ಹೆದ್ದಾರಿ ಅಧಿಕಾರಿಗಳ ಬೇಜವಾಬ್ದಾರಿಗೆ ಬಡಜೀವ ಬಲಿ.
ತಿಪಟೂರು:ತಾಲ್ಲೋಕಿನ ಕಸಬಾ ಹೋಬಳಿ ಬಿದಿರೆಗುಡಿ ಬಳಿ ಬೈಕ್ ಗೆ ಕಾರುಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಧಾರಣಘಟನೆ ನಡೆದಿದ್ದು.
ಅರಸೀಕೆರೆ ತಾಲ್ಲೋಕಿನ ಕಸಬಾ ಹೋಬಳಿ ಬಿ.ಎಲ್ ಕೊಪ್ಪಲು ಬಸವೇಶ್ವರ ನಗರ ವಾಸಿ ವಿಜಯ್ ಕುಮಾರ್ 24 ವರ್ಷ ಮೃತ ದುರ್ದೈವಿ.
ತಿಪಟೂರು ನಗರದ ಟಿ.ಎಂ ಮಂಜುನಾಥ ನಗರ ಗೇಟ್ ನಲ್ಲಿ ಇರುವ ವೆಲ್ಡಿಂಗ್ ಶಾಪ್ ನಲ್ಲಿ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದ ವಿಜಯ್ ಕುಮಾರ್ ಕೆಲಸ ಮುಗಿಸಿ ವಾಪಾಸ್ ಹೋಗುವಾಗ ಬಿಡಿರೆಗುಡಿ ಬಳಿ ಎದುರುಗಡೆಯಿಂದ ಬಂದ ಕಾರು ಡಿಕ್ಕಿ ಹೊಡೆದು ಮೃತಪಟ್ಟಿರುವ ಧಾರಣಘಟನೆ ನಡೆದಿದೆ.
ರಾಷ್ಟ್ರೀಯ ಚತುಷ್ಪತ ಹೆದ್ದಾರಿ ಅಧಿಕಾರಿಗಳು ನಿರ್ಮಾಣ ಹಂತದ ರಸ್ತೆಯಲ್ಲಿ ಸರಿಯಾದ ಸೂಚನ ಫಲಕ ಅಳವಡಿಸಿದ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿದಿರೆಗುಡಿ ಹಾಗೂ ಕೊನೆಹಳ್ಳಿ ಭಾಗದಲ್ಲಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿ ಹೆದ್ದಾರಿ ಅಧಿಕಾರಿಗಳು ಸರಿಯಾದ ಸೂಚನ ಕ ಅಳವಡಿಸಿ, ಸುರಕ್ಷತಾ ಕ್ರಮಗಳನ್ನ ಕೈಗೊಳ್ಳದ ಕಾರಣ ಅನೇಕ ಅಪಘಾತಗಳು ಪ್ರತಿದಿನ ನಡೆಯುತ್ತಲಿವೆ.
ಬಿದಿರೆಗುಡಿ ಕೊನೆಹಳ್ಳಿ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗಿರುವ ಕಾರಣ ಶಾಸಕರ ಅಧ್ಯಕ್ಷತೆಯಲ್ಲಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಸೂಕ್ತಕ್ರಮಕ್ಕೆ ಸೂಚನೆ ನೀಡಿದರೂ.ಶಾಸಕರ ಸಭೆಗೂ ಗೈರುಹಾಜರಾದ ಹೆದ್ದಾರಿ ಅಧಿಕಾರಿಗಳು ಸುರಕ್ಷತಾ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ಧೋರಣೆ ಬೇಜವಾಬ್ದಾರಿ ಮುಂದುವರೆಸಿದ ಪರಿಣಾಮ ಅಪಘಾತಗಳು ದಿನೇ ದಿನೇ ನಡೆಯುತ್ತಿದ್ದು.ಅಪಘಾತಗಳ ಪಟ್ಟಿಗೆ ವಿಜಯ್ ಕುಮಾರ್ ಅಪಘಾತದ ಸಾವು ಸೇರ್ಪಡೆಯಾಗಿದೆ.
ಹೆದ್ದಾರಿ ಅಧಿಕಾರಿಗಳ ಬೇಜವಾಬ್ದಾರಿಯೇ ಅಪಘಾತಕ್ಕೆ ಕಾರಣವಾಗಿದ್ದು ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳ ಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವರದಿ :ಮಂಜುನಾಥ್ ಹಾಲ್ಕುರಿಕೆ
