Month: December 2024

ತಿಪಟೂರು.ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ವಕೀಲರ ಸಂಘ, ತಾಲ್ಲೂಕು ವಿಶೇಷ ಚೇತನರ ವೇದಿಕೆ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ತಿಪಟೂರು ರವರ ವತಿಯಿಂದ “ಅಂತರ ರಾಷ್ಟ್ರೀಯ ವಿಶೇಷ ಚೇತನರ ದಿನಾಚರಣೆ” “ವಿಶ್ವ ಮಾನವ ಹಕ್ಕುಗಳ ದಿನಾಚರಣೆ” ಮತ್ತು”ರಾಷ್ಟ್ರೀಯ ಗ್ರಾಹಕರ ದಿನಾಚರಣೆ” ಕಾರ್ಯಕ್ರಮ ನಡೆಸಲಾಯಿತು.

ತಾಲ್ಲೋಕಿನ ಹಾವೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿದ ತಿಪಟೂರು ಅಧಿಕ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಧೀಶರಾದ ಕುಮಾರಿ ಮಧು ಶ್ರೀ ಜಿ.ಎಸ್., ಮಾತನಾಡಿ ಪ್ರತಿಯೊಬ್ಬ ಪ್ರಜೆಯು ಮೂಲ ಕಾನೂನುಗಳ ಅರಿವನ್ನು ಹೊಂದಬೇಕಾಗಿರುವುದು,ಪ್ರಮುಖ ಕರ್ತವ್ಯ, ಕಾರಣ ಗ್ರಾಹಕರು ಮೊದಲು ಸಾಮಾನ್ಯ ತಿಳುವಳಿಕೆಯನ್ನು ಹೊಂದಿದವರಾಗಿ ಸಗಟುಗಳ ಉತ್ಪಾದನೆ, ಉತ್ಪಾದನಾ ದಿನಾಂಕ ಉತ್ಪಾದನೆಯ ಉಪಯೋಗಿಸುವ ಕಡೆಯ ದಿನಾಂಕವನ್ನು ಅರಿಯುವಷ್ಟು ಜ್ಞಾನವನ್ನು ಹೊಂದಿರಬೇಕು. ಇದರಿಂದ ಮುಂದಾಗಬಹುದಾದ ಅವಘಡಗಳನ್ನು ತಪ್ಪಿಸಬಹುದು ವಿವಿಧ ಕ್ಷೇತ್ರಗಳಲ್ಲಿ ಯಾವುದೇ ರೀತಿಯ ತೊಂದರೆಗಳು ಉಂಟಾದಲ್ಲಿ ಸಂಬಂಧಪಟ್ಟ ಇಲಾಖೆಗೆ ದೂರನ್ನು ನೀಡುವುದರ ಮೂಲಕ ನ್ಯಾಯವನ್ನು ಪಡೆಯಬಹುದು, ಸದರಿ ಗ್ರಾಹಕರ ವೇದಿಕೆಯು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಇದ್ದು ಇವುಗಳಿಗೆ ಅರ್ಜಿ ಸಲ್ಲಿಸಿ ಅನ್ಯಾಯಕ್ಕೆ ಒಳಗಾದ ವ್ಯಕ್ತಿ ಪರಿಹಾರ ಕಂಡುಕೊಳ್ಳಬಹುದು ಎಂದ ಅವರು ವಿಶೇಷ ಚೇತನರು ದೈವದತ್ತವಾಗಿ ವಿಶೇಷ ಗುಣಲಕ್ಷಣಗಳನ್ನು ಹೊಂದಿದ್ದು, ಇವರು ಕೂಡ ಎಲ್ಲರಂತೆಯೇ ಸರ್ವ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಬಲ್ಲರು ಆತ್ಮಭಿಮಾನ ಹೊಂದಿದ್ದರೆ ಜಗತ್ತನ್ನೇ ಗೆಲ್ಲಬಹುದು, ಅನೇಕ ಮಹನೀಯರು ಅಂಗ ವೈಕಲ್ಯದ್ದರೂ ಸಹ ವಿವಿಧ ರೀತಿಯ ಸಾಮಾಜಿಕ ಮಜಲುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಧನೆಗೈದಿರುವುದು ಜನಜನಿತವಾಗಿದೆ. ಪ್ರಮುಖವಾಗಿ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ತಮ್ಮಲ್ಲಿರುವ ಅಧಮ್ಯ ಪ್ರತಿಭೆಯನ್ನು ಹೊರ ಹಾಕಬೇಕು, ಅಂಗವಿಕಲರು ಎಂಬ ಕಾರಣದಿಂದ ವಿಶೇಷ ಚೇತನರು,ಸಾಮಾಜಿಕ ವೇದಿಕೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ನಮ್ಮಗಳ ಕರ್ತವ್ಯ.ಮಾನವ ಹಕ್ಕುಗಳು ಸಂವಿಧಾನದಲ್ಲಿ ಅಡಕವಾಗಿದ್ದು ಎಲ್ಲರಂತೆಯೇ ವಿಶೇಷ ಚೇತನರೂ ತಮ್ಮ ತಮ್ಮ ಹಕ್ಕು ಕರ್ತವ್ಯಗಳನ್ನು ಚಲಾಯಿಸಬಹುದು ಎಂದು ತಿಳಿಸಿದರು.

ತಿಪಟೂರು ತಾಲ್ಲೋಕು ವಕೀಲರ ಸಂಘದ ಕಾರ್ಯದರ್ಶಿ ಬಿ ಮಲ್ಲಿಕಾರ್ಜುನಯ್ಯ. ಮಾತನಾಡಿ ವಿಶೇಷ ಅಗತ್ಯ ಉಳ್ಳವರು ಬೌದ್ಧಿಕ ಆರನೇ ಜ್ಞಾನವನ್ನು ಹೊಂದಿರುತ್ತಾರೆ. ಇವರು ಅತಿ ಸೂಕ್ಷ್ಮತೀತರು ಇವರುಗಳಿಗೆ ಸರ್ಕಾರ ಅಗತ್ಯ ಮೀಸಲಾತಿ ಹಾಗೂ ಮಾಸಿಕ ಆರ್ಥಿಕ ನೆರವು ನೀಡುವುದರ ಮುಖೇನ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆ ತರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸ ಬೇಕು ಎಂದು ತಿಳಿಸಿದರು.

ತಿಪಟೂರು ನ್ಯಾಯಾಲಯದ ಪ್ರಥಮ ದರ್ಜೆ ಸಹಾಯಕರಾದ ಶಿವನಗೌಡ ಮುದ್ದಣ ಗೌಡ. ವಾಣಿ. ಮುಖ್ಯ ಶಿಕ್ಷಕರು, ಹಿರಿಯ ಪ್ರಾಥಮಿಕ ಶಾಲೆ, ಹಾವೇನಹಳ್ಳಿ, ಸಿ ಆರ್ ಪಿ ಶ್ರೀಮತಿ ಆಶಾ.ಮುಂತ್ತಾದವರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

ಜಾಹಿರಾತು:

ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಲೋಕಮ್ಮನಹಳ್ಳಿ ದೊಡ್ಡೇನಹಳ್ಳಿ ಮಾರ್ಗ ಮಧ್ಯದ ಬಸವನಹಳ್ಳಿ ಗ್ರಾಮದ ಬಳಿ ಘಟನೆ ದುರ್ಘಟನೆ ನಡೆದಿದೆ.

