:ನಗರದ 14 ನೇ ವಾರ್ಡ್ ವ್ಯಾಪ್ತಿಯ ಕಂಚಾಘಟ್ಟ ಸರ್ಕಾರಿ ಶಾಲೆಯಲ್ಲಿ ಶೌಚಾಲಯದ ಅವಶ್ಯಕತೆ ಇದ್ದ ಕಾರಣ 14 ನೇ ವಾರ್ಡ್ ನ ನಗರಸಭೆ ಮಾಜಿ ಸದಸ್ಯರು ಹಾಗೂ ಕೆಪಿಸಿಸಿ ಸದಸ್ಯರಾದ ವಿ. ಯೋಗೇಶ್ ಅವರು ಶೌಚಾಲಯವನ್ನು ತಮ್ಮ ಸ್ವಂತ ಹಣದಲ್ಲಿ ನಿರ್ಮಿಸಿ ಕೊಡುಗೆಯಾಗಿ ನೀಡಿದರು.

ಶೌಚಾಲಯ ಕೊಡುಗೆ ನೀಡಿದ ಕೆಪಿಸಿಸಿ ಸದಸ್ಯ ವಿ.ಯೋಗೇಶ್ ರವರು
ಶಾಲೆಯ ಸಿಬ್ಬದಿಹಾಗೂ ಪೋಷಕರ ಒತ್ತಾಸೆಯ ಮೇರೆಗೆ ಇಂದು ಯೋಗೇಶ್ ಅವರ ತಾಯಿ ಹಾಗೂ ಕುಟುಂಬದೊಡನೆ ಆಗಮಿಸಿ ಗಣರಾಜ್ಯೋತ್ಸವ ಆಚರಣೆ ಹಾಗೂ ಶೌಚಾಲಯದ ಉದ್ಘಾಟನೆ ನೆರವೇರಿಸಿದರು.
ಸಂದರ್ಭದಲ್ಲಿ ಶಾಲೆ ಸಿಬ್ಬಂದಿ ಹಾಗೂ ಪೋಷಕರು ಮತ್ತು ಮಾಜಿ ಎಪಿಎಂಸಿ ನಿರ್ದೇಶಕ ಮಲ್ಲೇನಹಳ್ಳಿ ಕಾಂತರಾಜು ವಿದ್ಯಾನಗರ ಬಾಲಾಗಣಪತಿ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು.
ವರದಿ: ಮಂಜುನಾಥ್ ಹಾಲ್ಕುರಿಕೆ