ಕಾಣೆಯಾಗಿದ್ದಾರೆ ಸಾರ್ವಜನಿಕರಲ್ಲಿ ವಿನಂತಿ ಈ ಮೇಲ್ಕಂಡ ಭಾವಚಿತ್ರದಲ್ಲಿರುವ ವೃದ್ದ ಪುರುಷರು ಮಾನಸಿಕ ಅಸ್ವಸ್ಥತೆಯಿಂದ ಇವರು ದಿನಾಂಕ: 14-12-2024 ನೇರಳೆಕೆರೆ ಗ್ರಾಮ ನಿಟ್ಟೂರು ಹೋಬಳಿ ಗುಬ್ಬಿ ತಾಲ್ಲೂಕು ತುಮಕೂರು ಜಿಲ್ಲೆ ಕರ್ನಾಟಕ ರಾಜ್ಯದ ಈ ವಿಳಾಸದಿಂದ ಕಾಣೆಯಾಗಿರುತ್ತಾರೆ, ಇವರು ಕಾಣೆಯಾದಗ ಬಿಳಿ ಬಣ್ಣದ ಅಂಗಿ ಮತ್ತು ಹಸಿರು ಬಣ್ಣದ ನಿಕ್ಕರ್ ಧರಿಸಿರುತ್ತಾರೆ.ಇವರ ಸುಳಿವು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಬಾಧಿತ ಕುಟುಂಬದ ಸದಸ್ಯರ ದೂರವಾಣಿ ಸಂಖ್ಯೆಗೆ ಸಂಪರ್ಕ ಮಾಡಲು ಕೋರಲಾಗಿದೆ.
ತಿಪಟೂರು: ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಯಿಂದ ಮಹಿಳೆಯರು ದೌರ್ಜನ್ಯಕೊಳಗಾಗುತ್ತಿದ್ದು ರಾಜ್ಯಸರ್ಕಾರ ಮೈಕ್ರೋ ಫೈನಾನ್ಸ್ ಅನುಮತಿಯನ್ನ ರದ್ದುಗೊಳಿಸಬೇಕು ಹಾಗೂ ಸಾಲವಸೂಲಿಗೆ ಗುಂಡಾಗಿರಿ ನಡೆಸುತ್ತಿರುವ,ಮೈಕ್ರೋಪೈನಾನ್ಸ್ ಗಳ ವಿರುದ್ದ ಪ್ರಕರಣ ದಾಖಲಿಸ ಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ ) ರಾಜ್ಯಸಮಿತಿ ಸದಸ್ಯ ಕುಂದೂರು ತಿಮ್ಮಯ್ಯ ಒತ್ತಾಯಿಸಿದರು
ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಕುಂದೂರು ತಿಮ್ಮಯ್ಯ ರಾಜ್ಯದಲ್ಲಿ ಮೈಕ್ರೋ ಪೈನಾನ್ಸ್ ಗಳು ಮಹಿಳೆಯರ ಮೇಲೆ ಗುಂಡಾಗಿರಿ ದೌರ್ಜನ್ಯ ನಡೆಸುತ್ತಿವೆ, ಜಿಲ್ಲೆಯಲ್ಲಿ ಸುಮಾರು 125ಜನ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಸಾವಿರಾರು ಜನ ಮರ್ಯಾದೆಗೆ ಅಂಜಿ, ಮನೆಮಠತೊರೆದು,ಊರು ಬಿಟ್ಟಿದ್ದಾರೆ,ಮಹಿಳೆಯರ ಸಮಸ್ಯೆಗಳನ್ನ ಹಾಲಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಗೆ ಮೈಕ್ರೋಪೈನಾನ್ಸ್ ಗಳಿಗೆ, ಆಗುತ್ತಿರು ದೌರ್ಜನ್ಯ ಹಾಗೂ ಫೈನಾನ್ಸ್ ಗಳ ಕರಾಳಮುಖ ದರ್ಶನವಾಯಿತು, ನೊಂದಮಹಿಳೆಯರ ಪರವಾಗಿ ತಿಪಟೂರಿನಲ್ಲಿ ಆರಂಭವಾದ ಹೋರಾಟ ಇಂದು ರಾಜ್ಯದಾದ್ಯಂತ ಜನಚಳುವಳಿಯಾಗಿ ರೂಪುಗೊಳುತ್ತಿದ್ದು, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಹಿಳೆಯರು ಸಂಘಟಿತರಾಗಿ ಹೋರಾಟಕ್ಕೆ ಇಳಿದಿದ್ದಾರೆ, ಕರಾವಳಿ ಭಾಗ,ಮಂಡ್ಯ ಮೈಸೂರು ಚಿತ್ರದುರ್ಗ, ಸೇರಿದಂತೆ ಹಲವಾರುಕಡೆ ಹೋರಾಟಗಳು ನಡೆಯುತ್ತಿವೆ, ಮೊನ್ನೆ ಬೆಳಗಾವಿ ವಿಧಾನಸಭಾ ಅಧಿವೆಷನದಲ್ಲಿ ಅರಸಿಕೆರೆ ಶಾಸಕ ಕೆ.ಎಂ ಶಿವಲಿಂಗೇಗೌಡರು ಸಮಾಜದಲ್ಲಿ ಮೈಕ್ರೋ ಪೈನಾನ್ಸ್ ಗಳು ಮಹಿಳೆಯರ ಮೇಲೆ ನಡೆಸುತ್ತಿರು ದೌರ್ಜನ್ಯ ದಬ್ಬಾಳಿಕೆಯನ್ನ ವಸ್ತು ನಿಷ್ಠವಾಗಿ ಚರ್ಚೆ ಮಾಡಿ ಸದನಕ್ಕೆ ಮನವರಿಕೆ ಮಾಡಿದ್ದಾರೆ, ಅದೇ ರೀತಿ ನರೇಂದ್ರಸ್ವಾಮಿ ಸಹ ಸದನದಲ್ಲಿ ಧ್ವನಿ ಎತ್ತಿದ್ದು ಶಾಸಕ ಶಿವಲಿಂಗೇಗೌಡರ ಜನಪರ ಕಾಳಜಿಗೆ ದಸಂಸ ಅಭಿನಂದನೆ ಸಲ್ಲಿಸುತ್ತದೆ, ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಸಹ ಮೈಕ್ರೋ ಫೈನಾನ್ಸ್ ಹಾವಳಿಗೆ ಕಡಿವಾಣ ಹಾಕಲು,ಸೂಕ್ತ ಕಾನೂನು ರೂಪಿಸುವ ಬರವಸೆ ನೀಡಿರುವುದು ಹೋರಾಟಗಾರರಲಿ ಹಾಗೂ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ
