್ಷೆಗಳಲ್ಲಿಯೂ ತೇರ್ಗಡೆ ಹೊಂದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೂಫಿ ಪಥ ಮತ್ತು ಶರಣ ಪಥಗಳ ತೌಲನಿಕ ಅಧ್ಯಯನ ಎಂಬ ವಿಷಯದ ಮೇಲೆ ಮಹಾಪ್ರಬಂಧ ರಚಿಸಿ ಪಿಎಚ್‌ಡಿ ಪದವಿಯನ್ನು ಪಡೆದಿದ್ದರು.
ಶರಣ -ಸೂಫಿ ಪರಂಪರೆ ಜಾನಪದ ಸಂಶೋಧನೆ, ಕೃಷಿಕ್ಷೇತ್ರ, ಭಾವೈಕ್ಯತೆಯ ಪ್ರತಿಪಾದನೆ ಹೀಗೆ ಹತ್ತು ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ “ಜಲಗಾರ” ನಾಟಕವೂ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಕನ್ನಡ ಕೃತಿಗಳನ್ನು ಹಿಂದಿ ಭಾಷೆಗೆ ಅನುವಾದಿಸಿದ್ದಾರೆ. ಹಜ್ರತ್ ನವಾಜ್ (ಸಂಶೋಧನೆ), ಸಾಮಾಜಿಕ ಅನಿಷ್ಠಗಳು, ನೆಹರು ಮತ್ತು ಸಂಸದರು, ಸಿದ್ದಾಂತ ಶಿಖಾಮಣಿಯಲ್ಲಿ ಸಾರ್ವತ್ರಿಕ ಮೌಲ್ಯಗಳು(ಸಂಶೋಧನೆ), ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರ ‘ಜಂಗಮ್ ಕೀ ಓರ್’ (ಅನುವಾದ) ತಮ್ಮ ಪ್ರಮುಖ ಕೃತಿಗಳು. ಹಮೀದ್ ಚಿಂತನಶೀಲರೂ, ವಿದ್ವಾಂಸರೂ, ಕ್ರಿಯಾಶೀಲರೂ, ಅಧ್ಯಯನಶೀಲರೂ ಆಗಿದ್ದು ಕನ್ನಡ ಸಾಹಿತ್ಯ ಪರಂಪರೆಯನ್ನು ಬೆಳೆಸುವವರ ಪೈಕಿ ಅಗ್ರಗಣ್ಯರಾಗಿದ್ದರು. 12ನೇ ಶತಮಾನದ ಶರಣರ ಸಂದೇಶಗಳನ್ನು ಜನರ ಮನೆಮನೆಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದು, ವಚನ ಸಾಹಿತ್ಯ ಮತ್ತು ಪರಂಪರೆಯ ಕುರಿತಂತೆ ಜಾಗೃತಿಯನ್ನು ಮೂಡಿಸಿದ್ದರು. ನೂರಾರು ಪ್ರಶಸ್ತಿಗಳನ್ನಯ ರಾಷ್ಟ್ರ, ರಾಜ್ಯಮಟ್ಟದಲ್ಲಿ ಪಡೆದಿದ್ದ ಅವರ ಅಕಾಲಿಕ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ.
ಮೃತರು ಪತ್ನಿ, ಮೂವರು ಪುತ್ರಿಯರು, ಒಬ್ಬ ಪುತ್ರನನ್ನು ಅಗಲಿದ್ದಾರೆ.
ಅಂತ್ಯಕ್ರಿಯೆಯನ್ನು ಹಂದನಕೆರೆ ಸ್ವಗ್ರಾಮದಲ್ಲಿ ಬೆಳಿಗ್ಗೆ 10 ಗಂಟೆಗೆ ಅಂತ್ಯಸಂಸ್ಕಾರ ನಡೆಸುವುದಾಗಿ ಸಂಬಂಧಿಕರು ತಿಳಿಸಿದ್ದಾರೆ.
