ತಿಪಟೂರು: ನಗರದ ಮಾದಿಹಳ್ಳಿ ಬಳಿ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಪ್ರಕಾಶ್ ಮಾದಿಹಳ್ಳಿ ನೂತನವಾಗಿ ನಿರ್ಮಿಸಿರುವ **‘ಶ್ರೀ ಸಿದ್ದರಾಮೇಶ್ವರ ನಿಲಯ’**ದ ಗೃಹಪ್ರವೇಶ ಸಮಾರಂಭಕ್ಕೆ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಭೇಟಿ ನೀಡಿ ಶುಭಹಾರೈಸಿದರು.
ನೂತನ ನಿವಾಸದ ಗೃಹಪ್ರವೇಶ ಸಮಾರಂಭಕ್ಕೆ ಪಾವಗಡ ಶಾಸಕ ಹಾಗೂ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷ ವೆಂಕಟೇಶ್, ತಿಪಟೂರು ಶಾಸಕ ಕೆ. ಷಡಕ್ಷರಿ, ಕೆಪಿಸಿಸಿ ಸದಸ್ಯ ವಿ. ಯೋಗೇಶ್ ಹಾಗೂ ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭೇಟಿ ನೀಡಿ ಪ್ರಕಾಶ್ ಮಾದಿಹಳ್ಳಿ ಹಾಗೂ ಕುಟುಂಬದವರಿಗೆ ಶುಭ ಹಾರೈಸಿದರು.
ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಸಚಿವ ವಿ. ಸೋಮಣ್ಣ ಅವರು ಶುಭಸಂದೇಶ ಪತ್ರ ಕಳುಹಿಸಿ ನೂತನ ಗೃಹಪ್ರವೇಶಕ್ಕೆ ಶುಭಕೋರಿದರು.
ಸಮಾರಂಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಗಣ್ಯರು, ಸ್ನೇಹಿತರು ಹಾಗೂ ನೂರಾರು ಮಂದಿ ಭಾಗವಹಿಸಿ ನೂತನ ನಿವಾಸದ ಗೃಹಪ್ರವೇಶದ ಸಂಭ್ರಮದಲ್ಲಿ ಪಾಲ್ಗೊಂಡರು.
ವರದಿ :ಮಂಜುನಾಥ್ ಹಾಲ್ಕುರಿಕೆ