ಮೈಕ್ರೋ ಫೈನಾನ್ಸ್ ಗಳಿಂದ ಮಹಿಳೆಯರ ಮೇಲೆ ದೌರ್ಜನ್ಯಗಳಾಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಪೊಲೀಸ್ ವರೀಷ್ಠಾಧಿಕಾರಿಗಳನ್ನ ಭೇಟಿ ಮಾಡಿ,ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಮನವರಿಕೆ ಮಾಡಲಾಗಿದೆ, ಮೇಲಾಧಿಕಾರಿಗಳು ಸೂಚಿಸಿದರೂ, ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿ ಕ್ರಮವಹಿಸಲು ಹಿಂದೇಟು ಹಾಕುತ್ತಿದ್ದಾರೆ, ಪೊಲೀಸ್ ಇಲಾಖೆಯ ನಡೆ , ಅನುಮಾನಕ್ಕೆ ಕಾರಣವಾಗಿದ್ದು ,ಸ್ಥಳೀಯವಾಗಿ ಮೈಕ್ರೊಪೈನಾನ್ಸ್ ಗಳ ಜೊತೆ ಒಳ ಒಪ್ಪಂದ ಮಾಡಿಕೊಂಡಿರುವ ಅನುಮಾನವಿದೆ, ಠಾಣೆ ಹಂತದ ಅಧಿಕಾರಿಗಳು ,ಮೈಕ್ರೋ ಫೈನಾನ್ಸ್ ಗಳು ದೌರ್ಜನ್ಯ ನಡೆಸಿದ್ದಾಗ ಯಾರದರೂ ಮಹಿಳೆಯರು ದೂರುನೀಡಿದರೇ ಕಾನೂನು ಕ್ರಮಕೈಗೊಳಬೇಕು, ಸರ್ಕಾರ ಮೈಕ್ರೋ ಫೈನಾನ್ಸ್ ಲೈಸೆನ್ಸ್ ರದ್ದುಗೊಳಿಸಿ ,ದೌರ್ಜನ್ಯದಿಂದ ಪ್ರಣಕಳೆದುಕೊಂಡ ಕುಟುಂಬಗಳಿಗೆ ಪರಿಹಾರ ನೀಡಲು, ರಾಜ್ಯಾಧ್ಯಕ್ಷರಾದ ಮಾವಳ್ಳಿ ಶಂಕರ್ ಅವರನೊಳ್ಳ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನ ಭೇಟಿ ಮಾಡಿ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಮಹಿಳೆ ಘಟಕದ ತಾಲ್ಲೋಕು ಅಧ್ಯಕ್ಷೆ ನಂದಿನಿ ಮಾತನಾಡಿ ಮೈಕ್ರೋ ಫೈನಾನ್ಸ್ ಗಳು ಸಾಲವಸೂಲಿಗೆ ಗುಂಡಾಗಿರಿ ಮಾಡುತ್ತಿರುವುದು ಸರಿಯಲ್ಲ, ಮೈಕ್ರೋ ಫೈನಾನ್ಸ್ ಹಾವಳಿಯಿಂದ ನೂರಾರು ಜನ ಆತ್ಮಹತ್ಯೆ ಮಾಡಿಕೊಂಡಿದು ಸರ್ಕಾರ ಮೈಕ್ರೋ ಫೈನಾನ್ಸ್ ನಿಷೇದಿಸ ಬೇಕು, ಹಾಗೂ ಕಠಿಣ ಕಾನೂನು ರೂಪಿಸಬೇಕು, ಅರಸೀಕೆರೆ ಶಾಸಕರು ಜನಪರವಾಗಿ ಸದನದಲ್ಲಿ ಧ್ವನಿಎತ್ತಿರುವುದು ಅಭಿನಂದನೀಯ ಎಂದು ತಿಳಿಸಿದರು. ದಸಂಸ ತಾಲ್ಲೋಕು ಸಂಚಾಲಕ ಮೋಹನ್ ಜಕ್ಕನಹಳ್ಳಿವಮಾತನಾಡಿ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಜಾಸ್ತಿಯಾಗಿದೆ. ಮಹಿಳೆಯರ ಮೇಲೆ ಕುಂದೂರು ತಿಮ್ಮಯ್ಯ ನವರ ನೇತೃತ್ವದಲ್ಲಿ ಹೋರಾಟ ರೂಪಿಸಿದ ಪರಿಣಾಮ ಮಹಿಳೆಯರು ಮೈಕ್ರೋ ಫೈನಾನ್ಸ್ ದೌರ್ಜನ್ಯಗಳ ವಿರುದ್ದ ಧ್ವನಿಎತ್ತುತ್ತಿದ್ದಾರೆ.ನಮ್ಮ ಹೋರಾಟವನ್ನು ಇನ್ನು ಪ್ರಭಲವಾಗಿ ರೂಪಿಸುತ್ತಿದ್ದು , ಮೈಕ್ರೋಫೈನಾನ್ಸ್ ಗಳನ್ನ ನಿಷೇದಿಸುವ ವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ತಿಳಿಸಿದರು
ಪತ್ರಿಕಾ ಘೋಷ್ಠಿಯಲ್ಲಿ ದಸಂಸ ತಾಲ್ಲೋಕು ಸಂಚಾಲಕ ಮೋಹನ್ ಜಕ್ಕನಹಳ್ಳಿ ,ಮಹಿಳಾ ಘಟಕ ತಾಲ್ಲೋಕು ಸಂಚಾಲಕಿ ನಂದಿನಿ.ಸಂಘಟನಾ ಸಂಚಾಲಕಿ ಮಂಜುಳ.ಸಂಘಟನಾ ಸಂಚಾಲಕ ಗಡಬನಹಳ್ಳಿ ಚಂದ್ರಶೇಖರ್.ಯಗಚೀಕಟ್ಟೆ ಮೂರ್ತಿ,ಚಿಕ್ಕನಾಯ್ಕನಹಳ್ಳಿ ಸಂಘಟನಾ ಸಂಚಾಲಕ ರಮೇಶ್ ಯರೇಕಟ್ಟೆ,ಇರ್ಫಾನ್ ತಿಪಟೂರು ತಾಲ್ಲೋಕು ಕಾರ್ಯದರ್ಶಿ ಕವಿತಾ ಭವ್ಯ, ಹ್ಯೂಮನ್ ರೈಟ್ಸ್. ಇನ್ಪರ್ಮೇಷನ್ ಕಮಿಟಿ ಅಧ್ಯಕ್ಷೆ ಶಮಾ ಫರ್ಮಿನ್.ಮುಂತ್ತಾದವರು ಉಪಸ್ಥಿತರಿದರು
ತುಮಕೂರು ಜಿಲ್ಲೆ ತಿಪಟೂರು ನಗರದ ಫಲಾಘಟ್ಟಿ ಬಡಾವಣೆಯಲ್ಲಿ ನೂತನವಾಗಿ ಮಂಜುರಾಗಿರುವ ವಾಲ್ಮಿಕಿ ಸಮುದಾಯ ಭವನಕ್ಕೆ ಸರ್ಕಾರ ಲ್ಯಾಂಡ್ ಆರ್ಮಿ ಸುಮಾರು ಎರಡು ಕೋಟಿ ವೆಚ್ಚದ ಕಾಮಗಾರಿ ಹಾಗೂ ಹೇಮಾವತಿ ಟಿಎಸ್ಪಿ ಅನುದಾನ 1ಕೋಟಿ ಸೇರಿ ಒಟ್ಟು 3ಕೋಟಿ ವೆಚ್ಚದಲ್ಲಿ ವಾಲ್ಮಿಕಿ ಭವನ ಕಾಮಗಾರಿ ಪ್ರಗತಿಯಲ್ಲಿದ್ದು ಕಾಮಗಾರಿಯನ್ನ ಕಳಪೆ ಗುಣಮಟ್ಟದ ವಸ್ತುಗಳಿಂದ ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿಗೆ ಬಳಕೆ ಮಾಡಿರುವ ಸಿಮೆಂಟ್ ,ಇಟ್ಟಿಗೆ, ಕಳೆಪೆಯಾಗಿದು, ಡಸ್ಟ್ ಬಳಸಿ ಕಾಮಗಾರಿ ಮಾಡಲಾಗುತ್ತಿದೆ. ಕಾಮಗಾರಿಗೆ ಬಳಸಿರುವ ಇಟ್ಟಿಗೆಗಳು ನೀರಿನಲ್ಲಿ ಕರಗುತ್ತಿದೆ.ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಕೆಆರ್ಡಿಎಲ್ ಹಾಗೂ ಹೇಮಾವತಿ ಅನುದಾನದ ಗುತ್ತಿಗೆಯನ್ನ ಚಿಕ್ಕಬಳ್ಳಾಪುರ ಮೂಲದ ರಾಮಿರೆಡ್ಡಿ ಗುತ್ತಿಗೆ ಪಡೆದಿದ್ದು . ಕಾಮಗಾರಿಯನ್ನು ಅತ್ಯಂತ ಕಳಪೆಗುಣಮಟ್ಟದಲ್ಲಿ ಮಾಡಲಾಗುತ್ತಿದೆ ಎಂದು ವಾಲ್ಮಿಕಿ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ವಾಲ್ಮಿಕಿ ಸಮುದಾಯದ ಮುಖಂಡ ಜಯಸಿಂಹ ಮಾತನಾಡಿ ಪರಿಶಿಷ್ಟ ಜಾತಿ ವಾಲ್ಮಿಕಿ ಭವನ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಿದೆ ಆದರೆ ಕಟ್ಟಡದ ಬೆಸ್ಮೆಂಟ್ ನಿರ್ಮಾಣಕ್ಕೆ ಕಲ್ಲಿನ ಬದಲಾಗಿ ಇಟ್ಟಿಗೆಯಿಂದ ನಿರ್ಮಾಣ ಮಾಡಲಾಗಿದ್ದು ಕಟ್ಟಡ ಸೀಪೇಜ್ ಬಂದಿದೆ. ಇಟ್ಟಿಗೆಗಳು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದ್ದು , ಮಳೆಬಂದಾಗ ಇಟ್ಟಿಗೆಗಳು ಕರಗುತ್ತಿವೆ, ಪಿಲ್ಲರ್ ಗಳಿಗೆ ಸರಿಯಾದ ಕ್ಯಾರಿಂಗ್ ಮಾಡಿಲ್ಲ,ನಗರದ ಯುಜಿಡಿ ಕೊಳಚೆ ನೀರನ್ನ ಕಾಮಗಾರಿಗೆ ಬಳಕೆ ಮಾಡಿದ್ದಾರೆ ಕಳಪೆಗಾಮಗಾರಿಯಿಂದ ಕಟ್ಟಡ ಗುಣಮಟ್ಟ ಕಳೆದುಕೊಂಡಿದೆ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿ ಕಟ್ಟಡ ಕಾಮಗಾರಿ ಪರಿಶೀಲನೆ ಮಾಡಿದ ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ ಮಾತನಾಡಿ ಸಮುದಾಯದ ಮುಖಂಡರ ಮನವಿಯಂತೆ ವಾಲ್ಮಿಕಿ ಭವನ ಕಾಮಗಾರಿ ಸ್ಥಳಪರಿಶೀಲನೆ ಮಾಡಿದ್ದೇವೆ ಕಾಮಗಾರಿಗೆ ಬಳಕೆ ಮಾಡಿದ ವಸ್ತುಗಳನ್ನ ಸಂಗ್ರಹಿಸಿ ಲ್ಯಾಬ್ ಗೆ ಕಳಿಸಿ ತಾಂತ್ರಿಕ ಪರಿಣಿತರ ವರದಿಯಂತೆ ಜಿಲ್ಲಾಧಿಕಾರಿಗಳಿಗೆ ವರದಿನೀಡಿ,ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು
ತಹಸೀಲ್ದಾರ್ ಪವನ್ ಕುಮಾರ್ ಸ್ಥಳಪರೀಶೀಲನೆ ಮಾಡಿ ಕಟ್ಟಡ ಕಳಪೆಯಾಗಿರುವ ಬಗ್ಗೆ ಮೆಲ್ನೋಟಕ್ಕೆ ಕಂಡುಬಂದಿದ್ದು, ತಾಂತ್ರಿಕ ಪರಿಣಿತರ ವರದಿ ಬರುವವರೆಗೆ ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದ್ದೇವೆ ಮೇಲಾಧಿಕಾರಿಗಳ ಸೂಚನೆಯಂತೆ ಕ್ರಮವಹಿಸುತ್ತೇವೆ ಎಂದರು
ಕಾಮಗಾರಿ ಸ್ಥಳಪರಿಶೀಲನೆ ವೇಳೆ ನಗರಸಭಾ ಸದಸ್ಯ ಮಹೇಶ್.ಮುಖಂಡರಾದ ಜಯಸಿಂಹ, ಸೀತಾರಾಮನಾಯ್ಕ.ಮಂಜುನಾಥ್ ನಾಗರಾಜು, ಮಹಲಿಂಗನಾಯ್ಕ ಮುಂತ್ತಾದವರು ಉಪಸ್ಥಿತರಿದರು
ತಿಪಟೂರು ತಾಲ್ಲೋಕಿನ ಪುಣ್ಯಕ್ಷೇತ್ರ ಕಲ್ಪತರು ನಾಡಿನ ಶಕ್ತಿಪೀಠ ದಸರೀಘಟ್ಟ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಧನುರ್ಮಾಸ ಹುಣ್ಣಿಮೆ ಪ್ರಯುಕ್ತ ಶ್ರೀ ಚೌಡೇಶ್ವರಿ ದೇವಿ ಹಾಗೂ ಶ್ರೀ ಕರಿಯಮ್ಮ ದೇವಿಯವರಿಗೆ ವಿಶೇಷ. ಅಲಂಕಾರ ಹಾಗೂ ಪೂಜೆ ನೆರವೇರಿಸಲಾಯಿತು. ಆದಿಚುಂಚನಗಿರಿ ದಸರೀಘಟ್ಟ ಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಚಂದ್ರಶೇಖರನಾಥ ಮಹಾಸ್ವಾಮಿಗಳ ನೇತೃತ್ವದಲ್ಲಿ ದೀಪಾರಾಧನೆ ಹಾಗೂ ಪ್ರಾಕಾರೋತ್ಸವ ನೆರವೇರಿಸಲಾಯಿತು.ಶ್ರೀ ಚೌಡೇಶ್ವರಿ ಉತ್ಸವ ಮೂರ್ತಿಯನ್ನ ರಥದಲ್ಲಿ ಕೂರಿಸಿ ಉತ್ಸವ ನೆರವೇರಿಸಲಾಯಿತು ಧನುರ್ಮಾಸ ಹುಣ್ಣಿಮೆ ಅಂಗವಾಗಿ ನೂರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಪೂಜೆಸಲ್ಲಿಸಿದರು
ತಿಪಟೂರು:ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದು,ಸುಮಾರು 4ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವ ಕಾಲೇಜಿನಲ್ಲಿ ಶಿಸ್ತು ,ಉಲಂಗನೆಯಾಗಿದ್ದು, ಕಾಲೇಜು ಶಿಸ್ತು ಸಮಿತಿ ನಾಮಕಾವಸ್ತೆಗೆ ಕೆಲಸ ಮಾಡುತ್ತಿದೆ ಎಂದು ಸರ್ಕಾರಿ ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ತೀರ್ಥಕುಮಾರ್ ಆರೋಪಿಸಿದರು ನಗರದ ಕೌಸ್ತುಭ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು. ಬರುತ್ತಾರೆ, ಪೋಷಕರು ಸಹ ತಮ್ಮ ಮಕ್ಕಳ ಮೇಲೆ ಭವಿಷ್ಯದ ಕನಸ್ಸುಗಳನ್ನ ಇಟ್ಟುಕೊಂಡು ಕಾಲೇಜಿಗೆ ಕಳಿಸುತ್ತಿದ್ದು, ಕಳೆದ ಮೂರ್ನಾಲ್ಕು ದಿನಗಳ ಹಿಂದೆ,ಕಾಲೇಜು ಆವರಣದಲ್ಲಿ ನಡೆದಿರುವ, ಗುಂಪುಹಲ್ಲೇ ಪ್ರಕರಣ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಉಂಟುಮಾಡಿದೆ,ಕಾಲೇಜು ಆವರಣದೊಳಕ್ಕೆ ಹೊರಗಿನ ವಿದ್ಯಾರ್ಥಿಗಳು ಹಾಗೂ ಕೆಲ ಪುಂಡರು ಪ್ರವೇಶ ಮಾಡುತ್ತಿದ್ದಾರೆ, ಗುಂಪುಕಟ್ಟಿಕೊಂಡು ಗುಂಡಾಗಿರಿ ಮಾಡುತ್ತಿರುವ ಅನೇಕ ಪ್ರಕರಣಗಳು ನಡೆದಿವೆ. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರಾಚಾರ್ಯರ ಗಮಕ್ಕೆ ತಂದರೂ,ಕ್ರಮವಹಿಸದೇ ಜಾಣಮೌನ ತಾಳಿದ್ದಾರೆ,ಪ್ರಾಚಾರ್ಯರ ಮೌನ ಕಾಲೇಜಿನಲ್ಲಿ ಪುಂಡಾಟಿಕೆ ಹೆಚ್ಚುವ ಆತಂಕ ಉಂಟುಮಾಡಿದೆ.ಈ ಹಿಂದೆ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿದ ಜಯದೇವಪ್ಪ ನವರ ಕಾಲಾವಧಿಯಲ್ಲಿ ಕಾಲೇಜು ಶಿಸ್ತು ಬದ್ದವಾಗಿ, ನಡೆಯುತ್ತಿತ್ತು, ವಿದ್ಯಾರ್ಥಿ ವಿದ್ಯಾರ್ಥಿನಿಯರೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸುತ್ತಿದ್ದರು ಆದರೆ ಇತ್ತಿಚಿನ ದಿನಗಳಲ್ಲಿ ಕಾಲೇಜಿನಲ್ಲಿ ಶಿಸ್ತು ಮಾಯವಾಗಿದ್ದು,ಕಾಲೇಜಿಗೆ ಹೊರಗಿನ ವ್ಯಕ್ತಿಗಳು ಪ್ರವೇಶಿಸುವುದು, ಕಾಲೇಜು ಆವರಣಕ್ಕೆ ಬೈಕ್ ತೆಗೆದುಕೊಂಡುಹೋಗಿ ವೀಲಿಂಗ್ ಮಾಡುವ ಕೃತ್ಯದಲ್ಲಿ ತೊಡಗಿದ್ದಾರೆ. ಕಾಲೇಜು ಶಿಸ್ತು ಸಮಿತಿ ವಿದ್ಯಾರ್ಥಿಗಳಲ್ಲಿ ಶಿಸ್ತುಪಾಲನೆಗೆ ಕಟ್ಟುನಿಟ್ಟಿನ ಕ್ರಮವಹಿಸಬೇಕು.ಕಾಲೇಜು ಆವರಣದಲ್ಲಿ ಸೆಕ್ಯುರಿಟಿ ವ್ಯವಸ್ಥೆಗೊಳಿಸಿ, ಕಾಲೇಜು ಪ್ರವೇಶ ದ್ವಾರಲ್ಲಿ ಗುರುತಿನ ಚೀಟಿ ಪರಿಶೀಲನೆ ಮಾಡಿ ವಿದ್ಯಾರ್ಥಿಗಳು ಕಾಲೇಜು ಒಳಗೆ ಪ್ರವೇಶಿಸುವಂತೆ ಮಾಡಬೇಕು, ಕಾಲೇಜು ಒಳಗೆ ಹಾಗೂ ಹೊರಗೆ ಯಾವುದೇ ಅಹಿತಕರ ಘಟನೆಗಳು ನಡೆದರು ನಿರ್ಧಾಕ್ಷ್ಯಣ್ಯ ಕ್ರಮವಹಿಸ ಬೇಕು ಆಗಮಾತ್ರ ಹಳ್ಳಿಗಾಡಿನ ವಿದ್ಯಾರ್ಥಿಗಳು ನಿರ್ಭೀತಿಯಿಂದ ವಿದ್ಯಾಭ್ಯಾಸಕ್ಕೆ ಬರಲು ಸಾಧ್ಯವಾಗುತ್ತದೆ ಭವಿಷ್ಯತ್ ನಲ್ಲಿ .ರೌಡಿಸಂ.ಗುಂಡಾಗಿರಿ ರ್ಯಾಗಿಂಗ್ ನಂತಹ ಕೃತ್ಯಗಳು ನಡೆಯದಂತೆ ಕಡಿವಾಣ ಬಿಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು ಪತ್ರಿಕಾ ಘೋಷ್ಠಿಯಲ್ಲಿ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಶರತ್,ಮುಖಂಡರಾದ ಶಿವಾನಂದ್ ಹೆಚ್.ಬಿ.ಭೂಷಣ್.ಬಾಬು.ಕುಮಾರ್ ಗಿರೀಶ್ ಮುಂತ್ತಾದವರು ಉಪಸ್ಥಿತರಿದರು
ತಿಪಟೂರು ತಾಲ್ಲೋಕು ಕೃಷಿ ಸಮಾಜ 2024-25ನೇ ಸಾಲಿನ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 26ಜನ ಅಭ್ಯಾರ್ಥಿಗಳು ಸ್ಪರ್ಧಿಸಿದ್ದು 15ಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ,ಎಂ.ಎಸ್ ಯೋಗೀಶ್,187,ಎಂ.ಸಿ ನಟರಾಜ್ 179.ಎಚ್.ಎಸ್ ಯೋಗಾನಂದ ಮೂರ್ತಿ178.ಎಂ.ಆರ್ ಸಂಗಮೇಶ್168.ಜಿ.ಬಿ ರಾಜಶೇಖರ್163.ಮುದ್ದುಲಿಂಗೇಗೌಡ 159.ಯೋಗಾನಂದಸ್ವಾಮಿ.ಎಂ.ಜಿ152.ಎಸ್.ಗಂಗಾಧರಯ್ಯ148.ಡಿ.ಎಂ ಶಂಕರಮೂರ್ತಿ142.ಕೆ.ಎಸ್ ಸದಾಶಿವಯ್ಯ132.ಮೋಹನ್ ಕೆ.ಆರ್ 131.ಎ.ಎಸ್ ವಿಜಯ್ ಕುಮಾರ್125.ವಿಶ್ವೇಶ್ವರಯ್ಯ124.ಎಸ್ ಬಸವರಾಜು.121.ಕೆ.ಎಸ್ ದೇವರಾಜು116ಮತ ಪಡೆಯುವ ಮೂಲಕ 15ಜನ ನಿರ್ದೇಶಕರು ಆಯ್ಕೆಯಾಗಿದ್ದಾರೆ
ಚುನಾವಣಾಧಿಕಾರಿಗಳಾಗಿ ಸಹಾಯಕ ಕೃಷಿ ನಿರ್ದೇಶಕ ಪವನ್ ಕರ್ತವ್ಯ ನಿರ್ವಹಿಸಿದರು ಬೆಳಗ್ಗೆಯಿಂದ ಆರಂಭವಾದ ಚುನಾವಣೆ 3 ಗಂಟೆಗೆ ಮುಕ್ತಾಯವಾಗಿದ್ದು 3ಗಂಟೆ ಆರಂಭವಾದ ಮತ ಏಣಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು ಚುನಾವಣಾಧಿಕಾರಿಗಳು ವಿಜೇತ ಅಭ್ಯಾರ್ಥಿಗಳನ್ನ ಘೋಷಣೆ ಮಾಡಿದ್ದಾರೆ.