ಬೆಂಗಳೂರು: ನಗರದ ಕೆ ಆರ್ ಪೇಟೆಯ ಇಂಜಿನಿಯರ್ ಭವನದಲ್ಲಿ ಡಿಸೆಂಬರ್ 08 ರಂದು ಅಖಿಲ ಭಾರತ ಪರಿಶಿಷ್ಟ ಪಂಗಡ ಅಂಚೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರಪ್ರಥಮ ರಾಷ್ಟ್ರೀಯ ಸಮಾವೇಶ ಅದ್ದೂರಿಯಾಗಿ ನಡೆಯಿತು, ಹಿಂದುಳಿದ ವರ್ಗಗಳ ಹಾಗೂ ಪರಿಶಿಷ್ಟ ಪಂಗಡದ ಅಂಚೆ ನೌಕರರ ಸಾಮಾಜಿಕ , ಆರ್ಥಿಕ ಹಾಗೂ ರಾಜಕೀಯ ಬಲವರ್ಧನೆಯ ಹಿತಕ್ಕಾಗಿ ನಡೆದ ಮೊಟ್ಟಮೊದಲ ಸಮಾವೇಶವಾಗಿ ಸಾಕ್ಷಿಯಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನವದೆಹಲಿಯ ಪರಿಶಿಷ್ಟ ಪಂಗಡದ ಆಯೋಗದ ಸದಸ್ಯರಾದ ಹುಸೇನ್ ನಾಯಕ್, ಕರ್ನಾಟಕ ಅಡಾಕ್ ಸಮಿತಿಯ ಅಧ್ಯಕ್ಷರು ಮತ್ತು ಮೈಸೂರು ಸಹಾಯಕ ಅಂಚೆ ಅಧೀಕ್ಷಕರಾದ ಎಮ್ ಜೆ ಶ್ರೀನಿವಾಸ್, ನಂಜನಗೂಡು ವಿಭಾಗದ ಅಂಚೆ ಸಹಾಯಕರಾದ ಮಂಜುನಾಥ್ ನಾಯಕ್ ಉಪಸ್ಥಿತರಿದ್ದರು ಹಾಗೂ ಅಖಿಲ ಭಾರತ ಪರಿಶಿಷ್ಟ ಪಂಗಡದ ಅಂಚೆ ನೌಕರರು ಹಾಗೂ ಸಾರ್ವಜನಿಕರು ಸಮಾವೇಶದಲ್ಲಿ ಭಾಗವಹಿಸಿದ್ದರು.
ತಿಪಟೂರು ನಗರದ ಹಾಸನ ರಸ್ತೆ ಶಾರದ ನಗರ ರೈಲ್ವೆ ಮೇಲ್ಸೇತುವೆ ನಿರ್ಮಾಣಮಾಡಬೇಕು, ಎನ್ನುವ ಬಹುದಿನಗಳ ಬೇಡಿಕೆಗೆ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ನವರು 88.32ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ರೈಲ್ವೆ ಇಲಾಖೆ ಮಂಜೂರಾತಿ ನೀಡಲು ಯಶಸ್ವಿಯಾಗಿದ್ದಾರೆ.
ತಿಪಟೂರು ನಗರದ ಹೃದಯ ಭಾಗ ಶಾರದಾ ನಗರ ಮೇಲ್ಸೇತುವೆ ಮತ್ತು ಹೊನ್ನವಳ್ಳಿ ಮೇಲ್ಸೇತುವೆ ಸಂಪೂರ್ಣ ರೇಲ್ವೆ ಇಲಾಖೆ ವೆಚ್ಚದಲ್ಲಿ ಮಂಜೂರು ಮಾಡಲಾಗಿದೆ.