ತಾಲೂಕಿನ ಸಾರಿಗೆ ಹಳ್ಳಿ ಗ್ರಾಮದ ರೈತ ರವಿಕಿರಣ್ ಎಂಬವರಿಗೆ ಸೇರಿದ ಟ್ರ್ಯಾಕ್ಟರ್ ನಲ್ಲಿ ಸುಮಾರು 40 ರಾಗಿ ಹುಲ್ಲನ್ನು ತೆಗೆದುಕೊಂಡು ಹೋಗುವಾಗ ,ವಿದ್ಯುತ್ ಪ್ರೈಮರಿ ಲೈನ್ ಟ್ರ್ಯಾಕ್ಟರ್ ನಲ್ಲಿದ್ದ ಹುಲ್ಲಿನ ಹೊರೆಗಳಿಗೆ ತಗಲಿದ ಪರಿಣಾಮ
ಬೆಂಕಿ ಹತ್ತಿಕೊಂಡಿದ್ದು ತಕ್ಷಣಕ್ಕೆ ಡ್ರೈವರ್ ಟ್ರ್ಯಾಲಿಯಿಂದ ಇಂಜಿನ್ ಬೇರ್ಪಡಿಸಿದ ಪರಿಣಾವ ಭಾರೀ ಅನಾಹುತ ತಪ್ಪಿದು, ಡ್ರೈವರ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಬೆಂಕಿ ಅವಗಡದಿಂದ ಸುಮಾರು 18 ಸಾವಿರ ರೂಗಳ ಮೇವನ್ನು ಕಳೆದುಕೊಂಡಿರುವ ರೈತ ಕಂಗಾಲಾಗಿದ್ದಾನೆ
ಲೋಕಮ್ಮಹಳ್ಳಿ ಹಾಗೂ ದೊಡ್ಡೇನಹಳ್ಳಿ ಮಾರ್ಗದಲ್ಲಿ ವಿದ್ಯುತ್ ತಂತಿಗಳು, ಅತ್ಯಂತ ಕೆಳ ಭಾಗಕ್ಕೆ ಜಗ್ಗಿದ ಕಾರಣ ಅವಗಡ ನಡೆದಿದೆ,ಸ್ಥಳಕ್ಕೆ ತುರುವೇಕೆರೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸಾರ್ವಜನಿಕರ ಸಹಕಾರದಿಂದ ಬೆಂಕಿನಂದಿಸಿದ್ದಾರೆ.

ವರದಿ:ಮಂಜುನಾಥ್ ತುರುವೇಕೆರೆ

ಜಾಹಿರಾತು:

ಜಾಹಿರಾತು:

ತಿಪಟೂರು ನಗರದ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರವರ ಗೃಹಕಚೇರಿಯಲ್ಲಿ ತಿಪಟೂರು ತಾಲ್ಲೋಕು ಬಿಜೆಪಿ ವತಿಯಿಂದ ಮಾಜಿ ಪ್ರಧಾನ ಮಂತ್ರಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ರವರ ಜನ್ಮ ದಿನವನ್ನ ಆಚರಿಸಲಾಯಿತು.

ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಅಟಲ್ ಜೀ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ ಅಟಲ್ ಜೀ ರವರು ಭಾರತಕಂಡ ಆದರ್ಶ ಪ್ರಾಯರಾಜಕಾರಣಿ,ತಮ್ಮ ಇಡೀ ಜೀವನವನ್ನೇ ಭಾರತಮಾತೆಯ ಸೇವೆಗೆ ಮುಡುಪಾಗಿಟ್ಟಿದರು. ಆದರ್ಶ ರಾಜಕಾರಣಿಯಾಗಿ ಸದನಪಟುವಾಗಿ, ದೇಶದ ವಿಚಾರಬಂದಾಗ ಆಡಳಿಪಕ್ಷಕ್ಕೂ ಸಹಕಾರ ನೀಡಿ, ದೇಶಮೊದಲು, ದೇಶದ ವಿಚಾರದಲ್ಲಿ ನಾವೆಲ್ಲರೂ ಒಂದೇ ಎನ್ನುವಭಾವನೆ ಹೊಂದಿದರು,ತಾವು ಪ್ರಧಾನಮಂತ್ರಿಯಾದ ಅಲ್ಪ ಕಾಲಾವಧಿಯಲ್ಲಿ ,ವಿಶ್ವದ ದಿಗ್ಗಜ ರಾಷ್ಟ್ರಗಳ ಬೆದರಿಕೆಗಳಿಗೆ ಜಗ್ಗದೆ, ಪ್ರೋಖ್ರಾನ್ ಅಣುಪರೀಕ್ಷೆ ನಡೆಸಿ,ಭಾರತದ ಶಕ್ತಿಯನ್ನ ಜಗತ್ತಿನ ಮುಂದೆ ತೋರಿಸಿದ, ಅಪ್ರತಿಮ ರಾಜಕಾರಣಿ.ದೇಶದ ಅಭಿವೃದ್ದಿಗೆ ರಸ್ತೆಗಳು ನರನಾಡಿಗಳಂತೆ ಎಂದು ದೇಶದ ದಿಕ್ಕನ್ನೆ ಬದಲಿಸಿದ ಚತುಷ್ಪತ ಹೆದ್ದಾರಿಗಳನ್ನ ನಿರ್ಮಿಸಿದರು, ದಿಟ್ಟಧೀರತನದ ಆಡಳಿತದ ಮೂಲಕವೇ ವಿರೋಧಿಗಳಿಗೆ ಉತ್ತರ ನೀಡಿದ ಪ್ರಮಾಣಿಕ ನಿಷ್ಠಾವಂತ ರಾಜಕಾರಣಿ, ಅವರ ಆದರ್ಶಗಳು ರಾಜಕಾರಣಿಗಳಿಗೆ ಮಾರ್ಗದರ್ಶನ, ಅವರದಾರಿಯಲ್ಲಿ ಎಲ್ಲಾರು ನಡೆಯೋಣ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಬಿಜೆಪಿ ತಾಲ್ಲೋಕು ಅಧ್ಯಕ್ಷ ಬಳ್ಳೆಕಟ್ಟೆ ಸುರೇಶ್, ನಗರಾಧ್ಯಕ್ಷ ಗುಲಾಬಿ ಸುರೇಶ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗರಾಜು, ಬಿಸ್ಲೇಹಳ್ಳಿ ಜಗದೀಶ್ ಗ್ರಾಮಾಂತರ ಕಾರ್ಯದರ್ಶಿ ಉಮೇಶ್,ರೈತಮೋರ್ಚ ಅಧ್ಯಕ್ಷ ಹೆಚ್.ವಿ ನಾಗರಾಜು ಮುಂತ್ತಾದವರು ಉಪಸ್ಥಿತರಿದರು

ವರದಿ: ಮಂಜುನಾಥ್ ಹಾಲ್ಕುರಿಕೆ.

ಜಾಹಿರಾತು:

ಜಾಹಿರಾತು:

ತಿಪಟೂರು:ಮನುಷ್ಯನ ದೇಹ ಪ್ರಕೃತಿಯ ಭಾಗ ಪಂಚಭೂತಗಳ ಪ್ರತೀಕವಾಗಿರುವ ದೇಹ, ಪ್ರಕೃತಿಯ ನಿಯಮಗಳಂತೆ ಬದುಕಿದರೆ ಸಧೃಡ ಆರೋಗ್ಯಂತರಾಗಿರ ಬಹುದು. ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಸಾರ್ವಜನಿಕರು ಕಾಪಾಡಿಕೊಳ್ಳಬಹುದಾಗಿದೆ ಎಂಬ ಆಶಯದೊಂದಿಗೆ ಭಾರತ ಸರ್ಕಾರ ಆಯುಷ್ ಮಂತ್ರಾಲಯ ದೇಶ್ ಕೀ ಪ್ರಕೃತಿ ಪರೀಕ್ಷಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಕೊನೇಹಳ್ಳಿಯ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಹಿರಿಯ ವೈದ್ಯಾಧಿಕಾರಿ ಡಾ.ಸುಮನ.ಟಿ.ಎಮ್ ತಿಳಿಸಿದರು.

