KALPATHARU KRANTHI

ಜಿಲ್ಲಾಧಿಕಾರಿಗಳ ಗೈರಿನಲ್ಲಿ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಜನಸಂಪರ್ಕ ಸಭೆ.ಸಾರ್ವಜನಿಕರ ಬೇಸರ.

Spread the love

ಅಧಿಕಾರಿಗಳು ಸಂಕಷ್ಟದಲ್ಲಿ ಇರುವ ಜನರಿಗೆ ಸ್ಪಂದಿಸುವ ಕೆಲಸ ಮಾಡಬೇಕು:ಅಪರ ಜಿಲ್ಲಾಧಿಕಾರಿ ತಿಪ್ಪೆಸ್ವಾಮಿ ಸೂಚನೆ

ತಿಪಟೂರು:ರೈತರು ಹಾಗೂ ನೊಂದಜನರಿಗೆ ಸೂಕ್ತವಾಗಿ ಸ್ಪಂದಿಸಿ ಕೆಲಸ ಮಾಡಿ,ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು,ನೊಂದವರಿಗೆ ಮನಸ್ಥೈರ್ಯ ಜಾಸ್ತಿಯಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ತಿಪ್ಪೆಸ್ವಾಮಿ ತಿಳಿಸಿದರು


ನಗರದ ತಾಲ್ಲೋಕು ಕಚೇರಿ ಆವರಣದಲ್ಲಿ ನಡೆದ ಜಿಲ್ಲಾಧಿಕಾರಿಗಳ ಜನಸಂಪರ್ಕ ಸಭೆ ಉದೇಶಿಸಿ ಮಾತನಾಡಿದ ಅವರು ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಸಭೆಗಳ ಬಗ್ಗೆ ಮಾಹಿತಿ ಪಡೆದೆ. ಸ್ಥಳೀಯವಾಗಿ ಪರಿಹಾರವಾಗುವ ಸಮಸ್ಯೆಗಳನ್ನ ಪರಿಹಾರ ಮಾಡಲಾಗುವುದು.ಜಿಲ್ಲಾಮಟ್ಟದಲ್ಲಿ ಜಿಲ್ಲಾಉಸ್ತುವಾರಿ ಸಚಿವರು ಹಾಗೂ ಜಿಲ್ಲೆ ಎಲ್ಲಾ ಶಾಸಕರ ಸಮ್ಮುಖದಲ್ಲಿ ಜನಸ್ಪಂದನಾ ಸಭೆ ನಡೆಸಿ ಪರಿಹಾರ ನೀಡಲಾಗುವುದು .ಜನಸ್ಪಂದನಾ ಸಭೆಯಲ್ಲಿ ಸ್ವೀಕಾರವಾಗುವ ಅರ್ಜಿಗಳನ್ನ ಐಪಿಜಿಆರ್ಎಸ್ ಪೋರ್ಟಲ್ ನಲ್ಲಿ ದಾಖಲು ಮಾಡಿ .ಅರ್ಜಿಯಸ್ಥಿತಿಯನ್ನ ಟ್ರ್ಯಾಕ್ ಮಾಡಿ ಪರಿಹಾರ ನೀಡಲಾಗುತ್ತದೆ.ರೈತರು ತಮ್ಮ ಜಮೀನುಗಳ ಪಹಣಿಯನ್ನ ಪ್ರತಿವರ್ಷ ಪರಿಶೀಲನೆ ಮಾಡಿಕೊಳ್ಳಿ.ಒಂದು ಪ್ರತಿಯನ್ನ ಪಡೆದು ಸಂಗ್ರಹ ಮಾಡಿ.ಯಾವುದಾದರು ತಪ್ಪುಗಳಾದರೆ ತಕ್ಷಣ ಪರಿಶೀಲನೆ ಮಾಡಿ ಸರಿಂಡಿಸಿಕೊಳ್ಳಲು ಅನುಕೂಲವಾಗುತ್ತದೆ .ಸರ್ಕಾರ ಪೌತಿ ಆದೋಲನ.ಹಾಗೂ ದುರಸ್ಥಿ ಆಂದೋಲನ‌ನಡೆಸುತ್ತಿದೆ.ತಮ್ಮ ಜಮೀನಿನ ದಾಖಲೆಗಳನ್ನ ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಸದುಪಯೋಗ ಮಾಡಿಕೊಳ್ಳಿ.ಎಂದು ತಿಳಿಸಿದರು.


