KALPATHARU KRANTHI

ರಾಗಿ ಖರೀದಿ ಕೇಂದ್ರಕ್ಕೆ ಶಾಸಕರ ಭೇಟಿ : ಜೇಷ್ಟತೆ ಆಧಾರದಲ್ಲಿ ರಾಗಿ ಖರೀದಿಗೆ ಶಾಸಕ ಕೆ.ಷಡಕ್ಷರಿ ಸೂಚನೆ :

Spread the love

ತಿಪಟೂರು: ಎಪಿಎಂಸಿ ರಾಗಿ ಖರೀದಿ ಕೇಂದ್ರದಲ್ಲಿ ಜೆಷ್ಟತೆ ಪಟ್ಟಿಇಲ್ಲದೇ ಅಡ್ಡಾದಿಡಿಯಾಗಿ ರಾಗಿಖರೀದಿಸುತ್ತಿದೆ ಎಂದು ರಾಗಿ ಖರೀದಿ ಕೇಂದ್ರದಲ್ಲಿ ರೈತರ ನಡುವೆ ಗಲಾಟೆಗೆ ಕಾರಣವಾಗಿತ್ತು.

ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕ ಕೆ.ಷಡಕ್ಷರಿ ರೈತರೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು, ರಾಗಿ ಕೇಂದ್ರದಲ್ಲಿ ಜೇಷ್ಠತಾ ಪಟ್ಟಿಯಂತೆ ಯಾವುದೇ ರಾಗಿ ಖರೀದಿ ಮಾಡಬೇಕು, ನಿಯಮ ಉಲ್ಲಂಗನೆ ಮಾಡಿದರೆ ನಿಮ್ಮ ತಲೆದಂಡ ಮಾಡಲಾಗುವುದು ಎಂದು ರಾಗಿ ಖರೀದಿ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಎಚ್ಚರಿಕೆ ನೀಡಿದರು.


ರಾಗಿ ಖರೀದಿ ಅಧಿಕಾರಿ ರುದ್ರಪ್ಪ ಮಾತನಾಡಿ ಜೆಷ್ಠತೆ ಪಟ್ಟಿಯನ್ನ ಪ್ರತಿ ಮೂರುದಿನಕೊಮ್ಮ ಪ್ರಕಟಣೆ ಮಾಡಲಾಗುತ್ತದೆ. ಅದರಂತೆ ಖರೀದಿ ಕೇಂದ್ರಕ್ಕೆ ಬರುವ ರೈತರಿಂದ ರಾಗಿ ಖರೀದಿ ಮಾಡುತ್ತೇವೆ ಎಂದು ತಿಳಿಸಿದರು.ನಮ್ಮ ಮನೆಯವರೇ ಬರಲಿ ಯಾರೇ ಬರಲಿ ಯಾವುದೇ ಕಾರಣಕ್ಕೂ ಜೇಷ್ಠತೆ ಹೊರತು ಪಡಿಸಿ ರಾಗಿ ಖರೀದಿ ಮಾಡಬಾರದು,ನಿಮಗೆ ಪೊಲೀಸ್ ಭದ್ರತೆ ಬೇಕಿದರೆ ಪೊಲೀಸರನ್ನ ನಿಯೋಜನೆ ಮಾಡಲು ಸೂಚನೆ ನೀಡುತ್ತೇನೆ. ರಾಗಿ ಖರೀದಿ ಕೇಂದ್ರದಲ್ಲಿ ಸಿಸಿ ಕ್ಯಾಮರ ಅಳವಡಿಸಿ ಎಂದು ಖರೀದಿ ಅಧಿಕಾರಿಗಳಿಗೆ ಸೂಚಿಸಿದರು.
ಕೆಲರೈತರು ಜೆಷ್ಠತೆ ಇಲ್ಲದೆ,ರಾಗಿಯನ್ನ ಖರೀದಿ ಕೇಂದ್ರಕ್ಕೆ ತಂದಿದ್ದೇವೆ,ಮೂರ್ನಾಲ್ಕು ದಿನಗಳಿಂದ ಕಾಯುತ್ತಿದ್ದೇವೆ ನಮ್ಮ ರಾಗಿ ಖರೀದಿಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು.ಈಗ ನಿಮ್ಮ ರಾಗಿ ಖರೀದಿ ಮಾಡಿದರೆ ನಾಳೆ ಬೇರೆ ರೈತರು ಜೇಷ್ಠತೆ ಇಲ್ಲದೇ ರಾಗಿ ತಂದಾಗ ಖರೀದಿ ಮಾಡಬೇಕಾಗುತ್ತದೆ.ಆದರಿಂದ ಯಾವುದೆ ಕಾರಣಕ್ಕೂ ಜೇಷ್ಠತೆ ಇಲ್ಲದೇ ರಾಗಿ ಖರೀದಿ ಮಾಡುವುದಿಲ್ಲ ಎಂದು ಕಡ್ಡಿತುಂಡಾದಂತೆ ಹೇಳಿದರು
ತಾಲ್ಲೋಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್.ರಾಗಿ ಖರೀದಿ ಅಧಿಕಾರಿ ರುದ್ರಪ್ಪ..ಮುಂತ್ತಾದವರು ಉಪಸ್ಥಿತರಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version