
ಗುಬ್ಬಿ: ಗುರುವಿನ ಗುಲಾಮರಾಗಿ ಗುರುವಿನ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು ಅವರ ನೀತಿ ಪಾಠಗಳಿಂದ ಅವರಂತಾಗಲು ಪ್ರಯತ್ನಿಸಬೇಕು ಎಂದು ಶ್ರೀ ಕ್ಷೇತ್ರ ಕೆರೆಗೋಡಿ ರಂಗಾಪುರ ಮಠದ ಶ್ರೀ ಶ್ರೀ ಶ್ರೀ ಗುರು ಪರದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿದರು, ತಾಲ್ಲೂಕಿನ ಕಡಬ ಹೋಬಳಿಯ ಅತ್ತಿಕಟ್ಟೆ ಗ್ರಾಮದ ಶ್ರೀ ಶಂಕರೇಶ್ವರ ಪ್ರೌಢಶಾಲೆಯಲ್ಲಿ 1992-93ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಮತ್ತು ಸ್ನೇಹ ಕೂಟ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಈ ಕಾರ್ಯಕ್ರಮವು ವಿಶೇಷ ಕಾರ್ಯಕ್ರಮವಾಗಿದೆ 37 ವರ್ಷಗಳ ನಂತರವೂ ಗುರುಗಳ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡಲು ಆ ಗುರುಗಳ ಪ್ರೇರಣೆ ತಮ್ಮಲ್ಲಿ ಮೂಡಿ ಇಂತಹ ಕಾರ್ಯಕ್ರಮ ಹೊರಹೊಮ್ಮಿದೆ ಇದು ಕೇವಲ ಸನ್ಮಾನ ಸಮಾರಂಭವಲ್ಲ ಬದಲಾಗಿ ಗುರುಗಳಿಗೆ ನೀವು ನೀಡುವ ಗೌರವ ಕಾರ್ಯಕ್ರಮ ಗುರುಗಳೇ ತಂದೆ ತಾಯಿ ದೇವರು ಎಂಬ ಭಾವನೆಯಿಂದ ಸಮಾಜದಲ್ಲಿ ಬೆಳೆಯಬೇಕು ಎಂದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರದಾನ ಭಾಷಣ ವಹಿಸಿ ಮಾತನಾಡಿದ ಸದರಿ ಶಾಲೆಯ ಹಿರಿಯ ಮುಖ್ಯೋಪಾಧ್ಯಾಯರಾದ ಶ್ರೀ ಹೆಚ್. ಜಿ. ಮಂಜಪ್ಪನವರು ಮಾತನಾಡಿ ನಾನು ಈ ಶಾಲೆಗೆ 36 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದೇನೆ ನನ್ನ ವೃತ್ತಿ ನಿವೃತ್ತಿ ಎರಡು ಇದೇ ಶಾಲೆಯಲ್ಲಿ ದೊರೆಯಲು ಪೂಜ್ಯ ಗುರುಗಳ ಆಶೀರ್ವಾದದೊಂದಿಗೆ ಲಭಿಸಿದೆ. 1984 ರಲ್ಲಿ ಕೇವಲ 34 ವಿದ್ಯಾರ್ಥಿಗಳಿಂದ ಹಾಗೂ ಹಳೆಯ ಕಟ್ಟಡದಿಂದ ಪ್ರಾರಂಭವಾದ ಈ ಶಾಲೆ ಇಂದು ಭವ್ಯ ಕಟ್ಟಡದಿಂದ ನಿರ್ಮಾಣವಾಗಿದೆ, ಅಕ್ಕಪಕ್ಕದ ಶಾಲೆಗಳಲ್ಲಿ ನಮ್ಮ ಶಾಲೆಯು ಪ್ರಥಮ ಫಲಿತಾಂಶ ತರುವಲ್ಲಿ ಯಶಸ್ವಿಯಾಗುತ್ತಿದೆ, ಗುಬ್ಬಿ ತಾಲ್ಲೂಕಿನಲ್ಲೇ ವಿಶಾಲವಾದ ಮೈದಾನವಿರುವು ನಮ್ಮ ಶಾಲೆಯಲ್ಲೇ ಹಿರಿಯ ವಿದ್ಯಾರ್ಥಿಗಳಿಂದ ಇಂತಹ ಕಾರ್ಯಕ್ರಮಗ ಆಯೋಜಿಸಿರುವುದು ನನಗೆ ಖುಷಿ ತಂದಿದೆ, ಮಕ್ಕಳಲ್ಲಿ ಕೇವಲ ಅಕ್ಷರ ಮಾತ್ರವಲ್ಲ ಸಂಸ್ಕಾರ, ಶಿಸ್ತು ಇಂದಿನ ಶಿಕ್ಷಕರು ಬೆಳೆಸಬೇಕು ಎಂದರು.