ಕೊನೇಹಳ್ಳಿ ಸರ್ಕಾರಿ ಆಯುರ್ವೇದ ಆಸ್ಪತ್ರೆ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಅಭಿಯಾನ ವಿಶೇಷ ಮೊಬೈಲ್ ಆಪ್ ಆಧಾರಿತ ಕಾರ್ಯಕ್ರಮವಾಗಿದ್ದು ಈ ಅಪ್ಲೀಕೇಶನ್ ಅನ್ನು ಪ್ಲೇ-ಸ್ಟೋರ್ ಮೂಲಕ ಪ್ರಕೃತಿ ಅಭಿಯಾನ್ ಡೌನ್‌ಲೋಡ್ ಮಾಡಿಕೊಂಡು ಮೊಬೈಲ್‌ನಲ್ಲಿ ಅಳವಡಿಸಿಕೊಂಡು ಕೆಲವು ಮೂಲ ಪ್ರಶ್ನೆಗಳಿಗೆ ಉತ್ತರಿಸಿದಲ್ಲಿ, ಕಾಲಕಾಲಕ್ಕೆ ನಿಮ್ಮ ಪ್ರಕೃತಿ ಅನುಸಾರವಾಗಿ ಆರೋಗ್ಯಕ್ಕೆ ಪೂರಕವಾದ ಸೂಚನೆ ಮತ್ತು ಸಲಹೆಗಳು ಮೊಬೈಲಿಗೆ ಬರಲಿದ್ದು, ಜೊತೆಗೆ ಆರೋಗ್ಯ ಪರಿಪಾಲನೆಯ ಬಗ್ಗೆ ಇನ್ನೂ ಹೆಚ್ಚಿನ ಉಪಯುಕ್ತ ಮಾಹಿತಿಗಳನ್ನು ನೀಡಲಾಗುವುದು.
ಮನುಷ್ಯನ ದೇಹವು ಕಾಲ ಕಾಲಕ್ಕೆ ಬದಲಾವಣೆ ಆಗುವ ಸಂದರ್ಭದಲ್ಲಿ ಆರೋಗ್ಯದ ವ್ಯತ್ಯಾಸಗಳನ್ನು ಆಫ್ ಮೂಲಕ ತಿಳಿದುಕೊಳ್ಳಲಾಗುತ್ತಿದೆ ಕೇಂದ್ರ ಸರ್ಕಾರವು ಈ ಪ್ರಯೋಗವನ್ನು ಮೊದಲು ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಿದ್ದು ಮುಂದೆ ಇದರ ಉಪಯೋಗವನ್ನು ದೇಶದ ಜನರು ಉಪಯೋಗಿಸಿಕೊಳ್ಳಬಹುದಾಗಿದೆ ಅದ್ದರಿಂದ ಸಾರ್ವಜನಿಕರು ಪ್ರಕೃತಿ ಪರೀಕ್ಷಾ ಅಭಿಯಾನ್‌ನಲ್ಲಿ ಪಾಲ್ಗೋಂಡು ಉಪಯೋಗ ಪಡೆದುಕೊಳ್ಳಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯವನ್ನು ಸಂಪರ್ಕಿಸಿಬಹುದು ಎಂದು ತಿಳಿಸಿದರು.

ಅಭಿಯಾನದಲ್ಲಿ ತಮ್ಮನ್ನು ತಾವು ಅವಲೋಕನ ಮಾಡಿಕೊಳ್ಳಬೇಕು,, ವ್ಯಕ್ತಿಗೆ ಋತುವಿಗೆ ಅನುಗುಣವಾಗಿ ಆಹಾರ,ಹಾಗೂ ಜೀವನ ಶೈಲಿ ಬದಲಿಸಿಕೊಳ್ಳ ಬೇಕು, ಚಿಕಿತ್ಸೆ ಅವಶ್ಯಕತೆಯಿದೆ ಎಂಬುದು ತಿಳಿಯಬಹುದಾಗಿದೆ. ಮುಂದಿನ ದಿನಗಳಲ್ಲಿ ಉದ್ಯೋಗಕ್ಕೆ, ವೈವಾಹಿಕ ಜೀವನದ ಪೂರ್ವದಲ್ಲಿ ಈ ಅಭಿಯಾನವವು ಅನುಕೂಲಕರವಾಗುತ್ತದೆ. ಅಭಿಯಾನದಲ್ಲಿ ಯಾವ ಯಾವ ಸ್ಥಳಕ್ಕೆ ಯಾವ ರೀತಿ ಸಲಕರಣೆಗಳು ಅವಶ್ಯಕತೆ ಹಾಗೂ ಯಾವ ತರಭೇತಿಯನ್ನು ನೀಡಬಹುದು ಎಂಬುದನ್ನು ಗುರುತಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ವರದಿ:ಮಂಜುನಾಥ್ ಹಾಲ್ಕುರಿಕೆ

ಜಾಹಿರಾತು:

ತುಮಕೂರು ಜಿಲ್ಲೆ ತಿಪಟೂರು ನಗರದ ಸಂವಿಧಾನ ಶಿಲ್ಪ ಡಾ//ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಸಲಾತಿತು,

ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಮಾನವಸರಪಳಿ ನಿರ್ಮಿಸಿದ ಪ್ರತಿಭಟನಾ ನಿರತರು,ಅಮಿತ್ ಷಾ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದುಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ದಲಿತ ಮುಖಂಡರು ಗೃಹ ಸಚಿವ ಅಮಿತ್ ಷಾ ರಾಜಿನಾಮೇಗೆ ಒತ್ತಾಯಿಸಿದರು.

ಡಾ//ಬಿ.ಆರ್ ಅಂಬೇಡ್ಕರ್ ವೃತ್ತದಿಂದ ತಾಲ್ಲೋಕು ಆಡಳಿತ ಸೌಧಕ್ಕೆ ಪ್ರತಿಭಟನಾ ಮೆರಣಿಗೆ ನಡೆಸಿಉಪವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿಪತ್ರಸಲ್ಲಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಡಾ//ಬಿ.ಆರ್ ಅಂಬೇಡ್ಕರ್ ಸ್ವಾಭಿಮಾನಿ ಸಂಘ, ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೆಡ್ಕರ್ ವಾದ)ಜೈ.ಭೀಮ್ ಚಲವಾದಿ ಮಹಾಸಭಾ, ಅಖಿಲಕರ್ನಾಟಕ ಕೊರಚ ಮಹಾಸಭಾ, ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದವು.

