ತಿಪಟೂರು ನಗರದ ಅಗ್ನಿ ಶಾಮಕಠಾಣೆ ರೈಲ್ವೆ ಟ್ರ್ಯಾಕ್ ಬಳಿ ಯುವಕನೋರ್ವ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದ್ದು
ತಿಪಟೂರು ನಗರದ ಮಾರನಗೆರೆ ವಾಸಿ ನರಸಿಂಹ ರಾಜು ಉರುಫ್ ನರಸಿಂಹ ಮೂರ್ತಿ (30) ವರ್ಷ ಮೃತ ದುರ್ದೈವಿ.
ರಾತ್ರಿ ಯಾವುದೋ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಶಂಕೆಯಿಂದು ಸ್ಥಳಕ್ಕೆ ಅರಸೀಕೆರೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು.ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
Month: March 2025
ತಿಪಟೂರು : ತಾಲೂಕಿನ ಶಕ್ತಿ ದೇವತೆಯಾದ 33 ಗ್ರಾಮಗಳ ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಿ ದೇವಾಲಯಕ್ಕೆ ವಾಮಾಚಾರ ಮಾಡಿ ಬಾಗಿಲಿಗೆ ಬೆಂಕಿ ಹಚ್ಚಿರುವ ಘಟನೆ ನಡೆಸಿದೆ,

ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಹಟ್ನ ಗ್ರಾಮದ ಹೊರವಲಯದ ತೋಪಿನಲ್ಲಿ ಮೂಲಸ್ಥಾನ ಶ್ರೀ ಕೆಂಪಮ್ಮ ದೇವಿ ದೇವಾಲಯವಿದೆ. ಸಂಜೆ ಪೂಜೆ ನಂತರ ರಾತ್ರಿ ವೇಳೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಪಶ್ಚಿಮದ ಬಾಗಿಲಿಗೆ ವಾಮಾಚಾರ ಮಾಡಿದ್ದಾರೆ. ನಂತರದಲ್ಲಿ ವಾಮಾಚಾರದ ವಸ್ತುಗಳಿಗೆ ಬೆಂಕಿ ಹಚ್ಚಿದ್ದು ಅದು ಸಂಪೂರ್ಣ ಬಾಗಿಲಿಗೆ ಬೆಂಕಿ ಹೊತ್ತಿಕೊಂಡಿದೆ. ವಾಮಾಚಾರ ಮಾಡಿ ದೇವಾಲಯಕ್ಕೆ ದಿಗ್ಬಂದನ ಮಾಡಲಾಗಿದೆ,
ಬೆಳಗಿನ ಜಾವ ಪೂಜಾ ಕೈಂಕರ್ಯಗಳನ್ನು ನಡೆಸಲು, ದೇವಾಲಯವನ್ನು ಸ್ವಚ್ಛತೆ ಮಾಡಲು ಬಂದಾಗ ಗ್ರಾಮಸ್ಥರು ನೋಡಿ ಬೆಂಕಿ ನಂದಿಸಿದ್ದಾರೆ. ಬಾಗಿಲು ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಸ್ಥಳದಲ್ಲಿ ವಾಮಾಚಾರಕ್ಕೆ ಬಳಸಿದ್ದ ಬೊಂಬೆ,ಹಳೇ ಸೀರೆ, ವಾಮಾಚಾರ ವಸ್ತುಗಳು ಸುಟ್ಟು ಸ್ಥಿತಿಯಲ್ಲಿ ದೊರೆತಿದ್ದು ಸ್ಥಳೀಯ ಗ್ರಾಮಸ್ಥರು , ಭಕ್ತರಲ್ಲಿ ಆತಂಕ ಮೂಡಿಸಿದೆ.
ಸ್ಥಳಕ್ಕೆ ಕಿಬ್ಬನಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿದ್ದು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.
ವರದಿ:ಮಂಜುನಾಥ್ ಹಾಲ್ಕುರಿಕೆ
ತುಮಕೂರು ಜಿಲ್ಲೆ ತಿಪಟೂರು ತಾಲ್ಲೋಕಿನ ಮದ್ಲೇಹಳ್ಳಿ ಗ್ರಾಮದಲ್ಲಿ ವನ್ಯಜೀವಿ ಸಂರಕ್ಷಣಾ ದಿನದಂದೆ ಚಿರತೆ ಅಗ್ನಿಅವಘಡದಲ್ಲಿ ದಾರುಣ ಸಾವನ್ನಪ್ಪಿದು, ಚಿರತೆ ಸಾವಿಗೆ ಅರಣ್ಯ ಇಲಾಖೆಯ ಕರ್ತವ್ಯ ಲೋಪವೇ ಕಾರಣವಾಗಿದೆ, ಸರ್ಕಾರ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳನ್ನ ಅಮಾನತ್ತಿನಲ್ಲಿ ಇಟ್ಟು, ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ವನ್ಯಜೀವಿ ಹಾಗೂ ಪರಿಸರಹಿತರಕ್ಷಣಾ ಸಂಘಟನೆಗಳ ಮುಖಂಡರು ತಿಪಟೂರು ಆಡಳಿತ ಸೌಧದ ಮುಂಭಾಗ ಪ್ರತಿಭಟನೆ ನಡೆಸಿ ತಿಪಟೂರು ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು

ಮೈತ್ರೆಯ ಪರಿಸರ ಮತ್ತು ಗ್ರಾಮ ಅಧ್ಯಯನ ಕೇಂದ್ರದ ಮುಖ್ಯಸ್ಥ ಮನೋಹರ್ ಪಾಟೇಲ್ ಮಾತನಾಡಿ
ಜೀವವೈವಿಧ್ಯಯ ವ್ಯವಸ್ಥೆಯಲ್ಲಿ ಮನುಷ್ಯ ಉಳಿಯ ಬೇಕು ಎಂದರೆ ಪ್ರತಿಯೊಂದು ಜೀವಿಯು ಉಳಿಯಬೇಕು,ನಮ್ಮ ವ್ಯವಸ್ಥೆಯಲ್ಲಿ ಎಷ್ಟೋ ವನ್ಯಜೀವಿಗಳು ಅಳಿವಿನ ಹಂತತಲುಪಿವೆ, ಈಗ್ಗೆ 15 ವರ್ಷಗಳ ಹಿಂದೆ ನಡೆದ ಸರ್ವೆಯಂತೆ ತಾಲ್ಲೋಕಿನಲ್ಲಿ 35 ಚಿರತೆಗಳು ಇದ್ದವು ಆದರೆ ಇತ್ತಿಚಿನ ದಿನಗಳಲ್ಲಿ ಚಿರತೆಸಂತತಿ ಕಡಿಮೆಯಾಗುತ್ತಿದೆ,ಅರಣ್ಯ ಇಲಾಖೆಯ ಅಧಿಕಾರಿಗಳು ಅರಣ್ಯ ಸಂರಕ್ಷಣೆ ಮಾಡಲು ವಿಫಲವಾಗಿದ್ದು,ಬೇಜವಾಬ್ದಾರಿಯಿಂದ ವರ್ತಿಸುತ್ತಿರುವ ಪರಿಣಾಮ ಹಲವಾರು ಪ್ರಬೇಧದ ವನ್ಯಜೀವಿಗಳು, ಸಾವನ್ನಪುತ್ತಿವೆ,ತಾಲ್ಲೋಕಿನ ಮದ್ಲೇಹಳ್ಳಿ ಗ್ರಾಮದಲ್ಲಿ ಬೋನಿಗೆ ಬಿದ್ದ ಚಿರತೆಯೊಂದು ಅಗ್ನಿಅವಘಟಕ್ಕೆ ತುತ್ತಾಗಿ, ಧಾರುಣವಾಗಿ ಸಾವನ್ನಪ್ಪಿರುವುದು, ಅರಣ್ಯ ಇಲಾಖೆಯಕಾರ್ಯವೈಖರಿಗೆ ಸಾಕ್ಷಿಯಾಗಿದೆ,ಅರಣ್ಯ ರಕ್ಷಣೆ ಮಾಡಬೇಕಾದ ಅಧಿಕಾರಿಗಳು,ಟಿಂಬರ್ ಮಾಫೀಯಾ ಹಾಗೂ ಗುತ್ತಿಗೆ ಮಾಫಿಯಾಗಳೊಂದಿಗೆ ಶಾಮೀಲಾಗಿ ಅರಣ್ಯ ಭಕ್ಷಣೆಯಲ್ಲಿ ತೊಡಗಿದ್ದಾರೆ,ಚಿರತೆ ಸಾವು ಅಧಿಕಾರಿಗಳ ಬೇಜವಾಬ್ದಾರಿಗೆ ಸಾಕ್ಷಿಯಾಗಿದ್ದು ಸರ್ಕಾರ ತಿಪಟೂರು ಅರಣ್ಯಾಧಿಕಾರಿಗಳ ಕೂಡಲೇ ಅಮಾನತ್ತುಗೊಳಿಸಿ,ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು

ಪ್ರತಿಭಟನೆಯಲ್ಲಿ ಉಪಸ್ಥಿತರಿದ ಕರ್ನಾಟಕ ಅಲೆಮಾರಿ ಬುಡಕಟ್ಟು ಮಹಾಸಭಾ ಉಪಾಧ್ಯಕ್ಷ ಉಜ್ಜಜ್ಜಿ ರಾಜಣ್ಣ ಮಾತನಾಡಿ ತಿಪಟೂರು ತಾಲ್ಲೋಕಿನಲ್ಲಿ ವನ್ಯಜೀವಿ ಚಿರತೆ ರಾಷ್ಟ್ರೀಯ ವನ್ಯಜೀವಿ ಸಪ್ತಹದ ದಿನವೇ ಸಾವನ್ನಪ್ಪಿರುವುದು, ಅಧಿಕಾರಿಗಳ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ, ಮದ್ಲೇಹಳ್ಳಿ ಪ್ರದೇಶದಲ್ಲಿ ಚಿರತೆ ಸಂಚಾರ ಕಂಡಸ್ಥಳೀಯರ ಮಾಹಿತಿ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಬೋನ್ ಹಿಟ್ಟಿದ್ದಾರೆ, ಆದರೇ ಸರ್ಕಾರದ ವನ್ಯಜೀವಿ ಸಂರಕ್ಷಣೆ ಮಾರ್ಗಸೂಚಿಗಳನ್ನ ಪಾಲಿಸದೆ ಕಾಟಾಚಾರಕ್ಕೆ ಕೆಲಸ ಮಾಡಿ, ಚಿರತೆ ಸಾವಿಗೆ ಅಧಿಕಾರಿಗಳ ಕರ್ತವ್ಯಲೋಪ ಹಾಗೂ ಹೊಣೆಗೇಡಿತನದ ಪರಿಣಾಮ ವನ್ಯಜೀವಿ ಸಾವುಸಂಭವಿಸಿದೆ,ತಿಪಟೂರು ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ವಲಯ ಸಂರಕ್ಷಣಾಧಿಕಾರಿಗಳು ಜಿಲ್ಲಾ ಅರಣ್ಯ ರಕ್ಷಣಾಧಿಕಾರಿಗಳ ಕರ್ತವ್ಯ ಲೋಪದ ಪರಿಣಾಮ ಚಿರತೆ ಸಾವನ್ನಪಿದೆ, ಚಿರತೆ ಸೆರೆಗೆ ಬೋನ್ ಇಟ್ಟ ಅಧಿಕಾರಿಗಳ ಚಿರತೆ ರಕ್ಷಣೆಕ್ಕೆ ಸೂಕ್ತನಿಯಮ ಹಾಗೂ ಕರ್ತವ್ಯಪಾಲಿಸದ ಪರಿಣಾಮ ಸಂಭವಿಸಿದ್ದು,ಸರ್ಕಾರ ಘಟನೆಗೆ ಕಾರಣರಾದ ಅಧಿಕಾರಿಗಳನ್ನ ಅಮಾನತ್ತಿನಲ್ಲಿ ಇಟ್ಟು ನ್ಯಾಯಂಗ ತನಿಖೆ ನಡೆಸಬೇಕು, ತಿಪಟೂರು ಅರಣ್ಯ ಇಲಾಖೆ ಅರಣ್ಯ ಸಂರಕ್ಷಣೆಗೆ ಗಮನಕೊಡದೆ,ಟಿಂಬರ್ ಮಾಫಿಯಾ,ಗಣಿ ಮಾಫಿಯಾ ಹಾಗೂ ಅರಣ್ಯ ಗುತ್ತುಗೆದಾರರೊಂದಿಗೆ ಶಾಮಿಲಾಗಿ ಹಣಮಾಡಲು ಹೊರಟಿದ್ದಾರೆ, ಅಧಿಕಾರಿಗಳು ಕರ್ತವ್ಯ ಲೋಪದ ಪರಿಣಾಮವೇ ಚಿರತೆ ಸಾವು ಕೂಡಲೇ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು
ಪ್ರತಿಭಟನೆಯಲ್ಲಿ ಉಪಸ್ಥಿತರಿದ ಬೆಳೆಕಾವಲು ಸಮಿತಿ ಅಧ್ಯಕ್ಷ ಶ್ರೀಕಾಂತ್ ಕೆಳಹಟ್ಟಿ ಮಾತನಾಡಿ ಚಿರತೆ ಸಾವಿಗೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣವಾಗಿದೆ ,ಚಿರತೆ ಸೆರೆಗೆ ಬೋನ್ ಇಟ್ಟ ಅಧಿಕಾರಿಗಳು ಚಿರತೆ ಚಲನವಲನಗಳ ಬಗ್ಗೆ ಗಮನಹರಿಸಬೇಕು,ಆದರೆ ಚಿರತೆ ಬೋನಿಗೆ ಬಿದ್ದು ದಿನಗಳೆ ಕಳೆದಿವೆ, ಆದರೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲ ಬೇಸಿಗೆ ಕಾಲವಾದ ಕಾರಣ ಬೆಂಕಿಬಿದ್ದಿದ್ದು, ಬೆಂಕಿಯಲ್ಲಿ ಚಿರತೆ ಸಾವನ್ನಪ್ಪಿರುವುದು ಅಮಾನವೀಯ ಕೃತ್ಯವಾಗಿದೆ, ಸರ್ಕಾರ ಕೂಡಲೇ ಹಾಗೂ ಅರಣ್ಯ ಸಚಿವರು ತನಿಖೆಗೆ ಆದೇಶ ನೀಡಿದ್ದಾರೆ, ಆದರೇ ಚಿರತೆ ಸಾವು ಸಂಭವಿಸಿ ವಾರವಾಗುತ್ತ ಬಂದಿದರೂ, ತನಿಖೆಯೇ ಪ್ರರಂಭವಾಗಿಲ್ಲ, ಯಾವ ಅಧಿಕಾರಿ ವಿರುದ್ದ ತನಿಖೆ ಮಾಡಬೇಕೋ ಅಂತಹ ಅಧಿಕಾರಯ ಸಮ್ಮುಖದಲ್ಲಿ ನ್ಯಾಯಸಮ್ಮತ ತನಿಖೆ ಸಾಧ್ಯವಿಲ್ಲ, ತನಿಖೆಯು ದಿಕ್ಕುತಪ್ಪುವ ಸಾಧ್ಯತೆಯಿದ್ದು,ಸರ್ಕಾರ ಕೂಡಲೇ, ತಿಪಟೂರು ಅರಣ್ಯ ಸಂರಕ್ಷಣಾಧಿಕಾರಿಗಳನ್ನ ಅಮಾನತ್ತಿನಲ್ಲಿ ಇಟ್ಟು ನ್ಯಾಯಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಉಪಸ್ಥಿತರಿದ ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎನ್ ಬಾನುಪ್ರಶಾಂತ್ ಮಾತನಾಡಿ ವನ್ಯಜೀವಿ ಚಿರತೆ ಸಾವು, ಅಮಾನವೀಯ ಘಟನೆಯಾಗಿದೆ,ತಿಪಟೂರು ಅರಣ್ಯ ಇಲಾಖೆ ಅರಣ್ಯ ರಕ್ಷಣೆ ಮಾಡುವ ಬದಲು ಟಿಂಬರ್ ಮಾಫಿಯ,ಗುತ್ತಿಗೆ ಮಾಫಿಯಾಗಳ ಜೊತೆ ಶಾಮೀಲಾಗಿದ್ದಾರೆ, ಪ್ರತಿವರ್ಷ ಸರ್ಕಾರ ಅರಣ್ಯ ಅಭಿವೃದ್ದಿಗೆ ಕೋಟ್ಯಾಂತರ ರೂಪಾಯಿ ಹಣ ವಿನಿಯೋಗಿಸುತ್ತಿದ್ದರೂ, ಅರಣ್ಯ ಅಭಿವೃದ್ದಿಯಾಗದೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಜೇಬುಸೇರುತ್ತದೆ,ಮದ್ಲೇಹಳ್ಳಿಯಲ್ಲಿ ಸಂಭವಿಸಿರುವ ಚಿರತೆ ಸಾವು ಹಲವಾರು ಅನುಮಾನಗಳನ್ನ ಉಂಟುಮಾಡಿದೆ,ನ್ಯಾಯಸಮ್ಮತ ತನಿಖೆಯಿಂದ ಮಾತ್ರ ಅಧಿಕಾರಿಗಳ ಕರ್ತವ್ಯ ಲೋಪ ಹೊರಬರಲು ಸಾಧ್ಯ,ಸರ್ಕಾರ ಕೂಡಲೇ ನ್ಯಾಯಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಮೈತ್ರೆಯ ಪರಿಸರ ಮತ್ತು ಗ್ರಾಮೀಣ ಅಧ್ಯಯನ ಕೇಂದ್ರ ಮನೋಹರ್ ಪಾಟೇಲ್, ಶ್ರೀಕಾಂತ್ ಕೆಳಹಟ್ಟಿ,ಪರಿಸರಿ ತಜ್ಞ ಗುಂಗರಮಳೆ ಮುರುಳಿಧರ್,ಕರ್ನಾಟಕ ಅಲೆಮಾರಿ ಬುಡಕಟ್ಟು ಮಹಾಸಭಾ ರಾಜ್ಯ ಉಪಾಧ್ಯಕ್ಷ ಉಜ್ಜಜ್ಜಿ ರಾಜಣ್ಣ,ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎನ್ ಬಾನುಪ್ರಶಾಂತ್,ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ತಿಮ್ಲಾಪುರ ದೇವರಾಜು,ಬಿಳಿಗೆರೆಪಾಳ್ಯ ನಾಗೇಶ್,ಕಿರಣ್ ರಾಜ್ ಹರ್ಚನಹಳ್ಳಿ,ಡಿ.ಎಸ್.ಎಸ್ ಸಂಚಾಲಕ ಹರೀಶ್ ಗೌಡ, ಮುಖಂಡ ಮೋಹನ್ ಬಾಬು,ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜುನಾಥ್ ಹಾಲ್ಕುರಿಕೆ
ತಿಪಟೂರು ತಾಲ್ಲೋಕಿನ ಕಿಬ್ಬನಹಳ್ಳಿ ಹೋಬಳಿ ಮದ್ಲೇಹಳ್ಳಿ ಗ್ರಾಮದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಂಭವಿಸಿದ ವನ್ಯಜೀವಿ ಚಿರತೆ ಸಾವಿನ ಪ್ರಕರಣ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ತಿಪಟೂರು ಆಡಳಿತ ಸೌಧದ ಮುಂಭಾಗ ಪರಿಸರ ಹಾಗೂ ವನ್ಯಜೀವಿ ಪ್ರೇಮಿಗಳು,ಹಾಗೂ ಪ್ರಗತಿಪರ ಸಂಘಟನೆಗಳಿಂದ ನಾಳೆ ಮಾರ್ಚ್ 11ರಂದು ಮಂಗಳವಾರ ಬೃಹತ್ ಪ್ರತಿಭಟನೆ ಮ್ಮಿಕೊಂಡಿದ್ದು, ತಿಪಟೂರು ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರ ಹಾಗೂ ಕೇಂದ್ರ ವನ್ಯಜೀವಿ ಮಂಡಳಿಗೆ ಮನವಿಪತ್ರದಲ್ಲಿಸಿ ಅರಣ್ಯಾಧಿಕಾರಿಗಳ ಕರ್ತವ್ಯಲೋಪ ದ ಬಗ್ಗೆ ನ್ಯಾಯಂಗ ತನಿಖೆಗೆ ಒತ್ತಾಯಿಸಲಾಗುವುದು.
ಮಧುಗಿರಿ: ತಾಲೂಕಿನ ದೊಡ್ಡೇರಿ ಹೋಬಳಿಯ ಜಕ್ಕೇನಹಳ್ಳಿ ಗ್ರಾಮದ ಪಶ್ಚಿಮ ದಿಕ್ಕಿನ ಅರಣ್ಯದಲ್ಲಿ ನೆಲೆಸಿರುವ ಭಕ್ತರ ಹೃದಯದ ಆರಾಧ್ಯ ದೈವ ಶ್ರೀ ಅಹೋಬಲ ಲಕ್ಷ್ಮಿನರಸಿಂಹ ಸ್ವಾಮಿಯ ಮೂಲ ನಿಧಿಯು ಸಮಸ್ತ ಭಕ್ತಾದಿಗಳ ನೆರವಿನಿಂದ ಹಾಗೂ ಬಡವನಹಳ್ಳಿ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇವಸ್ಥಾನದ ಸಹಯೋಗದೊಂದಿಗೆ ಸದರಿ ಕಾರ್ಯಕ್ರಮವು ಮಾರ್ಚ್ 11 ರಿಂದ ಮಾರ್ಚ್ 19 ರವರೆಗೆ ಅದ್ದೂರಿಯಾಗಿ ಜರುಗಲಿದೆ, ಸದರಿ ಕಾರ್ಯಕ್ರಮದಲ್ಲಿ ಮಾರ್ಚ್ 13ರಂದು ಬ್ರಹ್ಮ ರಥೋತ್ಸವ ಧಾರ್ಮಿಕ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದೆ, ಸದರಿ ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತ ಸಮೂಹವು ಸಹಸ್ರಾರು ಸಂಖ್ಯೆಯಲ್ಲಿ ಸಂಗಮವಾಗಲಿದೆ.
