ತಿಪಟೂರು: ನಗರದ ಹೊರವಲಯದಲ್ಲಿ ಅಕ್ರಮವಾಗಿ ಖಸಾಯಿಖಾನೆಗೆ ಗೋವುಗಳನ್ನು ಸಾಗಿಸುತ್ತಿರುವ ಮಾಹಿತಿ ತಿಳಿದು ತಡೆಯಲು ತೆರಳಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ನಡೆದಿದೆ.
ನಗರದ ಹೊರವಲಯದ ಬಸವಾಪುರ -ಗಾಂಧಿನಗರ ಸಂಪರ್ಕ ರಸ್ತೆಯಲ್ಲಿ ಟಾಟಾ ಏಸ್ ವಾಹನದಲ್ಲಿ ಗೋವುಗಳನ್ನು ತುಂಬಿಕೊಂಡು ಖಸಾಯಿಖಾನೆಗೆ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ವಾಹನವನ್ನು ತಡೆಯಲು ಯತ್ನಿಸಿದರು. ಈ ವೇಳೆ ಸುಮಾರು 100ಕ್ಕೂ ಹೆಚ್ಚು ಯುವಕರು ಇದ್ದ ಗುಂಪೊಂದು ಏಕಾಏಕಿ ಕಾರ್ಯಕರ್ತರ ಮೇಲೆ ದಾಳಿ ನಡೆಸಿದರೆಂದು ತಿಳಿದುಬಂದಿದೆ.
ಗಲಾಟೆಯಲ್ಲಿ ಗೌತಮ್ (ಅಂಜಿನಪ್ಪ ಪುತ್ರ), ಆನಂದ್ (ಶ್ರೀನಿವಾಸ್ ಪುತ್ರ), ಶ್ರೇಯಸ್ (ಮಂಜುನಾಥ್ ಪುತ್ರ), ಸಚಿನ್ (ಮಂಜುನಾಥ್ ಪುತ್ರ) ಹಾಗೂ ಪ್ರಜ್ವಲ್ ಅವರಿಗೆ ಗಾಯಗಳಾಗಿದ್ದು, ಅವರನ್ನು ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಉಮೇಶ್, ಗ್ರಾಮಾಂತರ ವೃತ್ತ ನಿರೀಕ್ಷಕ ಚಂದ್ರಶೇಖರ್, ನಗರ ವೃತ್ತ ನಿರೀಕ್ಷಕ ಯತೀಶ್, ಸಬ್‌ಇನ್ಸ್‌ಪೆಕ್ಟರ್‌ಗಳಾದ ರವಿಕುಮಾರ್, ಕೃಷ್ಣಪ್ಪ ಹಾಗೂ ರಾಮಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಬಿಜೆಪಿ ಯುವ ಮುಖಂಡ ವಿಶ್ವದೀಪ್, ಬಿ.ಸಿ. ನಾಗೇಶ್, ಹಿಂದೂಪರ ಸಂಘಟನೆ ಮುಖಂಡ ಮಡೆನೂರು ವಿನಯ್ ಹಾಗೂ ಬಜರಂಗದಳ ಮುಖಂಡರಾದ ನಾಗೇಶ್, ನಟರಾಜ್ ಮತ್ತು ಮಂಜುನಾಥ್ ಉಪಸ್ಥಿತರಿದ್ದರು.
ಹಿಂದೂ ಸಂಘಟನೆಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಕೃತ್ಯ ಖಂಡಿಸಿ ಆರೋಪಿಗಳ ಶೀಘ್ರ ಬಂಧನಕ್ಕೆ ಒತ್ತಾಯಿಸಿ ತಿಪಟೂರು ಡಿವೈಎಸ್ಪಿ ಕಚೇರಿ ಮುಂಭಾಗ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ,ಆಕ್ರೋಶ ವ್ಯಕ್ತಪಡಿಸಿದರು,
ಪ್ರತಿಭಟನಾ ನಿರತರನ್ನ ಉದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಗಂಗರಾಜ ತಿಪಟೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡನೀಯ,ತಿಪಟೂರು ಇತಿಹಾಸದಲ್ಲಿ ಅನ್ಯಕೋಮಿನ ಯುವಕರು ಹಿಂದುಗಳ ಮೇಲೆ ಹಲ್ಲೆ ನಡೆಸುವ ಕೃತ್ಯಕ್ಕೆ ಕೈ ಹಾಕಿರಲ್ಲಿಲ್ಲ,ಅದರೇ ಕಾಂಗ್ರೇಸ್ ಸರ್ಕಾರದ ತುಷ್ಟೀಕರಣದ ಪ್ರಭಾವದಿಂದ ಹಲ್ಲೇಕೋರರಿಗೆ ಕುಮ್ಮಕ್ಕು ಸಿಕ್ಕಿದೆ. ಹಿಂದೂಗಳ ಮೇಲೆ ಖಂಡಿಸಿ,ಹಿಂದೂ ಕಾರ್ಯಕರ್ತರಿಗೆ ನೈತಿಕ ಬೆಂಬಲ ಸೂಚಿಸಿ ಮಾರ್ಚ್ 24ರಂದು ಮಂಗಳವಾರ ತಿಪಟೂರು ಬಂದ್ ಗೆ ಕರೆನೀಡಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಯುವಮುಖಂಡ ವಿಶ್ವದೀಪ್ ಬಿ.