KALPATHARU KRANTHI

ತಿಪಟೂರು ತಹಸೀಲ್ದಾರ್ ಭರ್ಜರಿ ಕಾರ್ಯಾಚರಣೆ ಲಕ್ಷಾಂತರ ಮೌಲ್ಯದ ನೂರಾರು ಕ್ವಿಂಟಲ್ ರಾಗಿ ವಶ.

Spread the love

ತಿಪಟೂರು : ತಹಸೀಲ್ದಾರ್ ಮೋಹನ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ನ್ಯಾಪೇಡ್ ಕೇಂದ್ರದಲ್ಲಿ ಮಾರಾಟಕ್ಕೆ ತರುತ್ತಿದ್ದ ಲಕ್ಷಾಂತರ ಮೌಲ್ಯದ ನೂರಾರು ಕ್ವಿಂಟಲ್ ರಾಗಿ ಮೂಟೆಗಳನ್ನ ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ನಗರದ ಬಂಡೀಹಳ್ಳಿ ಗೇಟ್ ಬಳಿ ಅಕ್ರಮವಾಗಿ ಲಾರಿ ಮೂಲಕ ತರಿಸಿಕೊಂಡು.ಟ್ರ್ಯಾಕ್ಟರ್ ಗೆ ತಂಬಿಕೊಂಡು ನಂತರ ರೈತರ ಹೆಸರಿನಲ್ಲಿ ರಾಗಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡುವ ಉದೇಶ ಹೊಂದಲಾಗಿದೆ ಎನ್ನಲಾಗಿದ್ದು.ಮಧ್ಯಾಹ್ನ 12.ಗಂಟೆ ಸಮಯದಲ್ಲಿ ಅಕ್ರಮವಾಗಿ ರಾಗಿ ತಂದು ಲಾರಿಯಿಂದ ಟ್ರ್ಯಾಕ್ಟರ್ ಗೆ ತುಂಬುತ್ತಿರುವ ಬಗ್ಗೆ ಮಾಹಿತಿ ಬಂದಿದೆ.ತಕ್ಷಣ ತಹಸೀಲ್ದಾರ್ ಮೋಹನ್ ಕುಮಾರ್ ಆಹಾರ ತನಿಖಾಧಿಕಾರಿಗಳಾದ ರೇಣುಕಾ ಪ್ರಸಾದ್. ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ದಾಳಿನಡೆಸಿ .ಲಾರಿ ಹಾಗೂ ಟ್ರ್ಯಾಕ್ಟರ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಹಾಲ್ಕುರಿಕೆ ಗ್ರಾಮದ ಸತೀಶ್ ಬಿನ್ ಮಲ್ಲಯ್ಯ ಎಂಬುವ ವ್ಯಕ್ತಿ ಮಾರಾಟ ಮಾಡುವ ಉದೇಶದಿಂದ ದಾವಣಗೆರೆಯಿಂದ ಲಾರಿ ಮೂಲಕ ರಾಗಿ ತರಿಸಿದ ಎನ್ನಲಾಗಿದ್ದು. ಅಕ್ರಮವಾಗಿ ಮಾರಾಟ ಮಾಡುವ ಉದೇಶ ಹೊಂದಿದ್ದ ಎನ್ನಲಾಗಿದೆ.ಅಕ್ರಮವಾಗಿ ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಿದರೆ ಅರ್ಹ ರೈತರಿಗೆ ತೊಂದರೆಯಾಗುತ್ತದೆ ಎನ್ನುವುದು ರೈತರ ಆರೋಪವಾಗಿದ್ದು.ಇದೇ ರೀತಿ ಅಕ್ರಮವಾಗಿ ಅನೇಕಜನ ದಳ್ಳಾಳಿಗಳು ರಾಗಿಯನ್ನ ಹೊರಜಿಲ್ಲೆ ಹಾಗೂ ರಾಜ್ಯದಿಂದ ತಂದು ಸರ್ಕಾರದ ಬೆಂಬಲ ಬೆಲೆಯೋಜನೆ ಅಡಿ ರಾಗಿ ಖರೀದಿ ಕೇಂದ್ರದಲ್ಲಿ ಮಾರಾಟಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದು.ಸರ್ಕಾರ ಸೂಕ್ತ ತನಿಖೆಮಾಡಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.
ಮಾಧ್ಯಮದೊಂದಿಗೆ ಮಾತನಾಡಿದ ತಹಸೀಲ್ದಾರ್ ಮೋಹನ್ ಕುಮಾರ್. ಬಂಡೀಹಳ್ಳಿ ಗೇಟ್ ಬಳಿ ಅಕ್ರಮವಾಗಿ ಲಾರಿಯಿಂದ ಟ್ರ್ಯಾಕ್ಟರ್ ಗೆ ರಾಗಿ ತುಂಬುತ್ತಿರುವ ಮಾಹಿತಿಬಂದಿದ್ದು.ತಕ್ಷಣ ದಾಳಿ ಮಾಡಿದ್ದಾಗ ಹಾಲ್ಕುರಿಕೆ ಗ್ರಾಮದ ಸತೀಶ್ ಬಿನ್ ಮಲ್ಲಯ್ಯ ರಾಗಿ ಮಾರಾಟಕ್ಕೆ ದಾವಣಗೆರೆ ಯಿಂದ ತಂದಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿದ್ದು.ಟ್ರ್ಯಾಕ್ಟರ್ ಹಾಗೂ ಲಾರಿಯನ್ನ ಮಾಲು ಸಮೇತ ವಶಪಡಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ತನಿಖೆ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು.

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version