ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕೊಲೆ ರಂಗಾಪುರ ರಸ್ತೆ ಆರೋಪಿಗಳ ಚಿಕ್ಕಕೊಟ್ಟಗಿಹಳ್ಳಿ ಗ್ರಾಮದ ಬಳಿ ನಡೆದಿದ್ದ ಗುಜರಿ ವ್ಯಾಪಾರಿಯ ಕೊಲೆ ಆರೋಪಿಗಳನ್ನ ಬಂಧಿಸುವಲ್ಲಿ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ದಿನಾಂಕ : 04.03.2026 ರಂದು ತಿಪಟೂರು ತಾಲ್ಲೂಕು ರಂಗಾಪುರ ಸಮೀಪದ ಚಿಕ್ಕಕೊಟ್ಟಿಗೆಹಳ್ಳಿ ಬಳಿ ತಿಪಟೂರು ನಗರ ಗಾಂಧೀನಗರದ ವಾಸಿ ಗುಜರಿ ವ್ಯಾಪಾರ ಮಾಡಿಕೊಂಡಿದ್ದ ಮನ್ಸೂರ್ ಪಾಷ ಬಿನ್ ಲೇಟ್ ಸಜ್ಜಾದ್ , 31 ವರ್ಷ , ರವರನ್ನು ಯಾರೂ ದುಷ್ಕರ್ಮಿಗಳು ಯಾವುದೋ ಕಾರಣಕ್ಕಾಗಿ ಕೊಲೆಮಾಡಿದ ಬಗ್ಗೆ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ನಂ. 23/2026 ಕಲಂ 103 BNS ರೀತ್ಯಾ ಪ್ರಕರಣ ದಾಖಲಾಗಿತ್ತು .
ಈ ಪ್ರಕರಣವನ್ನು ಪತ್ತೆಹಚ್ಚಲು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್.ಕೆ.ವಿ . ರವರ ಮಾರ್ಗದರ್ಶನದಲ್ಲಿ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಸಿ.ಗೋಪಾಲ್ ಮತ್ತು ಪುರುಷೋತ್ತಮ.ಎಂ.ಎಲ್.ರವರ ನೇತೃತ್ವದಲ್ಲಿ , ತಿಪಟೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಎಂ.ಹೆಚ್.ಉಮೇಶ್ ರವರ ಮಾರ್ಗಸೂಚನೆ ಮೇರೆಗೆ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಐ. ರವರಾದ ವೆಂಕಟೇಶ್.ಸಿ ಮತ್ತು ಚಂದ್ರಶೇಖರ್.ಟಿ.ಕೆ . ಸಿ.ಪಿ.ಐ. , ತಿಪಟೂರು ಗ್ರಾ , ರವಿಕುಮಾರ್ ಪಿ.ಐ. ತಿಪಟೂರು ನಗರ , ರಾಮಣ್ಣ.ಸಿ , ಪಿ.ಎಸ್.ಐ. , ನಾಗರಾಜು ಪಿ.ಎಸ್.ಐ. ಕೆ.ಬಿ.ಕ್ರಾಸ್ , ಎ.ಎಸ್.ಐ.ಗಳಾದ ಉಸ್ಮಾನ್ ಸಾಬ್ , ಚಿಕ್ಕಲಕ್ಕೇಗೌಡ , ಹೆಡ್‌ಕಾನ್ಸ್‌ಸ್ಟೇಬಲ್‌ಗಳಾದ ಮೋಹನ್ ಕುಮಾರ್ , ಕಾನ್‌ಸ್ಟೇಬಲ್‌ಗಳಾದ ಲೋಕೇಶ್ , ಚೇತನ್ , ದಕ್ಷಿಣಮೂರ್ತಿ , ಇಮ್ರಾನ್ ಹಾಗೂ ತುಮಕೂರು ಜಿಲ್ಲಾ ಪೊಲೀಸ್ ಕಛೇರಿಯ ನರಸಿಂಹರಾಜು , ರಮೇಶ್ ಒಳಗೊಂಡ ತಂಡದವರು ಪ್ರಕರಣದ ಆರೋಪಿತರ ಪತ್ತೆ ಕಾರ್ಯವನ್ನು ಕೈಗೊಂಡು ಆರೋಪಿತರಾದ