ವರದಿ: ಸಂತೋಷ್ ಓಬಳ. ಗುಬ್ಬಿ
ತಿಪಟೂರು ನಗರಕ್ಕೆ ಕುಡಿಯುವ ನೀರಿ ಪೂರೈಸಲು ನಗರಸಭೆ ವಿಫಲವಾಗಿದ್ದು, ಕುಡಿಯುವ ನೀರಿಗೆ ಜನಪರದಾಡುವಂತ್ತಾಗಿದೆ, ಸರ್ಕಾರ ಕೂಡಲೇ ಕುಡಿಯುವ ನೀರು ಪೂರೈಸಬೇಕು ಎಂದು ಒತ್ತಾಯಿಸಿ ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾನಿರತರು ಸರ್ಕಾರ ಹಾಗೂ ನಗರಸಭೆ ಪೌರಾಯುಕ್ತರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್ ಮಾತನಾಡಿ ಶಾಸಕರ ಆಡಳಿತ ವೈಫಲ್ಯದ ಪರಿಣಾಮ ನಗರದ ಜನ ಕುಡಿಯುವ ನೀರಿಗೂ ಪರದಡುವಂತ್ತಾಗಿದೆ,ನಗರಸಭೆ ಯುಜಿಡಿ ನೀರು ಈಚನೂರು ಕೆರೆ ಸೇರದಂತೆ ಕ್ರಮವಹಿಸದ ಪರಿಣಾಮ ನಗರದ ಜನ ಕಲೂಷಿತ ನೀರು ಕುಡಿಯುವ ದುಸ್ಥಿತಿ ಒದಗಿದೆ,ನಗರಸಭೆ ಆಡಳಿತ ಸಂಪೂರ್ಣವಾಗಿ ವಿಫಲವಾಗಿದ್ದು, ನಗರದ ಸಮಸ್ಯೆಗಳ ಅರಿವಿಲ್ಲದೆ ಆಡಳಿತ ನಡೆಸುತ್ತಿದೆ,ಪ್ರತಿವರ್ಷ ಸಾವಿರಾರು ರೂಪಾಯಿ ತೆರಿಗೆ ಪಡೆಯುವ ನಗರಸಭೆಗೆ ಕುಡಿಯುವ ನೀರು ಹಾಗೂ ಮೂಲಸೌಕರ್ಯ ಒದಗಿಸಲು ವಿಫಲವಾಗಿದೆ,ಮಾರ್ಚ್ ನಲ್ಲಿ ಇಷ್ಟೊಂದು ನೀರಿನ ಸಮಸ್ಯೆ ಉಂಟಾದರೆ ಮೇ.ಜೂನ್ ತಿಂಗಳಿನಲ್ಲಿ ಜನಜಾನುವಾರುಗಳು ಕುಡಿಯುವ ನೀರಿಲ್ಲದ ಜೀವಕಳೆದುಕೊಳ್ಳುವ ಸ್ಥಿತಿ ಬರಬಹುದು, ಶಾಸಕರು ಈ ವರ್ಷದ ಬಜೆಟ್ ನಲ್ಲಿ ಒಂದೂ ನಯಾಪೈಸೆಯನ್ನು ತಾಲೋಕಿಗೆ ತಂದಿಲ್ಲ.ತೆಂಗುಬೆಳೆಗಾರರು ಸಾಯುತ್ತಿದ್ದಾರೆ,ಕನಿಷ್ಟ ಜನರ ಬಗ್ಗೆ ಕಾಳಜಿ ಇದ್ದರೆ,ನಗರದ ಜನಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಗೆಗೆ ಕ್ರಮವಹಿಸಲಿ ಎಂದು ತಿಳಿಸಿದರು

ಮಾಜಿ ನಗರಸಭಾ ಸದಸ್ಯ ಪ್ರಸನ್ನ ಕುಮಾರ್ ಮಾತನಾಡಿ ವೈ.ಕೆ ರಾಮಯ್ಯನವರ ಶ್ರಮದ ಪರಿಣಾಮ ಹೇಮಾವತಿ ನೀರು ತುಮಕೂರು ಜಿಲ್ಲೆಗೆ ದೊರೆತ್ತಿದೆ,ನಮ್ಮ ಪಾಲಿನ ನೀರನ್ನ ಸಮರ್ಪಕವಾಗಿ ಬಳಸಿಕೊಳ್ಳಬೇಕು. ತಿಪಟೂರು ನಗರಕ್ಕೆ ಕುಡಿಯುವ ನೀರುವಪೂರೈಸುವ ಈಚನೂರು ಕೆರೆ ಯೂಜಿಡಿ ಕೊಳಚೆ ನೀರು ಕಲೂಷಿತವಾಗಿದ್ದು, ಬಹುತೇಕ ನೀರು ಕುಡಿಯಲು ಯೋಗ್ಯವಾಗಿಲ್ಲ,ತಿಪಟೂರು ನಗರದ ಜನಕುಡಿಯುವ ನೀರಿಗೆ ಪರದಾಡುವಂತ್ತೆ ಆಗಿರುವುದು ಪೌರಾಯುಕ್ತರ ಮುಂದಾಲೋಚನೆ ಇಲ್ಲದೆ ಇರುವುದರ ಪರಿಣಾಮ ಎನ್ನಬಹುದು, ನಗರಸಭೆ ಕೂಡಲೇ ನಗರಕ್ಕೆ ಕುಡಿಯುವ ನೀರುಪೂರೈಕೆಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು
ಪ್ರತಿಭಟನೆಯಲ್ಲಿ ಜೆಡಿಎಸ್ ತಾಲ್ಲೋಕು ಅಧ್ಯಕ್ಷ ಮತ್ತಿಘಟ್ಟ ಶಿವಸ್ವಾಮಿ, ಯುವಘಟಕದ ಅಧ್ಯಕ್ಷ ಸುದರ್ಶನ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಮ್ರಾನ್ ಕೆ.ಕೆ.ಮುಖಂಡರಾದ ನಟರಾಜು, ಕೆ.ಎಂ ತಾತಯ್ಯ,ನಾಗರಾಜು,ಗುರುಮೂರ್ತಿ ಮುಂತ್ತಾದವರು ಉಪಸ್ಥಿತರಿದರು
ಪ್ರತಿಭಟನೆಗೆ ಪ್ರಮುಖ ನಾಯಕರ ಗೈರು:
ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಜೆಡಿಎಸ್ ಪ್ರಭಾವಿ ನಾಯಕರಾದ ಜಕ್ಕನಹಳ್ಳಿ ಲಿಂಗರಾಜು,ನೊಣವಿನಕೆರೆ ಎನ್ ಸಿ ರಾಮೇಶ್, ರಾಕೇಶ್ ,ತಡಸೂರು ಗುರುಮೂರ್ತಿ,ಹುಣಸೇಘಟ್ಟ ಪ್ರಕಾಶ್, ಸೇರಿದಂತೆ ಬಹುತೇಕ ನಾಯಕರ ಗೈರು ಗಮನಸೆಳೆಯಿತು,
ನಿರೀಕ್ಷೆಯಂತೆ ಪ್ರತಿಭಟನೆಗೆ ಬಾರದ ನಗರದ ನಾಗರೀಕರು:
ನಗರಕ್ಕೆ ಕುಡಿಯುವ ನೀರು ಪೂರೈಕೆಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರೆ, ಕೆ.ಟಿ ಶಾಂತಕುಮಾರ್ ನಿರೀಕ್ಷೆಯಂತೆ ನಗರದ ಜನ ಆಗಮಿಸದೆ ಇರುವುದು ಪ್ರತಿಭಟನಾಕಾರರಲ್ಲಿ ಸ್ಪಲ್ಪ ಬೇಸರ ಮೂಡಿಸಿತ್ತು, ಆದರು ಪ್ರತಿಭಟನೆ ನಡೆಸಿದರು.
