Month: February 2025

ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಸಂಘ ನಡೆಸುತ್ತಿರುವ ಅನಿರ್ಧಿಷ್ಠಾವಧಿ ಮುಷ್ಕರ 3ನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಕಂದಾಯ ಇಲಾಖೆ ನೌಕರರ ಸಂಘ ಬೇಷರತ್ ಬೆಂಬಲ ಸೂಚಿಸಿದೆ

,ಪ್ರತಿಭಟನಾ ಸ್ಥಳಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶ್, ಮಾತನಾಡಿ ಆಡಳಿತಾಧಿಕಾರಿಗಳ ನ್ಯಾಯಯುತ ಬೇಡಿಕೆಗಳನ್ನ ಸರ್ಕಾರ ಈಡೇರಿಸಬೇಕು, ಗ್ರಾಮ ಆಡಳಿತಾಧಿಕಾರಿಗಳ ಹೋರಾಟಕ್ಕೆ ಸರ್ಕಾರಿ ನೌಕರರ ಸಂಘ ಬೆಂಬಲ ನೀಡುತ್ತಿದೆ ಎಂದು ತಿಳಿಸಿದರು,ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ರವಿಕುಮಾರ್
ಗ್ರಾಮಾಡಳಿತಾಧಿಕಾರಿಗಳ ಸಂಘದ ಹೋರಾಟಕ್ಕೆ ಕಂದಾಯ ಇಲಾಖೆ ನೌಕರರ ಸಂಘ ಬಾಹ್ಯ ಬೆಂಬಲ ನೀಡುತ್ತಿದೆ,ಸರ್ಕಾರ ಗ್ರಾಮ ಆಡಳಿತಾಧಿಕಾರಿಗಳ ನ್ಯಾಯಯುತ ಬೇಡಿಕೆ ಪೂರೈಕೆ ಮಾಡಲು ಕ್ರಮಕೈಗೊಳ್ಳಬೇಕು,ಎಂದು ತಿಳಿಸಿದರು.


ತಿಪಟೂರು ತಾಲ್ಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ರವಿ ಕುಮಾರ್ ಮಾತನಾಡಿ ಗ್ರಾಮ ಆಡಳಿತಾಧಿಕಾರಿಗಳ ಸಂಘದಿಂದ ರಾಜ್ಯದಾದ್ಯಂತ ಅನಿರ್ಧಿಷ್ಠಾವಧಿ ಮುಷ್ಕರ ನಡೆಸಲಾಗುತ್ತಿದ್ದು, ಸೇವಾ ಭದ್ರತೆ, ಹಾಗೂ ಹೆಚ್ಚುವರಿ ಕೆಲಸಗಳಿಂದ ವಿಮುಕ್ತಿ,ಗ್ರಾಮಾಡಳಿತಾಧಿಕಾರಿಗಳ ಜಾಬ್ ಚಾಟ್ ನಿಗದಿ. ಹಾಗೂ ನೆನೆಗುದಿಗೆ ಬಿದ್ದಿರುವ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಸೇವಾ ಬಡ್ತಿ ನೀಡಬೇಕು,ಗ್ರಾಮೀಣ ಪ್ರದೇಶದಲ್ಲಿ ಸರ್ವರ್ ಸಮಸ್ಯೆಯಿಂದ ನಿಗಧಿತ ಸಮಯದಲ್ಲಿ ಕೆಲಸ ನಿರ್ವಹಿಸಲು ಸಮಸ್ಯೆ ಉಂಟಾಗಿದ್ದು, ಸಮಸ್ಯೆಗೆ ಸೂಕ್ತ ಪರಿಹಾರ ನೀಡಬೇಕು, ಅನುಕಂಪದ ನೇಮಕಾತಿಯಲ್ಲಿ ಪ್ರಥಮದರ್ಜೆ ಸಹಾಯಕರ ನೇಮಕಾತಿಗೆ ಎಸ್ಎಸ್ ಎಲ್ ಸಿ ಹಾಗೂ ಪಿಯುಸಿ ಪರಿಗಣಿಸಬೇಕು. ಪ್ರಯಾಣಭತ್ಯೆ ಮಾಡಬೇಕು. ಮಾತೃ ಇಲಾಖೆಗೆ ಕೆಲಸಗಳ ಜೊತೆ ಬೆಳೆಸಮೀಕ್ಷೆ ಹಾಗೂ ಪೊಲೀಸ್ ಇಲಾಖೆ ನೀಡುವ ಮಹಜರ್ ಜವಾಬ್ದಾರಿಯನ್ನು ನಿಬಾಯಿಸಬೇಕು.ಇತ್ತಿಚಿನ ದಿನಗಳಲ್ಲಿ ಕಂದಾಯ ಇಲಾಖೆಯ ಬಹುತೇಕ ಜವಾಬ್ದಾರಿ ಗ್ರಾಮಾಡಳಿತಾಧಿಕಾರಿಗಳ ಮೇಲೆ ಇದ್ದು, ಕಾರ್ಯಬಾರದ ಒತ್ತಡ ಹೆಚ್ಚಾಗುತ್ತಿದೆ‌.ಗ್ರಾಮೀಣ ಪ್ರದೇಶದಲ್ಲಿ ಕೆಲಸಮಾಡುವ ಗ್ರಾಮ ಆಡಳಿತಾಧಿಕಾರಿಗಳು ಇತ್ತಿಚಿನ ದಿನಗಳಲ್ಲಿ ಸರ್ವರ್ ಸಮಸ್ಯೆ ಹಾಗೂ ನೆಟ್ವರ್ಕ್ ಸಮಸ್ಯೆ ಕಾರಣಕ್ಕೆ ಸೂಕ್ತ ಸಮಯದಲ್ಲಿ ಕೆಲಸ ಮಾಡಲು ಸಾಧ್ಯವಾಗದೇ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿ, ಶಿಕ್ಷೆ ಅನುಭವಿಸುವ ಸಂದರ್ಭಗಳೆ ಹೆಚ್ಚಾಗಿವೆ, ನಮಗೆ ಸೂಕ್ತವಾಗಿ ತಾಂತ್ರಿಕ ಉಪಕರಣಗಳನ್ನ ಒದಗಿಸಬೇಕು. ಹಾಗೂ ನಿರ್ಧಿಷ್ಟ ಜಾಬ್ ಚಾಟ್ ನೀಡಬೇಕು,ಕಾರ್ಯಬಾರದ ಒತ್ತಡದ ಕಾರಣಕ್ಕೆ ಅನೇಕ ನೌಕರರು ಮಾನಸಿಕ ಕಿನ್ನತೆ ಹಾಗೂ ಅನಾರೋಗ್ಯಕ್ಕೆ ಒಳಗಾಗುತ್ತದ್ದು, ಸರ್ಕಾರ ಹೆಚ್ಚುವರಿ ಆರೋಗ್ಯ ಸೌಲಭ್ಯ ನೀಡಬೇಕು.ನಮಗೆ ಸೇವಾ ಭದ್ರತೆ ಜೊತೆಗೆ ಆಕಸ್ಮಿಕ ಅವಗಡಗಳಲ್ಲಿ ಸಾವು ಸಂಭವಿಸಿದರೆ ಹೆಚ್ವಿನ ಪರಿಹಾರ ನೀಡಬೇಕು. ಪ್ರಯಾಣ ಭತ್ಯೆ ಹಾಗೂ ವರ್ಗಾವಣೆಗೆ ಸೂಕ್ತ ಕಾನೂನು ರೂಪಿಸಿ ವರ್ಗಾವಣೆಗೆ ಚಾಲನೆ ನೀಡಬೇಕು ಎನ್ನುವುದು ಸೇರಿದಂತೆ ಹಲವಾರು ಬೇಡಿಕೆಗಳಿಗೆ ಒತ್ತಾಯಿಸಿ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದು ಸರ್ಕಾರ ನಮ್ಮ ಮನವಿಗೆ ಯಾವುದೇ ನ್ಯಾಯ ದೊರಕಿಸಿರುವುದಿಲ್ಲ,ನಮ್ಮ ನ್ಯಾಯಯುತ ಬೇಡಿಕೆ ಈಡೇರುವವರೆಗೆ ಅನಿರ್ಧಿಷ್ಠಾವಧಿ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಸರ್ಕಾರ ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ತಿಳಿಸಿದರು
ಪ್ರತಿಭಟನೆಯಲ್ಲಿ ಕಂದಾಯ ಇಲಾಖೆ ನೌಕರರ ಸಂಘದ ಖಜಾಂಚಿ ಅಶೋಕ್ ಕೆ.ಎಂ, ಗ್ರಾಮ ಆಡಳಿತಾಧಿಕಾರಿಗಳ ಸಂಘದ ಮುಖಂಡರಾದ ದೀಪಕ್ ಬೂದಾಳ್. ಶಿವರಾಮ್.ಶ್ರೀಹರ್ಷ,ರವಿಶಂಕರ್.ಭವ್ಯ.ರಾಜು.ಮುಂತ್ತಾದವರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ತಾಲ್ಲೂಕಿನ ಕಸಬಾಹೋಬಳಿ ಮತ್ತಿಹಳ್ಳಿ ಮುಖತೊಳೆಯಲು ಹೋದ ಯುವಕ ಕಾಲು ಜಾರಿಬಿದ್ದು ಯುವಕ ನೀರುಪಾಲಾಗಿರುವ ಘಟನೆ ನಡೆದಿದೆ, ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದ ದಯಾನಂದ್ 19 ವರ್ಷ ಮೃತ ದುರ್ದೈವಿ
ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಹೊನ್ನವಳ್ಳಿ ಪೊಲೀದರು ಭೇಟಿನೀಡಿದ್ದು
ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ

