Month: December 2024

ತುಮಕೂರು ನಗರದ ಸೋರೆಕುಂಟೆ ಬಳಿ ನಿರ್ಮಿಸಲು ಉದೇಶಿಸಿರುವ ಅಂತರಾಷ್ಟ್ರೀಯ ಕ್ರಿಕೇಟ್ ಸ್ಟೇಡಿಯಂ.ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ,ಹಾಗೂಗೃಹಸಚಿವರಾದ ಡಾ. ಜಿ.ಪರಮೇಶ್ವರ್ ತುಮಕೂರಿನಲ್ಲಿ ಶಂಕುಸ್ಥಾಪನೆಯನ್ನು ನೆರವೇರಿಸಿದರು.

ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ,ಭೂಮಿಯು ಮಂಜೂರಾಗಿರುವ ಆದೇಶಪತ್ರವನ್ನು
ಕೆ.ಎಸ್‌.ಸಿ.ಎ ಅಧ್ಯಕ್ಷ ರಘುರಾಮ್ ಭಟ್ ಅವರಿಗೆ
ಹಸ್ತಾಂತರಿಸಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ವರ್ಷಗಳ ಸುಧೀರ್ಘ ರಾಜಕಾರಣದ ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ, ನಾನುಯಾರ ಕುತಂತ್ರ ಬೆದರಿಕೆಗಳಿಗೆಹೆದರುವ ಪ್ರಶ್ನೆಯೇ ಇಲ್ಲ ಎಂದು ಕಪ್ಪು ಬಾವುಟ ಪ್ರದರ್ಶಿಸಲು ಮುಂದಾಗಿದ ಎನ್.ಡಿ.ಎ. ನಾಯಕರಿಗೆ ಟಾಂಗ್ ನೀಡಿದರು.

ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಮಾತನಾಡಿ,ಭಾರತೀಯ ಕ್ರಿಕೆಟ್ ಮಂಡಳಿಯವರಿಗೆ ಅಭಿನಂದನೆಗಳನ್ನು ತಿಳಿಸಿದರು ಸುಮಾರು ವರ್ಷಗಳಿಂದ ಕನಸಾಗಿದ್ದ ಅಂತಾರಾಷ್ಟ್ರೀಯ ಕ್ರಿಕೇಟ್ ಕ್ರೀಡಾಂಗಣ ನಿರ್ಮಾಣದ ಜೊತೆಗೆ ಅಂತಾರಾಷ್ಟ್ರೀಯ ತರಬೇತಿಗೆ ಅಡಿಗಲ್ಲು ಕಲಾಗಿದೆ. ಕೆ.ಎಸ್.ಸಿ.ಎ ಎರಡು ವರ್ಷದಲ್ಲು ಸ್ಟೇಡಿಯಂ ನಿರ್ಮಾಣದ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ ಎಂದರು
ವಸಂತನರಸಾಪುರದಲ್ಲಿ 20 ಸಾವಿರ ಎಕರೆ ಭೂಮಿಯನ್ನು ಕೈಗಾರಿಕಾ ಪ್ರದೇಶಕ್ಕೆ ನೀಡಲಾಗಿದೆ. ಏಷ್ಯದಲ್ಲಿ ಅತಿದೊಡ್ಡ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಎಲ್ಲ ರೀತಿಯ ಸಹಕಾರ ಕೊಟ್ದಿಧದಾರೆ ಪುಡ್ ಪಾರ್ಕಿಂಗ್ ನಿರ್ಮಾಣ ಸೇರಿದಂತೆ ವಿಶ್ವದರ್ಜೆಯ ಸವಲತ್ತು ನೀಡಲಾಗುವುದು, ಕೆಲವೇ ವರ್ಷಗಳಲ್ಲಿ ತುಮಕೂರಿನ ಚಿತ್ರಣವೇ ಬದಲಾಗಲಿದೆ , ಜಪಾನೀಸ್
ಟೌಪ್‌ಶಿಪ್ ನಿರ್ಮಾಣಕ್ಕೆ 500 ಎಕರೆ ಭೂಮಿನೀಡಲಾಗಿದೆ, ಈ ಭಾಗದ ಜನರು ಕೈಗಾರಿಕಾ ಪ್ರದೇಶಕ್ಕಾಗಿ ಭೂಮಿಯನ್ನು
ಕಳೆದುಕೊಂಡಿದ್ದು, ಅವರಿಗೆ ಉದ್ಯೋಗ ಸಿಗುವಂತಾಗಬೇಕು.ಸ್ಥಳೀಯರಿಗೆ ಹೆಚ್ಚಿನ ಒತ್ತು ನೀಡಬೇಕು. ತುಮಕೂರುಜಿಲ್ಲೆ ಸಮಗ್ರ ಅಭಿವೃದ್ಧಿಗಾಗಿ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ಅನುದಾನ ನೀಡಬೇಕು, ಎಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ,ಸಹಕಾರಿ ಸಚಿವ ಕೆ.ಎನ್ .ರಾಜಣ್ಣ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ
ಟಿ.ಬಿ.ಜಯಚಂದ್ರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ. ಕೆ.ಗೋವಿಂದರಾಜು, ಶಾಸಕರಾದ ಸುರೇಶ್‌ಗೌಡ, ಜ್ಯೋತಿಗಣೇಶ್, ಎಸ್.ಆರ್ ಶ್ರೀನಿವಾಸ್,ವೆಂಕಟೇಶ್.ಎಂ.ಎಲ್.ಸಿ ರಾಜೇಂದ್ರ, ಮುಖಂಡರಾದ ಗೋವಿಂದರಾಜು,ಚಂದ್ರಶೇಖರ್ ಗೌಡ, ಮುರುಳಿಧರ ಹಾಲಪ್ಪ ಮುಂತ್ತಾದವರು ಉಪಸ್ಥಿತರಿದರು

ವರದಿ: ಮಂಜುನಾಥ್ ಹಾಲ್ಕುರಿಕೆ

ಜನಸ್ಪಂದನಾ ಟ್ರಸ್ಟ್ ತಿಪಟೂರುನಿಂದ ನಗರದಲ್ಲಿನಡೆದ ಜನಸಂಭ್ರಮ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಎಸ್ ಗಂಗಾಧರ್ ಕೇಂದ್ರ ಮಕ್ಕಳ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ.ಬಿಳಿಗೆರೆ ಕೃಷ್ಣಮೂರ್ತಿ, ನಟರಾಜ್ ಹೊನ್ನವಳ್ಳಿ,ಖ್ಯಾತಚಿತ್ರಕಲಾವಿದ ವಿಷ್ಣುಕುಮಾರ್, ಮೈಸೂರು ರಂಗಾಯಣ ನಿರ್ದೇಶಕ ತಿಪಟೂರು ಸತೀಶ್ ,ರಂಗಕಲಾವಿದೆ ರಾಜೇಶ್ವರಿ, ವಾಣಿ ಸತೀಶ್ ಮುಂತ್ತಾದವರಿಗೆ ಸನ್ಮಾನಿಸಲಾಯಿತು

ಭಾರತಕ್ಕೆ ಪ್ರಜಾಪ್ರಭುತ್ವವೇ ಹೊಸಧರ್ಮವಾಗಿದೆ,ಪ್ರೀತಿಹಾಗೂ ಸ್ವಾಭಿಮಾನದಿಂದ ಹೊಸಪ್ರಜಾಪ್ರಭುತ್ವಧರ್ಮಕಟ್ಟಿ ಬೆಳಸಬೇಕು ಎಂದು ಖ್ಯಾತ ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ತಿಳಿಸಿದರು.
ನಗರದ ಜನಸ್ಪಂದನಾ ಟ್ರಸ್ಟ್ ವತಿಯಿಂದ ಆಯೋಜಿಸಿದ ಜನಸಂಭ್ರಮ ಕಾರ್ಯಕ್ರಮದಲ್ಲಿ ತಿಪಟೂರು ಸಾಂಸ್ಕೃತಿಕ ನಾಯಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಜಾತಿರಾಜಕಾರಣ,ಧರ್ಮರಾಜಕಾರಣ,ಭಾಷಾರಾಜಕಾರಣದ ಸೇರಿದಂತೆ ಎಲ್ಲಾ ಕ್ಷೇತ್ರಗಳಲೂ ಕಲುಷಿತವಾಗುತ್ತಿರುವ ಸಮಯದಲ್ಲಿ ರಾಜಕಾರಣ ಎಲ್ಲಾ ಬದಲಾವಣೆಗಳಿಗು ಮುಲಾಮು,ಆಗಿದೆ ನಮ್ಮ ರಾಜಕೀಯ, ಬದಲಾವಣೆಯ ಗಾಳಿಗೆ ಒಳಗಾಗಬೇಕು.