ನೂತನವಾಗಿ ಆಯ್ಕೆಯಾದ ನಿರ್ದೇಶಕರನ್ನ ಶಾಸಕ ಕೆ.ಷಡಕ್ಷರಿ ಕಾಂಗ್ರೇಸ್ ಮುಖಂಡ ನಿಖಿಲ್ ರಾಜಣ್ಣ,ಮಾಜಿ ತಾ.ಪಂ ಅಧ್ಯಕ್ಷ ಎಂಬಿ ಪರಮಶಿವಯ್ಯ, ನ್ಯಾಕೇನಹಳ್ಳಿ ಸುರೇಶ್. ಬಸವರಾಜು ಮಾದೀಹಳ್ಳಿ ರೇಣು ಮುಂತ್ತಾದವರು ಅಭಿನಂದಿಸಿದರು
ತುಮಕೂರು ಜಿಲ್ಲೆ ತಿಪಟೂರು ತಾಲ್ಲೋಕಿನ ಪುಣ್ಯಕ್ಷೇತ್ರ ಹತ್ಯಾಳ್ ಶ್ರೀ ನರಸಿಂಹಸ್ವಾಮಿ ಬೆಟ್ಟ ಪ್ರತಿದಿನ ಸಾವಿರಾರು ಜನ ಭಕ್ತರು ಭೇಟಿ ನೀಡುವ ಕ್ಷೇತ್ರ,.ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂನು ಲಕ್ಷ ಭೇಟಿ ನೀಡುವ ಸ್ಥಳ ಅನೈರ್ಮಲ್ಯದ ತಾಣವಾಗಿ, ರೋಗರುಜಿನಗಳನ್ನ ಹರಡುವ ತಾಣವಾಗಿದ್ದು,ಕ್ಷೇತ್ರಕ್ಕೆ ಬರುವ ಭಕ್ತರು ಶ್ರೀ ಸ್ವಾಮಿಯ ದರ್ಶನ ಪಡೆದು, ಜೀವನ ಪಾವನಗೊಳಿಸಿಕೊಳ್ಳಲು,ಬರುತ್ತಾರೆ, ಅದರೆ ಭಕ್ತರ ಅಗತ್ಯಕ್ಕೆ ತಕ್ಕಂತ, ಹತ್ಯಾಳ್ ಬೆಟ್ಟಕ್ಕೆ ಬರುವ ಭಕ್ತರು ಮೂಲಸೌಕರ್ಯಗಳ ಸೌಕರ್ಯವಿಲ್ಲದೆ ಪರದಾಡುವಂತ್ತಾಗಿದೆ.
ಪ್ರತಿವರ್ಷ ಲಕ್ಷಾಂತರ ರೂಪಾಯಿ ಹುಂಡಿಹಣ ಸಂಗ್ರಹವಾದರೂ ಹುಂಡಿಹಣ ಕ್ಷೇತ್ರದ ಅಭಿವೃದ್ದಿಗೆ ಬಳಕೆಯಾಗದೆ,ಸರ್ಕಾರದ ಕಿಸೆಸೇರುತ್ತಿದೆ ನರಸಿಂಹಸ್ವಾಮಿದೇವಾಲಯದ ಪರಿವಾರದೈವ ಕೆಂಚರಾಯಸ್ವಾಮಿ ದೇವಾಲಯದ ವಾತವಾರಣ ಸಂಪೂರ್ಣ ಕಲೂಷಿತ ವಾತಾವರಣದಿಂದ ಕೂಡಿದೆ. ದೇವಾಲಯದ ಸುತ್ತಲು ಸೂಕ್ತ ಸೌಚಾಲಯ ವ್ಯವಸ್ಥೆಇಲ್ಲದೆ,ಜನಪರದಾಡುವಂತ್ತಾಗಿದ್ದು ಬಯಲು ಮೂತ್ರಾಲಯ ಶೌಚಾಲಯ ಆಶ್ರಯಿಸುವಂತ್ತಾಗಿದೆ, ದೇವಾಲಯಕ್ಕೆ ಭೇಟಿ ನೀಡುವ ಬಹುತೇಕ ಭಕ್ತರಲ್ಲಿ ಮಾಸಾಂಹಾರಿಗಳೆ ಹೆಚ್ಚು,ಪ್ರತಿ ಶನಿವಾರ,ಭಾನುವಾರ,ಮಂಗಳವಾರಬುದವಾರ ಗುರುವಾರ ಶುಕ್ರವಾರ ಸೇರಿದಂತೆ,ಸೋಮವಾರ ಹೊರತುಪಡಿಸಿ, ಎಲ್ಲಾದಿನಗಳಲ್ಲಿ ಮರಿಸೇವೆ, ಹರಿಸೇವೆಗಳು, ನಡೆಯುತ್ತವೆ,ಆದರೇ ಹರಿಸೇವೆ ನಡೆಯುವ, ಜಾಗ ಮಾತ್ರಕೊಳಚೆ ತಾಣವಾಗಿದೆ, ಕೆಂಚರಾಯ, ಹಾಗೂ ನರಸಿಂಹ ಸ್ವಾಮಿಗೆ ಮಾಂಸಾಹಾರ ತಯಾರಿಸುವ ಜಾಗದಲ್ಲಿ ಕೊಳಚೆಯಾಗಿ ನಾರುತ್ತಿದ್ದು ಹಂದಿನಾಯಿಗಳ ಆಶ್ರಯತಾಣವಾಗಿದ್ದೆ, ಎಲ್ಲಂದರಲ್ಲಿ ಮಧ್ಯದ ಬಾಟಲ್ ಗಳು, ಪ್ಲಾಸ್ಟಿಕ್ ರಾಶಿ, ಉಂಡು ಬಿಸಾಕಿದೆ ಎಲೆ, ತಟ್ಟೆ ಪ್ಲೇಟ್ ಗಳ ಆವರಿಸಿವೆ, ವರ್ಷದ ಬಹುತೇಕ ದಿನಗಳಲ್ಲಿ ದೇವರ ತಳಿಗೆ ನಡೆದರೆ ಶ್ರಾವಣ, ಕಾರ್ತಿಕ ಮಾಸದಲ್ಲಿ ಭಕ್ತರ ಸಂಖ್ಯೆ ಹೆಚ್ಚು,ಲಕ್ಷ ಲಕ್ಷ ಜನ ಸೇರುವ ಜಾಗದಲ್ಲಿ ,ಸರಿಯಾದ ಸ್ವಚ್ಚತೆ ಇಲ್ಲ ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆಇಲ್ಲ, ತಳಿಗೆ ಮನೆಗಳು ಕೊಚ್ಚೆಗುಂಡಿಯಂತ್ತಾಗಿದು, ಅಲ್ಲಿಯ ವ್ಯವಸ್ಥೆ ಅಧಿಕಾರಿಗಳು ಹಾಗೂ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದರೆ ತಪ್ಪಲ್ಲ.