ಸದರಿ ಶಾಲೆಯ ಹಿರಿಯ ಶಿಕ್ಷಕರಾದ ಎ ಎನ್ ನಟರಾಜುರವರು ಮಾತನಾಡಿ ನಾನು ಈ ಶಾಲೆಗೆ 1986 ರಲ್ಲಿ ಇಂಗ್ಲಿಷ್ ಶಿಕ್ಷಕನಾಗಿ ಬಂದಿದ್ದೆ, ಇಂದಿನ ಶಿಕ್ಷಕರು ಆತ್ಮಸಾಕ್ಷಿಯಾಗಿ ಕೆಲಸಮಾಡಬೇಕು. ವಿದ್ಯಾಭ್ಯಾಸದಲ್ಲಿ ಶ್ರದ್ಧೆ ಆಸಕ್ತಿ ಬೆಳೆಸಿಕೊಳ್ಳಬೇಕು ಇದಕ್ಕೆ ಮೊಬೈಲ್ ಎಂಬ ಸಾಂಕ್ರಾಮಿಕ ರೋಗ ಆಗಮಿಸಿದೆ ಅದನ್ನು ಮನಸ್ಸಿನಿಂದ ಅಷ್ಟೇ ಹೊಗಲಾಡಿಸಬೇಕು, ನಾವು ಮಾಡುವ ಕೆಲಸ ನಡೆ ನುಡಿ ಸರಿಯಾಗಿರಬೇಕು ಇದರಿಂದ ಮಕ್ಕಳಲ್ಲಿ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು
ಸದರಿ ಶಾಲೆಯ ಮತ್ತೊಬ್ಬ ಶಿಕ್ಷಕರಾದ ಲೋಕೇಶ್ ಮಾತನಾಡಿ ನನ್ನ ಜೀವನ ಕಡುಬಡತಲ್ಲಿತ್ತು 1984 ರಲ್ಲಿ ಗುರುಗಳ ಆಶೀರ್ವಾದಿಂದ ನೇಮಕಾತಿ ಸೇರಿದೆ ನನ್ನ ಗಣಿತದ ಗುರುಗಳ ಪ್ರೇರಣೆಯಿಂದ ನಾನು ಗಣಿತ ಶಿಕ್ಷಕನಾದೆ. ನಾನು ಪ್ರಾರಂಭದಲ್ಲಿ ವಿದ್ಯಾರ್ಥಿಗಳ ಕಲಿಕೆ ಚುರುಕುಗೊಳಿಸಿಲು ದಂಡಿಸುವುದು ಅನಿವಾರ್ಯವಾಗಿತ್ತು ಆದರೆ ಇಂದು ವಿದ್ಯಾರ್ಥಿಗಳನ್ನು ಸ್ನೇಹ ಪ್ರೀತಿಗೆ ಪರಿವರ್ತಿಸಿ ಕಲಿಸಲು ಅನಿವಾರ್ಯವಾಗ ಬೇಕಿದೆ. ನಾವು ಅಂದು ತರಗತಿಗಳನ್ನು ತೆಗೆದುಕೊಳ್ಳಲು ಸಹೋದ್ಯೋಗಿಗಳೊಂದಿಗೆ ಜಗಳವಾಡುತ್ತಿದ್ದೆವು ಆದರೆ ಎಂದು ಸಂಬಳಕ್ಕಾಗಿ ಅಲ್ಲ. ವಿದ್ಯಾರ್ಥಿಗಳಲ್ಲಿ ಗುರಿ ಇರಬೇಕು ಗುರಿ ಮುಟ್ಟುವವರೆಗೂ ಪ್ರಯತ್ನಿಸಬೇಕು ನಮ್ಮಲ್ಲಿ ನಡವಳಿಕೆನ್ನು ನಮ್ಮ ಪೂಜ್ಯರಿಂದ ಕಲಿತಿದ್ದೇನೆ ಹಾಗೂ ಕೊಟ್ಟಿದ್ದಾರೆ ಎಂದರು