ಪ್ರತಿಭಟನಾ ನಿರತರನ್ನ ಉದೇಶಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಹರೀಶ್ ಗೌಡ ಮಾತನಾಡಿ ಗೃಹಸಚಿವ ಅಮಿತ್ ಷಾ, ದೇಶದ ಗೃಹ ಖಾತೆ ನಿರ್ವಹಿಸಲು ಅನರ್ಹ ಹಾಗೂ ಅವೀವೇಕದ ವ್ಯಕ್ತಿ,ಆರ್ ಎಸ್ಎಸ್ ಅಂತರಾಳದ ಮನಸ್ಥಿತಿಯನ್ನ ತಮ್ಮ ಮಾತುಗಳ ಮುಖಾಂತರ ಹೊರಹಾಕಿದ್ದಾರೆ.
ಪ್ರಪಂಚದ ಜ್ಞಾನ ದೀಪವಾದ ಡಾ// ಅಂಬೇಡ್ಕರ್ ರವರ ವಿದ್ವಾತ್ ಸಹಿಸದೆ ಅಸಹನೆಯ ಮಾತನಾಡಿದ್ದಾರೆ, ಈ ದೇಶದ ಬಹುಜನರಿಗೆ, ದಲಿತರು ಹಿಂದುಳಿದವರು, ಆದಿವಾಸಿಗಳು ಅಲ್ಪಸಂಖ್ಯಾತರಿಗೆ, ಡಾ//ಬಿ.ಆರ್ ಅಂಬೇಡ್ಕರ್ ರವರುದೇವರ ಸಮಾನ,ನಮಗೆ ಆತ್ಮಗೌರವ ನೀಡಿದ,ಭೂಮಿಯ ಮೇಲೆ ಸ್ವಾಭಿಮಾನದಿಂದ ಬದುಕಲು ಅವಕಾಶ ಕಲ್ಪಿಸಿದ, ದೇವರು ಅಂಬೇಡ್ಕರ್ ರವರು.ಅವರ ಸ್ಮರಣೆಯಿಂದ ನಮ್ಮ ಜನ್ಮ ಸಾರ್ಥಕ ಎಂದು ಭಾವಿಸಿದ್ದೇವೆ. ನಮ್ಮ ಭಾವನೆ ಹಾಗೂ ಭವ್ಯ ಭಾರತರ ದೇವರು ಅಂಬೇಡ್ಕರ್ ಬಗ್ಗೆ ಅರಿಯದೆ ಅವಿವೇಕದವಮಾತನಾಡಿರುವ ಅಮಿತ್ ಷಾ ಕೂಡಲೇ ರಾಜನಾಮೆ ನೀಡಬೇಕು.ಎಂದು ಒತ್ತಾಯಿಸಿದರು.

ಡಿಎಸ್ಎಸ್ ತಾಲ್ಲೋಕು ಸಂಚಾಲಕ ಯಗಚೀಕಟ್ಟೆ ರಾಘವೇಂದ್ರ ಮಾತನಾಡಿ ಡಾ//ಬಿ.ಆರ್ ಅಂಬೇಡ್ಕರ್ ಈ ದೇಶದ ಜ್ಞಾನ ಹಾಗೂ ಅಸ್ಮಿತೆಯ ಸಂಕೇತ,ದೇಶದ ಅರಾಧ್ಯದೈವ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ, ಪ್ರಧಾನ ಮಂತ್ರಿಗಳು ನೈತಿಕ ಹೊಣೆಹೊತ್ತು, ಕೂಡಲೇ ಅಮಿತ್ ಷಾ ರಾಜೀನಾಮೆ ಪಡೆಯಬೇಕು, ದೇಶದ ಕಾನೂನು ಪಾಲಿಸಬೇಕಾದ ವ್ಯಕ್ತಿಯೇ ಒಂದು ವರ್ಗದ ಓಲೈಕೆಗಾಗಿ, ಉದ್ಘಾಟತನದಿಂದ ಮಾತನಾಡಿದ್ದಾರೆ, ಅಧಿಕಾರದ ಅಹಂಕಾರದಿಂದ ವರ್ತಿಸುತ್ತಿರುವ ಅಮಿತ್ ಷಾ ಗೆ ಕೆಲವೇ ದಿನಗಳಲ್ಲಿ ದೇಶದ ಬಹುಜನರ ಶಕ್ತಿಯನ್ನ ತೋರಿಸುತ್ತೇವೆ. ಕೋಡಲೇ ಅವರು ರಾಜೀನಾಮೆ ನೀಡಿ ಹೊರನಡೆಯಬೇಕು ಎಂದು ತಿಳಿಸಿದರು
ಡಿ.ಎಸ್ಎಸ್ ಅಂಬೇಡ್ಕರ್ ವಾದ ತಾಲ್ಲೋಕು ಸಂಚಾಲಕ ಜಕ್ಕನಹಳ್ಳಿ ಮೋಹನ್ ಮಾತನಾಡಿ ಅಂಬೇಡ್ಕರ್ ಈ ದೇಶದ ಅಸ್ಮಿತೆ ಜಗತ್ತಿನ ಬೆಳಕು, ಸಂವಿಧಾನದ ಅಡಿಯಲ್ಲಿ ಕೆಲಸ ನಿರ್ವಹಿಸುವ ನರೇಂದ್ರ ಮೋದಿಯವರೇ ಅಮಿತ್ ಷಾ ನಂತ ಅವಿವೇಕಿಯನ್ನ ಸಂಪುಟದಿಂದ ಕೈಬಿಡಿ,ನೀವೂ ಸಹ ಉದ್ಘಟತನ ತೋರಿದರೆ ಉಗ್ರಹೋರಾಟ ಮಾಡಬೇಕಾಗುತ್ತದೆ. ದೇವರ ಪೂಜೆ ನಿಮ್ಮ ವಯುಕ್ತಿಕ ಆಚರಣೆ, ಆದರೇ ಅವಿವೇಕದ ಮಾತಿನಿಂದ ಪ್ರಜಾಪ್ರಭುತ್ವದ ದೇವಾಲಯದಲ್ಲಿ ಉದ್ಘಟತನದಿಂದ ಮಾತನಾಡಿರುವ ಅವಿವೇಕಿ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು

ಪ್ರತಿಭಟನೆಯಲ್ಲಿ ಮುಖಂಡರಾದ ಕಂಚಾಘಟ್ಟ ಸುರೇಶ್. ಅಂಬೇಡ್ಕರ್ ಸ್ವಾಭಿಮಾನಿ ಸಂಘದ ಅಧ್ಯಕ್ಷ ಶಿವಕುಮಾರ್ ಮತ್ತಿಘಟ್ಟ, ಕೊರಚ ಮಹಾಸಭಾ ಅಧ್ಯಕ್ಷ ಸತೀಶ್ ಡಿಎಸ್ಎಸ್ ಮಹಿಳಾ ಘಟಕ ಸಂಚಾಲಕಿ ನಂದಿನಿ .ಕವಿತ.ಭಾಗ್ಯ, ಜೈ ಭೀಮ್ ಚಲವಾದಿ ಸಂಘದ ಅಧ್ಯಕ್ಷ ಸ್ವಾಮಿ.ಜಿಲ್ಲಾ ಸಂಚಾಲಕ ನರಸಿಂಹ ಮೂರ್ತಿ.ಸತೀಶ್.ಡಿಎಸ್ಎಸ್ ಮುಖಂಡರಾದ ಅರಚನಹಳ್ಳಿ ಮಂಜುನಾಥ್. ತುರುವೇಕೆರೆ ಸಂಚಾಲಕ ಕೃಷ್ಣ, ಸಿ.ಎನ್ ಹಳ್ಳಿ ಸಂಚಾಲಕ ರಮೇಶ್ ಮುಂತ್ತಾದವರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಟೂಡ ಶಶಿಧರ್
ಬಹುಸಂಸ್ಕೃತಿಯ ನಮ್ಮ ದೇಶದ ಸಂವಿಧಾನ ಜನಜೀವನ ವಿಧಾನದ ರಕ್ಷಣೆ ಮತ್ತು ಅದರ ಬೆಳವಣಿಗೆ ಆಧಾರದಲ್ಲಿ ರೂಪಿತಗೊಂಡಿದೆ.
ಕಾಲದ ಅಗತ್ಯಾನುಸಾರ ಕೆಲ ಪ್ರಗತಿ ಪರ ಮತ್ತು ಜೀವಪರ ಹೊಸತು ಅಂಶಗಳನ್ನು ತನ್ನೊಳಕ್ಕೆ ಸೇರಿಸಿಕೊಳ್ಳುವ ಶಕ್ತಿ ಕೂಡ ಅದಕ್ಕಿದೆ. ಹೀಗಾಗಿ ಹಲವು ಪ್ರಮುಖ ಸಂದರ್ಭದಲ್ಲಿ ಕಾಲದ ಅಗತ್ಯಾನುಸಾರ ತಿದ್ದುಪಡಿ ಕೂಡ ಸಾಧ್ಯವಾಗಿದೆ.
ಎಲ್ಲದಕ್ಕೂ ಮುಖ್ಯವಾಗಿ ವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ಮತ್ತು ವಿಚಾರ ಸ್ವಾತಂತ್ರ್ಯ ಸಂವಿಧಾನದ ಮೂಲ ಧರ್ಮ. ಹೀಗಾಗಿ ಸಂವಿಧಾನ ನಮ್ಮ ದೇಶದ ರಾಜಧರ್ಮವೇ ಆಗಿದೆ.
ಇದರ ಮೇಲೆ ದುರಾಕ್ರಮಣದ ನೀತಿಯನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಸಂವಿಧಾನ ಬದಲಾವಣೆ ಮಾಡುವ ಮಾತುಗಳ ಹುನ್ನಾರದ ಹಿಂದಿರುವ ಮೂಲ ಪ್ರೇರಣಾ ಶಕ್ತಿ ನಿರಂಕುಶ ಪ್ರಭುತ್ವದ ಪ್ರತಿಷ್ಠಾನ ಮಾಡುವ ಸಂಕಲ್ಪ ತೊಟ್ಟ ಸಂಘ ಪರಿವಾರದ್ದು. ಅದರ ರಾಜಕೀಯ ಘಟಕ ಭಾಜಪ ಇದನ್ನು ಕಾರ್ಯರೂಪಕ್ಕೆ ತರಲು ಶತಾಯಗತಾಯ ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ ಸಂವಿಧಾನ ಕರಡು ಸಮಿತಿ ಅಧ್ಯಕ್ಷ, ಸಂವಿಧಾನ ಶಿಲ್ಪಿ ಎಂದೇ ಹೆಸರಾದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಕೇಂದ್ರವಾಗಿ ಇಟ್ಟುಕೊಂಡು ಅವರ ಅವಮಾನಿಸುವ ಕೆಲಸ ನಡೆಯುತ್ತಿದೆ.
ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಸಂವಿಧಾನದ 75ನೇ ವರ್ಷಾಚರಣೆ ಪ್ರಯುಕ್ತ ನಡೆದ ಚರ್ಚೆಯ ದಿಕ್ಕು ತಪ್ಪಿಸಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಸದನದಲ್ಲಿ ಆಡಿದ “ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್… ಎನ್ನುತ್ತಿರುವುದು ಇತ್ತೀಚೆಗೆ ಇದೊಂದು ವ್ಯಸನದಂತಾಗಿದೆ” ಎನ್ನುವರ್ಥದ ಮಾತು ಅತ್ಯಂತ ಖಂಡನೀಯ.

ಇಂಥ ಅನರ್ಥದ ಮತ್ತು ದೇಶವನ್ನು ಆಂತರಿಕ ಗಂಡಾಂತರಕ್ಕೆ ಈಡುಮಾಡುವ, ಸಾಮಾಜಿಕ ಮೌಲ್ಯಗಳನ್ನು ನಾಶಪಡಿಸುವ ದೇಶವಿರೋಧಿಯಾದ ಅಪಾಯಕಾರಿ ಮಾತುಗಳನ್ನು ಆಡಿದ ಗೃಹ ಸಚಿವ ಅಮಿತ್ ಷಾ ಅವರನ್ನು ಕೂಡಲೇ ಕೇಂದ್ರ ಸಂಪುಟದಿಂದ ಕೈಬಿಡಬೇಕು. ಇಲ್ಲವೇ ಷಾ ಅವರೇ ರಾಜೀನಾಮೆ ನೀಡಬೇಕು ಎಂದು ಈ ಮೂಲಕ ಆಗ್ರಹಿಸುತ್ತಿದ್ದೇವೆ.
ಕಾಂಗ್ರೆಸ್ ಪಕ್ಷದ ಅತ್ಯುನ್ನತ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಜೀ, ಶ್ರೀ ರಾಹುಲ್ ಗಾಂಧಿ ಜೀ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಜೀ ಅವರು ಕ್ರಮವಾಗಿ ರಾಜ್ಯಸಭಾ ಮತ್ತು ಲೋಕಸಭಾ ಎರಡೂ ಸದನಗಳಲ್ಲಿ ಕ್ರೋನೀ ಕ್ಯಾಪಿಟಲಿಸ್ಟ್ ಶಕ್ತಿಗಳ ವಿರುದ್ಧ ಮಹತ್ವದ ಪ್ರಶ್ನೆಗಳನ್ನು ಎತ್ತಿದ್ದಾರೆ.
ಕ್ರೋನಿ ಕ್ಯಾಪಿಟಲಿಸ್ಟ್ ಅದಾನಿ ಸಮೂಹ ಅಮೆರಿಕದಲ್ಲಿ ಕೂಡ ದೇಶದ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಅಲ್ಲಿನ ನ್ಯಾಯಾಲಯದಲ್ಲಿ ಇವರ ವಿರುದ್ಧ ದಾವೆಗಳು ನಡೆಯುತ್ತಿವೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಮತ್ತು ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸುತ್ತಿದ್ದಾರೆ.
ಈ ಕ್ರೋನಿ ಕ್ಯಾಪಿಟಲಿಸ್ಟ್ ರ ರಕ್ಷಣೆ ಪ್ರಧಾನಿ ಮೋದಿ ಅವರಿಂದ ನಡೆಯುತ್ತಿದೆಯೇ ಎಂಬ ಅನುಮಾನಗಳು ಇರುವುದರಿಂದ ತನಿಖೆಗೆ ಮತ್ತು ಸ್ಪಷ್ಟನೆಗೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ ಕೇಂದ್ರವನ್ನು ಒತ್ತಾಯಿಸುತ್ತಿದೆ. ಇದರಿಂದ ಪ್ರಧಾನಿ ಮೋದಿ ದೊಡ್ಡ ಪೇಚಿಗೆ ಸಿಕ್ಕಿಕೊಂಡಿದ್ದಾರೆ. ಎನ್ಡಿಎ ಸರ್ಕಾರ ತತ್ತರಿಸುವಂತಾಗಿದೆ.

ಬೆಲೆ ಏರಿಕೆ, ಜಿಎಸ್ ಟಿ, ಜಾತಿ ಜನಗಣತಿ ಮತ್ತಿತರ ಜನಸಾಮಾನ್ಯರ ಪರ ಸಮಗ್ರ ಕಾಳಜಿಗಳನ್ನು ಸದನದಲ್ಲಿ ನಿರಂತರವಾಗಿ ಕಾಂಗ್ರೆಸ್ ಪಕ್ಷದ ನಾಯಕರು, ಸಂಸದರು ಎತ್ತುತ್ತಿರುವುದರಿಂದ ಕೇಂದ್ರ ಸರ್ಕಾರ ಇಕ್ಕಟ್ಟಿಗೆ ಸಿಲುಕುವಂತಾಗಿದೆ. ಜನರ ದೃಷ್ಟಿಯಲ್ಲಿ ಕೇಂದ್ರದ ನೈತಿಕತೆ ಕುಸಿಯತೊಡಗಿದೆ.
ಇವೆಲ್ಲದರಿಂದ ಬಚಾವಾಗಲು ಜನರ ಚಿತ್ತ ಚದುರಿಸುವ ಪ್ರಯತ್ನಗಳನ್ನು ಭಾಜಪ ಮಾಡುತ್ತಿದೆ.

ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳು ಇಂಥ ಜನವಿರೋಧಿ, ಕೋಮುವಾದಿ ಭಾಜಪ ನೇತೃತ್ವದ ಸರ್ಕಾರದ ಸಂವಿಧಾನ ವಿರೋಧಿ ನೀತಿಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ.

ಕರ್ನಾಟಕದಲ್ಲಿ ಕೂಡ ಈ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸಚಿವರು ಆದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಆಡಬಾರದ ಸ್ತ್ರೀ ನಿಂದನಾ ಪದಗಳನ್ನು ಬಳಸಿ ಅನಗತ್ಯ ವಿವಾದ ಸೃಷ್ಟಿಸಿದ ಭಾಜಪ ಎಂಎಲ್ಸಿ ಸಿ ಟಿ ರವಿ ಅವರ ನಡೆ ಅಕ್ಷಮ್ಯ.

ಸ್ತ್ರೀ ಗೌರವ, ಸಮಾನತೆ ಮತ್ತು ಸದಾಚಾರ, ಸನ್ನಡೆಯ ಬಸವಾದಿ ಶರಣ ಪರಂಪರೆಯನ್ನು ಪ್ರಜ್ಞಾಪೂರ್ವಕವಾಗಿ ಅವಮಾನಿಸುವ, ಅದಕ್ಕೆ ಚ್ಯುತಿ ತರುವ ನಡೆ ಇದಾಗಿದೆ. ಶರಣ ಪರಂಪರೆಯ ಅಕ್ಕ ಮಹಾದೇವಿ, ಗಂಗಾಂಬಿಕೆ, ನೀಲಾಂಬಿಕೆ, ಸೂಳೆ ಸಂಕವ್ವೆ, ಆಧುನಿಕ ಯುಗದ ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಮತ್ತು ಚಾಂದ್ ಬೀಬಿ ಅವರಂಥ ಮಹಾ ವೀರವನಿತೆಯರ ನೆಲದಲ್ಲಿ ನಿಂತು ಮಹಿಳೆಯರ ಮಾನ, ಸಮ್ಮಾನಗಳ ಜನಸಂಸ್ಕೃತಿಗೆ ಅವಹೇಳನ ಮಾಡುವ ದುಷ್ಟ ಸಂಕಲ್ಪ ಇದಾಗಿದೆ. ಬಸವೇಶರ ಸಂಸ್ಕೃತಿ ಮತ್ತು ಲಿಂಗಾಯತ ನಂಬಿಕೆಗಳ ಮೇಲೆ ನಡೆದ ಹಲ್ಲೆ ಇದಾಗಿದೆ. ಇದು ಖಂಡನೀಯ.

ಬಸವೇಶರ ಸಮಾನತೆ, ಸಕಲ ಜೀವಾತ್ಮರಿಗೆ ಲೇಸ ಬಯಸುವ ಆಶಯಗಳನ್ನು ಸಂವಿಧಾನದ ಆಶಯಗಳಿಗೆ ಉಸಿರಾಗಿಸಿದ ಅಂಬೇಡ್ಕರ್ ಆಧುನಿಕ ನಿಜ ಶರಣ. ಶರಣ ಸಂಸ್ಕೃತಿ ಎತ್ತಿಹಿಡಿಯುವ ಕೆಲಸವನ್ನು ಆಧುನಿಕ ಕಾಲದಲ್ಲಿ ಮಾಡಿದ ಅಂಬೇಡ್ಕರ್ ನಮ್ಮವರು. ನಮ್ಮ ಹಿರೀಕರು. ಅವರಿಗೆ ಮಾಡುವ ಅವಮಾನ ಶರಣ ಸಂಸ್ಕೃತಿಯ ಅವಮಾನ, ಸಹಬಾಳ್ವೆಯ ಸಾಮರಸ್ಯ ಜನಸಂಸ್ಕೃತಿಯ ಅವಮಾನ ಎನ್ನುವುದು ತಿಳಿಸಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

ತುಮಕೂರು ತಿಪಟೂರು ನಗರದ ಸಂವಿಧಾನ ಶಿಲ್ಪ ಡಾ//ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ದ ದಲಿತ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು

ಅಮಿತ್ ಷಾ ಭಾವಚಿತ್ರಕ್ಕೆ ಚಪ್ಪಲಿಹಾರ ಹಾಕಿ, ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ, ದಲಿತ ಮುಖಂಡರು ಗೃಹ ಸಚಿವ ಅಮಿತ್ ಷಾ ರಾಜಿನಾಮೇಗೆ ಒತ್ತಾಯಿಸಿ ಉಪವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿಪತ್ರಸಲ್ಲಿಸಿದರು.

ಡಾ//ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿಗಳಿಗೆ ಮನವಿಪತ್ರಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು ಗೃಹಸಚಿವ ಅಮಿತ್ ಷಾ,ಆರ್ ಎಸ್ಎಸ್ ಅಂತರಾಳದ ಮನಸ್ಥಿತಿಯನ್ನ ತಮ್ಮ ಮಾತುಗಳ ಮುಖಾಂತರ ಹೊರಹಾಕಿದ್ದಾರೆ.
ಪ್ರಪಂಚದ ಜ್ಞಾನ ದೀಪವಾದ ಡಾ// ಅಂಬೇಡ್ಕರ್ ರವರ ವಿದ್ವಾತ್ ಸಹಿಸದೆ ಅಸಹನೆಯ ಮಾತನಾಡಿದ್ದಾರೆ, ಈ ದೇಶದ ಬಹುಜನರಿಗೆ, ದಲಿತರು ಹಿಂದುಳಿದವರು, ಆದಿವಾಸಿಗಳು ಅಲ್ಪಸಂಖ್ಯಾತರಿಗೆ, ಡಾ//ಬಿ.ಆರ್ ಅಂಬೇಡ್ಕರ್ ರವರುದೇವರ ಸಮಾನ,ನಮಗೆ ಆತ್ಮಗೌರವ ನೀಡಿದ,ಭೂಮಿಯ ಮೇಲೆ ಸ್ವಾಭಿಮಾನದಿಂದ ಬದುಕಲು ಅವಕಾಶ ಕಲ್ಪಿಸಿದ, ದೇವರು ಅಂಬೇಡ್ಕರ್ ರವರು.ಅವರ ಸ್ಮರಣೆಯಿಂದ ನಮ್ಮ ಜನ್ಮ ಸಾರ್ಥಕ ಎಂದು ಭಾವಿಸಿದ್ದೇವೆ. ನಮ್ಮ ಭಾವನೆ ಹಾಗೂ ಭವ್ಯ ಭಾರತರ ದೇವರು ಅಂಬೇಡ್ಕರ್ ಬಗ್ಗೆ ಅರಿಯದೆ ಅವಿವೇಕದವಮಾತನಾಡಿರುವ ಅಮಿತ್ ಷಾ ಕೂಡಲೇ ರಾಜನಾಮೆ ನೀಡಬೇಕು.ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಡಿಎಸ್ಎಸ್ ಜಿಲ್ಲಾಸಂಘನಾ ಸಂಚಾಲಕ ನಾಗ್ತೀಹಳ್ಳಿ ಕೃಷ್ಣಮೂರ್ತಿ,ಬಜಗೂರು ಮಂಜುನಾಥ್ ಡಿಎಸ್ಎಸ್ ತಾಲ್ಲೋಕು ಅಧ್ಯಕ್ಷ ರಾಜು ಬೆಣ್ಣೆನಹಳ್ಳಿ ದಲಿತವಮುಖಂಡರಾದ,ಪೆದ್ದಿಹಳ್ಳಿ ನರಸಿಂಹಯ್ಯ,ಚಿಗ್ಗಾವಿ ಪುಟ್ಟಸ್ವಾಮಿ, ಜಿ.ಕುಮಾರ್.ಬೆಳಿಗೆರೆ ಚಂದ್ರಶೇಖರ್.ಕುಪ್ಪಾಳು ರಂಗಸ್ವಾಮಿ.ಅರಚನಹಳ್ಳಿ ಮಂಜುನಾಥ್ ,ಈಚನೂರು ಸೋಮಶೆರಖರ್ ರಾಮಾನಾಯ್ಕ, ಕೊರಚ ಮಹಾಸಭಾ ಅಧ್ಯಕ್ಷ ಸತೀಶ್.ಮುಂತ್ತಾದವರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