ಸಿ ನಾಗೇಶ್ ಹಿಂದೂ ಸಂಘಟನೆ ಕಾರ್ಯಕರ್ಯರ ದಾಳಿ ತೀವ್ರ ಖಂಡನೀಯ,ನಗರದಲ್ಲಿ ಅಕ್ರಮವಾಗಿ ಖಸಾಯಿಖಾನೆಗಳು ನಡೆಯುತ್ತಿರುವುದಕ್ಕೆ ಅಕ್ರಮ ಗೋಮಾತೆ ಸಾಗಾಣಿಕೆಗೆ ಸಾಕ್ಷಿಯಾಗಿದೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಬಳಿ ಗುಪ್ತಮಾಹಿತಿ ವಿಭಾಗವಿದ್ದರೂ,ಸಾಮಾನ್ಯ ನಾಗರೀಕರಿಗೆ ಸಿಕ್ಕಿರುವ ಮಾಹಿತಿ ಪೊಲೀಸ್ ಇಲಾಖೆಗೆ ಸಿಕ್ಕಿಲ್ಲವೆಂದರೆ ಹೇಗೆ ಸಾಧ್ಯ,ಪೊಲೀಸ್ ಇಲಾಖೆ ಅಕ್ರಮ ಖಸಾಯಿಖಾನೆಗಳ ಮೇಲೆ ಕ್ರಮಕೈಗೊಳ್ಳಬೇಕು.ಹಿಂದೂ ಕಾರ್ಯಕರ್ತರ ಜೊತೆಗೆ ನಾವೆಲ್ಲ ಇದೇವೆ.ಹಿಂದೂಗಳ ಮೇಲಿನ ದಾಳಿ ಖಂಡಿಸಿ ತಿಪಟೂರು ಬಂದ್ ಗೆ ಕರೆನೀಡಲಾಗಿದ್ದು. ಸಾರ್ವಜನಿಕರು ಬೆಂಬಲಿಸಬೇಕು ಎಂದು ತಿಳಿಸಿದರು.
ಮಾಜಿ ನಗರಸಭೆ ಸದಸ್ಯ ವಿಜಯಲಕ್ಷ್ಮಿ ಮಾತನಾಡಿ ಮಾವಿನತೋಪಿನಲ್ಲಿ ಅನ್ಯಕೋಮಿನ ಕೆಲ ವ್ಯಕ್ತಿಗಳು ಹಿಂದೂ ಅನಗತ್ಯ ತೊಂದರೆ ನೀಡುತ್ತಿದ್ದಾರೆ. ಮಾವಿನತೋಪಿನಲ್ಲಿ ಅಕ್ರಮವಾಗಿ ಮಸೀದಿ ನಿರ್ಮಾಣಕ್ಕೆ ಮುಂದಾಗಿದ್ದು ಕ್ರಮಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು.
ಪೊಲೀಸ್ ಅಡಿಷನಲ್ ಎಸ್ಪಿ ಪುರುಷೋತ್ತಮ್ ಮಾತನಾಡಿ ಎರಡು ಕೋಮಿನ ಯುವಕರು ಗಲಾಟೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಾನೇ ಖದ್ದಾಗಿ ಬಂದುಬಸ್ತ್ ನೋಡಿಕೊಳ್ಳುತ್ತಿದ್ದರೂ.ಪೊಲೀಸರಿಗೆ ಮಾಹಿತಿ ನೀಡದೆ, ನೈತಿಕ ಪೊಲೀಸ್ ಗಿರಿ ತೋರಿರುವುದು ಸರಿಯಲ್ಲ.ಕೆಲವು ವ್ಯಕ್ತಿಗಳು ಅನಗತ್ಯ ವಿವಾದ ಸೃಷ್ಠಿಮಾಡಲು ಯತ್ನಿಸುತ್ತಿದ್ದಾರೆ.ನಮಗೆ ಕಾನೂನು ಸುವ್ಯವಸ್ಥೆ ಮುಖ್ಯ.ಯಾರೇ ತಪ್ಪು ಮಾಡಿದರೂ,ಸೂಕ್ತ ಕಾನೂನು ಕ್ರಮತೆಗೆದುಕೊಳ್ಳುವುದ್ದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಮಡೇನೂರು ವಿನಯ್.ಬಿಜೆಪಿ ಅಧ್ಯಕ್ಷ ಸತೀಶ್.ಬಾಳೆಕಾಯಿ ನಟರಾಜ್ .ಮಂಜುನಾಥ್. ಬಜರಂಗದಳ ಮುಖಂಡ ನಾಗೇಶ್.ಕೃಷ್ಣ ಮುಂತ್ತಾದವರು ಉಪಸ್ಥಿತರಿದರು
.
ವರದಿ:ಮಂಜುನಾಥ್ ಹಾಲ್ಕುರಿಕೆ