KALPATHARU KRANTHI

ಗಿರವಿಯಿಟ್ಟ ಚಿನ್ನ ಬಿಡಿಸಿಕೊಡುವುದಾಗಿ ಸ್ನೇಹಿತನ ಕತ್ತುಕೊಯ್ದ ಕಿರಾತಕ: ಹೊನ್ನವಳ್ಳಿಯಲ್ಲಿ ದುರ್ಘಟನೆ .ಆರೋಪಿ ಬಂಧನಕ್ಕೆ ಬಲೆ ಬೀಸಿದ ಪೊಲೀಸರು.

Spread the love

ತಿಪಟೂರು:ಅಡವಿಟ್ಟ ಚಿನ್ನವನ್ನ ಕಡಿಮೆ ಬೆಲೆಗೆ ಬಿಡಿಸಿಕೊಡುತ್ತೇನೆ ಎಂದು ನಂಬಿಸಿ ಸ್ನೇಹಿತನ ಕತ್ತುಕೊಯ್ದು ಕೊಲೆ ಮಾಡಿರುವ ಘಟನೆ ತಾಲ್ಲೋಕಿನ ಹೊನ್ನವಳ್ಳಿ ಗ್ರಾಮದ ಪಕ್ಕದ ಕೋಡಿಹಳ್ಳಿ ಬಳಿ ನಡೆದಿದೆ.
ಚಿಕ್ಕಮಂಗಳೂರು ಜಿಲ್ಲೆ ಕಡೂರು ತಾಲ್ಲೋಕು, ಬೀರುರು ವಾಸಿ ಪುಟ್ಟರಾಜು 38 ವರ್ಷ ಮೃತ ದುರ್ದೈವಿ ಎಂದು ಗುರ್ತಿಸಲಾಗಿದ್ದು.
ಹೊನ್ನವಳ್ಳಿ ಗ್ರಾಮದ ಕೋಡಿಹಳ್ಳಿ ವಾಸಿಯಾಗಿದ್ದ ಷಫಿ ಉಲ್ಲಾ ಹೊನ್ನವಳ್ಳಿ ಗ್ರಾಮದಲ್ಲಿ ಗಿರಿವಿಗಿಟ್ಟ ವಡೆವೆ ಹರಾಜಿಗೆ ಬಂದಿಗೆ ಕಡಿಮೆ ಬೆಲೆಗೆ ಬಿಡಿಸಿಕೊಡುತ್ತೇನೆ ಎಂದು ನಂಬಿಸಿ ಸ್ನೇಹಿತ ಪುಟ್ಟರಾಜು ರವರನ್ನ ಬೀರೂರಿನಿಂದ ಹೊನ್ನವಳ್ಳಿ ಕೋಡಿಹಳ್ಳಿಗೆ ಕರೆತಂದು ಕತ್ತುಕೊಯ್ದು ಕೊಲೆ ಮಾಡಿದ ಆರೋಪಿ ಎಂದು ಗುರ್ತಿಸಲಾಗಿದು.
ಹೊನ್ನವಳ್ಳಿ ಗ್ರಾಮದಲ್ಲಿ ಹುಣಸೇಹಣ್ಣಿನ ವ್ಯಾಪಾರ .ಅಡಿಕೆ ವ್ಯಾಪಾರ,ಮಾಡಿಕೊಂಡಿದ ಷಫಿ ಉಲ್ಲಾ ವ್ಯಾಪಾರದಲ್ಲಿ ನಷ್ಟ ಅನುಭವಿಸಿ ಊರು ಬಿಟ್ಟುಹೋಗಿ ಬಿರೂರಿನಲ್ಲಿ ಕಬಾಬ್ ಅಂಗಡಿ ನಡೆಸುತ್ತಿದ್ದ ಎನ್ನಲಾಗಿದ್ದು. ಮೃತ ಪುಟ್ಟರಾಜು ಬಾರ್ ಬೆಂಡಿಂಗ್ ಕೆಲಸಗಾರನಾಗಿದ್ದು. ಸಣ್ಣಪುಟ್ಟ ಫೈನಾನ್ಸ್ ವ್ಯಾವಹಾರ ನಡೆಸುತ್ತಿದ್ದ ಎನ್ನಲಾಗಿದೆ. ಪುಟ್ಟರಾಜು ಯಿಂದ ಸಣ್ಣಪುಟ್ಟ ಹಣಕಾಸಿನ ಸಹಾಯ ಪಡೆದು,ಸ್ನೇಹ ಸಂಪಾದಿಸಿದ ಷಪಿ ಉಲ್ಲಾ ಹೊನ್ನವಳ್ಳಿ ಗ್ರಾಮದಲ್ಲಿ ಗಿರಿವಿಗಿಟ್ಟ ಚಿನ್ನವನ್ನ ಕಡಿಮೆ ಬೆಲೆಗೆ ಬಿಡಿಸಿಕೊಡುತ್ತೇನೆ.ಹಣತೆಗೆದುಕೊಂಡು ಬಾ ಎಂದು ನಂಬಿಸಿದ್ದಾನೆ.ಷಪಿ ಉಲ್ಲಾ ಮಾತು ನಂಬಿದ ಪುಟ್ಟರಾಜು ತನ್ನದೆ ಬೈಕ್ ನಲ್ಲಿ ಷಪಿ ಉಲ್ಲಾ ನನ್ನ ಕರೆದುಕೊಂಡು ಹೊನ್ನವಳ್ಳಿ ಕೋಡಿಹಳ್ಳಿಗೆ ಬಂದಿದ್ದಾನೆ. ಆದರೆ ಕೋಡಿಹಳ್ಳಿ ಬಳಿ ಅಪರೀಚಿತ ಶವ ಪತ್ತೆಯಾಗಿದ್ದು ಹೊನ್ನವಳ್ಳಿ ಭಾಗದಲ್ಲಿ ಭಾರೀ ಆತಂಕ ಸೃಷ್ಠಿ ಮಾಡಿತ್ತು.ಸ್ಥಳತನಿಖೆ ಮಾಡಿ ತನಿಖೆ ಕೈಗೊಂಡ ಪೊಲೀಸರಿಗೆ ಮೃತಪಟ್ಟ ವ್ಯಕ್ತಿ ಬೀರುರು ನಿವಾಸಿ ಪುಟ್ಟರಾಜು ಎಂದು ತಿಳಿದಿದ್ದು. ಆರೋಪಿ ಬಂಧನಕ್ಕೆ ತುಮಕೂರು ಎಸ್ಪಿ ಆಶೋಕ್ ಹಾಗೂ ಡಿವೈಎಸ್ಪಿ ಜಯಲಕ್ಷ್ಮಿ ಶಿವಾನಂದ್ .ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕರಾದ ಚಂದ್ರಶೇಖರ್.ಹೊನ್ನವಳ್ಳಿ ಸಬ್ ಇನ್ಪೆಕ್ಟರ್ ರಾಜೇಶ್.ಚಂದ್ರಕಾಂತ್ ನೇತೃತ್ವದ ತಂಡ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದೆ

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version