
.
ತುರುವೇಕೆರೆ.ಪಟ್ಟಣದ ಹೃದಯ ಭಾಗದಲ್ಲಿರುವ ತಾಲೂಕು ಬಿಮೋತ್ಸವ ಆಚರಣ ಸಮಿತಿ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಭೆ ನಡೆಸಲಾಯಿತು,ದಿನಾಂಕ 20.03.2025 ನೇ ಗುರುವಾರ ತುಮಕೂರಿನ ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯುತ್ತಿರುವ ಭಾರತದ ಅಸ್ಪೃಶ್ಯರ ಮೊದಲ ಪ್ರತಿರೋಧ ಚಳುವಳಿ,ಮಹಾಡ್ ಸತ್ಯಾಗ್ರಹದ ನೆನಪಿನ ಕಾರ್ಯಕ್ರಮ ನಡೆಯಲಿದ್ದು,ದಲಿತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಡಿ ಎಸ್.ಎಸ್ ಸಂಚಾಲ ಕೃಷ್ಣ ಮಾದಿಗ ಮಾತನಾಡಿ, ತುರುವೇಕೆರೆ ತಾಲೂಕಿನಾದ್ಯಂತ ಅತಿ ಹೆಚ್ಚು ಸಂಖ್ಯೆಯಲ್ಲಿ ಸಮುದಾಯದ ಹಿರಿಯ ಮತ್ತು ಕಿರಿಯ ಹಾಗೂ ಮಹಿಳಾ ಮಣಿಗಳು ಈ ಮಹಾಡ್ ಸತ್ಯಾಗ್ರಹದಲ್ಲಿ ಭಾಗವಹಿಸಲ್ಲಿದ್ದಾರೆ,ಅವರು ಭಾರತದ ಇತಿಹಾಸದಲ್ಲಿ ಅಸ್ಪೃಶ್ಯರ ಮೊದಲ ಪ್ರತಿರೋಧ ಚಳುವಳಿ ಮಹಾಡ್ ಸತ್ಯಾಗ್ರಹ ನೆನಪಿನ ಕಾರ್ಯಕ್ರಮ ನಡೆಯುತ್ತಿದ್ದು, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತುರುವೇಕೆರೆ ಶಾಖೆ ವತಿಯಿಂದಲೂ ಸುಮಾರು ನೂರಾರು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು ಮಹಾಡ್ ಸತ್ಯಾಗ್ರಹ ಆಧುನಿಕ ಭಾರತದ ಇತಿಹಾಸದಲ್ಲೇ ಅತ್ಯಂತ ಮಹತ್ವವಾದದ್ದು ಇದನ್ನು ಭಾರತದ ಮಟ್ಟದಲ್ಲಿ ದಲಿತ ಚಳುವಳಿ ಅಡಿಪಾಯ ಹಾಕಿದ ಘಟನೆ ಎಂದು ಕರೆಯಲಾಗುತ್ತದೆ, ಬಾಬಾ ಸಾಹೇಬರು ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿರುವ ಮಹಾಡ್ ನಲ್ಲಿ 1927 ಮಾರ್ಚ್ 20ರಂದು ಸಾರ್ವಜನಿಕರಾಗಿ ಕೆರೆಯ ನೀರನ್ನು ಮುಟ್ಟುವ ಮೂಲಕ ಇದು ಎಲ್ಲರಿಗೂ ಸೇರಿದ್ದು ಎನ್ನುವುದು ಸಾರಿ ಹೇಳಿದರು ಈ ಮೂಲಕ ಮಾನವ ಹಕ್ಕುಗಳನ್ನು ಎತ್ತಿ ಹಿಡಿದರು ಭಾರತೀಯ ಸವರ್ಣೀಯರು ಅಸ್ಪೃಶ್ಯತೆ ಎಂಬ ಹೊಲಸನ್ನು ಮೆದುಳಿಗೆ ತುಂಬಿಕೊಂಡು ದೇಶಾದ್ಯಂತ ಓಡಾಡುತ್ತಿದ್ದಾರೆ ಇದಕ್ಕೆ ಈ ದೇಶದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಕೂಡ ಇದೆ ಇಂದಿಗೂ ಇಲ್ಲಿನ ದಲಿತ ಆದಿವಾಸಿಗಳನ್ನು ಅವಮಾನಿಸುತ್ತಲೇ ಇದೆ ಸವರ್ಣಿಯರು ಅಸ್ಪೃಶ್ಯರು ಎಂಬ ಹೊಲಸು ಪದ್ಧತಿಯನ್ನು ಮೆದುಳಿಗೆ ತುಂಬಿಕೊಂಡು ದಲಿತರು ಮಾತ್ರ ಕೆರೆ ನೀರನ್ನು ಮುಟ್ಟುವಂತಿರಲಿಲ್ಲ ಎಂದು ನಿಷೇಧ ಹೇರಿದ್ದರು ಆದರೆ ಅವರು ಮಾತ್ರ ದನ ಹೆಮ್ಮೆ ಹಾಡು ಕುರಿ ಮತ್ತು ತಮ್ಮ ನಿತ್ಯ ಕ್ರಮದ ಸ್ವಚ್ಛತೆಯನ್ನು ಅಲ್ಲೇ ಮಾಡುತ್ತಿದ್ದರು ಆದರೆ ದಲಿತರು ಮಾತ್ರ ಮುಟ್ಟುವಂತಿರಲಿಲ್ಲ ಎಂಬ ಕಾನೂನು ಮಾಡಿಕೊಂಡಿದ್ದು ಅದನ್ನು ಬಾಬಾ ಸಾಹೇಬರು ವಿರೋಧಿಸಿದರು, ಅಂದಿನ ಬಾಂಬೆ ಶಾಸನಸಭೆ ನಂತರ 1923ರಲ್ಲಿ ಬಾಂಬೆ ಶಾಸನ ಮಂಡಳಿ ಸಾರ್ವಜನಿಕ ಸ್ಥಳಗಳನ್ನು ಅಸ್ಪೃಶ್ಯರು ಬಳಸಬಹುದೆಂದು ನಿರ್ಣಯವನ್ನು ಅಂಗೀಕರಿಸಿತು ಆದರೆ ಸವರ್ಣೀಯ ಹಿಂದೂಗಳು ಇದನ್ನು ಒಪ್ಪಲಿಲ್ಲ ತಮ್ಮ ಹಿಂದಿನ ಚಾಳಿಯನ್ನು ಮುಂದುವರಿಸಿದರು 1924ರಲ್ಲಿ ಮತ್ತೊಮ್ಮೆ ಮಹಾಡ್ ಪುರಸಭೆಯಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸುವ ನಿರ್ಣಯ ತೆಗೆದುಕೊಳ್ಳಲಾಯಿತು, ಅದಾಗಿಯೂ ಸವರ್ಣಿಯರು ಭಾರಿ ವಿರೋಧ ದಿಂದಾಗಿ ಅದನ್ನು ಕಾರ್ಯಗತಗೊಳಿಸಲಿಲ್ಲ ಈ ಸುದ್ದಿ ಬಾಬಾ ಸಾಹೇಬರ ಕಿವಿಗೆ ಮುಟ್ಟಿದ ನಂತರ 1927ರಲ್ಲಿ ಬಾಬಾ ಸಾಹೇಬರು ಸಾರ್ವಜನಿಕ ಸ್ಥಳದಲ್ಲಿ ನೀರನ್ನು ಬಳಸುವ ಹಕ್ಕುಗಳನ್ನು ಪ್ರತಿಪಾದಿಸಲು ಮಹಡ್ ಸತ್ಯಾಗ್ರಹವನ್ನು ಆರಂಭಿಸಿದರು 1927 ಮಾರ್ಚ್ 20 ರಂದು ಸಾವಿರಾರು ಅಸ್ಪೃಶ್ಯರೊಂದಿಗೆ ಮಾಹಾಡ್ ಕೆರೆಗೆ ಹೋಗಿ ಅಲ್ಲಿನ ನೀರನ್ನು ಮುಟ್ಟುವುದರ ಮೂಲಕ ಮಾನವ ಹಕ್ಕುಗಳ ಗಣತಿಯನ್ನು ಎತ್ತಿ ಹಿಡಿದರು ಬಾಬಾ ಸಾಹೇಬರಿಗೆ ಈ ವಿಚಾರದಲ್ಲಿ ಒಂದು ಸ್ಪಷ್ಟತೆ ಇತ್ತು, ಸವರ್ಣಿಯರು ಬಳಸುವ ಈ ಅಶುದ್ಧ ನೀರನ್ನು ಅಸ್ಪೃಶ್ಯರು ಬಳಸಿದರೆ ಪಾವನವಾಗುತ್ತದೆ ಎಂಬುದನ್ನ ಭಾವಿಸಲಿಲ್ಲ ಆದರೆ ಸಾರ್ವಜನಿಕರ ಸಂಪನ್ಮೂಲಗಳನ್ನು ಎಲ್ಲರೂ ಬಳಸುವ ಹಕ್ಕುಳ್ಳವರು ಎಂಬುದನ್ನು ಪ್ರತಿಪಾದಿಸುವುದೇ ಮುಖ್ಯವಾಗಿತ್ತು ಇದೇ ಸಂದರ್ಭದಲ್ಲಿ ಬಾಬಾ ಸಾಹೇಬರು ಮಹಿಳೆಯರನ್ನು ಕುರಿತು ಸ್ವಚ್ಛತೆಯ ಬಗ್ಗೆ ಹಾಗೂ ಧರಿಸುವ ಬಟ್ಟೆಯ ಬಗ್ಗೆ ತಿಳಿ ಹೇಳಿದರು ನಮಗೆ ಉಪಾಸವಿದ್ದರೂ ಕೊಳಕುತನದಿಂದ ಇರಬಾರದು ಇನ್ನು ಮುಂದೆ ನೀವು ತುಂಡು ಬಟ್ಟೆ ಧರಿಸಬಾರದು ಸವರ್ಣಿಯರ ಹೆಂಗಸರಂತೆ ಸೀರೆ ಧರಿಸಬೇಕು ಎಂದು ಪ್ರೋತ್ಸಾಹಿಸಿದರು, ಈ ನಿಟ್ಟಿನಲ್ಲಿ ಮಹಾಡ್ ಸತ್ಯಾಗ್ರಹ ಭಾರತ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯಿತು ಈ ಚಳುವಳಿ ನಡೆದ ಇಂದಿಗೆ ಅಂದರೆ ದಿನಾಂಕ 20.03.2025 ಗುರುವಾರಕ್ಕೆ 98 ವರ್ಷಗಳು ತುಂಬುತ್ತಿದೆ 98 ವರ್ಷ ಕಳೆದರೂ ಕೂಡ ನೀರಿನ ವಿಷಯದಲ್ಲಿ ಬಟ್ಟೆ ವಿಷಯದಲ್ಲಿ ದಲಿತರ ವಿಷಯದಲ್ಲಿ ದಿನನಿತ್ಯ ಕೊಲೆ ಸುಲಿಗೆ ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಲೇ ಇದೆ ಇತ್ತೀಚಿಗೆ ರಾಜಸ್ಥಾನದ ಶಾಲೆ ಒಂದರಲ್ಲಿ ಏಳನೇ ತರಗತಿಯ ಬಾಲಕನೊಬ್ಬ ನೀರು ಕುಡಿದೆನೆಂಬ ಕಾರಣಕ್ಕೆ ಹೊಡೆದು ಸಾಯಿಸಿದರು, ಉತ್ತರ ಪ್ರದೇಶದಲ್ಲಿ ಯುವಕನೊಬ್ಬ ಸಾರ್ವಜನಿಕ ಬಾವಿಯಿಂದ ನೀರನ್ನು ಮುಟ್ಟಿದ ಕಾರಣಕ್ಕೆ ಕೊಲೆ ಮಾಡಲಾಯಿತು ಹೀಗೆ ಪ್ರತಿನಿತ್ಯ ನೀರನ್ನು ಬಳಸಿದರು ಎಂದು ನಿರಂತರ ದೌರ್ಜನ್ಯಗಳು ನಡೆಯುತ್ತಲೇ ಇವೆ ಇದು ದೇಶದ ಸಮಾನತೆಯ ಕಡೆಗೆ ಎಲ್ಲಿ ನಡೆಯುತ್ತದೆ ಬರೀ ಅಸಮಾನತೆಯ ದ್ವೇಷ ವಿಕೃತಿಯ ಕಡೆಗೆ ನಡೆಯುತ್ತಿದೆ ಎಂಬುದನ್ನು ತೋರುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಪುರ ಗ್ರಾಮದ ಆದರ್ಶ , ರಾಯಣ್ಣ, ವಿನೋಬನಗರ, ನವೀನ್ ಅರಕೆರೆ, ಚಂದ್ರು ಹುಲ್ಲೇಕೆರೆ, ವಿಜಿ ಕುಮಾರ್ ರೈತ ಸಂಘ, ಜಗದೀಶ್ ಜಕ್ನಳ್ಳಿ, ಲೋಕೇಶ್ ಕುಣಿಕೆನಹಳ್ಳಿ, ನಟರಾಜಣ್ಣ ಪುರ ,ಅಶೋಕ್ ಪುರ, ಅವಿನಾಶ್ ಕುಣಿಕೇನಹಳ್ಳಿ, ತಬಲಾ ಪ್ರದೀಪ್ ತಬಲಾ ನಾರಾಯಣಿ, ಇನ್ನು ಅನೇಕರು ಈ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.
ವರದಿ, ಮಂಜುನಾಥ್ ಕೆ ಎ ತುರುವೇಕೆರೆ.