ತಿಪಟೂರು: ಹಿಂದೂಸಮಾಜ ತನ್ನ ವಿಶಿಷ್ಠ ಸಂಪ್ರದಾಯ ಪರಂಪರೆಗಳ ಮೂಲಕ ಜಗತ್ತಿನ ಶಕ್ತಿಯಾಗಿ ಬೆಳೆದಿದೆ,ಬಹುತ್ವದಲ್ಲಿ ಏಕತೆ ಕಾಣುವುದೆ,ಭಾರತೀಯತೆ ಎಂದು ಬಳ್ಳೆಕಟ್ಟೆ -ಶಿಡ್ಲಹಳ್ಳಿ ಶ್ರೀಗುರುಕುಲಾನಂದಾಶ್ರಮ ಮಠದ ಪೀಠಾಧ್ಯಕ್ಷರಾದ ಶ್ರೀಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಮಹಾ ಸ್ವಾಮೀಜಿ ತಿಳಿಸಿದರು..

ಹಿಂದೂಸಮಾಜೋತ್ಸವ ಸಮಿತಿ ಶ್ರೀ ವಿವೇಕಾನಂದ ವಸತಿಯಿಂದ ತಿಪಟೂರು ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಿ ದೇವಾಲಯದ ಆವರಣದಲ್ಲಿ ಆಯೋಜಿಸಿದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯವಹಿಸಿದ ಶ್ರೀಗಳು ಮಾತನಾಡಿ ಹಿಂದೂ ಧರ್ಮ ಜಗತ್ತಿಗೆ ತನ್ನದೇ ಆದ ವಿಶಿಷ್ಟ ವ್ಯಾಖ್ಯಾನವನ್ನು ನೀಡಿದೆ. ಗಾಳಿ, ನೀರು, ಬೆಂಕಿ ಎಲ್ಲೆಡೆ ಒಂದೇ ಶಕ್ತಿಯಂತೆ ಕಾರ್ಯನಿರ್ವಹಿಸುವಂತೆ, ಮತ ವೈಯಕ್ತಿಕವಾದರೂ ಧರ್ಮ ಸಾರ್ವತ್ರಿಕವಾಗಿದೆ. ಹಿಂದೂ ಸಮಾಜದಲ್ಲಿ ಸಂಘಟನೆ ಅಗತ್ಯವಿದ್ದು, ಭಾರತ ಬಹುತ್ವವನ್ನು ಒಪ್ಪಿಕೊಂಡಿರುವ ರಾಷ್ಟ್ರವಾಗಿದೆ. ಸಂವಿಧಾನವೂ ಬಹುತ್ವವನ್ನು ಅಂಗೀಕರಿಸಿದ್ದು ನಮ್ಮ ಸಂವಿಧಾನವೇ ಭಾರತದ ಶಕ್ತಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾರ್ಗಸೂಚಿ ಭಾಷಣ ಮಾಡಿದ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರಮುಖ್ ಮಾಚೇನಹಳ್ಳಿ ಪೃಥ್ವಿಕುಮಾರ್ ಜಗತ್ತಿನ ಸುಮಾರು 70 ಕ್ಕೂ ಹೆಚ್ಚು ದೇಶಗಳಲ್ಲಿ ಆರ್‌ಎಸ್‌ಎಸ್ ಸಂಘ ಕಾರ್ಯನಿರ್ವಹಿಸುತ್ತಿದ್ದು, ವ್ಯಕ್ತಿಯಿಂದ ಸಮಾಜವನ್ನು ಕಟ್ಟುವ ಹಾಗೂ ಸಮಾಜದಿಂದ ದೇಶವನ್ನು ಕಟ್ಟುವ ಉದ್ದೇಶದೊಂದಿಗೆ ಸಂಘಟಿತವಾಗಿ ಕೆಲಸ ಮಾಡಲಾಗುತ್ತಿದೆ, ರೈತರ ಜೊತೆಗೂಡಿ ವಿವಿಧ ಜಾತಿಗಳ ನಡುವೆ ಸಾಮರಸ್ಯ ಬೆಳೆಸಿ, ಎಲ್ಲರನ್ನು ಒಗ್ಗೂಡಿಸಿಕೊಂಡು ರಾಷ್ಟ್ರ ನಿರ್ಮಾಣದ ನಿಟ್ಟಿನಲ್ಲಿ ಸಂಘ ಕಾರ್ಯನಿರ್ವಹಿಸುತ್ತಿದೆ,