ವರದಿ :ಮಂಜುನಾಥ್ ಹಾಲ್ಕುರಿಕೆ
ಮೈಸೂರು: ಅಖಂಡ ಕರ್ನಾಟಕ ರಕ್ಷಣ ಸೇವಾದಳದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ,ಆಚರಿಸಲಾಯಿತು,
ನಗರದ ರೋಟರಿ ಭವನದಲ್ಲಿ ನಡೆದ ಕಾರ್ಯಕ್ರಮವನ್ನ ಮಹಾರಾಣಿ ಕಾಲೇಜು ಪ್ರಾಧ್ಯಾಪಕರಾದ ಶ್ರೀಮತಿ ರತ್ನಮ್ಮ ಉದ್ಘಾಟಿಸಿದರು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆ ಅಬಲೆಯಲ್ಲ,ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ, ಸಂಸಾರದಲ್ಲಿ ಹೆಣ್ಣು ಗಂಡೂ ಸಮಾನರೂ, ಸಂಸಾರದ ಬಂಡಿ ಸಮಾನವಾಗಿ ಸಾಗಿದಾಗ ಕುಟುಂಬ ಸುಖಮಯವಾಗಿರುತ್ತದೆ,ಮಹಿಳೆಯರು ತಮ್ಮ ಮಕ್ಕಳಿಗೆ ಶಿಕ್ಷಣ ಹಾಗೂ ಸಂಸ್ಕಾರ ನೀಡುವ ಮೂಲಕ, ಸಮಾಜದ ಸತ್ಪಜೆಗಳಾಗಿ ಮಾಡುವ ಕಡೆ ಹೆಚ್ಚು ಗಮನಹರಿಸಬೇಕು,ಅಖಂಡ ಕರ್ನಾಟಕ ರಕ್ಷಣಾ ಸೇವಾದಳದಿಂದ ಹಲವಾರು ಸಮಾಜಮುಖಿ ಕೆಲಸ ಮಾಡುತ್ತಿದೆ.ಕಷ್ಟದಲ್ಲಿ ನೊಂದ ನೂರಾರು ಮಹಿಳೆಯರಿಗೆ ಆರ್ಥಿಕ ನೆರವು ನೀಡಿ, ಸಮಾಜದ ಮುಖ್ಯವಾಹಿನಿಯಲ್ಲಿ ಬದುಕುವ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ,ಎಂದು ತಿಳಿಸಿದರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ// ಶಿವು ಸಿಂಹಗೌಡ ಭಾರತೀಯ ಮಾತನಾಡಿ ಸಮಾಜದಲ್ಲಿ ಮಹಿಳೆಗೆ ವಿಶೇಷ ಸ್ಥಾನಮಾನವಿದೆ, ಅವರಿಗೆ ಗಂಡಸರಿಗೆ ಸರಿಸಮಾನವಾದ ಗೌರವಾದರಗಳನ್ನ ನೀಡಬೇಕು, ಹೆಣ್ಣುಮಕ್ಕಳು ಶಿಕ್ಷಣದ ಕಡೆಹೆಚ್ಚು ಗಮನ ನೀಡಬೇಕು, ಹೆಣ್ಣುಮಕ್ಕಳು ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಯಲ್ಲಿ ಬದುಕಿದಾಗ ಪುರುಷಪ್ರಧಾನ ಗೌರವ ನೀಡುತ್ತದೆ.ಮಹಿಳೆಯರು ತಮ್ಮ ಕುಟುಂಬದಲ್ಲಿ ಮಕ್ಕಳಿಗೆ ಹೆಚ್ಚು ಶಿಕ್ಷಣ ನೀಡಿ, ತಮ್ಮ ಆರ್ಥಿಕಗಳಿಕೆ ಸ್ವಲ್ಪಪ್ರಮಾಣವಾದರೂ ಉಳಿತಾಯಮಾಡಿ,ತಮ್ಮ ಉಳಿತಾಯದ ಹಣ ನಿಮ್ಮ ಭವಿಷ್ಯಕ್ಕೆ ನೆರವಾಗುತ್ತದೆ,ಎಂದು ತಿಳಿಸಿದರು
ವಿಶ್ವಮಹಿಳಾ ದಿನಾಚರಣೆ ಅಂಗವಾಗಿ ಅಪ್ಪುಕುಶಾನಿ ಫೈನಾನ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಹಾಗೂ ಅಖಂಡ ಕರ್ನಾಟಕ ರಕ್ಷಣಾ ದಳದ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಶ್ರೀಮತಿ ಲಲಿತಾ ಶಿವು ಸಿಂಹಗೌಡ,ರವರಿಗೆ ಸೀಂಮತ ಕಾರ್ಯ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ರಾಜ್ಯ ಪ್ರಧಾನಕಾರ್ಯದರ್ಶಿ ಕನ್ಯಾಶ್ರೀ ಲಿಂಬೆಹಳ್ಳಿ ರಾಜ್ಯ ಮಹಿಳಾ ಕಾರ್ಯದರ್ಶಿ ಸೌಮ್ಯಶ್ರೀ,ರಾಜ್ಯಕಾರ್ಯದರ್ಶಿ ವೆಂಕಟೇಶ್ ಗೌಡ,ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದರು.ನೂರಾರು ಜನ ಸಂಘಟನೆಗೆ ಸೇರ್ಪಡೆಗೊಂಡರು
ವರದಿ :ಮಂಜುನಾಥ್ ಹಾಲ್ಕುರಿಕೆ
ತಿಪಟೂರು: ತಿಪಟೂರು ನ್ಯಾಯಾಲಯದ ಆವರಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ನಗರದ ತಿಪಟೂರಿನ ನ್ಯಾಯಾಲಯಗಳು ಮತ್ತು ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ ಸಮಿತಿಯ ವತಿಯಿಂದ 2025-26ನೇ ಸಾಲಿನ ಪ್ರಥಮ ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಯಾಗಿ ಜರುಗಿತು. ಲೋಕ ಅದಾಲತ್ ನಲ್ಲಿ 969 ಬಾಕಿ ಪ್ರಕರಣಗಳು, 13,017 ವ್ಯಾಜ್ಯ ಪೂರ್ವ ಪ್ರಕರಣಗಳು, ಒಂದು ವಿಚ್ಛೇದನ ಪ್ರಕರಣ ಯಶಸ್ವಿಯಾಗಿ ಪುನಃ ಒಂದಾಗುವಲ್ಲಿ ಇತ್ಯರ್ಥವಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗೌರವಾನ್ವಿತ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಪುಷ್ಪಾವತಿ ವಿ., ಮಾತನಾಡಿ ಇಂದು ಸಮಾಜದಲ್ಲಿ ವಿಚ್ಛೇದ ಪ್ರಕರಣಗಳು ವಿಪರೀತವಾಗಿವೆ. ಇಂತಹ ಪ್ರಕರಣಗಳನ್ನು ತಡೆಯಲು ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಕೌಟುಂಬಿಕ ಮೌಲ್ಯಗಳ ಕುರಿತು ಶಾಲಾ-ಕಾಲೇಜು ಪಠ್ಯಕ್ರಮಗಳಲ್ಲಿ ಅಳವಡಿಸಿ ಯುವ ಜನರಲ್ಲಿ ಅರಿವು ಮೂಡಿಸುವುದು ತುರ್ತು ಅಗತ್ಯವಾಗಿದೆ. ಗಂಡಹೆಂಡತಿ ಇಬ್ಬರು ಸಮಾನಭಾವದಿಂದ ಹೊಂದಾಣಿಕೆಯಿಂದ ಬದುಕಬೇಕು, ಸಮಾಜದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಬಾರದು. ಕಾನೂನಿನ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಉಂಟಾದರೆ ಅಪರಾಧ ಪ್ರಕರಣ ತಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಾಗಿ ಆಗಮಿಸಿದ ತಿಪಟೂರು ಕೆ.ಎಲ್.ಎ ಸ್ಕೂಲ್ ಆಫ್ ಲಾ ಕಾಲೇಜು ವಿದ್ಯಾರ್ಥಿಗಳಿಗೆ ಲೋಕ ಅದಾಲತ್ ಕುರಿತು ಸಾಕ್ಷಾಚಿತ್ರ ವೀಕ್ಷಣೆ ಮಾಡಲಾಯಿತು. ಗೌರವಾನ್ವಿತ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಶ್ರೀಮತಿ ಪುಷ್ಪಾವತಿ ವಿ, ರವರು., ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ. ಎಂ. ಎಫ.ಸಿ ರವರಾದ ಶ್ರೀ ಮಹಮ್ಮದ್ ಆರಿಫುಲ್ಲ ಸಿ.ಎಫ್. ರವರು ಹಾಗು ಗೌರವಾನ್ವಿತ ಅಧಿಕ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಮ್. ಎಫ್.ಸಿ ನ್ಯಾಯಾಧೀಶರಾದ ಶ್ರೀಮತಿ ಮಧು ಶ್ರೀ ಜಿ. ಎಸ್ ರವರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಬಿ ಎನ್ ಅಜಯ್, ವಕೀಲರ ಸಂಘದ ಕಾರ್ಯದರ್ಶಿಗಳಾದ ಬಿ. ಮಲ್ಲಿಕಾರ್ಜುನಯ್ಯ, ಕೆ.ಎಲ್.ಎ ಸ್ಕೂಲ್ ಆಫ್ ಲಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ವಿನೀತ ಪಿ.ಕೆ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಪ್ರಸನ್ನ ಕುಮಾರ್ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಪುನೀತ್ ಕುಮಾರ್ ಮುಂತಾದವರು ಉಪಸ್ಥಿತರಿದರು.
ವರದಿ :ಸಂತೋಷ್ ಓಬಳ. ಗುಬ್ಬಿ
ತಿಪಟೂರು ಜೆಡಿಎಸ್ ಮುಖಂಡ ಹಾಗೂ ಜೆಡಿಎಸ್ ಪಾರಾಜಿತ ಅಭ್ಯಾರ್ಥಿ ಕೆ.ಟಿ ಶಾಂತಕುಮಾರ್ ನೇತೃತ್ವದಲ್ಲಿ ನಡೆಯುತ್ತಿರು, ತಿಪಟೂರಿನ ಜನರ ಕುಡಿಯುವ ನೀರಿನ ಸಮಸ್ಯೆಗಳ ಕುರಿತ ಹೋರಾಟ,ಹಲವಾರು ಅನುಮಾನಗಳನ್ನ ಹುಟ್ಟಿಹಾಕಿದೆ.

ತಿಪಟೂರಿನ ಮಟ್ಟಿಗೆ ಜೆಡಿಎಸ್ ಪಕ್ಷದ ಪ್ರಭಾವಿ ನಾಯಕರು ಹಾಗೂ ಮೈತ್ರಿ ನಾಯಕರಾಗಿರುವ ಕೆ.ಟಿ ಶಾಂತಕುಮಾರ್,ಕಳೆದ ವಿಧಾನಸಭೆ ಚುನಾವಣೆ ಜೆಡಿಎಸ್ ಪಕ್ಷದ ಅಭ್ಯಾರ್ಥಿಯಾಗಿದರು,ಹಾಗೂ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಧರ್ಮಪಾಲಿಸಿ ಪಕ್ಷದ ಸೂಚನೆಯಂತೆ ಸೋಮಣ್ಣನ ಪರವಾಗಿ ಕೆಲಸಮಾಡಿದರು,ಚುನಾವಣಾ ಪೂರ್ವದಲ್ಲಿ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿದ್ದ ಅವರ ಯಾಕೋ ನಂತರದ ದಿನಮಾನಗಳಲ್ಲಿ ಮಂಕಾಗಿದ್ದಾರೆ.