ಮಾಸಾಂಹಾರ ಸಂಸ್ಕೃತಿಯನ್ನೇ ಅಣಕಿಸುವ ವ್ಯವಸ್ಥೆ :ಅಧಿಕಾರಿಗಳ ವರ್ತನೆ ಮಾಂಸಾಹಾರದ ಬಗೆಗಿದ ದಾಷ್ಟ್ಯಹಾಗೂ ನಿರ್ಲಕ್ಷ್ಯದ ಸಂಕೇತದಂತೆ ಕಾಣುತ್ತಿದೆ, ಮಾಂಸಾರದ ಹಕ್ಕನೇ ಅಣಕಿಸುವಂತೆ ಅಧಿಕಾರಿಗಳು, ನಡೆದುಕೊಳುತ್ತಿದ್ದಾರೆ, ಮನುಷ್ಯರು ಕೂರಲು ನಿಲ್ಲಲು ಸಾಧ್ಯವಾಗದ, ಸ್ಥಳದಲ್ಲಿ ಮಾಂಸಾಹಾರ ತಯಾರಿಸಿ ,ದೇವರಿಗೆ ಅರ್ಪಿಸಿ ತಾವೂ ಊಟಮಾಡುವಂತ ಸ್ಥಿತಿ ಭಕ್ತರಿಗೆ ಇದೆ, ಸೊಳ್ಳೆ ನೊಣಗಳು ಜುಮ್ ಎನ್ನುತ್ತಿದರೆ, ಕೊಳೆತ ಆಹಾರ ಪದಾರ್ದಗಳ ವಾಸನೆಯಲ್ಲಿ ಮೂಗುಮುಚ್ಚಿಕೊಂಡು ಊಟ ಮಾಡುವ ದಯಾನೀಯ ವ್ಯವಸ್ಥೆಯನ್ನ ಬೆಟ್ಟದಲ್ಲಿ ಕಾಣಬಹುದಾಗಿದೆ. ಬೆಟ್ಟಕ್ಕೆ ಬರುವ ಅಧಿಕಾರಿಗಳಿಗೆ ಹುಂಡಿ ಮೇಲೆ ಮಾತ್ರಕಣ್ಣು: ಶ್ರೀಕ್ಷೇತ್ರ ಹತ್ಯಾಳು ಬೆಟ್ಟಕ್ಕೆ ಬರುವ ಅಧಿಕಾರಿಗಳು ನರಸಿಂಹಸ್ವಾಮಿ ದೇವಾಲಯಕ್ಕೆ ಮಾತ್ರ ಭೇಟಿ ನೀಡಿ ಕೈತೊಳೆದುಕೊಂಡರೆ, ಉಪವಿಭಾಗಾಧಿಕಾರಿಗಳು ಅಧ್ಯಕ್ಷರಾಗಿರು ಮುಜರಾಯಿ ದೇವಾಲಯದಲ್ಲಿ ಹುಂಡಿ ಹಣಕ್ಕೆ ಮಾತ್ರ ಸೀಮಿತವಾಗಿದೆ. ಸರ್ಕಾರ ಹಾಗೂ ಮುಜರಾಯಿ ಇಲಾಖೆ ಹತ್ಯಾಳು ಬೆಟ್ಟದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕಿದೆ, ಕ್ಷೇತ್ರದ ಭಕ್ತರ ಅಗತ್ಯತೆಗಳಿಗೆ ತಕ್ಕಂತೆ ಇನ್ನೂ ಹೆಚ್ಚಿನ ತಳಿಗೆ ಭವನಗಳನಿರ್ಮಾಣವಾಗ ಬೇಕಿದೆ, ಶ್ರೀಕ್ಷೇತ್ರದ ಪವಿತ್ರತೆಗೆ ತಕ್ಕಂತೆ ಸ್ವಚ್ಚತೆಗೆ ಆಧ್ಯತೆಕೊಡಬೇಕಿದ್ದು, ಕೆಂಚರಾಯ ಸ್ವಾಮಿ ದೇವಾಲಯದ ಸುತ್ತಲು ಸ್ವಚ್ಚತೆ, ತಳಿಗೆ ಮನೆಗಳಲ್ಲಿ ,ಸ್ವಚ್ಚತೆ , ಪ್ಲಾಸ್ಟಿಕ್ ವಿಲೇವಾರಿ ಹಾಗೂ ಊಟದ ಎಲೆಗಳ ಶುದ್ದಿಗೊಳಿಸಲು ಕ್ರಮವಹಿಸಬೇಕಿದೆ, ಲಕ್ಷಾಂತರ ಜನ ಭೇಟಿ ನೀಡುವ ಸ್ಥಳದಲ್ಲಿ ಶುದ್ದ ಕುಡಿಯುವ ನೀರಿನ ಸೌಲಭ್ಯವೇ ಇಲ್ಲವಾಗಿದ್ದು, ಸರ್ಕಾರ ಶುದ್ದ ನೀರು ದೊರಕಿಸಲು ಕ್ರಮವಹಿಸಬೇಕು. ಸ್ವಚ್ಚತೆಯಲ್ಲಿ ಕಾಪಾಡುವಲಿ ಮಾತ್ರ ಶ್ರೀಕ್ಷೇತ್ರ ಆಡಳಿತ ವ್ಯವಸ್ಥೆ ಮುಜರಾಯಿ ಇಲಾಖೆ ಸಂಪೂರ್ಣ ವಿಫಲವಾಗಿದೆ ಉಪವಿಭಾಗಾಧಿಕಾರಿಗಳು ಕೇವಲ ಹುಂಡಿಹಣದ ಮೇಲೆ ಕಣ್ಣಿಡದೆ ಕೆಂಚರಾಯ ಸ್ವಾಮಿದೇವಾಲಯದ ವಾತವರಣ ಹಾಗೂ ಕ್ಷೇತ್ರಕ್ಕೆ ತಳಿಗೆ ಮಾಡಲು ಬರುವ ಭಕ್ತರಿಗೆ ಮೂಲಸೌಕರ್ಯ ಹಾಗೂ ಸ್ವಚ್ಚವಾತವರಣ ನಿರ್ಮಿಸುವ ಕಡೆ ಗಮನಹರಿಸಬೇಕಿದೆ.ಲಕ್ಷಾನು ಲಕ್ಷ ಭಕ್ತರನ್ನು ಹೊಂದಿರುವ ಹತ್ಯಾಳ್ ಬೆಟ್ಟಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸಿ ಪ್ರೇಕ್ಷಣೀಯ ಸ್ಥಳವಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಕ್ರಮಕೈಗೊಳಬೇಕು ಎನ್ನುದು ಕ್ಷೇತ್ರದ ಭಕ್ತರ ಆಶಯ, ನರಸಿಂಹಸ್ವಾಮಿ ಅರ್ಚಕರಿಗೂ ಮೂಲಸೌಕರ್ಯವಿಲ್ಲದೆ ಪರದಾಟ: ಶ್ರೀಕ್ಷೇತ್ರ ಹತ್ಯಾಳು ನರಸಿಂಹ ಸ್ವಾಮಿ ದೇವಾಲಯದಲ್ಲಿ ಪೂಜೆ ನಿರ್ವಹಿಸುವ ಅರ್ಚಕರಿಗೆ ತಂಗಲು ವ್ಯವಸ್ಥೆಇಲ್ಲ , ಶೌಚಾಲಯಕ್ಕಾಗಿ ಬೆಟ್ಟದ ತಪ್ಪಲಿನ ತಳಿಗೆ ಮನೆಗೆ ಹೋಗಬೇಕು, ದೇವರಿಗೆ ವೈವೇದ್ಯ ತಯಾರಿಸಲು, ಪರದಾಡುವಂತ್ತಾಗಿದೆ . .ನೊಂದ ಅರ್ಚಕರು ಶ್ರೀ ಹತ್ಯಾಳು ನರಸಿಂಹಸ್ವಾಮಿ ದೇವಾಲಯ
ತುಮಕೂರು ಜಿಲ್ಲೆ ತಿಪಟೂರು ತಾಲ್ಲೋಕಿನ ಅರಣ್ಯದಂಚಿನ ಗಡಿಗ್ರಾಮಗಳಾದ ಹತ್ಯಾಳ್ ,ಗುಬ್ಬಿ ತಾಲ್ಲೋಕಿನ ಕಾರೇಕುರ್ಚಿ,ಕದಿರೇ ದೇವರಹಟ್ಟಿ ಭೋಮ್ಮರಸಹಳ್ಳಿ ಬಳಿ ಶನಿವಾರ ಹಾಗೂ ಭಾನುವಾರ ಆಯೋಜಿಸಿದ್ದ ಕರ್ನಾಟಕ ಕೆ.1000 ಕಾರು ರೇಸ್ ನಲ್ಲಿ ಕಲರವ ಪ್ರೇಕ್ಷಕರಮೈರೋಮಾಂಚನಗೊಳಿಸಿತು..ಪ್ರತಿ ವರ್ಷದಂತೆ ಈ ಭಾರಿಯೂ ಕಾರು ರೇಸ್ ಎರಡು ದಿನಗಳ ಕಾಲ ಪ್ರೇಕ್ಷಕರಿಗೆ ರಸದೌತಣನೀಡಿದವು.ಭೋಮ್ಮರಸನಹಳ್ಳಿ,ಶಿವಸಂದ್ರ ,ಕೊಂಡ್ಲಿ ,ಹತ್ಯಾಳ್ ತೀರ್ಥರಾಮ ಹಾಗೂ ಕಾರೇಕುರ್ಚಿಯ ರಸ್ತೆಗಳಲ್ಲಿ ಝಗ ಮಗಿಸುತ್ತಿದ್ದ ನಾನಾ ಮಾಡೇಲ್ ನ ಕಾರುಗಳ ವೇಗದ ಓಡಾಟ ರಸ್ತೆ ತಿರುವಿನಲ್ಲಿಯೂ ಬಗೆ ಬಗೆಯ ಕಲರ್ ನ ಕಾರುಗಳು ಸೌಂಡ್ ಮಾಡಿಕೊಂಡು ಧೂಳೆಬ್ಬಿಸಿಕೊಂಡು ಹೋಗುತ್ತಿದ್ದ ದೃಶ್ಯಗಳು ಮೈ ಜುಮ್ಮೆನಿಸುವಂತಿತ್ತು.