ದಿನಾಂಕ 27.10.2024ರಂದು ಶ್ರೀ ವಿ. ಸೋಮಣ್ಣ, ಮಾನ್ಯ ಲೋಕಸಭಾ ಸಂಸದರು, ತುಮಕೂರು ಹಾಗೂ ರೇಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವರು, ಭಾರತ ಸರ್ಕಾರ ಇವರು ತಿಪಟೂರಿನಲ್ಲಿ ಭಾರತೀಯ ರೇಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳೊಂದಿಗೆ ಸಾರ್ವಜನಿಕ ಕುಂದು ಕೊರತೆ ಸಭೆ ನಡೆಸಿದ್ದರು.
ಈ ಸಂದರ್ಭದಲ್ಲಿ ಸಾರ್ವಜನಿಕರು ತಿಪಟೂರಿನ ಹೃದಯ ಭಾಗ ಶಾರದಾ ನಗರದಲ್ಲಿ ಮೇಲ್ಸೇತುವೆ (ಎಲ್.ಸಿ.86) ಮತ್ತು ಹೊನ್ನವಳ್ಳಿ ಮೇಲ್ಸೆತುವೆ (ಎಲ್.ಸಿ.88) ನಿರ್ಮಾಣ ಮಾಡಿಸಿಕೊಟ್ಟು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಕೇಂದ್ರ ಸಚಿವ ಸೋಮಣ್ಣನವರು ಸ್ಥಳದಲ್ಲಿ ರೇಲ್ವೆ ಅಧಿಕಾರಿಗಳಿಗೆ ಈ ಬಗ್ಗೆ ಕ್ರಮ ಜರುಗಿಸಲು ಆದೇಶ ನೀಡಿದ್ದರು.
ಇದಕ್ಕೆ ಸ್ಪಂದಿಸಿ, ರೇಲ್ವೆ ಬೋರ್ಡ್ ತಿಪಟೂರಿನ ಶಾರದಾ ನಗರದಲ್ಲಿ (ಎಲ್.ಸಿ. 86) ಮೇಲ್ಸೇತುವೆಯನ್ನು ಒಟ್ಟು ರೂ.89.32 ಕೋಟಿ ವೆಚ್ಚದಲ್ಲಿ ಮಂಜೂರು ಮಾಡಿ ಆದೇಶಿಸಿದೆ.
ಎಲ್.ಸಿ.ನಂ.88 ಹೊನ್ನವಳ್ಳಿ ಮೇಲ್ಸೇತುವೆ ರಾಜ್ಯ ಸರ್ಕಾರ ಮತ್ತು ರೇಲ್ವೆ ಇಲಾಖೆಯ ವೆಚ್ಚ ಹಂಚಿಕೆಯ ವಿಷಯದಲ್ಲಿ ನೆನೆಗುದಿಗೆ ಬಿದ್ದಿತ್ತು. ವಿ.ಸೋಮಣ್ಣ ನವರು ಅಧಿಕಾರಿಗಳೊಂದಿ ಚರ್ಚಿಸಿ ಸಂಪೂರ್ಣ ವೆಚ್ಚವನ್ನು ರೇಲ್ವೆ ಬೋರ್ಡನಿಂದ ಮಂಜೂರು ಮಾಡಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಸಂಪೂರ್ಣ ರೇಲ್ವೆ ಇಲಾಖೆಯ ವೆಚ್ಚದಲ್ಲಿ ರೂ. 29.00 ಕೋಟಿ ಹೊನ್ನವಳ್ಳಿ ಮೇಲ್ಸೇತುವೆಗೆ ರೇಲ್ವೆ ಬೋರ್ಡ ಮಂಜೂರಾತಿ ನೀಡಿದೆ.
ತುಮಕೂರಿನ ಅಭಿವೃದ್ಧಿಗೆ ಸ್ಪಂದಿಸಿದ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಮತ್ತು ರೇಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ಸೋಮಣ್ಣ ಅಭಿನಂದನೆ ತಿಳಿಸಿದ್ದಾರೆ.