ತಿಪಟೂರು ತಾಲ್ಲೋಕು ಶೈಕ್ಷಣಿಕವಾಗಿ ಮುಂದುವರೆದಿದೆ ಆದರೆ ಆರ್ಥಿಕವಾಗಿ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಮುಂದುವರೆಯುವ ಅಗತ್ಯವಿದ್ದು ಸರ್ಕಾರ ಅನುದಾನ ನೀಡುವಾಗ, ನಂಜುಂಡಪ್ಪ ವರದಿಯನ್ನ ಪರಿಗಣಿಸುತ್ತಿದ್ದು, ತಿಪಟೂರು ಹೊರತುಪಡಿಸಿ ಜಿಲ್ಲೆಯ ಎಲ್ಲಾ ತಾಲ್ಲೋಕುಗಳ ನಂಜುಡಪ್ಪ ವರದಿಯಂತೆ ಹಿಂದುಳಿದ ತಾಲ್ಲೋಕುಗಳಾದರೆ ತಿಪಟೂರು ಮಾತ್ರ ಮುಂದುವರೆದ ತಾಲ್ಲೋಕು ಎಂದು ಗುರ್ತಿಸಿದ್ದಾರೆ, ನಂಜುಂಡಪ್ಪ ಆಯೋಗದ ವರದಿಯಿಂದ ನಮಗೆ ಅನ್ಯಾಯವಾಗಿದ್ದು, ವರದಿಯನ್ನ ಪುನರ್ ಪರಿಶೀಲನೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು

ತುಮಕೂರು ಜಿಲ್ಲೆ ತಿಪಟೂರು ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ಆವರಣದಲ್ಲಿ ನಡೆದ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಷ್ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿಗೆ ಕಾರ್ಯಕ್ರಮಕ್ಕೆ ಜ್ಯೋತಿಬೆಳಗಿಸುವ ಮೂಲಕ ಶಾಸಕ ಕೆ.ಷಡಕ್ಷರಿ ಚಾಲನೆ ನೀಡಿದರು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣಮತ್ತು ಆರೋಗ್ಯ ಸರ್ಕಾರದ ಮೊದಲ ಆಧ್ಯತೆ ದೇಶದ ಪ್ರತಿಯೊಬ್ಬರಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎನ್ನುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನ ರೂಪಿಸಿದ್ದು ಗ್ರಾಮೀಣ ಭಾಗದಲ್ಲಿ ಹಾಸ್ಟೆಲ್ ವಿಧ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಶ್ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿ ನೀಡುವ ಯೋಜನೆ ರೂಪಿಸಿದ್ದು ವಿದ್ಯಾರ್ಥಿಗಳ ಯೋಜನೆ ಸದುಪಯೋಗ ಪಡಿಸಿಕೊಳ್ಳ ಬೇಕು.

ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಶಿಸ್ತು ಮುಖ್ಯ ಶಿಸ್ತು ರೂಢಿಸಿಕೊಂಡಗ ನಿಮ್ಮ ಸಾಧನೆಗೆ ದಾರಿಯಾಗುತ್ತದೆ,ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಡಿಮೆ ನಗರ ಭಾಗದ ವಿದ್ಯಾರ್ಥಿಗಳು ಹೆಚ್ಚು ಎನ್ನುವ ಭಾವನೆ ಕೈಬಿಡಿ ನಿರಂತರ ಪರಿಶ್ರಮದಿಂದ ಅಧ್ಯಯನ ಮಾಡಿದಾಗ, ಸಾಧನೆ ಮಾಡಲು ಸಹಕಾರಿಯಾಗುತ್ತದೆ.ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಯಮುನಾಧರಣೇಶ್ ಮಾತನಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಶಿಸ್ತು ಮತ್ತು ಶ್ರದ್ದೆಯಿಂದ ನಿರಂತರ ವಿದ್ಯಾಭ್ಯಾಸ ನಿಮ್ಮ ಇಡೀ ಜೀವನವನ್ನ ರೂಪಿಸುವ ಸಮಯವಾಗಿದೆ, ವಿದ್ಯಾರ್ಥಿಗಳ ಜಾಗರೂಕರಾಗಿ, ವಿದ್ಯಾಭ್ಯಾಸದ ಕಡೆ ಗಮನಹರಿಸಿ,ಗ್ರಂಥಾಲಯಗಳಲ್ಲಿ ಹೆಚ್ಚು ಸಮಯಕಳೆಯಿರಿ,ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಸೋನಿಯಾ ವರ್ಣೇಕರ್ ಮಾತನಾಡಿ ಸರ್ಕಾರ ವಿಧ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನ ನೀಡುತ್ತದೆ, ಸರ್ಕಾರ ಸೌಲಭ್ಯ ಬಳಕೆ ಮಾಡಿಕೊಳ್ಳಿ, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಐಎಎಸ್ ಕೆಎಎಸ್ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ, ನಿಮ್ಮಿಂದ ಯಾವ ಸಾಧನೆ ಬೇಕಾದರೂ ಮಾಡಬಹುದು. ನೀವು ಕೀಳಿರಿಮೆ ಬಿಟ್ಟು ಛಲದಿಂದ ವಿದ್ಯಾಭ್ಯಾಸ ಮಾಡಿ, ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ತಿಪಟೂರು ಉಪವಿಭಾಗಾಧಿಕಾರಿಶ್ರೀಮತಿ ಸಪ್ತಶ್ರೀ ಹಿಂದುಳಿದವರ್ಗಗಳ ಕಲ್ಯಾಣ ಇಲಾಖೆ ತಾಲ್ಲೋಕು ಅಧಿಕಾರಿಶ್ರೀಮತಿ ಜಲಜಾಕ್ಷಮ್ಮ.ತಿಪಟೂರು ಎಆರ್ ಟಿಒ ಇನ್ಪೆಕ್ಟರ್ ಕಿರಣ್.ನಗರಸಭೆ ಸದಸ್ಯ ಲೋಕನಾಥ್ ಸಿಂಗ್ ಮುಂತ್ತಾದವರು ಉಪಸ್ಥಿತರಿದರು