ತುರುವೇಕೆರೆ ತಾಲ್ಲೂಕಿನ ಬಗರ್ ಹುಕ್ಕು ಸಾಗುವಳಿ ಚೀಟಿ ನೀಡುವಲ್ಲಿ ಅಕ್ರಮವಾಗಿದೆ,ಬಡವರಿಗೆ ಸಿಗಬೇಕಾದ ಭೂಮಿ ಬೆಂಗಳೂರಿನ ಶ್ರೀಮಂತರ ಪಾಲಾಗಿದ್ದು ಸರ್ಕಾರ ಸೂಕ್ತ ತನಿಖೆ ನಡೆಸಿ ಉಳ್ಳವರಿಗೆ ಮುಂಜೂರಾಗಿರುವ ಭೂಮಿ ವಾಪಾಸ್ ಪಡೆದು ಅರ್ಹಫಲಾನುಭವಿಗಳಿಗೆ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.


ತುರುವೇಕೆರೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಕರ್ಮಕಾಂಡ ಬಯಲಿಗೆಳೆದ ಶಾಸಕ ಎಂ.ಟಿ ಕೃಷ್ಣಪ್ಪ,ತುರುವೇಕೆರೆ ಕ್ಷೇತ್ರದ ವ್ಯಾಪ್ತಿಯಲ್ಲೇ ಸಾವಿರಾರು ಎಕರೆ ಜಮೀನು ಮಂಜೂರಾತಿಯಲ್ಲಿ ಅವ್ಯವಹಾರ ಆಗಿದೆ.ಒಂದು ಎಕರೆಗೆ 5 ಲಕ್ಷ ರೂ.ನಂತೆ ಲಂಚ ಪಡೆದು ಜಮೀನು ಮಂಜೂರು ಮಾಡಿದ್ದಾರೆ.ಸಾವಿರಾರು ಎಕರೆ ಮಂಜೂರಾತಿ ಜಮೀನು ಅವ್ಯವಹಾರ ನಡೆದಿದ್ದು, ಮೇಲ್ನೋಟಕ್ಕೆ 50 ಕೋಟಿ ಅಂತಾ ಗೊತ್ತಾಗಿದೆ.ಸುಮಾರು 350-400 ಎಕರೆ ಜಮೀನನ್ನ ಕಂದಾಯ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಮಂಜೂರು ಮಾಡಿದ್ದಾರೆ.ತಹಶೀಲ್ದಾರ್‌ರಿಂದ ಗ್ರಾಮ ಸಹಾಯಕರವರೆಗೂ ಈ ಅವ್ಯವಹಾರದಲ್ಲಿ ಭಾಗ ಆಗಿದ್ದಾರೆ.
ಈಗಾಗಲೇ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇನೆ. ಇನ್ನೂ, ಕ್ರಮ ಆಗಿಲ್ಲ.
ಈ ಬಗ್ಗೆ ಲೋಕಾಯುಕ್ತಗೆ ದೂರು ನೀಡ್ತೇನೆ. ಸಮಗ್ರ ತನಿಖೆ ಆಗಬೇಕು ಅಂತಾ ಒತ್ತಾಯಿಸುತ್ತೇನೆ ಎಂದು ಎಂ.ಟಿ ಕೃಷ್ಣಪ್ಪ.ತಿಳಿಸಿದರು

ವರದಿ : ಸಂಪಿಗೆ ಮೂರ್ತಿ ತುರುವೇಕೆರೆ

ಕರ್ನಾಟಕ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಕೇಂದ್ರ ಸಂಘದ ಸೂಚನೆ ಮೇರೆಗೆ ರಾಜ್ಯದಾದ್ಯಂತ ಅನಿರ್ಧಿಷ್ಠಾವಧಿ ಮುಷ್ಕರ ನಡೆಯುತ್ತಿದ್ದು, ಹೋರಾಟ ಬೆಂಬಲಿಸಿ ತಿಪಟೂರು ತಾಲ್ಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘದಂದ ಮುಷ್ಕರ ನಡೆಸಲಾಗುತ್ತಿದ್ದು, ಸೇವಾ ಭದ್ರತೆ, ಹಾಗೂ ಹೆಚ್ಚುವರಿ ಕೆಲಸಗಳಿಂದ ವಿಮುಕ್ತಿ,ಗ್ರಾಮಾಡಳಿತಾಧಿಕಾರಿಗಳ ಜಾಬ್ ಚಾಟ್ ನಿಗದಿ. ಹಾಗೂ ನೆನೆಗುದಿಗೆ ಬಿದ್ದಿರುವ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಬೇಕು.ಗ್ರಾಮೀಣ ಪ್ರದೇಶದಲ್ಲಿ ಸರ್ವರ್ ಸಮಸ್ಯೆಯಿಂದ ನಿಗಧಿತ ಸಮಯದಲ್ಲಿ ಕೆಲಸ ನಿರ್ವಹಿಸಲು ಸಮಸ್ಯೆ ಉಂಟಾಗಿದ್ದು, ಸಮಸ್ಯೆಗೆ ಸೂಕ್ತ ಪರಿಹಾರ ನೀಡಬೇಕು, ಅನುಕಂಪದ ನೇಮಕಾತಿಯಲ್ಲಿ ಪ್ರಥಮದರ್ಜೆ ಸಹಾಯಕರ ನೇಮಕಾತಿಗೆ ಎಸ್ಎಸ್ ಎಲ್ ಸಿ ಹಾಗೂ ಪಿಯುಸಿ ಪರಿಗಣಿಸಬೇಕು. ಪ್ರಯಾಣಭತ್ಯೆ ಹೆಚ್ಚಳ ಮಾಡಬೇಕು. ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಎರಡು ದಿನಗಳಿಂದ ಅನಿರ್ಧಿಷ್ಠಾವಧಿ ಮುಷ್ಕರ ನಡೆಸಲಾಗುತ್ತಿದೆ.