ಸದರಿ ಶಾಲೆಯ ಹಾಲಿ ಮುಖ್ಯ ಶಿಕ್ಷಕರಾದ ಬಸವರಾಜು ಮಾತನಾಡಿ ವಿದ್ಯಾರ್ಥಿ ಗುರುಗಳ ಸಂಬಂಧ ಕೊನೆಯಾಗುತ್ತಿಲ್ಲ ಬದಲಾಗಿ ಗಟ್ಟಿಯಾಗುತ್ತಿದೆ ಎಂಬುದುಕ್ಕೆ ಇಂತಹ ಕಾರ್ಯಕ್ರಮಗಳೇ ಸಾಕ್ಷಿಯಾಗಿದೆ. ಗುರುಗಳು ಎಂದರೆ ಕೇವಲ ವಿದ್ಯೆ ಕಲಿಸಲು ಮಾತ್ರವಲ್ಲ ಸಮಾಜದಲ್ಲಿ ಒಳ್ಳೆಯ ಮಾರ್ಗದರ್ಶನ ನೀಡುವ ಪ್ರತಿಯೊಬ್ಬರು ಗುರುಗಳೇ ನಮ್ಮ ಈ ಶಾಲೆಯ ಪರಂಪರೆ ಹೀಗೆ ಮುಂದುವರಿಯಲಿ ಎಂದರು.
ಇದೇ ಸಂದರ್ಭದಲ್ಲಿ 1992-93ನೇ ಸಾಲಿನ ಹಿರಿಯ ವಿದ್ಯಾರ್ಥಿಗಳಿಂದ ಸದರಿ ಶಾಲೆಗೆ ಜೆರಾಕ್ಸ್ ಪ್ರಿಂಟರ್ ಸಾಧನ ಕೊಡುಗೆ ನೀಡಲಾಯಿತು ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕ ಪೆನ್ನು ವಿತರಿಸಲಾಯಿತು
ಕಾರ್ಯಕ್ರಮದಲ್ಲಿ ಕೆರೆಗೋಡಿ ರಂಗಾಪುರ ಮಠದ ಶ್ರೀ ಶ್ರೀ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮಿಗಳು, ಹಿರಿಯ ಮುಖ್ಯ ಶಿಕ್ಷಕರಾದ ಶ್ರೀ ಹೆಚ್ ಜಿ ಮಂಜಪ್ಪ, ಹಿರಿಯ ಶಿಕ್ಷಕರಾದ ಶ್ರೀ ಬಿ.ಎನ್. ಸಂಗಪ್ಪ, ಹಿರಿಯ ಹಿಂದಿ ಭಾಷೆ ಶಿಕ್ಷಕರಾದ ಶ್ರೀ ಡಿ. ಶಿವಗಂಗಾಧರ ಸ್ವಾಮಿ, ಹಿರಿಯ ಇಂಗ್ಲಿಷ್ ಶಿಕ್ಷಕರಾದ ಎ.ಎನ್. ನಟರಾಜು, ಹಿರಿಯ ಗಣಿತ ಶಿಕ್ಷಕರಾದ ಜಿ.ಎನ್. ಲೋಕೇಶ್ , ಹಿರಿಯ ಟೈಲರ್ ವೃತ್ತಿ ಶಿಕ್ಷಕಿಯಾದ ಶ್ರೀಮತಿ ಕೆ.ಆರ್. ಸುಶೀಲಮ್ಮ, ಸದರಿ ಶಾಲೆಯ ಹಾಲಿ ಮುಖ್ಯಶಿಕ್ಷಕರಾದ ಬಸವರಾಜು ಉಪಸ್ಥಿತರಿದ್ದರು ಹಾಗೂ 1992-93 ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು ಮತ್ತು ಶಾಲಾ ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು
ವರದಿ: ಸಂತೋಷ್ ಓಬಳ. ಗುಬ್ಬಿ