ಧನರಾಜ್ ಹೆಚ್.ಟಿ. @ ಧನು ಬಿನ್ ತಿಮ್ಮಪ್ಪ , 24 ವರ್ಷ , ಹುಚ್ಚನಹಟ್ಟಿ ಗ್ರಾಮ , ಅಜ್ಜಂಪುರ ತಾಲ್ಲೂಕು , ಚಿಕ್ಕಮಗಳೂರು ವೆಂಕಟೇಶ ಬಿನ್ ರವಿ , 24 ವರ್ಷ , ದಾಸರಹಟ್ಟಿ ಗ್ರಾಮ , ಅಜ್ಜಂಪುರ ತಾಲ್ಲೂಕು , ಚಿಕ್ಕಮಗಳೂರು
ದರ್ಶನ್ ಬಿನ್ ಪ್ರಕಾಶ್ , 24 ವರ್ಷ , ದಾಸರಹಟ್ಟಿ ಗ್ರಾಮ , ಅಜ್ಜಂಪುರ ತಾಲ್ಲೂಕು , ಚಿಕ್ಕಮಗಳೂರು,ಫರ್ಜಾನ ಕೋಂ ಮನ್ಸೂರ್ ಪಾಷ , 31 ವರ್ಷ , ಗಾಂಧಿನಗರ , ತಿಪಟೂರು ಟೌನ್ .ರವರನ್ನು ದಸ್ತಗಿರಿ ಮಾಡಿ ಕೃತ್ಯಕ್ಕೆ ಉಪಯೋಗಿಸಿದ ಬೊಲೆರೋ ಪಿಕಪ್ ವಾಹನ , ಪಲ್ಸರ್ ಬೈಕ್ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ . ಆರೋಪಿತರ ಪತ್ತೆ ಕಾರ್ಯಕ್ಕೆ ಸಹಕರಿಸಿ ತಂಡದಲ್ಲಿದ್ದರವರನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಾನ್ಯ ಅಶೋಕ್ ಕೆ.ವಿ. , ಐ.ಪಿ.ಎಸ್ . ರವರು ಪ್ರಶಂಸಿರುತ್ತಾರೆ .
ಬಲ್ಲಮೂಲಗಳ ಮಾಹಿತಿಯಂತೆ ಗಾಂಧೀನಗರದ ಗುಜರಿ ವ್ಯಾಪಾರಿಯಾಗಿದ ಮನ್ಸೂರ್ ಕೊಲೆಯ ಹಿಂದೆ ಪತ್ನಿಯ ಮಾಜಿ ಪ್ರಿಯತಮನೆ ಭಾಗಿಯಾಗಿರುವುದು ನಗರದ ಜನತೆ ಬೆಚ್ಚಿಬೀಳುವಂತೆ ಮಾಡಿದೆ.ಗುಜರಿ ವ್ಯಾಪಾರಿಯಾಗಿದ ಮನ್ಸೂರ್ 2 ತಿಂಗಳ ಹಿಂದೆ ಮದುವೆಯಾಗಿದ,ಪತ್ನಿ ಫರ್ಜಾನ್ ನಡುವೆ ಕೊಲೆ ಆರೋಪಿ ಧನರಾಜ್ ಪ್ರೀತಿ ಇತ್ತು ಎನ್ನಲಾಗಿದ್ದು.ಫರ್ಜಾನ್ ಮತ್ತು ಧನರಾಜ್ ತಿಪಟೂರಿನ ಕಾಫಿಶಾಪ್ ನಲ್ಲಿ ಟೀ ಕುಡಿಯುವಾಗ ನೋಡಿದ ಕೆಲವು ಫರ್ಜಾನ್ ಕಡೆ ಹುಡುಗರು ಧನರಾಜ್ ಮೇಲೆ ಹಲ್ಲೆಮಾಡಿದರು ಎನ್ನಲಾಗಿದೆ.ನಂತರ ಫರ್ಜಾನ್ ಹಾಗೂ ಮನ್ಸೂರ್ ನಡುವೆ ವಿವಾಹವಾಗಿದ್ದು.ಆದರೆ ಮದುವೆಯ ನಂತರವೂ ಫರ್ಜಾನ್ ಮತ್ತು ಧನರಾಜ್ ನಡುವೆ ಪ್ರೀತಿ ಮುಂದುವರೆದಿದೆ ಎನ್ನಲಾಗಿದೆ.ಇದೇ ವಿಷಯವಾಗಿ ಹೊಂಚುಹಾಕಿದ್ದ ಧನರಾಜ್ ರಂಗಾಪುರ ಬಳಿ ಗುಜರಿ ವ್ಯಾಪಾರಕ್ಕೆಂದು ಕರೆದು ಕೊಲೆಮಾಡಿದ್ದಾನೆ ಎನ್ನುವ ಮಾತುಗಳು ಕೇಳಿಬರುತ್ತಿವೆ…..
ವರದಿ :ಮಂಜುನಾಥ್ ಹಾಲ್ಕುರಿಕೆ