ತಿಪಟೂರು: ನಗರದ ವಿವಿಬಡಾವಣೆಗಳಲ್ಲಿ ರಸ್ತೆ ಚರಂಡಿ ಸೇರಿದಂತೆ 90ಲಕ್ಷ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಕೆ.ಷಡಕ್ಷರಿ ಗುದ್ದಲಿಪೂಜೆ ನೆರವೇರಿಸಿದರು ನಗರದ ವಾರ್ಡ್ ನಂಬರ್ 14ರಲ್ಲಿ 12ಲಕ್ಷ ವೆಚ್ಚದ ರಸ್ತೆ ಹಾಗೂ ಚರಂಡಿ ಅಭಿವೃದ್ದಿ ಕಾಮಗಾರಿ.ವಾರ್ಡ್ ನಂಬರ್ 15 ರಲ್ಲಿ 10ಲಕ್ಷ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿ.ಇಂದಿರಾ ನಗರ ವಾರ್ಡ್ 18 ರ ಅಡ್ಡರಸ್ತೆ 3ಮತ್ತು 4ರಲ್ಲಿ 17ಲಕ್ಷ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿ,ತಿಪಟೂರು ಗಾಂಧೀನಗರ ವಾರ್ಡ್ ನಂಬರ್ 20 ರ 4 ನೇ ಮುಖ್ಯ ರಸ್ತೆ ಯಲ್ಲಿ 8.20 ಲಕ್ಷ ರೂಪಾಯಿ ಮತ್ತು 3ಕ್ರಾಸ್ ವಿಕಲಚೇತನರು ವಾಸ ಮಾಡುವ ಪ್ರದೇಶದಲ್ಲಿ 8.50 ಲಕ್ಷ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿ.ವಾರ್ಡ್ ನಂಬರ್ 23ರ ಕೆ.ಕೆ ಕಾನ್ವೆಂಟ್ ಹತ್ತಿರ 5 ಲಕ್ಷ ವೆಚ್ಚದ ಡೆಕ್ ಮತ್ತು ಸ್ಲ್ಯಾಬ್ ನಿರ್ಮಾಣ ಕಾಮಗಾರಿ.ಗೊರಗೊಂಡನಹಳ್ಳಿ ಕಾರ್ಲೊನಿ ವಾರ್ಡ್ ನಂ31ರಲ್ಲಿ 11ಲಕ್ಷದ ಮತ್ತು 15 ಲಕ್ಷ ವೆಚ್ಚದ ರಸ್ತೆ ಹಾಗೂ ಚರಂಡಿ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿ ಪೂಜೆಸಲ್ಲಿಸಿದರು.

ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿದ ಶಾಸಕ ಕೆ.ಷಡಕ್ಷರಿ ಮಾತನಾಡಿ ನಗರದಲ್ಲಿ ಮೂಲಸೌಕರ್ಯಗಳ ಅಭಿವೃದ್ದಿಗೆ ಆಧ್ಯತೆ,ನೀಡಲಾಗಿದೆ ನಗರದ ವಿಕಲಚೇತನರು ವಾಸವಾಗಿರುವ ವಾರ್ಡ್ ಗಳಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮತ್ತು ವಿಕಲಚೇತನರು ಮನೆಗಳ ಬಳಿ ರ್ಯಾಂಪ್ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ.ನಗರದಲ್ಲಿ ಸ್ವಚ್ಚತೆ ಹಾಗೂ ಕುಡಿಯುವ ನೀರಿಗೆ ಅಧ್ಯತೆ ನೀಡಲಾಗಿದ್ದು.ನಗರದ ಯಾವ ವಾರ್ಡ್ ಗಳಿಗೂ ನೀರಿನ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ.ತೊಂದರೆ ಇರುವ ಕಡೆ ಬೋರ್ವೆಲ್ ಕೊರೆಸಿ ನೀರು ಸರಬರಾಜು ಮಾಡಲಾಗುತ್ತಿದೆ.
120ಕೋಟಿ ವೆಚ್ಚದ ನಗರಕ್ಕೆ ಕುಡಿಯುವ ನೀರಿನ ಯೋಜನೆ ಶೀಘ್ರದಲ್ಲಿಯೇ ಪ್ರರಂಭಿಸಲಾಗುತ್ತದೆ.ಅಲ್ಲಿಯವರೆಗೂ ನಗರದ ನಾಗರೀಕರು ಸಹಕಾರ ನೀಡಬೇಕು.ಮನೆಮನೆಗೂ ಕುಡಿಯುವ ನೀರು ಒದಗಿಸಿ ಮೀಟರ್ ಅಳವಡಿಸಿ ನೀವು ಬಳಸಿದ ನೀರಿಗೆ ಶುಲ್ಕವಿಧಿಸಲಾಗುತ್ತದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ,ಮಾಜಿ ಸದಸ್ಯರಾದ ಅಶ್ವಿನಿ ದೇವರಾಜು.ನಗರಸಭೆ ಮಾಜಿ ಅಧ್ಯಕ್ಷ ಟಿ.ಎನ್ ಪ್ರಕಾಶ್.ಮುಖಂಡರಾದ ವಿನಾಯಕ್.ಮುನ್ನಾ.ಎಇಇ ಸುನೀಲ್ ಮುಂತ್ತಾದವರು ಉಪಸ್ಥಿತರಿದರು.
ವರದಿ :ಮಂಜುನಾಥ್ ಹಾಲ್ಕುರಿಕೆ