ತಿಪಟೂರು ತಾಲ್ಲೂಕು ಗ್ರಾಮಾಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ರವಿಕುಮಾರ್ ಮಾತನಾಡಿ ಗ್ರಾಮ ಆಡಳಿತಾಧಿಕಾರಿಗಳು ಮಾತೃ ಇಲಾಖೆಗೆ ಕೆಲಸಗಳ ಜೊತೆ ಬೆಳೆಸಮೀಕ್ಷೆ ಹಾಗೂ ಪೊಲೀಸ್ ಇಲಾಖೆ ನೀಡುವ ಮಹಜರ್ ಜವಾಬ್ದಾರಿಯನ್ನು ನಿಬಾಯಿಸಬೇಕು.ಇತ್ತಿಚಿನ ದಿನಗಳಲ್ಲಿ ಕಂದಾಯ ಇಲಾಖೆಯ ಬಹುತೇಕ ಜವಾಬ್ದಾರಿ ಗ್ರಾಮಾಡಳಿತಾಧಿಕಾರಿಗಳ ಮೇಲೆ ಇದ್ದು, ಕಾರ್ಯಬಾರದ ಒತ್ತಡ ಹೆಚ್ಚಾಗುತ್ತಿದೆ‌.ಗ್ರಾಮೀಣ ಪ್ರದೇಶದಲ್ಲಿ ಕೆಲಸಮಾಡುವ ಗ್ರಾಮ ಆಡಳಿತಾಧಿಕಾರಿಗಳು ಇತ್ತಿಚಿನ ದಿನಗಳಲ್ಲಿ ಸರ್ವರ್ ಸಮಸ್ಯೆ ಹಾಗೂ ನೆಟ್ವರ್ಕ್ ಸಮಸ್ಯೆ ಕಾರಣಕ್ಕೆ ಸೂಕ್ತ ಸಮಯದಲ್ಲಿ ಕೆಲಸ ಮಾಡಲು ಸಾಧ್ಯವಾಗದೇ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿ, ಶಿಕ್ಷೆ ಅನುಭವಿಸುವ ಸಂದರ್ಭಗಳೆ ಹೆಚ್ಚಾಗಿವೆ, ನಮಗೆ ಸೂಕ್ತವಾಗಿ ತಾಂತ್ರಿಕ ಉಪಕರಣಗಳನ್ನ ಒದಗಿಸಬೇಕು. ಹಾಗೂ ನಿರ್ಧಿಷ್ಟ ಜಾಬ್ ಚಾಟ್ ನೀಡಬೇಕು,ಕಾರ್ಯಬಾರದ ಒತ್ತಡದ ಕಾರಣಕ್ಕೆ ಅನೇಕ ನೌಕರರು ಮಾನಸಿಕ ಕಿನ್ನತೆ ಹಾಗೂ ಅನಾರೋಗ್ಯಕ್ಕೆ ಒಳಗಾಗುತ್ತದ್ದು, ಸರ್ಕಾರ ಹೆಚ್ಚುವರಿ ಆರೋಗ್ಯ ಸೌಲಭ್ಯ ನೀಡಬೇಕು.ನಮಗೆ ಸೇವಾ ಭದ್ರತೆ ಜೊತೆಗೆ ಆಕಸ್ಮಿಕ ಅವಗಡಗಳಲ್ಲಿ ಸಾವು ಸಂಭವಿಸಿದರೆ ಹೆಚ್ವಿನ ಪರಿಹಾರ ನೀಡಬೇಕು. ಪ್ರಯಾಣ ಭತ್ಯೆ ಹಾಗೂ ವರ್ಗಾವಣೆಗೆ ಸೂಕ್ತ ಕಾನೂನು ರೂಪಿಸಿ ವರ್ಗಾವಣೆಗೆ ಚಾಲನೆ ನೀಡಬೇಕು ಎನ್ನುವುದು ಸೇರಿದಂತೆ ಹಲವಾರು ಬೇಡಿಕೆಗಳಿಗೆ ಒತ್ತಾಯಿಸಿ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದು ಸರ್ಕಾರ ನಮ್ಮ ಮನವಿಗೆ ಯಾವುದೇ ನ್ಯಾಯ ದೊರಕಿಸಿರುವುದಿಲ್ಲ,ನಮ್ಮ ನ್ಯಾಯಯುತ ಬೇಡಿಕೆ ಈಡೇರುವವರೆಗೆ ಅನಿರ್ಧಿಷ್ಠಾವಧಿ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಸರ್ಕಾರ ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ತಿಳಿಸಿದರು
ಪ್ರತಿಭಟನೆಯಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಮುಖಂಡರಾದ ದೀಪಕ್ ಬೂದಾಳ್. ಶಿವರಾಮ್.ಶ್ರೀಹರ್ಷ,ರವಿಶಂಕರ್.ಭವ್ಯ.ರಾಜು.ಮುಂತ್ತಾದವರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

ಫೆಬ್ರವರಿ 13 ರಿಂದ 16 ವರೆಗೆ ತಿಪಟೂರು ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಸ್ಪಂದನಾ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಿಂದ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಪುರುಷರು ಹಾಗೂ ಮಹಿಳೆಯರ ಕ್ರೀಡಾಕೂಟ ನಡೆಯಲಿದೆ.3 ದಿನಗಳ ಕಾಲ ಕ್ರೀಡಾಕೂಟ ಕ್ರೀಡಾಭಿಮಾನಿಗಳಿಗೆ ರಸದೌತಣ ನೀಡಲಿದ್ದು,ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಟಿತ ವಾಲಿಬಾಲ್ ಆಟಗಾರರು ಹಾಗೂ ತಂಡಗಳು ಭಾಗವಹಿಸಲಿವೆ,ಕ್ರೀಡಾಕೂಟಕ್ಕೆ ಕಲ್ಪತರು ಕ್ರೀಡಾಗಣ ಸಕಲ ರೀತಿ ಸಜ್ಜಾಗುತ್ತಿದೆ.

