ತಿಪಟೂರು:ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಬಿಜೆಪಿ ಹಾಗೂ ಸಂಘಪರಿವಾರದ ಮುಖಂಡರು ಮಾಡಿರುವ ಅವಮಾನ ಹಾಗೂ ಅಸ್ಪೃಷತೆ ಆಚರಣೆ ಕೃತ್ಯಖಂಡಿಸಿ ತಿಪಟೂರಿನಲ್ಲಿ ಚಲವಾದ ಮಹಾಸಭಾ ಹಾಗೂ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಆಡಳಿತ ಸೌಧದ ಮುಂಭಾಗ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಬಿಜೆಪಿ ಹಾಗೂ ಸಂಘಪರಿವಾರದ ಕೃತ್ಯಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಉಪವಿಭಾಗಾಧಾಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಪತ್ರಸಲ್ಲಿಸಲಾಯಿತು.
ಪ್ರತಿಭಟನಾಕಾರರನ್ನ ಉದೇಶಿಸಿ ಮಾತನಾಡಿದ ಚಲವಾದಿ ಮಹಾಸಭಾ ಅಧ್ಯಕ್ಷ ಬಜಗೂರು ಮಂಜುನಾಥ್ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ಉತ್ತರಖಂಡದ ಹಾಲ್ದಾನಿ ರಾಮಲೀಲ ಮೈದಾನದಲ್ಲಿ ಸಾರ್ವಜನಿಕ ಸಭೆ ಉದೇಶಿಸಿ ಮಾತನಾಡಿದ ಕಾರಣಕ್ಕೆ ಬಿಜೆಪಿ ವಿಶ್ವಹಿಂದೂಪರಿಷತ್ ಶ್ರೀರಾಮ ಸೇವೆ ಸೇರಿದಂತೆ ಸಂಘಪರಿವಾರದ ಮನುಸಂಸ್ಕೃತಿಯ ಸಂತತಿಗಳು ಮೈದಾನವನ್ನ ಗೋಮುತ್ರದಿಂದ ಸ್ವಚ್ಚಮಾಡಿರುವುದು ಖಂಡನೀಯವಾಗಿದೆ
. ಕೇಂದ್ರ ಸರ್ಕಾರ ನೈತಿಕಹೊಹೆಹೊರಬೇಕು ಘಟನೆಗೆ ಕಾರಣವಾದ ವ್ಯಕ್ತಿಗಳ ಮೇಲೆ ದೇಶದ್ರೋಹದ ಪ್ರಕರಣ ದಾಖಲು ಮಾಡಿ ಗಡಿಪಾರು ಮಾಡಬೇಕು.ದೇಶಕ್ಕೆ ಸ್ವತಂತ್ರ್ಯಬಂದು 80ವರ್ಷವಾಗಿದೆ ಪ್ರಜಾಪ್ರಭುತ್ವದಲ್ಲಿ ಮನುವಾದಿಗಳಿಗೆ ದಲಿತರ ಏಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಮನುವಾದಿಗಳ ಕೃತ್ಯಗಳು ಇದೇ ರೀತಿ ಮುಂದುವರೆದರೆ ದೇಶದಲ್ಲಿ ಮತ್ತೊಂದು ಭೀಮಾಕೋರೆಗಾವ್ ಹೋರಾಟ ಕಾಣುವಕಾಲ ದೂರವಿಲ್ಲ.ದೇಶದ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳನ್ನೇ ಸಹಿದ ಬಿಜೆಪಿಯವರು ಗ್ರಾಮೀಣ ಭಾಗದಲ್ಲಿ ಸಾಮಾನ್ಯ ಜನರನ್ನ ಗೌರವದಿಂದ ಕಾಣಲು ಹೇಗೆ ಸಾಧ್ಯ .ಕೇಂದ್ರ ಸರ್ಕಾರ ಇಂತಹ ಕಿಡಿಗೇಡಿಗಳ ಮೇಲೆ ಕಠಿಣ ಕಾನೂನು ಜಾರಿಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾನಿರತರನ್ನ ಉದೇಶಿಸಿ ಮಾತನಾಡಿದ ಬೋವಿ ಸಮಾಜದ ಮುಖಂಡ ಶಂಕರಪ್ಪ ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಕುಮ್ಮಕ್ಕಿನಿಂದ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಪ್ರಜಾಪ್ರಭುತ್ವ ವಿರೋಧಿ, ಮನುಷತ್ವ ವಿರೋಧಿ ಸರ್ಕಾರ ಆಡಳಿತ ನಡೆಸುತ್ತಿರುವ ಕಾರಣಕ್ಕೆ ಉತ್ತರ ಖಂಡ್ ನ ಹಲ್ದಾಯಿ ರಾಮ್ ಲೀಲ ಮೈದಾನದಲ್ಲಿ ದಲಿತ ಸಮುದಾಯದ ವ್ಯಕ್ತಿ ಭಾಷಣ ಮಾಡಿದ್ದಾರೆ ಅನೋ ಕಾರಣಕ್ಕೆ ಗೋಮೂತ್ರ ಪ್ರೋಕ್ಷಣೆ ಹೋಮ ಹವನ ಮಾಡುವ ಮೂಲಕ ಶುದ್ದಿಕರಣ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದ್ದು ಕೇಂದ್ರಸರ್ಕಾರ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಚಲವಾದಿ ಮಹಾಸಭಾ ಪ್ರಧಾನಕಾರ್ಯದರ್ಶಿ ಜಿ.ಕುಮಾರ್ ಕಾರ್ಯದರ್ಶಿ ಮೋಹನ್ ಬಾಬು. ಖಜಾಂಚಿ ಕರಡಾಳು ಚಂದ್ರಶೇಖರ್.ಈಚನೂರು ನರಸಿಂಹಮೂರ್ತಿ. ಮೋಹನ್ ಸಿಂಗಿ . ಸೌಹಾರ್ದ ತಿಪಟೂರು ಅಧ್ಯಕ್ಷ ಅಲ್ಲಾಭಕ್ಷು.ಚನ್ನರಾಜ್.ಸೇರಿದಂತೆ ಅನೇಕರು ಉಪಸ್ಥಿತರಿದರು
ವರದಿ :ಮಂಜುನಾಥ್ ಹಾಲ್ಕುರಿಕೆ