KALPATHARU KRANTHI

ತಿಪಟೂರಿನ ಕಲ್ಕೆರೆ ಗ್ರಾಮದಲ್ಲಿ ಸಾರ್ವಜನಿಕ ರಸ್ತೆ ನಿರ್ಮಾಣಕ್ಕೆ ಶಕಿಬ್ ಎಂಬ ವ್ಯಕ್ತಿಯಿಂದ ವಿರೋಧ: ಸೂಕ್ತ ಕ್ರಮಕ್ಕೆ ಗ್ರಾಮಸ್ಥರ ಒತ್ತಾಯ.

Spread the love

ತಿಪಟೂರು:ತಾಲ್ಲೋಕಿನ ಕಲ್ಕೆರೆ ಗ್ರಾಮದಲ್ಲಿ ಸಾರ್ವಜನಿಕ ರಸ್ತೆ ನಿರ್ಮಾಣಕ್ಕೆ ಶಕಿಬ್ ಎಂಬ ವ್ಯಕ್ತಿ ತೊಂದರೆ ಮಾಡುತ್ತಿದ್ದು, ತಹಶೀಲ್ದಾರ್ ಕೂಡಲೇ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಬೇಕು ಇಲ್ಲವಾದರೆ ಸಾರ್ವಜನಿಕರೊಂದಿಗೆ ಕಚೇರಿ ಮುಂಭಾಗ ಪ್ರತಿಭಟನೆ ಮಾಡುವುದಾಗಿ ಕಲ್ಕೆರೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಕಲ್ಕೆರೆಯ ಸರ್ವೆ ನಂಬರ್ 46 ರ ಜಾಗ ಜಾಮಿಯಾ ಮಸೀದಿಯ ಜಾಗವಾಗಿದ್ದು, ಈ ಜಾಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ.ಶಕಿಬ್ ಎಂಬತಾ ಈ ಜಾಗ ನಮ್ಮದೆಂದು ತಂಟೆ ತಕರಾರು ಮಾಡುತ್ತಿದ್ದು, ಘನ ನ್ಯಾಯಾಲಯ ಮಸೀದಿ ಜಾಗವೆಂದು ಆದೇಶ ಹೊರಡಿಸಿದೆ. ಸ್ಥಳೀಯ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ಪ್ರಕರಣ ದಾಖಲಾಗಿ, ದಾಖಲಾತಿ ಪರಿಶೀಲಿಸಿ ಈ ಜಾಗ ಮಸೀದಿಗೆ ಸೇರಿದೆ ಎಂದು ತಿಳಿಸಿ, ಬರವಣಿಗೆ ಮೂಲಕ ತಿಳಿಸಿದ್ದಾರೆ.ಶಾಲಾ ಮಕ್ಕಳು, ರೈತರು ಮತ್ತು ಸಾರ್ವಜನಿಕರಿಗೆ ಓಡಾಡದಂತೆ ಸರ್ಕಾರಿ ರಸ್ತೆಗೆ ಗುಂಡಿ ಅಗೆದು ನಿರ್ಬಂಧ ಹೇರಲಾಗುತ್ತಿದ್ದು,
ಶಕಿಬ್ ಮತ್ತು ರಮೇಶ್ ಎಂಬುವವರು ಸರ್ಕಾರಿ ಕಾಮಗಾರಿಗೆ ಅಡ್ಡಗಾಲು ಹಾಕಿ ತೊಂದರೆ ನೀಡುತ್ತಿದ್ದಾರೆ ಎಂದು ಗ್ರಾಮಸ್ಥ ನೂರುಲ್ಲಾ ಸಾಬ್ ಆರೋಪ ಮಾಡಿದ್ದಾರೆ.ಕಾಮಗಾರಿ ನಡೆಸುತ್ತಿರುವ ಸ್ಥಳ ಮಾರಾಟ ಮಾಡುವಂತಿಲ್ಲ. ಸರ್ಕಾರಿ ಕಾಮಗಾರಿಗೆ ಸೂಕ್ತವಾಗಿದೆ ಎಂದು ಈಗಾಗಲೇ ಮಸೀದಿಯಿಂದ ತಿಳಿಸಲಾಗಿದೆ.
ಜಾಮಿಯಾ ಮಸೀದಿಗೆ ಸಂಬಂಧಪಟ್ಟ ರಸ್ತೆಯಲ್ಲಿ ಸಿಸಿ ರಸ್ತೆ ನಿರ್ಮಾಣಮಾಡಲಾಗುತ್ತಿದೆ, ಯಾವುದೇ ಖಾಸಗಿಯವರ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡುತ್ತಿಲ್ಲ: ಗುತ್ತಿಗೆದಾರರ ಸ್ಪಷ್ಟನೆ ನೀಡಿದ್ದಾರೆ,
ಶಕಿಬ್ ಎಂಬತಾ ದುರುದ್ದೇಶದಿಂದ, ಕಾಮಗಾರಿಗೆ ಅಡ್ಡಪಡಿಸುತ್ತಿದ್ದಾನೆ. ಈತ ಸರ್ಕಾರಿ ಗೋಮಾಳ ಜಾಗದಲ್ಲಿ ಮಣ್ಣನ್ನು ಅಕ್ರಮವಾಗಿ ದಬ್ಬಾಳಿಕೆ ಮತ್ತು ದೌರ್ಜನ್ಯದಿಂದ ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾನೆ.ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರ ಒತ್ತಾಯಿಸಿದ್ದು
ಈತನ ವಿರುದ್ಧ ಕ್ರಮ ಕೈಗೊಳ್ಳುಬೇಕು ಎಲ್ಲಾ ವರ್ಗದ ಸಾರ್ವಜನಿಕರು ಓಡಾಡಲು ಅನುಕೂಲವಾಗುವಂತೆ ರಸ್ತೆ ನಿರ್ಮಾಣಕ್ಕೆ ಅಡ್ಡಿ ಪಡಿಸುತ್ತಿದ್ದು ತಾಲ್ಲೋಕು ಆಡಳಿತ ಸೂಕ್ತ ಕ್ರಮಕೈಗೊಳ್ಳದಿದ್ದರೆ ತಾಲೂಕು ಕಚೇರಿ ಮುಂಭಾಗ ನೂರಾರು ಸಂಖ್ಯೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದುಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version