ಅಭಿವೃದ್ದಿ ಕೆಲಸದಲ್ಲಿ ಯಾವುದೇ ರಾಜಿ ಇಲ್ಲ ನುಡಿದಂತೆ ನಡೆಯುತ್ತೇನೆ:ಶಾಸಕ ಕೆ.ಷಡಕ್ಷರಿ
ತಿಪಟೂರು : ತಾಲ್ಲೋಕಿನಲ್ಲಿ ಅಭಿವೃದ್ದಿ ಕೆಲಸಗಳಿಗೆ ಹಣದ ಕೊರತೆ ಇಲ್ಲ, ಅಭಿವೃದ್ದಿಯ ಜೊತೆ ರಾಜಿಇಲ್ಲ ತಾಲ್ಲೋಕು ಅಭಿವೃದ್ದಿಗೆ ಅಷ್ಟೆ ಮುಖ್ಯವಾಗಿದೆ ಉಪವಿಭಾಗಾಧಿಕಾರಿಗಳು ಉತ್ತಮವಾಗಿ ಕೆಲಸ ಮಾಡಿದ್ದಾರೆ, ಯಾವುದೇ ಸಮಸ್ಯೆ ಇದರೂ ಜನರೊಂದಿಗೆ ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ನಗರದ ಖಾಸಗೀ ಹೋಟೆಲ್ ಸಭಾಂಗಣದಲ್ಲಿ ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘದಿಂದ ಉಪವಿಭಾಗಾಧಿಕಾರಿಯಾಗಿ ಸೇವೆಸಲ್ಲಿಸಿ ವರ್ಗಾವಣೆ ಗೊಂಡ ಶ್ರೀಮತಿ ಸಪ್ತಶ್ರೀ ಯವರಿಗೆ ನಾಗರೀಕ ಸನ್ಮಾನ ಹಾಗೂ ಬಿಳ್ಕೊಡುಗೆ ನೆರವೇಸಿ ಮಾತನಾಡಿದ ಅವರು ತಾಲ್ಲೋಕಿನಲ್ಲಿ ಅಭಿವೃದ್ದಿ ವಿಚಾರದಲ್ಲಿ ಯಾರೊಂದಿಗು ರಾಜಿಮಾಡಿಕೊಳ್ಳುವುದಿಲ್ಲ, ಹಲವಾರು ಅಭಿವೃದ್ದಿ ಯೋಜನೆಗಳ ನೀಲಿ ನಕ್ಷೆ ಹಾಕಿಕೊಂಡಿದ್ದು ಒಂದು ವರ್ಷದಲ್ಲಿ ಪೂರ್ಣಗೊಳಿಸುತ್ತೇನೆ, ತಿಪಟೂರು ಉಪವಿಭಾಗಾಧಿಕಾರಿಯಾಗಿ ಶ್ರೀಮತಿ ಸಪ್ತಶ್ರೀ ಉತ್ತಮವಾಗಿ ಕೆಲಸ ಮಾಡಿ ಜನರಿಗೆ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ನಾಗರೀಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ
ತಿಪಟೂರಿನಲ್ಲಿ ಕೆಲಸ ಮಾಡಿರುವುದು ನನಗೆ ಹೆಮ್ಮೆಯಿದೆ ,ನನ್ನ ಉಸಿರಿರುವ ವರೆಗೆ ನಾನು ಇಲ್ಲಿನ ಜನರ ಸಹಕಾರ ಮರೆಯುವುದಿಲ್ಲ, ಶಾಸಕರು ತಾಲ್ಲೋಕಿನ ಅಭಿವೃದ್ದಿ ವಿಚಾರದಲ್ಲಿ ಎಲ್ಲಾ ಅಧಿಕಾರಿಗಳನ್ನ ಸಮನ್ವಯದಿಂದ ಕೆಲಸ ಮಾಡಿಸಿದರು ಅವರ ಜೊತೆ ಕೆಲಸ ಮಾಡಿರುವುದು ಸುವರ್ಣವಕಾಶ .ಎಲ್ಲಾ ಅಭಿವೃದ್ದಿ ಕೆಲಸಗಳಿಗೆ ಸಹಕಾರ ನೀಡಿ, ನನ್ನ ಇಲಾಖೆಗೆ ಅಧಿಕಾರ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ.ಯಾವುದೇ ಸಮಸ್ಯೆ ಉದ್ಬವವಾದರೂ ತಕ್ಷಣ ಎಲ್ಲಾಅಧಿಕಾರಿಗಳು ಸಮಸ್ಯೆ ಬಗೆಹರಿಸಿದ್ದೇವೆ ನನ್ನ ಕೆಲಸ ಆತ್ಮತೃಪ್ತಿ ನೀಡಿದೆ ಎಂದು ತಿಳಿಸಿದರು ಖ್ಯಾತ ವೈದ್ಯರಾದ ಡಾ.ಶ್ರೀಧರ್ ಮಾತನಾಡಿ ಸರ್ಕಾರಿ ವೃತ್ತಿಯಲ್ಲಿ ವರ್ಗಾವಣೆ ಹಾಗೂ ನಿವೃತ್ತಿ ಎನ್ನುವುದು ಸಹಜ ಪ್ರಕ್ರಿಯೆಗಳು ನಾನು ಮಾಡುವ ಜನರ ಸೇವೆ ಜನರಿಗೆ ಉಪಕಾರವಾದರೆ ಅದು ಸಾರ್ಥಕವಾಗುತ್ತದೆ ಎಂದು ತಿಳಿಸಿದರು
ಬಯಲು ಸೀಮೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘದ ಸಂಸ್ಥಾಪಕ ಎನ್ ಬಾನುಪ್ರಶಾಂತ್ ಸಂಘ 25ವಸಂತಗಳನ್ನ ಪೂರ್ಣಗೊಳಿಸಿ ಹಲವಾರು ಸಾಂಸ್ಕೃತಿಕ ಸಾಮಾಜಿಕ ಕೆಲಸಗಳನ್ನ ಮಾಡುತ್ತಾ ಬಂದಿದೆ,ಸಂಘದ ಜೊತೆ ಹಲವಾರು ನಿಕಟ ಸಂಕರ್ಪಹೊಂದಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ನಾಗರಾಜು. ತಹಸೀಲ್ದಾರ್ ಮೋಹನ್ ಕುಮಾರ್. ಪೌರಾಯುಕ್ತ ವಿಶ್ವೇಶ್ವರ ಬದರಗಡೆ,ಖ್ಯಾತ ಸಾಹಿತಿ ನಾಗರಾಜ ಶೆಟ್ಟಿ,ಖ್ಯಾತವೈದ್ಯರಾದ ಡಾ.ಶ್ರೀಧರ್.ಸೇರಿದಂತೆ ಅನೇಕರು ಉಪಸ್ಥಿತರಿದರು
ವರದಿ :ಮಂಜುನಾಥ್ ಹಾಲ್ಕುರಿಕೆ