KALPATHARU KRANTHI

ರಾಜ್ಯಸರ್ಕಾರ ಭ್ರಷ್ಟಚಾರದಲ್ಲಿ ಪ್ರಗತಿ ಸಾಧಿಸಿದೆ :ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ

Spread the love

ತಿಪಟೂರು: ಕರ್ನಾಟಕದಲ್ಲಿ ಕಾಂಗ್ರೇಸ್ ಸರ್ಕಾರ ಭ್ರಷ್ಟಚಾರದಲ್ಲಿ ತೊಡಗಿದೆ,ಎಲ್ಲಾಕ್ಷೇತ್ರದಲ್ಲೂ ಭ್ರಷ್ಟಚಾರ ತಾಂಡವವಾಡುತ್ತಿದೆ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.


ನಗರದ ಎಸ್.ವಿ.ಪಿ ಕಾಲೇಜು ಆವರಣದಲ್ಲಿ ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್ ನೇತೃತ್ವದಲ್ಲಿ ಆಯೋಜಿದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿದ ಅವರು ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಜನರ ಕಣ್ಣೊರೆಸೊ ಕೆಲಸ ಮಾಡುತ್ತಿದೆ.ನಿರೋದ್ಯೋಗಿಗಳಿಗೆ ಉದ್ಯೋಗ ಸೃಷ್ಠಿ ಮಾಡಲು ವಿಫಲವಾಗಿದ್ದು.ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ.ಕೃಷಿಯಲ್ಲಿ ವಿನೂತನ ತಂತ್ರಜ್ಞಾನ ಬಳಕೆಯಾಗಬೇಕು.ಇಸ್ರೇಲ್ ಮಾದರಿ ಕೃಷಿ ಅಭಿವೃದ್ದಿ ಪಡಿಸಬೇಕು.ಯುವಕರು ಸ್ಥಳೀಯವಾಗಿ ಉದ್ಯೋಗದಾತರಾಗುವ ಜೊತೆಗೆ ಕೃಷಿ ಲಾಭದಾಯಕ ಕ್ಷೇತ್ರವಾದರೆ.ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಸಾಧ್ಯ.ರಾಜ್ಯಸರ್ಕಾರ ಜನರ ಸಮಸ್ಯೆ ದೂರಮಾಡುವ ಬದಲು.ಭ್ರಷ್ಟಚಾರದಲ್ಲಿ ತೊಡಗಿದೆ.ಅಬ್ಕಾರಿ ಹಗರಣ ಸೇರಿದಂತೆ ಹಲವಾರು ಹಗರಣಗಳಲ್ಲಿ ರಾಜ್ಯಸರ್ಕಾರ ಭಾಗಿಯಾಗಿದ್ದು. ಗೃಹಮಂತ್ರಿಗಳಿಗೆ ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಚಾರದ ಮಾಹಿತಿಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ತಾವು ಯಾವ ಕ್ಷೇತ್ರ ವಿಧಾನಸಭೆ ಸ್ಪರ್ಧೆಮಾಡುತ್ತೀರ ಅನೋ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ನಿಖಿಲ್ ಕುಮಾರಸ್ವಾಮಿ ನಾನು ಈಗಲೇ ಯಾವ ಕ್ಷೇತ್ರ ಆಯ್ಕೆಮಾಡಿಕೊಳ್ಳೋದು ಚುನಾವಣೆ ವೇಳೆ ತೀರ್ಮಾನ ಮಾಡುತ್ತೇನೆ.ಈಗಲೇ ಕ್ಷೇತ್ರ ಬಹಿರಂಗಗೊಳಿಸಿದರೆ ವಿರೋಧಿಗಳು ಬೇರೆ ಕಾರ್ಯತಂತ್ರ ಹೆಣೆಯುತ್ತಾರೆ ಎಂದು ತಿಳಿಸಿದರು.


ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್ ಮಾತನಾಡಿ ರಾಜ್ಯಸರ್ಕಾರ ಹಾಗೂ ತಾಲ್ಲೋಕಿನ ಶಾಸಕರು ಜನರ ಸಮಸ್ಯೆ ನಿವಾರಣೆ ಮಾಡಲು ವಿಫಲವಾಗಿದ್ದಾರೆ.ತಾಲ್ಲೋಕಿನಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಭೂಸ್ವಾಧೀನಕ್ಕೆ 41ನೋಟಿಫಿಕೇಷನ್ ಮಾಡಲಾಗಿದ್ದು ಶಾಸಕರ ದೂರದೃಷ್ಟಿಯಿಂದ ನಿರುದ್ಯೋಗ ಹೆಚ್ಚಾಗಲು ಕಾರಣವಾಗಿದೆ.ನೀರಾವರಿ ಸಮಸ್ಯೆಯಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.ಎಂದು ಆಕ್ರೋಶ ವ್ತಕ್ತಪಡಿಸಿದರು
ಕಾರ್ಯಕ್ರಮದಲ್ಲಿ ತುರುವೇಕೆರೆ ಶಾಸಕ ಎಂ.ಟಿ ಕೃಷ್ಣಪ್ಪ.ಮಾಜಿ ಶಾಸಕ ಹೆಚ್.ನಿಂಗಪ್ಪ.ಜಿಲ್ಲಾಧ್ಯಕ್ಷ ಅಂಜಿನಪ್ಪ.ಆರ್.ಎಸ್.ಎಸ್ ಜಿಲ್ಲಾ ಪ್ರಮುಖರಾದ ರವೀಂದ್ರ ಕುಮಾರ್.ಸಮ್ಮೂಹ ಸಮೂಹಸಂಪನ್ಮೂಲ ವ್ಯಕ್ತಿಗಳಾದ ರಂಗನಿಧಿ.ಜೆಡಿಎಸ್ ತಾಲ್ಲೋಕು ಅಧ್ಯಕ್ಷ ಶಿವಸ್ವಾಮಿ ಮತ್ತಿಘಟ್ಟ.ಮಾಜಿ ನಗರಸಭೆ ಸದಸ್ಯೆ ರೇಖಾ ಅನೂಫ್.ಸುದರ್ಶನ್.ಹುಣಸೇಘಟ್ಟ ಪ್ರಕಾಶ್. ಮುಂತ್ತಾದವರು ಉಪಸ್ಥಿತರಿದರು
ಉದ್ಯೋಗ ಮೇಳದಲ್ಲಿ ಸುಮಾರು 70ಕ್ಕೂ ಹೆಚ್ಚು ಪ್ರತಿಷ್ಟತ ಕಂಪನಿಗಳು ಭಾಗವಹಿಸಿದ್ದು. ಸುಮಾರು 800ಜನ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲಾಗಿದ್ದು.ಸ್ಥಳದಲ್ಲಿಯೇ ನಿಖಿಲ್ ಕುಮಾರಸ್ವಾಮಿ ನೇಮಕಾತಿ ಪತ್ರವಿತರಣೆ ಮಾಡಿದರು

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version