ತಿಪಟೂರಿನ ಕಲ್ಪತರು ಕ್ರೀಡಾಗಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಸ್ಪಂದನಾ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಸದಸ್ಯ ನವೀನ್ ಮಾತನಾಡಿ ತಿಪಟೂರು ಕಲ್ಪತರು ಕ್ರೀಡಾಂಗಣದಲ್ಲಿ ಫೆಬ್ರವರಿ 13ರಿಂದ 16 ರ ವರೆಗೆ ನಡೆಯಲಿದ್ದು,13 ರಂದು ಸಂಜೆ ತಿಪಟೂರು ನಗರದ ಕ್ರೀಡಾಂಗಣದಲ್ಲಿ ಶಾಸಕ ಕೆ.ಷಡಕ್ಷರಿ ಕ್ರೀಡಾಕೂಟ ಉದ್ಘಾಟನೆ ನೆರವೇರಿಸಲಿದ್ದು.ಮಾಜಿ ಸಚಿವ ಜೆ.ಸಿ ಮಾಧುಸ್ವಾಮಿ ಕ್ರೀಡಾಜ್ಯೋತಿ ಸ್ವೀಕರಿಸಲಿದ್ದಾರೆ.ಫೆಬ್ರವರಿ 14ರಂದು ಕ್ರೀಡಾ ಸಾಧಕರಿಗೆ ಸನ್ಮಾನ 15ರಂದು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಾಲಿಬಾಲ್ ಕ್ರೀಡಾಪಟುಗಳಿಗೆ ಸನ್ಮಾನ ಸಮಾರಂಭ 16 ರಂದು ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಸಮಾರಂಭ ನಡೆಸಲಿದ್ದು, ಕಾರ್ಯಕ್ರಮಕ್ಕೆ ಮಾಜಿ ಸಚಿವ ಬಿ.ಸಿ ನಾಗೇಶ್ ಮಾಜಿ ಶಾಸಕ ಬಿ ನಂಜಾಮರಿ,ಕೆಪಿಸಿಸಿ ಸದಸ್ಯ ವಿ.ಯೋಗೇಶ್.ಎಸಿಪಿ ಹೇಮಂತ್ ನಿಂಬಾಳ್ಕರ್ ಐಪಿಎಸ್,ಚೇತನ್ ಐಪಿಎಸ್ ಸೇರಿದಂತೆ ಅನೇಕ ಗಣ್ಯರು ರಾಜಕೀಯ ನಾಯಕರು.ಕ್ರೀಡಾಪಟುಗಳು,ಭಾಗವಹಿಸುತ್ತಿದ್ದು ಕ್ರೀಡಾಭಿಮಾನಿಗಳಿಗೆ ಕ್ರೀಡೆಯ ರಸದೌತಣ ನೀಡಲಿದೆ.ರಾಷ್ಟ್ರೀಯ ಅಂತರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟುಗಳು ಭಾಗವಹಿಸುವ ಈ ಕ್ರೀಡಾಕೂಟಕ್ಕೆ ವಿದ್ಯಾರ್ಥಿಗಳು,ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಕೂಟ ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದರು
ಪತ್ರಿಕಾ ಘೋಷ್ಠಿಯಲ್ಲಿ ಮುಖಂಡರಾದ ನಿಜಗುಣ, ಮಾದಿಹಳ್ಳಿ ರೇಣು.ಫಲ್ಲಾಗಟ್ಟಿ ವಿಜಯ್ ಕುಮಾರ್.ಸಿದ್ದರಾಮಣ್ಣ.ಸಂಗಮೇಶ್ ಕಳ್ಳಿಹಾಳ್.ತೋಂಟಾರಾಧ್ಯ.ಒಇಹಿಲಾ ಗಂಗಾಧರ್.ಹೇಂಮತ್ .ದೈಹಿಕ ನಿರ್ದೇಶಕರಾದ ನಂಜೆಗೌಡ.ಅಪ್ಪೆಗೌಡ,ಮುಂತ್ತಾದವರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಪ್ರಸಿದ್ದ ಕ್ಷೇತ್ರ ಗಂಗನಘಟ್ಟ ಬಾರೇ ಮೇಲೆ ನೆಲೆದಿರುವ ಶ್ರೀ ರಂಗನಾಥಸ್ವಾಮಿ ಪುರಾತನ ಇತಹಾಸ ಹೊಂದಿರುವ ಕ್ಷೇತ್ರವಾಗಿದ್ದು,ಸಾವಿರಾರು ವರ್ಷಗಳ ಹಿಂದೆ ನೆಲೆನಿಂತಿರುವ ಶ್ರೀರಂಗನಾಥ ಸ್ವಾಮಿಯನ್ನ ಗಂಗನಘಟ್ಟ ಗ್ರಾಮಸ್ಥರು ಶ್ರೀ ಮೂಲಸ್ಥಾನದ ಶ್ರೀರಂಗನಾಥಸ್ವಾಮಿ ಹಾಗೂ ಶ್ರೀರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನ ಪೂಜಿಸುತ್ತಾ ಬಂದಿದ್ದು,ಗಂಗನಘಟ್ಟ ಸಾಸಲಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಒಕ್ಕಲುಗಳು,ಬಯಸಿದ್ದಾಗ ಅವರ ಮನೆ ಪೂಜೆ ಪುನಸ್ಕಾರಗಳಿಗೆ ಕಳಿಸುವ ವಾಡಿಕೆ, ಅನುಚಾನವಾಗಿ ನಡೆದುಕೊಂಡು ಬಂದಿದೆ, ಸಾಸಲಹಳ್ಳಿ ಗ್ರಾಮದ ಶ್ರೀವೈಷ್ಣವ ಜನಾಂಗದ ಅರ್ಚಕರು ಪೂಜಾಕೈಂಕರ್ಯ ನಡೆಸುತ್ತಾ ಬಂದಿದ್ದಾರೆ. ಆದರೆ ಸಾಸಲಹಳ್ಳಿ ಗ್ರಾಮದ ಅರ್ಚಕರು ಅನಾಗತ್ಯ ಗಲಾಟೆ ಮಾಡಿ, ಗಂಗನಘಟ್ಟ ಗ್ರಾಮದ ರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನ ಸಾಸಲಹಳ್ಳಿ ಗ್ರಾಮದ ದೇವರು ಎಂಬುದಾಗಿ ಬಿಂಬಿಸಿ ದೂರು ನೀಡಿದ್ದು. ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳು ಎರಡು ಗ್ರಾಮಗಳ ಸಭೆ ನಡೆಸಿ,ಯಥಾಸ್ಥಿತಿ ಕಾಪಾಡಿಕೊಂಡು ಸಾಸಲಹಳ್ಳಿ ಗ್ರಾಮಕ್ಕೆ ತದ್ರೂಪಿ ವಿಗ್ರಹಮಾಡಿಸಿಕೊಡುವುದು,ಮೂಲವಿಗ್ರಹವನ್ನ ಗಂಗನಘಟ್ಟ ಗ್ರಾಮಸ್ಥರು ಪೂಜಿಸಿಕೊಂಡುಹೋಗುವುದು ಎಂದು,ತಿಳಿಸಿದ್ದರು,ಆದರೇ ಜಿಲ್ಲಾಧಿಕಾರಿಗಳು ಯಾವುದೇ ಸಹಜನ್ಯಾಯ ಪರಿಶೀಲನೆ ಮಾಡದೆ,ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳ ಸಭೆಯ ನಿರ್ಣಯಗಳನ್ನ ಪರಿಶೀಲನೆ ಮಾಡದೆ, ಶ್ರೀರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನ ಮೂಲಸ್ಥಾನದಿಂದ ಸಾಸಲಹಳ್ಳಿ ಗ್ರಾಮಕ್ಕೆ ನೀಡಲು ಆದೇಶ ನೀಡಿರುವುದು,ಹಲವಾರು ಅನುಮಾನ ಹಾಗೂ ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದ್ದು,ಜಿಲ್ಲಾಧಿಕಾರಿಗಳು ತಮ್ಮ ಆದೇಶ ಪುನರ್ ಪರಿಶೀಲನೆ ಮಾಡಬೇಕು ಎಂದು ಗ್ರಾಮಸ್ಥರ ಒತ್ತಾಯವಾಗಿದೆ.


ತಿಪಟೂರು ನಗರದ ಕೌಸ್ತುಭ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ ಪತ್ರಿಕಾ ಘೋಷ್ಠಿಯಲ್ಲಿ ಡಾ// ಜಿ.ಬಿ ವಿವೇಚನ್ ಮಾತನಾಡಿ ಶ್ರೀರಂಗನಾಥಸ್ವಾಮಿ ಸಾವಿರಾರು ವರ್ಷಗಳಿಂದ ಗಂಗನಘಟ್ಟ ಗ್ರಾಮದ ಜನ ಪೂಜಿಸುತ್ತಾ ಬಂದಿದ್ದಾರೆ,ಗಂಗನಘಟ್ಟ ಗ್ರಾಮದಲ್ಲಿ ಶ್ರೀ ವೈಷ್ಣವ ಅರ್ಚಕರು ಇಲ್ಲದ ಕಾರಣ,ಸಾಸಲಹಳ್ಳಿ ಗ್ರಾಮದ ಅರ್ಚಕರು ಪೂಜೆನಡೆಸುತ್ತಾ ಬಂದಿದ್ದಾರೆ, ಆದರೆ ಅರ್ಚಕರು ಅನಾಗತ್ಯ ವಿವಾದ ಸೃಷ್ಠಿಮಾಡಿ ಶ್ರೀ ರಂಗನಾಥಸ್ವಾಮಿ ಉತ್ಸವ ಮೂರ್ತಿ ಸಾಸಲಹಳ್ಳಿಗ್ರಾಮಕ್ಕೆ ಸೇರಿದೆ ಎಂಬುದಾಗಿ ದೂರು ನೀಡಿದ್ದಾರೆ, ದೂರಿನ ಪೂರ್ವಾಪರ ವಿಚಾರಿಸದೆ, ಜಿಲ್ಲಾಧಿಕಾರಿಗಳು ಸಹಜ ನ್ಯಾಯಬದಿಗೊತ್ತಿ ಉತ್ಸವ ಮೂರ್ತಿ ಸಾಸಲಹಳ್ಳಿಗೆ ಸೇರಿದೆ,ಎಂದು ಆದೇಶ ನೀಡಿದ್ದಾರೆ,ನಮ್ಮ ಹಿಂದೂ ಪರಂಪರೆಯಲ್ಲಿ ಮೂಲವಿಗ್ರಹ ಹಾಗೂ ಉತ್ಸವಮೂರ್ತಿಗಳು ಒಂದೆಡೆ ಇರುತ್ತವೆ ಆದರೆ ಗಂಗನಘಟ್ಟದಲ್ಲಿ ಇರುವಂತಹ ವಿಗ್ರಹವನ್ನ ಸಾಸಲಹಳ್ಳಿ ಗ್ರಾಮಕ್ಕೆ ಸೇರಿದೆ ಎಂಬುದಾಗಿ ಜಿಲ್ಲಾಧಿಕಾರಿಗಳ ಆದೇಶ ಆತಂಕ ಉಂಟುಮಾಡಿದೆ, ಗಂಗನಘಟ್ಟ ಹಾಗೂ ಸಾಸಲಹಳ್ಳಿ ಗ್ರಾಮಸ್ಥರು ಅನ್ಯೂನ್ಯವಾಗಿದೇವೆ, ಈ ಘಟನೆಯಿಂದ ಎರಡು ಗ್ರಾಮಗಳ ನಡುವೆ ವೈಷಮ್ಯ ಉಂಟಾಗುವುದು ಬೇಡ,ಆದರಿಂದ ಜಿಲ್ಲಾಧಿಕಾರಿಗಳು ತಮ್ಮ ಆದೇಶ ಪುನರ್ ಪರಿಶೀಲನೆ ಮಾಡಿ ಸಾವಿರಾರು ವರ್ಷಗಳಿಂದ ಗಂಗನಘಟ್ಟ ಗ್ರಾಮಸ್ಥರು ಸಾವಿರು ವರ್ಷಗಳಿಂದ ಪೂಜಿಸುತ್ತಾ ಬಂದಿರುವ ಶ್ರೀ ರಂಗನಾಥಸ್ವಾಮಿ ಉತ್ಸವ ಮೂರ್ತಿ ಗಂಗನಘಟ್ಟ ಗ್ರಾಮದಲ್ಲೇ ಉಳಿಯುವಂತೆ ಮಾಡಬೇಕು ಎಂದು ತಿಳಿಸಿದರು


