KALPATHARU KRANTHI

ಬಾಲಗಣಪತಿ ಗೆಳೆಯರ ಬಳಗದಿಂದ ಕೆಪಿಸಿಸಿ ಸದಸ್ಯ ವಿ. ಯೋಗೇಶ್ ಅವರಿಗೆ ಸನ್ಮಾನ.

Spread the love

ತಿಪಟೂರು: ನಗರದ ವಿದ್ಯಾನಗರ 14ನೇ ವಾರ್ಡ್‌ನ ಮಾಜಿ ನಗರಸಭೆ ಸದಸ್ಯ ಹಾಗೂ ಕೆಪಿಸಿಸಿ ಸದಸ್ಯರಾದ ವಿ. ಯೋಗೇಶ್ ಅವರಿಗೆ ಶ್ರೀ ಕ್ಷೇತ್ರ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ಅಮೆರಿಕಾದ ಯೋಗ ಸಂಸ್ಕೃತಮ್ ಯೂನಿವರ್ಸಿಟಿ, ಫ್ಲೋರಿಡಾ ವತಿಯಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಲಭಿಸಿದ ಹಿನ್ನೆಲೆ, ವಿದ್ಯಾನಗರ ಬಾಲಗಣಪತಿ ಗೆಳೆಯರ ಬಳಗದಿಂದ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಿ. ಯೋಗೇಶ್ ಅವರು, ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ರಾಯರ ಸಾನಿಧ್ಯದಲ್ಲಿ ಲಭಿಸಿರುವ ಈ ಡಾಕ್ಟರೇಟ್ ಪ್ರಶಸ್ತಿಯನ್ನು ನಿಮ್ಮೆಲ್ಲರಿಗೂ ಅರ್ಪಿಸುತ್ತಿದ್ದೇನೆ,ಈ ಪ್ರಶಸ್ತಿ ಸಾಮಾಜಿಕ ಸೇವೆಯನ್ನು ಇನ್ನಷ್ಟು ವಿಸ್ತರಿಸುವ ಜವಾಬ್ದಾರಿಯನ್ನು ನೀಡಿದೆ. ಮಧ್ಯಮ ವರ್ಗದಲ್ಲಿ ಜನಿಸಿ, ತಂದೆ-ತಾಯಿಯ ಆಶಯದಂತೆ ಸಮಾಜ ಸೇವೆಯನ್ನು ಪ್ರಾರಂಭಿಸಿದ್ದೇನೆ. ಅಭಿಮಾನಿಗಳ ಆಶಯದಂತೆ ಜನಸಾಮಾನ್ಯರ ಸೇವೆಗೆ ರಾಜಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಅಧಿಕಾರ ಮತ್ತು ಹುದ್ದೆಗಳು ಶಾಶ್ವತವಲ್ಲ; ಸಮಾಜದ ಹಿಂದುಳಿದ ದೀನದುರ್ಬಲರಿಗೆ ಸೇವೆ ಮಾಡಿದಾಗ ಭಗವಂತನ ಆಶೀರ್ವಾದ ದೊರೆಯುತ್ತದೆ.ರಾಜಕೀಯ ಕ್ಷೇತ್ರದಲ್ಲಿ ನಿಮ್ಮೆಲ್ಲರ ಮನೆ ಮಗನಂತೆ ಸೇವೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಾಲಗಣಪತಿ ಗೆಳಯರ ಬಳಗದ ಅಶೋಕ್ ಮಾತನಾಡಿ, “ಸಹನೆ ನಮ್ಮದಾಗಿದ್ದರೆ ಸಕಲವೂ ನಮ್ಮದಾಗುತ್ತದೆ” ಎಂಬಂತೆ ಯೋಗೇಶ್ ಅವರ ತಾಳ್ಮೆ ಅವರಿಗೆ ಉನ್ನತ ಪ್ರಶಸ್ತಿ ಹಾಗೂ ಗೌರವವನ್ನು ತಂದಿದೆ. ಮುಂದಿನ ದಿನಗಳಲ್ಲಿ ಸಮಾಜದ ಹಿಂದುಳಿದ, ಅಸಂಘಟಿತ ಹಾಗೂ ದೀನದುರ್ಬಲರಿಗೆ ಇನ್ನಷ್ಟು ಸೇವೆ ಸಿಗಲಿ ಜನಸೇವೆಗೆ ಶಕ್ತಿ ನೀಡಲು ಉನ್ನತ ರಾಜಕೀಯ ಅಧಿಕಾರ ದೊರೆಯಲಿ ಎಂದು ಆಶಿಸಿದರು.

ಕರಡಾಳು ಶಾಲೆಯ ಶಿಕ್ಷಕ ರವೀಶ್ ಮಾತನಾಡಿ, ವಿದ್ಯಾನಗರದ ಪ್ರತಿಯೊಂದು ಮನೆಗೂ ಯೋಗೇಶ್ ಅವರು ನೀಡಿದ ಸೇವೆ ಗ್ರಾಮೀಣ ಭಾಗಗಳಿಗೂ ವಿಸ್ತರಿಸಿದೆ. ಕೋವಿಡ್ ಸಂದರ್ಭದಲ್ಲಿ ಹಾಲು, ತರಕಾರಿ ಹಾಗೂ ಆಹಾರ ಪದಾರ್ಥಗಳನ್ನು ನೀಡಿದ ಸೇವೆಯನ್ನು ವಾರ್ಡ್‌ನ ಜನರು ಎಂದಿಗೂ ಮರೆಯುವುದಿಲ್ಲ. “ಎಡಗೈಯಲ್ಲಿ ಕೊಟ್ಟದ್ದು ಬಲಗೈಗೆ ಗೊತ್ತಾಗಬಾರದು” ಎಂಬುದು ಅವರ ದೊಡ್ಡ ಗುಣ. ಅವರ ಸೇವೆ ಇನ್ನಷ್ಟು ವಿಸ್ತರಿಸಿ, ಮುಂದಿನ ದಿನಗಳಲ್ಲಿ ಉನ್ನತ ಹುದ್ದೆ ಹಾಗೂ ಅಧಿಕಾರ ದೊರೆಯಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಟಿಎಪಿಎಂಸಿ ಮಾಜಿ ಸದಸ್ಯ ಗುಂಗುರಮಳೆ ಕಾಂತರಾಜು, ಬಾಲಗಣಪತಿ ಸಂಘದ ಅಧ್ಯಕ್ಷ ರವೀಂದ್ರ ಕುಮಾರ್, ಮೇಸ್ತ್ರಿ ಬಸವರಾಜು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ:ಮಂಜುನಾಥ್ ಹಾಲ್ಕುರಿಕೆ

Exit mobile version