ತಾಲ್ಲೋಕಿನ ಹಾಲ್ಕುರಿಕೆ.ಹಾಗೂ ಭದ್ರಪುರ.ಕಾಗೇಹಳ್ಳದ ಕಾವಲುಗಳಲ್ಲಿ ಸರ್ಕಾರ ರೈತರು ಉಳಿಮೆ ಮಾಡುತ್ತಿರುವ ಜಮೀನಿಗೆ ಅರಣ್ಯ ಇಲಾಖೆ ನೋಡಿಸ್ ನೀಡಿ ಕಿರುಕುಳ ನೀಡಲಾಗುತ್ತಿದೆ ಎಂದು ರೈತರು ದೂರು ನೀಡಿದರು ರೈತರ ಸಮಸ್ಯೆ ಆಲಿಸಿದ ಅಪರ ಜಿಲ್ಲಾಧಿಕಾರಗಳು‌ ತುಮಕೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಅರಣ್ಯ ಹಾಗೂಕಂದಾಯ ಇಲಾಖೆ ಭೂಮಿ ವಿವಾದ ಇರುವ ಕಡೆ ಲ್ಯಾಂಡ್ ಸೆಟಲ್ ಮೆಂಟ್ ಆಫಿಸರ್ ನೇಮಕ ಮಾಡಿದೆ. ಫಲಾನುಭವಿಗಳು ಲ್ಯಾಂಡ್ ಸೆಟಲ್ಮೆಂಟ್ ಆಫೀಸರ್ ಗೆ ದೂರು ನೀಡಿ.ಅವರು ಸ್ಥಳ ತನಿಖೆ ಮಾಡಿ.ಅರಣ್ಯ ಇಲಾಖೆಯ ಒಟ್ಟು ಭೂಮಿ ಹಾಗೂ ಕಂದಾಯ ಇಲಾಖೆ ನೀಡಿರುವ ಭೂಮಿ ದಾಖಲೆ ಪರಿಶೀಲನೆ ಮಾಡಿ ರೈತರಿಗೆ ಅನುಕೂಲ ಮಾಡುತ್ತಾರೆ. ಲ್ಯಾಂಟ್ ಸೆಟಲ್ಮೆಂಟ್ ಅಫಿಸರ್ ಸಮಸ್ಯೆಗೆ ಪರಿಹಾರ ಮಾಡುವವರೆಗೂ ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ತೊಂದರೆ ನೀಡಬಾರದು ಎಂದು ಸೂಚಿಸಿದರು.

ಪೆದ್ದಿಹಳ್ಳಿ ಗ್ರಾಮದ ಜನರ ಸಮಸ್ಯೆ ಆಲಿಸಿದ ಅವರು ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನ ಅಧಿಕಾರಿಗಳು ಮಾಡಬೇಕು. ನೊಂದ ಜನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿ ಪೆದ್ದಿಹಳ್ಳಿ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿದ್ದು.ಪೊಲೀಸ್ ತನಿಖೆ ನಡೆಯುತ್ತಿದರು.ಪೊಲೀಸ್ ಇಲಾಖೆ .ಕಂದಾಯ ಇಲಾಖೆ.ಸಮಾಜಕಲ್ಯಾಣ ಇಲಾಖೆ ಜಂಟಿಯಾಗಿ ಗ್ರಾಮಕ್ಕೆ ಭೇಟಿನೀಡಿ ಸಂತ್ರಸ್ಥರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿ ಎಂದು ಸೂಚನೆ ನೀಡಿದರು.ತಾಲ್ಲೋಕಿನ ಮಾಯಗೊಂಡನಹಳ್ಳಿ ಗ್ರಾಮಕ್ಕೆ ಬಸ್ ಸೌಕರ್ಯವಿಲ್ಲದೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರ ಮನವಿ ಆಲಿಸಿ.ತಕ್ಷಣ ಹಾಲ್ಕುರಿಕೆ ಹುಳಿಯಾರು ಮಾರ್ಗದ ಬಸ್ ಗಳಲ್ಲಿ ಯಾವುದಾದರೂ ಒಂದನ್ನ ಮಾಯಗೊಂಡನಹಳ್ಳಿಗೆ ಹೋಗುವಂತೆ ವ್ಯವಸ್ಥೆ ಮಾಡಿಎಂದು ತಿಳಿಸಿದರು.