ವಿಶೇಷವಾಗಿ ರಾಷ್ವ್ರೀಯ ಅಂತರ ರಾಷ್ವ್ರೀಯ ಮಟ್ಟದ ಸ್ಪರ್ಧಾಳುಗಳು ರೇಸ್ ನಲ್ಲಿ ಭಾಗವಹಿಸಿದ್ದರು. ರೋಮಾಂಚನಕಾರಿಯಾಗಿದ್ದ ಕಾರು ರೇಸ್ ನೋಡಲು ಜನರು ರಸ್ತೆ ಬದಿ ತೋಟದ ಸಾಲಿನಲ್ಲಿ ನಿಂತು ಕುತೂಹಲದಿಂದ ಕಾಯುತ್ತಿದ್ದರು. ಕಾರ್ ಗಳು ಬರುತ್ತಿದಂತೆ ಸಿಳ್ಳೆ ಹೊಡೆದು ಚಪ್ಪಾಳೆ ತಟ್ಟಿ ಕಾರ್ ಗಳನ್ನ ಹುರಿದುಬ್ಬಿಸಿದರು. ಕಾರ್ ರೇಸ್ ನಲ್ಲಿ ಸುಮಾರು 56 ಕಾರುಗಳು ಭಾಗವಹಿಸಿದ್ದವು.ರೇಸ್ ನಲ್ಲಿ ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದು
ತಿಪಟೂರು ನಗರದ ಸರ್ಕಾರಿ ನೌಕರರ ಭವನದಲ್ಲಿ ನಡೆದ ಉಪವಿಭಾಗ ಮಟ್ಟದ ಪರಿಶಿಷ್ಟ ಜಾತಿ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯನ್ನ ತಿಪಟೂರು ಉಪವಿಭಾಗಾಧಿಕಾರಿಶ್ರೀಮತಿ ಸಪ್ತಶ್ರೀ ವಹಿಸಿದರು
ಡಾ//ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಬಿ.ಆರ್ ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಒಕ್ಕೊರಲಿನಿಂದ ಎಲ್ಲಾ ಸಂಘಟನೆಗಳ ಮುಖಂಡರು ಒತ್ತಾಯಿಸಿದರು ಜಿಲ್ಲಾ ಸಂಘಟನಾ ಸಂಚಾಲಕ ನಾಗ್ತೀಹಳ್ಳಿ ಕೃಷ್ಣಮೂರ್ತಿ ಮಾತನಾಡಿ ತಿಪಟೂರಿನಲ್ಲಿ ಸಂವಿಧಾನ ಶಿಲ್ಪಿ ಡಾ// ಬಿ.ಆರ್ ಅಂಬೇಡ್ಕರ್ ಪುತ್ಥಳಿ ಸ್ಥಾಪಿಸಬೇಕು ಎಂದು ಕಳೆದ ಹಲವಾರು ದಶಕಗಳಿಂದ ಹೋರಾಟ ಮಾಡುತ್ತಾ ಬಂದಿದ್ದು, ಹೋರಾಟದ ಫಲವಾಗಿ ಪ್ರವಾಸಿ ಮಂದಿರ ವೃತ್ತಕ್ಕೆ ಡಾ//ಬಿ.ಆರ್ ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡಲಾಗಿದೆ , ಪುತ್ಥಳಿ ನಿರ್ಮಾಣಕ್ಕೆ 10ಲಕ್ಷ ಹಣ ಮೀಸಲಿರಿಸಿದೆ, ಆದರೂ ಪುತ್ಥಳಿ ನಿರ್ಮಾಣ ಕಾರ್ಯನೆನೆಗುದಿಗೆ ಬಿದ್ದಿದೆ, ಕೂಡಲೇ ಪುತ್ಥಳಿ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗ ಬೇಕು ಎಂದು ಒತ್ತಾಯಿಸಿದರು. ಸಭೆಯಲ್ಲಿ ಪೆದ್ದಿಹಳ್ಳಿ ನರಸಿಂಹಯ್ಯ ಮತನಾಡಿ ದಲಿತರ ಮೇಲೆ ದೌರ್ಜನ್ಯಗಳು ನಡೆದಾಗ ಪೊಲೀಸ್ ಇಲಾಖೆಯಲ್ಲಿಯಿಂದ ದೌರ್ಜನ್ಯ ಮಾಡಿದ ವ್ಯಕ್ತಿಗಳಿಂದಲ್ಲೇ,ಕಂಪ್ಲೇಟ್ ಪಡೆದು ಪ್ರತಿದೂರು ದಾಖಲಿಸುವ ಕೆಲಸ ಮಾಡಲಾಗುತ್ತಿದೆ,ಪೊಲೀಸ್ ಇಲಾಖೆ ದಲಿತರ ಮೇಲೆ ದೌರ್ಜನ್ಯಗಳಾದಾಗ ಪ್ರತಿದೂರು ದಾಖಲಿಸದೆ ದೌರ್ಜನ್ಯಕೊಳಗಾದ ವ್ಯಕ್ತಿಗಳಿಗೆ ರಕ್ಷಣೆ ನೀಡಿ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು
ತಿಪಟೂರು: ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಜಾತಿ ಲಿಂಗ ಧರ್ಮ ಊರು ಕೇರಿ ಕಪ್ಪು ಬಿಳಿ ಬಡವರು ಶ್ರೀಮಂತರು ಮೇಲು ಕೀಳು ಚಿಕ್ಕದು ದೊಡ್ಡದು ಇತ್ಯಾದಿಯಾಗಿ ಛಿದ್ರಗೊಂಡು ಬದುಕುತ್ತಿದ್ದೇವೆ ಇವುಗಳಿಂದ ಮುಕ್ತಿ ಪಡೆಯಲು ನಾವು ಬಸವಣ್ಣನಗಳ ಶರೀಫರುಗಳು ಬುದ್ದರುಗಳ, ಕುವೆಂಪು ಬೇಂದ್ರೆಗಳ, ಲೋಹಿಯಾ ಅಂಬೇಡ್ಕರ್ ಗಳು ಅಕ್ಕ, ಸಿಮೋನ್ ದಿ ಬುವಾಗಳ, ತತ್ವಪದಕಾರರುಗಳ, ಸೂಫಿ ಸಂತರುಗಳ, ಸರ್ವಜ್ಞರುಗಳ ಇಂಥ ಸಾವಿರಾರು ವರ್ಷ ಆಯುಷ್ಯಳ್ಳ ಜೀವಿಗಳ ದನಿಗಳನ್ನು ಎದೆಗೂಡುಗಳಲ್ಲಿ ಕಾಪಾಡಿಕೂಳ್ಳಬೇಕು ಎಂದು ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ಮಾತನಾಡಿದರು. ನಗರದ ಕಿಬ್ಬನಹಳ್ಳಿ ಕ್ರಾಸ್ ಬಳಿ ಆಯೋಜಿಸಿದ್ದ ೬ನೇ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ವಹಿಸಿ ಮಾತನಾಡಿದರು, ನಾನು ಹುಟ್ಟಿ ಬೆಳೆದ ಊರು ಬಿಳಿಗೆರೆ ಇಲ್ಲಿಯೇ ನನ್ನ ಜೀವಿತಿದ ಬಹು ದಿನಗಳನ್ನು ಕಳೆದಿರುವೆ ಇಲ್ಲಿನ ಜನ, ಗಾಳಿ, ನೀರು ಅನ್ನಗಳ ಋಣದಲ್ಲಿ ಬದುಕುತ್ತಾ ಬಂದಿರುವೆ ಇಲ್ಲಿ ನನ್ನ ಬದುಕು ಬೆಳೆಯಲು ಅಕ್ಷರಗಳು ನನ್ನೊಳಗೆ ಹುಟ್ಟಿ ಇಳಿಯಲು, ಹಾಡುಗಳಾಗಿಯೋ, ಪಾಡುಗಳಾಗಿಯೋ, ಸಾಹಿತ್ಯವಾಗಿಯೋ, ಪಾಠಗಳಾಗಿಯೋ ರೂಪ ಪಡೆಯಲು ಎಷ್ಟೊಂದು ಜನ ಕಾರಣರಾಗಿದ್ದಾರೆ ಆ ಎಲ್ಲರನ್ನೂ ಪ್ರೀತಿಯಿಂದ ನೆನೆಯುತ್ತೇನೆ ಎಂದರು ಇಂದು ರಾಷ್ಟ್ರ ಕವಿ ಬಿರುದುಗಳು ಜಾತಿ ಆಧಾರಿತವಾಗಿದೆ ಶೂದ್ರ ಕವಿಗಳನ್ನು , ಶೂದ್ರ ಧರ್ಮವನ್ನು ಕಡೆಗಾಣಿಸಲಾಗುತ್ತಿದೆ, ಭೂಮಿ, ಅಧಿಕಾರಿ, ನೀರು ಸಮಾನವಾಗಿ ಹಂಚಕಿಯಾಗಿಲ್ಲ ಹೀಗೆ ಪ್ರಜಾಪ್ರಭುತ್ವ ಮಹಾ ತಾಯಿ ಧರ್ಮದಲ್ಲಿ ಅಸಮಾನತೆ ಮೂಡಿಸಲಾಗುತ್ತಿದೆ. ತಿಪಟೂರು ತಾಲ್ಲೂಕು ಕಲ್ಪತರ ನಾಡು ಎಂದು ಹೇಳುತ್ತೇವೆ ೧ ವರ್ಷ ಹೇಮಾವತಿ ನೀರು ಹಾಗೂ ಕೊಳವೆ ಬಾವಿಗಳಲ್ಲಿ ನೀರು ಬಾರದೆ ಹೋದರೆ ಕಲ್ಪತರು ನಾಡು ಬತ್ತುದೆ ತೆಂಗಿನ ಮರಕ್ಕೆ 85 ರೋಗಗಳು ತುತ್ತಾಗಿದೆ ಇದಕ್ಕೆ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೂಳ್ಳಬೇಕು ಎಂದು ಕಳವಳ ವ್ಯಕ್ತಪಡಿಸಿದರು, ಬುದ್ಧಿ ಹೆಚ್ಚಾಗುತ್ತಿದೆ ವಿವೇಕ ಮರೆಮಾಚುತ್ತಿದೆ ಕರ್ನಾಟಕದ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆ ಎಂಬ ಭಿನ್ನ ಭೇದಗಳ ನಡುವೆ ಇಕ್ಕಟ್ಟಿಗೆ ಸಿಕ್ಕಿರುವ ಕರ್ನಾಟಕದ ದುಡಿಯುವ ವರ್ಗಗಳನ್ನು ಈ ಇಕ್ಕಟ್ಟಿನಿಂದ ಬಿಡಿಸಿ ಅವರ ಮಕ್ಕಳು ಎಲ್ಲರಂತೆ ಸ್ವಾಭಿಮಾನದಿಂದ ಶಿಕ್ಷಣ ಪಡೆಯುವಂತಾಗಬೇಕು ವಿವೇಕಿಗಳಿಗೆಲ್ಲಾ ಕಣ್ಣಿಗೆ ರಾಚುತ್ತಿರುವ ಕಾರಣಗಳಿಂದಾಗಿ, ಮುಳುಗುತ್ತಿರುವ, ಸೋಲುತ್ತಿರುವ ಬಡವಾಗುತ್ತಿರು ಬಡವರ ಸರ್ಕಾರಿ ಶಾಲೆಗಳಿಗೆ ತಕ್ಷಣವೇ ಕಾಯಕಲ್ಪ ಒದಗಿಸಿ ಉಳಿಸಿಕೊಳ್ಳುತಿದ್ದರೇ, ಸರ್ಕಾರಗಳು ಕೊಡುತ್ತಿರುವ ಯಾವ ಸವಲತ್ತುಗಳಿಗೂ ಬೆಲೆ ಇಲ್ಲದಂತಾಗುತ್ತದೆ , ಇದರಿಂದ ಕನ್ನಡ ಸಾಹಿತ್ಯ ಭಾಷೆ ಬಡವಾಗುತ್ತದೆ ಇದಕ್ಕೆ ಅವಕಾಶ ಕೊಡಕೂಡದು ಎಂದು ಮಾತನಾಡಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಷಡಕ್ಷರಿ ಎತ್ತಿನಹೊಳೆ ಹಾಗೂ ಹೇಮಾವತಿ ನೀರನ್ನು ಬಲಪಡಿಸಲು ಶ್ರಮ ವಹಿಸಿದ್ದೇನೆ, ಯಾವುದೇ ಕಾರಣಕ್ಕೂ ತಿಪಟೂರನ್ನು ಬರಡಾಗಲು ಬಿಡುವುದಿಲ್ಲ ಕಲ್ಪತರ ನಾಡಗೇ ಉಳಿಯುತ್ತದೆ ಎಂದರು, ಸಾಹಿತ್ಯ ಉಳಿಯಲು ಬೆಳೆಯಲು ಅರಿವು ಮೂಡಿಸುವ ಇಂತಹ ಸಮ್ಮೇಳನಗಳು ಸಹಕಾರಿ, ಕನ್ನಡ ಶಾಲೆಗಳು ಉಳಿಯಲು ಮಕ್ಕಳಿಗೆ ಶ್ರದ್ಧೆ ಮತ್ತು ಪೋಷಕರಲ್ಲಿ ಕನ್ನಡ ಶಾಲೆಗೆ ಕಳುಹಿಸುವ ಆಸಕ್ತಿ ಮೂಡಿಸಬೇಕು ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಮಾತನಾಡಿ ಸಮ್ಮೇಳನ ವೆಂದರೆ ತಿಳಿಸುದರ ಜೂತೆಗೆ ಕಲಿಸುವುದು ಹೌದು ನಾಲ್ಕೈದು ಜಿಲ್ಲೆಗಳಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳು ತಿಪಟೂರು ತಾಲ್ಲೂಕಿನಲ್ಲಿ ನಡೆಯುತ್ತಿದೆ ಕನ್ನಡ ಸಾಹಿತ್ಯ ಪರಿಷತ್ ಜನಸಾಮಾನ್ಯರ ಪರಿಷತ್ತಾಗಬೇಕು ಜನಸಾಮಾನ್ಯರ ಶಕ್ತಿಯಿಂದ ಪರಿಷತ್ತಿಗೆ ಶಕ್ತಿ ಬಂದಿದೆ ಎಂದರೆ ಕನ್ನಡ ಭಾಷೆಯನ್ನು ಸೌಲಭ್ಯಗಳಿಗೆ ಅಷ್ಟೇ ಬಳಸಲಾಗುತ್ತಿದೆ ಎಂದು ಕನ್ನಡ ಭಾಷೆಗೆ ಜೀರ್ಣ ಶಕ್ತಿ ಚೆನ್ನಾಗಿ ಇದೆ ಎಷ್ಟು ಇಂಗ್ಲಿಷ್ ಪದಗಳನ್ನು ಕನ್ನಡದಲ್ಲಿ ಹಾಸುಹೊಕ್ಕಾಗಿದೆ, ಕನ್ನಡ ಭಾಷೆ ಬೆಳೆಯಲು ಸರ್ಕಾರದ ಎಲ್ಲ ಅಂಗಗಳಲ್ಲಿ ಕನ್ನಡ ಕಡ್ಡಾಯವಾಗ ಬೇಕು ಎಂದರು.