
ತಿಪಟೂರು ರೋಟರಿ ಭವನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನ ತಾಲ್ಲೋಕು ಕನ್ನಡ ಸಾಹಿತ್ಯ ಪರೀಷತ್ ಅಧ್ಯಕ್ಷ ಬಸವರಾಜಪ್ಪ, ರೋಟರಿ ಸಂಸ್ಥೆ ಅಧ್ಯಕ್ಷ ಗವಿಯಣ್ಣ,ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಪ್ರಾಚಾರ್ಯ,ಶಿವಕುಮಾರ್ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ತಿಪಟೂರು ತಾಲ್ಲೋಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಸವರಾಜಪ್ಪ ಮಾತನಾಡಿ ಕನ್ನಡ ಭಾಷೆಗೆ ಮನಸ್ಸುಗಳನ್ನ ಬೆಸೆಯುವ ಶಕ್ತಿಯಿದೆ,ನಾವೂ ಎಷ್ಟೆ ಎತ್ತರಕ್ಕೆ ಬೆಳೆದರೂ ನಮ್ಮ ತಾಯಿಯನ್ನ ಹೇಗೆ ಮರೆಯಲು ಸಾಧ್ಯವಿಲ್ಲವೋ, ಹಾಗೇಯೆ,ತಾಯ್ನಾಡು, ತಾಯಿ ಭಾಷೆಯನ್ನ ಮರೆಯಬಾರದು, ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶಿವಕುಮಾರ್ ಮಾತನಾಡಿ ನಮ್ಮ ನಾಡು ನುಡಿ ರಕ್ಷಣೆಗೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ, ಈ ಭಾರಿ ಕೆ.ಬಿ ಕ್ರಾಸ್ ರಂಭಾಪುರಿ ಶಾಲೆ ಆವರಣದಲ್ಲಿ ತಾಲ್ಲೋಕು ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದು, ಈ ಸಮ್ಮೇಳನ ಅವೀಸ್ಮರಣೀಯವಾಗಿಸಲು, ಎಲ್ಲರೂ ಕೆಲಸ ಮಾಡೋಣ ಎಂದು ತಿಳಿಸಿದರು
ಕಾರ್ಯಕ್ರಮದ ಅಧ್ಯಕ್ಷರಾದ ರೋಟರಿ ಅಧ್ಯಕ್ಷ ಗವಿಯಣ್ಣ ಮಾತನಾಡಿ ರೋಟರಿ ಸಂಸ್ಥೆ ಹಲವಾರು ಸಮಾಜಮುಖಿ ಕೆಲಸಗಳಿಗೆ ತೊಡಗಿಸಿಕೊಂಡಿದೆ.ಸಮಾಜದಲ್ಲಿ ಉತ್ತಮ ಕೆಲಸ ಮಾಡಬೇಕು, ಎನ್ನುವ ಮಾನೋಭಾವ ಉಳ್ಳವರಿಗೆ ಉತ್ತಮವೇದಿಕೆ ರೋಟರಿ ಸಂಸ್ಥೆ,ನಮ್ಮ ಸಂಸ್ಥೆಯಿಂದ ಕನ್ನಡ ಶಾಲೆಗಳಿಗೆ ನೆರವು ನೀಡುವ ಕೆಲಸ ಮಾಡಲಾಗುತ್ತಿದೆ,ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ,ಅಶೋಕ್ ಮಾಜಿ ಅಧ್ಯಕ್ಷರಾದ ಕೃಷ್ಣಪ್ರಸಾದ್ ಮಾಜಿ ಕಾರ್ಯದರ್ಶಿಗಳಾದ ವನಿತಾ ಪ್ರಸನ್ ಪಬ್ಲಿಕ್ ಇಮೇಜ್ ನಿರ್ದೇಶಕರಾದ ಪ್ರಕಾಶ್ ಕ್ಯಾತನಹಳ್ಳಿ, ಹಿರಿಯ ರೋಟರಿನ್ಗಳಾದ ಉಮೇಶ್.. ಪ್ರಭುಸ್ವಾಮಿ.. ಅಣ್ಣಿ.ಧರ್ಮಪ್ಪ.ಶಂಕ್ರಣ್ಣ..ಅಪ್ಪಿ ಗೌಡ..ಪ್ರಕಾಶ.. ಕಿಶೋರಿ.ಲೊಕೇಶನ್..ರೋನಕ್ ಗೋಯಲ್. ಮಹಾವೀರ್ ಕಟಾರಿಯ.ನಟರಾಜು.ಮುಂತ್ತಾದವರು ಉಪಸ್ಥಿತರಿದರು
ವರದಿ : ಮಂಜುನಾಥ್ ಹಾಲ್ಕುರಿಕೆ