ಪಕ್ಷದ ಮುಖವಾಣಿಯಾಗಿ ತಾಲ್ಲೋಕಿನಲ್ಲಿ ತಾಂಡವವಾಡುತ್ತಿರುವ ಸಮಸ್ಯೆಗಳ ಬಗ್ಗೆ ಧ್ವನಿಎತ್ತಬೇಕಿತ್ತು, ಆದರೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಂಗೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ,ಎನ್ನುವ ಅನುಮಾನದ ಮಾತುಗಳು ಕಾರ್ಯಕರ್ತರ ಮೊಗಸಾಲೆಯಲ್ಲಿ ಕೇಳಿಬರುತ್ತಿವೆ,ಸಾರ್ವಜನಿಕರ ಮಾತಿಗೆ ಇಂಬುನೀಡುವಂತೆ ,ಕೆಲ ತಿಂಗಳುಗಳ ಹಿಂದೆ ಬಿಜಿಎಸ್ ಸಮುದಾಯ ಭವನದಲ್ಲಿ ಕೆ.ಟಿ ಶಾಂತಕುಮಾರ್ ಆಯೋಜಿಸಿದ ಶಾಂತಕುಮಾರ್ ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ಬಹುತೇಕ ಜೆಡಿಎಸ್ ಪ್ರಭಾವಿ ನಾಯಕರುಗಳಿಗೆ ಆಹ್ವಾನ ನೀಡಿಲ್ಲ,ಕೆಲ ಆಯ್ದ ವ್ಯಕ್ತಿಗಳನ್ನ ಮಾತ್ರಕರೆದಿದ್ದಾರೆ,ಚುನಾವಣೆಯಲ್ಲಿ ಪಕ್ಷ ಹಾಗೂ ಪಕ್ಷದ ನಾಯಕರಿಗಾಗಿ ಹಗಲಿರುಳು ಶ್ರಮಿಸಿದ ಮುಖಂಡರು ಹಾಗೂ ಕಾರ್ಯಕರ್ತರನ್ನ ಕಡೆಗಣಿಸಲಾಗಿದೆ,ಎನ್ನುವ ಆರೋಪಗಳು ಕೇಳಿ ಬಂದಿತ್ತು. ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು,ಎಲ್ಲಾ ಕಾರ್ಯಕರ್ತರನ್ನ ಒಗ್ಗೂಡಿಸಿ ಮುಂದಿನ ಚುನಾವಣೆಗಾದರೂ ಭದ್ರನೆಲೆ ಕಂಡುಕೊಳ್ಳುತ್ತಾರೆ,ಎನ್ನುವಾಗ ಕೆ.ಟಿ ಶಾಂತಕುಮಾರ್ ,ನೇತೃತ್ವದಲ್ಲಿ ಸೋಮವಾರ ನಡೆಯುತ್ತಿರು ಪ್ರತಿಭಟನೆಯ ಕರಪತ್ರ ಹಲವಾರು ಅನುಮಾನಗಳನ್ನ ಹುಟ್ಟಿಹಾಕಿದ್ದೇವೆ,ಕರಪತ್ರದಲ್ಲಿ ಜೆಡಿಎಸ್ ಪಕ್ಷದ ಚಿಹ್ನೆಯಾಗಲಿ ಅಥವಾ ಜೆಡಿಎಸ್ ವರೀಷ್ಠಾ ನಾಯಕ ದೇವೆಗೌಡ್ರು ಹಾಗೂ ಹೆಚ್.ಡಿ ಕುಮಾರಸ್ವಾಮಿ ಸೇರಿ ಯಾವ ನಾಯಕರ ಭಾವಚಿತ್ರವಿಲ್ಲದಂತೆ, ಆಗಿರುವುದು ತಾಲ್ಲೂಕಿನಲ್ಲಿ ಸಾರ್ವಜನಿಕರಲ್ಲಿ ಎದ್ದಿರುವ ಅನುಮಾನಗಳಿಗೆ ಇಂಬುನೀಡುತ್ತಿದೆ,ಕೆ.ಟಿ ಶಾಂತ ಕುಮಾರ್ ಜೆಡಿಎಸ್ ನಿಂತ ಅಂತರ ಕಾಯ್ದುಕೊಳ್ತಿದ್ದಾರಾ..?, ಅಥವಾ ಜೆಡಿಎಸ್ ಗೆ ಅಲರ್ಜಿಯಾದ್ರ ಶಾಂತಕುಮಾರ್ ಅನೋ ಅನುಮಾನ ಮೊಳಕೆಯೊಡೆಯ ತೊಡಗಿದೆ. ಕೆಲ ಜೆಡಿಎಸ್ ನಾಯಕರಂತು, ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ, ಎಲ್ಲಾ ಸಾರ್ವಜನಿಕರ ಅನುಮಾನಗಳಿಗೆ ಶಾಂತಕುಮಾರ್ ಮುಂದಿನ ದಿನಗಳಲ್ಲಿ ಯಾವ ದಾರಿಯಲ್ಲಿ ಉತ್ತರ ನೀಡ್ತಾರೆ ಕಾದುನೋಡಬೇಕಿದೆ….!
ತಿಪಟೂರು ತಾಲ್ಲೋಕಿ ಕಸಬಾ ಹೋಬಳಿ ಬೆನ್ನಾಯಕನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕೆ.ಆರ್ ಮೋಹನ್ ಹಾಗೂ ಉಪಾಧ್ಯಕ್ಷರಾಗಿ ಗುರುಸ್ವಾಮಿ ಈಡೇನಹಳ್ಳಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ತುಮಕೂರು ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ನಿಖಿಲ್ ರಾಜಣ್ಣ ನೂತನ ಅಧ್ಯಕ್ಷರು ಉಪಾಧ್ಯಕ್ಷರನ್ನ ಅಭಿನಂದನೆ ಸಲ್ಲಿಸಲಾಯಿತು
ಕಾರ್ಯಕ್ರಮದಲ್ಲಿ ಹುಚ್ಚಗೊಂಡನಹಳ್ಳಿ ಗ್ರಾಮಪಂಚಾಯ್ತಿ ಅಧ್ಯಕ್ಷ ಬಿ.ಬಿ ಬಸವರಾಜು,ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಾದ ಉಮಾಶಂಕರ್ ಮುಖಂಡರಾದ ಎಂ.ಸಿ ಮಂಜುನಾಥ್ ನೂತನ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ನಿರ್ದೇಶಕರನ್ನ ಅಭಿನಂದಿಸಿದರು
ವರದಿ :ಮಂಜುನಾಥ್ ಹಾಲ್ಕುರಿಕೆರೆ