ಪ್ರಜಾಪ್ರಭುತ್ವ ಭಾರತ ಹೊಸಧರ್ಮವಾಗಿದ್ದು ನಾವು, ಹೊಸಪ್ರಜಾಪ್ರಭುತ್ವ ಧರ್ಮವನ್ನ ಪ್ರೀತಿಯ ನೆಲೆಗಟ್ಟಿನಲ್ಲಿ ಕಟ್ಟುವಕೆಲಸ ಮಾಡಬೇಕಿದೆ,ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಮೈಸೂರು ರಂಗಾಯಣ ನಿರ್ದೇಶಕ ತಿಪಟೂರು ಸತೀಶ್ ಮಾತನಾಡಿ,ತಿಪಟೂರು ನೆಲ ಪ್ರತಿರೋಧದ ಗುಣಹೊಂದಿದೆ,ಅನೇಕ ಸಾಂಸ್ಕೃತಿಕ ನಾಯಕರಿಗೆ ಜನ್ಮ ನೀಡುವ ಜೊತೆಗೆ,ಭೂಮಿಕೆ ಹೊದಗಿಸಿದೆ,ಸಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ರಾಜಕಾರಣಕ್ಕೆ ಹೊಸರೂಪಕೊಡುವ ಮೂಲಕ ಟೂಡ ಶಶಿಧರ್ ಮತ್ತು ತಂಡ ಹೊಸ ಬರವಸೆ, ಮೂಡಿಸಿದೆಎಂದು ತಿಳಿಸಿದರು

ಜನಸ್ಪಂದನಾ ಟ್ರಸ್ಟ್ ಅಧ್ಯಕ್ಷ ಟೂಡಾ ಶಶಿಧರ್ ಮಾತನಾಡಿ ಜನಸ್ಪಂದನಾ ಟ್ರಸ್ಟ್ ಹಲವಾರು ಸಹೃದಯಿ ಸ್ನೇಹಿತರೊಂದಿಗೆ, ಸಮುದಾಯಗಳೆಡೆಗೆ ನಮ್ಮ ನಡಿಗೆ ಘೋಷ ವಾಕ್ಯದೊಂದಿಗೆ ನಾಟಕಗಳು,ಸಾಂಸ್ಕೃತಿಕ ಕಾರ್ಯಕ್ರಮಗಳು ಕೋವಿಡ್ ಕಾಲಘಟ್ಟದಲ್ಲಿ ಜನಸಾಮಾನ್ಯರಿಗೆ ನೆರವು ನೀಡುವ, ಜೊತೆಗೆ, ರಾಜ್ಯಸರ್ಕಾರದ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ನಡೆಸಿದ ಜನಚಳುವಳಿಯಲ್ಲಿ ನಮ್ಮ ಸಂಘಟನೆಯ, ಮಹತ್ವದ ಪಾತ್ರವಹಿಸಿದ ಹೆಮ್ಮೆ ನಮಗಿದೆ,ಎಲ್ಲಾ ಜನಚಳುವಳಿ ಒಡನಾಡಿಗಳೊಂದಿಗೆ ಅನೇಕ ಮಹತ್ವದ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಸಂಘಟಕರಾದ ಶ್ರೀಕಾಂತ್ ಕೆಳಹಟ್ಟಿ, ದಿಲಾವರ್,ಸತೀಶ್ ಕಾಡಶೆಟ್ಟಿಹಳ್ಳಿ,ಅಲ್ಲಾಭಕಷ್,ಮುಂತ್ತಾದವರು ಉಪಸ್ಥಿತರಿದರು

ವರದಿ:ಮಂಜುನಾಥ್ ಹಾಲ್ಕುರಿಕೆ

ಜಾಹಿರಾತು:

error: Content is protected !!