ತಿಪಟೂರು :ನಗರದ ಹೊರಹೊಲಯದಲ್ಲಿ ಆಹಾರ ಅರಸಿ ಬಂದ ಚಿರತೆ ಬಾವಿಗೆ ಬಿದ್ದಿರುವ ಘಟನೆ ನಡೆದಿದೆ
ಬಾವಿಯಲ್ಲಿ ಚಿರತೆ ಚೀರಾಟ ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ
ತಿಪಟೂರು ನಗರದ ಗಾಂಧೀನಗರ ಹೊರಹೊಲಯದ ಬೆಸ್ಕಾಂ ಇಲಾಖೆಯ ನೌಕೆ ಕಾರ್ತಿಕ್ ಅವರ ತೋಟದಲ್ಲಿ ಇರುವ ಬಾವಿಗೆ ಚಿರತೆ ಬಿದ್ದಿದೆ.
ಬೆಳಗ್ಗೆ ಎಂದಿನಂತೆ ತೋಟಕ್ಕೆ ಹೋದ ಕಾರ್ತಿಕ್ ಕುಟುಂಬಸ್ಥರು ಚಿರತೆ ಚೀರಾಟ ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಬಾವಿಯಲ್ಲಿ ಬಿದ್ದಿರುವ ಚಿರತೆ ರಕ್ಷಣೆಗೆ ಸಾರ್ವಜನಿಕರು ಒತ್ತಾಯಿಸಿದ್ದು.
ಸ್ಥಳಕ್ಕೆ ಅರಣ್ಯಾಧಿಕಾರಿ ಮಧು. ಹಾಗೂ ವಲಯ ಅರಣ್ಯ ಸಂರಕ್ಷಣಾಧಿಕಾರಿ ಭರತ್ ನೇತೃತ್ವದ ಅರಣ್ಯಾಧಿಕಾರಿಗಳ ತಂಡ ಬಾವಿಯಲ್ಲಿ ಬಿದ್ದಿರುವ ಚಿರತೆ ಮೇಲೆತ್ತುವ ಕಾರ್ಯದಲ್ಲಿ ತೊಡಗಿದ್ದು.
ಚಿರತೆ ಬಾವಿಗೆ ಬಿದ್ದಿರುವ ವಿಷಯ ತಿಳಿದು ಸಾವಿರಾರು ಜನ ಕಾರ್ತಿಕ್ ರವರ ತೋಟದ ಬಳಿ ಜಮಾಯಿಸುತ್ತಿದ್ದು.
ಜನರ ಕೂಗಾಟದಿಂದ ಚಿರತೆಗಾಬರಿಯಾಗದಂತೆ ತಡೆಯಲು ಜನರನ್ನ ದೂರಕಳಿಸುವ ಕೆಲಸದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ತೊಡಗಿದ್ದಾರೆ.
ವರದಿ :ಮಂಜುನಾಥ್ ಹಾಲ್ಕುರಿಕೆ
