KALPATHARU KRANTHI

ತಿಪಟೂರು ಕಲ್ಪತರು ಕಾಲೇಜು ಬಳಿ ಮರ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ.

Spread the love

ತಿಪಟೂರು :ಬಿ.ಹೆಚ್ ರಸ್ತೆ ಕಲ್ಪತರು ಕಾಲೇಜು ಮುಂಬಾಗ ರಸ್ತೆ ಬದಿ ಮರ ಮುರಿದು ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ತಿಪಟೂರು ತಾಲ್ಲೋಕು ನೊಣವಿನಕೆರೆ ಹೋಬಳಿ ಸೂಗೂರು ಗ್ರಾಮದ ನಿವೃತ್ತ ಶಿಕ್ಷಕ ಶಿವಸ್ವಾಮಿ (62 ವರ್ಷ )ಮೃತ ದುರ್ಧೈವಿ.
11.30ರ ವೇಳೆಯಲ್ಲಿ ತಮ್ಮ ಇವಿ ಬೈಟ್ ನಲ್ಲಿ ತೆರಳುತ್ತಿದ್ದ ಶಿವಸ್ವಾಮಿ ಮೇಲೆ ಏಕಾಏಕಿ ಮರ ಬಿದ್ದಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ತಿಪಟೂರು ನಗರಠಾಣೆ ಸಬ್ ಇನ್ಪೆಕ್ಟರ್ ಯತೀಶ್ .ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಶ್ .ಪೌರಾಯುಕ್ತ ವಿಶ್ವೇಶ್ವರ ಬದರಗಡೆ.ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿ ತನಿಕೆ ಕೈಗೊಳ್ಳಲಾಗಿದೆ.

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version