ತಾಲ್ಲೋಕಿನ ಗಡಿ ಗ್ರಾಮದ ಕೊನೇಹಳ್ಳಿ ಸಿದ್ದಾಪುರ ಗ್ರಾಮಗಳು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಿಂದ ಎರಡು ಭಾಗಗಳಾಗಿದ್ದು.ಪ್ರತಿದಿನ ಶಾಲಾಕಾಲೇಜು ಮಕ್ಕಳು.ಕೃಷಿಕರು.ದನಕರು ಹೊಂದಿರುವ ರೈತರು ರಸ್ತೆದಾಟಿ ತಮ್ಮ ಜಮೀನುಗಳಿಗೆ ಹೋಗಬೇಕಾಗಿದ್ದುಅಪಘಾತಕ್ಕೆ ಒಳಗಾಗಿ ಜೀವಕಳೆದುಕೊಳ್ಳುತ್ತಿದ್ದಾರೆ, ಗ್ರಾಮದ ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗಲು ಕನಿಷ್ಠ 8ಕಿ.ಮಿ ರಸ್ತೆ ಸುತ್ತಿಕೊಂಡು ಬರಬೇಕು.ಆದರಿಂದ ಸೂಕ್ತ ಅಂಡರ್ ಪಾಸ್ ನಿರ್ಮಾಣ ಮಾಡಿ ಕೊಡಬೇಕೆಂದು ಮನವಿ ಮಾಡಿದರು.ಮನವಿಗೆ ಉತ್ತರಿಸಿದ ಅಪರ ಜಿಲ್ಲಾಧಿಕಾರಿಗಳು ಜಿಲ್ಲಾಡಳಿತದಿಂದ ಭೂಸ್ವಾಧೀನಾಧಿಕಾರಿಗಳಿಗೆ ಪತ್ರಬರೆಯುತ್ತೇವೆ. ಕೇಂದ್ರ ಸಚಿವ ವಿ.ಸೋಮಣ್ಣನವರಿಗೆ ಮನವಿ ಮಾಡಿ ಪರಿಹಾರ ಕಡುಕೊಳ್ಳಿ.ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ತಿಳಿಸಿದರುಗಾಂಧೀನಗರ ಆರ್ಸಿಸಿ ಟ್ಯಾಂಕ್ ರಸ್ತೆಯಲ್ಲಿ ಸೂಕ್ತ ಚರಂಡಿ ಇಲ್ಲದೆ ಅನೈರ್ಮಲ್ಯ ಕಾಡುತ್ತಿದೆ.ಸೂಕ್ತ ಕುಡಿಯುವ ನೀರಿನ ವ್ಯವಸ್ಥೆಇಲ್ಲ ಎಂದು ಬಡಾವಣೆ ನಿವಾಸಿಗಳು ಅವಲತ್ತುಕೊಂಡರು.
ಸಭೆಯಲ್ಲಿ ಉಪವಿಭಾಗಾಧಿಕಾರಿಗಳಾದ ಶ್ರೀಮತಿ ಸಪ್ತಶ್ರೀ.ತಹಸೀಲ್ದಾರ್ ಮೋಹನ್ ಕುಮಾರ್.ಇಒ ಸುದರ್ಶನ್.ಪೌರಾಯುಕ್ತ ವಿಶ್ವೇಶ್ವರ ಬದರಗಡೆ.ಗ್ರೇಡ್ 2 ತಹಸೀಲ್ದಾರ್ ಜಗನ್ನಾಥ್ ಉಪಸ್ಥಿತರಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version