KALPATHARU KRANTHI

ತಿಪಟೂರು ಕಲ್ಪತರು ಕ್ರೀಡಾಂಗಣ ಅಭಿವೃದ್ದಿ ಹಾಗೂ ಕ್ರೀಡಾವಸತಿ ಶಾಲೆ ಕಾಮಗಾರಿಗೆ ಶಾಸಕ ಕೆ.ಷಡಕ್ಷರಿ ಗುದ್ದಲಿಪೂಜೆ

Spread the love

ತಿಪಟೂರು:ನಗರದ ಕಲ್ಪತರು ಕ್ರೀಡಾಂಗಣದಲ್ಲಿ 1.25ಕೋಟಿ ವೆಚ್ಚದ ಟೆನ್ನಿಸ್ ಕೋರ್ಟ್ ನಿರ್ಮಾಣ ಕಾಮಗಾರಿ,ಕ್ರೀಡಾಂಗಣ ಅಭಿವೃದ್ದಿ ಸೇರಿದಂತೆ ನಗರದ ಲಿಂಗದಹಳ್ಳಿ ಬಳಿ ಕ್ರೀಡಾವಸತಿ ಶಾಲೆ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಷಡಕ್ಷರಿ ಭೂಮಿ ಪೂಜೆ ನೆರವೇರಿಸಿದರು.


ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಟೆನ್ನಿಸ್ ಕೋರ್ಟ್ ನಿರ್ಮಾಣಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಕೆ.ಷಡಕ್ಷರಿಯವರು ತಿಪಟೂರು ಅಭಿವೃದ್ದಿಗೆ ಅಗತ್ಯವಾದ ಯೋಜನೆಗಳನ್ನ ರೂಪಿಸಲಾಗುತ್ತಿದೆ.ನಗರದಲ್ಲಿ ಸುಸಜ್ಜಿತ ಈಜುಕೊಳ ನಿರ್ಮಾಣ ಮಾಡಲಾಗಿದೆ, ಒಳಾಂಗಣ ಕ್ರೀಡಾಂಗಣ ಕಾಮಗಾರಿ ಹಾಗೂ ವಾಲಿಬಾಲ್ ಕೋರ್ಟ್ ಕಾಮಗಾರಿ ಪ್ರಗತಿಯಲ್ಲಿದೆ.ಕಲ್ಪತರು ಕ್ರೀಡಾಂಗಣ ಅಭಿವೃದ್ದಿಗಾಗಿ ಕೆಲೋ ಇಂಡಿಯಾ ಯೋಜನೆ ಅಡಿ ಸಿಂಥಟಿಕ್ ಟ್ರ್ಯಾಕ್ ನಿರ್ಮಾಣ ಕಾಮಗಾರಿ ಹಾಗೂ ಪೆವಿಲಿಯನ್ ನಿರ್ಮಾಣ ಕಾಮಗಾರಿಗೆ 7ಕೋಟಿ ಅನುದಾನ ಮುಂಜೂರಾಗಿದ್ದು,ಸದ್ಯದಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು. ಲಿಂಗದಹಳ್ಳಿ ಗೇಟ್ ಬಳಿ ಕ್ರೀಡಾ ವಸತಿ ಶಾಲೆ ನಿರ್ಮಾಣಕ್ಕೆ 2ಎಕರೆ 35ಗುಂಟೆ ಜಮೀನಿ ಮಂಜೂರು ಮಾಡಲಾಗಿದ್ದು 1.25ಲಕ್ಷ ಅನುದಾನ ಒದಗಿಸಲಾಗಿದ್ದು.ತಾಲ್ಲೋಕಿನ ಅಭಿವೃದ್ದಿಗೆ ಅಗತ್ಯವಾದ ಮೂಲಸೌಕರ್ಯಕ್ಕೆ ಆಧ್ಯತೆ ನೀಡಲಾಗಿದೆ.ನಮ್ಮ ತಾಲ್ಲೋಕಿನ ಕ್ರೀಡಾಪಟುಗಳಿಗೆ ಅನುಕೂಲವಾಗುವ ದೃಷ್ಠಿಯಿಂದ ಬಾಲಕ ಮತ್ತು ಬಾಲಕಿಯರ ಕ್ರೀಡಾವಸತಿ ಶಾಲೆ ಸಹ ಆರಂಭ ಮಾಡಲಾಗುತ್ತಿದೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಮಾಜಿ ನಗರಸಭೆ ಸದಸ್ಯರಾದ ಪ್ರಸನ್ನ ಕುಮಾರ್ .ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್.ಗುತ್ತಿಗೆದಾರರಾದ ತೀರ್ಥರಾಜು.ಶಂಕರ್ .ಕೇಶವಮೂರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version