ತಿಪಟೂರು : ತಾಲ್ಲೋಕಿನ ಮಾದಿಹಳ್ಳಿ ಬಿ.ಹೆಚ್ ರಸ್ತೆಗೆ ಹೊಂದಿಕೊಂಡಿರುವ ಕೋಟ್ಯಂತರ ಬೆಲೆಬಾಳುವ ಜಮೀನನ್ನು ಕೇವಲ 25 ಲಕ್ಷಕ್ಕೆ ಟ್ರಸ್ಟ್ ಅಧ್ಯಕ್ಷ ಡಾ// ಎಸ್.ಕೆ. ಷಡಕ್ಷರಿ ಮಾರಾಟ ಮಾಡಿದ್ದಾರೆ ಎಂದು ಟ್ರಸ್ಟ್ ನ ಸದಸ್ಯರು ಹಾಗೂ ನಿವೃತ್ತ ಡಿವೈಎಸ್ಪಿ ಎಸ್.ಕೆ ಬಸವರಾಜು ಆರೋಪಿಸಿದ್ದಾರೆ.
ನಗರದ ಖಾಸಗೀ ಹೋಟೆಲ್ ನಲ್ಲಿ ಸುದ್ದಿಘೋಷ್ಠಿ ಉದೇಶಿಸಿ ಮಾತನಾಡಿದ ಎಸ್.ಕೆ ಬಸವರಾಜು ಕೇವಲ 25 ಲಕ್ಷ ಹಣಕ್ಕೆ ಪಡೆದಿರುವ ಕಬ್ಬಳಿಯ ಆದಿಚುಂಚನಗಿರಿ ಮಠದ ಶ್ರೀ ಶಿವಪುತ್ರ ಸ್ವಾಮೀಜಿಯವರಿಗೆ ಕನಕ ಸಮುದಾಯ ಟ್ರಸ್ಟ್ ನ ಅಧ್ಯಕ್ಷ ಡಾ//ಎಸ್ ಕೆ ಷಡಕ್ಷರಿ ಅಕ್ರಮವಾಗಿ ಜಮೀನು ಪರಬಾರ ಮಾಡಿದ್ದಾರೆ.ಸ್ವಾಮೀಜಿ ಕೂಡಲೇ ಜಮೀನನ್ನು ಹಿಂದಿರುಗಿಸಬೇಕು.
ತಿಪಟೂರು ತಾಲ್ಲೋಕಿನ ಕುರುಬರ ಸಮುದಾಯಕ್ಕೆ ಅನುಕೂಲವಾಗಲಿ ಎಂದು ನಮ್ಮ ತಂದೆ-ತಾಯಿಯವರರಾದ ಕಳಸೇಗೌಡ,ನಿಂಗಮ್ಮ ರವರ ಸ್ಮರಣಾರ್ಥವಾಗಿ ನಮ್ಮ ಕುಟುಂಬ ದಾನ ಮಾಡಿದ ಜಮೀನನ್ನು ನನ್ನ ತಮ್ಮ ಶಿವಪುರದ ಡಾ.ಎಸ್.ಕೆ. ಷಡಕ್ಷರಿ ಕೋಟ್ಯಂತರ ರೂ ಬೆಲೆ ಬಾಳುವ ಜಮೀನನ್ನು ಕೇವಲ 25 ಲಕ್ಷಕ್ಕೆ ಶುದ್ಧ ಕ್ರಯ ರೂಪದಲ್ಲಿ ಚನ್ನರಾಯಪಟ್ಟಣ ತಾಲೂಕಿನ, ಕಬ್ಬಳಿ ಆದಿಚುಂಚನಗಿರಿ ಮಠದ ಶ್ರೀ ಶಿವಪುತ್ರ ಸ್ವಾಮೀಜಿ ರವರಿಗೆ ಮಾರಾಟ ಮಾಡಿದ್ದಾರೆ,

ಅರಸೀಕೆರೆ ಮುಖ್ಯ ರಸ್ತೆಯಲ್ಲಿನ ಮಾದಿಹಳ್ಳಿ ಗ್ರಾಮದ ಸರ್ವೆ ನಂಬರ್ 245/2a ರಲ್ಲಿ 1-15 ಗುಂಟೆ ಜಮೀನನ್ನು ಕಳಸೇಗೌಡರ ಕುಟುಂಬ ಸೇರಿದಂತೆ ಕೆಲವು ದಾನಿಗಳಿಂದ ಸಂಗ್ರಹಿಸಲ್ಪಟ್ಟ ಹಣದಿಂದ 1992ರಲ್ಲಿ ಜಮೀನನ್ನು ಖರೀದಿ ಮಾಡಿದ್ದು ತದನಂತರ ಈ ಜಮೀನನ್ನು ಶ್ರೀ ಕನಕ ಸಮುದಾಯ ಟ್ರಸ್ಟ್ ಮತ್ತು ಶ್ರೀ ಕನಕ ಸೇವಾ ಸಂಸ್ಥೆ ಮೂಲಕ ನೋಂದಣಿ ಮಾಡಿಕೊಂಡು, ಈ ಟ್ರಸ್ಟ್ ನ ಅಧ್ಯಕ್ಷರಾಗಿ ನಮ್ಮ ಕುಟುಂಬದ ಡಾ.ಎಸ್.