ತಿಪಟೂರು ತಾಲ್ಲೋಕಿನ ಹೊನ್ನವಳ್ಳಿ ಹೋಬಳಿ ಗ್ಯಾರಘಟ್ಟ ಗ್ರಾಮದ ತೋಟದ ಮನೆ ಮುಂಬಾಗ ಕಟ್ಟಿ ಹಾಕಿದ ಹಸುವಿನ ಮೇಲೆ ಚಿರತೆಯೊಂದು ದಾಳಿಮಾಡಿ,ತಿಂದು ಹಾಕಿರುವ ಘಟನೆ ನಡೆದಿದೆ.
ಗ್ಯಾರಘಟ್ಟ ಗ್ರಾಮದ ಸಿದ್ದೇಶ್ ಎಂಬುವವರಿಗೆ ಸೇರಿದ ಹಸುವನ್ನು ಮನೆಯಮುಂದೆ ಕಟ್ಟಿಹಾಕಲಾಗಿದು.ಸಂಜೆ 6.30ರ ಸಮಯದಲ್ಲಿ ಹಸುವಿನಮೇಲೆ ಚಿರತೆ ದಾಳಿಮಾಡಿ ಬಲಿಪಡೆದಿದೆ
ಗ್ಯಾರಘಟ್ಟ ಗ್ರಾಮದಲ್ಲಿ ಕಳೆದ ಒಂದುವಾರದಿಂದ ಚಿರತೆ ಕಾಣಿಸಿಕೊಂಡ ಬಗ್ಗೆ ಅರಣ್ಯ ಇಲಾಖೆಗೆ ಗ್ರಾಮಸ್ಥರು,ಮಾಹಿತಿ ನೀಡಿದರು,ಆದರೆ ಅರಣ್ಯ ಇಲಾಖೆ ಚಿರತೆ ಸೆರೆಹಿಡಿಯದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದುಸ್ಥಳಕ್ಕೆ ತಿಪಟೂರು ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆದಿದ್ದಾರೆ
ತಿಪಟೂರು:ಗಾಂಧಿನಗರ ಅರಸು ನಗರ ಸರ್ಕಲ್ ಬಳಿ ಎರಡುಗುಂಪುಗಳ ನಡುವೇ ಗಲಾಟೆ ನಡೆದಿದ್ದು ಚಾಕುವಿನಿಂದ ಇರಿಯಲಾಗಿದೆ. ಅರಸುನಗರ ವಾಸಿ ಪರ್ವೇಜ್ ಎಂಬುವವರು ಅರಸುನಗರ, ಸರ್ಕಲ್ ಬಳಿ ತೆರಳುತ್ತಿದ್ದಾಗ, ಅರಸುನಗರವಾಸಿಗಳಾದ ಮುಬಾರಕ್ ಉರುಫ್ ನಟ್ಟಾ.ಸಲ್ಮಾನ್ ಉರುಫ್ ಇಲ್ಲು,ನಯಾಜ್ ಎಂಬುವವರು ಗುಂಪುಕಟ್ಟಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಎರಡು ಗುಂಪುಗಳ ನಡುವೇ ನಡೆದ ಮಾರಾಮಾರಿ ಗಲಾಟೆಯಲ್ಲಿ ಪರ್ವೇಜ್ಎಂಬುವವನಿಗೆ ಚಾಕುವಿನಿಂದ ಇರಿಯಲಾಗಿದೆ.ಶೋಯೇಬ್ ಹಾಗೂ ರೋಷನ್ ಎಂಬುವವರಿಗೆ ಗಾಯಗಾಳಾಗಿವೇ ಗಾಯಾಳುವಳು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ
ಎರಡು ಗುಂಪುಗಳ ನಡುವೆ ಆಗಿಂದ್ದಾಗ್ಗೆ ಗಲಾಟೆಗಳು ಹೊಡೆದಾಟಗಳು, ನಡೆಯುತ್ತಿದವು ಎನ್ನಲಾಗಿದು, ಹಳೇ ದ್ವೇಷವೇ ಗಲಾಟೆಗೆ ಕಾರಣವಾಗಿದೆ. ಗಾಯಳು ಸೋದರ ಶೋಯೇಬ್ ಡಿಸೆಂಬರ್ 10ರಂದು ದೂರು ನೀಡಿದು, ದೂರಿನನ್ವಯ ತಿಪಟೂರು ನಗರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಕೈಗೊಳ್ಳಲಾಗಿದೆ.
ಮುದ್ದೇಬಿಹಾಳ: ತಾಲ್ಲೂಕಿನ ನಾಗಬೇನಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮೋಹನ ಬಾಬು ರವರು ಇತ್ತೀಚಿನ ರಾಜ್ಯ ಸರ್ಕಾರದ ಪದವೀಧರ ಶಿಕ್ಷಕ ನೇಮಕಾತಿಯಲ್ಲಿ ಸದರಿ ಶಾಲೆಗೆ ಆಯ್ಕೆಗೊಂಡ ಮೂರೇ ತಿಂಗಳಲ್ಲಿ ಊರಿನ ಗ್ರಾಮಸ್ಥರಿಗೆ ಹಾಗೂ ಮಕ್ಕಳಿಗೆ ಅಚ್ಚು ಮೆಚ್ಚಾಗಿದ್ದಾರೆ ಏಕೆಂದರೆ ಶಾಲೆಗೆ ಸ್ವಂತ ಹಣದಿಂದ ಸುಣ್ಣ ಬಣ್ಣ,ಕಿಡಕಿ ರೀಪೇರಿ ಲೈಟಿಂಗ್ ವ್ಯವಸ್ಥೆ,ಶಾಲಾ ಕೋಣೆಗೆ ಎರಡೆರಡು ಪ್ಯಾನ್ ವ್ಯವಸ್ಥೆ ಇನ್ನು ಮುಂತಾದ ಅಭಿವೃದ್ಧಿ ಕೆಲಸಗಳನ್ನು ಮಾಡಿ ಮಕ್ಕಳಿಗೆ ಹಾಗೂ ನಾಗಬೇನಾಳ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾಗಿ, ಅವನತಿ ಹೊಂದಿತ್ತಿರುವ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಪುಟ್ಟ ಆಸರೆಯಾಗುವ ಮೂಲಕ ಶಿಕ್ಷಕರಿಗೆ, ಪೋಷಕರಿಗೆ ಹಾಗೂ ಮಕ್ಕಳಿಗೆ ಸ್ಪೂರ್ತಿಯಾಗುತ್ತಿದ್ದಾರೆ, ಕಾರ್ಯಕ್ರಮದಲ್ಲಿ ಮಾತನಾಡಿದ ಕಾಯಕದಲ್ಲಿ ನಿರತರಾಗಿರುವರು ಎಲ್ಲವನ್ನೂ ಮರೆಯುತ್ತಾರೆ ಹಾಗೆಯೇ ನಮ್ಮ ಶಾಲೆಯ ಶಿಕ್ಷಕ ತಮ್ಮ ತನು ಮನ ಧನ ದಿಂದ ಶಾಲೆಯ ಅಭಿವೃದ್ಧಿಯಲ್ಲಿ ನಿರತರಾಗಿದ್ದಾರೆ ಎಂದರು, ಮತ್ತೊಬ್ಬರು ಮಾತನಾಡಿ ಒಬ್ಬ ಒಬ್ಬ ಉತ್ತಮ ಶಿಕ್ಷಕರನ್ನು ಗುಡಿ ಕಟ್ಟಿಸಿ ಗೌರವಿಸುವ ಜನ ನಮ್ಮ ತಾಲ್ಲೂಕಿನಲ್ಲಿದ್ದಾರೆ ಈ ಹಿಂದೆ ಸದರಿ ಶಾಲೆಯ ಬೆಳವಣಿಗೆ ನಕಾರಾತ್ಮಕ ಭಾವನೆ ಇತ್ತು ಇಂದು ನಮ್ಮ ಈ ಶಿಕ್ಷಕನಿಂದ ಅಭಿವೃದ್ಧಿಗೆ ಬದಲಾಗುತ್ತಿದೆ ಎಂದರು.