ಗ್ರಾಮದ ಮುಖಂಡ ಗೋವಿಂದಸ್ವಾಮಿ ಮಾತನಾಡಿ ಗಂಗನಘಟ್ಟ ಶ್ರೀರಂಗನಾಥಸ್ವಾಮಿ ನಮ್ಮ ಒಕ್ಕಲು ದೈವ,ಸಾವಿರಾರು ಕುಟುಂಬಗಳು ಪೂಜಿಸುತ್ತಾಬಂದಿದ್ದು ನಮ್ಮ ಜೀವಕೊಟ್ಟಾದರೂ ಶ್ರೀ ರಂಗನಾಥಸ್ವಾಮಿ ಉತ್ಸವಮೂರ್ತಿ ತೆಗೆದುಕೊಂಡುಹೋಗಲು ಬಿಡುವುದಿಲ್ಲ,ಜಿಲ್ಲಾಧಿಕಾರಿಗಳು ಸಾವಿರಾರು ವರ್ಷಗಳಿಂದ ನಡೆದುಕೊಂಡ ಸಂಪ್ರದಾಯ ಹಾಗೂ ತಹಸೀಲ್ದಾರ್, ಉಪವಿಭಾಗಾಧಿಕಾರಿಗಳ ನಡೆಸಿದ ಎರಡು ಗ್ರಾಮಗಳ ಸೌಹಾರ್ದ ಸಭೆ ನಡೆವಳಿ ಪರಿಶೀಲಿಸ ಬೇಕು.ಈ ಹಿಂದೆ ಸಾಸಲಹಳ್ಳಿ ಗ್ರಾಮಸ್ಥರು ತದ್ರಪಿ ಉತ್ಸವ ಮೂರ್ತಿ ಮಾಡಿಸಿಕೊಡಲು ಒಪ್ಪಿರುತ್ತಾರೆ,ಜಿಲ್ಲಾಧಿಕಾರಿಗಳು ಕೂಡಲೇ ಸ್ಥಳಪರಿಶೀಲನೆ ಮಾಡಿ,ಶ್ರೀರಂಗನಾಥಸ್ವಾಮಿ ಉತ್ಸವಮೂರ್ತಿ ಗಂಗನಘಟ್ಟ ಗ್ರಾಮದಲ್ಲೇ ಉಳಿಯುವಂತ್ತೆ ಮಾಡಬೇಕು,ಈ ಬಗ್ಗೆ ಸರ್ಕಾರ ಹಾಗೂ ತಹಸೀಲ್ದಾರ್ ಗೂ ಮನವಿ ಸಲ್ಲಿಸಿದ್ದು ಹೈಕೋರ್ಟ್ ಮೊರೆಹೋಗಲಾಗಿದೆ,ಆದರೂಜನರ ಭಾವನೆಗಳಿಗೆ ವಿರುದ್ದವಾಗಿ ಉತ್ಸವ ಮೂರ್ತಿ ತೆಗೆದುಕೊಂಡು ಹೋಗಲು ಬಂದರೆ ನಮ್ಮ ಪ್ರಾಣವನ್ನಕೊಟ್ಟರು ದೇವರನ್ನತೆಗೆದುಕೊಂಡುಹೋಗಲು ಬಿಡುವುದಿಲ್ಲ,ಎಂದು ತಿಳಿಸಿದರು.
ಪತ್ರಿಕಾಘೋಷ್ಠಿಯಲ್ಲಿ ಶ್ರೀರಂಗನಾಥಸ್ವಾಮಿ ದೇವಾಲಯ ಧರ್ಮದರ್ಶಿ ರಂಗಸ್ವಾಮಿ.ನಂಜಪ್ಪ.ಗೋವಿಂದರಾಜು.ಹೇಮಾಚಲ.ರಂಜಿತ್.ರಾಜು.ಹೇಮಂತ್ ಮುಂತ್ತಾದವರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ನಗರದ ಶಂಕರಪ್ಪ ಲೇಹೌಟ್ ನಲ್ಲಿ ದಿನಾಂಕ 28.01.2025 ರಂದು ಶ್ರೀಮತಿ ಅನಸೂಯ ರಾಜ್ ರವರು ತಿಪಟೂರು ಟೌನಿನಲ್ಲಿ ನಡೆದುಕೊಂಡು
ಹೋಗುತ್ತಿರುವಾಗ ಹಿಂದಿನಿಂದ ಮೋಟಾರ್ ಸೈಕಲ್ ನಲ್ಲಿ ಬಂದಇಬ್ಬರು ವ್ಯಕ್ತಿಗಳು, ಅನಸೂಯ ರಾಜ್ ರವರ ಕೊರಳಿಗೆ ಕೈ ಹಾಕಿ
ಕೊರಳಿನಲ್ಲಿದ್ದ ಸುಮಾರು 80 ಗ್ರಾಂ ತೂಕದ 4 ಲಕ್ಷ ಮೌಲ್ಯದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾದರೆಂದು ನೀಡಿದ ದೂರಿನ ಮೇರೆಗೆ,ತಿಪಟೂರು ನಗರ ಪೊಲೀಸ್‌ ಠಾಣಾ ಮೊಕದ್ದಮೆ ಸಂಖ್ಯೆ 20/2025 ಕಲಂ 309(4) BNS ರೀತ್ಯಪ್ರಕರಣದಾಖಲಿಸಿರುತ್ತೆ.
ಮೇಲ್ಕಂಡ ಪ್ರಕರಣವನ್ನು ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರುಗಳಾದ ವಿ.ಮರಿಯಪ್ಪಹಾಗೂಬಿ.ಎಸ್.ಅಬ್ದುಲ್ ಖಾದರ್ ರವರ ನೇತೃತ್ವದಲ್ಲಿ ತಿಪಟೂರು ಉಪ – ವಿಭಾಗದ ಪೊಲೀಸ್ ಉಪಾಧೀಕ್ಷಕರವರಾದ ವಿನಾಯಕ ಶೆಟಗೇರಿ ರವರ ಮಾರ್ಗಸೂಚನೆ
ಮೇರೆಗೆ ತಿಪಟೂರು ನಗರ ಪೊಲೀಸ್‌ ಠಾಣೆಯ ವೆಂಕಟೇಶ್ ಸಿ, ಪೊಲೀಸ್ ಇನ್ಸ್ ಪೆಕ್ಟರ್, ಡಿ.ಕೃಷ್ಣಪ್ಪ, ಪೊಲೀಸ್ ಸಬ್ ಇನ್ಸ್ ಪೆಕ್ಟರ್, ಸಹಾಯಕ
ಪೊಲೀಸ್ ಉಪ ನಿರೀಕ್ಷಕರಾದ ಚಿಕ್ಕಲಕ್ಕೇಗೌಡ & ಉಸ್ಮಾನ್ ಸಾಬ್ ಮತ್ತು ಸಿಬ್ಬಂದಿಯವರಾದ ಮೋಹನ್‌ ಕುಮಾರ್, ಮೋಹನ್,
ಲೋಕೇಶ್, ಯತೀಶ್, ಸಾಗರ್ ಅಂಬಿಗೇರ್, ಮಂಜುನಾಥ ಕುಪ್ಪಾಡ, ಮನೋಜ್ ರವರು ಕಾರ್ಯಾಚರಣೆ ಮಾಡಿ ಪ್ರಕರಣ ದಾಖಲಾದ ಕೇವಲ10 ದಿನಗಳ ಒಳಗೆ ದಿನಾಂಕ 07.02.2025 ರಂದು ಆರೋಪಿಗಳಾದಇರ್ಪಾನ್ @ ಡಿಚ್ಚಿ ಇರ್ಫಾನ್ ಬಿನ್ ಲೇಟ್ ಅನ್ವರ್ ಖಾನ್, 35ವರ್ಷ,ವೆಲ್ಡಿಂಗ್ ಕೆಲಸ & ಆಟೋ ಚಾಲಕ, ಮಾಡಲ್ ಸ್ಕೂಲ್ ಮುಂಬಾಗ, ಉಪ್ಪಳಿ, ಚಿಕ್ಕಮಂಗಳೂರು ನಗರ
ಅಸ್ಪಾನ್ @ ಆಸ ಬಿನ್ ಮೊಹಮದ್ ಅಲಿ, 23 ವರ್ಷ, ಚಿಕನ್ ಶಾಪ್ ಕೆಲಸ, 1 ನೇ ಕ್ರಾಸ್, ಟಿಪ್ಪು ನಗರ, ಚಿಕ್ಕಮಂಗಳೂರು ನಗರ ಆಖಿಬ್ ಶರೀಫ್ ಬಿನ್ ಚಾಂದ್ ಶರೀಪ್, 24 ವರ್ಷ, ವೆಲ್ಡಿಂಗ್ ಕೆಲಸ, ಮುದಿಗೆರೆ, ಬೇಲೂರು ತಾಲ್ಲೋಕ್, ಹಾಸನ ಜಿಲ್ಲೆರವರುಗಳನ್ನು ಬಂಧಿಸಿ ಸದರಿಯವರು ಕಡೂರು ರೈಲ್ವೆ ಸ್ಟೇಷನ್ ಬಳಿ ಕಳ್ಳತನ ಮಾಡಿದ್ದ ಕೆ.ಎ 04 ಜೆಡ್-5346 ನೇ ಮಾರುತಿ 800 ಕಾರನ್ನುವಶಕ್ಕೆ ಪಡೆದಿರುತ್ತದೆ. 67,00 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಚಿನ್ನದ ಸರ ಕೀಳಲು ತಿಪಟೂರು ಟೌನಿನಲ್ಲಿ ಕಳ್ಳತನ ಮಾಡಿಉಪಯೋಗಿಸಿದ ಕೆ.ಎ. 66 ಜೆಡ್- 9490 ನೇ ಡಿಸ್ಕವರ್ ಬೈಕನ್ನು ಹಾಗೂ ಮೇಲ್ಕಂಡ ಮೂರು ಜನ ಆರೋಪಿಗಳು ಚಿತ್ರದುರ್ಗ ಜಿಲ್ಲೆ
ಹಿರಿಯೂರು ಟೌನ್ ನಲ್ಲಿರುವ ವಾಸವಿ ಜ್ಯೂಯಲರ್ಸ್ ಚಿನ್ನಾಭರಣ ಅಂಗಡಿಯನ್ನು ದರೋಡೆ ಮಾಡಲು ಸಂಚು ರೂಪಿಸಿ ಅದನ್ನು ಕಾರ್ಯಗತ
ಗೊಳಿಸಲು ಒಂದು ಗ್ಯಾಸ್ ಸಿಲಿಂಡರ್, ಒಂದು ಗ್ಯಾಸ್ ಕಟ್ಟರ್ ಸಲಕರಣೆ & ಒಂದು ಹರಿತವಾದ ಹಾಗೂ ಚೂಪಾದ ಕಬ್ಬಿಣದ ಹಾರೆಯನ್ನುಕಾರಿನಲ್ಲಿ ಕೊಂಡೊಯ್ಯುವಾಗ ತಿಪಟೂರು ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ ವಾಸವಿ ಜ್ಯೂಯಲರ್ಸ್ ಚಿನ್ನಾಭರಣ ಅಂಗಡಿಯದರೋಡೆಯನ್ನುವಿಫಲಗೊಳಿಸಿರುತ್ತಾರೆ.ಮೇಲ್ಕಂಡ ಆರೋಪಿಗಳಿಂದ ಹಲವು ಕಡೆಗಳಲ್ಲಿ ಕಳ್ಳತನ ಮಾಡಿದ್ದ ರೂ 5,40,000 ಮೌಲ್ಯದ ಕಾರು, ಬೈಕು,
ಚಿನ್ನಾಭರಣಗಳನ್ನು ಅಮಾನತ್ತು ಪಡಿಸಿಕೊಂಡುಘನನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರು ಪಡಿಸಿ, ಆರೋಪಿಗಳು ನ್ಯಾಯಾಂಗ
ಬಂಧನದಲ್ಲಿರುತ್ತಾರೆ.ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಯವರನ್ನು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ,ಐ.ಪಿ.ಎಸ್ ರವರು ಪ್ರಶಂಶಿಸಿದ್ದಾರೆ.

