KALPATHARU KRANTHI

ಭಾರತದ ಸಂವಿಧಾನವೇ ಸಮಾನತೆಯ ತಳಪಾಯ: ಖ್ಯಾತ ವೈದ್ಯ ಡಾ. ಶ್ರೀಧರ್.

Spread the love

ಮುಸ್ಲಿಂ ಸಮಾಜದಿಂದ ಅದ್ದೂರಿಯಾಗಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ.

ತಿಪಟೂರು: ವಿಭಿನ್ನ ಆಚಾರ-ವಿಚಾರಗಳನ್ನು ಹೊಂದಿರುವ ಭಾರತದಲ್ಲಿ ಸಂವಿಧಾನವೇ ಸಮಾನತೆಯ ಅಡಿಪಾಯವಾಗಿದ್ದು, ದೇಶದ ಪ್ರತಿಯೊಬ್ಬ ನಾಗರಿಕರೂ ಸಂವಿಧಾನವನ್ನು ಗೌರವಿಸಬೇಕು ಎಂದು ಕುಮಾರ್ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ. ಶ್ರೀಧರ್ ಹೇಳಿದರು.
ನಗರದ ಗಾಂಧೀನಗರ ಪೊಲೀಸ್ ಚೌಕಿ ವೃತ್ತದಲ್ಲಿ ಮುಸ್ಲಿಂ ಸಮಾಜದ ವತಿಯಿಂದ ಆಯೋಜಿಸಲಾದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದಅವರು ಮಾತನಾಡಿ ಭಾರತವು ಬಹುಸಂಸ್ಕೃತಿಯ ದೇಶವಾಗಿದ್ದು, ಇಲ್ಲಿ ನೂರಾರು ಜಾತಿ, ಧರ್ಮ ಹಾಗೂ ಮತಪಂಥಗಳಿವೆ. ವ್ಯಕ್ತಿಗತ ಆಚರಣೆಗಳಿಗೆ ಅವಕಾಶ ನೀಡಿದರೂ, ದೇಶದ ಸಂವಿಧಾನ ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕನ್ನು ನೀಡಿದೆ. ಆದ್ದರಿಂದ ಪ್ರತಿಯೊಬ್ಬರೂ ಸಂವಿಧಾನವನ್ನು ಗೌರವಿಸಿ, ಅದರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು,
ಅಂಬೇಡ್ಕರ್ ಅವರನ್ನು ಕೇವಲ ಭಾವಚಿತ್ರಕ್ಕೆ ಸೀಮಿತಗೊಳಿಸದೇ, ಅವರ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು.

ಬಿಲಾಲ್ ಮಸೀದಿಯ ಮುತ್ತವಲ್ಲಿ ಷಫಿ ಉಲ್ಲಾ ಶರೀಫ್ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ವಿಶ್ವಶ್ರೇಷ್ಠ ಜ್ಞಾನಿಯಾಗಿದ್ದು, ಅನೇಕ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಭಾರತದ ವಿಭಿನ್ನತೆಯಲ್ಲಿ ಏಕತೆಯನ್ನು ಸಾರುವ ಸಂವಿಧಾನವನ್ನು ನೀಡಿದ್ದಾರೆ
ದೇಶದ ಸಂವಿಧಾನವನ್ನು ಪ್ರತಿಯೊಬ್ಬ ಭಾರತೀಯ ಗೌರವಿಸಬೇಕು ಹಾಗೂ ಜೀವನದಲ್ಲಿ ಸಂವಿಧಾನಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು,
ಮುಸ್ಲಿಂ ಸಮಾಜವು ತಮ್ಮ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ನೀಡುವತ್ತ ಗಮನ ಹರಿಸಬೇಕು. ಶಿಕ್ಷಣದಿಂದಲೇ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಜಾಮಿಯಾ ಮಸೀದಿಯ ಮುತ್ತವಲ್ಲಿ ಸಲೀಂ, ಬಿಲಾಲ್ ಮಸೀದಿಯ ಮುತ್ತವಲ್ಲಿ ಷಫಿವುಲ್ಲಾ ಶರೀಫ್, ಮದೀನಾ ಮಸೀದಿಯ ಮುತ್ತವಲ್ಲಿ ದಸ್ತಗೀರ್, ನಗರಸಭೆಯ ಮಾಜಿ ಸದಸ್ಯ ನಯೀಮ್, ಗೌಸ್, ಶಾಬುದ್ದೀನ್, ಸೈಫುಲ್ಲಾ, ಡಿ.ಕೆ. ಅಲಿಂ, ಜಾವೇದ್, ಲೇತ್ ಅಜ್ಮತ್, ಇಮ್ರಾನ್, ತೌಫಿಕ್, ಇರ್ಫಾನ್, ಪರ್ವೇಜ್ ಪಿ.ಎನ್. ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version