ಸಂಘದ ವಿಚಾರವು ಸಮಾಜದ ವಿಚಾರವಾಗಿದ್ದು, ಸಮಾಜದಲ್ಲಿರುವ ಎಲ್ಲಾ ವರ್ಗಗಳ ಜನರ ಒಳಿತನ್ನು ಕಾಪಾಡುವುದು ಸಂಘದ ಉದ್ದೇಶವಾಗಿದೆ. ಹಿಂದೆ ವಂದೇ ಮಾತರಂ ಗೀತೆಯನ್ನು ಹಾಡಿದರೆ ಅನ್ಯ ಧರ್ಮದವರ ಭಾವನೆಗೆ ದಕ್ಕೆ ಉಂಟಾಗುತ್ತದೆ ಎಂದು ಟೀಕಿಸಿದ ಕಾಂಗ್ರೇಸ್ ಇಂದು ಗೀತೆಯನ್ನು ಹಾಡಲು ಪ್ರಾರಂಭಿಸಿ ಕಾಲಕ್ಕೆ ತಕ್ಕಂತೆ ಬದಲಾಗುವ ನಿಲುವುಗಳ ಬಗ್ಗೆ ಇಂದಿನ ರಾಜಕೀಯ ಪಕ್ಷಗಳ ದ್ವಂದ್ವ ನಿಲುವು ದುರ್ಲಾಭಕರವಾಗಿದೆ. ಸಂಘವು ಎಂದೂ ಸಹ ವ್ಯಕ್ತಿಯನ್ನು ಪೂಜಿಸದೆ, ಮಹಾಪುರುಷರು ಹಾಗೂ ಭಾರತ ಮಾತೆಯ ಘೋಷಣೆಗಳ ಮೂಲಕ ಸಮಾಜವನ್ನು ಏಕತೆಯ ದಾರಿಗೆ ಕರೆದೊಯ್ಯಲಾಗುತ್ತಿದೆ
ಆರ್‌ಎಸ್‌ಎಸ್ ಸಂಘವು ಸ್ವದೇಶಿ, ಪ್ಲಾಸ್ಟಿಕ್ ನಿರ್ಮೂಲನೆ, ನಾಗರಿಕ ಶಿಷ್ಟಾಚಾರ, ಪರಿಸರ ಸಂರಕ್ಷಣೆ ಸೇರಿದಂತೆ ಪಂಚ ಪರಿವರ್ತನೆ ಯಾತ್ರೆಯ ಮೂಲಕ ಸಮಾಜವನ್ನು ಸಂಘಟಿಸುವ ಕಾರ್ಯದಲ್ಲಿ ನಿರತವಾಗಿದೆ. ಸಮಾಜವನ್ನು ಕಟ್ಟುವ ಮತ್ತು ಒಗ್ಗೂಡಿಸುವ ಮೂಲಕ ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ರಕ್ಷಣೆ ಅಗತ್ಯವಿದೆ ಎಂದು ಅವರು ಹೇಳಿದರು.
ಇಂದಿನ ಮಕ್ಕಳು ಮತ್ತು ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಮುಗ್ನರಾಗಿದ್ದು, ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಹಿರಿಯರ ಕರ್ತವ್ಯವಾಗಿದೆ. ತಂದೆ ತಾಯಿಯಂದಿರು ಮಕ್ಕಳ ಮೊಬೈಲ್ ಬಳಕೆಯನ್ನು ನಿಯಂತ್ರಿಸಲು ಕಷ್ಟಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಹೊರಬಂದು ಸಮಾಜ ಕಟ್ಟುವ ಕೆಲಸಕ್ಕೆ ಯುವ ಪೀಳಿಗೆಯನ್ನು ತೊಡಗಿಸಬೇಕಾಗಿದೆ ಎಂದು ಅವರು ಹೇಳಿದರು.
ಮಾತೃ ಸಂಘಟನೆಯ ಲಕ್ಷ್ಮಿಸತ್ಯನಾರಾಯಣ ಮಾತನಾಡಿ ಭಾರತ ದೇಶದಲ್ಲಿ ಹುಟ್ಟಿರುವುದು ನಮ್ಮೆಲ್ಲರ ಪೂರ್ವಜನ್ಮದ ಪುಣ್ಯವಾಗಿದೆ. ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆಗೆ ಪೂಜ್ಯನೀಯ ಸ್ಥಾನ ನೀಡಲಾಗಿದೆ. ಎಲ್ಲಿ ಮಹಿಳೆಗೆ ಗೌರವ ಕೊಡಲಾಗುತ್ತದೋ ಅಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ ಎಂದು ಹೇಳಿದರು.