ವರದಿ :ಮಂಜುನಾಥ್ ಹಾಲ್ಕುರಿಕೆ

ತಿಪಟೂರು ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಫೆಬ್ರವರಿ 13ರಿಂದ 16ರ ವರೆಗೆ ನಡೆಯುವ ರಾಷ್ಟ್ರೀಯ ಹೊನಲು ಬೆಳಕಿನ ವಾಲಿಬಾಲ್ ಕ್ರೀಡಾಕೂಡದ ಕ್ರೀಡಾಜ್ಯೋತಿ ರಥಯಾತ್ರೆಗೆ ಶಾಸಕ ಕೆ.ಷಡಕ್ಷರಿ ಚಾಲನೆ ನೀಡಿದರು
ನಗರದ ಕಲ್ಪತರು ಕ್ರೀಡಾಗಣದಲ್ಲಿ ಆಯೋಜಿಸಿದ ಕ್ರೀಡಾಜ್ಯೋತಿ ರಥಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಕೆ.ಷಡಕ್ಷರಿ ಮಾತನಾಡಿ ತಿಪಟೂರಿನಲ್ಲಿಫೆಬ್ರವರಿ 13 ರಿಂದ 16 ರವರೆಗೆ ರಾಷ್ಟ್ರೀಯ ಪುರುಷ ಹಾಗೂ ಮಹಿಳೆಯರ,ಹೊನಲು ಬೆಳಕಿನ ವಾಲಿಬಾಲ್ ಕ್ರೀಡಾಕೂಟ ನಡೆಯಲ್ಲಿದೆ, , ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ತಂಡಗಳು ಭಾಗವಹಿಸಲಿದ್ದು, ಸ್ಪಂದನಾ ಕ್ರೀಡಾಮತ್ತು ಸಾಂಸ್ಕೃತಿಕ ಸಂಘ ಆಯೋಜಿಸಿರುವ ಕಾರ್ಯಕ್ರಮ ಆಯೋಜನೆ ಮಾಡಿರುವ ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು,ರಾಷ್ಟ್ರೀ ಮಟ್ಟದ ಪ್ರತಿಷ್ಠಿತ ಆಟಗಾರರು, ಭಾಗವಹಿಸುವ ಕ್ರೀಡಾಕೂಟದಲ್ಲಿ ಕ್ರೀಡಾಸಕ್ತರಿಗೆ ರಸದೌತಣ ನೀಡಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಕೂಟಡ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಸ್ಪಂದನಾ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದ ಮುಖಂಡ ನವೀನ್ ಮಾತನಾಡಿ ಫೆಬ್ರವರಿ 13ರಿಂದ 16 ರವರೆಗೆ,ರಾಷ್ಟ್ರೀಯ ಪುರುಷ ಹಾಗೂ ಮಹಿಳೆಯರ ಬಾಲಿಬಾಲ್ ಪಂದ್ಯಾವಳಿ ನಡೆಯಲ್ಲಿದು,ರಾಷ್ಟ್ರಮಟ್ಟದ ಪ್ರತಿಷ್ಠಿತ ತಂಡಗಳು ಭಾಗವಹಿಸುವ ಕ್ರೀಡಾಕೂಟದಲ್ಲಿ ಫೆಬ್ರವರಿ 13 ರಂದು ಮಾಜಿ ಸಚಿವ ಜೆ.ಸಿ ಮಾಧುಸ್ವಾಮಿ ಕ್ರೀಡಾಜ್ಯೋತಿ ಸ್ವೀಕರಿಸಲ್ಲಿದ್ದು, ಶಾಸಕ ಕೆ.ಷಡಾಕ್ಷರಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ,14ಮತ್ತು 15 ರಂದು ಕ್ರೀಡಾಪಟುಗಳಿಗೆ ಸನ್ಮಾನ ಹಾಗೂ 16ರಂದು ಸಮಾರೋಪಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲ್ಲಿದ್ದು, ಕಾರ್ಯಕ್ರಮಕ್ಕೆ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ,ಬಿ.ನಂಜಾಮರಿ, ನಿವೃತ್ತ ಎಸಿಪಿ ಲೋಕೇಶ್ವರ್,ಸೇರಿದಂತೆ ರಾಜ್ಯದ ಅನೇಕ ರಾಜಕೀಯ ನಾಯಕರು, ಕ್ರೀಡಾಪಟುಗಳು,ಅಧಿಕಾರಿ ವರ್ಗ ಭಾಗವಹಿಸುವ ಕ್ರೀಡಾಕೂಟದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್, ನಿಜಗುಣ,ತೋಂಟಾರಾಧ್ಯ. ಮಾದಿಹಳ್ಳಿ ರೇಣು, ಉಮಾಶಂಕರ್ ಮುಂತ್ತಾದವರು ಉಪಸ್ಥಿತರಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಭೂತಪೂರ್ವ ಜಯಭೇರಿಗಳಿಸಿದ ಹಿನ್ನೆಲೆ ತಿಪಟೂರು ನಗರದ ನಗರಸಭಾ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು.