ಕೆ. ಷಡಕ್ಷರಿ ನಿರ್ವಹಿಸಿಕೊಂಡು ಬರುತ್ತಿದ್ದು, ಟ್ರಸ್ಟ್ ಪದಾಧಿಕಾರಿಗಳು ಒಂದೆಡೆ ಸೇರಿ ಸುಮಾರು ಐದು ವರ್ಷಗಳ ಹಿಂದೆ ತಾಲೂಕು ಕುರುಬರ ಸಮುದಾಯದ ಸಂಘಕ್ಕೆ ನೀಡುತ್ತೇವೆ. ಸಮುದಾಯ ಭವನಕ್ಕೆ ನಮ್ಮ ತಂದೆ, ತಾಯಿಯವರಾದ ಕಳಸೇಗೌಡ ನಿಂಗಮ್ಮ ನವರ ಹೆಸರಿನಲ್ಲಿ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಹಾಗೂ ಬಡವರಿಗೆ ಅನುಕೂಲವಾಗಲಿ ಹಾಗೂ ಅಭಿವೃದ್ಧಿಗೆ ಸಹಕಾರಿಯಾಗಲಿ ಎಂದು ತಿಳಿಸಿ ಜಮೀನನ್ನು ನೀಡಲು ಒಪ್ಪಿಗೆ ಸೂಚಿಸಿ ಜಮೀನಿನ ಜಾಗದಲ್ಲಿ ರಾಜ್ಯ, ಜಿಲ್ಲೆ ಮತ್ತು ತಾಲೂಕು ಮುಖಂಡರುಗಳ ಹಾಗೂ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ನಾಮಫಲಕವನ್ನು ಅಳವಡಿಸಿರುತ್ತೇವೆ. ಇದಾದ ಬೆಳವಣಿಗೆ ನಂತರ ತಾಲೂಕ್ ಸಂಘದ ಪದಾಧಿಕಾರಿಗಳು ಸುಮಾರು ವರ್ಷಗಳಿಂದ ಎಸ್.ಕೆ. ಷಡಕ್ಷರಿ ರವರಿಗೆ ತಾಲೂಕು ಸಂಘದ ಹೆಸರಿಗೆ ಜಮೀನನ್ನು ವರ್ಗಾವಣೆ ಮಾಡಿಕೊಡುವಂತೆ ಕೇಳಿದರು ಸಂಘದ ಹೆಸರಿಗೆ ಮಾಡಿಕೊಟ್ಟಿರುವುದಿಲ್ಲ .ಆದರೆ ದಿನಾಂಕ 02/08/2025 ರಂದು ಕಬ್ಬಳಿಯ ಶ್ರೀ ಶಿವಪುತ್ರ ಸ್ವಾಮೀಜಿಗೆ, ಕೇವಲ 25 ಲಕ್ಷಕ್ಕೆ ಮಾರಾಟ ಮಾಡಿ ಕುರುಬ ಸಮುದಾಯಕ್ಕೆ ಮತ್ತು ಕಳಸೇಗೌಡರ ಕುಟುಂಬಕ್ಕೆ ಮೋಸ, ವಂಚನೆ ಮಾಡಿದ್ದಾರೆ. ಇದನ್ನ ಅರಿತ ನಾನು ಕೂಡಲೇ ನ್ಯಾಯಾಲಯದ ಮೊರೆ ಹೋಗಿ, ಮಾರಾಟ/ಪರಭಾರೆ ಮಾಡದಂತೆ ತಡೆಯಾಜ್ಞೇ ಆದೇಶ ತಂದಿರುತ್ತೇನೆ. ಈಗಲಾದರೂ ಸಮುದಾಯದ ಮತ್ತು ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರುಗಳು ಈತನ ವಿರುದ್ಧ ಇನ್ನು ಹೆಚ್ಚಿನ ಕಾನೂನು ಕ್ರಮ ಜರುಗಿಸುವಂತೆ, ಹೋರಾಟ ಮಾಡಬೇಕು ಹಾಗೂ ತಾಲೂಕು ಸಂಘಕ್ಕೆ ಜಮೀನನ್ನು ವಾಪಸ್ ತೆಗೆದುಕೊಳ್ಳುವಂತೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಕುರುಬರ ಸಂಘದ ಖಜಾಂಚಿ ಹೆಚ್.ಸಿದ್ದರಾಮಯ್ಯ,ನಿವೃತ್ತ ಕಂದಾಯಾಧಿಕಾರಿ ಹಾಗೂ ಟ್ರಸ್ಟ್ ಕಾರ್ಯದರ್ಶಿ ಎಸ್.ಹೆಚ್. ತಮ್ಮಯ್ಯ ಮತ್ತು ಟ್ರಸ್ಟ್ ಸದಸ್ಯ ಹರೀಶ್ ಹಾಜರಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