ಈ ದೇಶದ ಮಾತೆಯರು ಸುಸಂಸ್ಕೃತ ಸಮಾಜ ನಿರ್ಮಿಸಿದ್ದಾರೆ. ಗರ್ಭದಲ್ಲಿದ್ದಾಗಲೇ ಸಂಸ್ಕಾರ ಅತ್ಯಂತ ಮಹತ್ವವಾದದ್ದು. ಮಾತೃಶಕ್ತಿ ಮಕ್ಕಳಲ್ಲಿ ಸಂಬAಧಗಳ ಮೌಲ್ಯ, ಸಂಸ್ಕಾರ ಮತ್ತು ಸುರಕ್ಷತೆ ಕುರಿತು ತಿಳಿಸಿಕೊಡಬೇಕು ಎಂದರು.
ಶೋಭಾ ಯಾತ್ರೆಯು ಕೆಂಪಮ್ಮ ದೇವಾಲಯದ ಬಳಿಯಿಂದ ಆರಂಭವಾಗಿ, ದೊಡ್ಡಪೇಟೆ ಮಾರ್ಗವಾಗಿ ಸಾಗಿ ಸಿಂಗ್ರಿ ನಂಜಪ್ಪ ವೃತ್ತದ ಮೂಲಕ ಕಲ್ಲೇಶ್ವರ ದೇವಾಲಯದ ಬಳಿ ತಲುಪಿ ನಂತರ ಸಭಾ ಕಾರ್ಯಕ್ರಮ ನಡೆಯಿತು.
ಶೋಭಾ ಯಾತ್ರೆಯಲ್ಲಿ ಕೆಂಪಮ್ಮ ದೇವರ ಮೆರವಣಿಗೆ, ಬಸವ ಮೆರವಣಿಗೆ, ಪೂರ್ಣ ಕುಂಭ ಸ್ವಾಗತದೊಂದಿಗೆ ಭಾರತ ಮಾತೆಯ ಮೆರವಣಿಗೆ, ವೀರಗಾಸೆ ಕುಣಿತ, ವೀರಭದ್ರನ ಕುಣಿತ ಸೇರಿದಂತೆ ಸಾಂಸ್ಕೃತಿಕ ನೃತ್ಯಗಳು ನಡೆದವು. ಮಕ್ಕಳು ವಿವಿಧ ರಾಷ್ಟ್ರ ನಾಯಕರು ಮತ್ತು ಸಾಂಸ್ಕೃತಿಕ ವೇಷಭೂಷಣ ಧರಿಸಿ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು ಮೆರವಣಿಗೆಗೆ ವಿಶೇಷ ಮೆರುಗು ನೀಡಿದರು.
ಕಾರ್ಯಕ್ರಮದಲ್ಲಿ ಶೋಭಯಾತ್ರೆಯ ಜವಾಬ್ದಾರಿಯನ್ನು ಸಮಾಜೋತ್ಸವ ಸಮಿತಿಯ ಮುಖಂಡ ಲೋಕೇಶ್ವರ್ ,ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ್ ರವೀಂದ್ರತಗ್ಗಿನಮನೆ,ಖ್ಯಾತವೈದ್ಯರಾದ ಶ್ರೀಧರ್, ಶ್ರೀ ಸತ್ಯಗಣಪತಿ ಸೇವಾಸಮಿತಿ ಟ್ರಸ್ಟ್ ಅಧ್ಯಕ್ಷ ಶ್ರೀಕಂಠ ಪ್ರಸನ್ನ ಕುಮಾರ್, ಸೊಪ್ಪುಗಣೇಶ್, ತರಕಾರಿ ಗಂಗಾಧರ್, ಮಡೆನೂರು ವಿನಯ್‌ಕುಮಾರ್, ಬಾಳೇಕಾಯಿ ನಟರಾಜು, ಬುಲೆಟ್ ಕೃಷ್ಣ, ಶ್ರೀಧರ್ ಲಕ್ಕವಳ್ಳಿ, ರಾಜೀವ ಲೋಚನ, ಸಿರಿಗಂದ ಗುರು, ಓಹಿಲಗಂಗಾಧರ್, ಮನ್ವಿತಾ ಸುಹಾಸ್, ಪ್ರಭಾ ವಿಶ್ವನಾಥ್, ರಾಮ್‌ಮೋಹನ್, ಸಂಧ್ಯಾಕಿರಣ್, ಬಿಸಲೇಹಳ್ಳಿ ಜಗದೀಶ್, ಪದ್ಮಾತಿಮ್ಮೇಗೌಡ, ಚನ್ನಾಂಬಿಕಾ, ಮುರಳೀಧರ್. ಆನಂದ್, ಶಿವಕುಮಾರ್, ಚಂದ್ರಶೇಖರ್, ಉಮೇಶ್, ಶಿವಕುಮಾರ್, ಮಲ್ಲಿಕಾರ್ಜುನ್, ಸುರೇಶ್, ಉದಯ್‌ಕುಮಾರ್, ಶ್ರೀಕಂಠ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