ಸಂಭ್ರಮಾಚರಣೆಯಲ್ಲಿ ಕಾರ್ಯಕರ್ತರನ್ನ ಉದೇಶಿಸಿ ಮಾತನಾಡಿದ ಮಾಜಿ ಸಚಿವ ಬಿ.ಸಿ ನಾಗೇಶ್ ದೆಹಲಿ ಸರ್ಕಾರ ಭ್ರಷ್ಟಚಾರ ಹಾಗೂ ಜನವಿರೋಧ ಆಡಳಿತಕ್ಕೆ ಜನ ತಕ್ಕ ಉತ್ತರ ನೀಡಿದ್ದಾರೆ, ಇಬ್ಬರು ಮುಖ್ಯಮಂತ್ರಿಗಳಿಗೆ ಸೋಲು ನೀಡುವ ಮೂಲಕ,ಬಿಜೆಪಿ ಹೋರಾಟಕ್ಕೆ ಮನ್ನಣೆ ನೀಡಿದ್ದಾರೆ,ಅಭ್ಕಾರಿ ಹಗರಣ ಸೇರಿದಂತೆ ಹಲವಾರು ಹಗರಣದಲ್ಲಿ ಭಾಗಿಯಾದ ಎಲ್ಲರಿಗೂ ಮನೆದಾರಿತೋರಿದ್ದಾರೆ,ಬಿಜೆಪಿ ಕಾರ್ಯಕರ್ತರರು ಪಕ್ಷ ಸಂಘಟನೆಯಲ್ಲಿ ನಂಬಿಕೆ ಇಟ್ಟು ಕೆಲಸ ಮಾಡಿ ಉತ್ತಮ ಫಲಿತಾಂಶ ಬಂದೇಬರುತ್ತದೆ.ಕರ್ನಾಟಕದಲ್ಲಿಯೂ ಸಹ ಸರ್ಕಾರ ಇದೆಯೋ ಇಲ್ಲವೋ ಎನ್ನುವುದೇ,ಜನಕ್ಕೆ ಗೊತ್ತಾಗದಂತ್ತಾಗಿದೆ,ರಾಜ್ಯಸರ್ಕಾರದ ಜನವಿರೋಧಿ ಆಡಳಿತಕ್ಕೆ ಜನ ತಕ್ಕಪಾಠ ಕಲಿಸುವ ಕಾಲದೂರವಿಲ್ಲ,ಎಂದು ತಿಳಿಸಿದರು
ಸಂಭ್ರಮಾಚರಣೆಯಲ್ಲಿ ಬಿಜೆಪಿ ಅಧ್ಯಕ್ಷ ಸತೀಶ್, ನಗರಾಧ್ಯಕ್ಷ ಜಗದೀಶ್,ಮುಖಂಡರಾದ ಗಂಗರಾಜು,ಪ್ರಸನ್ನ ಕುಮಾರ್,ಹರಿಸಮುದ್ರ ಗಂಗಾಧರ್,ಬಿಸ್ಲೇಹಳ್ಳಿ ಜಗದೀಶ್,ಕರಡಿದೇವರಾಜು,ಬಳ್ಳೆಕಟ್ಟೆ ಸುರೇಶ್,ಗುಲಾಬಿ ಸುರೇಶ್,ಹಾಲ್ಕುರಿಕೆ ನಾಗರಾಜು,ನಗರಸಭಾ ಸದಸ್ಯರಾದ ಪದ್ಮತಿಮ್ಮೆಗೌಡ,ಮುಂತ್ತಾದವರು ಉಪಸ್ಥಿತರಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಭೂತಪೂರ್ವ ಜಯಭೇರಿಗಳಿಸಿದ ಹಿನ್ನೆಲೆ ತಿಪಟೂರು ನಗರದ ನಗರಸಭಾ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು.

ಸಂಭ್ರಮಾಚರಣೆಯಲ್ಲಿ ಕಾರ್ಯಕರ್ತರನ್ನ ಉದೇಶಿಸಿ ಮಾತನಾಡಿದ ಮಾಜಿ ಸಚಿವ ಬಿ.ಸಿ ನಾಗೇಶ್ ದೆಹಲಿ ಸರ್ಕಾರ ಭ್ರಷ್ಟಚಾರ ಹಾಗೂ ಜನವಿರೋಧ ಆಡಳಿತಕ್ಕೆ ಜನ ತಕ್ಕ ಉತ್ತರ ನೀಡಿದ್ದಾರೆ, ಇಬ್ಬರು ಮುಖ್ಯಮಂತ್ರಿಗಳಿಗೆ ಸೋಲು ನೀಡುವ ಮೂಲಕ,ಬಿಜೆಪಿ ಹೋರಾಟಕ್ಕೆ ಮನ್ನಣೆ ನೀಡಿದ್ದಾರೆ,ಅಭ್ಕಾರಿ ಹಗರಣ ಸೇರಿದಂತೆ ಹಲವಾರು ಹಗರಣದಲ್ಲಿ ಭಾಗಿಯಾದ ಎಲ್ಲರಿಗೂ ಮನೆದಾರಿತೋರಿದ್ದಾರೆ,ಬಿಜೆಪಿ ಕಾರ್ಯಕರ್ತರರು ಪಕ್ಷ ಸಂಘಟನೆಯಲ್ಲಿ ನಂಬಿಕೆ ಇಟ್ಟು ಕೆಲಸ ಮಾಡಿ ಉತ್ತಮ ಫಲಿತಾಂಶ ಬಂದೇಬರುತ್ತದೆ.ಕರ್ನಾಟಕದಲ್ಲಿಯೂ ಸಹ ಸರ್ಕಾರ ಇದೆಯೋ ಇಲ್ಲವೋ ಎನ್ನುವುದೇ,ಜನಕ್ಕೆ ಗೊತ್ತಾಗದಂತ್ತಾಗಿದೆ,ರಾಜ್ಯಸರ್ಕಾರದ ಜನವಿರೋಧಿ ಆಡಳಿತಕ್ಕೆ ಜನ ತಕ್ಕಪಾಠ ಕಲಿಸುವ ಕಾಲದೂರವಿಲ್ಲ,ಎಂದು ತಿಳಿಸಿದರು
ಸಂಭ್ರಮಾಚರಣೆಯಲ್ಲಿ ಬಿಜೆಪಿ ಅಧ್ಯಕ್ಷ ಸತೀಶ್, ನಗರಾಧ್ಯಕ್ಷ ಜಗದೀಶ್,ಮುಖಂಡರಾದ ಗಂಗರಾಜು,ಪ್ರಸನ್ನ ಕುಮಾರ್,ಹರಿಸಮುದ್ರ ಗಂಗಾಧರ್,ಬಿಸ್ಲೇಹಳ್ಳಿ ಜಗದೀಶ್,ಕರಡಿದೇವರಾಜು,ಬಳ್ಳೆಕಟ್ಟೆ ಸುರೇಶ್,ಗುಲಾಬಿ ಸುರೇಶ್,ಹಾಲ್ಕುರಿಕೆ ನಾಗರಾಜು,ನಗರಸಭಾ ಸದಸ್ಯರಾದ ಪದ್ಮತಿಮ್ಮೆಗೌಡ,ಮುಂತ್ತಾದವರು ಉಪಸ್ಥಿತರಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

error: Content is protected !!