: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ-01ರಲ್ಲಿ ತಿಪಟೂರು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ತನ್ನ ಇತಿಹಾಸದಲ್ಲೇ ಅತ್ಯಧಿಕವಾದ ಶೇಕಡ 92ರ ಫಲಿತಾಂಶ ದಾಖಲಿಸಿದ್ದು ಹರ್ಷ ತಂದಿದೆ ಎಂದು ಪ್ರಾಂಶುಪಾಲ ಎಂ.ಡಿ. ಶಿವಕುಮಾರ್ ತಿಳಿಸಿದ್ದಾರೆ.
ಪರೀಕ್ಷೆಗೆ ಹಾಜರಾದ 651 ವಿದ್ಯಾರ್ಥಿಗಳಲ್ಲಿ 598 ಮಂದಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ 389 ಮಂದಿ ಪ್ರಥಮ ದರ್ಜೆ, 85 ಮಂದಿ ದ್ವಿತೀಯ ದರ್ಜೆ ಹಾಗೂ 10 ಮಂದಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಭಾಗವಾರು ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ.95, ವಿಜ್ಞಾನ ವಿಭಾಗದಲ್ಲಿ ಶೇ.88.5 ಹಾಗೂ ಕಲಾ ವಿಭಾಗದಲ್ಲಿ ಶೇ.89.22 ಫಲಿತಾಂಶ ದಾಖಲಾಗಿದೆ.
ವಾಣಿಜ್ಯ ವಿಭಾಗದಲ್ಲಿ ರೋಹನ್ ಕೆ.ಎಸ್ (586), ಹೇಮಿಲಾ ಟಿ.ಎಂ (584), ಮೋನಿಕಾ (582) ಅಂಕಗಳನ್ನು ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಮಹೇಶ್ ಬಿ (579), ಪ್ರೀತಮ್ ಕೆ.ಪಿ (576), ವೈ.ಜಿ. ಪ್ರೇರಣ (575) ಅಂಕಗಳನ್ನು ಗಳಿಸಿದ್ದಾರೆ. ಕಲಾ ವಿಭಾಗದಲ್ಲಿ ತನುಶ್ರೀ (564), ಸುಪ್ರಿಯ (533), ದರ್ಶನ್ ಡಿ.ಎಸ್ (515) ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ಪಡೆದಿದ್ದಾರೆ.
ಅಲ್ಲದೆ, ರೋಹನ್ ಕೆ.ಎಸ್ ಅರ್ಥಶಾಸ್ತ್ರದಲ್ಲಿ, ಹೇಮಿಲಾ ಟಿ.ಎಂ ವ್ಯವಹಾರ ಅಧ್ಯಯನದಲ್ಲಿ, ಮೋನಿಕಾ ವ್ಯವಹಾರ ಅಧ್ಯಯನದಲ್ಲಿ, ವೇದಶ್ರೀ ಕನ್ನಡ ಹಾಗೂ ವ್ಯವಹಾರ ಅಧ್ಯಯನದಲ್ಲಿ, ಮಹೇಶ್ ಬಿ ಭೌತಶಾಸ್ತ್ರದಲ್ಲಿ, ಪ್ರೀತಮ್ ಕೆ.ಪಿ ಭೌತಶಾಸ್ತ್ರದಲ್ಲಿ ಮತ್ತು ವೈ.ಜಿ. ಪ್ರೇರಣ ಕನ್ನಡದಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.
ತಾಲೂಕಿನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಈ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಕಾಲೇಜಿಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿರುವುದಕ್ಕೆ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಪ್ರಾಂಶುಪಾಲರು ಹಾಗೂ ಬೋಧಕ ವರ್ಗ ಅಭಿನಂದನೆಗಳನ್ನು ತಿಳಿಸಿದ್ದಾರೆ.
ವರದಿ :ಮಂಜುನಾಥ್ ಹಾಲ್ಕುರಿಕೆ
