KALPATHARU KRANTHI

ಮತದಾನ ಪವಿತ್ರ ಹಕ್ಕು, ಮತಹಕ್ಕು ರಕ್ಷಿಸಿ ಅರ್ಹರಿಗೆ ಚಲಾಯಿಸಿ: ಅಶ್ವತ್ ನಾರಾಯಣ್.

Spread the love

ತಿಪಟೂರು: ಮತದಾನವು ಸಂವಿಧಾನ ನಮಗೆ ನೀಡಿರುವ.
ಪವಿತ್ರವಾದ ಹಕ್ಕಾಗಿದ್ದು, ನಮ್ಮ ಮತಹಕ್ಕಿನ ಸುರಕ್ಷತೆಯನ್ನು ಕಾಪಾಡಿಕೊಂಡು ಅರ್ಹ ವ್ಯಕ್ತಿಗೆ ಮತ ಚಲಾಯಿಸಬೇಕು ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅಶ್ವತ್ ನಾರಾಯಣ್ ತಿಳಿಸಿದರು.

ನಗರದ ತಮ್ಮ ಗೃಹ ಕಚೇರಿಯಲ್ಲಿ ಆಯೋಜಿಸಿದ್ದ ಅಶ್ವತ್ ನಾರಾಯಣ್ ಅಭಿಮಾನಿ ಬಳಗ ಹಾಗೂ ಹಿತೈಷಿಗಳ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆ ನಡೆಸುತ್ತಿದ್ದು, ಪ್ರತಿಯೊಬ್ಬರೂ ಚುನಾವಣೆ ಸಿಬ್ಬಂದಿಗಳು ನೀಡುವ ಸೂಚನೆಗಳಂತೆ ಅಗತ್ಯ ದಾಖಲೆಗಳನ್ನು ಒದಗಿಸಬೇಕು,
ಯಾವುದೇ ನಿರ್ಲಕ್ಷ್ಯ ವಹಿಸದೆ ತಮ್ಮ ಮತಹಕ್ಕನ್ನು ಕಾಪಾಡಿಕೊಳ್ಳಬೇಕು. ದೇಶದಾದ್ಯಂತ ಮಾಧ್ಯಮಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಗೊಂದಲಕಾರಿ ಹೇಳಿಕೆಗಳು ಬರುತ್ತಿವೆ. ಕುತಂತ್ರದ ಮೂಲಕ ಮತಹಕ್ಕನ್ನು ಕಸಿದುಕೊಳ್ಳುವ ಆಲೋಚನೆಗಳ ಬಗ್ಗೆ ನಾಗರಿಕರು ಎಚ್ಚರಿಕೆಯಿಂದಿದ್ದು, ತಮ್ಮ ಮತಹಕ್ಕಿನ ರಕ್ಷಣೆಗೆ ಮುಂದಾಗಬೇಕು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಮಹತ್ವ ಅತ್ಯಂತ ದೊಡ್ಡದಾಗಿದ್ದು, ಪ್ರತಿಯೊಬ್ಬ ಅರ್ಹ ಮತದಾರರೂ ತಮ್ಮ ಹಕ್ಕನ್ನು ಜಾಗೃತಿಯಿಂದ ಚಲಾಯಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಹೊನ್ನೇನಹಳ್ಳಿ ವಿರೂಪಾಕ್ಷಣ್ಣ, ಬಸವರಾಜು,ಬಂಡೆ ವಿಜಯ್ ಕುಮಾರ್. ಮಾದಿಹಳ್ಳಿ ಗೊಲ್ಲರಹಟ್ಟಿ ಶಿವಣ್ಣ ಮಂಜಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version