KALPATHARU KRANTHI

ಶಾಸಕ ಕೆ.ಷಡಕ್ಷರಿ ಭೇಟಿ ಮಾಡಿದ ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯಾರ್ಥಿ ಶಶಿ ಹುಲಿಕುಂಟೆಮಠ್

Spread the love

ತಿಪಟೂರು ಶಾಸಕರು ಹಾಗೂ ಕರ್ನಾಟಕ ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷರಾದ ಕೆ.ಷಡಕ್ಷರಿಯವರನ್ನ ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯಾರ್ಥಿ ಶಶಿಹುಲಿಕುಂಟೆ ಮಠ್ ಭೇಟಿ ನೀಡಿ ಸನ್ಮಾನಿಸಿದರು.


ನಗರದ ನಗರಸಭೆ ಶಾಸಕರ ಕಾರ್ಯಾಲಯದಲ್ಲಿ ಭೇಟಿಯಾದ ಅವರು ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ತಯಾರಿಯಲಿದ್ದು,ಕ್ಷೇತ್ರವ್ಯಾಪ್ತಿಯಲ್ಲಿ ಪದವೀಧರ ಮತದಾರರ ನೋಂದಣಿ ಮಾಡಿಸಲಾಗಿದೆ.ನಮ್ಮ ಪಕ್ಷದ ಕಾರ್ಯಕರ್ತರು ಪದವೀಧರರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ,ನೀವು ಆಶೀರ್ವಾದ ಮಾಡಿ ನನ್ನ ಗೆಲುವಿಗೆ ಸಹಕಾರ ನೀಡಬೇಕು,ಈಗಾಗಲೇ ಆಗ್ನೇಯ ಪದವೀಧರ ಕ್ಷೇತ್ರದಾದ್ಯಂತ ಪ್ರವಾಸ ಮಾಡಿದ್ದು ಉತ್ತಮ ಸ್ಪಂದನೆ ದೊರೆತ್ತಿದೆ.ಫೆಬ್ರವರಿ ಮೊದಲ ವಾರದಲ್ಲಿ ಪ್ರಚಾರ ಕಾರ್ಯಾರಂಭ ಮಾಡಲಾಗುವುದು ಎಂದರು.ಶಾಸಕ ಕೆ.ಷಡಕ್ಷರಿ ಮಾತನಾಡಿ ನಮ್ಮ ತಾಲ್ಲೋಕಿನಲ್ಲಿ ಹೆಚ್ಚು ಪದವೀಧರ ಮತದಾರರನ್ನ ನೊಂದಣಿ,ಮಾಡಿಸಿದ್ದೇನೆ.ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ,ಪಕ್ಷದ ಕಾರ್ಯಕ್ರಮಗಳು ನಮ್ಮ ಪಕ್ಷದ ಅಭ್ಯಾರ್ಥಿಗಳಿಗೆ ನೆರವಾಗುತ್ತವೆ ಎಂದು ತಿಳಿಸಿದರು


ಈ ವೇಳೆ ತಾಲ್ಲೋಕು ಪಂಚಾಯ್ತಿ ಮಾಜಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್.ಖಾಸಗೀ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಆದಿತ್ಯ ಜಯಣ್ಣ,ಮುಖಂಡರಾದ ಗುರು ಉಪಸ್ಥಿತರಿದರು.

ವರದಿ :ಮಂಜುನಾಥ್ ಹಾಲ್ಕುರಿಕೆ

Exit mobile version