ಗ್ರಾಮಸ್ಥರು ಹಾಗೂ ಪ್ರಗತಿಪರ,ರೈತಪರ,ದಲಿತಪರ ಸಂಘಟನೆಯ ಒಕ್ಕೂಟದಲ್ಲಿ ನಾಗಬೇನಾಳ ಗ್ರಾಮದ ಶಾಲೆಯ ಶಿಕ್ಷಕರಾದ ಮೋಹನ ಬಾಬು ಅವರಿಗೆ ಸನ್ಮಾನಿಸಲಾಯಿತುಈ ವೇಳೆಯಲ್ಲಿ ವೀರೇಶ ಕಾಜಗಾರ,ಮಲ್ಲು ತಳವಾರ,ಶಿವಾನಂದ ವಾಲಿ,ಸಂಗಪ್ಪ ಸುಲ್ತಾನಪೂರ,ಜಗದೀಶ ಪತ್ತಾರ, ಮೌನೇಶ ನಾಗಬೇನಾಳ ಭೀಮಣ್ಣ ರಕ್ಕಸಗಿ ಇತರರು ಭಾಗಿ ಯಾಗಿದ್ದರು
ತಿಪಟೂರು ತಾಲ್ಲೋಕಿನ ಕೆ.ಬಿ ಕ್ರಾಸ್ ಶ್ರೀಮದ್ ರಂಬಾಪುರಿ ಪ್ರೌಡ ಶಾಲಾ ಆವರದಲ್ಲಿ ಅದ್ದೂರಿಯಾಗಿ 6ನೇ ತಾಲ್ಲೋಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು.ಸಮ್ಮೆಳನಕ್ಕೆ ಸಕಲಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಪಟೂರು ಕನ್ನಡಸಾಹಿತ್ಯ ಪರೀಷತ್ ಅಧ್ಯಕ್ಷ ಬಸವರಾಜಪ್ಪ ತಿಳಿಸಿದರು
ನಗರದ ಕಲ್ಪತರು ಗ್ರ್ಯಾಂಡ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರೀಷತ್ ಅಧ್ಯಕ್ಷ ಬಸವರಾಜಪ್ಪ,ತಿಪಟೂರು ತಾಲ್ಲೋಕು ಕನ್ನಡ ಸಾಹಿತ್ಯ ಸಮ್ಮೇಳನವನ್ನ ಈ ಭಾರೀ ತಿಪಟೂರು ತಾಲ್ಲೋಕಿನ ಕೆ.ಬಿ ಕ್ರಾಸ್,ಶ್ರೀಮದ್ ರಂಭಾಪುರಿ ಪ್ರೌಡಶಾಲೆ ಆವರಣದಲ್ಲಿ ಆಯೋಜನೆ ಮಾಡಲಾಗಿದ್ದು, ಈ ಭಾರಿಯ ಸಮ್ಮೇಳನ ವಿಶೇಷವಾಗಿ ಆಚರಿಸಬೇಕು ಎನ್ನುವ ದೃಷ್ಠಿಯಿಂದ ಸಾಹಿತ್ಯ ಆಸಕ್ತರು,ಹಾಗೂ ಸದಸ್ಯರ ಜೊತೆ ಚರ್ಚಿಸಿ ಎಲ್ಲಾ ಸಿದ್ದತೆಗಳನ್ನ ಮಾಡಿಕೊಳ್ಳಲಾಗುತ್ತಿದೆ,
ಸಮ್ಮೇಳನದ ಅಧ್ಯಕ್ಷರಾಗಿ ಕೇಂದ್ರ ಮಕ್ಕಳ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಖ್ಯಾತ ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.ತಿಪಟೂರು ಶಾಸಕ ಕೆ.ಷಡಕ್ಷರಿ ಮುಖ್ಯಾಅತಿಥಿಗಳಾಗಿ,ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್.