ವರದಿ : ಮಂಜುನಾಥ್ ಹಾಲ್ಕುರಿಕೆ

ಜಾಹಿರಾತು

ತುಮಕೂರು ಜಿಲ್ಲೆ ತಿಪಟೂರು ನಗರದ ನಗರಸಭೆ ವಾರ್ಡ್ ನಂಬರ್ 04ರ ರೈಲ್ವೆ ಸ್ಟೇಷನ್ ರಸ್ತೆ ನಗರಸಭೆಗೆ ಸೇರಿದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ನಿವೇಷನದಲ್ಲಿ ಖಾಸಗೀ ವ್ಯಕ್ತಿಗಳು ಏಕಾಏಕಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು ಕೋಟ್ಯಾಂತರ ಮೌಲ್ಯದ ನಗರಸಭೆ ಆಸ್ತಿ ಕಂಡವರ ಪಾಲಾಗುತ್ತಿದ್ದು ನಗರಸಭೆ ತನ್ನ ಆಸ್ತಿ ಕಾಪಾಡಿಕೊಳ್ಳ ಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


ತುಮಕೂರು ಜಿಲ್ಲೆ ತಿಪಟೂರು ನಗರದ ನಗರಸಭೆ ವಾರ್ಡ್ ನಂಬರ್ 04ರ ರೈಲ್ವೆ ಸ್ಟೇಷನ್ ರಸ್ತೆ ನಗರಸಭೆಗೆ ಸೇರಿದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ನಿವೇಷನದಲ್ಲಿ ಖಾಸಗೀ ವ್ಯಕ್ತಿಗಳು ಏಕಾಏಕಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು ಕೋಟ್ಯಾಂತರ ಮೌಲ್ಯದ ನಗರಸಭೆ ಆಸ್ತಿ ಕಂಡವರ ಪಾಲಾಗುತ್ತಿದೆ,
ತಿಪಟೂರು ನಗರದ ವಾರ್ಡ್ ನಂಬರ್ 04ರಲ್ಲಿನಗರಸಭೆಗೆ ಸೇರಿದ ಅಸೆಸ್ಮೆಂಟ್ 894 ರ ವಿಸ್ತೀರ್ಣ 57×27 ಮತ್ತು 12×17 ಸ್ವತ್ತುಗಳು 1985-1986 ನೇ ಸಾಲು ಮುನ್ಸಿಪಲ್ ಲ್ಯಾಂಡ್ ಎಂದು ಮನೆ ಹಾಗೂ ಜಮೀನುತೆರಿಗೆಗಳು ನಿರ್ಧರಣಾ ಪಟ್ಟಿ ನಮೂನೆ -19ಮುನ್ಸಿಪಲ್ ಲ್ಯಾಂಡ್ ಎಂದು ನಮೂದಾಗಿರುತ್ತದೆ, ಆದರೂ ಸಹ ಖಾಸಗೀ ವ್ಯಕ್ತಿಯೊಬ್ಬರು ತಾತ್ಕಾಲಿಕ ಷೆಡ್ ನಿರ್ಮಿಸಿಕೊಂಡು ರೆಗ್ಜಿನ್ ಟೈಲರಿಂಗ್ ಶಾಪ್ ನಡೆಸುತ್ತಿದ್ದರು, ಈ ಬಗ್ಗೆ ದಿನಾಂಕ 08.12.2011ರಂದು ನಗರಸಭೆ ಪೌರಾಯುಕ್ತರಾಗಿದ ವೆಂಕಟೇಶಯ್ಯ ನಗರಸಭೆ ಜಾಗದಲ್ಲಿ ಅನಾಧೀಕೃತ ಷೆಡ್ ತೆರವುಗೊಳಿಸುವಂತೆ ನೋಟಿಸ್ ಸಹ ನೀಡಿದ್ದಾರೆ, ಆದರೂ ಸಹ ಖಾಸಗೀ ವ್ಯಕ್ತಿಗಳು ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಸ್ವತ್ತಿನ ಮೇಲೆ ಕಣ್ಣುಹಾಕಿ ಅಕ್ರಮವಾಗಿ ಕಟ್ಟಡ ನಿರ್ಮಿಸಲು ಮುಂದಾಗಿದ್ದು,ನಗರಸಭೆ ಕೂಡಲೇ ಅನಾಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವ ವ್ಯಕ್ತಿಗಳ ಮೇಲೆ ಕ್ರಮಕೈಗೊಂಡು, ನಗರಸಭೆ ಸ್ವತ್ತು ಎಂಬುದಾಗಿ ನಾಮಫಲಕ ಅಳವಡಿಸಬೇಕು ಎಂದು ಮಾಜಿ ನಗರಸಭಾ ಅಧ್ಯಕ್ಷ ರಾಮ್ ಮೋಹನ್,ಮಾಜಿ ಉಪಾಧ್ಯಕ್ಷ ಸೊಪ್ಪುಗಣೇಶ್,ಸದಸ್ಯರಾದ ಶಶಿಕಿರಣ್ , ಮೋಹನ್ ಕುಮಾರ್, ಜಯಲಕ್ಷ್ಮಿ, ಭಾರತಿ ಮಂಜುನಾಥ್.ಲತಾಲೋಕೇಶ್. ಪದ್ಮತಿಮ್ಮೇಗೌಡ,ಸಂಧ್ಯಾಕಿರಣ್,
ಪ್ರಸನ್ನ ಕುಮಾರ್.ರವರು ನಗರಸಭೆ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸ್ವತ್ತು ಖಾಸಗೀಯವರ ಪಾಲಾಗದಂತೆ ಕ್ರಮಕೈಗೊಳ್ಳ ಬೇಕು ಎಂದು ನಗರಸಭೆ ಪೌರಾಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ, ನಗರಸಭೆ ತನ್ನ ಸ್ವತ್ತನು ರಕ್ಷಣೆ ಮಾಡಿಕೊಳ್ಳ ಬೇಕು ಎಂದು ಒತ್ತಾಯಿಸಿದ್ದಾರೆ

ವರದಿ:ಮಂಜುನಾಥ್ ಹಾಲ್ಕುರಿಕೆ

ಸಾರ್ವಜನಿಕರಲ್ಲಿ ವಿನಂತಿ ಈ ಮೇಲ್ಕಂಡ ಭಾವಚಿತ್ರದಲ್ಲಿರುವ ವೃದ್ದ ಪುರುಷರು ಮಾನಸಿಕ ಅಸ್ವಸ್ಥತೆಯಿಂದ ಇವರು ದಿನಾಂಕ: 14-12-2024 ನೇರಳೆಕೆರೆ ಗ್ರಾಮ ನಿಟ್ಟೂರು ಹೋಬಳಿ ಗುಬ್ಬಿ ತಾಲ್ಲೂಕು ತುಮಕೂರು ಜಿಲ್ಲೆ ಕರ್ನಾಟಕ ರಾಜ್ಯದ ಈ ವಿಳಾಸದಿಂದ ಕಾಣೆಯಾಗಿರುತ್ತಾರೆ, ಇವರು ಕಾಣೆಯಾದಗ ಬಿಳಿ ಬಣ್ಣದ ಅಂಗಿ ಮತ್ತು ಹಸಿರು ಬಣ್ಣದ ನಿಕ್ಕರ್ ಧರಿಸಿರುತ್ತಾರೆ.
ಇವರ ಸುಳಿವು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಬಾಧಿತ ಕುಟುಂಬದ ಸದಸ್ಯರ ದೂರವಾಣಿ ಸಂಖ್ಯೆಗೆ ಸಂಪರ್ಕ ಮಾಡಲು ಕೋರಲಾಗಿದೆ.

PH: 7829108385, 9731653869

error: Content is protected !!