ಮುಖಂಡರಾದ ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್,ಮಾಜಿ ಟೂಡ ಅಧ್ಯಕ್ಷ ಸಿ.ಬಿ ಶಶಿಧರ್.ಕೆ.ಟಿ ಶಾಂತಕುಮಾರ್ ,ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ. ತಹಸೀಲ್ದಾರ್ ಪವನ್ ಕುಮಾರ್,ಇಒ ಸುದರ್ಶನ್,ಡಿವೈಎಸ್ಪಿ ವಿನಾಯಕ ಎಸ್ ಶೆಟಗೇರಿ,ಹಿಂಡಿಸ್ಕೆರೆ ಗ್ರಾಮಪಂಚಾಯ್ತಿ ಅಧ್ಯಕ್ಷ ವಿದ್ಯಾ ಮಲ್ಲೇಶ್, ಅನೇಕ ಗಣ್ಯರು ಭಾಗವಹಿಸಲಿದ್ದಾರೆ.ತಿಪಟೂರು 6ನೇ ಸಾಹಿತ್ಯಸಮ್ಮೇಳನ ಅವಿಸ್ಮರಣೀಯವಾಗಿಸ ಬೇಕು , ಜನರಲ್ಲಿ ಹಾಗೂ ವಿದ್ಯಾರ್ಥಿಗಳು ಪುಸ್ತಕಗಳನ್ನ ಓದುವ ಗೀಳುಬೆಳಸಿಕೊಳಬೇಕು ಎನ್ನವ ದೃಷ್ಠಿಯಿಂದ ಎಸ್ ಗಂಗಾಧರಯ್ಯ ಸೇರಿದಂತೆ ಅನೇಕ ಬರಹಗಾರರ ಪುಸ್ತಗಳನ್ನ, ಮುದ್ರಿಸಿ ಹಂಚಲಾಗುವುದು, ಕನ್ನಡಾಭಿಮಾನಿಗಳು,ಸಾಹಿತ್ಯಾಸಕ್ತರು.ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಪತ್ರಿಕಾ ಘೋಷ್ಠಿಯಲ್ಲಿ ಕನ್ನಡ ಸಾಹಿತ್ಯಪರೀಷತ್ ಸಂಘಟನಾ ಕಾರ್ಯದರ್ಶಿ ದಿವಾಕರ್ ಮಾತನಾಡಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಖ್ಯಾತ ಸಾಹಿತಿ ಎಸ್ ಗಂಗಾಧರ್ ಅಧ್ಯಕ್ಷತೆಯಲ್ಲಿ ಕವಿ ಘೋಷ್ಠಿಗಳನ್ನ ಅಯೋಜನೆ ಮಾಡಲಾಗಿದೆ, ತಾಲ್ಲೋಕಿನ ಉದಯೋನ್ಮುಖ ಕವಿಗಳು. ಹಾಗೂ ವಿವಿಧ ಕ್ಷೇತ್ರಗಳ ಸಾಧಕರು, ವಿಷಯಗಳನ್ನ ಮಂಡಿಸಲಿದ್ದಾರೆ ಎಂದು ತಿಳಿಸಿದರು
ಪತ್ರಕಾ ಘೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರೀಷತ್ ಕಾರ್ಯದರ್ಶಿ ಶಾರದಮ್ಮ, ಹೋಬಳಿ ಘಟಕದ ಅಧ್ಯಕ್ಷ ಬಳ್ಳೆಕಟ್ಟೆ ಶಂಕರಪ್ಪ. ಗಂಗಾಧರಪ್ಪ.ಪ್ರಾಚಾರ್ಯರಾದ ಶಿವಕುಮಾರ್.ಮಂಜಪ್ಪ ಮುಂತ್ತಾದವರು ಉಪಸ್ಥಿತರಿದರು